Saturday, 10 November 2018

ನಾಡದೇವಿಗೆ ನಾದದೀವಿಗೆ’ 
  
ಕನ್ನಡದ ವಿಭವ_ವಿಭ್ರಮಗಳನ್ನು ಸಾರುವ, ಕನ್ನಡ ನಾಡು-ನುಡಿಗಳ ಮೂಲಕ ಕನ್ನಡಿಗರ ಕನ್ನಡಾಭಿಮಾನಿಗಳನ್ನು ಮುದಗೊಳಿಸಿದ ಒಂದು ವಿನೂತನ ಕಾರ್ಯಕ್ರಮ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನವೆಂಬರ್ 3ರಂದು ನಡೆಯಿತು. ನಗರದ ಶಾರದಾ ಸಂಗೀತ ವಿದ್ಯಾಾಲಯ ‘ನಾಡದೇವಿಗೆ ನಾದದೀವಿಗೆ’ ಎಂಬ ಹೆಸರಿನಲ್ಲಿ ನಡೆಸಿಕೊಟ್ಟ ಸ್ತುತ್ಯರ್ಹ ಕಾರ್ಯಕ್ರಮವಿದು.






ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು, ಭಾರತ ಭೂಶಿರ ಮಂದಿರ ಸುಂದರಿ, ಎಲ್ಲಾಾದರು ಇರು, ಎಂತಾದರೂ ಇರು, ಮಡಿಕೇರಿಲಿ ಮಂಜು............
ಹೀಗೆ ಕನ್ನಡದ ವಿಭವ_ವಿಭ್ರಮಗಳನ್ನು ಸಾರುವ, ಕನ್ನಡ ನಾಡು-ನುಡಿಗಳ ಮೂಲಕ ಕನ್ನಡಿಗರ ಕನ್ನಡಾಭಿಮಾನಿಗಳನ್ನು ಮುದಗೊಳಿಸಿದ ಒಂದು ವಿನೂತನ ಕಾರ್ಯಕ್ರಮ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನವೆಂಬರ್ 3ರಂದು ನಡೆಯಿತು. ನಗರದ ಶಾರದಾ ಸಂಗೀತ ವಿದ್ಯಾಾಲಯ ‘ನಾಡದೇವಿಗೆ ನಾದದೀವಿಗೆ’ ಎಂಬ ಹೆಸರಿನಲ್ಲಿ ನಡೆಸಿಕೊಟ್ಟ ಸ್ತುತ್ಯರ್ಹ ಕಾರ್ಯಕ್ರಮವಿದು.
 ಎಳೆಯ ಮಕ್ಕಳಿಂದ ಹಿಡಿದು ಸುಮಾರು 40ರ ಹರೆಯದವರೆಗಿನ ಹಾಡುಗಾರರು ಪ್ರತಿಯೊಂದು ಹಾಡುಗಳಿಗೆ ಜೀವತುಂಬಿ, ಭಾವತುಂಬಿ ಹಾಡುವಾಗ ರಂಗಮಂದಿರದಲ್ಲಿ ನಿಶ್ಯಬ್ದ ನೆಲೆಸಿತ್ತು. ಹಾಡುಗಾರರ ತನ್ಮಯತೆ, ಉತ್ಸಾಾಹ ಪ್ರೇಕ್ಷಕರನ್ನು ಹೊಸದೊಂದು ಸಂಗೀತಲೋಕಕ್ಕೆೆ ಕರೆದೊಯ್ದಿಿತ್ತು. ಈ ಹಾಡುಗಳನ್ನು ಕೇಳುವಾಗ ಹಾಡುಗಾರರೊಂದಿಗೆ ಪ್ರೇಕ್ಷಕರೂ ಸಹ ಗುನುಗುನಿಸುತ್ತಿಿದ್ದರು. ಏಕೆಂದರೆ, ಈ ಹಾಡುಗಳೆಲ್ಲಾಾ ಸದಾ ಕನ್ನಡಿಗರ ಮನೆ-ಮನದಲ್ಲಿ ನಲಿದಾಡುವಂತಹ ಎಂದೂ ಮರೆಯದ ಹಾಡುಗಳಾಗಿದ್ದವು.
 ನವೆಂಬರ್ ಬಂತೆಂದರೆ ಸಾಕು- ಎಲ್ಲೆೆಡೆ ಕನ್ನಡ ಕಲರವ; ಕನ್ನಡ ಡಿಂಡಿಮ. ಕನ್ನಡಿಗರೆಲ್ಲ ಒಂದೆಡೆ ಕಲೆತು ನಲಿಯುತ್ತಾಾರೆ; ನರ್ತಿಸುತ್ತಾಾರೆ. ಕನ್ನಡ ಭುವನೇಶ್ವರಿಗೆ ನಾದ, ನೃತ್ಯ, ನುಡಿಗಳ ಮೂಲಕ ಸೇವೆಗೈಯ್ಯುತ್ತಾಾರೆ. ನಗರದಲ್ಲಿ ಅಮೋಘ ಕಂಠಸಿರಿ ಹೊಂದಿರುವವರನ್ನು ಅನೇಕ ಸಂಗೀತ ಶಾಲೆಗಳು ಗುರುತಿಸಿ, ಅವರಿಗೆ ತರಬೇತಿ ಕೊಡುವ ಕೆಲಸವನ್ನು ಮಾಡಿಕೊಂಡು ಬಂದಿವೆ. ಜಾತಿ-ಮತ ಭೇದವಿಲ್ಲದೆ, ವಯೋಭೇದವಿಲ್ಲದೆ, ಲಿಂಗ ತರತಮ ಭಾವವಿಲ್ಲದೆ ಸಂಗೀತವನ್ನು ಧಾರೆ ಎರೆಯುತ್ತಿಿವೆ. ಶಾರದಾ ಸಂಗೀತ ವಿದ್ಯಾಾಲಯ ಅಂತಹವುಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿದ್ಯಾಾಸಂಸ್ಥೆೆ. ಈ ವಿದ್ಯಾಾಸಂಸ್ಥೆೆಯ ಪ್ರಾಾಚಾರ್ಯರಾದ  ವಿದ್ವಾಾನ್ ಅರುಣ್‌ಕುಮಾರ್ ದಂಪತಿ  ಹಾಗೂ ಅಲ್ಲಿನ ಶಿಕ್ಷಕಿಯರು ನಿರಂತರವಾಗಿ ಕಲಾಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೈ ಎನಿಸಿದಾರೆ.  ಮಾಡಿಕೊಂಡು ಬಂದಿದ್ದಾಾರೆ. ಅವರು ಕೆಲವು ತಿಂಗಳುಗಳಿಂದ ಪಟ್ಟ ಶ್ರಮದ ಸಾರ್ಥಕತೆಯ ನಿದರ್ಶನವೇ ‘ನಾಡ ದೇವಿಗೆ ನಾದ ದೀವಿಗೆ’ ಕಾರ್ಯಕ್ರಮ.
ಕಾರ್ಯಕ್ರಮದ ಶೀರ್ಷಿಕೆಯೇ ಬಹು ಸೊಗಸಾಗಿದೆ. ಕನ್ನಡದ ದೇವಿಗೆ ಹಾಡಿನ ಮೂಲಕ ದೀವಿಗೆಯನ್ನು ಹಚ್ಚುವ ಕೆಲಸವನ್ನು ಅವರ ಶಿಷ್ಯವೃಂದದವರು ಮಾಡಿದರು. ಇಲ್ಲಿ ಹಾಡಿದ ಹಾಡುಗಳೆಲ್ಲ ಕನ್ನಡ, ಅದರ ಶ್ರೀಮಂತಿಕೆ, ಕನ್ನಡ ಕವಿಗಳ ಬಹು ಪ್ರಸಿದ್ಧ ಪದ್ಯಗಳೇ ಸಾಗಿದ್ದವು. ಸಮೂಹಗಾಯನದಲ್ಲಿ ಎಲ್ಲವೂ ಹಾಡಲ್ಪಟ್ಟವು. ಎಲ್ಲೂ ಹಾಡಿನ ಭಾವಕ್ಕೆೆ, ತಾಳಕ್ಕೆೆ, ರಾಗಕ್ಕೆೆ, ಶೃತಿಗೆ ಚ್ಯುತಿ ಬಾರದಂತೆ ಎಲ್ಲರೂ ಏಕಕಂಠದಿಂದ ಹಾಡಿದ್ದನ್ನು ಶ್ಲಾಾಘಿಸಲೇಬೇಕು.
ಏಕೆಂದರೆ, ಸುಮಾರು 20ಕ್ಕೂ ಹೆಚ್ಚು ಜನರು ಏಕಕಂಠದಲ್ಲಿ ಹಾಡುವುದು ಸುಲಭದ ಕೆಲಸವಲ್ಲ. ಇದರನ್ನು ಸತತ ತರಬೇತಿ ಮೂಲಕ ಅರುಣ್‌ಕುಮಾರ್ ಸಾಧಿಸಿದ್ದಾಾರೆ. ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದೆ. ಅದಕ್ಕೆೆ ವೇದಿಕೆ ಕಲ್ಪಿಿಸಿದಾಗಲೇ ಹೊರಬರಲು ಸಾಧ್ಯ ಎನ್ನುವುದು ಅವರ ನಿಲುವು. ಈ ನಿಟ್ಟಿಿನಲ್ಲಿ ಅವರು ರೂಪಿಸಿದ ಬಹುಶ್ರಮದ ಕಾರ್ಯಕ್ರಮ ಇದಾಗಿತ್ತು.
 ಪ್ರತಿಯೊಂದು ಮಕ್ಕಳು ಕೂಡ ಯಾವ ಅಂಜಿಕೆಯೂ ಇಲ್ಲದೆ, ಸುಲಲಿತವಾಗಿ ತುಂಬಿದ ರಂಗಮಂದಿರದಲ್ಲಿ ಮನಮೋಹಕವಾಗಿ ಹಾಡಿದರು. ಇಲ್ಲಿ ಪ್ರಸ್ತಾಾಪಿಸಲೇಬೇಕಾದ ಇನ್ನೊೊಂದು ವಿಷಯವೆಂದರೆ, ಯುವಕರ ತಂಡದವರ ಹಾಡುಗಳು ಪ್ರೇಕ್ಷಕರು ಹುಚ್ಚೆೆದ್ದು ಕುಣಿಯುವಂತೆ ಮಾಡಿದ್ದು. ಕುರಿಗಳು ಸಾರ್, ಕುರಿಗಳು, ಝಣ ಝಣ ಕಾಂಚಾಣ,  ಎಲ್ಲಾಾ ಮಾಯ... ಮೊದಲಾದ ಹಾಡುಗಳು ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದವು. ಈ ಯುವಕರ ಹಾವ-ಭಾವ ಅಷ್ಟೇ ಮನೋಹರವಾಗಿತ್ತು.
ಭರತನಾಟ್ಯ, ಕಥಕ್ ನೃತ್ಯ, ಜೀವನ ಮೌಲ್ಯಗಳನ್ನು ಎತ್ತಿಿಸಾರುವ ಮೂಕಾಭಿನಯ ಸಹ ಈ ಕಾರ್ಯಕ್ರಮಕ್ಕೆೆ ಇನ್ನಷ್ಟು ಮೆರುಗು ತಂದುಕೊಟ್ಟಿಿದ್ದು ಸುಳ್ಳಲ್ಲ. ಈ ಕಲಾವಿದರು ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಜನಮನ ಗೆದ್ದರು.  ವಿಶೇಷವಿಂದರೆ ನಿಗದಿತ ವೇಳೆಗೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿ, ನಿಗದಿತ ವೇಳೆಗೇ (2 ಗಂಟೆಗಳ ಕಾರ್ಯಕ್ರಮ) ಮುಕ್ತಾಾಯಗೊಳಿಸಿದಗದ್ದು, ಶಿವಮೊಗ್ಗದ ಮಟ್ಟಿಿಗೆ ಅಚ್ಚ್ರಿಿ ಮಾತ್ರವಲ್ಲ, ಸಂಘಟಕರ ಸಮಯಪ್ರಜ್ಞೆಗೂ ಸಾಕ್ಷಿಯಾಗಿತ್ತು. ಉದ್ಘಾಾಟನೆ ಎಂದು ಭಾಷಣ ಮಾಡಿಸಿ, ಸಭಾಸದರ ತಾಳ್ಮೆೆಯನ್ನು ಪರೀಕ್ಷಿಸದೆ, ಅಚ್ಚುಕಟ್ಟಾಾದ ನಿರೂಪಣೆಯೊಂದಿಗೆ, ಕಾರ್ಯಕ್ರಮಗಳ ಮಧ್ಯೆೆಮಧ್ಯೆೆ ಸಮಾಜದ ಗಣ್ಯರಿಂದ ಕನ್ನಡ ಭುವನೇಶ್ವರಿಗೆ ಪುಷ್ಪನಮನ ಮಾಡಿಸಿದ್ದು, ಸಂಘಟಕರ ಸಂಸ್ಕೃತಿ-ಸಂಸ್ಕಾಾರಕ್ಕೆೆ ಕೈಗನ್ನಡಿಯಾಗಿತ್ತು.
      ಪ್ರೇಕ್ಷಕರು ಅಂದುಕೊಂಡದ್ದಕ್ಕಿಿಂತ ಹೆಚ್ಚಿಿನ ಸಂಗೀತದ ರಸದೌತಣವನ್ನು ಇಲ್ಲಿ ಸವಿದರು. ಹಾಡಗಳನ್ನ್ನು ಗುನುಗುನಿಸುತ್ತಲೇ ರಂಗಮಂದಿರದಿಂದ ವಿರಮಿಸಿದ್ದು ‘ನಾಡದೇವಿಗೆ ನಾದದೀವಿ’ಗೆ ಕಾರ್ಯಕ್ರಮದ ಯಶಸ್ಸಿಿಗೆ ಸಾಕ್ಷಿಯಾಯಿತು.
publiashed on 9. 11.18
................................................       

No comments:

Post a Comment