‘ದೇಸಿ ಫ್ರಿಜ್’ಗೆ ಮತ್ತೆ ಬಂತು ಬೇಡಿಕೆ
ಮಲೆನಾಡಿನಲ್ಲಿ ಈ ವರ್ಷ ಅಸಹನೀಯ ಬಿಸಿಲಿನ ತಾಪವನ್ನು ತಾಳಲಾರದೆ ಜನ ಸುಸ್ತ್ತಾಗಿದ್ದಾರೆ. ಸೂರ್ಯನ ಕಿರಣಗಳೆಂದರೆ ಭಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಮಧ್ಯಾಹ್ನವಾಯಿತೆಂದರೆ ಮನೆಯಿಂದ ಹೊರಬೀಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಹೆಚ್ಚುತ್ತಿರುವ ಬಾಯಾರಿಕೆ, ದಣಿವು, ನಿವಾರಿಸಿಕೊಳ್ಳಲು ಜೂಸ್ ಸೆಂಟರ್ಗಳತ್ತ ಮುಖಮಾಡುವವರು ಹೆಚ್ಚಾಗಿದ್ದಾರೆ.
ಈ ಮಧ್ಯೆ ಬಡವರ ಫ್ರಿಜ್ ಎಂದು ಹೆಸರಾಗಿರುವ ಮಣ್ಣಿನ ಮಡಕೆಗಳ ಮರಾಟ ಸಹ ನಡೆದಿದೆ. ಈ ಹಿಂದಿನ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಬೇಡಿಕೆ ಈ ಮಡಕೆಗಳಿಗೆ ಬಂದಿದೆ. ಶಿವಮೊಗ್ಗದಲ್ಲಿ ವಿದ್ಯುತ್ ಕೊರತೆ ಇಲ್ಲದಿರುವುದರಿಂದ ಹಣವಂತರು ತಮ್ಮ ಮನೆಯಲ್ಲಿರುವ ವಿವಿಧ ಕಂಪನಿಗಳ ಫ್ರಿಜ್ನ್ನು ಪಾನೀಯಗಳ ತಂಪಿಗೆ ಉಪಯೋಗಿಸುತ್ತಾರೆ. ಆದರೆ, ಕೂಲಿಕಾರ್ಮಿಕರು, ಬಡವರು ಮಾತ್ರ ವಿದ್ಯುತ್ ಬೇಡವಾದ ಈ ಫ್ರಿಜ್ನ ಖರೀದಿಯಲ್ಲಿ ಮಗ್ನರಾಗಿದ್ದಾರೆ.
ನಗರದ ಹಲವೆಡೆ ಈ ಮಡಕೆಗಳ ಮಾರಾಟ ನಡೆದಿದೆ. ಕುವೆಂಪು ರಂಗಮಂದಿರದ ಎದುರು ಫುಟ್ಪಾತ್ನಲ್ಲೇ ಹೆಚ್ಚಿನ ಪ್ರಮಾಣದ ವ್ಯವಹಾರ ನಡೆಯುತ್ತಿದೆ. ಫುಟ್ಪಾತ್ನಲ್ಲಿ ಮರದ ನೆರಳಳಲ್ಲಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಇದರ ಮಾರಾಟ ನಡೆಯುತ್ತಿದೆ. ವರ್ಷವಿಡಿ ಇಲ್ಲಿ ಮಾರಾಟ ನಡೆಯುತ್ತಿದ್ದರೂ ಈ ವರ್ಷ ಮಾತ್ರ ಇಲ್ಲಿಗೆ ಧಾವಿಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಬಿಸಿಲು ಮತ್ತು ಸೆಕೆ. ಮಡಕೆಗಳೂ ಸಹ ಈಗ ನಲ್ಲಿ ಸಹಿತ ಮಾರಾಟವಾಗುತ್ತಿವೆ. ಇದಕ್ಕೆ ಹೆಚ್ಚಿನ ದರವೂ ಇಲ್ಲ. 250-ರಿಂದ 300 ರೂವರೆಗೆ ಮಾರಾಟವಾಗುವ ಇದನ್ನು ಶ್ರೀಮಂತರೂ ಸಹ ಬಂದು ಖರೀದಿ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ಈ ಮಡಕಗೆಳು ದೇಶೀಯ ಫ್ರಿಜ್ಗಳೆಂದು ಹೆಸರಾಗಿವೆ. ಇದರಲ್ಲಿನ ನೀರು ತಂಪಾಗಲು ಕರೆಂಟ್ ಅವಶ್ಯಕತೆ ಇಲ್ಲ. ಜೊತೆಗೆ ಇದರಲ್ಲಿ ಫ್ರಿಜ್ಗಿಂತ ಆರೋಗ್ಯಕರ ನೀರು ಸಿಗುತ್ತದೆ. ಯಾವ ರೋಗವೂ ಈ ಮಡಕೆ ನೀರನ್ನು ಕುಡಿದರೆ ಬರುವುದಿಲ್ಲ. ಇತ್ತೀಚೆಗೆ ಈ ಮಡಕೆಗಳೂ ಸಹ ಕಾಲಕ್ಕೆ ತಕ್ಕಂತೆ ಸಾಕಷ್ಟು ವೈವಿಧ್ಯಮಯವಾಗಿ ತಯಾರಾಗುತ್ತಿವೆ. ಒಂದು ಕಾಲದಲ್ಲಿ ಮಡಕೆಗೆ ಹೆಸರಿತ್ತು. ಬರಬರುತ್ತ ವಿದ್ಯುತ್ ಆಧಾರಿತ ಫ್ರಿಜ್ಗಳು ಕಾಲಿಟ್ಟಿದ್ದರಿಂದ ಮಡಕೆ ಮೂಲೆಗುಂಪಾಗುವಂತಾಗಿತ್ತು. ಮಡಕೆ ಮಾಡುವ ಕುಂಬಾರ ಜನಾಂಗದವರು ಈ ವೃತ್ತಿಯನ್ನು ನಂಬಿಕೊಂಡರೆ ಉಳಿಗಾಲವಿಲ್ಲ ಎಂದರಿತು ವಿವಿಧ ವೃತ್ತಿಗಳತ್ತ ಗಮನಹರಿಸಿದರು. ಇದರಿಂದ ಕುಂಬಾರಿಕೆಯೇ ಕಣ್ಮರೆಯಾಗುವ ಆತಂಕ ಎದುರಾಗಿತ್ತು. ಆದರೆ ಈ ವರ್ಷದ ಬಿಸಿಲು ಕುಂಬಾರಿಕೆಗೆ ಮತ್ತೆ ಜೀವಕಳೆ ತಂದಿದೆ. ಇದರಿಂದ ಮಡಕೆಗಳು ಮಾರಾಟಕ್ಕೆ ಬರುತ್ತಿವೆ. ಖರೀದಿಯೂ ಸಹ ಹೆಚ್ಚುತ್ತಿದೆ. ಅಲ್ಲಲ್ಲಿ ಮನೆಗಳಲ್ಲಿ, ಅಂಗಡಿಗಳ ಎದುರು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮಡಕೆಗಳನ್ನಿಟ್ಟು ದಾರಿಹೋಕರ ಬಾಯಾರಿಕೆ ತಣಿಸುವುದು ಕಂಡುಬರುತ್ತಿದೆ.
ಇದೇನೇ ಇರಲಿ, ಮರೆತುಹೋಗುವಂತಾಗಿದ್ದ ಮಡಕೆಗೆ ಏರುತ್ತಿರುವ ತಾಪಮಾನದಿಂದ ಮತ್ತೆ ಬೆಲೆ ಬಂದಿದೆ. ‘ಹಳೆಯ ಗಂಡನ ಪಾದವೇ ಗತಿ’ ಎನ್ನುವ ಸ್ಥಿತಿ ಮುಂದಿನ ದಿನಗಳಲ್ಲಿ ಎದುರಾದರೂ ಆಶ್ಚರ್ಯವೇನ

No comments:
Post a Comment