Thursday, 22 February 2018

ಪಕ್ಷಾಂತರಿಗಳೇ ಜೆಡಿಎಸ್‌ಗೆ ಆಸ್ತಿಿ ..

 -
ಸಂಘಟನೆ ಮಾಡುವವರಿಗೆ ಜೆಡಿಎಸ್‌ನಲ್ಲಿ ಬೆಲೆುಲ್ಲ.  ಸಿದ್ಧಾಾಂತ ತತ್ವದ ಮೇಲೆ ನಂಬಿಕೆ ಬೇಕಿಲ್ಲ ಎನ್ನುವುದನ್ನು ಮೊನ್ನೆೆ ಪಕ್ಷ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಿಯಲ್ಲಿ ಜಿಲ್ಲೆೆಯ ಮಟ್ಟಿಿಗೆ ಎರಡು ಕ್ಷೇತ್ರಗಳಲ್ಲಿ ಕಾಣಬಹುದು. ಜಿಲ್ಲೆೆಯ ಉಳಿದ ಮೂರು ಕ್ಷೇತ್ರಗಳಲ್ಲಿ ಹಾಲಿ ಎಂಎಲ್‌ಎಗಳಿಗೆ ಟಿಕೆಟ್ ಸಿಕ್ಕಿಿದೆ. ಆದರೆ ಅವರೇನೂ ಪಕ್ಷದ ಬಲದಿಂದ ಗೆದ್ದುಬಂದವರಲ್ಲ. ಜಾತಿಯ ಮತಗಳೇ ಅವರಿಗೆ ಆಧಾರ. ಇದರಿಂದಾಗಿ ಈ ಬಾರಿಯೂ ತಾವೇ ಗೆಲ್ಲುತ್ತೇವೆ ಎನ್ನುವ ಅಪಾರ ಆತ್ಮ"ಶ್ವಾಾಸ ಇವರಲ್ಲಿದೆ. ಜಾತಿಯನ್ನೇ ನೆಚ್ಚಿಿಕೊಂಡು ಶಿವಮೊಗ್ಗ ಮತ್ತು ತೀರ್ಥಹಳ್ಳಿಿಯಲ್ಲೂ ಟಿಕೆಟ್ ಕೊಡಲಾಗಿದೆ. ಒಟ್ಟಿಿನಲ್ಲಿ ಅವರು ಗೆದ್ದುಬರಬೇಕು. ತಾನು ಸಿಎಂ ಆಗಬೇಕೆನ್ನುವುದೊದೇ ಎಚ್ಡಿಿಕೆಯ ಕನಸು. 




ಶಿವಮೊಗ್ಗ ನಗರ ಜೆಡಿಎಸ್‌ನಲ್ಲಿ ಮತ್ತೆೆ ಅತೃಪ್ತಿಿ ಸ್ಫೋೋಟಿಸಿದೆ. ನಗರಾಧ್ಯಕ್ಷರ ಬದಲಾವಣೆಯಂತೂ ಮರಕೋತಿ ಆಟದಂತಾಗಿದೆ. ಎರಡೇ ತಿಂಗಳಲ್ಲಿ ಒಬ್ಬರನ್ನು ಕಿತ್ತು ಇನ್ನೊೊಬ್ಬರನ್ನು ನೇ"ುಸಿ, ಈಗ ಅವರನ್ನೂ ಕೈಬಿಟ್ಟು ಮತ್ತೆೆ ಹಳೆಯ ಅಧ್ಯಕ್ಷರಿಗೆ ಮಣೆ ಹಾಕಲಾಗಿದೆ. ಈ ಎಲ್ಲ ಬೆಳವಣಿಗೆ ಪಕ್ಷದ ಹಲವರಲ್ಲಿ ಮತ್ತು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.
ಚುನಾವಣೆ ಹತ್ತಿಿರವಾದಂತೆ "ಚಿತ್ರ ಬೆಳವಣಿಗೆಗಳತ್ತ ಪಕ್ಷ ಸಾಗುತ್ತಿಿದೆ. ಪಕ್ಷವನ್ನು ಸಂಘಟಿಸುತ್ತಿಿದ್ದ ನಗರಾಧ್ಯಕ್ಷ ಸುಬ್ಬೇಗೌಡ ಅವರನ್ನು ಯಾವ ಕಾರಣವೂ ಇಲ್ಲದೆ ಏಕಾಏಕಿ ಕಿತ್ತುಹಾಕಿ ಎಲ್ಲಾಾ ಪಕ್ಷಗಳನ್ನು ಹೊಕ್ಕು ಬಂದಿದ್ದ ಪಾಲಿಕೆ ಸದಸ್ಯ ನರಸಿಂಹಮೂರ್ತಿಗೆ ಅಧ್ಯಕ್ಷ ಹುದ್ದೆೆ ಕರುಣಿಸಲಾಗಿತ್ತು. ಇದಕ್ಕೆೆ ಯಾವ ಮಾನದಂಡ ಅನುಸರಿಸಿದರು ಎನ್ನುವುದು ಮಾತ್ರ ಯಾರಿಗೂ ಗೊತ್ತಿಿಲ್ಲ. ಆದರೆ ನರಸಿಂಹಮೂರ್ತಿ ಈ ಹುದ್ದೆೆಯಲ್ಲಿ ಕೆಲಸ ಮಾಡುವುದನ್ನು ಮರೆತು ಮುಂದಿನ ಶಾಸಕನಾಗಲು ಭಾರಿ ಕನಸು ಕಾಣತೊಡಗಿದರು. ಇದೇ ಈಗ ಅವರಿಗೆ ಮುಳುವಾಗಿದೆ. 
ಇದರಿಂದಾಗಿ ಮೊದಲೇ ಟಿಕೆಟ್ ಮೇಲೆ ಕಣ್ಣಿಿಟ್ಟಿಿದ್ದ ಜಿಲ್ಲಾಾಧ್ಯಕ್ಷ ಎಚ್.ಎನ್. ನಿರಂಜನ್ ಅವರಿಗೂ ನರಸಿಂಹಮೂರ್ತಿಯ ಬಗ್ಗೆೆ ಕಣ್ಣಿಿತ್ತು. ಕೊನೆಗೂ ಟಿಕೆಟ್ ಮೊನ್ನೆೆ ನಿರಂಜನ್ ಅವರಿಗೆ ಘೋಷಣೆಯಾದೊಡನೆ ನರಸಿಂಹಮೂರ್ತಿ ಪಕ್ಷೇತರರಾಗಿ ಕಣಕ್ಕಿಿಳಿಯುವರು ಎಂಬ ಸುದ್ದಿ ಹರಿದಾಡತೊಡಗಿತು. ಇದರಿಂದಾಗಿ ಅವರನ್ನು ನಗರಾಧ್ಯಕ್ಷ ಸ್ಥಾಾನದಿಂದ ಕೈಬಿಡಲಾಗಿದೆ. ಇದಕ್ಕೂ ಮುನ್ನವೇ ನರಸಿಂಹಮೂರ್ತಿ ಪಕ್ಷದಿಂದ ದೂರ ಸರಿದಿದ್ದಾಾರೆ. ಪಕ್ಷದ ಅಧಿಕೃತ ಅಭ್ಯರ್ಥಿ "ರುದ್ಧ ಬಂಡಾಯದ ಬಾವುಟ ಹಾರಿಸಿದ್ದಾಾರೆ.
ಜೆಡಿಎಸ್‌ನಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕಿರುವುದೇ ಇದಕ್ಕೆೆಲ್ಲಾಾ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಗರ ಜೆಡಿಎಸ್ನಲ್ಲಿ ಇರುವ ಬಹುತೇಕರೆಲ್ಲ ಇತ್ತೀಚೆಗಷ್ಟೇ ಪಕ್ಷಕ್ಕೆೆ ಬಂದವರು. ಪಕ್ಷದ ಕಾರ್ಯಕರ್ತರಿಗೇ ಇವರ ಪರಿಚಯ"ಲ್ಲ. ಪಕ್ಷದ ಸಿದ್ದಾಾಂತ, ತತ್ವ ಏನೂ ಗೊತ್ತಿಿಲ್ಲದೆ ಯಾರದ್ದೋೋ ಒತ್ತಾಾಯದಿಂದ, ವಶೀಲಿುಂದ ಬಂದು ಹುದ್ದೆೆ "ಡಿದಿದ್ದಾಾರೆ. ಇನ್ನೊೊಂದು "ಶೇಷವೆಂದರೆ ಇವರಲ್ಲಿ ಹೆಚ್ಚಿಿನವರು ಒಂದೇ ನಿರ್ದಿಷ್ಟ ಸಮುದಾಯಕ್ಕೆೆ ಸೇರಿದವರು. ಈ ಸಮುದಾಯದ ಮತದ ಮೇಲೆ ಕಣ್ಣಿಿಟ್ಟು ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಸಂಘಟನೆ ಬೇಕಿಲ್ಲ. ನೇರವಾಗಿ ಟಿಕೆಟ್ ಮತ್ತು ಹುದ್ದೆೆ ಎರಡರ ಮೇಲೆ ಮಾತ್ರ ಕಣ್ಣು. ಇಂತಹವರಿಂದ ಪಕ್ಷದ ಸಂಘಟನೆ ಕೆಡುತ್ತಿಿದ್ದರೂ ಇದನ್ನು ಗಮನಿಸುವವರೇ ಇಲ್ಲ.
 ಪಾಲಿಕೆಗೆ ಪಕ್ಷೇತರನಾಗಿ ಗಾಡಿಕೊಪ್ಪ ವಾರ್ಡಿನಿಂದ ಗೆದ್ದುಬಂದಿದ್ದೇ ತಡ, ಪಕ್ಷಾಂತರ ಪರ್ವವನ್ನೇ ಆರಂಭಿಸಿದ ನರಸಿಂಹಮೂರ್ತಿ, ಮೊದಲು ಕಾಂಗ್ರೆೆಸ್ ಸೇರದಿದ್ದರೂ ಪಾಲಿಕೆಯಲ್ಲಿ ಕಾಂಗ್ರೆೆಸ್‌ಗೆ ಬೆಂಬಲ ನೀಡಿ ಅದು ಅಧಿಕಾರಕ್ಕೇರಲು ನೆರವಾದರು. ಆನಂತರ ಶಾಸಕರನ್ನೇ ಬೈಯ್ಯುತ್ತ ಅಲ್ಲಿಂದ ಹೊರಬಿದ್ದು ಬಿಜೆಪಿ ಸೇರಿಕೊಂಡರು. ಅಲ್ಲಿಯೂ ಬಹಳ ಕಾಲ ನಿಲ್ಲಲಿಲ್ಲ. ಏಕೆಂದರೆ ಹುದ್ದೆೆ ಸಿಗಲಿಲ್ಲ. ಜೆಡಿಎಸ್‌ನತ್ತ ನೋಟ ಬೀರಿ ಕೆಲವು ಬೆಂಬಲಿಗರೊಂದಿಗೆ ಆ ಪಕ್ಷ ಸೇರಿದರು. ಅಲ್ಲಿ ಕೆಲವೇ ತಿಂಗಳಲ್ಲಿ ನಗರಾಧ್ಯಕ್ಷ ಸ್ಥಾಾನ ಪಡೆದು ದೊಡ್ಡ ನಾಯಕರೆನಿಸಿಕೊಂಡರು. ಆದರೆ ಹಾಗೆ ಬೆಳೆಯಲಿಲ್ಲ. ಇದೇ ಅವರಿಗೆ ಮುಳುವಾಗಿದ್ದು.
 ಪಕ್ಷ ಸೇರಿದ ಆರೆಂಟು ತಿಂಗಳಲ್ಲಿ  "ಧಾನಸಭೆ ಚುನಾವಣೆ ಟಿಕೆಟ್‌ಗೆ ಪ್ರಬಲ ಪೈಪೋಟಿ ನಡೆಸುತ್ತಾಾರೆಂದರೆ ಆ ಪಕ್ಷದಲ್ಲಿ ಹತ್ತಿಿಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಸಂಘಟನೆ ಮಾಡಿದವರು ಏನು ಮಾಡಬೇಕೆಂಬ ಕನಿಷ್ಟ "ಚಾರವನ್ನೂ ಪಕ್ಷದ ನಾಯಕರು ಗಮನಿಸುತ್ತಿಿಲ್ಲ. ಇಂತಹ ನಾಯಕರು ಮತ್ತು ಪಕ್ಷಾಂತರಿಗಳಿಂದಲೇ ಚುನಾವಣೆ ಕಾಲದಲ್ಲಿ ಮಾತ್ರ ಜೆಡಿಎಸ್ ಎದ್ದುನಿಲ್ಲುತ್ತದೆ ಎಂಬ ಅರೋಪಕ್ಕೆೆ ತುತ್ತಾಾಗುವಂತಾಗಿದೆ. 
ಇದೇ ರೀತಿ ಜಿಲ್ಲಾಾಧ್ಯಕ್ಷ ನಿರಂಜನ ಸಹ ಎರಡು ವರ್ಷದ "ಂದೆ ಜೆಡಿಎಸ್ ಸೇರಿ ನೇರವಾಗಿ "ಧಾನಪರಿಷತ್ ಚುನಾವಣೆಗೆ ಕಣಕ್ಕಿಿಳಿದರು. ಅಲ್ಲಿ ಎರಡನೆಯ ಸ್ಥಾಾನದೊಂದಿಗೆ ಪರಾಜಿತರಾದ ನಂತರ ಇದೇ ಪ್ಲಸ್ ಪಾುಂಟ್ ಎಂದರಿತ ರಾಜ್ಯ ನಾಯಕರು ಇವರನ್ನು ಜಿಲ್ಲಾಾಧ್ಯಕ್ಷರನ್ನಾಾಗಿಸಿದರು. ಈಗ "ಧಾನಸಭೆಗೆ ಟಿಕೆಟ್ ದಕ್ಕಿಿದೆ. ತೀರ್ಥಹಳ್ಳಿಿಯಲ್ಲಿಯೂ ಅರ್. ಎಂ ಮಂಜುನಾಥ ಗೌಡ ಮಾಜಿ ಮುಖ್ಯಮಂತ್ರಿಿ ಎಸ್. ಬಂಗಾರಪ್ಪ ಅವರನ್ನು "ುೀರಿಸುವ ರೀತಿಯಲ್ಲಿ ಪಕ್ಷಾಂತರ ಮಾಡಿ ಜೆಡಿಎಸ್ ಸೇರಿ ತವರು ಮನೆಗೆ ಮರಳಿದ್ದೇನೆಂದು ಹೆಮ್ಮೆುಂದ ಹೇಳಿಕೊಳ್ಳುತ್ತಿಿದ್ದಾಾರೆ. "ಧಾನಸಭೆಗೆ ಕಣ್ಕ್ಕಿಿಳಿಯಲೆಂದೇ ಜೆಡಿಎಸ್‌ಗೆ ಸೇರಿದ್ದಾಾರೆಂಬ ಮಾತು ಕೇಳಿಬರುತ್ತಿಿದೆ. ನರಸಿಂಹಮೂರ್ತಿ ಸಹ ಪಕ್ಷಾಂತರದಲ್ಲಿ ಬಂಗಾರಪ್ಪ ಮತ್ತು ಮಂಜುನಾಥ ಗೌಡ ಅವರನ್ನು "ುೀರಿಸುತ್ತಿಿದ್ದಾಾರೆ. ಒಟ್ಟಿಿನಲ್ಲಿ ಪಕ್ಷಾಂತರಿಗಳೇ ಜೆಡಿಎಸ್ ಆಸ್ತಿಿ ಎಂಬಂತಾಗಿದೆ. 
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಪಕ್ಷ ಗೆಲ್ಲುವುದು ಮುಖ್ಯ ಎಂದಿದ್ದಾಾರೆ. ಅಂದರೆ ಅಭ್ಯರ್ಥಿಗಳು ಪಕ್ಷಾಂತರಿಗಳಾಗಿರಬಹುದು, ಹಣವಂತರಾಗಿರಬಹುದು, ಪಕ್ಷ ನಿಷ್ಠೆೆ, ಸಂಘಟನೆ ಮುಖ್ಯವಲ್ಲ  ಎಂದರ್ಥ. ಅವರಿಗೆ ಸಿದ್ದಾಾಂತ ದೊಡ್ಡ "ಷಯವೇ ಅಲ್ಲ. ಏನಿದ್ದರೂ ಗೆದ್ದುಬರುವುದು ಮುಖ್ಯವಂತೆ. ಟಿಕೆಟ್ ಕೊಡುವಾಗಲೇ ಪಕ್ಷದ ರಾಜ್ಯ ನಾಯಕರು ಈ ರೀತಿ ತೀರ್ಮಾನಿಸಿಬಿಟ್ಟರೆ ಚುನಾವಣೆ ಇನ್ನು ಯಾವ ರೀತಿ ನಡೆಯಬಹುದು ಯೋಚಿಸಿ.
ಒಟ್ಟಿಿನಲ್ಲಿ  ಪಕ್ಷಾಂತರಿಗಳ ಆಟ ಜೆಡಿಎಸ್‌ನ್ನು ಕಂಗಾಲು ಮಾಡಲಿದೆ. ಈ ಅನುಭವ "ಂದೆಯೂ ಸಾಕಷ್ಟು ಆಗಿದ್ದರೂ ಅವರು ಇದನ್ನೇ ಮುಂದುವರೆಸುತ್ತಿಿದ್ದಾಾರೆ. ಈಗಾಗಲೇ ಶಿವಮೊಗ್ಗ ನಗರದಲ್ಲಿ ಭಿನ್ನಮತದ ಕಿಡಿ ಬಿದ್ದಿದೆ. ಇಂತಹವರು ಒಂದು ವೇಳೆ ಅಧಿಕಾರಕ್ಕೇರಿದರೂ ಇವರಿಂದ ಏನನ್ನು ನಿರೀಕ್ಷಿಸಬಹುದು, ಯಾವ ರೀತಿ ಆಡಳಿತ ನೀಡಿಯಾರು ಎನ್ನುವುದನ್ನು ಜೆಡಿಎಸ್ ವರಿಷ್ಠರಾದ ಎಚ್. ಡಿ. ದೇವೇಗೌಡ ಮತ್ತು ಅವರ ಮಗ ಎಚ್. ಡಿ. ಕುಮಾರಸ್ವಾಾ"ು ಅವರೇ ಹೇಳಬೇಕಿದೆ.

PUBLISHED ON
.............................................

No comments:

Post a Comment