Saturday, 28 July 2018

ಭರ್ತಿಯಾಗುವತ್ತ ಲಿಂಗನಮಕ್ಕಿಿ
..............................................
* 4 ವರ್ಷದ ನಂತರ ಪೂರ್ಣ ತುಂಬಲಿದೆ ಜಲಾಶಯ
* ಭರ್ತಿಗೆ ಬೇಕಿದೆ ಕೇವಲ 16 ಅಡಿ
* ವಾರದಲ್ಲಿ ಮೈದುಂಬಿಕೊಳ್ಳುವ ಸಾಧ್ಯತೆ
* ಗಂಗಾಪೂಜೆ ನೆರವೇರಿಸಿದ ಮುಖ್ಯ ಇಂಜಿನೀಯರ್
* ನೀರು ಬಿಡುವ ಬಗ್ಗೆೆ ಮುಂಜಾಗ್ರತೆ ಸೂಚನೆ ಪ್ರಕಟ
* ಅಧಿಕಾರಿಗಳೊಂದಿಗೆ ಸತತ ಸಭೆ ನಡೆಸುತ್ತಿಿರುವ ಮುಖ್ಯ ಇಂಜಿನೀಯರ್
* ಜುಲೈನಲ್ಲೇ ತುಂಬುತ್ತಿಿರುವುದು ಮೊದಲ ಸಲ
* ಹೆಚ್ಚಿಿದ ಒಳಹರಿವು, ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆ


ಶಿವಮೊಗ್ಗ: ಇಡೀ ನಾಡಿಗೆ ಬೆಳಕು ಒದಗಿಸುವ  ಮಹಾತ್ಮಾಾ ಗಾಂಧಿ ವಿದ್ಯುದಾಗರದ ನೀರಿನ ಆಶ್ರಯತಾಣವಾದ ಲಿಂಗನಮಕ್ಕಿಿ ಜಲಾಶಯ ಈ ಬಾರಿ ತುಂಬುವ ಧಾವಂತದಲ್ಲಿದೆ. ಇಂದಿಗೆ ಜಲಾಶಯದ ನೀರಿನ ಮಟ್ಟ 1803 ಅಡಿಯಷ್ಟೇರಿದೆ. ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 1819 ಅಡಿ. ಜಲಾಶಯ ತುಂಬುವ ಸನಿಹದಲ್ಲಿರುವುದರಿಂದ ಅಧಿಕಾರಿಗಳು ನೀರು ಬಿಡುವ ಬಗ್ಗೆೆ ಮುಂಜಾಗ್ರತೆ ಸಭೆ ನಡೆಸಿ ಕ್ರಮ ಜರುಗಿಸಲಾರಂಭಿಸಿದ್ದಾಾರೆ.
2014ರ ಸೆಪ್ಟೆೆಂಬರ್ 6ರಂದು ಜಲಾಶಯ ಪೂರ್ಣಮಟ್ಟ ತುಂಬಿತ್ತು. ಆನಂತರ 1800 ಅಡಿಯನ್ನೂ ಕಂಡಿರಲಿಲ್ಲ. ಆದರೆ ಈ ಬಾರಿ ದಾಖಲೆ ಎಂಬಂತೆ ಜೂನ್ ಕೊನೆಯ ವಾರ ಮತ್ತು ಜುಲೈನ ಮಧ್ಯಭಾಗದವರೆಗೆ ಬಿದ್ದ ಭಾರೀ ಮಳೆಯಿಂದ ಜಲಾಶಯ ಬಹುತೇಕವಾಗಿ ತುಬಿದೆ. ದಿನದಿಂದ ದಿನಕ್ಕೆೆ ಮೂರು ಅಡಿಯಷ್ಟು ನೀರು ತುಂಬುತ್ತಿಿದೆ. ಒಂದು ವಾರದಿಂದ ಮಳೆ ಕಡಿಮೆಯಾಗಿರುವ ಹಿನ್ನೆೆಲೆಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದರೂ ಇನ್ನೂ ಕೇವಲ 16 ಅಡಿಯಷ್ಟು ಮಾತ್ರ ನೀರು ಬೇಕಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಒಂದು ವಾರದಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
ಲಿಂಗನಮಕ್ಕಿಿಯು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ದ ವ್ಯಾಾಪ್ತಿಿಯಲ್ಲಿ ಬರುತ್ತಿಿದ್ದು, ಅದರ ಮುಖ್ಯ ಇಂಜಿನೀಯರ್  ಆನಂದ ಕುಲಕರ್ಣಿ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾರಂಭಿಸಿದ್ದಾಾರೆ. ಮುಂದಿನ ಕ್ರಮ ಜರುಗಿಸುವುದರ ಬಗ್ಗೆೆ ಚಿಂತನೆ ನಡೆದಿದೆ. ಗೇರುಸೊಪ್ಪಾಾ ಜಲಾಶಯವೂ ಸಹ ತುಂಬಿರುವುದರಿಂದ ಏಕಾಏಕಿ ನೀರು ಬಿಟ್ಟರೆ ಹೆಚ್ಚಿಿನ ಹಾನಿಯಾಗುವುದನ್ನು ಗಮನಿಸಿ ಜಲಾಶಯದ ಕೆಳ ಪ್ರದೇಶದ ಅಂದರೆ ಹೊನ್ನಾಾವರ ತಾಲೂಕಿನಲ್ಲಿ ಅಪಾರ ಆಸ್ತಿಿಪಾಸ್ತಿಿ ಹಾನಿಯಾಗಲಿದೆ. ಇದನ್ನೆೆಲ್ಲ ಅರಿತು ಅನುಸರಿಸಬೇಕಾದ ಕ್ರಮದ ಬಗ್ಗೆೆ ಸಭೆ ನಡೆಸುತ್ತಿಿದ್ದಾಾರೆ.
ಈ ಬಾರಿ ಲಿಂಗನಮಕ್ಕಿಿ ಮತ್ತು ಶರಾವತಿ ಜಲಾನಯದ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಬಹುಬೇಗ ಜಲಾಶಯ ತುಂಬುವ ಹಂತಕ್ಕೆೆ ಬಂದಿದೆ. ಜುಲೈನಲ್ಲಿ 1800 ಅಡಿಯಷ್ಟು ತುಂಬುವುದು ತೀರಾ ಅಪರೂಪ ಎನ್ನುತ್ತಾಾರೆ ನಿಗಮದ ಅಧಿಕಾರಿಗಳು. ಈ ಬಾರಿ ಸಂಪೂರ್ಣ ತುಂಬುವುದು ಖಚಿತವಾಗಿದೆ. ಈವರೆಗಿನ ಇತಿಹಾಸದ ಪ್ರಕಾರ ಆಗಸ್‌ಟ್‌ ಒಳಗೆ ಯಾವತ್ತೂ ಜಲಾಶಯ ತುಂಬಿರಲಿಲ್ಲ. ಸೆಪ್ಟೆೆಂಬರ್ ಮತ್ತು ಅಕ್ಟೋೋಬರ್‌ನಲ್ಲೂ ತುಂಬಿದ ಉದಾಹರಣೆ ಇದೆ. ಮಲೆನಾಡಿನಲ್ಲಿ ಭಾರೀ ಮಳೆ ಸುಮಾರು 20 ದಿನದಿಂದ ಬೀಳುತ್ತಿಿರುವುದರಿಂದ ಬಹುಬೇಗ ಜಲಾಶಯ ಮೈದುಂಬಿಕೊಂಡು ಜನರಲ್ಲಿ ಮುಂದಿನ ಬೇಸಿಗೆಗೆ ವಿದ್ಯುತ್ ಬಗ್ಗೆೆ ಉತ್ತಮ ಆಶಾಭಾವನೆ ಮೂಡಿಸಿದೆ.
ಈ ಮಧ್ಯೆೆ  ನಿನ್ನೆೆ ಜಲಾಶಯದಲ್ಲಿ ಗಂಗಾಪೂಜೆಯನ್ನು ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸುವ ಮೂಲಕ ಮುಖ್ಯ ಅಭಿಯಂತರರು ನೆರವೇರಿಸಿದ್ದಾಾರೆ. ಈ ನಿಮಿತ್ತ ಕ್ರಸ್‌ಟ್‌ ಗೇಟ್ ತೆರೆದು ಸ್ವಲ್ಪ ಪ್ರಮಾಣದ ನೀರನ್ನು ಹೊರಬಿಡಲಾಯಿತು.

ಲಿಂಗನಮಕ್ಕಿಿ ಜಲಾಶಯಕ್ಕೆೆ ಹೆಚ್ಚಿಿನ ನೀರು ಹರಿದುಬರುತ್ತಿಿರುವುದರಿಂದ  ಒಳಹರಿವು ಹೆಚ್ಚಿಿದೆ. ನೀರಿನ ಮಟ್ಟ ತೀವ್ರಗತಿಯಲ್ಲಿ ಏರಿಕೆಯಾಗುತ್ತಿಿದೆ. ಅಣೆಕಟ್ಟೆೆಯ ಸುರಕ್ಷತೆಯ ದೃಷ್ಟಿಿಯಿಂದ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡುವ ಸಾಧ್ಯತೆ ಇದೆ. ಆದ್ದರಿಂದ ಜಲಾಶಯದ ಕೆಳಭಾಗದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಜಲಾಶಯದ ಅಧಿಕಾರಿಗಳು ಮನವಿ ಮಾಡಿದ್ದಾಾರೆ.
ಜಲಾಶಯ ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಒಳಹರಿವು ಸುಮಾರು 28,799 ಕ್ಯುಸೆಕ್‌ಸ್‌‌ನಷ್ಟಿಿದೆ. ಇದೇ ರೀತಿ ಮುಂದುವರೆದರೆ ನೀರು ಬಿಡುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಅಣೆಕಟ್ಟೆೆಯ ಕೆಳದಂಡೆಯಲ್ಲಿ ಹಾಗೂ ನದಿಪಾತ್ರದುದ್ದಕ್ಕೂ ವಾಸಿಸುತ್ತಿಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆೆ ಸ್ಥಳಾಂತರಗೊಳ್ಳಬೇಕೆಂದು ಕೆಪಿಸಿಸಿ ಅಧಿಕಾರಿಗಳು ಮನವಿ ಮಾಡಿದ್ದಾಾರೆ.
..............................
   

No comments:

Post a Comment