Saturday, 28 July 2018

 ಪಾಳುಬಿದ್ದಿದೆ ಹೊಸ ಸಂತೆ ಮೈದಾನ
..........................................................

* 54 ಲಕ್ಷ ರೂ. ನೀರಿನಲ್ಲಿ ಹೋಮ
* ಗುಜರಿ ಹಾಕುವ, ಬಸ್ ನಿಲ್ಲಿಸುವ ತಾಣ
* ಪಾಲಿಕೆಯ, ಅಧಿಕಾರಿಗಳ ನಿರ್ಲಕ್ಷ್ಯ
* ಸ್ಥಳಾಂತರಕ್ಕೆೆ ಸ್ಥಳೀಯ ಕಾರ್ಪೊರೇಟರ್‌ಗೆ ನಿರಾಸಕ್ತಿಿ, ಆರೋಪ
* ಶೀಘ್ರ ಉದ್ಘಾಾಟನೆ ಮಾಡಿ, ಸಂತೆ ನಡೆಸಲು ಸ್ಥಳೀಯರ ಆಗ್ರಹ
* ಮಿಳಘಟ್ಟದಲ್ಲಿ ಗ್ರಾಾಹಕರಿಗೆ ತಪ್ಪದ ಬವಣೆ





ಮಹತ್ತರ ಯೋಜನೆಗಳನ್ನು ಜಾರಿಗೊಳಿಸುವಾಗ ದೂರದೃಷ್ಟಿಿ ಇಲ್ಲದೇ ಹೋದಲ್ಲಿ ಅವು ವಿಫಲವಾಗುತ್ತವೆ. ಜನೋಪಕಾರಿ ಕೆಲಸ ಮಾಡುವವರು ಯೋಜನೆಯ ಕಾಮಗಾರಿ ಆರಂಭವಾದ ನಂತರ ಅದು ಮುಕ್ತಾಾಯವಾಗುವರೆಗೆ ಅದರ ಬೆನ್ನಹಿಂದೆ ಬಿದ್ದು ಮುಗಿಸಬೇಕು. ಕೆಲಸ ಮುಗಿದಾಕ್ಷಣ ಹಾಳಾಗುವಂತೆ ಮಾಡದೆ ಅಥವಾ ಅದರ ಉದ್ದೇಶ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು.
ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ಕಳೆದ ವರ್ಷ ನಗರದ ಕೆಎಸ್ಸಾಾರ್ಟಿಸಿ ಡಿಪೊ ಎದುರು ಹೊಸ ಸಂತೆ ಮೈದಾನವನ್ನು ನಿರ್ಮಿಸಲಾಗಿದೆ. ಆದರೆ ಅದು ಸದ್ಬಳಕೆಯಾಗದೆ ಈಗ  ದುರ್ಬಳಕೆಯಾಗುತ್ತಿಿದೆ. ಹೀಗೆ ಬಿಟ್ಟಲ್ಲಿ ಅದು ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಪಾಲಿಕೆಯು ಇದರ ಜವಾಬ್ದಾಾರಿಯನ್ನು ಹೊತ್ತಿಿದೆಯಾದರೂ ಕಾಮಗಾರಿ ಮುಕ್ತಾಾಯವಾದ ನಂತರ ಜನರಿಗೆ ಉಪಯೋಗಕ್ಕೆೆ ಸಿಗುವಂತೆ ಮಾಡುವಲ್ಲಿ ವಿಫಲವಾಗಿದೆ. ಅದೊಂದು ಯಶಸ್ವಿಿ ಕೆಲಸವಾಗದಂತೆ ಮಾಡಿದೆ.
ಆದರೆ ಈಗ ಈ ಸಂತೆ ಮೈದಾನ ಪಾಳುಬಿದ್ದಿದೆ. ಕೆಲವರು ಹಳೆಯ ಟೈರ್‌ಗಳನ್ನು ಸಂಗ್ರಹಿಸಿಡುವ, ಇನ್ನೂ ಕೆಲವರು ಹಳೆಯ ಮರದ ವಸ್ತುಗಳನ್ನು ಸಂಗ್ರಹಿಸಿಡುವ ತಾಣವನ್ನಾಾಗಿ, ಕೆಲವರು ತಳ್ಳುಗಾಡಿ, ಬಸ್ ಮತ್ತಿಿತರ ವಾಹನ ನಿಲ್ಲಿಸುವ ಜಾಗವನ್ನಾಾಗಿ ಮಾಡಿಕೊಂಡಿದ್ದಾಾರೆ.  ಇನ್ನೊೊಂದೆಡೆ ಬಳ್ಳಿಿಗಳು ಹಬ್ಬಿಿಕೊಂಡಿವೆ. ಇದರಿಂದ ನೆಲಕ್ಕೆೆ ಹಾಕಿರುವ ಸಿಮೆಂಟ್ ಟೈಲ್‌ಸ್‌‌ಗಳು ಕಿತ್ತುಬರುವ ಸಾಧ್ಯತೆ ಇದೆ. ಕೂಡಲೇ ಅದನ್ನು ಶುಚಿಗೊಳಿಸಿ ಯಾರೂ ಗಲೀಜು ಮಾಡದಂತೆ, ಕಸ ಹಾಕದಂತೆ ಎಚ್ಚರಿಕೆ ವಹಿಸಬೇಕಿದೆ. ಪಕ್ಕದಲ್ಲಿ ಮನೆ ಕಟ್ಟುತ್ತಿಿರುವ ವ್ಯಕ್ತಿಿ ಅಲ್ಲಿ ಮರದ ಸಾಮಗ್ರಿಿಗಳನ್ನು ಹಾಕಿಕೊಂಡಿದ್ದು ಅದರಿಂದಲೂ ಮಣ್ಣು, ಕಸ ಬೀಳುತ್ತಿಿದೆ.  ಸಿಮೆಂಟ್ ಕಂಬಗಳನ್ನು ನೆಟ್ಟು ಈ ಜಾಗಕ್ಕೆೆ ವಾಹನ  ಪ್ರವೇಶಿಸದಂತೆ ನಿರ್ಬಂಧಿಸಲಾಗಿತ್ತಾಾದರೂ ಅದನ್ನು ಕೆಲವರು ಕಿತ್ತುಹಾಕಿ ವಾಹನ ನಿಲ್ಲಿಸಿಕೊಳ್ಳುವ ಜಾಗವನ್ನಾಾಗಿ ಮಾಡಿಕೊಂಡಿದ್ದಾಾರೆ. ಪಾಲಿಕೆ ಅಧಿಕಾರಿಗಳು ಗಮನಿದೇ ಇರುವುದು ಇಷ್ಟೆೆಲ್ಲ ಅವಾಂತರಕ್ಕೆೆ ಕಾರಣವಾಗಿದೆ.
ಇದೇ ವಾರ್ಡಿನ (ಮಿಳಘಟ್ಟದ) ಕಾರ್ಪೊರೇಟರ್ ಆಗಿರುವ ಏಳುಮಲೈ ಮತ್ತು ಅಂದಿನ ಶಾಸಕ ಕೆ. ಬಿ ಪ್ರಸನ್ನಕುಮಾರ್ ಅವರು ಈಗ ಸಂತೆ ನಡೆಯುತ್ತಿಿರುವ ಮಿಳಘಟ್ಟದಿಂದ (ಖಾಸಗಿ ಬಸ್ ನಿಲ್ದಾಾಣದ ಪಕ್ಕ) ಡಿಪೋ ಎದುರು ಸ್ಥಳಾಂತರಿಸಲು ನಿರ್ಧರಿಸಿ ಈ ಯೋಜನೆಗೆ ಶ್ರಮಿಸಿದ್ದರು. ಏಳುಮಲೈ ಅವರು ತಾವೇ ಮೇಯರ್ ಆಗಿದ್ದಾಾಗ ಈ ಕಾಮಗಾರಿಯನ್ನೂ ಮುಗಿಸಿದ್ದರು. ಮಿಳಘಟ್ಟ ಸಂತೆ ಮೈದಾನದಿಂದ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆೆ ವಿಪರೀತ ತೊಂದರೆ ಆಗುತ್ತಿಿರುವುದನ್ನು ಗಮನಿಸಿ ಸಾಕಷ್ಟು ದೂರು ಬಂದ ಹಿನ್ನೆೆಲೆಯಲ್ಲಿ ಹೊಸ ಸಂತೆ ಮೈದಾನ ನಿರ್ಮಿಸಲಾಗಿದೆಯಾದರೂ ಅದು ಸಾರ್ವಜನಿಕರ ಬಳಕೆಗೆ ಸಿಗದೆ ಮತ್ತೆೆ ಯಥಾ ಸ್ಥಿಿತಿ ಮುಂದುವರೆಯುವಂತಾಗಿದೆ.
ಹಾಲಿ ಮೇಯರ್ ನಾಗರಾಜ ಕಂಕಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆೆ ಧಾವಿಸಿ ಪರಿಶೀಲಿಸಿ, ಆಗಬೇಕಾದ ಕಾಮಗಾರಿ ಇದ್ದರೆ ತುರ್ತಾಗಿ ಪೂರೈಸಿ ಉದ್ಘಾಾಟನೆ ನೆರವೇರಿಸಬೇಕಿದೆ. ಇಲ್ಲವಾದಲ್ಲಿ ಮತ್ತೆೆ ಗುಜರಿ ಹಾಕುವ, ಬಸ್ ನಿಲ್ಲಿಸುವ ತಾಣವಾಗಲಿದೆ. ಅಧಿಕಾರಿಗಳು ಎಚ್ಚೆೆತ್ತು ಜಾಗ ದುರುಪಯೋಗವಾಗದಂತೆ ಮಾಡಬೇಕಿದೆ. ಸ್ಥಳೀಯ ಕಾರ್ಪೊರೇಟರ್ ಅವರು ಮೊದಲಿದ್ದ ಆಸಕ್ತಿಿಯನ್ನು ಈಗೇಕೆ ಈ ಮೈದಾನ ಸ್ಥಳಾಂತರ ವಿಚಾರದಲ್ಲಿ ಕಳೆದುಕೊಂಡಿದ್ದಾಾರೆನ್ನುವುದು ತಿಳಿದುಬರಬೇಕಿದೆ. 
ಪಾಲಿಕೆಯ ಅಧಿಕಾರಿಗಳು ಇನ್ನಾಾದರೂ ಮುತುವರ್ಜಿ ವಹಿಸಿ ಸಂತೆಯನ್ನು ಅಲ್ಲಿಗೆ ಸ್ಥಳಾಂತರಿಸಬೇಕಿದೆ. ಚುನಾವಣೆ ಹಿನ್ನೆೆಲೆಯಲ್ಲಿ ಈ ಯೋಜನೆ ಮುನ್ನಡೆದಿರಲಿಲ್ಲ. ಆದರೆ ಮತ್ತೆೆ ಮುಂದಿನ ಚುನಾವಣೆ ಬರುವುದರೊಳಗೆ ಸ್ಥಳಾಂತರಿಸುವ ಮೂಲಕ 54 ಕೋಟಿ ರೂ. ನೀರಿನಲ್ಲಿ ಮಾಡಿದ ಹೋಮದಂತಾಗದಂತೆ ನೋಡಿಕೊಳ್ಳಬೇಕಿದೆ.
july 26
................................................... 

No comments:

Post a Comment