ಅಕ್ರಮ ಆಟೋ, ಕಾರು ನಿಲ್ದಾಣಗಳಿಗೆ ಬ್ರೇಕ್ ಎಂದು?
ಆಟೋ ಚಾಲಕರಿಗೆ ಸೂಕ್ತ ಶೆಲ್ಟರ್ ನಿರ್ಮಿಸಿ ಕೊಡುವುದು ಸ್ಥಳಿಯಾಡಳಿತ, ಸಂಬಂಧಿಸಿದ ಇಲಾಖೆಗಳ ಆದ್ಯ ಕರ್ತವ್ಯ. ಆದರೆ ಸ್ಟ್ಯಾಂಡ್ ನಿರ್ಮಿಸಲು ಮುಂದಾಗಿರುವ ಸ್ಥಳವು ಆಟೋಗಳ ನಿಲುಗಡೆಗೆ ಪ್ರಶಸ್ತವಾಗಿದೆಯೇ, ಜನ - ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲವೇ ಎಂಬುವುದನ್ನು ಮೊದಲು ಪರಿಶೀಲಿಸಬೇಕು. ನಗರದ ಬಾಲರಾಜ್ ಅರಸ್ ರಸ್ತೆ ಮತ್ತು ಆ ರಸ್ತೆಯ ಫುಟ್ಪಾತ್ಗೆ ಹೊಂದಿಕೊಂಡಂತೆ ಮೊನ್ನೆಯಷ್ಟೇ ಫುಟ್ಪಾತ್ ಮೇಲೆಯೇ ಶೆಲ್ಟರ್ವೊಂದನ್ನು ನಿರ್ಮಿಸಲಾಗಿದೆ. ನೆಹರೂ ರಸ್ತೆಯ ಕೆನರಾ ಬ್ಯಾಂಕ್ ಎದುರು ಅಕ್ರಮವಾಗಿ ಆಟೋಗಳು ನಿಲ್ದಾಣ ಮಾಡಿಕೊಂಡಿವೆ. ಇಂತಹ ಹತ್ತಾರು ಉದಾಹರಣೆ ಕಣ್ಣಮುಂದಿದೆ. ಇದನ್ನೆಲ್ಲ ಗಮನಿಸಿ ಕ್ರಮ ಜರುಗಿಸುವವರಾರು?
ನಗರದೊಳಕ್ಕೆ ಎಲ್ಲೆಂದರಲ್ಲಿ ಇತ್ತೀಚೆಗೆ ಅವೈಜ್ಞಾನಿಕವಾಗಿ ಆಟೋ ನಿಲ್ದಾಣ ಶೆಲ್ಟರ್ಗಳು ತಲೆ ಎತ್ತುತ್ತಿವೆ. ಇದಕ್ಕೆ ಯಾರ ಅನುಂಮತಿಯನ್ನೂ ಇದರ ಸಂಸತಪಕರು ಪಡೆಯುತ್ತಿಲ್ಲ. ಹತ್ತಾರು ಅಟೋ ನಿಲ್ಲುತ್ತವೆ ಎಂದಾದರೆ ಆಟೊ ಸ್ಟ್ಯಾಂಡ್ ನಿಮಾಣವಾಗುತ್ತಿದೆ. ಲೆಕ್ಕಕ್ಕೆ ಇಲ್ಲದಷ್ಟು ಇಂತಹ ನಿಲ್ದಾನಗಳು ಅಕ್ರಮವಾಗಿ ಸ್ಥಾಪಿತವಾಗಿವೆ. ಆದರೆ ಇದನ್ನು ಗಮನಿಸುವ ಅಧಿಕಾರಿಗಳೇ ಇಲ್ಲ!
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜನ ಮತ್ತು ವಾಹನ ಸಂಚಾರ ದಟ್ಟಣೆಯಿರುವ ವೃತ್ತ ಮೊದಲಾದೆಡೆ ಆಟೊ ನಿಲ್ದಾಣ ನಿರ್ಮಾಣವಾಗುವಾಗ ಕೆಲವೊಂದು ನಿಯಮಗಳಿವೆ. ಹೆದ್ದಾರಿ ಪಕ್ಕದಲ್ಲಿ, ಪಾಲಿಕೆಗೆ ಸೇರಿದ ಜಾಗದಲ್ಲಿ, ಲೊಕೊಪಯೊಗಿ ಇಲಾಖೆಯ ರಸ್ತೆಯಾದರೆ ಸಂಬಂಧಿತರ ಪರವಾನಿಗೆ ಬೇಕು. ಆದರೆ ಇಲ್ಲಿ ಆಟೊ ಚಾಲಕರದ್ದೇ ಸಾಮ್ರಾಜ್ಯ. ಅವರದ್ದೇ ಅಂತಿಮ ತೀರ್ಮಾನ.
ರಸ್ತೆ ವಿಸ್ತರಣೆ ಆಗಬೇಕೆಂದರೆ ಈ ನಿಲ್ದಾಣಗಳನ್ನು ತೆಗೆಯಲೇಬೇಕಾಗುತ್ತದೆ. ಜೊತೆಗೆ ಪಾದಚಾರಿ ಮಾರ್ಗಕ್ಕೂ ಕೆಲವೆಡೆ ತೊಂದರೆ ಆಗುವಂತೆ ನಿಲ್ದಾಣ ಇದೆ. ಇವುಗಳ ಬಗ್ಗೆ ಗಮನಿಸದೆ ತಮ್ಮ ಆಟೊ ನಿಲ್ಲಲು ಜಾಗವಾದರೆ ಸಾಕೆಂಬ ದೃಷ್ಟಿಯಿಂದ ಆಟೊ ಚಾಲಕರು ಗುಂಪು ಸೇರಿ ಈ ರೀತಿ ಅಕ್ರಮ ನಿಲ್ದಾಣ ಸ್ಥಾಪಿಸುತ್ತಿದ್ದಾರೆ. ಪಾಲಿಕೆಯವರಂತೂ ಇವರ ಗೋಜಿಗೇ ಹೋಗುವುದಿಲ್ಲ. ಸಂಬಂಧಿತ ವಾರ್ಡ್ ಸದಸ್ಯರು ಜಾಣ ಕುರುಡರು. ಅಧಿಕಾರಿಗಳು ಕಾ
ಆರಿನಲ್ಲಿ ಸಂಚರಿಸುವುದರಿಂದ ಇವರ ಬಗ್ಗೆ ಗಮನವಿಲ್ಲ. ಸಮಸ್ಯೆ ಏನಿದ್ದರೂ ಸಾಮಾನ್ಯ ನಾಗರಿಕರದ್ದು. ಅದನ್ನು ಹೇಳಿದರೂ ಕೇಳಿಸಿಕೊಳ್ಳುವವರಿಲ್ಲ. ಹಾಗಾಗಿ ಸಮಸ್ಯೆ ಪರಿಹರಿಸುವವರೇ ಇಲ್ಲ.
ಇನ್ನೊಂದೆಡೆ ಜನಪ್ರತಿನಿಧಿಗಳೇ, ಇತ್ತೀಚೆಗೆ ನಗರದ ವಿವಿಧೆಡೆ ಜನಪ್ರತಿನಿಧಿಗಳ ಅನುದಾನದಡಿ ಆಟೋಗಳ ನಿಲುಗಡೆಗೆ ನಿರ್ಮಿಸುತ್ತಿರುವ ಶೆಲ್ಟರ್ಗಳು ಸಾಕ್ಷಿಯಾಗಿವೆ. ಎಲ್ಲೆಂದರಲ್ಲಿ ಶೆಲ್ಟರ್ ನಿರ್ಮಿಸಲಾಗುತ್ತಿದೆ. ನೀತಿ - ನಿಯಮ ಗಾಳಿಗೆ ತೂರಲಾಗುತ್ತಿದೆ. ಇದರಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ, ಸರ್ಕಾರದ ಅನುದಾನದ ಅನಗತ್ಯ ದುಂದು ವೆಚ್ಚವಾಗುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
’ಪ್ರಮುಖ ವೃತ್ತ, ಪಾದಚಾರಿ ಮಾರ್ಗಗಳು, ಭಾರೀ ಪ್ರಮಾಣದ ಜನ-ವಾಹನ ಸಂಚಾರ ದಟ್ಟಣೆಯಿರುವ ಪ್ರದೇಶಗಳಲ್ಲಿಯೇ ಆಟೋಗಳ ನಿಲುಗಡೆಗೆ ಶೆಲ್ಟರ್ ನಿರ್ಮಿಸಲು ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಅನುಮತಿ ನೀಡಿರುವುದು ಸಖೇದಾಶ್ಚರ್ಯವೇ ಸರಿ.
’ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆ ಕೊಂಡೊಯ್ಯುವ ಆಟೋ ಚಾಲಕರಿಗೆ ಸೂಕ್ತ ಶೆಲ್ಟರ್ ನಿರ್ಮಿಸಿ ಕೊಡುವುದು ಸ್ಥಳಿಯಾಡಳಿತ, ಸಂಬಂಧಿಸಿದ ಇಲಾಖೆಗಳ ಆದ್ಯ ಕರ್ತವ್ಯವಾಗಿದೆ. ಆದರೆ ಸ್ಟ್ಯಾಂಡ್ ನಿರ್ಮಿಸಲು ಮುಂದಾಗಿರುವ ಸ್ಥಳವು ಆಟೋಗಳ ನಿಲುಗಡೆಗೆ ಪ್ರಶಸ್ತವಾಗಿದೆಯೇ, ಜನ - ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲವೇ ಎಂಬುವುದನ್ನು ಮೊದಲು ಪರಿಶೀಲಿಸಬೇಕು.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನುರಾಜ್ ನಗರದ ಬಾಲರಾಜ್ ಅರಸ್ ರಸ್ತೆ ಮತ್ತು ಆ ರಸ್ತೆಯ ಫುಟ್ಪಾತ್ಗೆ ಹೊಂದಿಕೊಂಡಂತೆ ಕಾರುಗಳ ನಿಲುಗಡೆ ನಿರ್ಬಂಧಿಸಿದ್ದರು. ಜನಪ್ರತಿನಿಧಿಗಳ ಒತ್ತಡಕ್ಕೂ ಮಣಿದಿರಲಿಲ್ಲ. ಆದರೆ ಇದೀಗ ಎಂದಿನಂತೆ ಆ ರಸ್ತೆಯಲ್ಲಿ ಕಾರುಗಳ ನಿಲುಗಡೆ ಮಾಡಲಾಗುತ್ತಿದೆ. ಪಾದಚಾರಿಗಳು ರಸ್ತೆಯ ಮೇಲೆ ಓಡಾಡುವಂತಾಗಿದೆ. ಮೊನ್ನೆಯಷ್ಟೇ ಫುಟ್ಪಾತ್ ಮೇಲೆಯೇ ಶೆಲ್ಟರ್ವೊಂದನ್ನು ನಿರ್ಮಿಸಲಾಗಿದೆ.
ಬಾಕ್ಸ್
ಶೆಲ್ಟರ್ ನಿರ್ಮಾಣಕ್ಕೆ ತಡೆ
ನಗರದ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ರಸ್ತೆಯಲ್ಲಿ ಇತ್ತೀಚೆಗೆ ನಿರ್ಮಿಸಲಾಗುತ್ತಿದ್ದ ಆಟೋ ಶೆಲ್ಟರ್ ನಿರ್ಮಾಣ ಕಾರ್ಯಕ್ಕೆ ಪಿಡಬ್ಲ್ಯೂಡಿ ಇಲಾಖೆ ತಡೆ ನೀಡಿದೆ. ತಮ್ಮ ಇಲಾಖೆಗೆ ಸೇರಿದ ರಸ್ತೆಗೆ ಹೊಂದಿಕೊಂಡಂತೆ ಆಟೋ ಶೆಲ್ಟರ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಜನ - ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಿಂದ ನಿರ್ದಿಷ್ಟ ಅಂತರದಲ್ಲಿ ಶೆಲ್ಟರ್ ನಿರ್ಮಿಸಿ’ ಎಂದು ನಿರ್ಮಾಣ ಸಂಸ್ಥೆಗೆ ಪಿಡಬ್ಲ್ಯೂಡಿ ಇಲಾಖೆ ಪತ್ರ ಬರೆದು ಸೂಚನೆ ನೀಡಿದೆ. ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ ಶೆಲ್ಟರ್ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಬಾಕ್ಸ್
ಪಾಲಿಕೆಯ ದರ್ಬಾರು
’ನಗರ ವ್ಯಾಪ್ತಿಯಲ್ಲಿ ತಮ್ಮ ಇಲಾಖೆಗೆ ಸೇರಿದ ರಸ್ತೆಗಳಂಚಿನಲ್ಲಿಯೇ ಆಟೋ ಇತರೆ ವಾಹನಗಳ ನಿಲುಗಡೆಯ ಶೆಲ್ಟರ್ ನಿರ್ಮಾಣ ಮಾಡಲು ಮಹಾನಗರ ಪಾಲಿಕೆ ಆಡಳಿತ ಕೆಲವೊಮ್ಮೆ ಎನ್ಓಸಿ ನೀಡುತ್ತದೆ. ಶೆಲ್ಟರ್ ನಿರ್ಮಾಣ ತಡೆಯಲು ಮುಂದಾದರೆ ನಮ್ಮ ಮೇಲೆಯೇ ಆಕ್ರೋಶ ವ್ಯಕ್ತವಾಗುತ್ತದೆ. ಕೆಲವು ಜನಪ್ರತಿನಿಧಿಗಳಿಂದಲೂ ಸಾಕಷ್ಟು ಒತ್ತಡ ಬರುತ್ತದೆ. ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪಿಡಬ್ಲ್ಯೂಡಿ ಎಂಜಿನಿಯರ್ ಒಬ್ಬರು ಹೇಳುತ್ತಾರೆ.
---------------------------------

No comments:
Post a Comment