Tuesday, 11 December 2018

ಪಾರ್ಕಿಂಗ್ ಸೆಲ್ಲರ್‌ನ್ನೂ ಮಳಿಗೆಯಾಗಿಸಿದವರಿಗೆ ಕಂಟಕ
   *’ಸ್ಮಾಾರ್ಟ್ ಸಿಟಿ’ಯಲ್ಲಿ ಗರಿಷ್ಠ  ’ಪಾರ್ಕಿಂಗ್ ಸಮಸ್ಯೆೆ 
*   ಆಯುಕ್ತೆೆಯ ಕ್ರಮಕ್ಕೆೆ ಶ್ಲಾಾಘನೆ 

 ಶಿವಮೊಗ್ಗ ನಗರದ ರಸ್ತೆೆಗಳ ಅಂಚಿನಲ್ಲಿ  ವಾಹನಗಳ ನಿಲುಗಡೆ ಮಾಡುವುದೇ ದೊಡ್ಡ ಸಮಸ್ಯೆೆಯಾಗಿದೆ. ಸಮರ್ಪಕ ಟ್ರಾಾಫಿಕ್ ವ್ಯವಸ್ಥೆೆ ಹಾಗೂ ವಾಹನ ಮಾಲಕರು ಕಂಡಕಂಡಲ್ಲಿ  ನಿಲ್ಲಿಸುವುದರಿಂದ ಸಮಸ್ಯೆೆ ಒಂದೆಡೆ ಹೆಚುತ್ತಿಿದ್ದರೆ, ಇನ್ನೊೊಂದೆಡೆ ಒತ್ತುವರಿ ಮೂಲಕ ಬಹುಮಹಡಿ ಕಟ್ಟಡ ಕಟ್ಟುವವರೂ ತಮ್ಮ ಕಾಣಿಕೆ ನೀಡುತ್ತಿಿದ್ದಾಾರೆ. ಇದನ್ನು ನಿಗ್ರ"ಸಬೇಕಾದ  ಪಾಲಿಕೆ ಮತ್ತು ಸ್ಬುಡಾ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ "ಫಲವಾಗಿದ್ದರಿಂದ ಇಷ್ಟೆೆಲ್ಲಾಾ ತೊಂದರೆ ಎದುರಾಗಿದೆ.  ಪ್ರತಿಯೊಂದರಲ್ಲೂ ಪ್ರಭಾ"ಗಳೇ ಮೇಲುಗೈ ಸಾಧಿಸುವುದರಿಂದ, ಲಂಚಾವತಾರ "ುತಿ"ುೀರಿರುವುದರಿಂದ ಕಟ್ಟಡಗಳು ಹೇಗೆ ಬೇಕೋ ಹಾಗೆ ತಲೆಎತ್ತುತ್ತಿಿವೆ. ಈಗ ಆಯುಕ್ತರು ಕೈಗೊಂಡಿರುವ ಸೆಲ್ಲರ್ ಪಾರ್ಕಿಂಗ್ ಕಲ್ಪಿಿಸುವ ಕೆಲಸವನ್ನು ಎಲ್ಲರೂ ಬೆಂಬಲಿಸಬೇಕಿದೆ.

* ದತ್ತಾಾತ್ರೇಯ ಹೆಗಡೆ

ಶಿವಮೊಗ್ಗದಲ್ಲಿ ಗರಿಷ್ಠ ಮಟ್ಟಕ್ಕೆೆ ತಲುಪಿದೆ ಪಾರ್ಕಿಂಗ್ ಪ್ರಾಾಬ್ಲಂ. ವರ್ಷದಿಂದ ವರ್ಷಕ್ಕೆೆ ಹೆಚ್ಚುತ್ತಿಿರುವ ಜನಸಂಖ್ಯೆೆ, "ಸ್ತಾಾರವಾಗುತ್ತಿಿರುವ ನಗರ ವ್ಯಾಾಪ್ತಿಿ, ದಿನೆ ದಿನೇ ಹೆಚ್ಚುತ್ತಿಿರುವ ವಾಹನಗಳು, ಅವೈಜ್ಞಾಾನಿಕವಾಗಿ ನಿರ್ಮಾಣಗೊಳ್ಳುತ್ತಿಿರುವ ರಸ್ತೆೆಗಳು... ಇದರಿಂದ ವಾಹನಗಳ ನಿಲುಗಡೆ (ಪಾರ್ಕಿಂಗ್) ಗೆ ಸ್ಥಳಾವಕಾಶವೇ ಇಲ್ಲದಂತಹ ಪರಿಸ್ಥಿಿತಿ.
ಇದು ಪ್ರಸ್ತುತ ಶಿವಮೊಗ್ಗ ನಗರದಲ್ಲಿರುವ ದುಃಸ್ಥಿಿತಿ. ನಗರದಲ್ಲಿ ಸುಗಮ ವಾಹನ ಸಂಚಾರ ದಿನೇ ದಿನೇ ದುಸ್ತರವಾಗಿ ಪರಿಣ"ುಸುತ್ತಿಿದೆ. ರಸ್ತೆೆಗಳಲ್ಲಿ ಪಾರ್ಕಿಂಗ್‌ಗೆ ಸೂಕ್ತ ಸ್ಥಳವಾಕಾಶದ ಕೊರತೆುಂದ ಎಲ್ಲೆೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ. ಇದರಿಂದ ಸುಗಮ ವಾಹನ ಸಂಚಾರಕ್ಕೆೆ ತೊಂದರೆಯಾಗಿರುವುದರ ಜೊತೆಗೆ, ಸಾಕಷ್ಟು ಕಿರಿಕಿರಿಗೂ ಕಾರಣವಾಗುತ್ತಿಿದೆ.
  ವಾಹನಗಳ ಪಾರ್ಕಿಂಗ್ ವ್ಯವಸ್ಥೆೆಯ ಬಗ್ಗೆೆ, ಯಾವುದೇ ವೈಜ್ಞಾಾನಿಕ ಕ್ರಮ ಪಾಲನೆಯಾಗುತ್ತಿಿಲ್ಲ. ಈ ನಿಟ್ಟಿಿನಲ್ಲಿ ಯಾವುದೇ ಮುಂದಾಲೋಚನೆ ಕ್ರಮಗಳನ್ನು ಕೈಗೊಳ್ಳುತ್ತಿಿಲ್ಲ. ಇದರಿಂದ ನಗರದ ಮುಖ್ಯ ರಸ್ತೆೆಗಳು ಮಾತ್ರವಲ್ಲ, ಅವುಗಳಿಗೆ ಹೊಂದಿಕೊಂಡಂತಿರುವ ಸಮಾನಾಂತರ ರಸ್ತೆೆಗಳಲ್ಲಿ ಸಮರ್ಪಕವಾದ ವಾಹನಗಳ ನಿಲುಗಡೆ ವ್ಯವಸ್ಥೆೆಯೇ ಇಲ್ಲದಂತಾಗಿದೆ.
ಜನರೂ ಸಹ ರಸ್ತೆೆಯಂಚಿನಲ್ಲಿ ನಡೆದು ಹೋಗದ ಸ್ಥಿಿತಿ ಎದುರಾಗಿದೆ. ನಡೆದಾಡುವ ಜಾಗದಲ್ಲೇ ವಾಹನ ನಿಲ್ಲಿಸಿ ಹೋಗುತ್ತಿಿರುತ್ತಾಾರೆ. ಇದರಿದಂ ರಸ್ತೆೆ ಮೇಲೆಯೇ ನಡೆದಾಡಬೇಕಿದೆ. ಸುರಕ್ಷಿತ ಸಂಚಾರಕ್ಕೆೆ ಅವಕಾಶವೇ ಇಲ್ಲದ ಸ್ಥಿಿತಿ ನಿರ್ಮಾಣವಾಗಿದೆ. ಇದಕ್ಕೆೆ ಕಾರಣ ತಲೆಎತ್ತುತ್ತಿಿರುವ ಬೃಹತ್ ಕಟ್ಟಡಗಳು. 
ಅವೈಜ್ಞಾಾನಿಕ ಬೆಳವಣಿಗೆ:
 ನಗರಾಭಿವೃದ್ಧಿಿ ಪ್ರಾಾಧಿಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಅನುಮೋದಿತವಾಗುವ ನಕ್ಷೆಗೆ ಅನುಗುಣವಾಗಿ ನಗರದಲ್ಲಿ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿಿಲ್ಲ. ಕಟ್ಟಡ ನಕ್ಷೆಯನ್ನು ಅನುಮೋದಿಸಿಕೊಳ್ಳುವ ವೇಳೆ ಕೆಳ ಅಂತಸ್ತಿಿನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ತೋರಿಸುತ್ತಾಾರೆ. ಆದರೆ ತದನಂತರ ವಾಣಿಜ್ಯ ಉದ್ದೇಶಕ್ಕೆೆ ಬಳಕೆ ಮಾಡಿಕೊಳ್ಳಲಾಗುತ್ತಿಿದೆ. ನಗರದ ಹೃದಯ ಭಾಗಗಳಲ್ಲಿ ವಾಣಿಜ್ಯ, ವಸತಿ ಪ್ರದೇಶಗಳ ನಡುವೆ ಅಂತರವೇ ಕಡಿಮೆಯಾಗುತ್ತಿಿದೆ. ವಸತಿ ಪ್ರದೇಶಗಳಲ್ಲಿಯೂ ದೊಡ್ಡ ದೊಡ್ಡ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗುತ್ತಿಿವೆ. ಇದರಿಂದಲೂ ನಗರದ ಸಣ್ಣಪುಟ್ಟ ರಸ್ತೆೆಗಳಲ್ಲಿಯೂ ಸಂಚಾರ ದಟ್ಟಣೆ "ಪರೀತ ಮಟ್ಟಕ್ಕೆೆ ತಲುಪುವಂತಾಗಿದೆ.
ನಗರದಲ್ಲಿ ನಿರ್ಮಾಣವಾಗುವ ಬಹುಮಹಡಿ ವಾಣಿಜ್ಯ ಸಂಕೀರ್ಣಗಳು ಕನಿಷ್ಠ ನೀತಿ-ನಿಯಮಗಳನ್ನು ಪಾಲಿಸುತ್ತಿಿಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಿಿವೆ. ಬಹುತೇಕ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡಗಳ ನಿರ್ಮಾಣದಲ್ಲಿ ಸೆಟ್‌ಬ್ಯಾಾಕ್ ನಿಯಮಗಳ ಉಲ್ಲಂಘನೆ ಮಾಡಲಾಗುತ್ತಿಿದೆ. ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳವಾಕಾಶವನ್ನೇ "ುೀಸಲಿಡುತ್ತಿಿಲ್ಲ.
ಇಂತಹ ಸುಮಾರು 85 ಕಟ್ಟಡಗಳಿಗೆ ಈಗ ಕಂಟಕ ಎದುರಾಗಿದೆ. ಪಾಲಿಕೆ ಇವುಗಳ ಸೆಲ್ಲರ್‌ನ್ನು ಪಾರ್ಕಿಂಗ್‌ಗೆ ಅನುವು ಮಾಡಿಕೊಡಲು ತೆರವು ಕಾರ್ಯಾಚರಣೆ ಆರಂಭಿಸಿದೆ. ಈಗಾಗಲೇ ಎರಡು ಕಟ್ಟಡಗಳಲ್ಲಿ ಕಾರ್ಯಾಚರಣೆ ಮುಗಿದಿದೆ. ನೋಟೀಸ್ ನೀಡಿದ 24 ಗಂಟೆಯೊಳಗೆ ತೆರವು ಕಾರ್ಯಾಚರಣೆ ಮಾಡುವಂತೆ ಅದರಲ್ಲಿ ಸೂಚಿಸಲಾಗಿದೆ. ಬಿ. ಎಚ್. ರಸ್ತೆೆ, ಕುವೆಂಪು ರಸ್ತೆೆ, ಸವಳಂಗ ರಸ್ತೆೆ, ಶಂಕರಮಠ ರಸ್ತೆೆ, ಗೋಪಾಳ, ಗಾರ್ಡನ್ ಏರಿಯಾ, ದುರ್ಗಿಗುಡಿಯ ಕೆಲವು ಕಟ್ಟಡಗಳಿಗೆ ಈ ತೆರ"ನ ನೋಟೀಸ್ ನೀಡಲಾಗಿದೆ.
ಪ್ರಭಾ"ಗಳ ಕೈಚಳಕತನದಿಂದ ಅಧಿಕಾರಿಗಳು ಮೆತ್ತಗಾಗಿದ್ದರ ಪರಿಣಾಮ ಸಮಸ್ಯೆೆ ಮತ್ತೆೆ ತಲೆದೋರಿದೆ. ಹಾಲಿ ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳು ದಿಟ್ಟತನದಿಂದ ಕೆಲವು ಬಹುಮಹಡಿ ಕಟ್ಟಡಗಳಿಂದ ಸೆಲ್ಲರ್ ಪಾರ್ಕಿಂಗ್‌ನ್ನು ಬಿಡಿಸಿಕೊಡುತ್ತಿಿದ್ದಾಾರೆ. ಕಟ್ಟಡ ಕಟ್ಟುವಾಗ ಅಧಿಕಾರಿಗಳು ಕಣ್ಣುಮುಚ್ಚಿಿ ಕುಳಿತಿದ್ದೇ ಇಷ್ಟೆೆಲ್ಲಾಾ ಅವಾಂತರಕ್ಕೆೆ ಕಾರಣ. ಜನಪ್ರತಿನಿಧಿಗಳೂ ಸಹ ಪ್ರಭಾವ ಬೀರಿರುವುದು ಗುಟ್ಟಾಾಗಿ ಉಳಿದಿಲ್ಲ. ಸೆಲ್ಲರ್‌ಗಳಲ್ಲಿ ವಾಣಿಜ್ಯ ಉದ್ದೇಶ ಮಳಿಗೆ ನಿರ್"ುಸಿ ಪಾರ್ಕಿಂಗ್‌ಗೆ ಅಡ್ಡಿಿ ಮಾಡುವವರಿಗೆ ವ್ಯಾಾಪಾರದ ಲೈಸೆನ್‌ಸ್‌ ತಡೆ"ಡಿಯುವ ಅಧಿಕಾರ ಪಾಲಿಕೆಗೆ ಇದೆ. ಆದರೆ ಇಲ್ಲಿಯೂ ಅಧಿಕಾರಿಗಳು ಬೇಜವಾಬ್ದಾಾರಿತನದಿಂದ ವರ್ತಿಸಿ ಲೈಸೆನ್‌ಸ್‌ ನೀಡಿದ್ದಾಾರೆ. ಇಂತಹ ಮೃದು ಧೋರಣೆ ಮತ್ತು ಭ್ರಷ್ಟಾಾಚಾರದಿಂದ ಎಲ್ಲ ಪಾರ್ಕಿಂಗ್ ಸ್ಥಳಗಳೂ ವಾಣಿಜ್ಯಮಯವಾಗುತ್ತಿಿವೆ.
ಎಂಎಲ್ಸಿಿ ಆಯನೂರು ಮಂಜುನಾಥ ಅವರು ಇತ್ತೀಚೆಗೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಸೆಲ್ಲರ್‌ನ್ನು ಅಕ್ರಮವಾಗಿ ವ್ಯಾಾಪಾರ ಮಳಿಗೆಯನ್ನಾಾಗಿ ಮಾಡಿಕೊಂಡಿರುವ, ಪಾರ್ಕಿಂಗ್‌ಗೆ ಅವಕಾಶ ನೀಡದ ಕಟ್ಟಡ ಮತ್ತು ಅದರ ಮಾಲಕರ "ವರ ಕೇಳಿದ್ದರು. ಇದಾದ ಬಳಿಕ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾಾರೆ. ಆಯುಕ್ತೆೆಯ ದಿಟ್ಟ ಕ್ರಮ ಎಲ್ಲರ ಶ್ಲಾಾಘನೆಗೆ ಒಳಗಾಗಿದೆ.
ಕಟ್ಟಡ ಮಾಲಕರೊಟ್ಟಿಿಗೆ ಈ ಸಮಸ್ಯೆೆಗೆ ಕಾರಣರಾಗಿರುವ ಅಧಿಕಾರಿಗಳನ್ನೂ ಪತ್ತೆೆ ಮಾಡಿ ಅವರ "ರುದ್ದ ಕ್ರಿಿ"ುನಲ್ ಮೊಕದ್ದಮೆ ದಾಖಲಿಸುವ ಕೆಲಸವಾಗಬೇಕು. ಆಯುಕ್ತರು ಈ ಕೆಲಸವನ್ನೂ ಮಾಡಿದರೆ ಮುಂದಿನ ದಿನಗಳಲ್ಲಿ ಕಣ್ಣುಮುಚ್ಚಿಿ ಸ" ಹಾಕುವ ಅಥವಾ ವ್ಯವಹಾರಕ್ಕೆೆ ಬಗ್ಗುವ ಅಧಿಕಾರಿಗಳಿಗೆ ಒಂದಷ್ಟು ನಡುಕ ಉಂಟಾಗಬಹುದು. 
ಅವೈಜ್ಞಾಾನಿಕ ನಿರ್ಮಾಣ: 
  ರಸ್ತೆೆಗಳ "ಸ್ತರಣೆ ವೇಳೆ ಸಂಬಂಧಪಟ್ಟ ಅಧಿಕಾರಿಗಳು ವಾಹನ ನಿಲುಗಡೆಗೆ ಯಾವುದೇ ಕ್ರಮಬದ್ದ ಯೋಜನೆ ರೂಪಿಸುತ್ತಿಿಲ್ಲ. ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆೆ ಮಣಿದು ಬೇಕಾಬಿಟ್ಟಿಿಯಾಗಿ ಯೋಜನೆಗಳನ್ನು ಜಾರಿ ಮಾಡುತ್ತಿಿದ್ದಾಾರೆ. ಜೊತೆಗೆ ಪರ್ಯಾಯ ಮಾರ್ಗವನ್ನೂ ಕಂಡು"ಡಿಯುತ್ತಿಿಲ್ಲ. ಇನ್ನಾಾದರೂ ಮಹಾನಗರ ಪಾಲಿಕೆ, ನಗರಾಭಿವೃದ್ಧಿಿ ಪ್ರಾಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳು, ಯೋಜನೆಗಳ ನೀತಿನಿರೂಪಕರು ಎಚ್ಚೆೆತ್ತುಕೊಳ್ಳಬೇಕಾಗಿದೆ. ನಗರದ ಭ"ಷ್ಯದ ಬೆಳವಣಿಗೆಯ ದ್ಟೃಯನ್ನಿಿಟ್ಟುಕೊಂಡು ಯೋಜನೆ ರೂಪಿಸಬೇಕಾಗಿದೆ. 
published on dec10. 2018
 ...................................

Saturday, 10 November 2018

ನಾಡದೇವಿಗೆ ನಾದದೀವಿಗೆ’ 
  
ಕನ್ನಡದ ವಿಭವ_ವಿಭ್ರಮಗಳನ್ನು ಸಾರುವ, ಕನ್ನಡ ನಾಡು-ನುಡಿಗಳ ಮೂಲಕ ಕನ್ನಡಿಗರ ಕನ್ನಡಾಭಿಮಾನಿಗಳನ್ನು ಮುದಗೊಳಿಸಿದ ಒಂದು ವಿನೂತನ ಕಾರ್ಯಕ್ರಮ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನವೆಂಬರ್ 3ರಂದು ನಡೆಯಿತು. ನಗರದ ಶಾರದಾ ಸಂಗೀತ ವಿದ್ಯಾಾಲಯ ‘ನಾಡದೇವಿಗೆ ನಾದದೀವಿಗೆ’ ಎಂಬ ಹೆಸರಿನಲ್ಲಿ ನಡೆಸಿಕೊಟ್ಟ ಸ್ತುತ್ಯರ್ಹ ಕಾರ್ಯಕ್ರಮವಿದು.






ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಭಾರತ ಭೂಶಿರ ಮಂದಿರ ಸುಂದರಿ, ಎಲ್ಲಾಾದರು ಇರು, ಎಂತಾದರೂ ಇರು, ಮಡಿಕೇರಿಲಿ ಮಂಜು............
ಹೀಗೆ ಕನ್ನಡದ ವಿಭವ_ವಿಭ್ರಮಗಳನ್ನು ಸಾರುವ, ಕನ್ನಡ ನಾಡು-ನುಡಿಗಳ ಮೂಲಕ ಕನ್ನಡಿಗರ ಕನ್ನಡಾಭಿಮಾನಿಗಳನ್ನು ಮುದಗೊಳಿಸಿದ ಒಂದು ವಿನೂತನ ಕಾರ್ಯಕ್ರಮ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನವೆಂಬರ್ 3ರಂದು ನಡೆಯಿತು. ನಗರದ ಶಾರದಾ ಸಂಗೀತ ವಿದ್ಯಾಾಲಯ ‘ನಾಡದೇವಿಗೆ ನಾದದೀವಿಗೆ’ ಎಂಬ ಹೆಸರಿನಲ್ಲಿ ನಡೆಸಿಕೊಟ್ಟ ಸ್ತುತ್ಯರ್ಹ ಕಾರ್ಯಕ್ರಮವಿದು.
 ಎಳೆಯ ಮಕ್ಕಳಿಂದ ಹಿಡಿದು ಸುಮಾರು 40ರ ಹರೆಯದವರೆಗಿನ ಹಾಡುಗಾರರು ಪ್ರತಿಯೊಂದು ಹಾಡುಗಳಿಗೆ ಜೀವತುಂಬಿ, ಭಾವತುಂಬಿ ಹಾಡುವಾಗ ರಂಗಮಂದಿರದಲ್ಲಿ ನಿಶ್ಯಬ್ದ ನೆಲೆಸಿತ್ತು. ಹಾಡುಗಾರರ ತನ್ಮಯತೆ, ಉತ್ಸಾಾಹ ಪ್ರೇಕ್ಷಕರನ್ನು ಹೊಸದೊಂದು ಸಂಗೀತಲೋಕಕ್ಕೆೆ ಕರೆದೊಯ್ದಿಿತ್ತು. ಈ ಹಾಡುಗಳನ್ನು ಕೇಳುವಾಗ ಹಾಡುಗಾರರೊಂದಿಗೆ ಪ್ರೇಕ್ಷಕರೂ ಸಹ ಗುನುಗುನಿಸುತ್ತಿಿದ್ದರು. ಏಕೆಂದರೆ, ಈ ಹಾಡುಗಳೆಲ್ಲಾಾ ಸದಾ ಕನ್ನಡಿಗರ ಮನೆ-ಮನದಲ್ಲಿ ನಲಿದಾಡುವಂತಹ ಎಂದೂ ಮರೆಯದ ಹಾಡುಗಳಾಗಿದ್ದವು.
 ನವೆಂಬರ್ ಬಂತೆಂದರೆ ಸಾಕು- ಎಲ್ಲೆೆಡೆ ಕನ್ನಡ ಕಲರವ; ಕನ್ನಡ ಡಿಂಡಿಮ. ಕನ್ನಡಿಗರೆಲ್ಲ ಒಂದೆಡೆ ಕಲೆತು ನಲಿಯುತ್ತಾಾರೆ; ನರ್ತಿಸುತ್ತಾಾರೆ. ಕನ್ನಡ ಭುವನೇಶ್ವರಿಗೆ ನಾದ, ನೃತ್ಯ, ನುಡಿಗಳ ಮೂಲಕ ಸೇವೆಗೈಯ್ಯುತ್ತಾಾರೆ. ನಗರದಲ್ಲಿ ಅಮೋಘ ಕಂಠಸಿರಿ ಹೊಂದಿರುವವರನ್ನು ಅನೇಕ ಸಂಗೀತ ಶಾಲೆಗಳು ಗುರುತಿಸಿ, ಅವರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿವೆ. ಜಾತಿ-ಮತ ಭೇದವಿಲ್ಲದೆ, ವಯೋಭೇದವಿಲ್ಲದೆ, ಲಿಂಗ ತರತಮ ಭಾವವಿಲ್ಲದೆ ಸಂಗೀತವನ್ನು ಧಾರೆ ಎರೆಯುತ್ತಿಿವೆ. ಶಾರದಾ ಸಂಗೀತ ವಿದ್ಯಾಾಲಯ ಅಂತಹವುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿದ್ಯಾಾಸಂಸ್ಥೆೆ. ಈ ವಿದ್ಯಾಾಸಂಸ್ಥೆೆಯ ಪ್ರಾಾಚಾರ್ಯರಾದ  ವಿದ್ವಾಾನ್ ಅರುಣ್‌ಕುಮಾರ್ ದಂಪತಿ  ಹಾಗೂ ಅಲ್ಲಿನ ಶಿಕ್ಷಕಿಯರು ನಿರಂತರವಾಗಿ ಕಲಾಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೈ ಎನಿಸಿದಾರೆ.  ಮಾಡಿಕೊಂಡು ಬಂದಿದ್ದಾಾರೆ. ಅವರು ಕೆಲವು ತಿಂಗಳುಗಳಿಂದ ಪಟ್ಟ ಶ್ರಮದ ಸಾರ್ಥಕತೆಯ ನಿದರ್ಶನವೇ ‘ನಾಡ ದೇವಿಗೆ ನಾದ ದೀವಿಗೆ’ ಕಾರ್ಯಕ್ರಮ.
ಕಾರ್ಯಕ್ರಮದ ಶೀರ್ಷಿಕೆಯೇ ಬಹು ಸೊಗಸಾಗಿದೆ. ಕನ್ನಡದ ದೇವಿಗೆ ಹಾಡಿನ ಮೂಲಕ ದೀವಿಗೆಯನ್ನು ಹಚ್ಚುವ ಕೆಲಸವನ್ನು ಅವರ ಶಿಷ್ಯವೃಂದದವರು ಮಾಡಿದರು. ಇಲ್ಲಿ ಹಾಡಿದ ಹಾಡುಗಳೆಲ್ಲ ಕನ್ನಡ, ಅದರ ಶ್ರೀಮಂತಿಕೆ, ಕನ್ನಡ ಕವಿಗಳ ಬಹು ಪ್ರಸಿದ್ಧ ಪದ್ಯಗಳೇ ಸಾಗಿದ್ದವು. ಸಮೂಹಗಾಯನದಲ್ಲಿ ಎಲ್ಲವೂ ಹಾಡಲ್ಪಟ್ಟವು. ಎಲ್ಲೂ ಹಾಡಿನ ಭಾವಕ್ಕೆೆ, ತಾಳಕ್ಕೆೆ, ರಾಗಕ್ಕೆೆ, ಶೃತಿಗೆ ಚ್ಯುತಿ ಬಾರದಂತೆ ಎಲ್ಲರೂ ಏಕಕಂಠದಿಂದ ಹಾಡಿದ್ದನ್ನು ಶ್ಲಾಾಘಿಸಲೇಬೇಕು.
ಏಕೆಂದರೆ, ಸುಮಾರು 20ಕ್ಕೂ ಹೆಚ್ಚು ಜನರು ಏಕಕಂಠದಲ್ಲಿ ಹಾಡುವುದು ಸುಲಭದ ಕೆಲಸವಲ್ಲ. ಇದರನ್ನು ಸತತ ತರಬೇತಿ ಮೂಲಕ ಅರುಣ್‌ಕುಮಾರ್ ಸಾಧಿಸಿದ್ದಾಾರೆ. ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದೆ. ಅದಕ್ಕೆೆ ವೇದಿಕೆ ಕಲ್ಪಿಿಸಿದಾಗಲೇ ಹೊರಬರಲು ಸಾಧ್ಯ ಎನ್ನುವುದು ಅವರ ನಿಲುವು. ಈ ನಿಟ್ಟಿಿನಲ್ಲಿ ಅವರು ರೂಪಿಸಿದ ಬಹುಶ್ರಮದ ಕಾರ್ಯಕ್ರಮ ಇದಾಗಿತ್ತು.
 ಪ್ರತಿಯೊಂದು ಮಕ್ಕಳು ಕೂಡ ಯಾವ ಅಂಜಿಕೆಯೂ ಇಲ್ಲದೆ, ಸುಲಲಿತವಾಗಿ ತುಂಬಿದ ರಂಗಮಂದಿರದಲ್ಲಿ ಮನಮೋಹಕವಾಗಿ ಹಾಡಿದರು. ಇಲ್ಲಿ ಪ್ರಸ್ತಾಾಪಿಸಲೇಬೇಕಾದ ಇನ್ನೊೊಂದು ವಿಷಯವೆಂದರೆ, ಯುವಕರ ತಂಡದವರ ಹಾಡುಗಳು ಪ್ರೇಕ್ಷಕರು ಹುಚ್ಚೆೆದ್ದು ಕುಣಿಯುವಂತೆ ಮಾಡಿದ್ದು. ಕುರಿಗಳು ಸಾರ್, ಕುರಿಗಳು, ಝಣ ಝಣ ಕಾಂಚಾಣ,  ಎಲ್ಲಾಾ ಮಾಯ... ಮೊದಲಾದ ಹಾಡುಗಳು ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದವು. ಈ ಯುವಕರ ಹಾವ-ಭಾವ ಅಷ್ಟೇ ಮನೋಹರವಾಗಿತ್ತು.
ಭರತನಾಟ್ಯ, ಕಥಕ್ ನೃತ್ಯ, ಜೀವನ ಮೌಲ್ಯಗಳನ್ನು ಎತ್ತಿಿಸಾರುವ ಮೂಕಾಭಿನಯ ಸಹ ಈ ಕಾರ್ಯಕ್ರಮಕ್ಕೆೆ ಇನ್ನಷ್ಟು ಮೆರುಗು ತಂದುಕೊಟ್ಟಿಿದ್ದು ಸುಳ್ಳಲ್ಲ. ಈ ಕಲಾವಿದರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಜನಮನ ಗೆದ್ದರು.  ವಿಶೇಷವಿಂದರೆ ನಿಗದಿತ ವೇಳೆಗೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿ, ನಿಗದಿತ ವೇಳೆಗೇ (2 ಗಂಟೆಗಳ ಕಾರ್ಯಕ್ರಮ) ಮುಕ್ತಾಾಯಗೊಳಿಸಿದಗದ್ದು, ಶಿವಮೊಗ್ಗದ ಮಟ್ಟಿಿಗೆ ಅಚ್ಚ್ರಿಿ ಮಾತ್ರವಲ್ಲ, ಸಂಘಟಕರ ಸಮಯಪ್ರಜ್ಞೆಗೂ ಸಾಕ್ಷಿಯಾಗಿತ್ತು. ಉದ್ಘಾಾಟನೆ ಎಂದು ಭಾಷಣ ಮಾಡಿಸಿ, ಸಭಾಸದರ ತಾಳ್ಮೆೆಯನ್ನು ಪರೀಕ್ಷಿಸದೆ, ಅಚ್ಚುಕಟ್ಟಾಾದ ನಿರೂಪಣೆಯೊಂದಿಗೆ, ಕಾರ್ಯಕ್ರಮಗಳ ಮಧ್ಯೆೆಮಧ್ಯೆೆ ಸಮಾಜದ ಗಣ್ಯರಿಂದ ಕನ್ನಡ ಭುವನೇಶ್ವರಿಗೆ ಪುಷ್ಪನಮನ ಮಾಡಿಸಿದ್ದು, ಸಂಘಟಕರ ಸಂಸ್ಕೃತಿ-ಸಂಸ್ಕಾಾರಕ್ಕೆೆ ಕೈಗನ್ನಡಿಯಾಗಿತ್ತು.
      ಪ್ರೇಕ್ಷಕರು ಅಂದುಕೊಂಡದ್ದಕ್ಕಿಿಂತ ಹೆಚ್ಚಿಿನ ಸಂಗೀತದ ರಸದೌತಣವನ್ನು ಇಲ್ಲಿ ಸವಿದರು. ಹಾಡಗಳನ್ನ್ನು ಗುನುಗುನಿಸುತ್ತಲೇ ರಂಗಮಂದಿರದಿಂದ ವಿರಮಿಸಿದ್ದು ‘ನಾಡದೇವಿಗೆ ನಾದದೀವಿ’ಗೆ ಕಾರ್ಯಕ್ರಮದ ಯಶಸ್ಸಿಿಗೆ ಸಾಕ್ಷಿಯಾಯಿತು.
publiashed on 9. 11.18
................................................       

Saturday, 27 October 2018

ನಟರ ಮೇಲೇಕೇ ವಿಕೃತ ಅಭಿಮಾನ?

ಇತ್ತೀಚಿನ ದಿನಗಳಲ್ಲಿ  ಸಿನಿಮಾ ನಾಯಕ ನಟರಿಗೆ ಅಭಿಮಾನಿಗಳಿಗಿಂತ ವಿಕೃತ ಅಭಿಮಾನಿಗಳೇ ಹೆಚ್ಚುತ್ತಿಿದ್ದಾಾರೆ. ಇವರ ಅಂಧಾಭಿಮಾನದಿಂದ ಸಾರ್ವಜನಿಕರು ಕಂಗೆಡುವಂತಾಗಿದೆ.
ತಮ್ಮ ನಾಯಕ ನಟನ ಸಿನಿಮಾ ಬಿಡುಗಡೆಯಾಗಿದೆ ಎಂದು ಕೋಣ ಮತ್ತು ಕುರಿ ಕಡಿದು ಅವುಗಳ ರಕ್ತಾಾಭಿಷೇಕವನ್ನು ಮಾಡಿದ  ವಿಡೀಯೋ ಎಲ್ಲೆೆಡೆ ವೈರಲ್ ಆಗುತ್ತಿಿರುವಂತೆ ಆಕ್ರೋೋಶವೂ ಹೆಚ್ಚತೊಡಗಿದೆ. ಈ ಘಟನೆ ನಡೆದಿದ್ದೇ ಆದಲ್ಲಿ ಇದೆಂತಹ ಹುಚ್ಚುತನದ ಪರಮಾವಧಿ ಎನ್ನದೆ ವಿಧಿಯಿಲ್ಲ.
ಸಿನಿಮಾ ನಾಯಕರ ಮೇಲೆ ಪ್ರೀತಿ, ಅವರ ನಟನೆಗೆ ಮೆಚ್ಚುಗೆ ಇರಬೇಕೇ ವಿನಾ ಅದು ಹುಚ್ಚುಹೊಳೆಯಾಗಿ ಹರಿಯುವಂತಾಗಬಾರದು. ಯಾವ ನಟನೂ ಅಬಿಮಾನಿಗಳ ಸಂಘವನ್ನು ರಚಿಸಿಕೊಂಡಿಲ್ಲ. ಆದರೆ ಯುವಕರೇ ನಾಯಕರ ಹೆಸರಿನಲ್ಲಿ ಅಭಿಮಾನಿಗಳ ಸಂಘ ರಚಿಸಿಕೊಂಡು ಇಂತಹ ಕೃತ್ಯ ಎಸಗುತ್ತಿಿರುವುದು ಬೆಳಕಿಗೆ ಬರುತ್ತಿಿದೆ.
ಬಹುತೇಕ ಎಲ್ಲ ನಾಯಕ ನಟರಿಗೂ ಅಭಿಮಾನಿಗಳಿದ್ದಾಾರೆ. ಆದರೆ ಅವರ ಅತಿರೇಕ ಈಗ ಸಾರ್ವಜನಿಕವಾಗಿ ಚರ್ಚೆಗೀಡಾಗುವಂತಾಗಿದೆ. ಸಿನಿಮಾ ಪೋಸ್ಟರ್‌ಗೆ ಹಾಲೆರೆಚುವುದು, ಹಾರ ಹಾಕುವುದು, ಪೂಜೆ ಮಾಡುವುದೆಲ್ಲ ಸಾಮಾನ್ಯವಾಗಿತ್ತು. ಇದರ ಬಗ್ಗೆೆಯೂ ಸಾಕಷ್ಟು ಅಪಸ್ವರವಿತ್ತು. ಹಾಲಿನ ಮೌಲ್ಯ ಅರಿಯವದವರು, ಮೌಢ್ಯದಲ್ಲಿ ಸಿಲುಕಿರುವವರು ಇಂತಹ ಕೃತ್ಯ ಎಸಗುತ್ತಾಾರೆಂಬ ಬಗ್ಗೆೆ ಟೀಕೆ ಕೇಳಿಬರುತ್ತಲೇ ಇತ್ತು. ಆದರೆ ಹೆಚ್ಚು ಚರ್ಚೆಗೆ ಯಾರೂ ಹೋಗಿರಲಿಲ್ಲ.
ಆದರೆ ಈಗ ಬಿಡುಗಡೆಯಾಗಿರುವ ವಿಡಿಯೋ ಚರ್ಚೆಗೆ ವೇದಿಕೆ ಹುಟ್ಟುಹಾಕಿದೆ. ನಾಯಕ ನಟರು ತಮಗೆ ಕೋಣನ ಅಥವಾ ಮೇಕೆಯ ಬಿಸಿರಕ್ತವನ್ನು ಅಭಿಷೇಕ ಮಾಡಿ ಎಂದೂ ಎಲ್ಲೂ ಹೇಳಿಲ್ಲ. ಆದರೆ ಅತಿರೇಕದ ಉತ್ಸಾಾಹದಲ್ಲಿ ಮಿಂದೆದ್ದ ಕೆಲವು ಯುವಕರು ಈ ಕೆಲಸ ಮಾಡಿದ್ದಾಾರೆ. ಈ ಮೂಲಕ ಮೇರೆಮೀರಿದ ಸಂಭ್ರಮದಲ್ಲಿ ತಾವು ಏನನ್ನೂ ಮಾಡಲು ಹೇಸುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿಿದ್ದಾಾರೆ. ಪ್ರಾಾಣಿಗೂ ಜೀವವಿದೆ. ಪ್ರಾಾಣಿಹಿಂಸೆ ನಿಷಿದ್ಧ ಎಂಬ ಕಾನೂನಿದೆ. ಅದರಲ್ಲೂ ಕೋಣನನ್ನು ಕಡಿಯುವ ಹಾಗಿಲ್ಲ. ದೇವಿಗೆ ಬಲಿಕೊಡಲು ಕೋಣನನ್ನು ಕಡಿಯುವ ಸಂಪ್ರದಾಯ ಇತ್ತಾಾದರೂ ಇತತೀಚಿನ ಬಿಗಿ ಕಾನೂನುನಿಂದಾಗಿ ಅದು ಸ್ಥಗಿತಗೊಂಡಿದೆ. ಆದರೆ ನಾಯಕ ನಟರಿಗಾಗಿ ಕೋಣ ಬಲಿಕೊಡುವ ಪ್ರಸಂಗ ಎದುರಾಗಿರುವುದು ಸಮಾಜಕಕ್ಕೆೆ ಕಪ್ಪುಚುಕ್ಕೆೆ ಎನ್ನಲೇಬೇಕಿದೆ.
ಯಾರೋ ಬೆರಳೆಣಿಕೆಯ ಬಿಸಿರಕ್ತದ ಅಭಿಮಾನಿಗಳ ಈ ಕೃತ್ಯ ಎಲ್ಲರಿಂದ ಟೀಕೆಗೆ ಒಳಗಾಗಿದೆ. ನಾಯಕ ನಟರೂ ಇದರಿಂದ ಮುಜುಗುರಕ್ಕೊೊಳಗಾಗುವಂತಾಗಿದೆ. ಇಂತಹ ಅಂಧಶೃದ್ಧೆೆಯಲ್ಲಿ ನಮ್ಮ ದೇಶ ಇನ್ನೂ ಮುಳುಗಿದೆ ಎಂದರೆ ಇಂತಹವರನ್ನು ಸರಿದಾರಿಗೆ ತರುವ ಕೆಲಸವಾಗಲೇಬೇಕಿದೆ. ವ್ಯಕ್ತಿಿಯ ಅಂಧಾನುಕರಣೆ ಯಾವತ್ತೂ ಮಾರಕ. ನಟನಾಗಲಿ, ಕಲಾವಿದನಾಗಲಿ, ಯಾರೇ ಆಗಲಿ ಅವರಿಗೆ ಅಭಿಮಾನಿ ಬಳಗ ಇರುವುದು ತಪ್ಪಲ್ಲ. ಆದರೆ ಅದು ಅಂಧಾನುಕರಣೆಯಾಗಬಾರದು. ಅವರ ಒಳ್ಳೆೆಯತನವನ್ನು ಮಾತ್ರ ಹೆಕ್ಕಿಿ ತಮ್ಮ ಜೀವನದಲ್ಲಿ ಅಳವಡಿಸಿಕೊಡಳ್ಳುವ ಜಾಣ್ಮೆೆ ಅಭಿಮಾನಿಗಳಲ್ಲಿರಬೇಕೇ ವಿನಾ ಅವರನ್ನು ತೃಪ್ತಿಿಪಡಿಸಲೆಂದೋ ಅಥವಾ ಪ್ರಚಾರಕ್ಕಾಾಗಿಯೋ ಪ್ರಾಾಣಿಬಲಿಯಂತಹ ದುಷ್ಕೃತ್ಯಕ್ಕೆೆ ಕೈ ಹಾಕುವುದು ಕಾನೂನನ್ನು ಮೈಮೇಲೆ ಎಳೆದುಕೊಡಂತೆಯೇ ಸರಿ.
ಈ ಹಿಂದೆಂದೂ ಕಂಡು- ಕೇಳರಿಯದಂತಹ ಅಭಿಮಾನಿ ಬಳಗ ಇತ್ತೀಚೆಗೆ ಹೆಚ್ಚುತ್ತಿಿದೆ. ಇದರಿಂದಾಗಿ ಸಮಾಜದ ಸ್ಥಾಾಸ್ಥ್ಯವೂ ಕೆಡುವ ಸಂಭವವಿದೆ. ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಇನ್ನೊೊಬ್ಬ ನಟ ಶಿವರಾಜಕುಮಾರ್‌ಗೆ ಥಳಿಸುವ ದೃಶ್ಯವಿರುವುದೂ ಸಹ ಈಗ ಅಭಿಮಾನಿಗಳ ಆಕ್ರೋೋಶಕ್ಕೆೆ ತುತ್ತಾಾಗಿದೆ. ಇದನ್ನು ಸಿನಿಮಾ ಎಂದು ಅಭಿಮಾನಿಗಳು ಯಾಕೆ ತಿಳಿಯುತ್ತಿಿಲ್ಲ. ಎಲ್ಲವನ್ನೂ ಅಭಿಮಾನಿಗಳನ್ನು ಕೇಳಿಯೇ ನಿರ್ದೇಶಕ ಚಿತ್ರಿಿಸಬೇಕೇ? ಎಂತಹ ಕೆಟ್ಟ ಪರಂಪರೆಗೆ ಇದು ನಾಂದಿ ಹಾಡಿದೆ ಎಂದರೆ, ಮುಂದಿನ ದಿನಗಳಲ್ಲಿ ಯಾವ ನಾಯಕ ನಟನು ಸಿನಿಮಾದಲ್ಲಿ ಪೆಟ್ಟು ತಿನ್ನಲೇಬಾರದು ಎನ್ನುವ ಒತ್ತಾಾಯವೂ ಇಂತಹವರಿಂದ ಬರಬಹುದು.
ಅಭಿಮಾನಿಗಳು ಯಾವತ್ತೂ ಕಣ್ಣು ಮತ್ತು ಕಿವಿ ತೆರೆದು ಸಿನಿಮಾ ನೋಡುವ, ಕೇಳುವ ಮತ್ತು ಅರ್ಥೈಸಿಕೊಳ್ಳುವವರಾಗಬೇಕು. ಅದನ್ನು ಬಿಟ್ಟು ಹುಚ್ಚುಹೊಳೆಯಾಗಿ ಹರಿಯುವ ಯುವ ಶಕ್ತಿಿಯಾದರೆ ಅದರಿಂದ ಯಾವ ಸಾಧನೆಯೂ ಆಗುವುದಿಲ್ಲ. ಇಂತಹವರಿಂದ ಸಮಾಜದಲ್ಲಿ ಅನಾಹುತಗಳೇ ಆಗಬಹುದು.
puvlished on oct 23
.......................................................      
ಬ್ಯಾಾಂಕ್‌ಗಳಿಗೆ ಬೇಡವಾಗಿವೆ ಎಟಿಎಂಗಳು

 ಎಮ್ಮೆೆ ಇಟ್ಟುಕೊಂಡವನಿಗೆ ಹಗ್ಗ ತರುವುದು ಭಾರವೇ ಎಂಬ ಗಾದೆ ಮಾತಿದೆ. ಬ್ಯಾಾಂಕುಗಳು ಎಟಿಎಂನ್ನು ಸ್ಥಾಾಪಿಸಿ ಅದಕ್ಕೆೆ ಸರಿಯಾದ ಭದ್ರತೆ ನೀಡದೆ, ಹಣಕ್ಕೆೆ ರಕ್ಷಣೆ ನೀಡದೆ ಬೇಜವಾಬ್ದಾಾರಿ ತೋರುತ್ತಿಿರುವುದನ್ನು ಕಂಡಾಗ ಈ ಗಾದೆ ನೆನೆಪಾಗುತ್ತದೆ. ಎಟಿಎಂ ತಮ್ಮದು ಎನ್ನುವ ಕಾಳಜಿಯೇ ಇಲ್ಲ. ಅದನ್ನು ಸ್ಥಾಾಪಿಸುವ ಕೆಲಸವನ್ನು ಮಾತ್ರ ಮಾಡುತ್ತಿಿದ್ದಾಾರೆ. ಆದರೆ ಸರಿಯಾಗಿ ನೋಡಿಕೊಳ್ಳಲು ಗನ್‌ಮ್ಯಾಾನ್ ನೇಮಿಸಬೇಕೆಂಬ ವಿಚಾರ ಗೊತ್ತಿಿದ್ದರೂ ಅದನ್ನು ಜಾರಿಮಾಡುತ್ತಿಿಲ್ಲ. ಇರುವ ಎಟಿಎಂಗಳನ್ನು ಸುಸ್ಧಿಿತಿಯಲ್ಲಿಡುವ ಕೆಲಸವನ್ನೂ ಮಾಡುತ್ತಿಿಲ್ಲ. 

ಶಿವಮೊಗ್ಗ: ಹಣಕಾಸು ಸಂಸ್ಥೆೆಗಳು ಮೊದಲ ಆದ್ಯತೆ ಕೊಡಬೇಕಿರುವುದು ಸುರಕ್ಷತೆಗೆ. ಇತ್ತೀಚಿನ ದಿನಗಳಲ್ಲಿ ಇವುಗಳಿಗೆ ಭದ್ರತೆಯೇ ದೊಡ್ಡ ಸಮಸ್ಯೆೆಯಾಗಿ ಕಾಡುತ್ತಿಿರುವುದರಿಂದ ಅದನ್ನು ನಿರ್ಲಕ್ಷಿಸಲಾಗದು. ಸಾರ್ವಜನಿಕರಿಗೆ ಬೇಕಾದಾಗ ಹಣ ದೊರೆಯಲೆಂದು 24*7  ಸೇವೆಯಲ್ಲಿ ಎಟಿಎಂಗಳನ್ನು ತೆರೆಯಲಾಗಿದೆ. ಆದರೆ ಇವುಗಳ ಭದ್ರತೆ ಬಗ್ಗೆೆ ಮಾತ್ರ ಸ್ವಲ್ಪವೂ ಕಾಳಜಿ ವಹಿಸುತ್ತಿಿಲ್ಲ.
ಲಕ್ಷಾಂತರ ರೂ. ಗಳನ್ನು ಎಟಿಎಂನಲ್ಲಿ ಇಟ್ಟಿಿದ್ದರೂ ಅದರ ಕಾವಲಿಗೆ ಶಸ್ತ್ರಸಜ್ಜಿಿತ ಗಾರ್ಡ್ ಇರುವುದಿಲ್ಲ. ಕೆಲವೆಡೆ ಇದ್ದರೂ ಅವರ ಕೈಲಿ ಶಸ್ತ್ರಗಳಿರುವುದಿಲ್ಲ. ಬ್ಯಾಾಂಕಿನವರು ದೇಶೀಯ ಶಸ್ತ್ರ ಬಳಕೆಗೆ ಅನುಮತಿ ಪಡೆದು ಖಾಸಗಿ ಸಂಸ್ಥೆೆಗಳಿಗೆ ಭದ್ರತೆಯ ಜವಾಬ್ದಾಾರಿ ವಹಿಸಬೇಕು. ಆದರೆ ಅದನ್ನು ಮರೆತಿದ್ದಾಾರೆ. ಇದರ ಪರಿಣಾಮವನ್ನು ಗ್ರಾಾಹಕರು ಎದುರಿಸುವಂತಾಗಿದೆ.
ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಾಷ್ಟ್ರಿಿಕೃತ ಬ್ಯಾಾಂಕೊಂದರ ಎಟಿಎಂನಿಂದ ಹಣ ಪಡೆಯಲು  ಅದೇ ಬ್ಯಾಾಂಕಿನ  ನೌಕರಳ ಮೇಲೆ ಹಲ್ಲೆೆ ನಡೆದು ಅವರ ಹಣ ದೋಚಲಾಗಿತ್ತು. ಇದು ದೇಶದಾದ್ಯಂತ ಸುದ್ದಿಯಾಗಿ ಬ್ಯಾಾಂಕಿನವರೆಲ್ಲ ತುರ್ತು ಸಭೆ ಸೇರಿ ಎಟಿಎಂಗಳಿಗೆ ಭದ್ರತೆ ನೀಡಲು ಸಿಸಿ ಕ್ಯಾಾಮರಾ ಹಾಕಲು ಆರಂಭಿಸಿದರು. ಅಂದಿನಿಂದ ಆರಂಭವಾದ ಸಿಸಿ ಕ್ಯಾಾಮರಾ ಅಳವಡಿಕೆ ಅಭಿಯಾನವೇನೊ ಇಂದಿಗೂ ಮುಂದುವರೆದಿದೆ. ಆದರೆ ಅದರ ನಿರ್ವಹಣೆಯನ್ನು ಮಾತ್ರ ಯಾವ ಬ್ಯಾಾಂಕಿನವರೂ  ಮಾಡುತ್ತಿಿಲ್ಲ.
  ಅಳವಡಿಸಿದ ಕ್ಯಾಾಮರಾ ಸರಿಯಾಗಿ ಕೆಲಸ ಮಾಡುತ್ತಿಿದೆಯೇ, ಯಾರ್ಯಾಾರು ಎಟಿಎಂಗೆ ಬಂದು ಹೋಗಿದ್ದಾಾರೆ, ಎನ್ನುವುದರ ಪರಿಶೀಲನೆ ನಡೆಸುತ್ತಿಿಲ್ಲ. ವಾರಕ್ಕೊೊಮ್ಮೆೆಯಾದರೂ ಅದನ್ನು ಗಮನಿಸುವ ತಾಳ್ಮೆೆ ಅವರಲ್ಲಿಲ್ಲ. ಎಟಿಎಂ ಸುತ್ತಮುತ್ತಲಿನ ಚಟುವಟಿಕೆಯನ್ನು ಅಪರೂಪಕ್ಕೆೆ ಪರೀಕ್ಷಿಸಬೇಕು. ಈ ಎಲ್ಲವನ್ನೂ ಬ್ಯಾಾಂಕರ್‌ಗಳು ಮರೆತಿದ್ದಾಾರೆ. ಬದಲಾಗಿ ಪೈಪೋಟಿಗೆ ಬಿದ್ದು ಎಟಿಎಂ ತೆರೆದಿದ್ದಾಾರೆ.
ನಗರದಲ್ಲೇ ಜೆಎನ್‌ಎನ್‌ಸಿಇ ಬಳಿ ಇರುವ ಎಟಿಎಂನ್ನು ಕಳ್ಳರು ದೋಚಲು ಯತ್ನಿಿಸಿದ್ದ ಘಟನೆ ಎರಡು ವರ್ಷದ ಹಿಂದೆ ನಡೆದಿತ್ತು. ಇದಾದ ನಂತರ ಅದೇ ಮಾರ್ಗದಲ್ಲಿ ಇರುವ ಚೆನ್ನಮುಂಬಾಪುರದಲ್ಲಿರುವ  ಎಟಿಎಂನ್ನು ಹೊತ್ತೊೊಯ್ಯಲು ಯತ್ನ ನಡೆದ ಘಟನೆ ಸಹ ಜರುಗಿತ್ತು.  ಮೂರು ವರ್ಷಗಳ ಹಿಂದೆ ಮಾಚೇನಹಳ್ಳಿಿ ಎಸ್‌ಬಿಎಂ ಶಾಖೆಯನ್ನು ದರೋಡೆ ಮಾಡಲಾಗಿತ್ತು. ಇವೆಲ್ಲವೂ ಕಣ್ಣೆೆದುರಿದ್ದರೂ ಅಧಿಕಾರಿಗಳು ಎಚ್ಚೆೆತ್ತಿಿಲ್ಲ.
 ಬ್ಯಾಾಂಕಿನವರು ಕೈಗೊಂಡ ಭದ್ರತಾ ಕ್ರಮಗಳ ಪರಿಶೀಲನೆ ನಡೆಯುತ್ತಿಿದೆಯೇ ಎನ್ನುವ ಪ್ರಶ್ನೆೆಗೆ ಉತ್ತರ ಯಾರಿಗೂ ಗೊತ್ತಿಿಲ್ಲ.  ಜಿಲ್ಲೆೆಯಲ್ಲಿ ವಿವಿಧ 40 ಬ್ಯಾಾಂಕುಗಳ 424 ಎಟಿಎಂಗಳಿವೆ. ಇದರಲ್ಲಿ ಲೀಡ್ ಬ್ಯಾಾಂಕ್ ಆದ ಕೆನರಾ ಬ್ಯಾಾಂಕಿನದು 134 . ಶಿವಮೊಗ್ಗ ನಗರದಲ್ಲಿ ಸುಮಾರು 70 ಎಟಿಎಂಗಳಿವೆ. ಕೆನರಾ ಬ್ಯಾಾಂಕಿನವರು ಒಂದೇ ಒಂದು ಎಟಿಎಂಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಈ ರೀತಿ ನಿರ್ಲಕ್ಷ್ಯವನ್ನು ತೋರಲಾಗುತ್ತಿಿದೆ. ಎಸ್‌ಬಿಐನದು ಎರಡನೆಯ ಅತಿ ಹೆಚ್ಚು ಎಟಿಎಂ ಜಿಲ್ಲೆೆಯಲ್ಲಿದೆ. ಅವರು ಗಾರ್ಡ್ ಇಟ್ಟಿಿರುವರಾದರೂ ಅವರಿಗೆ ಶಸ್ತ್ರ ನೀಡಿಲ್ಲ. ಆಗಾಗ ದುಷ್ಕರ್ಮಿಗಳು ಹಾಡಹಗಲೇ ಲೂಟಿ ಮಾಡುತ್ತಿಿರುವ ಬಗ್ಗೆೆ ಕೇಳುತ್ತಿಿದ್ದರೂ ಸುರಕ್ಷತೆಯ ಬಗ್ಗೆೆ ಇನ್ನೂ ಜಾಗೃತರಾಗದಿರುವುದಕ್ಕೆೆ ಅವರು ತೀರಾ ವಿಷಾದ ವ್ಯಕ್ತಪಡಿಸಿದರು.
ಬ್ಯಾಾಂಕ್ ಶಾಖೆಗಳಲ್ಲಿ  ಸೈರನ್ ಮತ್ತು ಅಗ್ನಿಿ ನಿರೋಧಕ ಮಿನಿಸಿಲಿಂಡರ್ ಇಟ್ಟಿಿರುತ್ತಾಾರೆ. ಅವು ಸುಸ್ಥಿಿತಿಯಲ್ಲಿವೆಯೇ, ಕೆಲಸ ಮಾಡುತ್ತಿಿವೆಯೇ, ಸೈರನ್ ಕರೆಂಟ್ ಇಲ್ಲದ ವೇಳೆ ಕೆಲಸ ಮಾಡುತ್ತದೆಯೇ ಎನ್ನುವುದನ್ನು ಅವರು ಚೆಕ್ ಮಾಡುತ್ತಿಿಲ್ಲ. ಅಣಕು ಕಾರ್ಯಾಚರಣೆ ಮಾಡುವ ಮೂಲಕ ಹೊರಜಗತ್ತಿಿಗೆ ತಾವೆಷ್ಟು ಭದ್ರರಿದ್ದೇವೆ ಎನ್ನುವುದನ್ನು ತೋರಿಸಬೇಕಿತ್ತು. ಮಿನಿಸಿಲಿಂಡರ್‌ಗಳ ಅವಧಿ ಮುಗಿದಿದ್ದರೂ  ಶೋ ಪೀಸ್ ಆಗಿ ಜೋತುಬಿದ್ದಿವೆ. ಅವುಗಳನ್ನು ಬಳಸುವ ರೀತಿಯೂ ಎಷ್ಟೋೋ ಸಿಬ್ಬಂದಿಗಳಿಗೆ ಗೊತ್ತಿಿಲ್ಲ. ಈ ಬಗ್ಗೆೆ ಸಿಬ್ಬಂದಿಗಳಿಗೆ ತರಬೇತಿ ನೀಡುವ ಮೂಲಕ ಎಚ್ಚರದ ಸ್ಥಿಿತಿಯಲ್ಲಿ ಬ್ಯಾಾಂಕುಗಳು ಕಾರ್ಯನಿರ್ವಹಿಸಬೇಕಾದ ಪರಿಸ್ಥಿಿತಿ ಇದೆ.
  ಕೆಲವು ಎಟಿಎಂಗಳ ಮುಂಬಾಗಿಲು ಸದಾ ತೆರೆದೇ ಇರುತ್ತದೆ. ಕಸದ ರಾಶಿಯೇ ಹಲವು ಎಟಿಎಂಗಳ ಒಳಗೆ ಬಿದ್ದಿದೆ. ನಾಯಿಗಳಿಗೂ ಇದು ಆಶ್ರಯತಾಣವಾಗಿದೆ. ಒಟ್ಟಿಿನಲ್ಲಿ, ಬ್ಯಾಾಂಕಿನವರಿಗೇ ಬೇಡವಾದ ಕೂಸಿನಂತಿದೆ ಎಟಿಎಂ. ಅವುಗಳಿಗೆ ಸಕಾಲದಲ್ಲಿ ಹಣ ತುಂಬಿಸದೆ ನೋ ಕ್ಯಾಾಶ್ ಎಂಬ ನಾಮಫಲಕ ತೂಗುಹಾಕಲಾಗಿದೆ. ಕೆಲವು ಎಟಿಎಂಗಳಂತೂ ಓಬೇರಾಯನ ಕಾಲದ್ದಾಾಗಿದ್ದು, ಅವುಗಳ ಕೀ ಸಹಿತ ವಿವಿಧ ಭಾಗಗಳು ಕೆಟ್ಟು ಹೋಗಿದ್ದರೂ ದುರಸ್ತಿಿಪಡಿಸುವ ಕೆಲಸ ನಡೆಯುತ್ತಿಿಲ್ಲ. ಎಟಿಎಂಗಳ ಬಾಗಿಲು ಸರಿಇಲ್ಲ. ಒಳಗೆ ಒಬ್ಬೊೊಬ್ಬರನ್ನೇ ಬಿಡುವ ಪದ್ದತಿ ಇಲ್ಲ. ಹಣ ತೆಗೆದುಕೊಂಡು ಹೊರಬರುವ ಗ್ರಾಾಹಕನಿಗೆ ಭದ್ರತೆ ಇಲ್ಲವೇ ಇಲ್ಲ. ಇವೆಲ್ಲವೂ ಗ್ರಾಾಹಕನಿಗೆ ಬ್ಯಾಾಂಕುಗಳು ನೀಡುತ್ತಿಿರುವ ಸೇವೆಗಳು!
 ನಗದುರಹಿತ ವಹಿವಾಟು ಜಾರಿಯಾಗಿದ್ದರೂ ಎಟಿಎಂಗಳ ಮೇಲೆಯೇ ಗ್ರಾಾಹಕರ ಅವಲಂಬನೆಯೇನೂ ಕಡಿಮೆಯಾಗಿಲ್ಲ. ಆದರೂ ಗ್ರಾಾಹಕರ ಹಣದ ಬಗ್ಗೆೆ ಬೇಜವಾಬ್ದಾಾರಿ ತೋರುತ್ತಿಿರುವುದು ಖಂಡನಿಯ. ಒಟ್ಟಿಿನಲ್ಲಿ, ಎಟಿಎಂ ನಿರ್ವಹಣೆ ಮತ್ತು ಭದ್ರತೆ ಬಗ್ಗೆೆ ಬ್ಯಾಾಂಕುಗಳು ಅತಿ ನಿರ್ಲಕ್ಷ್ಯ ತೋರುತ್ತಿಿವೆ ಎಂದರೆ ತಪ್ಪೇನಿಲ್ಲ.   
...............................

ಶಿವಮೊಗ್ಗ,ಅ.22: ನ.1 ರಂದು ಎಂಇಎಸ್ ಬೆಳಗಾವಿ ಯಲ್ಲಿ ನಡೆಸಲು ಉದ್ಧೇಶಿಸಿರುವ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದು ಹಾಗೂ ಎಂಇ ಎಸ್‌ನ್ನು ನಿಷೇಧಿಸುವಂತೆ ಒತ್ತಾಾ ಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಾ ಘಟಕದ ವತಿಯಿಂದ ಇಂದು ಜಿಲ್ಲಾಾಧಿ ಕಾರಿಗಳ ಮೂಲಕ ಮುಖ್ಯ ಮಂತ್ರಿಿಗಳಿಗೆ ಮನವಿ ಸಲ್ಲಿಸಿತು.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಸಂಘ ಟನೆಯ ಹೆಸರಿನಲ್ಲಿ ಹಲವು ದಶಕಗಳಿಂದ ದಬ್ಭಾಾಳಿಕೆ ನಡೆಸು ತ್ತಿಿರುವ ಸಮಿತಿ ನ.1 ರ ಕನ್ನಡ ರಾಜ್ಯೋೋತ್ಸವ ದಿನದಂದು ಕರಾಳ ದಿನಾಚರಣೆ ಮಾಡಲು ಉದ್ಧೇ ಶಿಸಿದ್ದು ಇದರಿಂದ ಬೆಳಗಾವಿ ಯಲ್ಲಿ ಉದ್ವಿಿಗ್ನ ಸ್ಥಿಿತಿ ನಿರ್ಮಾಣ ಮಾಡಿ ಜನರ ನಡುವೆ ಸಂಘರ್ಷ ಹುಟ್ಟಿಿಸಿ ಆಸ್ತಿಿ, ಪಾಸ್ತಿಿಗೆ ಕಾರಣ ವಾಗುತ್ತಿಿದೆ ಎಂದು ದೂರಿದರು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆೆ ಸೇರಿಸಬೇಕೆಂಬ ನಿಯಮ ಪ್ರತಿಪಾದಿಸುತ್ತಾಾ ಮರಾಠಿ ಮಹಾಮೇಳವನ್ನು ಆಯೋಜಿಸಿ ಇದಕ್ಕೆೆ ಮಹಾರಾಷ್ಟ್ರ ಕೆಲವು ರಾಜಕಾರಣಿಗಳನ್ನು ಕರೆಯಿಸಿ ಕರ್ನಾಟಕ ಸರ್ಕಾರದ ವಿರುದ್ದ ಪ್ರಚೋದನಾಕಾರಿ ಭಾಷಣ ಮಾಡಿಸುತ್ತಾಾ ಬಂದಿದೆ. ಅಲ್ಲದೇ ಬೆಳಗಾವಿ ಜಿಲ್ಲಾಾದ್ಯಂತ ಹಲವು ಗ್ರಾಾಮ, ಪಟ್ಟಣಗಳ ಹೆಸರಿನ ನಾಮಫಲಕಗಳಲ್ಲಿ ಮಹಾರಾಷ್ಟ್ರವೆಂದು ಬರೆಯುವ ಮೂಲಕ ಕನ್ನಡಿಗರ ಸ್ವಾಾಭಿಮಾನವನ್ನು ಕೆರಳಿಸಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ನಾಡದ್ರೋಹಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಒತ್ತಾಾಯಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಾಧ್ಯಕ್ಷ ಎಂ.ಆರ್.ವೆಂಕಟೇಶ್ ಹೆಗಡೆ, ಪಡುವಳ್ಳಿಿ ಹರ್ಷೇಂದ್ರ ಕುಮಾರ್, ಎನ್.ಬಿ.ಕರಿಬಸಯ್ಯ, ಜ್ಯೋೋತಿ ಎಚ್.ಪಿ, ಪ್ರವೀಣ್ ಗೌಡ, ಬಲೀಂದ್ರಪ್ಪ, ಬಿಂದುಶ್ರೀ ಮುಂತಾದವರಿದ್ದರು.
published on 25th oct 2018
.......................................

Wednesday, 3 October 2018

 ಗಾಂಧಿ ಸಿದ್ಧಾಾಂತ ನಿತ್ಯನೂತನ



ಅಕ್ಟೋೋಬರ್ 2 ರಂದು ಮಾತ್ರ ನಮಗೆ ಗಾಂಧೀಜಿ ನೆನಪಾಗುತ್ತಾಾರೆ. ನಂತರ ಮರೆಯಾಗುತ್ತಾಾರೆ. ಆದರೆ ಗಾಂಧಿ ಸಿದ್ಧಾಾಂತ ಹಾಗಲ್ಲ,  ಅದು ನಿತ್ಯನೂತನ. ಪ್ರಪಂಚದ ಎಲ್ಲ ದೇಶಗಳು ಅನೇಕ  ಸಿದ್ಧಾಾಂತಗಳ ಅಡಿಯಲ್ಲಿ ಬೆಳೆಯುತ್ತಿಿದ್ದರೂ ಈ ಸಿದ್ಧಾಾಂತ ಮಾತ್ರ ಇಂದೂ ಪ್ರಸ್ತುತವಾಗಿದೆ. ಭಾರತದಲ್ಲಿ ಅಹಿಂಸೆ, ಸತ್ಯಾಾಗ್ರಹ, ರಕ್ತರಹಿತ ಕ್ರಾಾಂತಿಯಿಂದ ಸ್ವಾಾತಂತ್ರ್ಯ ಬಂದಿದ್ದರಿಂದ, ಇಂದಿಗೂ  ಇಲ್ಲಿ ಅನೇಕ ಭಾಷೆಗಳು ಧರ್ಮಗಳ ಮಧ್ಯೆೆ ಒಂದಿಷ್ಟು 
ಸಹಿಷ್ಣುತೆ ಇದೆ. ಅದಕ್ಕೆೆ ಕಾರಣ ಗಾಂಧಿ ಸಿದ್ಧಾಾಂತ.



ಮರೆತೆವೋ ನಾವು ಮರೆಯಬಾರದವನ
ಕೊಂದೆವೋ ನಾವು ಕೊಲಬಾರದವನ
ಹೇ ರಾಮಾ, ನಾವೆಂತ ಪಾಪಿ ಜನಾ 
ಎಂದು ಕವಿ ಕಯ್ಯಾಾರ ಕಿಂಞಣ್ಣ ರೈ  ‘ಹೇ ರಾಮಾ’ ಎಂಬ ಕವಿತೆಯಲ್ಲಿ ಮರುಗುತ್ತಾಾರೆ.
 ಸ್ವಾಾತಂತ್ರ್ಯೋೋತ್ತರ ಭಾರತದಲ್ಲಿರುವ ನಾವು ಗಾಂಧೀಜಿಯನ್ನು ಮರೆಯಬಾರದು. ಆದರೆ ಇಂದು ಅವರನ್ನು ಟೀಕಿಸುತ್ತಿಿದ್ದೇವೆ, ವ್ಯಂಗ್ಯ ಮಾಡುತ್ತಿಿದ್ದೇವೆ, ನಿಂದಿಸುತ್ತಿಿದ್ದೇವೆ. ಗಾಂಧೀಜಿ ತೋರಿದ, ಸಾರಿದ ಜೀವನಾದರ್ಶ ನಮಗೆ ಬೇಡವಾಗಿದೆ. ಅವರ ಸಿದ್ಧಾಾಂತದ ಬಗ್ಗೆೆ ಮಾತನಾಡುವವರೂ ಕಡಿಮೆಯಾಗುತ್ತಿಿದ್ದಾಾರೆ.
ಇದೇನೇ ಇದ್ದರೂ, ಗಾಂಧಿ ಸಿದ್ಧಾಾಂತ ಮಾತ್ರ ಸದಾ ನಿತ್ಯನೂತನ. ಪ್ರಪಂಚದ ಎಲ್ಲ ದೇಶಗಳು ಅನೇಕ  ಸಿದ್ಧಾಾಂತಗಳ ಅಡಿಯಲ್ಲಿ ಬೆಳೆಯುತ್ತಿಿದ್ದರೂ ಈ ಸಿದ್ಧಾಾಂತ ಮಾತ್ರ  ಬಲಪಂಥೀಯ, ಎಡಪಂಥೀಯ ಎನ್ನದೆ ಆಚಾರ, ವಿಚಾರಗಳಡಿಯಲ್ಲಿ ನಿತ್ಯನೂತನವಾಗಿ ಇಂದಿಗೂ ಪ್ರಸ್ತುತವಾಗಿದೆ.
ಬುದ್ಧ, ಬಸವಣ್ಣ ನೀಡಿದ ಅದೇ ವಿಚಾರಗಳನ್ನು ಹೊಸ ಹೊಳಪಿನೊಂದಿಗೆ ಗಾಂಧೀಜಿ ಪ್ರತಿಪಾದಿಸಿದರು. ಪ್ರಪಂಚದ ಅನೇಕ ದೇಶಗಳು  ಸ್ವಾಾತಂತ್ರ್ಯಕ್ಕಾಾಗಿ ಅನೇಕ ಹೋರಾಟಗಳನ್ನು ಮಾಡಿ ರಕ್ತದ ಕೋಡಿಯನ್ನೇ ಹರಿಸಿ ಸ್ವಾಾತಂತ್ರ್ಯ ಪಡೆದಿದ್ದರೂ ಸ್ವಾಾತಂತ್ರ್ಯ ಸಿಕ್ಕ ನಂತರವೂ ಅಲ್ಲೆೆಲ್ಲ ಅಶಾಂತಿ, ದ್ವೇಷ, ಮಾನಸಿಕ  ಕ್ಷೋಭೆ ಇದ್ದೇ ಇದೆ. ಭಾರತದಲ್ಲಿ ಅಹಿಂಸೆ, ಸತ್ಯಾಾಗ್ರಹ, ರಕ್ತರಹಿತ ಕ್ರಾಾಂತಿಯಿಂದ ಈ ಸ್ವಾಾತಂತ್ರ್ಯ ಬಂದಿದ್ದರಿಂದ ಇಂದಿಗೂ  ಇಲ್ಲಿ ಅನೇಕ ಭಾಷೆಗಳು ಧರ್ಮಗಳ ಮಧ್ಯೆೆ ಒಂದಿಷ್ಟು ಸಹಿಷ್ಣುತೆ ಇದೆ. ಅದಕ್ಕೆೆ ಕಾರಣ ಗಾಂಧಿ ಸಿದ್ಧಾಾಂತ.
ಉಗ್ರಗಾಮಿಗಳು ಪ್ರಪಂಚವನ್ನೆೆಲ್ಲ ಆವರಿಸುತ್ತಿಿರುವಾಗ ಗಾಂಧೀಜಿಯ ಪರಧರ್ಮ  ಸಹಿಷ್ಣುತೆ ನಮಗೆ ಆದರ್ಶವಲ್ಲವೇ?  ವಿದೇಶೀಕರಣದ ಹುಚ್ಚು ವ್ಯಾಾಮೋಹದಲ್ಲಿ ತೇಲುತ್ತಿಿರುವಾಗ ಸ್ವದೇಶಿ ಚಳುವಳಿ ಎಷ್ಟು ಮುಖ್ಯ ಅನಿಸುವುದಿಲ್ಲವೇ? ಬಾದಾಮಿ ಕೊಳ್ಳಲಾಗದವನಿಗೆ  ಶೇಂಗಾ ಬೀಜ ಅಪ್ಯಾಾಯವಾಗದೇ ಇನ್ನೇನು? ಸೂಟು ಬೂಟಿನ ವಸ್ತ್ರ  ಪ್ರದರ್ಶನದ ಮಧ್ಯೆೆ ಸರಳ ಖಾದಿ ಎಷ್ಟು ಸುಂದರ ಅಲ್ಲವೇ?  ಕೊಚ್ಚುವ, ಕೊಲ್ಲುವ ಹಿಂಸೆಗಳಿಗಿಂತ ಉಪವಾಸಗಳಿಂದ  ಹೆದರಿಸುವುದು ದೊಡ್ಡ ಅಸ್ತ್ರವೇ ಅಲ್ಲವೇ? ಗಾಂಧಿ ಸಿದ್ಧಾಾಂತಗಳನ್ನು ಇಂದಿನ ಯುವಕ ಯುವತಿಯರು ಸಹ  ಒಪ್ಪುತ್ತಾಾರೆ, ಒಪ್ಪುತ್ತಿಿದ್ದಾಾರೆ. ನೋಡಿ, ಅಣ್ಣಾಾ ಹಜಾರೆಯ ಭ್ರಷ್ಟಾಾಚಾರದ ವಿರುದ್ಧದ ಉಪವಾಸದ ಹೋರಾಟಕ್ಕೆೆ ಐ.ಟಿ. ಬಿ.ಟಿ. ಯಿಂದ ಹಿಡಿದು ಸಾಮಾನ್ಯವರ್ಗದ ಜನರು ಸಹ ಕೈ ಜೋಡಿಸಿದ್ದರು.  ಗಾಂಧೀಜಿಯ ಆ ಸಿದ್ಧಾಾಂತವೇ ಪ್ರೇರಣೆ ಅಲ್ಲವೇ?
ನಮ್ಮ ಗಾಂಧಿಯ ಬಾಗು ಬಳುಕಿನ ದೇಹ, ಕೋಲಿನಾಸರೆಯ ಜೀವ, ಬರಿಮೈಯ ಆ ಶರೀರ, ಉಪವಾಸ, ಅಸಹಕಾರ, ಶಾಂತಿ ಮಂತ್ರದ ಹರಿಕಾರ. ಮದ್ದಿಲ್ಲ, ಗುಂಡಿಲ್ಲ, ಬರಿಕೈಯ ಫಕೀರ. ದಂಡು ಕಟ್ಟದಿದ್ದರೂ ಹಿಂಡಿಂಡು ಜನ ಅವರ ಹಿಂದೆ ಇರುತ್ತಿಿದ್ದರು. ಉಪವಾಸ ಸತ್ಯಾಾಗ್ರಹದಿಂದಲೇ ಕ್ಷಣಾರ್ಧದಲ್ಲಿ  ಯುವಜನರನ್ನು ಗೆದ್ದರು.  ಕೋಟಿ ಕೋಟಿ ನಾಯಕರು ಇರಬಹುದು ಈ ದೇಶದಲ್ಲಿ.  ಆದರೂ ನೋಟಿನೊಳಗೆ ಅವರೊಬ್ಬರಿಗೇ ಸ್ಥಾಾನ. ಇದು ಅವರ ಪ್ರಸ್ತುತತೆಗೆ ಸಾಕ್ಷಿ.
ಪ್ರಪಂಚದ  ಯಾವುದೇ ಭಾಗದಲ್ಲಿ ಯಾವುದೇ ಸಿದ್ಧಾಾಂತಗಳು ಒಂದಿಷ್ಟು  ವರ್ಷ ಪ್ರಬಲವಾಗಿದ್ದರೂ ಕೊನೆಗೆ ಅವು ನಮ್ಮ ಗಾಂಧೀ  ಸಿದ್ಧಾಾಂತದ ಆದರ್ಶದ ಪ್ರಭಾವಕ್ಕೆೆ ಒಳಗಾಗಲೇಬೇಕು. ಯಾಕೆಂದರೆ ಇದು ನಿತ್ಯನೂತನ.
‘ಸತ್ಯಮೇವ ಜಯತೇ’ ಎಂಬುದನ್ನು ಮತ್ತೆೆ ತೋರಿಸಿಕೊಟ್ಟವರು ಗಾಂಧೀಜಿ. ಹಿಂಸೆಯನ್ನು ಅಹಿಂಸೆಯ ಮೂಲಕ ಜಯಿಸಲು ಸಾಧ್ಯವೆಂಬುದನ್ನು ಜಗತ್ತಿಿಗೇ ಸಾರಿದವರು. ಗಾಂಧೀಜಿಯ ಕಾಲಾನಂತರ ಅವರು ತೋರಿದ ರಾಜಮಾರ್ಗದಲ್ಲೇ ಅಂದರೆ ಸತ್ಯ ಅಹಿಂಸೆಯ ಮೂಲಕವಾಗಿಯೇ ಜಗತ್ತಿಿನ ಅನೇಕ ರಾಷ್ಟ್ರಗಳು ಸ್ವತಂತ್ರವಾದುವು ಎಂಬುದನ್ನು ನೆನಪಿಸಿಕೊಳ್ಳಬೇಕು. ಗಾಂಧೀಜಿ ಸತ್ಯ ಅಹಿಂಸೆಯ ಮೂಲಕವೇ ನಾಡನ್ನು ಎಚ್ಚರಿಸಿದರು; ಕಟ್ಟಿಿದರು. ಆದರೆ ನಮಗಿಂದು ಸತ್ಯದ ಮುಖವಾಡವಿದೆ; ಅಹಿಂಸೆ ಬರಿಯ ಘೋಷಣೆಯಾಗಿ ಉಳಿದಿದೆ.
ಗಾಂಧೀಜಿ ಮಹಾತ್ಮರೆಂದು ಕರೆಸಿಕೊಂಡಿದ್ದು ಅವರ ನಡೆ-ನುಡಿಯ ಬದುಕಿನಿಂದಾಗಿ. ಸಾಧಿಸಿ ತೋರಿದ ಅಸಾಮಾನ್ಯ ಸಾಧನೆಯಿಂದಾಗಿ. ಸರ್ವಸಮತಾ ದೃಷ್ಟಿಿಯ ಉಜ್ವಲ ಮಾನವತಾವಾದಿಯಾಗಿ. ಅನೇಕ ವಿದೇಶೀಯ ಮಹಾವ್ಯಕ್ತಿಿಗಳೂ ಕೂಡ ಗಾಂಧೀಜಿಯವರನ್ನು ಕೊಂಡಾಡಿದ್ದಾಾರೆ.
ಗಾಂಧೀಜಿ ಸದಾ ಸರಳ ಜೀವನ ನಡೆಸಿದರು. ಅವರ ಉಡುಗೆ- ತೊಡುಗೆಗಳೇ ಇದಕ್ಕೆೆ ಸಾಕ್ಷ್ಯವಾಗಿದ್ದವು. ಅವರೆಂದೂ ಮದ್ಯ- ಮಾಂಸ ಮುಟ್ಟಲಿಲ್ಲ. ನಾಲಗೆಯ ಚಪಲಕ್ಕೆೆ ಒಳಗಾಗಲಿಲ್ಲ. ಹಿತಮಿತವಾಗಿತ್ತು ಅವರ ಆಹಾರ. ದಿನಾ ಸಾಮೂಹಿಕ ಪ್ರಾಾರ್ಥನೆ, ಆಗಾಗ ಮೌನ ಅವರಿಗೆ ವ್ರತವಾಗಿತ್ತು. ಸಹನೆ ಅವರ ಅಸ್ತ್ರವಾಗಿತ್ತು. ಇಂದ್ರಿಿಯ ನಿಗ್ರಹಕ್ಕಾಾಗಿ ಆಗಾಗ ಉಪವಾಸ ಅವರಿಗೆ ದೀಕ್ಷೆಯಾಗಿತ್ತು. ಎಲ್ಲಕ್ಕಿಿಂತ ಮಿಗಿಲಾಗಿ ಆತ್ಮಶೋಧನೆ ಅವರ ಬದುಕಿನ ಧ್ಯೇಯವಾಗಿತ್ತು. ಸರ್ವ ಮತ-ಧರ್ಮಗಳ ಸತ್ಯಶೋಧನೆ ಅವರ ಗುರಿಯಾಗಿತ್ತು. ಸರ್ವಹಿತ ಸಾಧನೆ ಅವರ ಜೀವನ ಪಥವಾಗಿತ್ತು.

published on oct 2
.............................

Saturday, 29 September 2018

ಮರಗಳ ಆರ್ತ ಮೊರೆ....


ಶಿವಮೊಗ್ಗದ ಸಾಗರ ರಸ್ತೆೆಯನ್ನು ಚತುಷ್ಪಥ ರಸ್ತೆೆಯನ್ನಾಾಗಿಸುವ ಕೆಲಸಕ್ಕೆೆ ಚಾಲನೆ ನೀಡಲಾಗಿದೆ. ಇಲ್ಲಿ ಕೆಲವು ಮರಗಳನ್ನು ಅತ್ತ ಕಡಿಯಲೂ ಆಗದೆ, ಇತ್ತ ಜೀವಂತ ಬಿಡಲೂ ಆಗದೆ ಇರುವುದರಿಂದ ಹೇಗಾದರೂ ಸಾಯಿಸಬೇಕೆಂಬ ಯೋಚನೆ ಕಾಮಗಾರಿ ಮಾಡುವವರಲ್ಲಿ ಇದ್ದಂತಿದೆ. ಅದಕ್ಕಾಾಗಿ ಅವರು ಮಾಡಿದ್ದೇನೆಂದರೆ ಮರದ ಎಡ- ಬಲಕ್ಕೆೆ ಮಣ್ಣನ್ನು ತೆಗೆದು ಬಿಟ್ಟಿಿದ್ದಾಾರೆ. ಇದರಿಂದ  ತಾನಾಗಿ ಅದು ಬಿದ್ದು ಹೋಗಬೇಕು, ಇಲ್ಲವೇ ಆಹಾರ ಸರಬರಾಜಾಗದೆ ಒಣಗಿ ಸಾಯಬೇಕು.. ಎಂತಹ ಆಲೋಚನೆ!

ಹೇ ಮನುಜ, ಹತ್ತು ಬಾವಿಗಳು ಒಂದು ಕೊಳಕ್ಕೆೆ ಸಮಾನ, ಹತ್ತು ಕೊಳಗಳು ಒಂದು ಕೆರೆಗೆ ಸಮಾನ, ಹತ್ತು ಕೆರೆಗಳು ಒಬ್ಬ ಪುತ್ರನಿಗೆ ಸಮಾನ, ಹತ್ತು ಪುತ್ರರು ಒಂದು ಮರಕ್ಕೆೆ ಸಮಾನ ಎಂಬ ಮಾತಿದೆ.
ಇದಕ್ಕಾಾಗಿ ಹಿಂದಿನವರು ಸಾಲುಮರ ನೆಟ್ಟರು, ರಕ್ಷಿಸಿ ಬೆಳೆಸಿದರು. ಅವೆಲ್ಲ ಇಂದು ನಿನಗೆ ಬೀದಿಬದಿಯಲ್ಲಿ ನೆರಳು ಕೊಡುತ್ತ ನಿಂತಿವೆ. ಆದರೆ ಈಗ ಅಭಿವೃದ್ಧಿಿ ಹೆಸರಿನಲ್ಲಿ ನಮ್ಮ ಕುಲಕ್ಕೆೆ ಸಂಚಕಾರ ತಂದೊಡ್ಡಿಿರುವೆ. ರಸ್ತೆೆಯಂಚಿನಲ್ಲಿ ನೂರಾರು ವರ್ಷದಿಂದ ನಿನಗೆ ನೆರಳು, ಹಣ್ಣು ನೀಡುತ್ತ, ಉಪಕಾರದಲ್ಲೇ ಕಾಲಕಳೆಯುತ್ತಿಿರುವೆವು. ಉಪಕಾರಕ್ಕೆೆ ಪ್ರತ್ಯುಪಕಾರ ಮಾಡುವುದಿರಲಿ, ನಮ್ಮನ್ನೂ ಸಾಯಿಸಹೊರಟಿರುವೆಯಾ?  ಬುಡಕ್ಕೆೆ ನೇರವಾಗಿ ಕೊಡಲಿ ಹಾಕಲು ಭಯ. ಏಕೆಂದರೆ ಹೋರಾಟ, ಪ್ರತಿಭಟನೆ ಶುರವಾಗುತ್ತದೆ. ಅದಕ್ಕೆೆ ಸುತ್ತ ಮಣ್ಣು ತೆಗೆದು ನನಗೆ ಏನೂ ಸಿಗದಂತೆ ಮಾಡುವುದರ ಜೊತೆಗೆ ನಾನಾಗಿಯೇ ಸಾಯುವಂತೆ ಮಾಡುವ ಹುನ್ನಾಾರ ಮಾಡಿರುವೆಯಾ?
ಇನ್ನಾಾದರೂ ಎಚ್ಚರವಾಗು, ನನಗೊಂದು ಕೊಡ ನೀರುಣಿಸು. ನಿನ್ನ ಪೀಳಿಗೆಯನ್ನು ಸಂರಕ್ಷಿಸುವೆ. ನನ್ನನ್ನು ಕೇವಲ ಮೂರು ವರ್ಷ ಸಲುಹಿದರೆ ಸಾಕು, ನಾನು ನಿನ್ನ ಪೀಳಿಗೆಯನ್ನು ನೂರು ವರ್ಷ ರಕ್ಷಿಸುವೆ.
ನನ್ನಿಿಂದ ನೂರಾರು ಮರಗಳಾಗಿವೆ. ಹೂವಾಗಿ, ಕಾಯಾಗಿ, ಹಣ್ಣಾಾಗಿ, ಹಣ್ಣಿಿನ ಉದರದಲ್ಲಿ ಬೀಜವಾಗಿ ಹೊರಬಂದು ಭೂಮಿಗೆ ಬಿದ್ದು ಮತ್ತೆೆ ಮೊಳಕೆಯೊಡೆದು, ಸೊಂಪಾಗಿ ಬೆಳೆದು ನಿಮ್ಮೆೆದುರು ಬೆಳೆಯುತ್ತಿಿರುವೆ. ಇಂತಹ ನನಗೆ ದಿನಕ್ಕೊೊಂದು ಕೊಡ ನೀರು ಹಾಕಿ, ಜನ, ಜಾನುವಾರುಗಳಿಂದ ರಕ್ಷಿಸುವ ಬದಲು ಸಾಯಿಸುತ್ತಿಿರುವೆಯಲ್ಲಾಾ?  ನನ್ನ ಮೌಲ್ಯ ಬೆಲೆ ಕಟ್ಟಲಾಗದ್ದು ಎಂದರಿತು ಅದರ ಲಾಭಕ್ಕಾಾಗಿ ಯತ್ನಿಿಸುತ್ತಿಿರುವೆಯಾ? ನಿಮಗಾಗಿ, ನಿಮ್ಮ ಮಕ್ಕಳಿಗಾಗಿ, ನಿಮ್ಮ ಮೊಮ್ಮಕ್ಕಳಿಗಾಗಿ, ಮುಂದಿನ ತಲತಲಾಂತರಗಳಿಗಾಗಿ  ಗಾಳಿ, ನೀರು, ಆಹಾರ, ಹೂವು, ಹಣ್ಣು, ನೆರಳು, ಕಾಯಿ, ಬೀಜ, ಔಷಧಿ ಇನ್ನಿಿತರ ಉಪಯೊಗ ನನ್ನಿಿಂದಿದೆ. ಒಂದು ವೃಕ್ಷದ ಜೀವಿತ ಕಾಲದಲ್ಲಿ ಅದರಿಂದ ಸಿಗುವ ಆಮ್ಲಜನಕದ ಮೌಲ್ಯ 15 ಮಿಲಿಯನ್ ರೂಪಾಯಿಗಳು, ಪರಿಸರ ಮಾಲಿನ್ಯವನ್ನು ನಿಯಂತ್ರಿಿಸುವುದಕ್ಕಾಾಗಿ, ಮಣ್ಣು ಸವಕಳಿ ತಡೆಗಾಗಿ, ಆರ್ದ್ರತೆ ಕಾಪಾಡುವುದಕ್ಕಾಾಗಿ, ನೀರು ಮರುಬಳಕೆ, ಪಶುಪಕ್ಷಿಗಳಿಗೆ ಆಶ್ರಯ, ಸಸಾರಜನಕದ ಉತ್ಪಾಾದನೆ ಮುಂತಾದುವುಗಳಿಗೆಲ್ಲ ಬೇಕೇ ಬೇಕು. ಆದ್ದರಿಂದ ನನ್ನನ್ನು ಸಾಯಿಸುವ ಮುನ್ನ ಅಥವಾ ಕಡಿಯುವ ಮುನ್ನ ಯೋಚಿಸು.
ನಿನಗೆ ನನ್ನ ಸಹಾಯ ಬೇಕೆಂದಾದರೆ, ನಿನ್ನ ಮುಂದಿನ ತಲೆಮಾರು ಶುದ್ಧ ಗಾಳಿಯಿಂದ ಬದುಕಬೇಕೆಂದಾದಲ್ಲಿ, ಕನಿಷ್ಠ ನೀರನ್ನಾಾದರೂ ಉಣಿಸು.  ಅಮೂಲ್ಯವಾದ ಕುಡಿಯುವ ನೀರನ್ನು ಕೊಡು ಎಂದು ನಾನು ಕೇಳುತ್ತಿಿಲ್ಲ. ನೀನು ಕೈಕಾಲು ಮುಖ ತೊಳೆದ, ಸ್ನಾಾನ ಮಾಡಿದ ನೀರು, ಯಾವುದಾದರೂ ಆದೀತು. ಅದನ್ನು ಶುದ್ಧಗೊಳಿಸಿ ನಾನು ಮರುಬಳಕೆ ಮಾಡಿಕೊಳ್ಳುತ್ತೇನೆ. ಪುನಃ ನಿನಗೆ ಶುದ್ಧ ನೀರನ್ನು ಕೊಡುತ್ತೇನೆ. ಈಗಲೂ ಕಾಲ ಮಿಂಚಿಲ್ಲ. ಯೋಚಿಸು.
   ನಿನ್ನ ಹಿತ ಚಿಂತಕ ನಾನು, ಆದರೆ ನನ್ನ ಹಿತವನ್ನು ನೀನೇಕೆ ಯೋಚಿಸುತ್ತಿಿಲ್ಲ? ನನ್ನನ್ನು ಸಾಯಿಸಬೇಡ, ಇರಲುಬಿಡು. ಮುಂದಿನ ಪೀಳಿಗೆ ನೆಮ್ಮದಿಯಿಂದಿರಲು ಸಹಕರಿಸು. ಒಮ್ಮೆೆ ಯೋಚಿಸು. ಚತುಷ್ಪಥ ರಚಿಸಿ ಎಲ್ಲಾಾ ಬೋಳುಗಡ್ಡೆೆಯಂತಾದರೆ ನಿನಗೆ ನೆರಳು ಕೊಡುವವರಾರು? ಆಗ ಮತ್ತೆೆ ನನ್ನ ನೆನಪು ಆದೀತು. ಅದಕ್ಕಾಾಗಿ ಸಾಯಿಸಬೇಡ, ನನ್ನ ಮಕ್ಕಳು, ಮರಿಮಕ್ಕಳನ್ನು ಪೋಷಿಸಿ, ಬೆಳೆಸು. ಸಾವಿರಾರು ಜನರಿಗೆ ಉಪಕಾಕಾರಿಯಾಗುವೆ.

published on 28-9-2018
...................................

Monday, 24 September 2018

ಇಂತಹ ಡಿಸಿ ಎಲ್ಲ ಜಿಲ್ಲೆೆಗೂ ಬೇಕು



ಜಿಲ್ಲಾಾಧಿಕಾರಿ ಕೆ. ಎ. ದಯಾನಂದ ಸಮಯ ವ್ಯರ್ಥ ಮಾಡದ ಅಧಿಕಾರಿ. ಎಲ್ಲಿಯೇ ಸಮಸ್ಯೆೆ ಕಂಡುಬರಲಿ, ಅಲ್ಲಿಗೆ ತತಕ್ಷಣವೇ ದೌಡಾಯಿಸುತ್ತಾಾರೆ.  ದೂರು-ದುಮ್ಮಾಾನಗಳನ್ನು ಆಲಿಸಿ, ನಾಗರಿಕರು ನೀಡುವ ದೂರನ್ನು ಗಮನಿಸಿ ಸ್ಥಳ ಸಂದರ್ಶಿಸಿ ಸಮಸ್ಯೆೆ ಪರಿಹರಿಸುತ್ತಿಿದ್ದಾಾರೆ. ಕಳೆದ ವಾರ ಪ್ರಮುಖವಾಗಿ ಭದ್ರಾಾವತಿ ಸರ್ಕಾರಿ ಆಸ್ಪತ್ರೆೆ, ವಿದ್ಯಾಾನಗರದ ವಿದ್ಯಾಾರ್ಥಿನಿಲಯ, ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ದೂರಿನನ್ವಯ ಕ್ರಮ ಜರುಗಿಸಿದ್ದಾಾರೆ. ತಮ್ಮ ಬಿಡುವಿಲ್ಲದ ಸರ್ಕಾರಿ ಸಭೆ, ಸಮಾರಂಭಗಳ ಮಧ್ಯೆೆಯೂ ಬೆಳಿಗ್ಗೆೆ, ಮಧ್ಯಾಾಹ್ನ ಅಥವಾ ಸಂಜೆ ದಿಢೀರ್ ಭೇಟಿ ನೀಡುವ ಮೂಲಕ ಅದಿಕಾರಿಗಳಲ್ಲಿ, ನೌಕರರಲ್ಲಿ ಸಂಚಲನ ಮೂಡಿಸಿದ್ದಾಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಮೂಲಕ ಎಲ್ಲಾಾ ಕಚೇರಿಗಳಲ್ಲೂ ಶಿಸ್ತು, ಸಮರ್ಪಕ ಕಾರ್ಯ ನಡೆಯುವಂತೆ ಮಾಡಬೇಕಿದೆ.     



 ಜಿಲ್ಲಾಾ ಆಡಳಿತದ ಶಕ್ತಿಿ ಕೇಂದ್ರವೆಂದೇ ಬಿಂಬಿತವಾಗಿರುವ ಜಿಲ್ಲಾಾಧಿಕಾರಿ ಕಚೇರಿಯು, ಜಿಲ್ಲೆೆಯಲ್ಲಿ ಈಗ ಎಲ್ಲರ ಗಮನಸೆಳೆಯುತ್ತಿಿದೆ. ಪ್ರತಿ ಕೆಲಸ ಕಾರ್ಯಗಳೂ ಇಲ್ಲಿ ವೇಗ ಪಡೆದಿವೆ, ಕಡತಗಳ ವಿಲೇವಾರಿ ಸಕಾಲದಲ್ಲಿ ನಡೆಯುತ್ತಿಿದೆ. ನಾಗರಿಕರ ದೂರು- ದುಮ್ಮಾಾನಗಳೂ ಪರಿಹರಿಸಲ್ಪಡುತ್ತಿಿವೆ. ಇದೆಲ್ಲಕ್ಕಿಿಂತ ಮುಖ್ಯವಾಗಿ ಜನರ ಸಮಸ್ಯೆೆಗೆ ಉತ್ತಮ ಸ್ಪಂದನೆ ಸಿಗುತ್ತಿಿದೆ.
 ದಯಾನಂದ ಅವರು ಜಿಲ್ಲಾಾಧಿಕಾರಿಯಾಗಿ ಆಗಮಿಸಿ ಸುಮಾರು ಎರಡು ತಿಂಗಳಾಗಿದೆ. ಇಷ್ಟರಲ್ಲೇ ಆಡಳಿತ ವ್ಯವಸ್ಥೆೆ ದಿಢೀರ್ ಆಗಿ ಚುರುಕುಗೊಂಡಿದೆ. ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾಾರೆ. ಅಂಕೆಗೆ ಸಿಗದಂತಾಗಿದ್ದ ತಾಲೂಕು ಆಡಳಿತದ ಕೆಲವು ಅಧಿಕಾರಿಗಳೂ ಸಹ ಸರಿದಾರಿಗೆ ಬರಲಾರಂಭಿಸಿದ್ದಾಾರೆ. ಇದು ಸಾರ್ವಜನಿಕರಲ್ಲಿ ಸಂತಸವನ್ನುಂಟು ಮಾಡಿದೆ.   
ದಯಾನಂದ ನೇರ, ನಿರ್ಭಿಡೆಯ ವ್ಯಕ್ತಿಿತ್ವದವರು. ಕೆಲಸವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಬಿಡುತ್ತಾಾರೆ. ದಕ್ಷ, ಪ್ರಾಾಮಾಣಿಕ ಕಾರ್ಯನಿರ್ವಹಣೆಯ ಮೂಲಕ ಜನರ ವಿಶ್ವಾಾಸಗಳಿಸಿದ್ದಾಾರೆ. ಓರ್ವ ಡಿ.ಸಿ. ಮನಸ್ಸು ಮಾಡಿದರೆ ಒಂದು ಜಿಲ್ಲೆೆಯ ಆಡಳಿತ ವ್ಯವಸ್ಥೆೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದನ್ನು ಜಿಲ್ಲೆೆಗೆ ಆಗಮಿಸಿದ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಲಾರಂಭಿಸಿದ್ದಾಾರೆ. ಇತರರಿಗೆ ಮಾದರಿಯಾಗಿ ನಿಂತುಕೊಂಡಿದ್ದಾಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಡಿಸಿ ಕಚೇರಿ ಬಗ್ಗೆೆ ವಿಶ್ವಾಾಸ ಮೂಡುವಂತೆ ಮಾಡಿದ್ದಾಾರೆ.
  ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರದ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆೆ, ಗ್ರಾಾಪಂ ಕಚೇರಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುವ ಕೆಲವಾಗಬೇಕಿದೆ. ಈಗಷ್ಟೇ ಈ ಕಾರ್ಯ ಆರಂಭವಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಡಿಸಿ ನಿರಂತರವಾಗಿ ಮಾಡುತ್ತಿಿದ್ದಾಾರೆ. ದಿಢೀರ್ ಭೇಟಿಯ ವೇಳೆ ಹಲವು ಲೋಪಗಳನ್ನು ಪತ್ತೆೆ ಹಚ್ಚಿಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿಿದ್ದಾಾರೆ. ಕರ್ತವ್ಯ ಲೋಪ ಎಸಗುವವರನ್ನು ಸಸ್ಪೆೆಂಡ್ ಮಾಡುವ, ನೋಟೀಸ್ ಜಾರಿಗೊಳಿಸುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುತ್ತಿಿದ್ದಾಾರೆ.
ಇದು ನೌಕರರ ವಲಯದಲ್ಲಿ ಸಂಚಲನ ಮೂಡಿಸಿದೆ.
 ಡಿ.ಸಿ.ಯವರು ಯಾವಾಗ ಭೇಟಿ ನೀಡುತ್ತಾಾರೋ ಎಂಬ ಭಯದಿಂದ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡಲಾರಂಭಿಸಿದ್ದಾಾರೆ. ಕಚೇರಿ ಒಳ, ಹೊರಗಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು ಕಡತಗಳ ವಿಲೇವಾರಿಯವರೆಗೆ ಪರಿಶೀಲನೆ ನಡೆಸುತ್ತಿಿದ್ದಾಾರೆ. ಜೊತೆಗೆ ಡಿ.ಸಿ.ಯವರು ನಡೆಸುವ ಪ್ರತಿಯೊಂದು ಸಭೆಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಾಾಗಿ ಹಾಜರಾಗುತ್ತಿಿದ್ದಾಾರೆ.
 ಜಿಪಂ ಕಾರ್ಯನಿರ್ವಹಣಾಧಿಕಾರಿಯೂ ಆಗಿ ಪ್ರಭಾರ ಹುದ್ದೆೆಯಲ್ಲಿದ್ದರೂ, ಕಾರ್ಯಬಾಹುಳ್ಯ ಸಾಕಷ್ಟಿಿದ್ದರೂ ಜಿಲ್ಲೆೆಯ ಜನರ ಸಮಸ್ಯೆೆಗೆ ಮೊದಲ ಆದ್ಯತೆ ಕೊಡುತ್ತಿಿದ್ದಾಾರೆ. ಇದೇ ವೇಳೆ ನಾಳೆ 25ರಂದು ಜನಸ್ಪಂದನ ಮತ್ತು ಗ್ರಾಾಮವಾಸ್ತವ್ಯವನ್ನೂ ಸೊರಬ ತಾಲೂಕಿನ ಕುಗ್ರಾಾಮಗಳಾದ ಕೊರವಂದ ಮತ್ತು ಅಗಸನಹಳ್ಳಿಿಯಲ್ಲಿ ಏರ್ಪಡಿಸಿದ್ದಾಾರೆ. ಜಿಲ್ಲಾಾ ಕೇಂದ್ರದಿಂದ ಬಹಳ ದೂರವಿರುವ ಗ್ರಾಾಮಗಳನ್ನು ಮೊದಲ ಹಂತದಲ್ಲಿ ಆಯ್ಕೆೆಮಾಡಿಕೊಂಡಿದ್ದು, ಅಲ್ಲಿನ ಸಮಸ್ಯೆೆ ಬಗೆಹರಿಸುವ ಉತ್ಸುಕತೆ ಹೊಂದಿದ್ದಾಾರೆ. ಅದಕ್ಕೆೆ ತಕ್ಕಂತೆ ಈಗಾಗಲೇ ಜಿಲ್ಲಾಾ ಮಟ್ಟದ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾಾರೆ. ಬಹಳ ಸಿಂಪಲ್ ಆಗಿ ಗ್ರಾಾಮವಾಸ್ತವ್ಯ ಮಾಡಬೇಕು. ಜನರ ಸಮಸ್ಯೆೆಗೆ ಆದ್ಯತೆ ಕೊಡಬೇಕು ಎನ್ನುವುದು ಅವರ ಆಶಯ.
ಇಲ್ಲಿಯವರೆಗೆ ತಾವು ಕೆಲಸ ಮಾಡಿದ ಜಿಲ್ಲೆೆಗಳಲ್ಲಿ ಹೆಜ್ಜೆೆ ಗುರುತು ಬಿಟ್ಟು ಬಂದಿರುವ ದಯಾನಂದ, ಜಿಲ್ಲೆೆಯಲ್ಲೂ ಸಹ ಮಾದರಿಯ ಮತ್ತು ಸದಾ ಜನರು ನೆನೆಪಿಸುವ ಕೆಲಸಕ್ಕೆೆ ಮುಂದಾಗಿದ್ದಾಾರೆ. ಇಂತಹ ಜನಮೆಚ್ಚುವ ಅಧಿಕಾರಿಗೆ ರಾಜಕಾರಣಿಗಳ ಸಹಕಾರವೂ ಅಷ್ಟೇ ಪ್ರಮುಖವಾದುದು. ಕನಿಷ್ಠ ಎರಡು ವರ್ಷವಾದರೂ ಜಿಲ್ಲೆೆಯಲ್ಲಿ ಉಳಿಸಿಕೊಂಡು ಅಧಿಕಾರಿಗಳಲ್ಲಿ ಒಂದಷ್ಟು ಹೊಸತನ ಬರುವಂತೆ, ಕೆಲವು ಸಮಸ್ಯೆೆ ಶಾಶ್ವತ ಪರಿಹಾರ ಕಾಣುವಂತೆ, ಸಾಕಷ್ಟು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬಹುದು. 


ದಯಾನಂದ ಯಾವುದೇ ವಿಷಯದ ಬಗ್ಗೆೆ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದಾಾರೆ. ಅಧ್ಯಯನ ಮಾಡಿಯೇ ಮಾತನಾಡುವುದು ಇನ್ನೊೊಂದು ವಿಶೇಷ. ಸಮಾರಂಭಗಳಲ್ಲಿ ಅವರ ಮಾತು ಕೇಳಿದವರಿಗೆ ಇದು ಗೊತ್ತಾಾಗುತ್ತದೆ. ಅಧಿಕಾರಿಗಳಿಗೂ ಸಹ ಎಚ್ಚರಿಕೆ ಕೊಡುತ್ತಾಾರೆ, ಪ್ರೀತಿಯಿಂದ ಹೇಳುತ್ತಾಾರೆ. ಕೆಲಸ ಮಾಡದವರನ್ನು ಕಂಡರೆ ಗರಂ ಆಗುತ್ತಾಾರೆ. ಇದರಿಂದಾಗಿ ಅಧಿಕಾರಿಗಳು ಮತ್ತು ನೌಕರರು ಸರಿದಾರಿಗೆ ಬರುವಂತಾಗಿದೆ. ಗ್ರಾಾಮಾಂತರ ಸಮಸೆಗೆ ಹೆಚ್ಚಿಿನ ಆದ್ಯತೆ ಕೊಡುತ್ತಿಿದ್ದಾಾರೆ. ಎಲ್ಲಕ್ಕಿಿಂತ ಮಹತ್ವವಾದದ್ದೆೆಂದರೆ ಜನರ ಸಮಸ್ಯೆೆಗೆ ಸ್ಪಂದಿಸುವುದು. ಜನಸ್ಪಂದನೆಗೆ ಬಂದ ಅರ್ಜಿಗಳನ್ನು ಆಯಾಯ ಇಲಾಖಾಧಿಕಾರಿಗಳಿಗೆ ಕಳುಹಿಸಿ ಆಮೇಲೆ ಅದರ ಬಗ್ಗೆೆ ಕೈಗೊಂಡ ಕ್ರಮವನ್ನೂ ಕೇಳುತ್ತಾಾರೆ. ಜನಪರ ಕಾಳಜಿಯುಳ್ಳ ಒಬ್ಬ ಅಧಿಕಾರಿ ನಿಜಕ್ಕೂ ಮಾಡಬೇಕಾದ ಕೆಲಸ ಇದು. ವರ್ಗಾವಣೆಯಾಗಿ ಹೋಗುವ ಮುನ್ನ ಈ ಜಿಲ್ಲೆೆಯಲ್ಲಿ ನಿಮ್ಮ ಹೆಜ್ಜೆೆ ಗುರುತು ಬಿಟ್ಟು ಹೋಗಿ ಎಂದು ಸದಾ ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಿಿರುತ್ತಾಾರೆ.   

24.9.18
...............................