Saturday, 28 July 2018

ಜೀವಬಲಿಗೆ ಮುನ್ನ ಯೋಚಿಸಿದ್ದರೆ....


 - 
ನಮ್ಮ ಇಂದಿನ ವ್ಯವಸ್ಥೆೆಯಲ್ಲಿ ಯಾವುದೇ ಬದಲಾವಣೆಯಾಗಬೇಕಾದರೂ ಅದಕ್ಕೆೆ ಒಂದಿಷ್ಟು ಸಾವು-ನೋವುಗಳು ಸಂಭವಿಸಬೇಕು. ನಾಗರಿಕರು ಬೀದಿಗಿಳಿದು ಹೋರಾಟ ನಡೆಸಬೇಕು. ಇಲ್ಲವೇ ನ್ಯಾಾಯಾಲಯಗಳು ನಿರ್ದೇಶನ ನೀಡಬೇಕು. ಆಗ ಮಾತ್ರ ಆಡಳಿತ ವ್ಯವಸ್ಥೆೆ ಎಚ್ಚೆೆತ್ತುಕೊಂಡು ಸಮಸ್ಯೆೆ ಪರಿಹಾರಕ್ಕೆೆ ಮುಂದಾಗುವಂತಹ ಸ್ಥಿಿತಿ ನೆಲೆಸಿದೆ. ಇಲ್ಲದಿದ್ದರೆ ನಮ್ಮ ಕಣ್ಮುಂದೆಯೇ ಅವ್ಯವಸ್ಥೆೆ ರಾರಾಜಿಸುತ್ತಿಿದ್ದರೂ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಇದಕ್ಕೆೆ ಇಚ್ಛಾಾಶಕ್ತಿಿಯ ಕೊರತೆ ಎನ್ನಬೇಕೋ, ಬೇಜವಾಬ್ದಾಾರಿತನ ಎನ್ನಬೇಕೋ ತಿಳಿಯುತ್ತಿಿಲ್ಲ. 




ಕಳೆದ ವಾರ  ತೀರ್ಥಹಳ್ಳಿಿ ತಾಲೂಕು ಗುಡ್ಡೇಕೇರಿ ಸರ್ಕಾರಿ ಪ್ರೌೌಢಶಾಲೆಯ 9ನೆಯ ತರಗತಿ ವಿದ್ಯಾಾರ್ಥಿನಿಯಾಗಿದ್ದ ಆಶಿಕಾ ಕಾಲುಸಂಕದಿಂದ ಜಾರಿ ತುಂಬಿ ಹರಿಯುತ್ತಿಿದ್ದ ನದಿ ಪಾಲಾದಳು. ಅಲ್ಲಿಯವರೆಗೆ ಕಾಲುಸಂಕದ ಬಗ್ಗೆೆ ಸ್ಥಳೀಯಾಡಳಿತಗಳು ಚರ್ಚಿಸಿರಲಿಲ್ಲ. ಆಶಿಕಾ ಸಾವಿನ ನಂತರ ಜಿಲ್ಲಾಾಧಿಕಾರಿಯಿಂದ ಹಿಡಿದು ಸಂಬಂಧಿಸಿದ ಬಹುತೇಕ ಎಲ್ಲಾಾ ಇಲಾಖೆಯ ಹಿರಿಯ ಅಧಿಕಾರಿಗಳು, ಹಾಲಿ, ಮಾಜಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸ್ಥಳ ಪರಿಶೀಲಿಸಿ ಮೃತಳ ಮನೆಯವರಿಗೆ ಸಾಂತ್ವನ ಹೇಳಿದರು.
ಆನಂತರ ಶುರುವಾಗಿದ್ದೇ ಕಾಲುಸಂಕಗಳ ಸಮೀಕ್ಷೆ. ಡಿಸಿಯವರು ಸಭೆ ನಡೆಸಿ ಕಾಲುಸಂಕಗಳ ಸಮೀಕ್ಷೆಗೆ ಸೂಚಿಸಿದರೂ ಅದನ್ನು ಪಾಲಿಸದ ಬಹುತೇಕ ಅದಿಕಾರಿಗಳು ಸೋಮವಾರ (ಇಂದು) ಲೆಕ್ಕ ಕೊಡುವ ಭರವಸೆ ನೀಡಿದ್ದಾಾರೆ. ಸಾರ್ವಜನಿಕ ಓಡಾಟಕ್ಕೆೆ, ಅದರಲ್ಲೂ ವಿಶೇಷವಾಗಿ ಶಾಲಾ-ಮಕ್ಕಳು ಸಂಚರಿಸುವ ಕಾಲುಸಂಕದ ಬಗ್ಗೆೆ ಸಮೀಕ್ಷೆ ನಡೆಸಲು ಜಿಲ್ಲಾಾಡಳಿತ ಸೂಚಿಸಿತ್ತು. ಗ್ರಾಾಮಾಂತರ ಪ್ರದೇಶದಲ್ಲಿ ಮಾತ್ರ ಕಾಲುಸಂಕದ ಬಗ್ಗೆೆ ಗೊತ್ತು. ತೀರ್ಥಹಳ್ಳಿಿ, ಹೊಸನಗರ, ಸಾಗರ ತಾಲೂಕಿನವರಿಗೆ ಇನ್ನೂ ಹೆಚ್ಚಿಿನ ಪ್ರಮಾಣದಲ್ಲಿ ಗೊತ್ತಿಿದೆ. ವಿಶೇಷವಾಗಿ ಈ ಮೂರು ತಾಲೂಕಿನ ತಾಪಂ, ಗ್ರಾಾಪಂ ಮತ್ತು ಕೆಲವು ಇಂಜಿನೀಯರ್‌ಗೆ ಈ ಸಂಕಗಳನ್ನು ಎಣಿಕೆ ಮಾಡಿಕೊಂಡು ಬರುವ ಕೆಲಸ ಕೊಡಲಾಗಿದೆ.
ಜಿಪಂನ ಅನುದಾನದಲ್ಲಿ ಆಯಾಯ ಭಾಗದ ಕಾಲುಸಂಕದ ಬದಲು ಮಿನಿ ಸೇತುವೆ ನಿರ್ಮಿಸುವ ಕೆಲಸ ಮಾಡಬಹುದಿತ್ತು. ಕಾಲುಸಂಕ ಯಾವತ್ತಾಾದರೂ ಅಪಾಯ ಎನ್ನುವುದು ಈ ಜನಪ್ರತಿನಿಧಿಗಳಿಗೆ ಗೊತ್ತಿಿದೆ. ಆದರೆ ಕೇವಲ ರಸ್ತೆೆ, ಚರಂಡಿ, ಕುಡಿಯುವ ನೀರಿಗೆ ಮಾತ್ರ ಆದ್ಯತೆ ಕೊಟ್ಟರೇ ವಿನಾ ಜೀವ ತೆಗೆಯಬಹುದಾದ ಕಾಲುಸಂಕದ ಬಗ್ಗೆೆ ಯಾರೂ ಗಮನಹರಿಸಲೇ ಇಲ್ಲ. ಈಗ ಎಲ್ಲರಿಗೂ ಇದೇ ಪ್ರಮುಖ ಚರ್ಚಾ ವಿಷಯವಾಗಿದೆ. ಕಾಲುಸಂಕ ತೆಗೆದುಹಾಕಿ ಮಿನಿ ಸೇತುವೆ ನಿರ್ಮಿಸಲು ಹಣ ಹೊಂದಿಸಲಾಗುತ್ತಿಿದೆ.   
ಗ್ರಾಾಮಾಂತರ ಸಮಸ್ಯೆೆಗಳ ಬಗ್ಗೆೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸತತ ನಿರ್ಲಕ್ಷ್ಯವೇ ಇದಕ್ಕೆೆಲ್ಲ ಕಾರಣ. ಜೀವಬಲಿಯಾದ ಮೇಲೆ ಎಚ್ಚೆೆತ್ತು ಕೆಲಸಕ್ಕೆೆ ಮುಂದಾಗುತ್ತಾಾರೆ. ಇದು ನಮ್ಮ ಆಡಳಿತ ವ್ಯವಸ್ಥೆೆಗೆ ಹಿಡಿದ ಕೈಗನ್ನಡಿ.
 ಕಳೆದ ವರ್ಷ  ಶಿವಮೊಗ್ಗ-ಹೊನ್ನಾಾಳಿ ರಸ್ತೆೆಯ ಗೊಂಧಿಚಟ್ನಳ್ಳಿಿ ಗ್ರಾಾಮದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ವೊಂದು ರಸ್ತೆೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಕೆರೆಯಲ್ಲಿ ನೀರು ತುಂಬಿರದಿದ್ದ ಕಾರಣ ಪ್ರಯಾಣಿಕರೆಲ್ಲ ಅಪಾಯದಿಂದ ಪಾರಾಗಿದ್ದರು.  ನಗರದ ಹೊರವಲಯ ಪುರಲೆ ಗ್ರಾಾಮದ ಬಳಿ ಕಾರೊಂದು ರಸ್ತೆೆ ಬದಿಯ ಕೆರೆಗೆ ಉರುಳಿ ಬಿದ್ದಿತ್ತು. ಇಲ್ಲೂ ಕೂಡ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟು ಕಡಿಮೆಯಿತ್ತು. ಈ ಹಿನ್ನೆೆಲೆಯಲ್ಲಿ ಕಾರಿನಲ್ಲಿದ್ದವರು ಪ್ರಾಾಣಾಪಾಯವಿಲ್ಲದೆ ಪಾರಾಗಿದ್ದಾಾರೆ. 
  ಜಿಲ್ಲೆೆಯಲ್ಲಿ ಅಪಾರ ಸಂಖ್ಯೆೆಯ ಕೆರೆಗಳಿವೆ. ಯಾವ ಕೆರೆಗೂ ಸುರಕ್ಷಿತ ತಡೆಗೋಡೆಗಳಿಲ್ಲ. ಈ ಕೆರೆ ದಂಡೆಗಳ ಮೇಲೆಯೇ  ರಾಷ್ಟ್ರೀಯ ಹೆದ್ದಾಾರಿ, ರಾಜ್ಯ ಹೆದ್ದಾಾರಿ ಅಥವಾ ಗ್ರಾಾಮದ ಮುಖ್ಯ ರಸ್ತೆೆ ಇದೆ. ಆದರೆ ಇವುಗಳಿಗೆ ಸುರಕ್ಷಿತ ತಡೆಗೋಡೆಗಳಿಲ್ಲ. ಇದು ಅಪಾಯಕ್ಕೆೆ ಆಹ್ವಾಾನ ನೀಡಿದಂತಿದೆ. ಹಲವು ಜನರು ಪ್ರಾಾಣ ಕಳೆದುಕೊಂಡಿದ್ದರೂ, ಬಿದ್ದೆೆದ್ದಿದ್ದರೂ ಸಂಬಂಧಿತ ಅಧಿಕಾರಿಗಳು ಇನ್ನೂ ಎಚ್ಚೆೆತ್ತಿಿಲ್ಲ. 
ಶಿವಮೊಗ್ಗ ನಗರದೊಳಗೆ ನವುಲೆ ಕೆರೆ ಇದೆ. ಅಲ್ಲಿಯೂ ಯಾವುದೇ ತಡೆಗೋಡೆ ಇಲ್ಲ. ಇದರಂತೆ ಸಾಗರ ಮತ್ತು ಸೊರಬ ತಾಲೂಕಿನ ಅರ್ಧದಷ್ಟು ರಸ್ತೆೆಗಳು ಕೆರೆ ದಂಡೆಯಲ್ಲೇ ಇವೆ. ಏನಾದರೂ ಅನಾಹುತವಾಗಿ  ಜೀವಹಾನಿಯಾದಾಗ ಮಾತ್ರ  ಅಥವಾ  ದೊಡ್ಡ ಅನಾಹುತ ಸಂಭವಿಸಿದ ನಂತರವಷ್ಟೇ ಇಲಾಖೆಯವರು ಎಚ್ಚೆೆತ್ತುಕೊಳ್ಳಲು ಕಾದು ಕುಳಿತಿರುವಂತೆ ಭಾಸವಾಗುತ್ತಿಿದೆ.
 ಇಂತಹ ಮಿನಿ ಸೇತುವೆ ಅಥವಾ ರಸ್ತೆೆಗಳನ್ನು ಮೇಲ್ದರ್ಜೆಗೇರಿಸಿ, ತಡೆಗೋಡೆ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಆಗುತ್ತಿಿಲ್ಲ. ಇದಕ್ಕೆೆ ಅನುದಾನದ ಕೊರತೆಯ ನೆಪವೊಡ್ಡುತ್ತವೆ.  ಹಾಗಾದರೆ ಅಪಾಯ ಸಂಭವಿಸಿ ಅಮಾಯಕರು ಬಲಿಯಾಗಬೇಕೇ, ಸರ್ಕಾರಗಳೇಕೆ ಇಂತಹ ಕೆರೆ ಏರಿಗಳ ಅಭಿವೃದ್ಧಿಿಗೆ ಅನುದಾನ ಬಿಡುಗಡೆ ಮಾಡುತ್ತಿಿಲ್ಲ ಎಂದು ಜನರು ಪ್ರಶ್ನಿಿಸುತ್ತಾಾರೆ.


ಕಾಲುಸಂಕದಿಂದ ಜಾರಿ ಬಿದ್ದ ನಂತರ,  ರಸ್ತೆೆಯಂಚಿನಿಂದ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ಅಮಾಯಕರ ಸಾವು-ನೋವುಗಳು ಸಂಭವಿಸಿದಾಗ ಅಧಿಕಾರಸ್ಥರು ಇನ್ನು ಮುಂದೆ ಅನಾಹುತಕ್ಕೆೆ ಆಸ್ಪದವಾಗದಂತೆ ಎಚ್ಚರವಹಿಸಲಾಗುವುದು ಎಂಬ ಭರವಸೆ ನೀಡುತ್ತಾಾರೆ. ಆದರೆ ಕ್ರಮೇಣ ಈ ಭರವಸೆಗಳು ಮರೆಯಾಗುತ್ತವೆ. ಮತ್ತೆೆ  ಇದು ಮರುಕಳಿಸಿ ಅಮಾಯಕರು ಬಲಿಯಾದಾಗ ಈ ಭರವಸೆಗಳು ನೆನಪಾಗುತ್ತವೆ. ಹಾಗೆಯೇ ಸಂಬಂಧಿಸಿದ ಇಲಾಖೆಗಳು ಕೂಡ ಇತ್ತ ಗಮನಹರಿಸುವುದಿಲ್ಲ. ಇನ್ನಾಾದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚೆೆತ್ತುಕೊಳ್ಳಬೇಕು. 
---------------------------------------
18 july-2018

No comments:

Post a Comment