ಬನ್ನಿಿ ಮಾವು, ಹಲಸು ಮೇಳಕ್ಕೆೆ
ಇಂದಿನಿಂದ ಮೂರು ದಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು, ಹಲಸು, ಜೇನು ಮೇಳ ಆಯೋಜನೆಗೊಂಡಿದೆ. ಜಿಲ್ಲೆೆಯ ರೈತರಿಗೆ ಮಾವು, ಹಲಸು, ಜೇನು ಮತ್ತು ಸಾವಯವ ಪದಾರ್ಥಗಳ ವಿವಿಧ ಬಗೆಯ ತಳಿಗಳು ಹಾಗೂ ಉತ್ಪನ್ನಗಳನ್ನು ಪರಿಚಯಿಸಲು ತೋಟಗಾರಿಕೆ ಇಲಾಖೆಯು ಈ ಮೇಳವನ್ನು ಹಮ್ಮಿಿಕೊಂಡಿದೆ. ವಿವಿಧ ತಳಿಗಳನ್ನು ಪರಿಚಯಿಸುವುದರ ಮೂಲಕ, ಮಾರುಕಟ್ಟೆೆ ಕಲ್ಪಿಿಸುವುದು, ಮತ್ತು ರೈತರಲ್ಲಿ ಈ ಬೆಳೆ ಬೆಳೆಯಲು ಆಸಕ್ತಿಿ ಮೂಡಿಸುವುದು ಮೇಳದ ಮುಖ್ಯ ಉದ್ದೇಶ.
ಈಗ ಮಾವಿನ ಮತ್ತು ಹಲಸಿನ ಹಣ್ಣಿಿನ ಸೀಜನ್. ಯಾವ ಹಳ್ಳಿಿಗೆ ಕಾಲಿಟ್ಟರೂ ಮಾವು, ಹಲಸಿನ ಸುವಾಸನೆ ಗಮನಸೆಳೆಯುತ್ತದೆ, ಬಾಯಲ್ಲಿ ನೀರೂರಿಸುತ್ತದೆ. ಇನ್ನು ಪೇಟೆಯಲ್ಲಿ ಮಾರುಕಟ್ಟೆೆಯಲ್ಲಂತೂ ಎಲ್ಲರ ಚಿತ್ತ ಹರಿಯುವುದೇ ರಸ್ತೆೆ ಬದಿಯಲ್ಲಿ ಹಾಕಿಕೊಂಡು ಮಾರಾಟ ಮಾಡುವ ಮಾವು ಮತ್ತು ಹಲಸಿನ ಹಣ್ಣಿಿನ ಮೇಲೆ. ಈ ಎರಡೂ ಹಣ್ಣುಗಳು ಒಂದೇ ಋತುಮಾನದಲ್ಲಾಾಗುವ ಮೂಲಕ ಹಣ್ಣುಪ್ರಿಿಯರಿಗೆ, ಅದರಲ್ಲೂ ಬೇಸಿಗೆ ಕಾಲದಲ್ಲಿ ಹೆಚ್ಚು ಇಷ್ಟವಾಗುವಂತಾಗಿದೆ.
ರಾಜ್ಯದ ಹಲವೆಡೆ ಮಾವು ಮತ್ತು ಹಲಸನ್ನು ನೈಸರ್ಗಿಕವಾಗಿ ಹಣ್ಣು ಮಾಡಿ ಮಾರಾಟ ಮಾಡಲಾಗುತ್ತಿಿದೆ. ಏಕೆಂದರೆ, ಮಾರುಕಟ್ಟೆೆಯಲ್ಲಿ ರಾಸಾಯನಿಕ (ಕ್ಯಾಾಲ್ಸಿಿಯಂ ಕಾರ್ಬೈಡ್) ಮೂಲಕ ಹಣ್ಣಾಾಗಿಸಿ ಜನರಿಗೆ ಮಾರಾಟ ಮಾಡಲಾಗುತ್ತಿಿದೆ. ಈ ಹಣ್ಣುಗಳು ವಿಷಕಾರಿ. ಆದರೂ ಜನರು ಗೊತ್ತಿಿದ್ದೋೋ, ಗೊತ್ತಿಿಲ್ಲದೆಯೋ ಖರೀದಿಸಿ ತಿನ್ನುತ್ತಿಿದ್ದಾಾರೆ. ಇವು ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರುವಂತಹವು ಎನ್ನುವುದೂ ಅಷ್ಟೇ ಕಟು ಸತ್ಯ.
ಜನರಿಗೆ ಇಂತಹ ರಾಸಾಯನಿಕ ಹಣ್ಣು ಕೊಡುವುದಕ್ಕಿಿಂತ ನೈಸರ್ಗಿಕವಾದ ಹಣ್ಣನ್ನು ಮಾರಾಟ ಮಾಡಲು ತೋಟಗಾರಿಕಾ ಇಲಾಖೆಯ ಅಂಗ ಸಂಸ್ಥೆೆಯಾದ ರಾಜ್ಯ ಮಾವು ಅಭಿವೃದ್ಧಿಿ ಮತ್ತು ಮಾರಾಟ ಮಂಡಳಿ ಈ ವರ್ಷವೂ ಮುಂದಾಗಿದೆ. ಮಾವು ಮತ್ತು ಹಲಸಿನ ಮೇಳ ಏರ್ಪಡಿಸುವ ಮೂಲಕ ಜನರ ಬಳಿಯೇ ಹೋಗಿ ಪರಿಶುದ್ಧ ಮಾವು ಕೊಡುತ್ತಿಿದೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ವಿವಿಧ ತಳಿಯ ಮಾವು ಇಲ್ಲಿ ಲಭ್ಯವಿರುತ್ತವೆ.
ಈಗಾಗಲೇ ರಾಜ್ಯದ ಹಲವೆಡೆ ಈ ಮಂಡಳಿ ಮಾವಿನ ಮೇಳ ನಡೆಸಿ ಯಶಸ್ಸನ್ನು ಕಂಡಿದೆ. ಈಗ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಈ ಮೇಳ ಇಂದಿನಿಂದ ಮೂರು ದಿನ ನಡೆಯಲಿದೆ. ಇಂದು ಸಂಜೆ ಇದು ಉದ್ಘಾಾಟನೆಯಾದ ಬಳಿಕ ಶನಿವಾರ ಮತ್ತು ಭಾನುವಾರದವರೆಗೆ ಮಾರಾಟ ನಡೆಯಲಿದೆ. ಜಿಲ್ಲೆೆಯ ಜನರಿಗೆ ಅತ್ಯುತ್ತಮ ಮಾವಿನ ಹಣ್ಣು, ಹಲಸು ಖರೀದಿಗೆ ಇದು ಸಕಾಲ. ಜಿಲ್ಲೆೆಯ ಮಾವು ಬೆಳೆಗಾರರು ಸ್ಥಳೀಯವಾಗಿ ಬೆಳೆದ ವಿವಿಧ ತಳಿಗಳನ್ನು ಹಾಗೂ ರಾಜ್ಯದಲ್ಲಿ ಮಾವು ಬೆಳೆಯುವ ಇತರ ಪ್ರಮುಖ ಜಿಲ್ಲೆೆಗಳಾದ ರಾಮನಗರ, ಚಿಕ್ಕಬಳ್ಳಾಾಪುರ ಮತ್ತು ಕೋಲಾರ ಮೊದಲಾದ ಕಡೆಗಳಿಂದ ಸುಮಾರು 18 ರಿಂದ 20 ತಳಿಯ ಮಾವನ್ನು ಇಲ್ಲಿ ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು. ಸ್ಥಳೀಯ ರೈತರು ಬೆಳೆದ ಹಣ್ಣುಗಳನ್ನು ವಿವಿಧ ಮಳಿಗೆಗಳಲ್ಲಿ ಮತ್ತು ಇತರ ಜಿಲ್ಲೆೆಯ ರೈತರ ಹಣ್ಣುಗಳನ್ನು ಸುಮಾರು 15 ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು.
ಜಿಲ್ಲೆೆಯ ರೈತರು ಹೊಸ ತಳಿಗಳನ್ನು ಪರಿಚಯಿಸುವುದರೊಂದಿಗೆ ಮಾವು ಮೇಳದಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬೆಳೆಯಬಹುದಾದ ವಿವಿಧ ತಳಿಗಳು, ಹೈಬ್ರಿಿಡ್ಗಳನ್ನು ಪ್ರದರ್ಶನಕ್ಕಿಿಡಲಾಗುವುದು. ಇವೆಲ್ಲವೂ ರಾಸಾಯನಿಕ ಮುಕ್ತ ಹಣ್ಣುಗಳೆನ್ನುವುದು ವಿಶೇಷ. ಜೊತೆಗೆ ಮಾವು ಬೆಳೆಯನ್ನು ಜಿಲ್ಲೆೆಯಲ್ಲಿಉತ್ತೇಜಿಸುವುದು ಈ ಮೇಳದ ಉದ್ದೇಶವಾಗಿದೆ.
ಜಿಲ್ಲೆೆಯಲ್ಲಿ ಸೊರಬ, ಶಿಕಾರಿಪುರ ತಾಲೂಕಿನಲ್ಲಿ ವಿವಿಧ ತಳಿಯ ಮಾವುಗಳನ್ನು ಬೆಳೆಯಲಾಗುತ್ತಿಿದೆ. ಜಿಲ್ಲೆೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಾಗುವುದು ಇಲ್ಲಿಯೇ. ಈ ಬಾರಿ ಅತಿ ಹೆಚ್ಚು ಮಾವು ರಾಜ್ಯದಲ್ಲಿದೆ. ಮಾರುಕಟ್ಟೆೆಯಲ್ಲೂ ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತಿಿದೆ. ಆದರೆ ನೈಸರ್ಗಿಕ ಹಣ್ಣಿಿನ ರುಚಿಯ ಮುಂದೆ ರಾಸಾಯನಿಕ ಹಣ್ಣಿಿನ ರುಚಿಯೇನೂ ಅಲ್ಲ. ಆದ್ದರಿಂದ ಮೇಳದಲ್ಲಿಯೇ ಖರೀದಿಸಲು ಅವಕಾಶ ಕಲ್ಪಿಿಸಲಾಗಿದೆ.
ಇದರ ಜೊತೆಗೆ ಜಿಲ್ಲೆೆಯಲ್ಲಿ ಬೆಳೆಯುತ್ತಿಿರುವ ವಿವಿಧ ತಳಿಯ ಹಲಸು ಮತ್ತು ಹಲಸಿನ ಉತ್ಪನ್ನಗಳನ್ನು ಸಹ ಮಾರಾಟ ಮತ್ತು ಪ್ರದರ್ಶನಕ್ಕಿಿಡಲಾಗುವುದು. ದೊಡ್ಡಬಳ್ಳಾಾಪುರ ತಾಲೂಕಿನ ತೂಬುಗೆರೆ ಹಲಸು ರೈತರ ಸಂಘವು ವಿವಿಧ ತಳಿಯ ಹಲಸು ಬೆಳೆಯುವುದರಲ್ಲಿ ಎತ್ತಿಿದ ಕೈ. ಇವರು ಚಂದ್ರ ಹಲಸು, ರುದ್ರಾಾಕ್ಷಿ ಹಲಸು ಮೊದಲಾದವನ್ನು ಇಲ್ಲಿಗೆ ತರಲಿದ್ದಾಾರೆ. ಇದರಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳನ್ನೂ ಇಲ್ಲಿ ಪ್ರದರ್ಶಿಸಲಾಗುವುದು. ಜೊತೆಗೆ ಕಸಿ ಮಾಡಿದ ಸಸಿಗಳೂ ಸಹ ಮಾರಾಟಕ್ಕೆೆ ಲಭ್ಯವಿರುತ್ತವೆ. ಜಿಲ್ಲೆೆಯಲ್ಲಿ ಸಾವಯವವಾಗಿ ಬೆಳೆದ ಹಲಸನ್ನೂ, ಅದರ ಉಪ ಉತ್ಪನ್ನವನ್ನೂ ಸಹ ಮಾರಾಟಕ್ಕೆೆ ಇಡಲಾಗುವುದು.
ಮಲೆನಾಡು ಜಿಲ್ಲೆೆ ಶಿವಮೊಗ್ಗದಲ್ಲಿ ಜೇನುಗಾರಿಕೆಯನ್ನು ಉತ್ತೇಜಿಸಲು ಹೆಚ್ಚು ಅವಕಾಶವಿದೆ. ಈ ಹಿನ್ನೆೆಲೆಯಲ್ಲಿ ರೈತರಲ್ಲಿ ಆಸಕ್ತಿಿ ಮೂಡಿಸಲು ಜೇನುಮೇಳವನ್ನೂ ಸಹ ಇಲ್ಲಿ ಆಯೋಜಿಸಲಾಗಿದೆ. ರೈತರು ಉತ್ಪಾಾದಿಸುತ್ತಿಿರುವ ಜೇನುತುಪ್ಪ, ವಿವಿಧ ಬಗೆಯ ಜೇನು ಉತ್ಪನ್ನವನ್ನೂ ಸಹ 4 ಮಳಿಗೆಗಳಲ್ಲಿ ಮಾರಾಟಕ್ಕಿಿಡಲಾಗುವುದು. ಜೇನು ಕೃಷಿ ಕುರಿತು ತರಬೇತಿ, ಹಲಸಿನ ಖಾದ್ಯ ತಯಾರಿಕೆ ತರಬೇತಿ, ಪ್ರಗತಿಪರರೊಂದಿಗೆ ಸಂವಾದ, ಸಾವಯವ ಕೃಷಿ ಬಗ್ಗೆೆ ಚರ್ಚೆ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ.
ಒಟ್ಟಿಿನಲ್ಲಿ, ಜಿಲ್ಲೆೆಯ ಜನರಿಗೆ ಬಾಯಲ್ಲಿ ನೀರೂರಿಸುವ ಮಾವು, ಹಲಸು, ಜೇನು ಮೇಳ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ತಪ್ಪದೇ ಮೇಳವನ್ನು ಸಂದರ್ಶಿಸಿ ಖರೀದಿಸುವ ಮೂಲಕ ಮೇಳವನ್ನು ಹಾಗೂ ಬೆಳೆಗಾರರನ್ನು ಪ್ರೋತ್ಸಾಾಹಿಸಬೇಕಿದೆ.
published on 7th june 2019
................................

No comments:
Post a Comment