ಶುರುವಾಯ್ತು ಮತ್ತೆ ಮರಳು ಲೂಟಿ
ಸ್ವತಃ ಕಾರ್ಯಾಚರಣೆಗಿಳಿದ ಜಿಲ್ಲಾ ಪೊಲೀಸ್ ವರಿಷ್ಠ ಖರೆ
-
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ದಂಧೆ ಅವ್ಯಾಹತವಾಗಿದ್ದು, ಯಾರೂ ನಿಯಂತ್ರಣ ಮಾಡದ ಮಟ್ಟಕ್ಕೆ ಬೆಳೆದು ನಿಂತಿದೆ. ಇನ್ನಾದರೂ ಜಿಲ್ಲಾಡಳಿತ ಮರಳು ಮಾಫಿಯಾ ಅಟ್ಟಹಾಸಕ್ಕೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲು ಪ್ರಾಮಾಣಿಕ ಗಮನಹರಿಸಬೇಕು. ನಾಗರಿಕರಿಗೆ ಸುಲಭಗತಿಯಲ್ಲಿ ಮರಳು ಲಭ್ಯವಾಗುವ ವ್ಯವಸ್ಥೆ ಮಾಡಲು ಮುಂದಾಗಬೇಕಾಗಿದೆ. ಅಕ್ರಮ ಮರಳು ಲೂಟಿಗೆ ಕಡಿವಾಣ ಹಾಕಲು ಹಾಗೂ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸುಲಭವಾಗಿ ಮರಳು ದೊರಕಿಸಿಕೊಡಲು ಸರ್ಕಾರ, ಸ್ಥಳೀಯಾಡಳಿತಗಳು ಹತ್ತು ಹಲವು ಕ್ರಮಕೈಗೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ತೀರ್ಥಹಳ್ಳಿ ತಾಲೂಕಿನಲ್ಲಿ ಮರಳು ಲೂಟಿಯಾಗುತ್ತಿರುವುದನ್ನು ನೋಡಲಾಗದೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠರೇ ಸತತ ದಾಳಿಗಿಳಿದಿದ್ದಾರೆ. ಮೂರು ದಿನದಿಂದ ತಾಲೂಕಿನಲ್ಲಿ ಮರಳು ಲಭ್ಯವಿರುವ ಗ್ರಾಮಗಳಲ್ಲೆಲ್ಲಾ ತಿರುಗಾಡಿ ನೂರಾರು ಲೋಡ್ ಅಕ್ರಮ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.
ಇಲ್ಲಿ ನಡೆಯುತ್ತಿರುವ ಮರಳು ಲೂಟಿಯನ್ನು ಗಮನಿಸಿದರೆ ಇಷ್ಟು ವರ್ಷದಿಂದ ಎಷ್ಟು ಕೋಟಿ ರೂ. ಮೌಲ್ಯದ ಮರಳನ್ನು ಅಕ್ರಮವಾಗಿ ಮಾರಾಟಮಾಡಿ ಕೋಟಿ ಕೋಟಿ ಎಣಿಸಿರಬಹುದು ಎನ್ನುವುದನ್ನು ಅರಿಯಬಹುದು. ಕೆಲವರಂತೂ ಮಳೆಗಾಲವನ್ನೂ ಲೆಕ್ಕಿಸದೆ ಈ ದಂಧೆಯಲ್ಲಿ ನಿರತರಾಗಿದ್ದು ಬೆಳಕಿಗೆ ಬಂದಿದೆ. ಶಾಲಾ ಆವರಣ, ದಟ್ಟ ಅಡವಿ, ಮನೆಯ ಹಿಂದಿನ ಜಾಗ, ನದಿಯ ಪಕ್ಕದಲ್ಲಿ ಸಂಗ್ರಹಿಸಿಡುವುದು, ಆನಂತರ ಸಾಗಾಟ ಮಾಡುವುದು ಇವರ ದಿನನಿತ್ಯದ ದಂಧೆಯಾಗಿದೆ. ಕಳೆದ ವರ್ಷವೇ ನೂರಾರು ಜನರಿಗೆ ಬಿಸಿಮುಟ್ಟಿಸಿದ್ದ ಎಸ್.ಪಿ ಅಭಿನವ್ ಖರೆ, ಈ ವರ್ಷ ತಮ್ಮ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿದ್ದು, ಹಲವರು ಮತ್ತೆ ಜೈಲುಪಾಲಾಗುವುದು ನಿಶ್ಚಿತ.
ಕಳೆದ ವರ್ಷವೇ ಸಾಕಷ್ಟು ದಂಧೆಕೋರರರು ಎಸ್ಪಿಯವರ ವಿರುದ್ಧವೇ ರಾಜಕಾರಣಿಗಳನ್ನು ಎತ್ತಿಕಟ್ಟಿದ್ದರು. ಇದರಿಂದ ಕೆಲವು ಜನಪ್ರತಿನಿಧಿಗಳು ಎಸ್ಪಿ ವಿರುದ್ದ ಹರಿಹಾಯ್ದಿದ್ದರು. ಪೊಲೀಸರು ಈ ವಿಷಯದಲ್ಲಿ ನಿಷ್ಕ್ರಿಯರಾಗಿದ್ದಾರೆಂದು ದೂರಿದ್ದರು. ಆದರೂ ಛಲಬಿಡದೆ ಎಸ್ಪಿ ಖರೆ ತಮ್ಮ ಕೆಲಸವನ್ನು ಮತ್ತೆ ಮುಂದುವರೆಸಿದ್ದಾರೆ. ನಕಲಿ ಪರವಾನಿಗೆ, ಎಂ. ಸ್ಯಾಂಡ್ ಎಂದೆಲ್ಲ ಮರಳು ಸಾಗಾಟವಾಗುತ್ತಿದೆ. ಇದನ್ನು ಮೊದಲು ಪತ್ತೆ ಮಾಡಬೇಕಿದೆ. ದಂಧೆಕೋರರು ಎಸ್ಪಿಯವರ ಈ ಕ್ರಮದಿಂದ ಚಳಿಗಾಲದಲ್ಲೂ ಬೆವರುವಂತಾಗಿದೆ. ಮರಳು ಅಕ್ರಮ ಸಂಗ್ರಹ ಪತ್ತೆ ಹಚ್ಚುವ ಕೆಲಸವನ್ನು ಕಳೆದ ವರ್ಷವೇ ಜಿಲ್ಲಾ ಡಿಸಿಬಿ ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ತಂಡಕ್ಕೆ ಎಸ್ಪಿ ವಹಿಸಿದ್ದಾರೆ. ಅವರು ಪತ್ತೆ ಮಾಡಿದ್ದು ಸಾವಿರಾರು ಲೋಡ್ ಮರಳು.
ಇವರೆಲ್ಲ ಸಂಗ್ರಹಿಸಿ ಮಾರಾಟ ಮಾಡುವ ಮರಳಿನ ಮೌಲ್ಯ ನೂರಾರು ಕೋಟಿ ರೂ.ಗಳಿಗೂ ಅಧಿಕ ಮೊತ್ತದ್ದಾಗಿದೆ. ಇದೊಂದು ದೊಡ್ಡ ಮಾಫಿಯಾವಾಗಿ ಬೆಳೆದು ನಿಂತಿದೆ. ಆಡಳಿತ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುವ ಮಟ್ಟದಲ್ಲಿ ಈ ಮಾಫಿಯಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಕೆಲವು ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ನಾನಾ ವರ್ಗದ ಪ್ರಭಾವಿಗಳು ಮರಳಿನ ವ್ಯವಹಾರದಲ್ಲಿ ಪ್ರತ್ಯಕ್ಷ - ಪರೋಕ್ಷವಾಗಿ ಶಾಮೀಲಾಗುತ್ತಿರುವುದು ಮರಳು ದಂಧೆಯ ಅಗಾಧತೆಗೆ ಹಿಡಿದ ಕೈಗನ್ನಡಿಯಾಗಿದೆ.
ಜಿಲ್ಲೆಯ ಗಡಿ ದಾಟಿ, ಚೆಕ್ಪೋಸ್ಟ್ - ಪೊಲೀಸ್ ಠಾಣೆಗಳ ಸರಹದ್ದು ಮೀರಿ, ಆಡಳಿತ ಯಂತ್ರದ ಕಣ್ಣಿಗೆ ಮಣ್ಣೆರಚಿ ಮರಳು ಲೂಟಿಯಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಎಲ್ಲ ದಿನಗಳಲ್ಲಿಯೂ ನದಿಪಾತ್ರಗಳಿಂದ ಮರಳು ಲೂಟಿ ಮಾಡಲಾಗುತ್ತಿದೆ. ಮತ್ತೊಂದೆಡೆ, ಸಾಮಾನ್ಯ ನಾಗರಿಕರು ಕಟ್ಟಡ ನಿರ್ಮಾಣಕ್ಕೆ ಲೋಡ್ ಮರಳು ಪಡೆಯಲು ಪರದಾಡುವಂತಾಗಿದೆ. ಬ್ಲಾಕ್ನಲ್ಲಿ 40 ರಿಂದ 50 ಸಾವಿರ ರೂ. ತೆತ್ತು ಮರಳು ಖರೀದಿಸುವಂತಹ ಸ್ಥಿತಿಯಿದೆ. ರಾಜ್ಯದಲ್ಲಿ ಅತೀ ಹೆಚ್ಚು ಮರಳು ಲಭ್ಯವಾಗುವ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿಯೇ ನಾಗರಿಕರು ಮರಳು ಪಡೆಯಲು ಹರಸಾಹಸ ನಡೆಸುವಂತಹ ದುಃಸ್ಥಿತಿಯಿದೆ ಎಂದರೆ ನಂಬಲಸಾಧ್ಯ.
ಶಿವಮೊಗ್ಗದ ನದಿ ಪಾತ್ರಗಳಲ್ಲಿ ದೊರಕುವ ಮರಳಿಗೆ ಬೆಂಗಳೂರು ಮತ್ತಿತರ ನಗರಗಳಲ್ಲಿ ಭಾರೀ ಬೇಡಿಕೆ ಇದೆ. ಒಂದು ಲಾರಿ ಲೋಡ್ ಮರಳಿಗೆ 50 ಸಾವಿರ ರೂ. ಮೇಲ್ಪಟ್ಟು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಗಲು-ರಾತ್ರಿಗಳ ಪರಿವೆಯೇ ಇಲ್ಲದೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಮೂಲಕ ಹೊರ ಜಿಲ್ಲೆಗಳಿಗೆ ಮರಳು ಸಾಗಾಣೆ ನಡೆಸಲಾಗುತ್ತಿದೆ ಎನ್ನುವ ಆರೋಪ ಜನಸಾಮಾನ್ಯರದು. ಈ ರಸ್ತೆಗಳಲ್ಲಿರುವ ಚೆಕ್ಪೋಸ್ಟ್, ವ್ಯಾಪ್ತಿಯ ಪೊಲೀಸ್ ಠಾಣೆಗಳ ಗಮನಕ್ಕೆ ಬರದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.
ಕಾನೂನುಬದ್ಧವಾಗಿ ಮರಳು ಸಾಗಾಣೆಯಾದರೆ ಯಾರಿಗೂ ಮಾಮೂಲಿ ಸಿಗುವುದಿಲ್ಲ. ನಾಗರಿಕರಿಗೆ ಮಾತ್ರ ಅನುಕೂಲವಾಗುತ್ತದೆ. ಅದೇ ಕಾನೂನುಬಾಹಿರ ಮರಳು ಸಾಗಾಣೆಯಾದರೆ ಎಲ್ಲರಿಗೂ ನಿಯಮಿತವಾಗಿ ಮಾಮೂಲಿ ಲಭ್ಯವಾಗುತ್ತದೆ. ಇದರಿಂದ ಕಾನೂನುಬಾಹಿರ ಮರಳು ಗಣಿಗಾರಿಕೆಯ ಬಗ್ಗೆಯೇ ಎಲ್ಲರಿಗೂ ಆಸಕ್ತಿ ಹೆಚ್ಚಾಗಿದೆ.
------------------------------------

No comments:
Post a Comment