ಮಹಿಳೆ ಸ್ವಾಭಿಮಾನ, ಸಾಹಸ, ಮಾದರಿಗೆ ಹೆಸರು
ಮಗುವಾಗಿ, ಸಹೋದರಿಯಾಗಿ, ಪತ್ನಿಯಾಗಿ, ತಾಯಿಯಾಗಿ ಮನೆ ಬೆಳಗುವ ಹೆಣ್ಣು, ಆಧುನಿಕ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ತನ್ನ ಸ್ವಾಭಿಮಾನ ಮತ್ತು ಸಾಹಸಿ ಮನೋಭಾವದಿಂದ ಉಳಿದವರಿಗೂ ದಾರಿದೀಪವಾಗಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲಿ ಪುರುಷನೊಂದಿಗೆ ಸಮಾನ ಹೆಜ್ಜೆ ಇಡುತ್ತ, ದೇಶದ ಸಮಗ್ರ ಅಬಿವೃದ್ಧಿಗೆ ತನ್ನದೇ ಆದ ಕಾಣಿಕೆ ಕೊಡುತ್ತಿದ್ದಾಳೆ. ಈ ರೀತಿ ಮನೆ, ದೇಶ ಬೆಳಗುವ ಮಹಿಳೆಯ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಆಚರಿಸಲಾಗುತ್ತಿದೆ. ಆ ನಿಮಿತ್ತ ಒಂದು ಬರೆಹ.
ಯಾವುದೋ ಒಂದು ವಿಚಾರದ ಗಂಭೀರ ಚಿಂತನೆ ನಡೆಯುವುದು ಅದು ಇರಬೇಕಾದಂತೆ ಇಲ್ಲದಿರುವಾಗ. ಹೀಗೆ ಇರಬೇಕೆಂಬ ಕಾಳಜಿಯಿಂದ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಬಗ್ಗೆ ಈ ಚರ್ಚೆ ನಡೆದಷ್ಟು ಇನ್ಯಾವ ವಿಚಾರದ ಬಗ್ಗೆಯೂ ನಡೆದಿಲ್ಲ ಎನ್ನುವುದು ಗಮನಾರ್ಹ. ಏಕೆ ಹೀಗೆ, ಸಮಕಾಲೀನ ಪರಿಸ್ಥಿತಿಯನ್ನು ಯೋಚನೆ ಮಾಡಿದರೆ ನಮ್ಮ ಮಹಿಳೆ ಎಲ್ಲ ರೀತಿಯಿಂದಲೂ ದೌರ್ಜನ್ಯಕ್ಕೆ, ಲೈಂಗಿಕ ಕಿರುಕುಳಕ್ಕೆ, ಅತ್ಯಾಚಾರಕ್ಕೆ ಒಳಗಾಗಿರುವುದನ್ನು, ಒಳಗಾಗುತ್ತಿರುವುದನ್ನು ನಾವು ಪ್ರತಿನಿತ್ಯ ನೋಡುತ್ತೇವೆ, ಕೇಳುತ್ತೇವೆ. ಕೇವಲ ಮಹಿಳೆಯೇ ಏಕೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ, ಚಿಕ್ಕಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಗಮನಿಸಿದರೆ ನಾವು ಮನುಷ್ಯರಾಗಿದ್ದೇವೆಯೇ, ರಾಕ್ಷಸರಾಗಿದ್ದೇವೆಯೇ, ಪಿಶಾಚಿಗಳಾಗಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗುತ್ತದೆ.
ವೇದಕಾಲದ ಇತಿಹಾಸದಿಂದಲೇ ಮಹಿಳೆಯರಿಗೆ ಸ್ವಾತಂತ್ರ್ಯವಿರಲಿಲ್ಲ, ವಿದ್ಯಾಭ್ಯಾಸಕ್ಕೆ ಅನುಕೂಲವಿರಲಿಲ್ಲ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಇದು ಆಂಶಿಕ ಸತ್ಯವೇ ಹೊರತು ಪೂರ್ಣ ಸತ್ಯವಲ್ಲ. ಸ್ಮತಿಕಾರನಾದ ಯಾಜ್ಞವಲ್ಕ್ಯನ ಹೆಂಡಂದಿರಾದ ಮೈತ್ರೇಯಿ ಮತ್ತು ಗಾರ್ಗಿಯವರು ಮಹಾವಿದ್ವಾಂಸರಾಗಿದ್ದರೆಂದೂ, ಗುರುಕುಲದಲ್ಲಿ ಕುಲಪತಿಯ ಹೊಣೆ ಹೊತ್ತು ದುಡಿಯುತ್ತಿದ್ದರೆಂಬ ದಾಖಲೆಯಿದೆ. ಕಲಿಯುವ ಅವಕಾಶವೇ ಇಲ್ಲದಿರುತ್ತಿದ್ದರೆ ಇದೆಲ್ಲಿ ಸಾಧ್ಯವಾಗುತ್ತಿತ್ತು. ಆದರೆ ಇಂಥವರ ಸಂಖ್ಯೆ ಕಡಿಮೆಯಾಗಿತ್ತು ಎನ್ನುವುದು ಸತ್ಯ.
ನಮ್ಮಲ್ಲಿ ಅನೇಕ ಜನ ಮಹಿಳಾವಾದಿಗಳು (ಗಂಡಸು-ಹೆಂಗಸು) ಹೇಳುತ್ತಿರುವ ಬಹುದೊಡ್ಡ ಆಕ್ಷೇಪವೇ ಧರ್ಮಶಾಸ್ತ್ರಗಳ ಕುರಿತಾದುದು. ಇವುಗಳಲ್ಲಿ ಬಹುಮುಖ್ಯವಾದುದು ಮನುಶಾಸ್ತ್ರ. ಇದರಲ್ಲಿಯೂ ‘‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’’ ಎನ್ನುವುದು. ಇಡೀ ಶ್ಲೋಕವನ್ನು ಉದಾಹರಿಸದೆ ಒಂದು ತುಣುಕನ್ನು ಎತ್ತಿಕೊಂಡು ಮಾತಾಡುವುದು ಎಷ್ಟರ ಮಟ್ಟಿಗೆ ಸರಿಯಾದೀತು. ಮನು ಹೇಳಿದ್ದು ಸ್ತ್ರೀಯರು ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲಿ, ಯೌವ್ವನದಲ್ಲಿ ಗಂಡನ ರಕ್ಷಣೆಯಲ್ಲಿ, ವೃದ್ದಾಪ್ಯದಲ್ಲಿ ಮಕ್ಕಳ ರಕ್ಷಣೆಯಲ್ಲಿ ಇರಬೇಕೆಂದು. ಈ ರಕ್ಷಣೆ ಬಂಧನವಾಗಿರಲಿಲ್ಲ. ಪಾಲನೆಯ ಸಂರಕ್ಷಣೆಯಾಗಿತ್ತು. ಮಹಿಳೆಗೆ ಆಗ ಈಗಿನಷ್ಟು ಸ್ವಾತಂತ್ರ್ಯವಿರಲಿಲ್ಲ. ಗರಿಷ್ಠ ರಕ್ಷಣೆಯಿತ್ತು. ಮನುವಿನ ಇನ್ನೊಂದು ಮಾತನ್ನು ನಾವಿಲ್ಲಿ ಗಮನಿಸಬಹುದು.‘‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ’’. ಎಲ್ಲಿ ಮಹಿಳೆಯರು ಪೂಜಾರ್ಹರಾಗಿರುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟವಾಗಿರುತ್ತಾರೆ ಎಂದು. ಹೆಣ್ಣನ್ನು, ಗೌರವದಿಂದ, ಪೂಜ್ಯ ಭಾವದಿಂದ ಕಾಣಬೇಕೆನ್ನುವುದೇ ಈ ಮಾತಿನ ಲಕ್ಷ್ಯವಾಗಿತ್ತು.
ವೇದಕಾಲ, ಪುರಾಣಗಳಲ್ಲಿ ವಿಧವೆಯಾದ ಸ್ತ್ರೀಯರಿಗೆ ಕೇಶಮುಂಡನ ಮಾಡುವ, ಆಭರಣ ಹಾಕಿಕೊಳ್ಳಬಾರದೆಂಬ ನಿಷೇಧವಿರಲಿಲ್ಲ. ಇದು ಇತಿಹಾಸ ಕಾಲದಲ್ಲಿ ವಿಧವೆಯಾದ ಹೆಣ್ಣನ್ನು ಪರರ ಆಕ್ರಮಣದಿಂದ ದೂರವಿಡಲು ಮಾಡಿದ ಒಂದು ಸಾಮಾಜಿಕ ವ್ಯವಸ್ಥೆಯಾಗಿತ್ತು ಎನ್ನುವುದನ್ನು ನಾವು ಕೇಳುತ್ತೇವೆ. ಇದು ಹೆಚ್ಚಾಗಿ ಕಾಣಿಸಿಕೊಂಡಿದ್ದು ಈ ದೇಶದ ಮೇಲೆ ಪರಕೀಯರ ದಾಳಿಯಾದಾಗ ಎನ್ನುವುದನ್ನು ನಾವು ಗಮನಿಸಬೇಕು. ಹೆಣ್ಣನ್ನು ಅಬಲೆ ಎನ್ನುತ್ತಾರೆ. ಅವಳು ಅಬಲೆಯಲ್ಲ, ಸಬಲೆ ಎಂಬ ವಾದವಿದೆ. ಅಬಲ ಎಂದರೆ ಹೆಣ್ಣು ಎಂದೇ ಅರ್ಥ. ಅಬಲೆ ಬಲಹೀನಳೆಂದುದು ಅರ್ಥ ಮಾಡಿಕೊಂಡ ಸಂಕುಚಿತ ಬುದ್ಧಿ ನಮ್ಮದು, ಅಷ್ಟೇ ಏಕೆ, ಮಡದಿ ಎಂದರೆು ಹೆಣ್ಣು ಎಂದೇ ಅರ್ಥ. ಅನೇಕ ಕಾವ್ಯಗಳಲ್ಲಿ ಇದನ್ನು ನಾವು ಕಾಣುತ್ತೇವೆ. ಭಾಷಾ ನಿಯಮನುಸಾರವಾಗಿ ಕೆಲವೊಮ್ಮೆ ಪದಗಳಿಗೆ ಅರ್ಥ ವ್ಯತ್ಯಾಸವಾಗುತ್ತಿದೆ.
ಆಧುನಿಕ ಮಹಿಳೆ ಹಿಂದಿಗಿಂತ ವಿದ್ಯಾವಂತೆಯಾಗಿದ್ದಾಳೆ, ಬುದ್ಧಿವಂತೆಯಾಗಿದ್ದಾಳೆ. ಗಂಡಿನಂತೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗಿಯಾಗಿ, ಸಶಕ್ತಗಳಾಗಿ. ತನ್ನ ಸಾಮರ್ಥ್ಯವನ್ನು ತೋರಿದ್ದಾಳೆ. ಆದರೆ ದಿನದಿಂದ ದಿನಕ್ಕೆ ದೌರ್ಜನ್ಯಕ್ಕೂ ಒಳಗಾಗುತ್ತಿದ್ದಾಳೆ. ಏಕೆ ಹೀಗೆ. ಇದಕ್ಕೆ ಪುರುಷರನ್ನು ಮಾತ್ರ ಹೊಣೆಗಾರರನ್ನಾಗಿ ಮಾಡೋಣವೇ ಅಥವಾ ಅನೇಕ ವೇಳೆ ಹೆಣ್ಣಿನ ಸಹಮತವಿದ್ದೇ ಈ ದೌರ್ಜನ್ಯಗಳಾಗುತ್ತಿವೆಯೇ. ಎರಡೂ ಕೈಗಳು ಸೇರಿದಲ್ಲಿ ಮಾತ್ರ ಚಪ್ಪಾಳೆಯಾಗುತ್ತದೆ. ಹೆಚ್ಚಾಗಿ ಉದ್ಯೋಗಸ್ಥ ಮಹಿಳೆಯರೇ ಇಂತಹ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಆಧುನಿಕ ಕಾಲದಲ್ಲಿ ಮಹಿಳೆ ಸಾಮಾಜಿಕ, ಧಾರ್ಮಿಕ ಕಟ್ಟಳೆಯನ್ನು ಮೀರಿ ನಿಂತಿದ್ದಾಳೆ. ಎಲ್ಲ ರಂಗದಲ್ಲೂ ಪುರುಷನಿಗೆ ಸಮಾನಳಾಗಿ ನಿಂತಿದ್ದಾಳೆ. ಎಲ್ಲ ಕಟ್ಟಳೆಗಳಿಂದ ಮುಕ್ತಳಾಗಿದ್ದಾಳೆ. ಶೈಕ್ಷಣಿಕ, ವ್ಯಾಪಾರೋದ್ಯಮ, ರಾಜಕೀಯ ರಂಗದಲ್ಲೂ ಅಪಾರ ಸಾಧನೆ ಮಾಡುತ್ತಿದ್ದಾಳೆ. ಮಹಿಳೆಯೊಂದು ಕಲಿತರ ಆ ಕುಟುಂಬ ಕಲಿತಂತೆ ಎಂಬ ಮಾತಿದೆ. ಇಂದು ಮಹಿಳೆ ಅವಿದ್ಯಾವಂತೆಯಾಗಿ ಮನೆಯಲ್ಲಿ ಕುಳಿತಿಲ್ಲ. ಬದಲಾಗಿ ಸ್ವ ಉದ್ಯೋಗದಲ್ಲೂ ಸೈ ಎನಿಸಿಕೊಂಡು ಕುಟುಂಬ ನಿರ್ವಹಣೆ ಮಾಡುವ ಜಾಣ್ಮೆಯನ್ನು ಮೆರೆಯುತ್ತಿದ್ದಾಳೆ.
ಸಮಾಜದಲ್ಲಿ ಮಹಿಳೆಗಿರುವ ಸ್ಥಾನಮಾನ ಗಮನಿಸಿ ಆ ರಾಷ್ಟ್ರದ ಪರಿಸ್ಥಿತಿಯನ್ನು ಹೇಳಬಹುದು ಎಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಹೇಳಿದ ಮಾತಿದೆ. ಇಂದು ಸಮಾಜದಲ್ಲಿ ಆಕೆಯ ಮೇಲೆ ಎಷ್ಟೇ ಹಲ್ಲೆ, ಶೋಷಣೆ, ದೌರ್ಜನ್ಯ ನಡೆಯುತ್ತಿದ್ದರೂ ದುಡಿದು ಕುಟುಂಬದ ನೊಗವನ್ನು ಹೊತ್ತು ಸಾಗಿಸುತ್ತಿದ್ದಾಳೆ. ಮಹಿಳಾ ಸಬಲೀಕರಣವಾದ ನಂತರವಂತೂ ಮಹಿಳೆ ಕಾಲಿಡದ ರಂಗವೇ ಇಲ್ಲ. ಇಂದು ಪುರುಷ- ಮಹಿಳೆ ತಾರತಮ್ಯ ಕಡಿಮೆಯಾಗುತ್ತಿದೆ. ಇಬ್ಬರೂ ಒಂದೇ ಗಾಡಿಯ ಎರಡು ಚಕ್ರಗಳಂತೆ ಸಮಾಜದಲ್ಲಿ ಸಾಗುತ್ತಿದ್ದಾರೆ. ಹಿಂದೆ ಕೇವಲ ತೊಟ್ಟಿಲನ್ನು ತೂಗುತ್ತಿದ್ದ ಕೈ, ಕೆಲವು ದಶಕಗಳಿಂದೀಚೆಗೆ ದೇಶವನ್ನಾಳುತ್ತಿದೆ ಎಂದರೆ ಆಧುನಿಕ ಮಹಿಳೆಯ ಸ್ಥಿತಿ ತಿಳಿಯುತ್ತದೆ.
.......................................