ಹೆಸರಿಗೆ ಸ್ಮಾಾರ್ಟ್ ಸಿಟಿ, ಆದರೆ ಊರೆಲ್ಲ ಕಸ
ಶಿವಮೊಗ್ಗ: ನಗರವನ್ನು ಸ್ಮಾಾರ್ಟ್ ಸಿಟಯನ್ನಾಾಗಿ ಮಾಡುವ ಕೆಲಸ ಒಂದೆಡೆ ನಡೆಯುತ್ತಿಿದ್ದರೆ, ಇನ್ನೊೊಂದೆಡೆ ಕಸದ ತೊಟ್ಟಿಿಯನ್ನಾಾಗಿ ಮಾಡುವ ಕೆಲಸವೂ ಅಷ್ಟೇ ಭರದಿಂದ ಸಾಗಿದೆ. ಪಟ್ಟಣದ ತುಂಬಾ ಕಸದ ರಾಶಿಗಳೇ ರಾರಾಜಿಸುತ್ತಿಿವೆ. ಜನಪ್ರತಿನಿಧಿಗಳನ್ನು ಕೇಳಿದರೆ ಅಧಿಕಾರಿಗಳ ಮೇಲೆ, ಅಧಿಕಾರಿಗಳನ್ನು ಕೇಳಿದರೆ ಅದಿಲ್ಲ, ಇದಿಲ್ಲ ಎನ್ನುವ ಮಾಹಿತಿ ಬಿಚ್ಚಿಿಡುತ್ತಿಿದ್ದಾಾರೆ. ಒಟ್ಟಿಿನಲ್ಲಿ ಕಸ ಎಲ್ಲೆೆಡೆ ತುಂಬಿ ಚೆಲ್ಲುತ್ತಿಿದೆ.
ನಗರದ ಯಾವುದೇ ಬಡಾವಣೆಗೆ ಹೋದರೂ ನಿವಾಸಿಗಳು ಕಸದ ಬಗ್ಗೆೆಯೇ ಮಾತನಾಡುತ್ತಿಿದ್ದಾಾರೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಕೆಲಸ ನಡೆಯುತ್ತಿಿಲ್ಲ ಎಂಬ ಮಾತು ಕೇಳಿಬರುತ್ತಿಿದೆ. ಆದರೆ ನೀತಿ ಸಂಹಿತೆಯಲ್ಲಿ ಕಸ ತೆಗೆಯಬಾರದು, ಚರಂಡಿ ಶುಚಿಗೊಳಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಪಾಲಿಕೆಯ ಸದಸ್ಯರು ಇದನ್ನ್ನೆೆಲ್ಲ ಮರೆಮಾಚುತ್ತಿಿದ್ದಾಾರೆ ಜೊತೆಗೆ ಕೆಲಸಗಾರರ ಕೊರತೆ ಇದೆ ಎನ್ನುವ ಮಾಹಿತಿ ಕೊಡುತ್ತಿಿದ್ದಾಾರೆ.
ನಗರದ ಬಸ್ ನಿಲ್ದಾಾಣದಿಂದ ಬೈಪಾಸ್ಗೆ ತೆರಳುವ ಮಂಜುನಾಥ ನಗರ, ಡಿಪೋ ರಸ್ತೆೆಯಲ್ಲಿ ಕಸದ ರಾಶಿ ಹಾಕಿರುವ ಚಿತ್ರವನ್ನು ಇಲ್ಲಿ ಗಮನಿಸಬಹುದು. ಎಲ್ಲಿಂದಲೋ ತಂದು ಇಲ್ಲಿ ಕಸದ ರಾಶಿ ಹಾಕಲಾಗುತ್ತಿಿದೆ. ಸೊಳ್ಳೆೆಗಳ ಕಾಟ, ದುರ್ವಾಸನೆ ಮಧ್ಯೆೆ ಜನರ ಬದುಕು ಸಾಗಿದೆ. ಇಲ್ಲಿ ಯಾರನ್ನು ಕೇಳುವುದು, ಬಿಡುವುದು ಎನ್ನುವುದೇ ಸ್ಥಳೀಯರ ಸಮಸ್ಯೆೆಯಾಗಿದೆ. ಹಲವೆಡೆ ಕಸಕ್ಕೆೆ ಬೆಂಕಿ ಹಾಕಲಾಗುತ್ತಿಿದೆ. ಕಸ ಒಯ್ಯುವವರು ಯಾರೂ ಬಾರದ ಕಾರಣ ಸ್ಥಳೀಯರು ಸಮಸ್ಯೆೆಯಿಂದ ಪಾರಾಗಲು ಬೆಂಕಿ ಹಾಕುತ್ತಿಿದ್ದಾಾರೆ. ಏಕೆಂದರೆ, ಸೊಳ್ಳೆೆಯ ಕಾಟ ತಡೆಯಲಾಗದಷ್ಟು ನಿರ್ಮಾಣವಾಗಿದೆ.
ನಗರದ ಬಡಾವಣೆಗಳ ಚರಂಡಿಯಲ್ಲಿ ಕಸ ಕಟ್ಟಿಿ ತಿಂಗಳೇ ಕಳೆದರೂ ಅದನ್ನು ಶುಚಿಗೊಳಿಸಿಲ್ಲ. ಕಾರ್ಪೊರೇಟರ್ಗಳಿಗೆ ಹೇಳಿದರೆ ಕಳುಹಿಸುತ್ತೇವೆ ಎನ್ನುತ್ತಾಾರಾದರೂ ಬರುವವರು ಯಾರೂ ಇಲ್ಲ. ಅಧಿಕಾರಿಗಳು ಸಮಸ್ಯೆೆಯ ನೆಪ ಹೇಳುತ್ತಾಾರೆ. ಕಾಪೊರೇಟರ್ಗಳು ಅಧಿಕಾರಗಳ ಮೇಲೆ ಜವಾಬ್ದಾಾರಿ ಹೊರಿಸುತ್ತಿಿದ್ದಾಾರೆ.
ಅಸಡ್ಡೆೆಯಿಂದ ಕೆಲಸ ಮಾಡುತ್ತಿಿರುವುದು ಮಾತ್ರ ಸಾಬೀತಾಗುತ್ತಿಿದೆ. ಜನಸಾಮಾನ್ಯರ ಸಮಸ್ಯೆೆಗೆ ಇಲ್ಲಿ ಬೆಲೆಯೇ ಇಲ್ಲ. ಕಸವನ್ನು ಒಯ್ಯುವ ಗಾಡಿಗಳಿಗೆ ವಾರ್ಷಿಕವಾಗಿ 1200 ರೂ ಕಟ್ಟಿಿಸಿಕೊಳ್ಳಲಾಗುತ್ತಿಿದೆ. ಆದರೆ ನಿಗದಿತ ವೇಳೆಗೆ ಕಸ ಒಯ್ಯುವವರು ಬರುತ್ತಿಿಲ್ಲ. ಎಷ್ಟೋೋ ಕಡೆಗೆ ಬರುತ್ತಿಿಲ್ಲ ಎಂಬ ದೂರಿದೆ. ಕೇಳಿದರೆ ಬಂದಿದ್ವಿಿ, ಕಸ ಇರಲಿಲ್ಲ ಎಂಬ ಉತ್ತರ ಬೇರೆ. ಪಾಲಿಕೆಯ ಈ ಎಲ್ಲ ನೀತಿಗಳಿಂದ ನಗರ, ಸ್ವಚ್ಛ ನಗರವಾಗುವ ಯಾವ ಸೂಚನೆಯೂ ಕಾಣುತ್ತಿಿಲ್ಲ.
ಬೇಸಿಗೆಯ ಆರ್ಭಟ ಬೇರೆ ವಿಪರೀತವಿರುವುದರಿಂದ ಚರಂಡಿಗಳಲ್ಲಿ ಸೊಳ್ಳೆೆಗಳ ಉತ್ಪಾಾದನೆ ದಿನೇ ದಿನೇ ಹೆಚ್ಚುತ್ತಿಿದೆ. ಮನೆಯೊಳಕ್ಕೆೆ ಕುಳಿತುಕೊಳ್ಳಲಾಗದ ಸ್ಥಿಿತಿ ನಿರ್ಮಾಾಣವಾಗಿದೆ. ಸೊಳ್ಳೆೆ ನಿಯಂತ್ರಣಕ್ಕೆೆ ಕ್ರಮವೂ ನಡೆಯುತ್ತಿಿಲ್ಲ. ನೀತಿಸಂಹಿತೆಯ ಹೆಸರಲ್ಲಿ ಯಾರನ್ನೂ ಹೇಳದಂತಾಗಿದೆ. ಯಾರನ್ನೂ ಕೇಳದಂತಾಗಿದೆ. ಕನಿಷ್ಠ ಕಾರ್ಪೊರೇಟರ್ಗಳಾದರೂ ಸ್ಥಳಕ್ಕೆೆ ಹೋಗಿ ಸಮಸ್ಯೆೆ ಕೇಳುವ ಸೌಜನ್ಯ ತೋರಿಸಬಹುದಿತ್ತು. ಪಾಲಿಕೆಯ ಅಧಿಕಾರಿಗಳು ಮತ್ತು ಕಾರ್ಪೊರೇಟರ್ಗಳೆಲ್ಲರೂ ಚುನಾವಣೆಯ ಗುಂಗಿನಿಂದ ಇನ್ನೂ ಹೊರಬಂದಂತೆ ಕಾಣುತ್ತಿಿಲ್ಲ.
ಒಟ್ಟಿಿನಲ್ಲಿ, ಕಸದ ನಗರಿಯಾಗಿ ಶಿವಮೊಗ್ಗ ಮಾರ್ಪಾಡಾಗುತ್ತಿಿದೆ. ಇನ್ನೊೊಂದೆಡೆ, ಸ್ಮಾಾರ್ಟ್ ಸಿಟಿಯ ಕೆಲಸವೂ ಸಾಗಿದೆ.
ಪೌರ ಕಾರ್ಮಿಿಕರ ಸಂಖ್ಯೆೆ ಕಡಿಮೆ ಇದೆ. ಕಸ ಸಾಗಿಸುವ ವಾಹನದ ಕೊರತೆಯೂ ಇದೆ. ಸರ್ಕಾರಕ್ಕೆೆ ಈ ಬಗ್ಗೆೆ ಮಾಹಿತಿ ಕೊಟ್ಟು ಬಹಳ ತಿಂಗಳಾಗಿದೆ. ಇನ್ನೂ ಉತ್ತರ ಸಿಕ್ಕಿಿಲ್ಲ. ಇನ್ನೊೊಂದೆಡೆ, ಅಧಿಕಾರಿಗಳ ಅಸಡ್ಡೆೆಯೂ ಇದೆ. 23ರ ನಂತರ ಈ ಎಲ್ಲ ಸಮಸ್ಯೆೆ ಪರಿಹರಿಸಲಾಗುವುದು.
-ಚನ್ನಬಸಪ್ಪ, ಉಪಮೇಯರ್
published on 15-5.19
No comments:
Post a Comment