Thursday, 16 May 2019



ಇದು ಮಕ್ಕಳ ಕಲರವದ ಲೋಕ


ಬೇಸಿಗೆ ಶಿಬಿರಗಳು ಎಲ್ಲೆೆಡೆ ನಡೆಯುತ್ತಿಿವೆ. ಇಲ್ಲೆೆಲ್ಲ ಸಾವಿರಾರು ರೂಪಾಯಿ ತೆತ್ತು ಕಲಿಯಬೇಕು. ಆದರೆ ಮಕ್ಕಳ ಹಬ್ಬದಲ್ಲಿ ಒಂದು ರೂಪಾಯಿಯನ್ನೂ ಕೊಡಬೇಕಿಲ್ಲ. ಆದರೆ ಜಿಲ್ಲಾಾಡಳಿತ ನಡೆಸುತ್ತಿಿರುವ ವಿಭಿನ್ನವಾಗಿ ನಡೆಯುತ್ತಿಿರುವ ಮಕ್ಕಳ ಹಬ್ಬದಲ್ಲಿ ಮಕ್ಕಳದ್ದೇ ಕಲರವ. ಅವರದ್ದೇ ಲೋಕ. ಅವರ ಪ್ರತಿಭೆ ಬೆಳಗಲು ಇತಿಮಿತಿ ಇಲ್ಲಿಲ್ಲ. ಹಾಡಬಹುದು, ಕುಣಿದು ಕುಪ್ಪಳಿಸಬಹುದು, ಹಿರಿಯರು ಕಲಿಸಿದ್ದನ್ನು ಕಲಿತು ಮಾಡಿ ತೋರಿಸಬೇಕು.  ಮಕ್ಕಳಿಗೆ ಎಲ್ಲೂ ಸಿಗದ ಅಪರೂಪದ ವೇದಿಕೆ ಇದು. ಇದರಿಂದ ವಂಚಿತರಾದರೆ ನಿಜಕ್ಕೂ ಬಹಳಷ್ಟು ಕಳಕೊಂಡಂತೆ.




ಹಬ್ಬ ಎಂದರೆ ಮಕ್ಕಳಿಗೆ ವಿಶೇಷವಾಗಿ ಉತ್ಸಾಾಹ, ಕುತೂಹಲ, ಸಂಭ್ರಮ. ಹಬ್ಬದಲ್ಲಿ ಏನೇನಿರುತ್ತದೆ, ಹೇಗೆ ಆಚರಿಸುತ್ತಾಾರೆ ಎನ್ನುವುದನ್ನು ತಿಳಿದುಕೊಳ್ಳುವ ಆಸಕ್ತಿಿಯೂ ಇರುತ್ತದೆ. ಆದರೆ ಇದು ಮನೆಯಲ್ಲಿ ಆಚರಿಸುವ ಹಬ್ಬವಲ್ಲ, ಬದಲಿಗೆ ಬೇಸಿಗೆ ರಜೆ ಹಿನ್ನೆೆಲೆಯಲ್ಲಿ ಮಕ್ಕಳು ಒಂದು ವಾರವನ್ನು ವಿಶಿಷ್ಟ ಅನುಭವ, ಹೊಸ ಜ್ಞಾಾನ, ವಿವಿಧ ಸ್ಥಳಗಳ ಮತ್ತು ವಿಷಯಗಳ ಪರಿಚಯ ಮಾಡಿಕೊಳ್ಳುವ ಮೂಲಕ ಕಳೆಯುವ ಜ್ಞಾಾನದ ಹಬ್ಬ.
ಬೇಸಿಗೆ ಶಿಬಿರಗಳು ಎಲ್ಲೆೆಡೆ ನಡೆಯುತ್ತಿಿವೆ. ಇಲ್ಲೆೆಲ್ಲ ಸಾವಿರಾರು ರೂಪಾಯಿ ತೆತ್ತು ಕಲಿಯಬೇಕು. ಆದರೆ ಮಕ್ಕಳ ಹಬ್ಬದಲ್ಲಿ ಒಂದು ರೂಪಾಯಿಯನ್ನೂ ಕೊಡಬೇಕಿಲ್ಲ. ಇಲ್ಲೇನಿದ್ದರೂ ಮಕ್ಕಳದ್ದೇ ಕಲರವ. ಅವರದ್ದೇ ಲೋಕ. ಅವರ ಪ್ರತಿಭೆ ಬೆಳಗಲು ಇತಿಮಿತಿ ಇಲ್ಲಿಲ್ಲ. ಹಾಡಬಹುದು, ಕುಣಿಯಬಹುದು, ಹಿರಿಯರು ಕಲಿಸಿದ್ದನ್ನು ಕಲಿತು ಮಾಡಿ ತೋರಿಸಬೇಕು.  ಮಕ್ಕಳಿಗೆ ಎಲ್ಲೂ ಸಿಗದ ಅಪರೂಪದ ವೇದಿಕೆ ಇದು.
ಈ ಹಬ್ಬದಲ್ಲಿ ಏನೇನಿವೆ ಗೊತ್ತೇ?:
 ಹಾಡು, ಆಟ, ಯೋಗ, ಆರೋಗ್ಯ ತಪಾಸಣೆ, ನೀತಿಕಥೆಗಳನ್ನು ಹೇಳುವುದು,  ಸಿನಿಮಾ ವೀಕ್ಷಣೆ, ಕ್ರಾಾಫ್‌ಟ್‌ ಮೇಕಿಂಗ್, ಕ್ರೀಡೆಯಲ್ಲಿ ಭಾಗವಹಿಸುವುದು, ಆರೋಗ್ಯ ಬಗ್ಗೆೆ ಮಾಹಿತಿ, ಗಾಜನೂರು ಅಣೆಕಟ್ಟು ಮತ್ತು ಸಕ್ರೆೆಬೈಲು ಆನೆ ಬಿಡಾರಕ್ಕೆೆ ಭೇಟಿ, ತ್ಯಾಾವರೆಕೊಪ್ಪ ಹುಲಿ- ಸಿಂಹಧಾಮಕ್ಕೆೆ  ಭೇಟಿ,  ಇಸ್ರೇಲ್ ಮಾದರಿ ಕೃಷಿ ಮತ್ತು ಪಶು ಸಂಗೋಪನೆ ಬಗ್ಗೆೆ ಮಾಹಿತಿ,  ಪೊಲೀಸ್ ಠಾಣೆ, ಅಗ್ನಿಿಶಾಮಕ ಠಾಣೆಗೆ ಭೇಟಿ ನೀಡಿ ಅವರ ಕೆಲಸ - ಕಾರ‌್ಯಗಳ ಮತ್ತು ಅವರು ಬಳಸುವ ಆಯುಧಗಳ ಪರಿಚಯ, ಸ್ವಿಿಮ್ಮಿಿಂಗ್ ಫೂಲ್‌ಗೆ ಭೇಟಿ, ಈಜುವುದು, ಶಿವಪ್ಪನಾಯಕ ಅರಮನೆ ಭೇಟಿ, ವೀಕ್ಷಣೆ,  ಟ್ರಾಾಫಿಕ್ ಠಾಣೆಗೆ ಭೇಟಿ, ಸಿಗ್ನಲ್‌ಗಳ ಅರಿವು ಮೂಡಿಸಿಕೊಳ್ಳುವುದು ಮೊದಲಾದವು.
ಇಂತಹ ಒಂದು ಪರಿಕಲ್ಪನೆ ಮೂಡಿದ್ದು ಜಿಲ್ಲಾಾಧಿಕಾರಿ  ಕೆ. ಎ. ದಯಾನಂದ ಮತ್ತು ಸಮನ್ವಯ ತಂಡದ ಮುಖ್ಯಸ್ಥ ಕಾಶೀನಾಥ ಅವರಲ್ಲಿ. ಬಡ ಮಕ್ಕಳು ಬೇಸಿಗೆ ಶಿಬಿರದಿಂದ ವಂಚಿತರಾಗುತ್ತಿಿರುವುದನ್ನು ತಪ್ಪಿಿಸಲು ಮತ್ತು ಬೇಸಿಗೆ ರಜೆಯ ಸದುಪಯೊಗ ಮಾಡಿಕೊಳ್ಳಬೇಕೆಂಬ ದೃಷ್ಟಿಿಯಿಂದ ಈ ಕಾರ‌್ಯಕ್ರಮ ರೂಪಿಸಿದರು. ಲೋಕಸಭೆ ಚುನಾವಣೆಯ ಕೆಲಸದ ಒತ್ತಡದಲ್ಲಿದ್ದರಿಂದ ಆ ಕಾರ‌್ಯಗಳು ಮುಕ್ತಾಾಯವಾದ ನಂತರ ಇದಕ್ಕೆೆ ಚಾಲನೆ ಕೊಡಲಾಗಿದೆ.
ನಗರದ ಹಲವು ಶಾಲೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಅಲ್ಲಿರುವ ಬಡಮಕ್ಕಳಿಗೆ ಈ ಮಕ್ಕಳ ಹಬ್ಬದ ವಿಚಾರ ತಿಳಿಸಿ ಅವರ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗಿದೆ. ಮೇ 12ರಂದು ನಿನ್ನೆೆ ಗಾಂಧಿಪಾರ್ಕಿನಲ್ಲಿ ನಡೆದ ನಡೆದ ಉದ್ಘಾಾಟನೆಯಲ್ಲಿ ಸುಮಾರು 100ರಷ್ಟು ಮಕ್ಕಳು ಹಾಜರಿದ್ದರು. ಈ ಮಕ್ಕಳಲ್ಲಿದ್ದ ಉತ್ಸಾಾಹ, ಪ್ರಪ್ರಥಮ ಬಾರಿಗೆ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಕ್ಕೆೆ ಕುತೂಹಲ ಎಲ್ಲರ ಗಮನಸಸೆಳೆಯುತ್ತಿಿತ್ತು. ಎಷ್ಟು ಉತ್ಸಾಾಹದಿಂದ ಭಾಗವಹಿಸಿದ್ದರೆಂದರೆ ಜಿಲ್ಲಾಾಧಿಕಾರಿಯವರು ಉದ್ಘಾಾಟನೆ ಮಾಡಿ ಆಡಿದ ಕೆಲವು ನೀತಿಯ ಮಾತುಗಳನ್ನು ತುಂಬಾ ಜಾಗರೂಕತೆಯಿಂದ ಕೇಳಿಸಿಕೊಂಡರು. ಅವರ ಮಾತಿಗೆ ಅಷ್ಟೇ ಚುರುಕಾಗಿ ಪ್ರತಿಕ್ರಿಿಯಿಸಿದರು.
ಉದ್ಘಾಾಟನೆಗೆ ಮುನ್ನ ವಿದ್ವಾಾನ್ ಶ್ರೀಧರ್ ಸಂಗೀತದ ಬಗ್ಗೆೆ ಮಾಹಿತಿ ಕೊಟ್ಟು, ಹಾಡುವುದನ್ನೂ ಕಲಿಸಿಕೊಟ್ಟರು. ಹೀಗೆ ಹಾಡು, ಕಥೆ, ಆಟ ಮತ್ತು ಪಾಠವೇ ಇಲ್ಲಿ  ಹಬ್ಬ. ಖುಷಿಯಿಂದ ಮಕ್ಕಳು ದಿನವನ್ನು ವಿವಿಧ ಚಟುವಟಿಕೆಗಳಲ್ಲಿ ಕಳೆದರು. ಸ್ವತಃ ಜಿಲ್ಲಾಾಧಿಕಾರಿಯವರೇ ಮಧ್ಯಾಾಹ್ನದವರೆಗೂ ನಿಂತು ಮಕ್ಕಳ ಉತ್ಸಾಾಹ, ಹಬ್ಬಕ್ಕೆೆ ಸಿಕ್ಕ ಪ್ರತಿಕ್ರಿಿಯೆ ನೋಡಿ ಸಂಸತಪಟ್ಟರು.
ಬೇಸಿಗೆ ಶಿಬಿರಗಳಿಂದ ವಂಚಿತ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಇಂತಹ ಶಿಬಿರವನ್ನು ವೈವಿಧ್ಯಮಯವಾಗಿ ನಡೆಸುವುದರ ಮೂಲಕ ಒಂದು ಉತ್ತಮ ಬೆಳವಣಿಗೆಗೆ ಅವರು ಕಾರಣರಾದಂತಾಗಿದ್ದಾಾರೆ. ಪ್ರತಿವರ್ಷ ಇಂತಹ ಶಿಬಿರವನ್ನು ನಡೆಸುವ ಬಗ್ಗೆೆಯೂ ಸಂಯೋಜಕರಿಗೆ ಸೂಚಿಸಿದ್ದಾಾರೆ. ಬೇಸಿಗೆ ರಜೆಯನ್ನು ಕೇವಲ ಆಟದಲ್ಲಿ, ಪ್ರವಾಸದಲ್ಲಿ, ನೆಂಟರಿಷ್ಟರ ಮನೆಗೆ ಹೋಗಿಬರುವುದರಲ್ಲಿ ಕಳೆಯುವುದಕ್ಕಿಿಂತ ಹೊಸ ಜ್ಞಾಾನವನ್ನು ಕೊಡುವ ಇಂತಹ ಹಬ್ಬದ ಮೂಲಕ ಕಳೆದರೆ ಇನ್ನಷ್ಟು ಅರ್ಥ ಬರುತ್ತದೆ ಎನ್ನುವುದು ಅವರ ಅಭಿಪ್ರಾಾಯ.
ಜಿಲ್ಲಾಾಡಳಿತ, ಸಮನ್ವಯ ತಂಡ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ  ಸಂಯುಕ್ತವಾಗಿ ರೂಪಿಸಿದ ಹಬ್ಬ. 12ರಿಂದ 16ರ ಒಳಗಿನ ಮಕ್ಕಳಿಗಾಗಿ ಎಂಟು ದಿನ ಈ ಹಬ್ಬ ನಡೆಯಲಿದೆ.



ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಶಿಬಿರದ ಉದ್ದೇಶ. ಅವರ ಆಲೋಚನೆಗೆಳಿಗೆ ಹೊಸ ರೂಪ ನೀಡಿ, ಅದನ್ನು ತಿದ್ದಿ-ತೀಡಿ ಉತ್ತಮಗೊಳಿಸುವುದು, ಜೊತೆಗೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ವೇದಿಕೆ ಕಲ್ಪಿಿಸುವುದು, ನೈತಿಕವಾಗಿ ಬೆಳೆಯುವಂತೆ ಮಾಡುವ ಒಂದು ಪ್ರಯತ್ನ ಇದು. ಪಾಲಕರು ಮಕ್ಕಳನ್ನು ಒಂದು ವಾರದ ಮಟ್ಟಿಿಗೆ ಇಂತಹ ಶಿಬಿರಕ್ಕೆೆ ಕಳುಹಿಸಿದರೆ ಮಕ್ಕಳಲ್ಲಿ ಹೊಸ ವಿಚಾರಗಳು ಪ್ರಚೋದನೆಯಾಗಲು, ಹೊಸತನ ಬೆಳೆಯಲು, ಅವರ ಪ್ರತಿಭೆಗೆ ವೇದಿಕೆ ಸಿಗಲು ಅನುಕೂಲವಾಗುತ್ತದೆ.
- ಜಿಲ್ಲಾಾಧಿಕಾರಿ ದಯಾನಂದ.  


ನನ್ನಂತಹ ಎಷ್ಟೋೋ ಬಡ ಮಕ್ಕಳು ಬೇಸಿಗೆ ಶಿಬಿರವನ್ನೇ ಕಂಡಿಲ್ಲ. ಏಕೆಂದರೆ ಹಣವಿಲ್ಲದೆ ಬೇಸಿಗೆ ಶಿಬಿರಕ್ಕೆೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಶಾಲೆಯ ಮುಖ್ಯಾಾಧ್ಯಾಾಪಕರು ನಮಗೆ ಈ ಹಬ್ಬದ ಬಗ್ಗೆೆ ಮಾಹಿತಿ ಕೊಟ್ಟು ಹೋಗುವಂತೆ ತಿಳಿಸಿದರು. ಶಿಬಿರದಲ್ಲಿ ಕಲಿಸಲ್ಪಡುವ ವಿವಿಧ ವಿಷಯಗಳು ಸಹ ನನಗೆ ಆಸಕ್ತಿಿ ಹುಟ್ಟಿಿಸಿದವು. ಪಾಲಕರು ಶಿಬಿರಕ್ಕೆೆ ನಾನು ಹೋಗಲು ಒಪ್ಪಿಿದರು. ಇಲ್ಲಿನ ಚಟುವಟಿಕೆ ಮತ್ತು ಮಕ್ಕಳ ಉತ್ಸಾಾಹ ಕಂಡು ಖುಷಿಯಾಗುತ್ತಿಿದೆ. 
- ಸುಷ್ಮಾಾ, ಡಿವಿಎಸ್ ಹೈಸ್ಕೂಲು  ವಿದ್ಯಾಾರ್ಥಿನಿ
...............................

published on 13-5.19

No comments:

Post a Comment