Wednesday, 12 June 2019

ಪ್ರತಿಷ್ಠೆೆ, ಹಠ, ದ್ವೇಷ, ಜಿದ್ದು 
  ನಾಳೆ ಸರ್ಕಾರಿ ನೌಕರರ ಸಂಘದ ಚುನಾವಣೆ





 ಇದು ಸರ್ಕಾರಿ ನೌಕರರ ಸಂಘದ ಚುನಾವಣೆ ಎಂಬ ಅರಿವು ಮತದಾರರಾದ ಸದಸ್ಯರಿಗಿರಬೇಕು. ರಾಜಕೀಯ ಚುನಾವಣೆಯಂತಾಗಬಾರದು. ಆಸೆ, ಆಮಿಷಕ್ಕೆೆ ಬಲಿಯಾಗಿ ಆಯ್ಕೆೆ ಮಾಡಿದರೆ ಗೆದ್ದ ಅಭ್ಯರ್ಥಿಯು ತಪ್ಪು ಮಾಡಿದಾಗ ತಿದ್ದಿ ಬುದ್ಧಿಿ ಹೇಳುವ ನೈತಿಕತೆ, ಧೈರ್ಯ ಸದಸ್ಯರಿಗೆ ಇರುವುದಿಲ್ಲ. ಇದನ್ನು ವಿದ್ಯಾಾವಂತ, ಬುದ್ಧಿಿವಂತರಾದ ಸರ್ಕಾರಿ ನೌಕರ ಮತದಾರರು ಅರ್ಥೈಸಿಕೊಳ್ಳಬೇಕಿದೆ. ಸಂಘದ ಪ್ರತಿಷ್ಠೆೆಗಿಂತ ದ್ವೇಷ, ಹಠ, ಜಿದ್ದು ಪ್ರಧಾನವಾಗಿ ಕಂಡುಬರುತ್ತಿಿದೆ. ಈಗ ನಡೆಯುತ್ತಿಿರುವ ಚುನಾವಣೆಯಲ್ಲಿ ಸ್ಪರ್ಧಾಳುಗಳು ಒಡ್ಡುತ್ತಿಿರುವ ಆಮಿಷ, ಮೋಜು ಮಸ್ತಿಿಯ ಗೀಳಿಗೆ ಬಲಿಯಾಗದಂತೆ ಸಮರ್ಥರನ್ನು ಆಯ್ಕೆೆ ಮಾಡುವುದು ಸದಸ್ಯರ ಮುಂದಿರುವ ಗುರಿಯಾಗಿದೆ. 



ಜಿಲ್ಲೆೆಯಲ್ಲೀಗ ಸರ್ಕಾರಿ ನೌಕರರ ಸಂಘದ ಚುನಾವಣೆಯ ಜ್ವರ.  ಭಾರೀ ಪೈಪೋಟಿಯೂ ಇದರಲ್ಲಿದೆ. ಹಾಲಿ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ಮಾಜಿ  ಅಧ್ಯಕ್ಷ ರಘುರಾಮ ದೇವಾಡಿಗ ಅವರ ಎರಡು ಬಣಗಳು ಇಲ್ಲಿ ಕಾದಾಟಕ್ಕಿಿಳಿದಿವೆ. ಅದರಲ್ಲೂ ವಿಶೇಷವಾಗಿ, 22 ಸ್ಥಾಾನಗಳು ಅವಿರೋಧವಾಗಿದ್ದು, ಇವರಲ್ಲಿ ತಮ್ಮವರೇ ಜಾಸ್ತಿಿ ಎಂದು ಇಬ್ಬರೂ ಹೇಳಿಕೊಳ್ಳುತ್ತಿಿದ್ದಾಾರೆ. ಬಲಾಬಲ ಪ್ರದರ್ಶನದವರೆಗೂ ಇದು ತಲುಪಿದೆ.
   ಜೂನ್ 13ರಂದು ಮತದಾನ ಮತ್ತು ಸಂಜೆ ಫಲಿತಾಂಶ ಪ್ರಕಟಣೆ ನಡೆಯಲಿದೆ. ಒಟ್ಟೂ  68 ಸ್ಥಾಾನಗಳ ಪೈಕಿ  6 ಸ್ಥಾಾನಗಳು ತಾಲೂಕು ಅಧ್ಯಕ್ಷರದ್ದಾಾಗಿವೆ. ಉಳಿದ 62ರಲ್ಲಿ 22 ಅವಿರೋಧವಾಗಿದೆ. ಉಳಿದ 40 ಸ್ಥಾಾನಕ್ಕೆೆ (27 ಇಲಾಖೆಯಿಂದ) ಚುನಾವಣೆ ನಡೆಯಲಿದೆ. ಸುಮಾರು 110ರಷ್ಟು ಉಮೇದುವಾರರು ಕಣದಲ್ಲಿದ್ದಾಾರೆ. ಅತಿ ಹೆಚ್ಚು ಸ್ಪರ್ಧಿಗಳು ಮತ್ತು ಮತದಾರರಿರುವುದು ಶಿಕ್ಷಕರ ಕ್ಷೇತ್ರದಲ್ಲಿ.   
ಆದರೆ ಈ ಚುನಾವಣೆ ಈಗ ತುರುಸಿಗೊಳಗಾಗಿದೆ. ಇಲ್ಲಿ ಜಾತಿ ಮತ್ತು ಹಣದ ಬಲ ಸದ್ದುಮಾಡುತ್ತಿಿರುವ ಬಗ್ಗೆೆ ಮಾತು ಕೇಳಿಬರತೊಡಗಿದೆ. ಗುಂಪುಗಾರಿಕೆಯಂತೂ ಮಿತಿಮೀರಿದೆ. ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪವೂ ಇದೆ. ಹಿರಿಯರು ಯಾವ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಈ ಸಂಘ ಸ್ಥಾಾಪನೆ ಮಾಡಿದ್ದರೋ ಆ ಸಿದ್ಧಾಾಂತಗಳೆಲ್ಲ ಹೆಚ್ಚು- ಕಡಿಮೆ ಮೂಲೆಗುಂಪಾಗಿ ರಾಜಕೀಯವೇ ಇಲ್ಲಿ ಮೆರೆಯುತ್ತಿಿದೆ.
ಸಂಘದ ಪ್ರತಿಷ್ಠೆೆಗಿಂತ ದ್ವೇಷ, ಹಠ, ಜಿದ್ದು ಪ್ರಧಾನವಾಗಿ ಕಂಡುಬರುತ್ತಿಿದೆ. ಈಗ ನಡೆಯುತ್ತಿಿರುವ ಚುನಾವಣೆಯಲ್ಲಿ ಸ್ಪರ್ಧಾಳುಗಳು ಒಡ್ಡುತ್ತಿಿರುವ ಆಮಿಷ, ಮೋಜು ಮಸ್ತಿಿಯ ಗೀಳಿಗೆ ಬಲಿಯಾಗದಂತೆ ಸಮರ್ಥರನ್ನು ಆಯ್ಕೆೆ ಮಾಡುವುದು ಸದಸ್ಯರ ಮುಂದಿರುವ ಗುರಿಯಾಗಿದೆ. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಿಗಳನ್ನು ಆಯ್ಕೆೆ ಮಾಡದೆ ಸಂಘವನ್ನು ಬಲಿಷ್ಠವಾಗಿ ಕಟ್ಟುವ ಜವಾಬ್ದಾಾರಿ ಅವರದ್ದಾಾಗಬೇಕು. ಸ್ಪರ್ಧಿಗಳು ಧಾರಾಳವಾಗಿ ಖರ್ಚು ಮಾಡುವುದನ್ನು ನೋಡಿದರೆ ಇಷ್ಟೊೊಂದು ಹಣ ಹೇಗೆ ಬಂತು? ಅದನ್ನು ಮುಂದೆ ಹೇಗೆ ಸಂಪಾದಿಸುತ್ತಾಾರೆ ಎಂಬುದೇ ಒಂದು ಯಕ್ಷಪ್ರಶ್ನೆೆಯಾಗಿ ಕಾಡುತ್ತಿಿದೆ.
ಎಲ್ಲಾಾ ಅಭ್ಯರ್ಥಿಗಳ ಹಿನ್ನೆೆಲೆ, ಇಲ್ಲಿಯವರೆಗಿನ ಸಂಘಟನಾ ಕಾರ್ಯಚಟುವಟಿಕೆಗಳಲ್ಲಿ ಅವರ ಸಕ್ರಿಿಯ ಪಾಲ್ಗೊೊಳ್ಳುವಿಕೆ, ಪ್ರಾಾಮಾಣಿಕತೆ, ಕರ್ತವ್ಯ ನಿಷ್ಠೆೆ, ಸಮಾಜಮುಖಿ ಕಾಳಜಿ, ಸಂಘಟನಾ ಚಟುವಟಿಕೆಗಳಲ್ಲಿ ಅವರ ಪಾತ್ರ ಇವೆಲ್ಲವನ್ನೂ ಗಮನಿಸಿ ಮತದಾರರು ಆಯ್ಕೆೆಮಾಡಬೇಕಿದೆ. ಹೀಗಾದಲ್ಲಿ ಮಾತ್ರ ಸಂಘಕ್ಕೆೆ ಉತ್ತಮ ನಿರ್ದೇಶಕರು ಸಿಗಬಹುದು. ಜೊತೆಗೆ ಆರ್ಥಿಕ ಸಹಕಾರ, ಸಿಬ್ಬಂದಿಗಳ ನಡುವಿನ ಸಾಮರಸ್ಯ ಬೆಳೆಸುವಲ್ಲಿ ಅವರು ಕೊಡುಗೆ ನೀಡಬಹುದು. ಸಿಬ್ಬಂದಿಗಳ ಸಮಸ್ಯೆೆಗಳನ್ನು ಬಗೆಹರಿಸುವಲ್ಲಿ ಅವರ ಸಾಮರ್ಥ್ಯ, ತಮ್ಮ ಕೇಡರನ್ನೂ ಮೀರಿ ನಿಲ್ಲಬಲ್ಲ ಹೃದಯ ವೈಶಾಲ್ಯತೆ, ದೃಷ್ಟಿಿಕೋನ , ದಿಢೀರ್ ಎದುರಾಗುವ ಸೂಕ್ಷ್ಮ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವ ಎದೆಗಾರಿಕೆಯನ್ನೂ ಇಲ್ಲಿ ಗಮನಿಸಿ ಗೆಲ್ಲಿಸಬೇಕಿದೆ.
ಹೊಸದಾಗಿ ಕಣಕ್ಕಿಿಳಿದಿರುವವರಲ್ಲಿ ಇರುವ ಕೆಲಸದ ಸಾಮರ್ಥ್ಯ, ಅವರ ಒಳ್ಳೆೆಯತನ, ಸಂಘವನ್ನು ಬೆಳೆಸಬಲ್ಲ ಶಕ್ತಿಿ, ಸಂಘಟನಾ ಚಾತುರ‌್ಯ ಗಮನಿಸಿ ಮತದಾರರು ಆಯ್ಕೆೆಮಾಡಬೇಕು. ಈ ಹಿಂದಿನವರೇ ಮತ್ತೆೆ ಅಭ್ಯರ್ಥಿಯಾಗಿದ್ದಲ್ಲಿ  ಹಿಂದೆ ಗೆದ್ದಾಾಗ ಏನು ಮಾಡಿದ್ದಾಾರೆ, ಮುಂದೆ ಗೆದ್ದು ಏನು ಮಾಡಲಿದ್ದಾಾರೆ, ಆಯ್ಕೆೆಯಾಗುವವರು ಸಂಘಕ್ಕೆೆ ಹೆಚ್ಚಿಿನದೇನನ್ನು ಮಾಡಬಲ್ಲರು ಎನ್ನುವುದನ್ನೂ ಗಮನಿಸಿ ಆಯ್ಕೆೆಮಾಡುವುದು ಉತ್ತಮ.
 ನಡವಳಿಕೆ, ಸಾಮರ್ಥ್ಯ ಮತ್ತು ಅರ್ಹತೆ ಒಬ್ಬ ಪ್ರತಿನಿಧಿ ಆಗುವವನಲ್ಲಿ ಮುಖ್ಯವಾಗಿರಬೇಕು. ಇವುಗಳನ್ನೆೆಲ್ಲಾಾ ಕೂಲಂಕಷವಾಗಿ ಗಮನಿಸಿ ಸೂಜಿದಾರದಂತೆ ಕೆಲಸ ಮಾಡುವವರನ್ನು ಬೆಂಬಲಿಸಿ, ಕತ್ತರಿ ಕೆಲಸ ಮಾಡುವವರನ್ನು ದೂರವಿಟ್ಟು ಎಲ್ಲಾಾ ಇಲಾಖೆಯವರು ಸಮರ್ಥರನ್ನಷ್ಟೇ ಆಯ್ಕೆೆ ಮಾಡಿದರೆ ಮಾತ್ರ ಸಂಘ ಇನ್ನಷ್ಟು ಪ್ರವರ್ಧಮಾನಕ್ಕೆೆ ಬರಲು ಸಾಧ್ಯ. ಹುದ್ದೆೆ, ವೃಂದ, ಸಂಸ್ಥೆೆ, ಜಾತಿ, ಧರ್ಮವನ್ನು ಮೀರಿದ ವಿಶಾಲ ಮನೋಭಾವ ಮತ್ತು ಪ್ರಬುದ್ಧತೆ ಮೀರಿ ನೌಕರರು ಮತ ಚಲಾಯಿಸುವ ಕೆಲಸವನ್ನು ಮೊದಲು ಮಾಡಬೇಕಿದೆ. ಸಂಘಕ್ಕೆೆ ಸಮರ್ಥ ವ್ಯಕ್ತಿಿಗಳನ್ನು ಚುನಾಯಿಸಿದರೆ ಮಾತ್ರ  ಸಂಘದ ಪ್ರತಿಷ್ಠೆೆಯೂ ಹೆಚ್ಚಲಿದೆ.

published on 12.6.19
.................................................
ಜ್ಞಾಾನ ಪ್ರಸಾರದಲ್ಲಿ ಶಿಕ್ಷಕರೆಷ್ಟು ಅಪ್‌ಡೇಟ್ ಆಗಿದ್ದಾಾರೆ?

ಎಲ್ಲಾಾ ಕ್ಷೇತ್ರಗಳೂ ಇಂದು ಅಪ್‌ಡೇಟ್ ಆಗುತ್ತಿಿವೆ. ಆದರೆ ಶಿಕ್ಷಕರು ಮಾತ್ರ ಈ ವಿಷಯದಲ್ಲಿ ಹಿಂದುಳಿದಿರುವುದು ಏಕೆ ಎಂಬ ಪ್ರಶ್ನೆೆ ಇದೆ. ನಿಜಕ್ಕೂ ಎಲ್ಲರಿಗಿಂತ ಮೊದಲೇ ಶಿಕ್ಷಕರು ಅಪ್‌ಡೇಟ್ ಆಗಬೇಕಿತ್ತು. ಈಗ ಇದರ ಅನಿವಾರ‌್ಯತೆ ಎದುರಾಗಿದೆ. ಸರ್ಕಾರವು ಈ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಲ್ಲಿ ಸ್ವಲ್ಪ ಕಠೋರವೆನಿಸುವ ನಿರ್ಧಾರ ಅಂದರೆ ಬಡ್ತಿಿಗೆ ತಡೆ, ವೇತನ ಕಟ್ ಮೊದಲಾದ ಕ್ರಮ ಜರುಗಿಸಬೇಕಿತ್ತು. ವಿದ್ಯಾಾರ್ಥಿಗಳ ಒಳ್ಳೆೆಯದಕ್ಕಾಾಗಿ ಶಿಕ್ಷಕರು ಗುಣಾತ್ಮಕವಾಗಿ ಪಾಠ ಮಾಡುವುದನ್ನು ಕಲಿಯಲೇಬೇಕಿದೆ. 





‘ಹಳೆಯ ಕೋಟು ತೊಡು, ಹೊಸ ಪುಸ್ತಕ ಓದು’ ಎನ್ನುವುದು ಜ್ಞಾಾನದ ಮಹತ್ತನ್ನು ಸಾರುವ ಒಂದು ನುಡಿಗಟ್ಟು. ಹೌದು, ನಾವು ತೊಡುವ ಬಟ್ಟೆೆ ಹಳೆಯದಾದರೂ ಪರವಾಗಿಲ್ಲ, ಸದಾ ಹೊಸಹೊಸ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು, ತನ್ಮೂಲಕ ನಮ್ಮ ಜ್ಞಾಾನವನ್ನು ಹೆಚ್ಚಿಿಸಿಕೊಳ್ಳಬೇಕು ಎನ್ನುವುದು ಈ ಮಾತಿನ ಅರ್ಥ. ‘ದೇಶ ಸುತ್ತು, ಕೋಶ ಓದು’ ಇದೇ ಅರ್ಥವನ್ನು ಧ್ವನಿಸುವ ಮತ್ತೊೊಂದು ನುಡಿಗಟ್ಟು. ಜ್ಞಾಾನವೆಂದರೆ ನಿಂತ ನೀರಲ್ಲ. ನಿತ್ಯನಿರಂತರವಾಗಿ ಹರಿಯುತ್ತಿಿರಬೇಕಾದಂತಹುದು. ನಿಂತ ನೀರು ರಾಡಿಯಾಗುತ್ತದೆ; ಬಗ್ಗಡವಾಗುತ್ತದೆ; ಕ್ರಿಿಮಿಕೀಟಗಳು ಹುಟ್ಟಿಿಕೊಳ್ಳುತ್ತವೆ; ರೋಗರುಜಿನಗಳ ಆಗರವಾಗುತ್ತದೆ. ಹರಿಯುತ್ತಿಿರುವ ನೀರು ಹಾಗಲ್ಲ. ಹಳೆ ನೀರು ಕೊಚ್ಚಿಿ ಹೋಗುತ್ತದೆ; ಹೊಸ ನೀರು ಹರಿದು ಬರುತ್ತದೆ. ಜ್ಞಾಾನದ ಗುಣವೂ ಇದುವೇ. 
  ಜಗತ್ತಿಿನಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳಲು, ಹೇಗೆ ಬದುಕಬೇಕು ಎಂದು ತಿಳಿದುಕೊಳ್ಳಲು ಜ್ಞಾಾನ ಬೇಕು. ಜ್ಞಾಾನ ಎಂಬುದು ಸಮುದ್ರವಿದ್ದಂತೆ. ಶಿಕ್ಷಣ ಎಂಬ ಸಮುದ್ರದಲ್ಲಿ ಜ್ಞಾಾನವೆನ್ನುವುದು ಒಂದು ಅರಿವಿನ ದಾರಿ. ದುರದೃಷ್ಟವಶಾತ್, ಇಂದು ಜ್ಞಾಾನ ಎನ್ನುವುದು ಕಳೆದುಹೋಗಿದೆ. ಇದಕ್ಕೆೆ ಯಾರೊಬ್ಬರೇ ಕಾರಣರಲ್ಲ, ನಮ್ಮನ್ನಾಾಳುವ ಸರ್ಕಾರ, ಕಲಿಸುವ ಶಿಕ್ಷಕರು, ಪಾಲಕರು ಎಲ್ಲರೂ ಕಾರಣ.
ಮಗುವಿನ ಜ್ಞಾಾನ ಹೆಚ್ಚಿಿಸುವ ಕೌಶಲ್ಯ ಇಂದಿನ ಪಠ್ಯದಲ್ಲಿರುವುದಿಲ್ಲ. ಸರ್ಕಾರಗಳು ಬದಲಾದ ಹಾಗೆ  ಶಿಕ್ಷಣ ನೀತಿಯೂ, ಪಠ್ಯಪುಸ್ತಕ ರಚನೆಯೂ ಬದಲಾಗುತ್ತಿಿದೆ. ಮಕ್ಕಳ ವಯಸ್ಸನ್ನು ಗಮನಿಸಿ, ಅವರಿಗೆ ಗ್ರಹಿಸಲು ಅನುಕೂಲವಾಗುವ ಪಠ್ಯವನ್ನು ಜಾರಿಗೊಳಿಸಬೇಕು. ಆದರೆ ಹಾಗಾಗುತ್ತಿಿಲ್ಲ. ಮಕ್ಕಳ ಸ್ಕೂಲ್ ಬ್ಯಾಾಗ್ ಭಾರವನ್ನು ಇಳಿಸಲು ಹೊರಟಿರುವ ಸರಕಾರ, ಅದೇ ಮಕ್ಕಳಿಗೆ ಹೋಮ್ ವರ್ಕ್ ಕೊಡಬೇಡಿ ಎಂಬ ಸೂಚನೆಯನ್ನೂ ಶಾಲೆಗಳಿಗೆ ನೀಡಲು ಮುಂದಾಗಿದೆ. ಹಾಗಾದರೆ ಮಕ್ಕಳು ಮನೆಯಲ್ಲಿ ಆಟವಾಡಬೇಕೇ, ಶಾಲೆಯಲ್ಲಿ ಮಾತ್ರ ಓದಿದರೆ ಸಾಕೇ ಎಂಬ ಪ್ರಶ್ನೆೆಗೆ ಉತ್ತರವಿಲ್ಲ. ಮಕ್ಕಳಿಗೆ ಕಲಿಯಲು, ಶಿಕ್ಷಕರಿಗೆ ಕಲಿಸಲು ಮತ್ತು ವಿದ್ಯಾಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉಪಯುಕ್ತವೆನಿಸುವ ಯೋಜನೆಗಳನ್ನು ಮೊದಲು ಜಾರಿಗೊಳಿಸಬೇಕಿದೆ. ಇನ್ನು ಪಠ್ಯದಲ್ಲಿ ಬಹುಕಾಲ ಮೆದುಳಿನಲ್ಲಿ ನಿಲ್ಲುವ, ಜೀವನಕ್ಕೆೆ ಉಪಯುಕ್ತವಾಗುವ ಸಂಗತಿಗಳನ್ನು ಪಠ್ಯದಲ್ಲಿ ತರುವ ಕೆಲಸವಾಗಬೇಕು.
 ಇಂದು ಏನಿದ್ದರೂ ಅಂಕಗಳನ್ನು ಬೇಟೆಯಾಡುವ ಕಾಲ. ಜ್ಞಾಾನದ ಮಹತ್ವಕ್ಕೆೆ ಬೆಲೆಯೇ ಇಲ್ಲ. ಮಗು ಹೆಚ್ಚೆೆಚ್ಚು ಅಂಕಗಳಿಸಬೇಕೆನ್ನುವುದಷ್ಟೇ ಪಾಲಕರ ಉದ್ದೇಶ. ಇದಕ್ಕಾಾಗಿ ಪಾಲಕರು ಎಷ್ಟು ಬೇಕಾದರೂ ಖರ್ಚು ಮಾಡುವ ಸ್ಥಿಿತಿಗೆ ತಲುಪಿದ್ದಾಾರೆ. ಮಗುವಿಗೆ ಒತ್ತಡ ಹೇರಿ, ಬಾಯಿಪಾಠ ಮಾಡಿಸಿಯಾದರೂ ಹೆಚ್ಚು ಅಂಕ ಬರುವಂತೆ ನೋಡಿಕೊಳ್ಳುತ್ತಾಾರೆಯೇ ವಿನಾ ಮಗುವಿನ ಗ್ರಹಿಕೆಯ ಮತ್ತು ಕಲಿಕೆಯ ಸಾಮರ್ಥ್ಯವನ್ನು ಗಮನಿಸುತ್ತಿಿಲ್ಲ. ಅರ್ಥ ಮಾಡಿಕೊಳ್ಳದೆ  ಕೇವಲ ಬಾಯಿಪಾಠ ಮಾಡಿ ಕಲಿತರೆ ಅದು ಬಹುಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಮಕ್ಕಳಲ್ಲಿ ಓದಿನ ವಿಧಾನವನ್ನು ಬೆಳೆಸುವ, ದಿನನಿತ್ಯದ ಪಾಠವನ್ನು ಅಂದೇ ಮರುಅಧ್ಯಯನ ಮಾಡುವ ಕ್ರಮಕ್ಕೆೆ ಒತ್ತು ಕೊಡಬೇಕು. ಆಗ ಮಾತ್ರ ಜ್ಞಾಾನದ ಮಟ್ಟ ಹೆಚ್ಚಲು ಸಾಧ್ಯ. 
ಎಲ್ಲಕ್ಕಿಿಂತ ಹೆಚ್ಚಿಿನ ಹೊಣೆ ಮಕ್ಕಳನ್ನು ತಿದ್ದಿ-ತೀಡಿ ಅವರ ಭವಿಷ್ಯವನ್ನು ರೂಪಿಬೇಕಾದ ಶಿಕ್ಷಕರ ಹೆಗಲ ಮೇಲಿದೆ. ಆದರೆ ಶಿಕ್ಷಕರ ವಿಷಯದಲ್ಲಿ ಮೂಗುಮುರಿಯುವವರೇ ಜಾಸ್ತಿಿ. ಏಕೆಂದರೆ, ಬಹುತೇಕ ಶಿಕ್ಷಕರು ಅಪ್‌ಡೇಟ್ ಆಗದೇ ಇರುವುದು. ಇಂದು ಪ್ರತಿಕ್ಷೇತ್ರದಲ್ಲೂ ಹೊಸತನಕ್ಕೆೆ ಆದ್ಯತೆ. ಕೇಶವಿನ್ಯಾಾಸ, ಆಭರಣ, ಬಟ್ಟೆೆ,  ಕೃಷಿ, ವಿಜ್ಞಾಾನ ಯಾವುದೇ ಕ್ಷೇತ್ರ ತೆಗೆದುಕೊಳ್ಳಿಿ-ಹೊಸತನಕ್ಕೆೆ ನಮ್ಮನ್ನು ತೆರೆದುಕೊಳ್ಳದಿದ್ದರೆ ಅಂತಹವರಿಗೆ ಉಳಿಗಾಲವಿಲ್ಲ. ಅದನ್ನು ಸಂಬಂಧಿತರು ಎಷ್ಟೇ ಕಷ್ಟವಾದರೂ ಅಳವಡಿಸಿಕೊಳ್ಳಲೇಬೇಕಿದೆ. ಏಕೆಂದರೆ, ಇದು ತಂತ್ರಜ್ಞಾಾನದ, ಬದಲಾವಣೆಯ ಯುಗ.
ಆದರೆ ಶಿಕ್ಷಕರ ವಿಷಯದಲ್ಲಿ ಹೊಸತನಕ್ಕೆೆ ಅಂಟಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ ಎನಿಸುತ್ತಿಿದೆ. ಹಾಗೆಂದು ಎಲ್ಲಾಾ ಶಿಕ್ಷಕರು ಅಪ್‌ಡೇಟ್ ಆಗಿಲ್ಲ ಎಂದರ್ಥವಲ್ಲ. ಶಿಕ್ಷಕರು ಓದುವುದಿಲ್ಲ, ಬೋಧನೆಯ ಹೊಸವಿಧಾನಗಳನ್ನು ಕಲಿಯುವ ಬಗ್ಗೆೆ ಮನಸ್ಸು ಮಾಡುತ್ತಿಿಲ್ಲ. ಪಾಠವನ್ನು ತರಗತಿಯಲ್ಲಿ ಮಾಡುತ್ತಾಾರೆಯೇ ವಿನಾ ಅದಕ್ಕೆೆ ಬೇಕಾದ ಪೂರ್ವತಯಾರಿ ಇರುವುದಿಲ್ಲ. ಎಷ್ಟೋೋ ಶಿಕ್ಷಕರಿಗೆ ಕಂಪ್ಯೂಟರ್ ಆನ್ ಮಾಡಲು ಬರುವುದಿಲ್ಲ, ಇಂಟರ್‌ನೆಟ್, ಇ-ಮೇಲ್, ಗೂಗಲ್ ಬಳಕೆ ಬಗ್ಗೆೆ ಗೊತ್ತಿಿಲ್ಲ. ದಿನಪತ್ರಿಿಕೆಯನ್ನೇ ಓದದ ಶಿಕ್ಷಕರೂ ಸಾಕಷ್ಟಿಿದ್ದಾಾರೆ. ಹೊರಜಗತ್ತಿಿನ ಮಾಹಿತಿಯೇ ಇಲ್ಲದ ಮೇಲೆ ಇಂತಹ ಶಿಕ್ಷಕರಿಂದ ಪರಿಣಾಮಕಾರಿಯಾಗಿ ಕಲಿಸಲು ಎಷ್ಟರ ಮಟ್ಟಿಿಗೆ ಸಾಧ್ಯ?
ಎಲ್ಲಾಾ ಕ್ಷೇತ್ರಗಳೂ ಇಂದು ಅಪ್‌ಡೇಟ್ ಆಗುತ್ತಿಿವೆ. ಆದರೆ ಶಿಕ್ಷಕರು ಮಾತ್ರ ಈ ವಿಷಯದಲ್ಲಿ ಹಿಂದುಳಿದಿರುವುದು ಏಕೆ ಎಂಬ ಪ್ರಶ್ನೆೆ ಇದೆ. ನಿಜಕ್ಕೂ ಎಲ್ಲರಿಗಿಂತ ಮೊದಲೇ ಶಿಕ್ಷಕರು ಅಪ್‌ಡೇಟ್ ಆಗಬೇಕಿತ್ತು. ಈಗ ಇದರ ಅನಿವಾರ‌್ಯತೆ ಎದುರಾಗಿದೆ. ಸರ್ಕಾರವು ಈ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಲ್ಲಿ ಸ್ವಲ್ಪ ಕಠೋರವೆನಿಸುವ ನಿರ್ಧಾರ ಅಂದರೆ ಬಡ್ತಿಿಗೆ ತಡೆ, ವೇತನ ಕಟ್ ಮೊದಲಾದ ಕ್ರಮ ಜರುಗಿಸಬೇಕಿತ್ತು. ವಿದ್ಯಾಾರ್ಥಿಗಳ ಒಳ್ಳೆೆಯದಕ್ಕಾಾಗಿ ಶಿಕ್ಷಕರು ಗುಣಾತ್ಮಕವಾಗಿ ಪಾಠ ಮಾಡುವುದನ್ನು ಕಲಿಯಲೇಬೇಕಿದೆ.
ಶಿಕ್ಷಕರಾಗಿ ನೇಮಕವಾದ ನಂತರ ಅವರು ವರ್ಷಕ್ಕೊೊಮ್ಮೆೆ ಪರೀಕ್ಷೆ ಎದುರಿಸುವ ಕ್ರಮ ಜಾರಿಯಾಗಬೇಕು. ಅವರ ಗುಣಮಟ್ಟ ಹೇಗಿದೆ ಎನ್ನುವ ಪರೀಕ್ಷೆಯಾಗಬೇಕು. ಎಷ್ಟೋೋ ಶಿಕ್ಷಕರು ನೇಮಕವಾದ ನಂತರ ವಿಶ್ರಾಾಂತಿಗೆ ಜಾರಿದವರಂತಾಗುತ್ತಾಾರೆ, ಕ್ರಿಿಯಾಶೀಲತೆ ಇಲ್ಲದವರಾಗುತ್ತಾಾರೆ ಎಂಬ ಆರೋಪವಿದೆ. ಹೊಸ ಹೊಸ ಸವಾಲುಗಳನ್ನು ಅವರ ಮುಂದಿಟ್ಟು, ಅದನ್ನು ಜಾರಿಗೊಳಿಸುವ ಗುರಿ ಕೊಡಬೇಕು. ಇದರಿಂದ ಅವರಲ್ಲೂ ಉತ್ಸಾಾಹ ಮೂಡುತ್ತದೆ. ಅವರಿಂದಲೇ ಸಮಸ್ಯೆೆಗೆ ಪರಿಹಾರ ದೊರೆಯುವಂತೆ ಮಾಡಬೇಕು. ಶಿಕ್ಷಕ ಹುದ್ದೆೆ ನಿಜಕ್ಕೂ ಸಮಾಜ ತನ್ನಿಿಂದ ಏನನ್ನು ಬಯಸುತ್ತದೆಯೋ ಅದನ್ನು ಮೀರಿ ನೀಡುವಂತಹುದು. ಇದನ್ನು ಇಂದಿಗೂ ನಿಭಾಯಿಸುವ ಶಿಕ್ಷಕರಿಲ್ಲವೆಂದಲ್ಲ; ಆದರೆ ಇಲ್ಲದಿರುವವರ ಸಂಖ್ಯೆೆಯೇ ಅಧಿಕ.
ಹೊಸ ಪುಸ್ತಕ ಓದುವ, ಇತರೆ ಮೂಲಗಳಿಂದ ವಿಷಯ ಸಂಗ್ರಹಿಸುವ ಮತ್ತು ಜ್ಞಾಾನವೃದ್ಧಿಿಯ ದಾರಿ ಅನ್ವೇಷಿಸುವ ಮನೋಭಾವ ಶಿಕ್ಷಕರಲ್ಲಿರಬೇಕು. ಇತ್ತೀಚೆಗೆ ನೇಮಕವಾದ ಶಿಕ್ಷಕರಲ್ಲಿ ಈ ರೀತಿಯ ಹುರುಪು ಹೆಚ್ಚಿಿನ ಪ್ರಮಾಣದಲ್ಲಿದೆ. ಎಲ್ಲಿಯವರೆಗೆ ಶಿಕ್ಷಕರಲ್ಲಿ ಹೊಸತನ ಮತ್ತು ಜ್ಞಾಾನದ ಹಸಿವು ಇರುವುದಿಲ್ಲವೋ ಅಲ್ಲಿಯವರೆಗೆ ಅವರೆಷ್ಟೇ ಮಕ್ಕಳಿಗೆ ಕಲಿಸಿದರೂ ಅಂತಹ ಮಕ್ಕಳು ಬುದ್ಧಿಿವಂತರಾಗಲು ಸಾಧ್ಯವಿಲ್ಲ. ಆದ್ದರಿಂದ ಈ ದಿಸೆಯಲ್ಲೂ ಶಿಕ್ಷಕರು ಎಚ್ಚೆೆತ್ತುಕೊಳ್ಳಬೇಕಿದೆ.
ಶಾಲೆಗಳು ಆರಂಭವಾಗಿ ಹತ್ತು ದಿನಗಳಾಗಿದೆ. ಪಾಠಗಳೂ ಆರಂಭವಾಗಿವೆ. ಈ ವರ್ಷದಿಂದಲಾದರೂ ಅಪ್‌ಡೇಟ್ ಆಗಿರುವಂತೆ ಸರ್ಕಾರ ಶಿಕ್ಷಕರಿಗೆ ಸೂಚಿಸಿ, ಹೊಸತನದ ಕಲಿಕೆ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವಂತಾದರೆ ನಿಜಕ್ಕೂ ಹೊಸತನದ ಮಕ್ಕಳೇ ನಿರ್ಮಾಾಣವಾಗುವುದರಲ್ಲಿ ಸಂಶಯವೇ ಇಲ್ಲ.

published on 11.6.19
................................................................ 

Friday, 7 June 2019

ಬನ್ನಿಿ ಮಾವು, ಹಲಸು ಮೇಳಕ್ಕೆೆ








 ಇಂದಿನಿಂದ ಮೂರು ದಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು, ಹಲಸು, ಜೇನು ಮೇಳ ಆಯೋಜನೆಗೊಂಡಿದೆ. ಜಿಲ್ಲೆೆಯ ರೈತರಿಗೆ ಮಾವು, ಹಲಸು, ಜೇನು ಮತ್ತು ಸಾವಯವ ಪದಾರ್ಥಗಳ ವಿವಿಧ ಬಗೆಯ ತಳಿಗಳು ಹಾಗೂ ಉತ್ಪನ್ನಗಳನ್ನು ಪರಿಚಯಿಸಲು ತೋಟಗಾರಿಕೆ ಇಲಾಖೆಯು  ಈ ಮೇಳವನ್ನು ಹಮ್ಮಿಿಕೊಂಡಿದೆ. ವಿವಿಧ ತಳಿಗಳನ್ನು ಪರಿಚಯಿಸುವುದರ ಮೂಲಕ, ಮಾರುಕಟ್ಟೆೆ ಕಲ್ಪಿಿಸುವುದು, ಮತ್ತು ರೈತರಲ್ಲಿ ಈ ಬೆಳೆ ಬೆಳೆಯಲು ಆಸಕ್ತಿಿ ಮೂಡಿಸುವುದು ಮೇಳದ ಮುಖ್ಯ ಉದ್ದೇಶ. 



ಈಗ ಮಾವಿನ ಮತ್ತು ಹಲಸಿನ ಹಣ್ಣಿಿನ ಸೀಜನ್. ಯಾವ ಹಳ್ಳಿಿಗೆ ಕಾಲಿಟ್ಟರೂ ಮಾವು, ಹಲಸಿನ ಸುವಾಸನೆ ಗಮನಸೆಳೆಯುತ್ತದೆ, ಬಾಯಲ್ಲಿ ನೀರೂರಿಸುತ್ತದೆ. ಇನ್ನು ಪೇಟೆಯಲ್ಲಿ ಮಾರುಕಟ್ಟೆೆಯಲ್ಲಂತೂ ಎಲ್ಲರ ಚಿತ್ತ ಹರಿಯುವುದೇ ರಸ್ತೆೆ ಬದಿಯಲ್ಲಿ ಹಾಕಿಕೊಂಡು ಮಾರಾಟ ಮಾಡುವ ಮಾವು ಮತ್ತು ಹಲಸಿನ ಹಣ್ಣಿಿನ ಮೇಲೆ. ಈ ಎರಡೂ ಹಣ್ಣುಗಳು ಒಂದೇ ಋತುಮಾನದಲ್ಲಾಾಗುವ ಮೂಲಕ ಹಣ್ಣುಪ್ರಿಿಯರಿಗೆ, ಅದರಲ್ಲೂ ಬೇಸಿಗೆ ಕಾಲದಲ್ಲಿ ಹೆಚ್ಚು ಇಷ್ಟವಾಗುವಂತಾಗಿದೆ.
ರಾಜ್ಯದ ಹಲವೆಡೆ ಮಾವು ಮತ್ತು ಹಲಸನ್ನು ನೈಸರ್ಗಿಕವಾಗಿ ಹಣ್ಣು ಮಾಡಿ ಮಾರಾಟ ಮಾಡಲಾಗುತ್ತಿಿದೆ. ಏಕೆಂದರೆ, ಮಾರುಕಟ್ಟೆೆಯಲ್ಲಿ ರಾಸಾಯನಿಕ (ಕ್ಯಾಾಲ್ಸಿಿಯಂ ಕಾರ್ಬೈಡ್) ಮೂಲಕ ಹಣ್ಣಾಾಗಿಸಿ ಜನರಿಗೆ ಮಾರಾಟ ಮಾಡಲಾಗುತ್ತಿಿದೆ. ಈ ಹಣ್ಣುಗಳು ವಿಷಕಾರಿ. ಆದರೂ ಜನರು ಗೊತ್ತಿಿದ್ದೋೋ, ಗೊತ್ತಿಿಲ್ಲದೆಯೋ ಖರೀದಿಸಿ ತಿನ್ನುತ್ತಿಿದ್ದಾಾರೆ. ಇವು ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರುವಂತಹವು ಎನ್ನುವುದೂ ಅಷ್ಟೇ ಕಟು ಸತ್ಯ.
ಜನರಿಗೆ ಇಂತಹ ರಾಸಾಯನಿಕ ಹಣ್ಣು ಕೊಡುವುದಕ್ಕಿಿಂತ ನೈಸರ್ಗಿಕವಾದ ಹಣ್ಣನ್ನು ಮಾರಾಟ ಮಾಡಲು ತೋಟಗಾರಿಕಾ ಇಲಾಖೆಯ ಅಂಗ ಸಂಸ್ಥೆೆಯಾದ  ರಾಜ್ಯ ಮಾವು ಅಭಿವೃದ್ಧಿಿ ಮತ್ತು ಮಾರಾಟ ಮಂಡಳಿ ಈ ವರ್ಷವೂ ಮುಂದಾಗಿದೆ. ಮಾವು ಮತ್ತು ಹಲಸಿನ ಮೇಳ ಏರ್ಪಡಿಸುವ ಮೂಲಕ ಜನರ ಬಳಿಯೇ ಹೋಗಿ ಪರಿಶುದ್ಧ ಮಾವು ಕೊಡುತ್ತಿಿದೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ವಿವಿಧ ತಳಿಯ ಮಾವು ಇಲ್ಲಿ ಲಭ್ಯವಿರುತ್ತವೆ.
 ಈಗಾಗಲೇ ರಾಜ್ಯದ ಹಲವೆಡೆ ಈ ಮಂಡಳಿ ಮಾವಿನ ಮೇಳ ನಡೆಸಿ ಯಶಸ್ಸನ್ನು ಕಂಡಿದೆ. ಈಗ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಈ ಮೇಳ ಇಂದಿನಿಂದ ಮೂರು ದಿನ ನಡೆಯಲಿದೆ. ಇಂದು ಸಂಜೆ ಇದು ಉದ್ಘಾಾಟನೆಯಾದ ಬಳಿಕ ಶನಿವಾರ ಮತ್ತು ಭಾನುವಾರದವರೆಗೆ ಮಾರಾಟ ನಡೆಯಲಿದೆ. ಜಿಲ್ಲೆೆಯ ಜನರಿಗೆ ಅತ್ಯುತ್ತಮ ಮಾವಿನ ಹಣ್ಣು, ಹಲಸು ಖರೀದಿಗೆ ಇದು ಸಕಾಲ. ಜಿಲ್ಲೆೆಯ ಮಾವು ಬೆಳೆಗಾರರು ಸ್ಥಳೀಯವಾಗಿ ಬೆಳೆದ ವಿವಿಧ ತಳಿಗಳನ್ನು ಹಾಗೂ ರಾಜ್ಯದಲ್ಲಿ ಮಾವು ಬೆಳೆಯುವ ಇತರ ಪ್ರಮುಖ ಜಿಲ್ಲೆೆಗಳಾದ ರಾಮನಗರ, ಚಿಕ್ಕಬಳ್ಳಾಾಪುರ  ಮತ್ತು ಕೋಲಾರ ಮೊದಲಾದ ಕಡೆಗಳಿಂದ ಸುಮಾರು 18 ರಿಂದ 20 ತಳಿಯ ಮಾವನ್ನು ಇಲ್ಲಿ ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು. ಸ್ಥಳೀಯ ರೈತರು ಬೆಳೆದ ಹಣ್ಣುಗಳನ್ನು ವಿವಿಧ ಮಳಿಗೆಗಳಲ್ಲಿ ಮತ್ತು ಇತರ ಜಿಲ್ಲೆೆಯ ರೈತರ ಹಣ್ಣುಗಳನ್ನು ಸುಮಾರು 15 ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು.
ಜಿಲ್ಲೆೆಯ ರೈತರು ಹೊಸ ತಳಿಗಳನ್ನು ಪರಿಚಯಿಸುವುದರೊಂದಿಗೆ  ಮಾವು ಮೇಳದಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬೆಳೆಯಬಹುದಾದ ವಿವಿಧ ತಳಿಗಳು, ಹೈಬ್ರಿಿಡ್‌ಗಳನ್ನು ಪ್ರದರ್ಶನಕ್ಕಿಿಡಲಾಗುವುದು. ಇವೆಲ್ಲವೂ ರಾಸಾಯನಿಕ ಮುಕ್ತ ಹಣ್ಣುಗಳೆನ್ನುವುದು ವಿಶೇಷ. ಜೊತೆಗೆ ಮಾವು ಬೆಳೆಯನ್ನು ಜಿಲ್ಲೆೆಯಲ್ಲಿಉತ್ತೇಜಿಸುವುದು ಈ ಮೇಳದ ಉದ್ದೇಶವಾಗಿದೆ.
ಜಿಲ್ಲೆೆಯಲ್ಲಿ ಸೊರಬ, ಶಿಕಾರಿಪುರ ತಾಲೂಕಿನಲ್ಲಿ ವಿವಿಧ ತಳಿಯ ಮಾವುಗಳನ್ನು ಬೆಳೆಯಲಾಗುತ್ತಿಿದೆ. ಜಿಲ್ಲೆೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಾಗುವುದು ಇಲ್ಲಿಯೇ. ಈ ಬಾರಿ ಅತಿ ಹೆಚ್ಚು ಮಾವು ರಾಜ್ಯದಲ್ಲಿದೆ. ಮಾರುಕಟ್ಟೆೆಯಲ್ಲೂ ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತಿಿದೆ. ಆದರೆ ನೈಸರ್ಗಿಕ ಹಣ್ಣಿಿನ ರುಚಿಯ ಮುಂದೆ ರಾಸಾಯನಿಕ ಹಣ್ಣಿಿನ ರುಚಿಯೇನೂ ಅಲ್ಲ. ಆದ್ದರಿಂದ ಮೇಳದಲ್ಲಿಯೇ ಖರೀದಿಸಲು ಅವಕಾಶ ಕಲ್ಪಿಿಸಲಾಗಿದೆ.
ಇದರ ಜೊತೆಗೆ ಜಿಲ್ಲೆೆಯಲ್ಲಿ ಬೆಳೆಯುತ್ತಿಿರುವ ವಿವಿಧ ತಳಿಯ ಹಲಸು ಮತ್ತು ಹಲಸಿನ ಉತ್ಪನ್ನಗಳನ್ನು ಸಹ ಮಾರಾಟ ಮತ್ತು ಪ್ರದರ್ಶನಕ್ಕಿಿಡಲಾಗುವುದು. ದೊಡ್ಡಬಳ್ಳಾಾಪುರ ತಾಲೂಕಿನ ತೂಬುಗೆರೆ ಹಲಸು ರೈತರ ಸಂಘವು ವಿವಿಧ ತಳಿಯ ಹಲಸು ಬೆಳೆಯುವುದರಲ್ಲಿ ಎತ್ತಿಿದ ಕೈ. ಇವರು ಚಂದ್ರ ಹಲಸು, ರುದ್ರಾಾಕ್ಷಿ ಹಲಸು ಮೊದಲಾದವನ್ನು ಇಲ್ಲಿಗೆ ತರಲಿದ್ದಾಾರೆ. ಇದರಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳನ್ನೂ ಇಲ್ಲಿ ಪ್ರದರ್ಶಿಸಲಾಗುವುದು. ಜೊತೆಗೆ ಕಸಿ ಮಾಡಿದ ಸಸಿಗಳೂ ಸಹ ಮಾರಾಟಕ್ಕೆೆ ಲಭ್ಯವಿರುತ್ತವೆ. ಜಿಲ್ಲೆೆಯಲ್ಲಿ ಸಾವಯವವಾಗಿ ಬೆಳೆದ ಹಲಸನ್ನೂ, ಅದರ ಉಪ ಉತ್ಪನ್ನವನ್ನೂ ಸಹ ಮಾರಾಟಕ್ಕೆೆ ಇಡಲಾಗುವುದು. 
ಮಲೆನಾಡು ಜಿಲ್ಲೆೆ ಶಿವಮೊಗ್ಗದಲ್ಲಿ ಜೇನುಗಾರಿಕೆಯನ್ನು ಉತ್ತೇಜಿಸಲು ಹೆಚ್ಚು ಅವಕಾಶವಿದೆ. ಈ ಹಿನ್ನೆೆಲೆಯಲ್ಲಿ ರೈತರಲ್ಲಿ ಆಸಕ್ತಿಿ ಮೂಡಿಸಲು ಜೇನುಮೇಳವನ್ನೂ ಸಹ ಇಲ್ಲಿ ಆಯೋಜಿಸಲಾಗಿದೆ. ರೈತರು ಉತ್ಪಾಾದಿಸುತ್ತಿಿರುವ ಜೇನುತುಪ್ಪ, ವಿವಿಧ ಬಗೆಯ ಜೇನು ಉತ್ಪನ್ನವನ್ನೂ ಸಹ 4 ಮಳಿಗೆಗಳಲ್ಲಿ ಮಾರಾಟಕ್ಕಿಿಡಲಾಗುವುದು. ಜೇನು ಕೃಷಿ ಕುರಿತು ತರಬೇತಿ, ಹಲಸಿನ ಖಾದ್ಯ ತಯಾರಿಕೆ ತರಬೇತಿ, ಪ್ರಗತಿಪರರೊಂದಿಗೆ ಸಂವಾದ, ಸಾವಯವ ಕೃಷಿ ಬಗ್ಗೆೆ ಚರ್ಚೆ ಕಾರ‌್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ.
ಒಟ್ಟಿಿನಲ್ಲಿ, ಜಿಲ್ಲೆೆಯ ಜನರಿಗೆ ಬಾಯಲ್ಲಿ ನೀರೂರಿಸುವ ಮಾವು, ಹಲಸು, ಜೇನು ಮೇಳ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ತಪ್ಪದೇ ಮೇಳವನ್ನು ಸಂದರ್ಶಿಸಿ ಖರೀದಿಸುವ ಮೂಲಕ ಮೇಳವನ್ನು ಹಾಗೂ ಬೆಳೆಗಾರರನ್ನು ಪ್ರೋತ್ಸಾಾಹಿಸಬೇಕಿದೆ.
published on 7th june 2019
................................

Wednesday, 5 June 2019

ಎಲ್ಲಿ ಹೋದವು ನಿತ್ಯಹರಿದ್ವರ್ಣದ ಸಹಜ ವನಗಳು 
 ಇಂದು ವಿಶ್ವ ಪರಿಸರ ದಿನ






 ಕಾಡು-ನಾಡಿನ ಕುರಿತು ಬರೆಯುವವರಿಗೆ ಬರವಿಲ್ಲ; ಭಾಷಣ ಬಿಗಿಯುವವರಿಗೆ ಕೊರತೆಯೂ ಇಲ್ಲ. ಈ ಬರಹ ಭಾಷಣಗಳನ್ನು ಬದಿಗಿಟ್ಟು, ಕಾಡನ್ನು ಕುರಿತು ಚಿಂತಿಸಬೇಕಾದ ಸಂಕ್ರಮಣ ಕಾಲವಿದು. ದಿನದಿಂದ ದಿನಕ್ಕೆೆ ಭಾರತದಲ್ಲಿ ಕಾಡುಗಳು ಬರಿದಾಗುತ್ತಿಿವೆ; ಮನುಷ್ಯನ ಸ್ವಾಾರ್ಥಕ್ಕಾಾಗಿ, ಔದ್ಯಮಿಕ ಬೆಳವಣಿಗೆಗಾಗಿ ಕಾಡಿನ ಮಾರಣಹೋಮ ನಡೆಯುತ್ತಿಿದೆ. ಇದು ಹೀಗೆಯೇ ಮುಂದುವರೆದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಚಿತ್ರಗಳ ಮೂಲಕ ಕಾಡನ್ನು ತೋರಿಸುವ, ವಿವರಿಸುವ ಪ್ರಸಂಗ ಬಂದರೆ, ನಾಡಿನ ಪರಿಸ್ಥಿಿತಿ ಉಲ್ಬಣಗೊಂಡರೆ ಅಚ್ಚರಿಯೇನಿಲ್ಲ.  

ನಾಗಾಲೋಟದಿಂದ ಪ್ರಗತಿ ಕಾಣುತ್ತಿಿರುವ ನಮ್ಮ ಪಟ್ಟಣದ ತ್ಯಾಾಜ್ಯಗಳು, ಕಾರ್ಖಾನೆಗಳ ತ್ಯಾಾಜ್ಯಗಳು, ನೆಲದೊಳಗೆ ಸೇರಿ ರಾಡಿಯಾಗುತ್ತಿಿವೆ. ನೆಲ, ಬಂಡೆ, ಮರ-ಗಿಡಗಳನ್ನು ಅಗೆದು, ಬಗೆದು ಬರಿದಾಗಿಸುವ ಭರದಲ್ಲಿ ಭೂಮಿ ಬರಡಾಗುತ್ತಿಿದೆ; ಬರಿದಾಗುತ್ತಿಿದೆ. ಇಂತಹವುಗಳನ್ನು ತಡೆಗಟ್ಟಬೇಕು. ಕ್ಷಮಯಾ ಧರಿತ್ರಿಿಯಾದ ಭೂಮಿ ತನ್ನ ಮೇಲಾಗುತ್ತಿಿರುವ ಶೋಷಣೆಯನ್ನು ವಿರೋಧಿಸಿ ನಿಂತು ಜೀವಜಗತ್ತು ಹಸಿರಿನಿಂದ ನಳನಳಿಸುವಂತೆ ಮಾಡಬೇಕಿದೆ.
 ಪೃಥ್ವಿಿ ಎಂದರೆ ಇಲ್ಲಿ ಬರಿ ಭೂಮಿಯಲ್ಲ; ಇಡಿಯ ಬ್ರಹ್ಮಾಾಂಡ. ಈ ಬ್ರಹ್ಮಾಾಂಡವನ್ನು ದೇವಿ ಸ್ವರೂಪದಲ್ಲಿ ಕಂಡ ಏಕೈಕ ದೇಶ ಭಾರತ. ಜೀವರಾಶಿಗಳನ್ನು ತನ್ನೊೊಳಗಿಟ್ಟುಕೊಂಡು ಭೂಮಿ ಗಾಣದೆತ್ತಿಿನಂತೆ ಸುತ್ತುತ್ತಾಾಳೆ. ಯಾರ ಬಗೆಗೂ ಭೇದ- ಭಾವ ತೋರಿಸದ ಆಕೆ ತನ್ನ ಮೇಲಾಗುತ್ತಿಿರುವ ಅನ್ಯಾಾಯವನ್ನು ನಿರಂತರವಾಗಿ ಸಹಿಸುತ್ತಲೇ ಬಂದಿದ್ದಾಾಳೆ.  ಸಾಲುಮರಗಳಿದ್ದ, ಅರವಟ್ಟಿಿಗೆಗಳಿದ್ದ, ಪ್ರಕೃತಿಸಿರಿಯ ಮಡಿಲಾಗಿದ್ದ ಭೂಮಿ ಈಗ ಬರಡಾಗಿದೆ. 
   ಗಣಿಗಾರಿಕೆಗಾಗಿ, ಕಾರ್ಖಾನೆಗಳಿಗಾಗಿ, ವಿದ್ಯುತ್ ಸ್ಥಾಾವರಗಳಿಗಾಗಿ, ರೈಲು- ವಿಮಾನ ನಿಲ್ದಾಾಣ ಯೋಜನೆಗಳಿಗಾಗಿ ಫಲವತ್ತಾಾದ ಭೂಮಿಯೆಲ್ಲ ಬಳಕೆಯಾಗುತ್ತಿಿದೆ. ನಿರಂತರವಾಗಿ  ತನ್ನನ್ನು ಶೋಷಿಸುತ್ತಿಿರುವ ಜನರನ್ನು ಕಂಡು ಭೂಮಿತಾಯಿ ಬೆರಗಾಗುತ್ತಾಾಳೆ. ಉಬ್ಬಿಿರುವ ಹೆಬ್ಬಂಡೆಗಳೆನ್ನು ಒಡೆದು ಪುಡಿಪುಡಿ ಮಾಡಿದ್ದಾಾರೆ. ಆ ಧೂಳಿನಲ್ಲೇ ಆಕೆ ನಡೆಯುತ್ತಿಿದ್ದಾಾಳೆ. ಆಧುನಿಕತೆಯ ಹೆಸರಿನಲ್ಲಿ ಸೌಲಭ್ಯ, ಸೌಕರ್ಯಗಳ ಅರಸುವಿಕೆಯಲ್ಲಿ ಭೂಮಿತಾಯಿಯ ಗರ್ಭವನ್ನು ಕಲುಷಿತಗೊಳಿಸಲಾಗುತ್ತಿಿದೆ.
ಗೋವಿನ ನೀತಿಪಾಠ ಮಾಡುವ ನಾವು ಮೊದಲು ನೀತಿ ಪಾಲನೆ ಮಾಡಬೇಕು. ಆ ಬಳಿಕ ಇತರರಿಗೆ ಬೋಧನೆ ಮಾಡಬೇಕು. ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ವಾತಾವರಣ ಕಲ್ಪಿಿಸಬೇಕು. ಸಮೃದ್ಧವಾದ ಗಿಡಗಂಟಿಗಳಲ್ಲಿ ಪಕ್ಷಿಸಂಕುಲ ನಿರ್ಭೀತವಾಗಿ ಸಂಗೀತ ಹಾಡಬೇಕು. ಮರಗಳಿಗೆ ಬಳ್ಳಿಿಗಳು ಹಬ್ಬಿಿಕೊಂಡಿರುವುದನ್ನು ಕಂಡು- ದೊಡ್ಡವರ ನೆರಳಿನಲ್ಲಿ ಸಣ್ಣವರ  ಬದುಕು ಅರಳುವಂತಾಗಬೇಕು, ಅದು ಬಿಟ್ಟು ನರಳುವಂತಾಗಬಾರದು.
  ಮುಳ್ಳಿಿನ ಗಿಡದಲ್ಲಿ ಆಕರ್ಷಕವಾದ, ಸುಗಂಧಭರಿತವಾದ ಹೂವುಗಳರಳಿ ನಿಲ್ಲುವಂತೆ ನಮ್ಮ ಬದುಕು, ನಮ್ಮ ಮನಸ್ಸು ಅರಳಬೇಕು;ಹರಿಯುವ ನದಿಗೆ ಬಂಡೆಗಳು ದಾರಿ ಬಿಡುವಂತೆ ಕಾಡಿನಲ್ಲಿರುವ ಅಮಾಯಕ ಪ್ರಾಾಣಿಗಳ ಬದುಕಿಗೆ ಅನುವು ಮಾಡಿಕೊಡಬೇಕು. ಅರಣ್ಯ ನಾಶ ನಿಲ್ಲಬೇಕು, ಕಾಡು ಕಾಡಾಗಿಯೇ ಉಳಿಯಬೇಕು.
 ನಾಡಿನಲ್ಲಿ ನಮ್ಮ ದೊರೆಗಳು ನೆಟ್ಟ ಸಾಲುಮರಗಳು, ಸಹಜವಾಗಿ ಬೆಳೆದ ನಿತ್ಯಹರಿದ್ವರ್ಣದ ವನಗಳು ನಮ್ಮ ಶೋಕಿಗೆ ಬಲಿಯಾಗುತ್ತಿಿವೆ. ಇದರಿಂದಾಗಿ ವಾತಾವರಣದಲ್ಲಿ ಉಷ್ಣಾಾಂಶ ದಿನೇದಿನೇ ಹೆಚ್ಚಳವಾಗುತ್ತಿಿದೆ. ಮಲೆನಾಡಿನಲ್ಲೂ ಬಯಲಸೀಮೆಯ ಬಿಸಿಲು ಪ್ರಖರಿಸತೊಡಗಿದೆ. ಕುಡಿಯುವ ನೀರಿಗೂ ತತ್ವಾಾರ ಎದುರಾಗತೊಡಗಿದೆ. ಪಶ್ಚಿಿಮಘಟ್ಟದ ಶ್ರೇಣಿಯಲ್ಲೇ ಅರಣ್ಯ ನಾಶ ಸತತವಾಗಿ ಮುಂದುವರೆದಿದೆ. ಕಾಡನ್ನು ಉಳಿಸದಿದ್ದರೆ ನಮಗೆ ಸುಖವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿಿದ್ದರೂ ಉಳಿಸುವ ಕೆಲಸಕ್ಕೆೆ ಮುಂದಾಗುವವರ ಸಂಖ್ಯೆೆ ಕಡಿಮೆ. ಎಷ್ಟೇ ಜನಜಾಗೃತಿ, ಆಂದೋಲನ, ಹೋರಾಟ ನಡೆಯುತ್ತಿಿದ್ದರೂ ಅರಣ್ಯದ
ಪ್ರಮಾಣ ಹೆಚ್ಚುತ್ತಿಿಲ್ಲ. ಹಸಿರಿನ ನಾಶ ನಿಂತಿಲ್ಲ. ಇವೆಲ್ಲ ನಮ್ಮ ಮುಂದಿನ ಬಾಳಿಗೆ  ಮಾರಕ ಎನ್ನುವುದರಲ್ಲಿ ಎರಡು ಮಾತಿಲ್ಲ. 
ರತ್ನಗರ್ಭಾ ವಸುಂಧರಾ ಎನ್ನುವ ಮಾತನ್ನು ಪುಷ್ಟೀಕರಿಸುವಂತೆ, ಭೂಮಿತಾಯಿ ಎಂದೂ ಬಡವಳಲ್ಲ ಎಂದೂ ಸಹ ಹೇಳಬಹುದು. ಅವಳ ಗರ್ಭದಲ್ಲಿ ಅತ್ಯಮೂಲ್ಯ ಖನಿಜ ನಿಕ್ಷೇಪವಿದೆ. ಮತ್ತು, ರತ್ನ, ವಜ್ರ, ವೈಢೂರ್ಯಗಳಿವೆ. ಅವುಗಳನ್ನು ಪಡೆಯುವುದಕ್ಕಾಾಗಿ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಕೆಯ ಗರ್ಭವನ್ನು ಸೀಳುತ್ತಿಿದ್ದ್ದಾಾರೆ. ಅದರೂ ಸಹನಾಮಯಿಯಾದ ಆಕೆ ಎಂದೂ ಕೋಪಗೊಂಡಿಲ್ಲ. ಇಂತಹ ಅಮೂಲ್ಯ ವಸ್ತುಗಳನ್ನು ತನ್ನೊೊಡಲಲಲ್ಲಿ ಇಟ್ಟುಕೊಂಡ ಆಕೆ ವಂದನೀಯಳು.
ಈ ನೆಲದ ಮೇಲೆ ಬದುಕುವವರಿಗೆ ಉಪಕಾರ ಸ್ಮರಣೆ ಬೇಕು.  ಅವಳ ಒಡಲನ್ನು ಬರಿದು ಮಾಡಬಾರದೆನ್ನುವ ಪ್ರಜ್ಞೆ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಷ್ಟೇ ಬಳಸಿಕೊಳ್ಳಬೇಕು ಎಂಬ ಎಚ್ಚರ ಬೇಕು. ನಮ್ಮ ಬಾಳು ಹಸನಾಗಬೇಕೆಂದರೆ, ಜೀವ ಹಸಿರಾಗಬೇಕೆಂದರೆ ನಾವು ನಿಸರ್ಗದ ಆರಾಧಕರಾಗಬೇಕು. ಪ್ರಕೃತಿ ಪ್ರೇಮಿಗಳಾಗಬೇಕು. ಈ ಪ್ರಕೃತಿ ಎನ್ನುವುದು ಮೂಲಬಂಡವಾಳವಿದ್ದಂತೆ. ಮೂಲಬಂಡವಾಳಕ್ಕೆೆ ಕೈಹಾಕದೆ,  ಅದರ ಬಡ್ಡಿಿಯನ್ನಷ್ಟೇ ಬಳಸುವ, ನಮ್ಮ ಹಿರಿಯರು ನಮಗಾಗಿ ಉಳಿಸಿ ಹೋದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿ ಹೋಗಬೇಕು ಎಂಬ ಎಚ್ಚರದ ಪ್ರಜ್ಞೆ ನಮ್ಮದಾಗಬೇಕು. ಭೂದೇವಿಯನ್ನು ನೆನಪಿಸಿಕೊಂಡು ಅವಳಿಗೆ ಕೃತಜ್ಞರಾಗಿರಬೇಕಿದೆ.

published on June 5-2019
,,,,,,,,,,,,,,,,,,,,,,,




Thursday, 16 May 2019



ಹೆಸರಿಗೆ ಸ್ಮಾಾರ್ಟ್ ಸಿಟಿ, ಆದರೆ ಊರೆಲ್ಲ ಕಸ


ಶಿವಮೊಗ್ಗ: ನಗರವನ್ನು ಸ್ಮಾಾರ್ಟ್ ಸಿಟಯನ್ನಾಾಗಿ ಮಾಡುವ ಕೆಲಸ ಒಂದೆಡೆ ನಡೆಯುತ್ತಿಿದ್ದರೆ, ಇನ್ನೊೊಂದೆಡೆ ಕಸದ ತೊಟ್ಟಿಿಯನ್ನಾಾಗಿ ಮಾಡುವ ಕೆಲಸವೂ ಅಷ್ಟೇ ಭರದಿಂದ ಸಾಗಿದೆ. ಪಟ್ಟಣದ ತುಂಬಾ ಕಸದ ರಾಶಿಗಳೇ ರಾರಾಜಿಸುತ್ತಿಿವೆ. ಜನಪ್ರತಿನಿಧಿಗಳನ್ನು ಕೇಳಿದರೆ ಅಧಿಕಾರಿಗಳ ಮೇಲೆ, ಅಧಿಕಾರಿಗಳನ್ನು ಕೇಳಿದರೆ  ಅದಿಲ್ಲ, ಇದಿಲ್ಲ ಎನ್ನುವ  ಮಾಹಿತಿ ಬಿಚ್ಚಿಿಡುತ್ತಿಿದ್ದಾಾರೆ. ಒಟ್ಟಿಿನಲ್ಲಿ ಕಸ ಎಲ್ಲೆೆಡೆ ತುಂಬಿ ಚೆಲ್ಲುತ್ತಿಿದೆ.
ನಗರದ ಯಾವುದೇ ಬಡಾವಣೆಗೆ ಹೋದರೂ ನಿವಾಸಿಗಳು ಕಸದ ಬಗ್ಗೆೆಯೇ ಮಾತನಾಡುತ್ತಿಿದ್ದಾಾರೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಕೆಲಸ ನಡೆಯುತ್ತಿಿಲ್ಲ ಎಂಬ ಮಾತು ಕೇಳಿಬರುತ್ತಿಿದೆ. ಆದರೆ ನೀತಿ ಸಂಹಿತೆಯಲ್ಲಿ ಕಸ ತೆಗೆಯಬಾರದು, ಚರಂಡಿ ಶುಚಿಗೊಳಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಪಾಲಿಕೆಯ ಸದಸ್ಯರು ಇದನ್ನ್ನೆೆಲ್ಲ ಮರೆಮಾಚುತ್ತಿಿದ್ದಾಾರೆ ಜೊತೆಗೆ ಕೆಲಸಗಾರರ ಕೊರತೆ ಇದೆ ಎನ್ನುವ ಮಾಹಿತಿ ಕೊಡುತ್ತಿಿದ್ದಾಾರೆ.
ನಗರದ ಬಸ್ ನಿಲ್ದಾಾಣದಿಂದ ಬೈಪಾಸ್‌ಗೆ ತೆರಳುವ ಮಂಜುನಾಥ ನಗರ, ಡಿಪೋ ರಸ್ತೆೆಯಲ್ಲಿ ಕಸದ ರಾಶಿ ಹಾಕಿರುವ ಚಿತ್ರವನ್ನು ಇಲ್ಲಿ ಗಮನಿಸಬಹುದು. ಎಲ್ಲಿಂದಲೋ ತಂದು ಇಲ್ಲಿ ಕಸದ ರಾಶಿ ಹಾಕಲಾಗುತ್ತಿಿದೆ. ಸೊಳ್ಳೆೆಗಳ ಕಾಟ, ದುರ್ವಾಸನೆ ಮಧ್ಯೆೆ ಜನರ ಬದುಕು ಸಾಗಿದೆ. ಇಲ್ಲಿ ಯಾರನ್ನು ಕೇಳುವುದು, ಬಿಡುವುದು ಎನ್ನುವುದೇ ಸ್ಥಳೀಯರ ಸಮಸ್ಯೆೆಯಾಗಿದೆ. ಹಲವೆಡೆ ಕಸಕ್ಕೆೆ ಬೆಂಕಿ ಹಾಕಲಾಗುತ್ತಿಿದೆ. ಕಸ ಒಯ್ಯುವವರು ಯಾರೂ ಬಾರದ ಕಾರಣ ಸ್ಥಳೀಯರು ಸಮಸ್ಯೆೆಯಿಂದ ಪಾರಾಗಲು ಬೆಂಕಿ ಹಾಕುತ್ತಿಿದ್ದಾಾರೆ. ಏಕೆಂದರೆ, ಸೊಳ್ಳೆೆಯ ಕಾಟ ತಡೆಯಲಾಗದಷ್ಟು ನಿರ್ಮಾಣವಾಗಿದೆ.
ನಗರದ ಬಡಾವಣೆಗಳ ಚರಂಡಿಯಲ್ಲಿ ಕಸ ಕಟ್ಟಿಿ ತಿಂಗಳೇ ಕಳೆದರೂ ಅದನ್ನು ಶುಚಿಗೊಳಿಸಿಲ್ಲ. ಕಾರ್ಪೊರೇಟರ್‌ಗಳಿಗೆ ಹೇಳಿದರೆ ಕಳುಹಿಸುತ್ತೇವೆ ಎನ್ನುತ್ತಾಾರಾದರೂ ಬರುವವರು ಯಾರೂ ಇಲ್ಲ. ಅಧಿಕಾರಿಗಳು ಸಮಸ್ಯೆೆಯ ನೆಪ ಹೇಳುತ್ತಾಾರೆ. ಕಾಪೊರೇಟರ್‌ಗಳು ಅಧಿಕಾರಗಳ ಮೇಲೆ ಜವಾಬ್ದಾಾರಿ ಹೊರಿಸುತ್ತಿಿದ್ದಾಾರೆ.
ಅಸಡ್ಡೆೆಯಿಂದ ಕೆಲಸ ಮಾಡುತ್ತಿಿರುವುದು ಮಾತ್ರ ಸಾಬೀತಾಗುತ್ತಿಿದೆ. ಜನಸಾಮಾನ್ಯರ ಸಮಸ್ಯೆೆಗೆ ಇಲ್ಲಿ ಬೆಲೆಯೇ ಇಲ್ಲ. ಕಸವನ್ನು ಒಯ್ಯುವ ಗಾಡಿಗಳಿಗೆ ವಾರ್ಷಿಕವಾಗಿ 1200 ರೂ ಕಟ್ಟಿಿಸಿಕೊಳ್ಳಲಾಗುತ್ತಿಿದೆ. ಆದರೆ ನಿಗದಿತ ವೇಳೆಗೆ ಕಸ ಒಯ್ಯುವವರು ಬರುತ್ತಿಿಲ್ಲ. ಎಷ್ಟೋೋ ಕಡೆಗೆ ಬರುತ್ತಿಿಲ್ಲ ಎಂಬ ದೂರಿದೆ. ಕೇಳಿದರೆ ಬಂದಿದ್ವಿಿ, ಕಸ ಇರಲಿಲ್ಲ ಎಂಬ ಉತ್ತರ ಬೇರೆ. ಪಾಲಿಕೆಯ ಈ ಎಲ್ಲ ನೀತಿಗಳಿಂದ ನಗರ, ಸ್ವಚ್ಛ ನಗರವಾಗುವ ಯಾವ ಸೂಚನೆಯೂ ಕಾಣುತ್ತಿಿಲ್ಲ.
ಬೇಸಿಗೆಯ ಆರ್ಭಟ ಬೇರೆ ವಿಪರೀತವಿರುವುದರಿಂದ ಚರಂಡಿಗಳಲ್ಲಿ ಸೊಳ್ಳೆೆಗಳ ಉತ್ಪಾಾದನೆ ದಿನೇ ದಿನೇ ಹೆಚ್ಚುತ್ತಿಿದೆ. ಮನೆಯೊಳಕ್ಕೆೆ ಕುಳಿತುಕೊಳ್ಳಲಾಗದ ಸ್ಥಿಿತಿ ನಿರ್ಮಾಾಣವಾಗಿದೆ. ಸೊಳ್ಳೆೆ ನಿಯಂತ್ರಣಕ್ಕೆೆ ಕ್ರಮವೂ ನಡೆಯುತ್ತಿಿಲ್ಲ. ನೀತಿಸಂಹಿತೆಯ ಹೆಸರಲ್ಲಿ ಯಾರನ್ನೂ ಹೇಳದಂತಾಗಿದೆ. ಯಾರನ್ನೂ ಕೇಳದಂತಾಗಿದೆ. ಕನಿಷ್ಠ ಕಾರ್ಪೊರೇಟರ್‌ಗಳಾದರೂ ಸ್ಥಳಕ್ಕೆೆ ಹೋಗಿ ಸಮಸ್ಯೆೆ ಕೇಳುವ ಸೌಜನ್ಯ ತೋರಿಸಬಹುದಿತ್ತು. ಪಾಲಿಕೆಯ ಅಧಿಕಾರಿಗಳು ಮತ್ತು ಕಾರ್ಪೊರೇಟರ್‌ಗಳೆಲ್ಲರೂ ಚುನಾವಣೆಯ ಗುಂಗಿನಿಂದ ಇನ್ನೂ ಹೊರಬಂದಂತೆ ಕಾಣುತ್ತಿಿಲ್ಲ.
ಒಟ್ಟಿಿನಲ್ಲಿ, ಕಸದ ನಗರಿಯಾಗಿ ಶಿವಮೊಗ್ಗ ಮಾರ್ಪಾಡಾಗುತ್ತಿಿದೆ. ಇನ್ನೊೊಂದೆಡೆ, ಸ್ಮಾಾರ್ಟ್ ಸಿಟಿಯ ಕೆಲಸವೂ ಸಾಗಿದೆ.


 ಪೌರ ಕಾರ್ಮಿಿಕರ ಸಂಖ್ಯೆೆ ಕಡಿಮೆ ಇದೆ. ಕಸ  ಸಾಗಿಸುವ ವಾಹನದ ಕೊರತೆಯೂ ಇದೆ. ಸರ್ಕಾರಕ್ಕೆೆ ಈ ಬಗ್ಗೆೆ ಮಾಹಿತಿ ಕೊಟ್ಟು ಬಹಳ ತಿಂಗಳಾಗಿದೆ. ಇನ್ನೂ ಉತ್ತರ ಸಿಕ್ಕಿಿಲ್ಲ. ಇನ್ನೊೊಂದೆಡೆ, ಅಧಿಕಾರಿಗಳ ಅಸಡ್ಡೆೆಯೂ ಇದೆ. 23ರ ನಂತರ ಈ ಎಲ್ಲ ಸಮಸ್ಯೆೆ ಪರಿಹರಿಸಲಾಗುವುದು. 
-ಚನ್ನಬಸಪ್ಪ, ಉಪಮೇಯರ್

published on 15-5.19



ಇದು ಮಕ್ಕಳ ಕಲರವದ ಲೋಕ


ಬೇಸಿಗೆ ಶಿಬಿರಗಳು ಎಲ್ಲೆೆಡೆ ನಡೆಯುತ್ತಿಿವೆ. ಇಲ್ಲೆೆಲ್ಲ ಸಾವಿರಾರು ರೂಪಾಯಿ ತೆತ್ತು ಕಲಿಯಬೇಕು. ಆದರೆ ಮಕ್ಕಳ ಹಬ್ಬದಲ್ಲಿ ಒಂದು ರೂಪಾಯಿಯನ್ನೂ ಕೊಡಬೇಕಿಲ್ಲ. ಆದರೆ ಜಿಲ್ಲಾಾಡಳಿತ ನಡೆಸುತ್ತಿಿರುವ ವಿಭಿನ್ನವಾಗಿ ನಡೆಯುತ್ತಿಿರುವ ಮಕ್ಕಳ ಹಬ್ಬದಲ್ಲಿ ಮಕ್ಕಳದ್ದೇ ಕಲರವ. ಅವರದ್ದೇ ಲೋಕ. ಅವರ ಪ್ರತಿಭೆ ಬೆಳಗಲು ಇತಿಮಿತಿ ಇಲ್ಲಿಲ್ಲ. ಹಾಡಬಹುದು, ಕುಣಿದು ಕುಪ್ಪಳಿಸಬಹುದು, ಹಿರಿಯರು ಕಲಿಸಿದ್ದನ್ನು ಕಲಿತು ಮಾಡಿ ತೋರಿಸಬೇಕು.  ಮಕ್ಕಳಿಗೆ ಎಲ್ಲೂ ಸಿಗದ ಅಪರೂಪದ ವೇದಿಕೆ ಇದು. ಇದರಿಂದ ವಂಚಿತರಾದರೆ ನಿಜಕ್ಕೂ ಬಹಳಷ್ಟು ಕಳಕೊಂಡಂತೆ.




ಹಬ್ಬ ಎಂದರೆ ಮಕ್ಕಳಿಗೆ ವಿಶೇಷವಾಗಿ ಉತ್ಸಾಾಹ, ಕುತೂಹಲ, ಸಂಭ್ರಮ. ಹಬ್ಬದಲ್ಲಿ ಏನೇನಿರುತ್ತದೆ, ಹೇಗೆ ಆಚರಿಸುತ್ತಾಾರೆ ಎನ್ನುವುದನ್ನು ತಿಳಿದುಕೊಳ್ಳುವ ಆಸಕ್ತಿಿಯೂ ಇರುತ್ತದೆ. ಆದರೆ ಇದು ಮನೆಯಲ್ಲಿ ಆಚರಿಸುವ ಹಬ್ಬವಲ್ಲ, ಬದಲಿಗೆ ಬೇಸಿಗೆ ರಜೆ ಹಿನ್ನೆೆಲೆಯಲ್ಲಿ ಮಕ್ಕಳು ಒಂದು ವಾರವನ್ನು ವಿಶಿಷ್ಟ ಅನುಭವ, ಹೊಸ ಜ್ಞಾಾನ, ವಿವಿಧ ಸ್ಥಳಗಳ ಮತ್ತು ವಿಷಯಗಳ ಪರಿಚಯ ಮಾಡಿಕೊಳ್ಳುವ ಮೂಲಕ ಕಳೆಯುವ ಜ್ಞಾಾನದ ಹಬ್ಬ.
ಬೇಸಿಗೆ ಶಿಬಿರಗಳು ಎಲ್ಲೆೆಡೆ ನಡೆಯುತ್ತಿಿವೆ. ಇಲ್ಲೆೆಲ್ಲ ಸಾವಿರಾರು ರೂಪಾಯಿ ತೆತ್ತು ಕಲಿಯಬೇಕು. ಆದರೆ ಮಕ್ಕಳ ಹಬ್ಬದಲ್ಲಿ ಒಂದು ರೂಪಾಯಿಯನ್ನೂ ಕೊಡಬೇಕಿಲ್ಲ. ಇಲ್ಲೇನಿದ್ದರೂ ಮಕ್ಕಳದ್ದೇ ಕಲರವ. ಅವರದ್ದೇ ಲೋಕ. ಅವರ ಪ್ರತಿಭೆ ಬೆಳಗಲು ಇತಿಮಿತಿ ಇಲ್ಲಿಲ್ಲ. ಹಾಡಬಹುದು, ಕುಣಿಯಬಹುದು, ಹಿರಿಯರು ಕಲಿಸಿದ್ದನ್ನು ಕಲಿತು ಮಾಡಿ ತೋರಿಸಬೇಕು.  ಮಕ್ಕಳಿಗೆ ಎಲ್ಲೂ ಸಿಗದ ಅಪರೂಪದ ವೇದಿಕೆ ಇದು.
ಈ ಹಬ್ಬದಲ್ಲಿ ಏನೇನಿವೆ ಗೊತ್ತೇ?:
 ಹಾಡು, ಆಟ, ಯೋಗ, ಆರೋಗ್ಯ ತಪಾಸಣೆ, ನೀತಿಕಥೆಗಳನ್ನು ಹೇಳುವುದು,  ಸಿನಿಮಾ ವೀಕ್ಷಣೆ, ಕ್ರಾಾಫ್‌ಟ್‌ ಮೇಕಿಂಗ್, ಕ್ರೀಡೆಯಲ್ಲಿ ಭಾಗವಹಿಸುವುದು, ಆರೋಗ್ಯ ಬಗ್ಗೆೆ ಮಾಹಿತಿ, ಗಾಜನೂರು ಅಣೆಕಟ್ಟು ಮತ್ತು ಸಕ್ರೆೆಬೈಲು ಆನೆ ಬಿಡಾರಕ್ಕೆೆ ಭೇಟಿ, ತ್ಯಾಾವರೆಕೊಪ್ಪ ಹುಲಿ- ಸಿಂಹಧಾಮಕ್ಕೆೆ  ಭೇಟಿ,  ಇಸ್ರೇಲ್ ಮಾದರಿ ಕೃಷಿ ಮತ್ತು ಪಶು ಸಂಗೋಪನೆ ಬಗ್ಗೆೆ ಮಾಹಿತಿ,  ಪೊಲೀಸ್ ಠಾಣೆ, ಅಗ್ನಿಿಶಾಮಕ ಠಾಣೆಗೆ ಭೇಟಿ ನೀಡಿ ಅವರ ಕೆಲಸ - ಕಾರ‌್ಯಗಳ ಮತ್ತು ಅವರು ಬಳಸುವ ಆಯುಧಗಳ ಪರಿಚಯ, ಸ್ವಿಿಮ್ಮಿಿಂಗ್ ಫೂಲ್‌ಗೆ ಭೇಟಿ, ಈಜುವುದು, ಶಿವಪ್ಪನಾಯಕ ಅರಮನೆ ಭೇಟಿ, ವೀಕ್ಷಣೆ,  ಟ್ರಾಾಫಿಕ್ ಠಾಣೆಗೆ ಭೇಟಿ, ಸಿಗ್ನಲ್‌ಗಳ ಅರಿವು ಮೂಡಿಸಿಕೊಳ್ಳುವುದು ಮೊದಲಾದವು.
ಇಂತಹ ಒಂದು ಪರಿಕಲ್ಪನೆ ಮೂಡಿದ್ದು ಜಿಲ್ಲಾಾಧಿಕಾರಿ  ಕೆ. ಎ. ದಯಾನಂದ ಮತ್ತು ಸಮನ್ವಯ ತಂಡದ ಮುಖ್ಯಸ್ಥ ಕಾಶೀನಾಥ ಅವರಲ್ಲಿ. ಬಡ ಮಕ್ಕಳು ಬೇಸಿಗೆ ಶಿಬಿರದಿಂದ ವಂಚಿತರಾಗುತ್ತಿಿರುವುದನ್ನು ತಪ್ಪಿಿಸಲು ಮತ್ತು ಬೇಸಿಗೆ ರಜೆಯ ಸದುಪಯೊಗ ಮಾಡಿಕೊಳ್ಳಬೇಕೆಂಬ ದೃಷ್ಟಿಿಯಿಂದ ಈ ಕಾರ‌್ಯಕ್ರಮ ರೂಪಿಸಿದರು. ಲೋಕಸಭೆ ಚುನಾವಣೆಯ ಕೆಲಸದ ಒತ್ತಡದಲ್ಲಿದ್ದರಿಂದ ಆ ಕಾರ‌್ಯಗಳು ಮುಕ್ತಾಾಯವಾದ ನಂತರ ಇದಕ್ಕೆೆ ಚಾಲನೆ ಕೊಡಲಾಗಿದೆ.
ನಗರದ ಹಲವು ಶಾಲೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಅಲ್ಲಿರುವ ಬಡಮಕ್ಕಳಿಗೆ ಈ ಮಕ್ಕಳ ಹಬ್ಬದ ವಿಚಾರ ತಿಳಿಸಿ ಅವರ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಮೇ 12ರಂದು ನಿನ್ನೆೆ ಗಾಂಧಿಪಾರ್ಕಿನಲ್ಲಿ ನಡೆದ ನಡೆದ ಉದ್ಘಾಾಟನೆಯಲ್ಲಿ ಸುಮಾರು 100ರಷ್ಟು ಮಕ್ಕಳು ಹಾಜರಿದ್ದರು. ಈ ಮಕ್ಕಳಲ್ಲಿದ್ದ ಉತ್ಸಾಾಹ, ಪ್ರಪ್ರಥಮ ಬಾರಿಗೆ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಕ್ಕೆೆ ಕುತೂಹಲ ಎಲ್ಲರ ಗಮನಸಸೆಳೆಯುತ್ತಿಿತ್ತು. ಎಷ್ಟು ಉತ್ಸಾಾಹದಿಂದ ಭಾಗವಹಿಸಿದ್ದರೆಂದರೆ ಜಿಲ್ಲಾಾಧಿಕಾರಿಯವರು ಉದ್ಘಾಾಟನೆ ಮಾಡಿ ಆಡಿದ ಕೆಲವು ನೀತಿಯ ಮಾತುಗಳನ್ನು ತುಂಬಾ ಜಾಗರೂಕತೆಯಿಂದ ಕೇಳಿಸಿಕೊಂಡರು. ಅವರ ಮಾತಿಗೆ ಅಷ್ಟೇ ಚುರುಕಾಗಿ ಪ್ರತಿಕ್ರಿಿಯಿಸಿದರು.
ಉದ್ಘಾಾಟನೆಗೆ ಮುನ್ನ ವಿದ್ವಾಾನ್ ಶ್ರೀಧರ್ ಸಂಗೀತದ ಬಗ್ಗೆೆ ಮಾಹಿತಿ ಕೊಟ್ಟು, ಹಾಡುವುದನ್ನೂ ಕಲಿಸಿಕೊಟ್ಟರು. ಹೀಗೆ ಹಾಡು, ಕಥೆ, ಆಟ ಮತ್ತು ಪಾಠವೇ ಇಲ್ಲಿ  ಹಬ್ಬ. ಖುಷಿಯಿಂದ ಮಕ್ಕಳು ದಿನವನ್ನು ವಿವಿಧ ಚಟುವಟಿಕೆಗಳಲ್ಲಿ ಕಳೆದರು. ಸ್ವತಃ ಜಿಲ್ಲಾಾಧಿಕಾರಿಯವರೇ ಮಧ್ಯಾಾಹ್ನದವರೆಗೂ ನಿಂತು ಮಕ್ಕಳ ಉತ್ಸಾಾಹ, ಹಬ್ಬಕ್ಕೆೆ ಸಿಕ್ಕ ಪ್ರತಿಕ್ರಿಿಯೆ ನೋಡಿ ಸಂಸತಪಟ್ಟರು.
ಬೇಸಿಗೆ ಶಿಬಿರಗಳಿಂದ ವಂಚಿತ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಇಂತಹ ಶಿಬಿರವನ್ನು ವೈವಿಧ್ಯಮಯವಾಗಿ ನಡೆಸುವುದರ ಮೂಲಕ ಒಂದು ಉತ್ತಮ ಬೆಳವಣಿಗೆಗೆ ಅವರು ಕಾರಣರಾದಂತಾಗಿದ್ದಾಾರೆ. ಪ್ರತಿವರ್ಷ ಇಂತಹ ಶಿಬಿರವನ್ನು ನಡೆಸುವ ಬಗ್ಗೆೆಯೂ ಸಂಯೋಜಕರಿಗೆ ಸೂಚಿಸಿದ್ದಾಾರೆ. ಬೇಸಿಗೆ ರಜೆಯನ್ನು ಕೇವಲ ಆಟದಲ್ಲಿ, ಪ್ರವಾಸದಲ್ಲಿ, ನೆಂಟರಿಷ್ಟರ ಮನೆಗೆ ಹೋಗಿಬರುವುದರಲ್ಲಿ ಕಳೆಯುವುದಕ್ಕಿಿಂತ ಹೊಸ ಜ್ಞಾಾನವನ್ನು ಕೊಡುವ ಇಂತಹ ಹಬ್ಬದ ಮೂಲಕ ಕಳೆದರೆ ಇನ್ನಷ್ಟು ಅರ್ಥ ಬರುತ್ತದೆ ಎನ್ನುವುದು ಅವರ ಅಭಿಪ್ರಾಾಯ.
ಜಿಲ್ಲಾಾಡಳಿತ, ಸಮನ್ವಯ ತಂಡ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ  ಸಂಯುಕ್ತವಾಗಿ ರೂಪಿಸಿದ ಹಬ್ಬ. 12ರಿಂದ 16ರ ಒಳಗಿನ ಮಕ್ಕಳಿಗಾಗಿ ಎಂಟು ದಿನ ಈ ಹಬ್ಬ ನಡೆಯಲಿದೆ.



ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಶಿಬಿರದ ಉದ್ದೇಶ. ಅವರ ಆಲೋಚನೆಗೆಳಿಗೆ ಹೊಸ ರೂಪ ನೀಡಿ, ಅದನ್ನು ತಿದ್ದಿ-ತೀಡಿ ಉತ್ತಮಗೊಳಿಸುವುದು, ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ವೇದಿಕೆ ಕಲ್ಪಿಿಸುವುದು, ನೈತಿಕವಾಗಿ ಬೆಳೆಯುವಂತೆ ಮಾಡುವ ಒಂದು ಪ್ರಯತ್ನ ಇದು. ಪಾಲಕರು ಮಕ್ಕಳನ್ನು ಒಂದು ವಾರದ ಮಟ್ಟಿಿಗೆ ಇಂತಹ ಶಿಬಿರಕ್ಕೆೆ ಕಳುಹಿಸಿದರೆ ಮಕ್ಕಳಲ್ಲಿ ಹೊಸ ವಿಚಾರಗಳು ಪ್ರಚೋದನೆಯಾಗಲು, ಹೊಸತನ ಬೆಳೆಯಲು, ಅವರ ಪ್ರತಿಭೆಗೆ ವೇದಿಕೆ ಸಿಗಲು ಅನುಕೂಲವಾಗುತ್ತದೆ.
- ಜಿಲ್ಲಾಾಧಿಕಾರಿ ದಯಾನಂದ.  


ನನ್ನಂತಹ ಎಷ್ಟೋೋ ಬಡ ಮಕ್ಕಳು ಬೇಸಿಗೆ ಶಿಬಿರವನ್ನೇ ಕಂಡಿಲ್ಲ. ಏಕೆಂದರೆ ಹಣವಿಲ್ಲದೆ ಬೇಸಿಗೆ ಶಿಬಿರಕ್ಕೆೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಶಾಲೆಯ ಮುಖ್ಯಾಾಧ್ಯಾಾಪಕರು ನಮಗೆ ಈ ಹಬ್ಬದ ಬಗ್ಗೆೆ ಮಾಹಿತಿ ಕೊಟ್ಟು ಹೋಗುವಂತೆ ತಿಳಿಸಿದರು. ಶಿಬಿರದಲ್ಲಿ ಕಲಿಸಲ್ಪಡುವ ವಿವಿಧ ವಿಷಯಗಳು ಸಹ ನನಗೆ ಆಸಕ್ತಿಿ ಹುಟ್ಟಿಿಸಿದವು. ಪಾಲಕರು ಶಿಬಿರಕ್ಕೆೆ ನಾನು ಹೋಗಲು ಒಪ್ಪಿಿದರು. ಇಲ್ಲಿನ ಚಟುವಟಿಕೆ ಮತ್ತು ಮಕ್ಕಳ ಉತ್ಸಾಾಹ ಕಂಡು ಖುಷಿಯಾಗುತ್ತಿಿದೆ. 
- ಸುಷ್ಮಾಾ, ಡಿವಿಎಸ್ ಹೈಸ್ಕೂಲು  ವಿದ್ಯಾಾರ್ಥಿನಿ
...............................

published on 13-5.19

Saturday, 11 May 2019



 ಅಮ್ಮ ಅಮೃತರ್ವಣಿ, ಆನಂದದಾುನಿ

  ನಾಳೆ "ಶ್ವ ಅಮ್ಮಂದಿರ ದಿನ. ಈ ನಿ"ುತ್ತ ಒಂದು ಬರಹ






ಅಮ್ಮನ ಗದರಿಕೆ, ಬೆದರಿಕೆ, ಬೈಗುಳ, ಏಟು ಮಗುವನ್ನು ಬಹುಕಾಲ ನೋುಸುವುದಿಲ್ಲ. ಹಾಗೆ ನೋುಸಲು ಅಮ್ಮ ಬಿಡುವುದಿಲ್ಲ. ಎಷ್ಟೋೋ ಅಮ್ಮಂದಿರು ಮಕ್ಕಳನ್ನು ಶಿಕ್ಷಿಸಿ ಪಶ್ಚಾಾತ್ತಾಾಪ ಪಡುತ್ತಾಾರೆ; ತಾವೇ ಅಳುತ್ತಾಾರೆ. ಅಮ್ಮನ ಒಂದು ಸ್ಪರ್ಶ, ಒಂದು ನೋಟ, ಒಂದು ಮಾತು ಮಕ್ಕಳ ನೋವನ್ನು ಮರೆಸುತ್ತದೆ.  
ಅವಳು ಪ್ರೀತಿಯ ಸಂಕೇತ; ತ್ಯಾಾಗದ ಸಂಕೇತ. ಹೆಣ್ಣಿಿನ ಒಡಲು ಕರುಣೆಯ ಕಡಲು. ಅಪಾರಂಪಾರವಾದ ಹೆಗ್ಗಡಲು. ಅದು ಅಮೃತ ತುಂಬಿದ ಹಾಲ್ಗಡಲು. ತಾುಯನ್ನು ಅಮ್ಮ ಎನ್ನುತ್ತೇವೆ. ಅಮ್ಮ  ಅಮೃತಮು; ಪ್ರೇಮಮು; ಆನಂದಮು


ಆದಿ ಶಂಕರಾಚಾರ್ಯರು "ಕುಪುತ್ರೋೋ ಜಾಯೇತ ಕುಮಾತಾ ನ ಭವತಿ" ಎಂದು ದನಿಯೆತ್ತಿಿ ಸಾರಿದರು. "ಮಾತೃದೇವೋ ಭವ" ಎಂಬ ಮಾತನ್ನೂ  ಕೇಳಿದ್ದೇವೆ. ’ಹೆತ್ತ ತಾುಗೆ ಹೆಗ್ಗಣ ಮುದ್ದು’, ’ತಾುಗಿಂತ ಬಂಧು"ಲ್ಲ; ಉಪ್ಪಿಿಗಿಂತ ರುಚಿುಲ್ಲ’, ತಾುಯಂತೆ ಮಗಳು; ನೂಲಿನಂತೆ ಸೀರೆ’ ’ಮನೆಯೆ ಮೊದಲ ಪಾಠಶಾಲೆ, ಜನ ತಾನೆ ಮೊದಲ ಗುರುವು, ಜನನಿುಂದ ಪಾಠ ಕಲಿತ ನಾವೇ ಧನ್ಯರು’ -ಇವೆಲ್ಲ ತಾಯ್ತನದ "ರಿಮೆ ಗರಿಮೆಯನ್ನು ಎತ್ತಿಿಸಾರುವ  ನಲ್ನುಡಿಗಳು!
ಅಮ್ಮ ಬೇರೆಯಲ್ಲ; ಅಮೃತ ಬೇರೆಯಲ್ಲ. ಅಮ್ಮ ಎಂದರೆ ಅಮೃತ; ಅಮೃತ ಎಂದರೆ ಅಮ್ಮ. ಒಂದು ಎರಡಾದ ಬಗೆುದು; ಎರಡು ಒಂದಾದ ಪರಿುದು. ಅಮ್ಮ ಹುಟ್ಟುತ್ತಾಾಳೆ-ಸಾಯುವುದಿಲ್ಲ. ಏಕೆಂದರೆ ಅಮ್ಮ=ಅ-ಮೃತ. ಅಮೃತ ಕುಡಿದವರು ಸಾಯುವುದಿಲ್ಲ-ಅವರು ಅಮರ. "ಮೃತ್ಯೋೋರ್ಮಾ ಅಮೃತಂ ಗಮಯ" - ಇದು ನಮ್ಮ ಪ್ರಾಾರ್ಥನೆ. ಪ್ರಾಾರ್ಥನೆ ಫಲಿಸುವುದು ಅಮ್ಮನ ಕರುಣೆುಂದ; ಅಮೃತ ಪಾನದಿಂದ. ಅಮ್ಮ ಪ್ರೇಮದ ಕಡಲು; ಮಮತೆ ತುಂಬಿದ ಅಮೃತದ ಒಡಲು. ಅಮೃತ ಕಾಣುವುದಿಲ್ಲ; ಅದನ್ನು ಪಡೆಯಲು ಹಾಲ್ಗಡಲು ಕಡೆಯಬೇಕು. ಅಮ್ಮನ ಒಡಲು ಅಮೃತದ ಹಾಲ್ಗಡಲು; ಆದರೆ ಅದನ್ನು ಕಡೆಯಬೇಕಿಲ್ಲ. ಅಮೃತವೇ ಅಮೃತ ಅಮ್ಮನ ಒಳ ಹೊರಗೆಲ್ಲ! ಅಮ್ಮನ ಬಳಿ ಹೋದರೆ ಸಾಕು-ಮಮತೆಯ ಹೊಳೆಯನ್ನೇ ಮೊಗೆಮೊಗೆದು ಧಾರೆಯೆರೆಯುತ್ತಾಾಳೆ. ಒಡಲಾಳಕ್ಕೆೆ ಇಳಿದೆವೋ - ತನ್ನೊೊಳಗೆ ತುಂಬಿಟ್ಟುಕೊಳ್ಳುತ್ತಾಾಳೆ. ಒಡಲಾಳಕ್ಕೆೆ ಹೋಗಬೇಕಾದವರು ನಾವು; ಅಮೃತವನ್ನು ಪಡೆಯಬೇಕಾದವರು ನಾವು; ಅಮರರಾಗಬೇಕಾದವರು ನಾವು!
ನಾವು ಅಮ್ಮನ ಒಡಲೊಳಗೆ ಇದ್ದವರು. "ೀಗಾಗಿ ಅಮೃತದ ಬಿಂದುಗಳು. ಅಮ್ಮ ಸಿಂಧು; ನಾವು ಬಿಂದು. ಬಿಂದು ಸಿಂಧುವಾಗುವುದು ಮತ್ತೆೆ ಒಡಲಾಳಕ್ಕೆೆ ಇಳಿದಾಗ. "ೀಗಾಗಿಯಾ ನಮ್ಮ "ರಿಯರು ನಮ್ಮನ್ನು "ಅಮೃತಸ್ಯ ಪುತ್ರಃ" ಎಂದರು.
ಹೌದು-ನಾವು ಅಮ್ಮನ ಒಳಗಿದ್ದೆೆವು. ಆ ಅಮ್ಮ ತಪಸ್ವಿಿನಿಯಾಗಿದ್ದಳು. ನಮ್ಮ ಬೆಳವಣಿಗೆಗಾಗಿ, ಯೋಗಕ್ಷೇಮಕ್ಕಾಾಗಿ ಕಟ್ಟೆೆಚ್ಚರದಿಂದಿದ್ದಳು. ಅವಳ ಆಹಾರ-"ಹಾರ, ನಡೆ-ನುಡಿ, ಚಿಂತೆ-ಚಿಂತನೆ ಎಲ್ಲವೂ ನಮ್ಮನ್ನು ಕುರಿತೇ. ಅವಳು ಕಣ್ಮುಚ್ಚಿಿದ ತಪಸ್ವಿಿನಿಯಲ್ಲ; ಆಕೆ ಮ್ಯೆೆಮನವೆಲ್ಲ ಕಣ್ಣಾಾಗಿದ್ದ ತಪಸ್ವಿಿನಿ. ಅವಳ ಕಣ್ಗಾಾಪು ನಮಗೆ ಶ್ರೀರಕ್ಷೆ. ಆಗ ನಾವು ಅಮ್ಮನ ತಪಸ್ಸನ್ನು, ಕಣ್ಗಾಾಪನ್ನು,, ಶ್ರೀರಕ್ಷೆಯನ್ನು ಕಾಣಲಿಲ್ಲ. ಏಕೆಂದರೆ ಒಳಗಿದ್ದ ನಾವು ಆಗ ಕಣ್ತೆೆರೆದಿರಲಿಲ್ಲ.
ಒಳಗಿದ್ದ ನಾವು ಹೊರಬಂದೆವು; ಹೊರಬೆಳಕನ್ನು ಕಂಡೆವು. ಆ ಬೆಳಕಲ್ಲಿ ಅಮ್ಮನನ್ನು ಕಂಡೆವು. ಏನೋ ಎಳೆತ; ಏಕೋ ಸೆಳೆತ! ನಮಗಿದು ಅರ್ಥವಾಗಲಿಲ್ಲ. ಆದರೆ ನಮ್ಮ ನೋಟ ವ್ಯರ್ಥವಾಗಲಿಲ್ಲ. ಅಮ್ಮ ತೆಗೆದಪ್ಪಿಿಕೊಂಡಳು; ಬಿಗಿದಪ್ಪಿಿಕೊಂಡಳು; ಹಾಲೂಡಿಸಿದಳು; ತೊಟ್ಟಿಿಲಲ್ಲಿ ಮಲಗಿಸಿ ಲಾಲಿ ಹಾಡಿದಳು. ನಾವು ಹಾಯಾಗಿ ನಿದ್ದೆೆ ಮಾಡಿದೆವು. ಮತ್ತೆೆ ಎಚ್ಚರಾುತು. ಕೈಕಾಲು ಬಡಿದೆವು. ಅಮ್ಮ ಓಡೋಡಿ ಬಂದಳು. ಮತ್ತದೇ ಬೆಚ್ಚನಪ್ಪುಗೆ; ಎದೆಹಾಲು; ಜೋಗುಳದ ಇನಿದನಿ; ನಮಗರಿ"ಲ್ಲದ ಅ"ುತಾನಂದ! ನಾವು ಕಣ್ತೆೆರೆದೆವು; ಮನಸ್ಸನ್ನೂ ತೆರೆದೆವು. ಎಚ್ಚರಾದಾಗಲೆಲ್ಲ ಆನಂದಕ್ಕಾಾಗಿ, ಆನಂದದ ಕ್ಷಣಕ್ಕಾಾಗಿ ಚಡಪಡಿಕೆ. ಅಮ್ಮ ಕಾಣದೆ ಹೋದರೆ ಅಳು. ಅಳು ನಮ್ಮ ಆಗಿನ ಭಾಷೆ. ಅಮ್ಮನಿಗಷ್ಟೇ ಅದು ಗೊತ್ತು. ಹೌದು- ನಾ"ೀಗ ಕಣ್ತೆೆರೆದೆವು; ಅಮ್ಮನ ಕಣ್ಬೆೆಳಕನ್ನು ಕಂಡೆವು. ಅಲ್ಲಿ ನಮ್ಮನ್ನೇ ನಾವು ಕಂಡೆವು. ಅಮ್ಮನ ಕಣ್ಣೊೊಳಗೆ ನಾವು ಸೇರಿಕೊಡೆವು. ಅಥವಾ ಅಮ್ಮನೇ ನಮ್ಮನ್ನು ತುಂಬಿಕೊಂಡಳೋ...? ಯಾರಿಗೆ ಗೊತ್ತು? ಅಮ್ಮನ ಕಣ್ಬೆೆಳಕಲ್ಲಿ ನಮ್ಮ ಉದಯ!
‘ಅಮ್ಮ’ - ಇದು ಆಕೆಯೇ ನಮಗೆ ಕಲಿಸಿದ ಮೊದಲ ಮಾತು. ಈ ಮಾತು ಕಲಿಯುವಾಗ ನಾವು ನೋಡುತ್ತಿಿದ್ದುದು ಅಮ್ಮನ ತುಟಿಯನ್ನು; ಕೇಳುತ್ತಿಿದ್ದುದು ಅವಳ ಕೊರಳ ನಾದವನ್ನು; ಅನುಭ"ಸುತ್ತಿಿದ್ದುದು ನಾದದ ಮೋದವನ್ನು. ’ಅಮ್ಮ’ ಎಂಬ ಸೊಲ್ಲು ನಮಗೆ   ಮಂತ್ರವಾುತು. ಮಂತ್ರ ಜಪಿಸುತ್ತ ಹೋದಂತೆ ಸಿದ್ಧಿಿಯಾುತು. ’ಅಮ್ಮ’ ಎಂದು ಕರೆದಾಗಲೆಲ್ಲ ಅವಳ ದರ್ಶನವಾುತು; ಸ್ಪರ್ಶವಾುತು; ಮೈಬಿಸುಪು "ತವಾುತು; ಆಕೆಯ ತೊಡೆಯೇ ತೊಟ್ಟಿಿಲಾುತು; ಎದೆ ನಲಿಯವ ಅಂಗಣವಾುತು. ಅಲ್ಲಿ ನಾವು ಹಸಿವು, ನೋವು, ನೀರಡಿಕೆ ಮರೆತೆವು; ನಮ್ಮನ್ನು ನಾವೇ ಮರೆತೆವು!
ಈಗ ಏನೇನೋ ಹುಡುಗಾಟ; ಏನೇನೋ ಹುಡುಕಾಟ. ಹುಡುಗಾಟ ಏನೆಂದು ಗೊತ್ತಿಿಲ್ಲ; ಹುಡುಕಾಟ ಏಕಾಗಿ ಗೊತ್ತಿಿಲ್ಲ. ಗೊತ್ತಿಿಲ್ಲವೆಂಬುದೂ ಗೊತ್ತಿಿಲ್ಲ. ಅಮ್ಮ ಗದರಿಸಿ ನೋಡಿದಳು; ಬೈದು ಹೇಳಿದಳು; ಏಟೂ ಕೊಟ್ಟಳು. ಒಮ್ಮೊೊಮ್ಮೆೆ ನಮ್ಮ ಪಾಡಿಗೆ ಬಿಟ್ಟು ಅನುಭವದಿಂದ ಕಲಿಯಲಿ ಎಂದು ಎಡೆಮಾಡಿಕೊಟ್ಟಳು. ಇದು ಅಮ್ಮ ಕಲಿಸುವ ಕ್ರಮ.
ಅಮ್ಮನ ಗದರಿಕೆ, ಬೆದರಿಕೆ, ಬೈಗುಳ, ಏಟು ಮಗುವನ್ನು ಬಹುಕಾಲ ನೋುಸುವುದಿಲ್ಲ. ಹಾಗೆ ನೋುಸಲು ಅಮ್ಮ ಬಿಡುವುದಿಲ್ಲ. ಎಷ್ಟೋೋ ಅಮ್ಮಂದಿರು ಮಕ್ಕಳನ್ನು ಶಿಕ್ಷಿಸಿ ಪಶ್ಚಾಾತ್ತಾಾಪ ಪಡುತ್ತಾಾರೆ; ತಾವೇ ಅಳುತ್ತಾಾರೆ. ಅಮ್ಮನ ಒಂದು ಸ್ಪರ್ಶ, ಒಂದು ನೋಟ, ಒಂದು ಮಾತು ಮಕ್ಕಳ ನೋವನ್ನು ಮರೆಸುತ್ತದೆ. ಆಕೆ ’ಅಮೃತರ್ವಣಿ’, ’ಆನಂದದಾುನಿ!
ತಾು ಪ್ರೀತಿಯ ಸಂಕೇತ; ತ್ಯಾಾಗದ ಸಂಕೇತ. ಹೆಣ್ಣಿಿನ ಒಡಲು ಕರುಣೆಯ ಕಡಲು. ಅಪಾರಂಪಾರವಾದ ಹೆಗ್ಗಡಲು. ಅದು ಅಮೃತ ತುಂಬಿದ ಹಾಲ್ಗಡಲು. ತಾುಯನ್ನು ಅಮ್ಮ ಎನ್ನುತ್ತೇವೆ. ಅಮ್ಮ  ಅಮೃತಮು; ಪ್ರೇಮಮು; ಆನಂದಮು.
ಶರಣ ಸಿದ್ದರಾಮಯ್ಯನ ವಚನವನ್ನೊೊಮ್ಮೆೆ ನೋಡಿ:
ಹೆತ್ತಳವ್ವೆೆ ಸಕಲ ಬ್ರಹ್ಮಾಾಂಡಗಳ
ಅವ್ವೆೆ ಹೆತ್ತು ಹೆಸರಿಡಲರಿಯಳು
ಅವ್ವೆೆ ಚಿತ್ರ "ಚಿತ್ರವಾಗಿ
ಅವ್ವೆೆ ಮತ್ತೆೆ ತನ್ನ ಹೆಸರಿಟ್ಟಳು
ಚಿತ್ತದಾ ಕಥನದಿಂದ ಮತ್ತೆೆ ಶುದ್ಧನಾಗೆಂದಳು
ಕಪಿಲಸಿದ್ಧ ಮಲ್ಲಿನಾಥವ್ವೆೆ
ತಾುಯೇ ಸರ್ವಸ್ವವೆಂಬುದು, ಇಹಪರವೆಂಬುದು ಈ ವಚನದಿಂದ ವೇದ್ಯ.
ಯಾರನ್ನು ನಾವು ದೇವರೆನ್ನುತ್ತೇವೋ, ಮಹಾತ್ಮರೆನ್ನುತ್ತೇವೋ ಅವರ ಬದುಕಿನಲ್ಲಿ ಅವರ ತಾಯಂದಿರ ಸ್ಥಾಾನ "ರಿದು. ರಾಮ, ಕೃಷ್ಣ, ಬುದ್ಧ, ಏಸು, ಪೈಗಂಬರ್, ಮಹಾ"ೀರ, ಶಂಕರ, ರಾಮಾನುಜ, ಮಧ್ವ, ರಾಮಕೃಷ್ಣ, "ವೇಕಾನಂದ, ಬಸವಣ್ಣ, ಶಿವಾಜಿ, ಗಾಂಧಿ, ಅರ"ಂದ - ಇವರೆಲ್ಲರ ಜೀವನಗಾಥೆಯ "ಂದೆ ತಾಯಂದಿರ ಮಾರ್ಗದರ್ಶನದ ಬೆಳಕಿದೆ.

published on 11-5.19
................................