ಪಂಡಿತ, ಪ್ರವಚನಕಾರ, ಪುರೋಹಿತ ವಿ.ಎನ್. ಭಟ್
ನಿನ್ನೆ ನಮ್ಮನ್ನಗಲಿದ ವಿದ್ವಾನ್ ವಿ.ಎನ್. ಭಟ್ ಅವರಿಗೊಂದು ನುಡಿನಮನ
ವಿ.ಎನ್. ಭಟ್ಟರು ಒಂದು ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಸ್ಕೃತ , ಕನ್ನಡ, ಹಿಂದಿಯಲ್ಲಿ ಪರಿಣಿತರಾಗಿ ಪ್ರಗಲ್ಭ ಪ್ರವಚನಕಾರರಾಗಿ, ಪ್ರಸಿದ್ಧ ಪುರೋಹಿತರಾಗಿ ಹೆಸರಾಗಿದ್ದರು. ಪೌರೋಹಿತ್ಯ ಕೆಲಸ ಮಾಡುವವರನ್ನೆಲ್ಲ ಒಂದೇ ಸೂರಿನಡಿ ತಂದು ವೈದಿಕ ಪರಿಷತ್ ಸ್ಥಾಪಿಸಿದ ಮಹತ್ಕೀರ್ತಿ ಅವರದ್ದು. ಸಹ್ಯಾದ್ರಿ ಕಾಲೇಜಿನಲ್ಲಿ 27 ವರ್ಷ ಪಾಠ-ಪ್ರವಚನ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ, ಸಾವಿರಾರು ಶಿಷ್ಯಂದಿರನ್ನು ಪಡೆದಿದ್ದಾರೆ. ನಿವೃತ್ತ್ತಿ ಜೀವನವನ್ನು ಹೇಗೆ ಕಳೆಯಬೇಕೆನ್ನುವುದಕ್ಕೆ ಮಾದರಿಯಾಗಿದ್ದಾರೆ ಭಟ್ಟರು.
‘ ವಿದ್ವಾನ್ ಸರ್ವತ್ರ ಪೂಜ್ಯತೆ’ ಎಂಬ ಮಾತಿದೆ. ವಿದ್ವಾಂಸರಿಗೆ ಎಲ್ಲೆಡೆಯೂ ಪೂಜ್ಯನೀಯ ಸ್ಥಾನವಿದೆ. ಗೌರವದಿಂದ, ಆದರದಿಂದ ಅವರನ್ನು ಕಾಣಲಾಗುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ನಿನ್ನೆಯಷ್ಟೇ ನಮ್ಮನ್ನಗಲಿದ ಅಸ್ಖಲಿತ ವಾಗ್ಮಿ ವಿ.ಎನ್. ಭಟ್ ಬೆತ್ತಗೇರಿ ಅವರು.
ಭಟ್ಟರು ಬಹುದೊಡ್ಡ ವಿದ್ವಾಂಸರು. ಕನ್ನಡ ಮತ್ತು ಸಂಸ್ಕೃತ ಎರಡೂ ಭಾಷೆಗಳಲ್ಲಿ ಅಸಾಧಾರಣ ಪ್ರೌಢಿಮೆ ಹೊಂದಿದವರಾಗಿದ್ದರು. ಅವರ ಬಾಯಲ್ಲೇ ಶಬ್ದಕೋಶವಿರುತ್ತಿತ್ತು. ಯಾವುದದರೊಂದು ಶಬ್ದದ ಅರ್ಥ ಕೇಳಿದರೆ ಅದಕ್ಕೆ ಸಂಬಂಧಿಸಿ ಶ್ಲೋಕವನ್ನೇ ಹೇಳಿ ಕನ್ನಡದಲ್ಲಿ ಅರ್ಥ ವಿವರಿಸುತ್ತಿದ್ದರು. ಅಂತಹ ಒಂದು ವಿಶೇಷ ಜ್ಞಾನ ಅವರಲ್ಲಿತು. ವಿಶೇಷವಾಗಿ ವಿದ್ವಾಂಸರೆನಿಸಿಕೊಂಡವರು ಜನಸಾಮಾನ್ಯರೊಂದಿಗೆ ಅಂತರ ಕಾಯ್ದುಕೊಳ್ಳುತ್ತಾರೆ. ಆದರೆ ಭಟ್ಟರ ವಿಷಯದಲ್ಲಿ ಇದು ಸುಳ್ಳಾಗಿತ್ತು. ಏಕೆಂದರೆ ಅವರಿರುವುದೇ ಜನಸಾಮಾನ್ಯರ ಮಧ್ಯದಲ್ಲಾಗಿತ್ತು. ಅವರೊಡನೆ ಬೆರೆತು, ಸುಖ-ದುಃಖ ವಿಚಾರಿಸಿ, ಅದನ್ನು ಹಂಚಿಕೊಳ್ಳುವ ಸಹೃದಯತೆ ಅವರಲ್ಲಿತ್ತು. ಅವರೆಂದೂ ಜ್ಞಾನವನ್ನು ತಾವು ಮಾತ್ರ ಇಟ್ಟುಕೊಂಡಿರಲಿಲ್ಲ.
ಸಂಸಕ್ರತ- ಕನ್ನಡ, ಹಿಂದಿ ಈ ಮೂರೂ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಧ್ಯಯನ ಮತ್ತು ಅಧ್ಯಾಪನ ಮಾಡುತ್ತಲೇ ಅಪಾರ ಅನುಭವವನ್ನು ಕಲೆಹಾಕಿದ ಮೇಧಾವಿ ಇವರು. ಆಂಗ್ಲ ಭಾಷೆಯಲ್ಲೊಂದು ಮಾತಿದೆ ‘ಎ ವರ್ಧಿ ಲೈಫ್ ವಿತ್ ರೈಟ್ ನಾಲೆಜ್’ ಎಂದುದು. ಅಂದರೆ ಸಾರ್ಥಕ ಜೀವನ ಪ್ರಾರಂಭವಾಗುವುದು ಸರಿಯಾದ ಜ್ಞಾನದಿಂದ ಮಾತ್ರ. ಇದು ಭಟ್ಟರ ಮಟ್ಟಿಗೆ ನೂರರಷ್ಟು ಸತ್ಯವಾಗಿದೆ.
ಸಂಸ್ಕೃತ ವಿದ್ವಾಂಸರಾಗಿ, ಕನ್ನಡ ಪಂಡಿತರಾಗಿ, ಹಿಂದಿ ಪರಿಣಿತರಾಗಿ ಪ್ರಸಿದ್ಧ ಲೇಖಕರಾಗಿ, ಪ್ರಗಲ್ಭ ಪ್ರವಚನಕಾರರಾಗಿ ಆಪ್ತ ಪುರೋಹಿತರಾಗಿ, ವಧೂವರರನ್ನು ಸೇರಿಸುವ ಪುರುಷಕಾರರಾಗಿ, ನಂಬಿದವರ ಕೈ ಹಿಡಿದೆತ್ತುವ ಆಪದ್ಭಾಂಧವರಾಗಿ ಕಲಾವಿದರಾಗಿ, ಪ್ರಕಾಶಕರಾಗಿ, ಕಲಾಪ್ರೇಮಿಯಾಗಿ, ಸಂಘಟಕರಾಗಿ ಕೆಲಸ ಮಾಡಿದ್ದಾರೆ. ಸಹ್ಯಾದ್ರಿ ಕಾಲೇಜಿನಲ್ಲಿ 27 ವರ್ಷ ಪಾಠ-ಪ್ರವಚನ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ನಿವೃತ್ತಿಯಾದ ನಂತರ ಕಾಲವನ್ನು ಹೇಗೆ ಕಳೆಯಬೇಕೆಂದು ಯೋಚಿಸುವವರೇ ಜಾಸ್ತಿ ಇರುವ ಇಂದಿನ ದಿನಗಳಲ್ಲಿ ಅವರಿಗೆ ಈ ಸಮಸ್ಯೆ ಕವಿಯಲಿಲ್ಲ. ನಂತರವೂ ಲೇಖನ ಬರೆಯುವುದು, ಪ್ರವಚನ ನೀಡುವುದು, ಪೌರೋಹಿತ್ಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ನೆಮ್ಮದಿಯ ವಾಸವನ್ನು ಅನುಭವಿಸುತ್ತಿದ್ದರು.
ಭಟ್ಟರ ಮೊಗದಲ್ಲಿ ಸದಾ ಮಗುವಿನ ನಗು, ಅರಳು ಮಲ್ಲಿಗೆಯ ಮಾತು, ನಾಲಿಗೆಯಲ್ಲಿ ನೋವಿಗೆ ಹಾಯೆನ್ನುವ ಮಾರ್ದವ, ಹೃದಯದಲ್ಲಿ ಅಂಟಿಕೊಳ್ಳುವ ನಂಟು , ಮನದಲ್ಲಿ ಸಹೃದಯಿತ್ವ ಇತ್ತು. ಅವರನ್ನು ಮೊದಲ ಬಾರಿ ನಾನು ನೋಡಿದಾಗಲೇ ಇದು ನನಗನ್ನಿಸಿದ್ದು. ಸುಮಾರು 10 ವರ್ಷಗಳ ಹಿಂದೆ ಅಂದು ನಾನು ಕೆಲಸ ಮಾಡುತ್ತಿದ್ದ ಪತ್ರಿಕಾಲಯಕ್ಕೆ ಬಂದಿದ್ದ ಅವರು ನನಗೆ ಬರಬರುತ್ತ ಸಂಬಂಧಿಯಂತಾದರು. ಸರ್ವದೃಷ್ಟಿಯಿಂದಲೂ ವಂದ್ಯರೆನ್ನುವುದನ್ನು ಆಗಲೇ ಕಂಡುಕೊಂಡಿದ್ದೆ.
ಸದ್ಯ ದೂರವಾಗುತ್ತಿರುವ ಭಾರತಿಯ ಸಂಪ್ರದಾಯದ ವಿದ್ವಾಂಸರ ಪರಂಪರೆಯ ಪ್ರತಿನಿಧಿ ಅವರಾಗಿದ್ದರು. ಅವರ ಕುಟುಂಬವೇ ಪೌರೋಹಿತ್ಯದ ಕೆಲಸ ಮಾಡುತ್ತಿತ್ತು. ಅದನ್ನು ಇವರೂ ಬಿಡದೆ ಕರಗತ ಮಾಡಿಕೊಳ್ಳುತ್ತಲೇ ತಮ್ಮ ಕರ್ಮಭೂಮಿ ಶಿವಮೊಗ್ಗದಲ್ಲಿ ಸಾಗಿದ್ದರು. ಆಧುನಿಕ ಬದುಕಿನ ಧಾರೆಗೂ ಸಲ್ಲುವಂತೆ ಜ್ಞಾನಗಳಿಸಿದ ಹಿರಿಮೆ ಅವರದ್ದು. ಅವರು ಮಾದರಿಯಾಗುವ ಬದುಕು ಬಾಳಿದ, ಸದ್ಗುಣಗಳ ಅಭಿನಂದನೀಯ ವ್ಯಕ್ತಿಯಾಗಿದ್ದರು. ಆದರಣೀಯ ವಿದ್ವಾಂಸರಾಗಿದ್ದರು. ಸಮಾಜದಲ್ಲಿ ಎಲ್ಲರಿಂದ ಮನ್ನಣೆಗೆ ಪಾತ್ರರಾಗಿದ್ದರು.
ಸದಾ ಜ್ಞಾನಪಿಪಾಸುವಾಗಿದ್ದ ಅವರು ಯಾವುದಾದರೂ ಕೃತಿಯನ್ನು ಹಿದಿಡುಕೊಂಡೇ ಇರುತ್ತಿದ್ದರು. ಅವರಲ್ಲಿ ನಿಗರ್ವಿತನ, ಉದಾತ್ತತೆ, ಪರೋಪಕಾರದ ತುಡಿತ ಇರುವುದನ್ನು ಕಂಡು ಅವರಿಗೆ ತುಂಬಾ ಹತ್ತಿರನಾಗಿಬಿಟ್ಟೆ. ಸಾಂಪ್ರದಾಯಿಕವಾಗಿ ಕಲಿತುಬಂದ ವೇದವಿದ್ಯೆ, ವೇದ ಪ್ರೀತಿ, ವೇದ ಗೌರವದ ಪ್ರತೀಕವಾಗಿ ತಮ್ಮ ಹುಟ್ಟೂರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆತ್ತಗೆರೆಯಲ್ಲಿ ತಮ್ಮದೇ ಹೆಸರಿನಲ್ಲಿ ಚಾರಿಟೆಬಲ್ ಸಂಸ್ಥೆಯನ್ನು ಸ್ಥಾಪಿಸಿ ಉಚಿತ ವೇದ, ಸಂಸ್ಕೃತ ಪಾಠಶಾಲೆ ತೆರೆದಿದ್ದರು. ಮಕ್ಕಳ ಶಿಕ್ಷಣಕ್ಕೆ ಬಡತನ ಮಾರಕವಾಗಬಾರದೆನ್ನುವ ದೃಷ್ಟಿಯಿಂದ ಅಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಕಲಿಸುವ ವ್ಯವಸ್ಥೆ ಮಾಡಿದ್ದರು. ವ್ಯಕ್ತಿ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ಸಲ್ಲಿಸಬೇಕು ಎನ್ನುವ ಮಾತಿಗೆ ಅವರು ಬದ್ಧರಾಗಿದ್ದನ್ನು ಇದು ತೋರಿಸುತ್ತದೆ. ಹುಟ್ಟೂರಲ್ಲಿ ವಾರ್ಷಿಕವಾಗಿ ವಿದ್ವಾಂಸರನ್ನು ಕರೆಯಿಸಿ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಗೌರವಿಸುತ್ತಿದ್ದರು.
ಅವರೊಬ್ಬ ಅತ್ಯಪೂರ್ವ ವಾಗ್ಮಿ. ವಾಚಸ್ಪತಿ, ಅವರಿಗೆ ವಾಕ್ಸಿದ್ಧಿ ಇತ್ತು. ಮನೆ ಪ್ರವೇಶ, ಉಪನಯನ, ವಾರ್ಷಿಕ ದೇವತಾರಾಧನೆಗಳಲ್ಲಿ ಅವರಿಂದ ಉಪನ್ಯಾಸವನ್ನು ಸಾಕಷ್ಟು ಕಡೆ ಏರ್ಪಡಿಸಲಾಗುತ್ತಿತ್ತು. ಯಕ್ಷಗಾನ ಅರ್ಥಧಾರಿಯಾಗಿ, ಯಕ್ಷಗಾನ ವಿಮರ್ಶಕರಾಗಿಯೂ ಪ್ರಸಿದ್ಧರಾಗಿದ್ದರು.
ಒಟ್ಟಿನಲ್ಲಿ ಹೇಳಬೇಕೆಂದರೆ, ಅವರು ಒಂದು ಸಂಸ್ಕೃತಿಯನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಸಮಾಜಮುಖಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಖಿಲ ಭಾರತ ಹವ್ಯಕ ಮಹಾಸಭಾದ ನಿರ್ದೇಶಕರಾಗಿ, ತಮ್ಮ ಮೌಲ್ಯಯುತ ಸಲಹೆಗಳಿಂದ ಅದರ ಗೌರವವನ್ನು ಹೆಚ್ಚಿಸಿದ್ದಾರೆ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಭಟ್ಟರನ್ನು ಕಂಡರೆ ಅದೇನೋ, ಪ್ರೀತಿ. ವಿಶ್ವಾಸ. ಇತ್ತೀಚೆಗೆ ಮತ್ತೂರು ಸಮೀಪ ಸೋಮಯಾಗ ನಡೆದು ಅದು ವಿವಾದಕ್ಕೆ ತಿರುಗಿದಾಗ ನಾನು ಸೋಮಯಾಗದ ಬಗ್ಗೆ ಮಾಹಿತಿ ಪಡೆಯಲು ಅವರನ್ನು ಸಂಪರ್ಕಿಸಿದ್ದೆ. ಸುಮಾರು 10-15 ನಿಮಿಷ ಮಾತನಾಡಿದ್ದೆ. ಇದಾದ ಎರಡೇ ದಿನಕ್ಕೆ ಪತ್ರಿಕಾಗೋಷ್ಠಿ ಕರೆದು ಯಾಗದ ಬಗ್ಗೆ ಪುಸ್ತಕಗಳಲ್ಲಿರುವ ದಾಖಲೆ ಸಹಿತ ಮಾಹಿತಿ ನೀಡಿದ್ದರು. ಅಂದು ಬೆಳಿಗ್ಗೆ ಪ್ರೆಸ್ಕ್ಲಬ್ ಸಭಾಂಗಣಕ್ಕೆ ಬರಲು ಮೆಟ್ಟಿಲೇರುವ ಸಂದರ್ಭದಲ್ಲಿ ಅವರ ಕೈ ಮತ್ತು ಬ್ಯಾಗ್ ಹಿಡಿದುಕೊಂಡು ನೆರವಾಗಿದ್ದೆ. ಪತ್ರಿಕಾಗೋಷ್ಠಿಗೂ ಮುನ್ನ ಸುಮಾರು 10 ನಿಮಿಷ ನಾವಿಬ್ಬರೇ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೆವು. ಹತ್ತಾರು ಬಾರಿ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಒಮ್ಮೆಯೂ ಹೋಗಲು ಸಾಧ್ಯವಾಗಿರಲಿಲ್ಲ. ನಿನ್ನೆ ಬೆಳಿಗ್ಗೆ ಅವರು ಮೃತರಾದ ಸುದ್ದಿಯನ್ನು ತಿಳಿದು, ಮನೆಯ ವಿಳಾಸ ಪಡೆದು, ಮನೆಯಲ್ಲಿ ಅವರ ಪಾರ್ಥೀವ ಶರೀರವನ್ನು ನೋಡಿಬರುವಂತಾಯಿತಲ್ಲ ಎಂಬ ಬೇಸರ ನನ್ನನ್ನು ಸದಾ ಕಾಡುವಂತಾಯಿತು.

ಶ್ರೀ ವಿ.ಎನ್. ಭಟ್ಟರ ನಿಧನದಿಂದಾಗಿ ಶಿವಮೊಗ್ಗೆಯ ಪುರೋಹಿತ ಮತ್ತು ವಿದ್ವತ್ ವಲಯಕ್ಕೆ ನಷ್ಟವಾಗಿರುವುದು ವಾಸ್ತವ. ನೀವು ಸರಿಯಾಗಿ ಗುರುತಿಸಿರುವಂತೆ, ಅವರ ವಿಶೇಷವಿದ್ದುದು ಕನ್ನಡ ಮತ್ತು ಸಂಸ್ಕೃತದಲ್ಲಿನ ಪಾಂಡಿತ್ಯ ಮತ್ತು ಅದನ್ನು ಹಂಚುತ್ತಿದ್ದ ಪರಿ. ಏಕೆಂದರೆ ನಾನು ಅವರಲ್ಲಿ ಅನೇಕ ಮಂತ್ರಗಳಿಗೆ ಕನ್ನಡದ ವಿವರಣೆಗಳನ್ನು ನಾನು ಕೇಳದೆಯೂ ವಿವರಿಸಿದ ಅವರ ಸೌಜನ್ಯ ಮನದಿಂದ ಮರೆಯಾಗಲಾರದಂಥದು.
ReplyDelete