Monday, 16 July 2018

ಶಾಲೆ ವಿಲೀನಕ್ಕೂ  ಮುನ್ನ....


ಗುಣಮಟ್ಟದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸಿರುವ ಸರ್ಕಾರಿ ಶಾಲೆಗಳು ನಮ್ಮಲ್ಲಿವೆ; ಮೈಕೊಡವಿ ನಿಂತ ಸೇವಾ ಮನೋಭಾವದ ಶಿಕ್ಷಕರು  ಸರ್ಕಾರಿ ಶಾಲೆಗಳಲ್ಲೂ ಇದ್ದಾಾರೆ. ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಸರ್ಕಾರಿ ಶಾಲೆಗಳ ದುಸ್ಥಿಿತಿಗೆ ಖಾಸಗಿ ಶಾಲೆಗಳ ದರ್ಬಾರು ಕಾರಣ ಎನ್ನುವ ಬದಲು, ಅಲ್ಲಿಯ ಗುಣಮಟ್ಟವನ್ನು ಸರ್ಕಾರಿ ಶಾಲೆಗಳಲ್ಲೂ ಜಾರಿಗೆ ತರುವ ಕೆಲಸವಾಗಬೇಕು. ಬೀಗ ಹಾಕುವುದು ಸುಲಭ. ಆದರೆ ಮತ್ತೆೆ ಆ ಶಾಲೆ ತೆರೆಯಬೇಕಾದರೆ ಮಕ್ಕಳನ್ನು ಹುಡುಕಿಕೊಂಡು ಬರುವುದು ಕಷ್ಟ. ಇದನ್ನೆೆಲ್ಲ ಅರಿತು ಅಧಿಕಾರಿಗಳು ಮತ್ತು ಸರ್ಕಾರ ಬೀಗ ಹಾಕುವ ಮೊದಲು ಹತ್ತಾಾರು ಬಾರಿ ಯೋಚನೆ ಮಾಡುವುದು ಒಳಿತು.



ಇತ್ತೀಚೆಗೆ ಮುಖ್ಯಮಂತ್ರಿಿಯಾದ ಎಚ್. ಡಿ. ಕುಮಾರಸ್ವಾಾಮಿ ಮೊನ್ನೆೆ ಮಂಡಿಸಿದ ಬಜೆಟ್‌ನಲ್ಲಿ ಸುಮಾರು 28 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮಾತನ್ನಾಾಡಿದ್ದಾಾರೆ. ಇದಕ್ಕೂ ಹಿಂದಿನ ಕಾಂಗ್ರೆೆಸ್ ಸರ್ಕಾರವೂ ಇದೇ ಮಾತನ್ನಾಾಡಿತ್ತು. ಜೊತೆಗೆ ವಿಲೀನಗೊಳಿಸುವುದಾಗಿಯೂ ಹೇಳಿತ್ತು. ಆದರೆ ಎಲ್ಲೋೋ ಕೆಲವೆಡೆ ವಿಲೀನೀಕರಣ ನಡೆಯಿತೇ ವಿನಾ ಶಾಲೆಗೆ ಬೀಗ ಹಾಕಲಿಲ್ಲ. ಈಗಿನ ಸರ್ಕಾರ ಮತ್ತೆೆ ಅದೇ ಮಾತನ್ನು ಪುನರುಚ್ಚರಿಸಿದೆ. ಆದರೆ ಶಿಕ್ಷಣ ಸಚಿವ ಎನ್. ಮಹೇಶ್ ಶಾಲೆ ಮುಚ್ಚುವುದಿಲ್ಲ ಎಂದಿದ್ದಾಾರೆ.
ಸರ್ಕಾರಗಳಿಗೆ ಸರ್ಕಾರಿ ಶಾಲೆ ಮುಚ್ಚುವುದು ಒಂದು ಯೋಜನೆಯೇ ಆದಂತಿದೆ. ಅವುಗಳನ್ನು ಅಭಿವೃದ್ಧಿಿಪಡಿಸಿ ಇನ್ನಷ್ಟು ಮಕ್ಕಳು ಸೇರ್ಪಡೆಯಾಗಬೇಕೆಂಬ ಉದ್ದೇಶ ಹೊತ್ತು ಕೆಲಸ ಮಾಡುವಂತೆ ಶಿಕ್ಷಣ ಇಲಾಖಾಧಿಕಾರಿಗಳಿಗೆ ಸೂಚಿಸಬಹುದಿತ್ತು. ಕಚೇರಿಯಲ್ಲೇ ಕುಳಿತು ಕಂಪ್ಯೂಟರ್ ಅಥವಾ ಫೈಲುಗಳಲ್ಲಿ  ಮುಳುಗುವ ಅಧಿಕಾರಿಗಳಿಗೆ ಶಾಲೆ ಭೇಟಿ ಕಡ್ಡಾಾಯ ಎಂದು ಏಕೆ ಹೇಳಬಾರದು? ಎಷ್ಟೋೋ ಶಾಲೆಗಳಿಗೆ ಡಿಡಿಪಿಐ ಮತ್ತು ಶಿಕ್ಷಣಾಧಿಕಾರಿ ಭೇಟಿ ಕೊಡುವುದೇ ಇಲ್ಲ. ಗ್ರಾಾಮಾಂತರದ ಶಾಲೆಗಳ ದುಸ್ಥಿಿತಿ ಗಮನಿಸುವುದಿಲ್ಲ. ಸೋರುತ್ತಿಿದ್ದರೂ, ಬೀಳುವ ಸ್ಥಿಿಯಲ್ಲಿದ್ದರೂ, ಗೋಡೆ ಬಿರುಕು ಬಂದಿದ್ದರೂ ಮಾಧ್ಯಮಗಳೇ ಎಚ್ಚರಿಸಬೇಕಾದ ಸಂದರ್ಭ ಬಂದೊದಗಿದೆ.
ಹೆಂಚು ಒಡೆದು ಕೋಣೆಯ ತುಂಬಾ ನೀರು ತುಂಬುತ್ತಿಿದ್ದರೂ ನಗರದೊಳಕ್ಕೇ ಇರುವ ಮೇನ್ ಮಿಡ್‌ಲ್‌ ಸ್ಕೂಲ್‌ನ  ಮೆಟ್ಟಿಿಲು ಹತ್ತಿಿ ಈವರೆಗೆ ಯಾವ ಶಿಕ್ಷಣಾದಿಕಾರಿಯೂ ಗಮನಿಸಿಲ್ಲ. ಸರ್ಕಾರ ಇಂತಹ ಶಿಕ್ಷಣಾಧಿಕಾರಿಗಳನ್ನಿಿಟ್ಟುಕೊಂಡು ಕೆಲಸ ಮಾಡುತ್ತಿಿದೆ. ಶಾಲೆ ಮುಚ್ಚುವ ಬದಲು ಅಲ್ಲಿರುವ ವ್ಯವಸ್ಥೆೆ, ಸೌಕರ್ಯ ಹೆಚ್ಚಿಿಸಲು ಮನಸ್ಸು ಮಾಡಬೇಕು. ಮಕ್ಕಳ ಕೊರತೆ ಎಂದಾದರೆ ಶಾಲೆ ಮುಚ್ಚುವುದೇ ಉಪಾಯವಲ್ಲ. ಬದಲಾಗಿ ಹೇಗೆ ಮಕ್ಕಳನ್ನು ಕರೆತರಬೇಕೆನ್ನುವ ಯೋಜನೆ ರೂಪಿಸಬೇಕು. ಶಿಕ್ಷಣ ತಜ್ಞರು, ಶಿಕ್ಷಕರು, ವಿಚಾರವಂತರೊಡನೆ ಚರ್ಚಿಸಬೇಕು. ಸರ್ಕಾರಿ ಶಾಲೆಗಳು ಬೊಕ್ಕಸಕ್ಕೆೆ ಹೊರೆ ಎಂದು ಸರ್ಕಾರ ಭಾವಿಸಿದಂತಿದೆ.
ಇನ್ನು ಕಲಿಕಾ ಗುಣಮಟ್ಟಕ್ಕೆೆ ಬಂದರೆ, ಪ್ರಾಾಥಮಿಕ ಶಾಲಾ ಶಿಕ್ಷಕರಿಗೆ ಹೆಚ್ಚಿಿನ ತರಬೇತಿ ಕೊಟ್ಟು ಅವರನ್ನು ಪರಿಣಿತರನ್ನಾಾಗಿಸಬೇಕು. ಟಿಸಿಎಚ್, ಬಿಎಡ್ ಮುಗಿಸಿಕೊಂಡು ಬಂದವರಿಗೆ ಇಂದಿನ ಪಠ್ಯ ಕಲಿಸುವುದು ಸುಲಭದ ಕೆಲಸವಲ್ಲ. ಇಂಗ್ಲೀಷ್, ಗಣಿತ, ವಿಜ್ಞಾಾನ ಮೊದಲಾದ ವಿಷಯಗಳ ಬಗ್ಗೆೆ ವರ್ಷದಲ್ಲಿ ಒಂದು ಬಾರಿ ಕಡ್ಡಾಾಯ ತರಬೇತಿ ಕೊಡಿಸುವ ಕೆಲಸವಾಗಬೇಕು. ಜೊತೆಗೆ ತಳವೂರಿ ಬೇರು ಬಿಟ್ಟಿಿರುವವರಿಗೆ ಬೇರೆ ಶಾಲೆಯಲ್ಲೂ ಪಾಠ ಮಾಡಬಹುದೆನ್ನುವುದನ್ನು ತೋರಿಸಬೇಕು.
ಗುಣಮಟ್ಟದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸಿರುವ ಸರ್ಕಾರಿ ಶಾಲೆಗಳು ನಮ್ಮಲ್ಲಿವೆ; ಮೈಕೊಡವಿ ನಿಂತ ಸೇವಾ ಮನೋಭಾವದ ಶಿಕ್ಷಕರು  ಸರ್ಕಾರಿ ಶಾಲೆಗಳಲ್ಲೂ ಇದ್ದಾಾರೆ. ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ಸರ್ಕಾರಿ ಶಾಲೆಗಳ ದುಸ್ಥಿಿತಿಗೆ ಖಾಸಗಿ ಶಾಲೆಗಳ ದರ್ಬಾರು ಕಾರಣ ಎನ್ನುವ ಬದಲು, ಅಲ್ಲಿಯ ಗುಣಮಟ್ಟವನ್ನು ಸರ್ಕಾರಿ ಶಾಲೆಗಳಲ್ಲೂ ಜಾರಿಗೆ ತರುವ ಕೆಲಸವಾಗಬೇಕು. ಶಿಕ್ಷಕರನ್ನು ಚಾಕರಿ ಕೆಲಸಗಳಿಗೆ ಬಳಸಿಕೊಳ್ಳುವ ಬದಲು, ಶೈಕ್ಷಣಿಕ ಕ್ಷೇತ್ರದಲ್ಲೇ ಉಳಿಸಿಕೊಳ್ಳುವ ಕೆಲಸವಾಗಬೇಕು. ಈ ನಿಟ್ಟಿಿನಲ್ಲಿ ಶಿಕ್ಷಕರನ್ನು ಹುರಿದುಂಬಿಸಬೇಕು. ಶಿಕ್ಷಕ ಗುರುವಾಗಿ ಬದಲಾಗಬೇಕು. ಹೀಗಾಗಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿದ್ದೆೆಯಿಂದೆದ್ದು ಜಾಗೃತರಾಗಬೇಕು; ಕುರ್ಚಿ ಬಿಟ್ಟೇಳಬೇಕು; ಪ್ರತಿ ಶಾಲೆಗಳನ್ನು ಸುತ್ತಬೇಕು.
 ಇಷ್ಟಕ್ಕೂ ಅಧಿಕಾರಿಗಳು ಮನಸ್ಸು ಮಾಡಿದರೆ ಶಾಲೆಯ ಸರ್ವತೋಮುಖ ಅಭಿವೃದ್ಧಿಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಿಸಲು ಸಾಧ್ಯವಿದೆ. ಇನ್ನಷ್ಟು ಶಿಕ್ಷಣ ಪೂರಕ ಯೋಜನೆಯನ್ನು ಸರ್ಕಾರವೂ ಜಾರಿಗೊಳಿಸಬೇಕು. ಜೊತೆಗೆ ಪೋಷಕರ ಮನಸ್ಸು ಬದಲಾಯಿಸುವತ್ತ ಧಾವಿಸಲಿ.  ಸರ್ಕಾರ ಎಲ್‌ಕೆಜಿ, ಯುಕೆಜಿ ಆರಂಭಿಸುವತ್ತ ಲಕ್ಷ್ಯ ವಹಿಸಲಿ. ಈಗಾಗಲೇ ಗದಗ, ಉಡುಪಿ, ತುಮಕೂರು ಮತ್ತು ಕೋಲಾರ ಜಿಲ್ಲೆೆಯ 35 ಗ್ರಾಾಮಗಳಲ್ಲಿ ಇದನ್ನು ಪ್ರಾಾಯೋಗಿಕವಾಗಿ ಮಾಡಲಾಗಿದೆ. ಇಲ್ಲಿ ಉತ್ತಮ ಫಲಿತಾಂಶ ಕೂಡಕಂಡುಬಂದಿದೆ. ಇದನ್ನು ಅತಿ ಶೀಘ್ರವಾಗಿ  ಎಲ್ಲಾಾ ಊರುಗಳಿಗೆ ವಿಸ್ತರಿಸಿದರೆ ವಿದ್ಯಾಾರ್ಥಿಗಳ ಸಂಖ್ಯೆೆ ಏರುವುದರಲ್ಲಿ ಸಂಶಯವಿಲ್ಲ.
 ಇಂತಹ ಪರಿಣಾಮಕಾರಿ ಮತ್ತು ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸಿದರೆ ಪಾಲಕರ ಜೊತೆಗೆ ಮಕ್ಕಳನ್ನೂ ಕರೆತರಬಹುದು. ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಇದನ್ನು ಸಾಧಿಸುವ ಮನೋಬಲ ಬೇಕು. ಸರ್ಕಾರ ಮತ್ತು  ಅಧಿಕಾರಿಗಳಲ್ಲಿ ಇಚ್ಛಾಾಶಕ್ತಿಿಯ ಕೊರತೆ ಇದೆ. ಅದು ನಿವಾರಣೆಯಾದರೆ ಇಂತಹ ಯೋಜನೆಗಳು ಸಕಾರಾತ್ಮಕವಾಗಬಲ್ಲವು.
ಬೀಗ ಹಾಕುವುದು ಸುಲಭ. ಆದರೆ ಮತ್ತೆೆ ಆ ಶಾಲೆ ತೆರೆಯಬೇಕಾದರೆ ಮಕ್ಕಳನ್ನು ಹುಡುಕಿಕೊಂಡು ಬರುವುದು ಕಷ್ಟ. ಇದನ್ನೆೆಲ್ಲ ಅರಿತು ಅಧಿಕಾರಿಗಳು ಮತ್ತು ಸರ್ಕಾರ ಬೀಗ ಹಾಕುವ ಮೊದಲು ಹತ್ತಾಾರು ಬಾರಿ ಯೋಚನೆ ಮಾಡುವುದು ಒಳಿತು. ಅಲ್ಲಿರುವ ಬಡ ಮುಗ್ಧ ಮಕ್ಕಳ ಮುಖ ನೋಡಿ. ಅವರ ಭವಿಷ್ಯ ಏನಾಗಬಹುದು ಎನ್ನುವುದನ್ನು ಕ್ಷಣ ಯೋಚಿಸಿ. ಆಗಲೂ ನಿಮಗೆ ಬೀಗ ಹಾಕಬೇಕೆನಿಸಿದರೆ ಹಾಕಿ. 

published on 12th july 2018

No comments:

Post a Comment