Saturday, 29 September 2018

ಮರಗಳ ಆರ್ತ ಮೊರೆ....


ಶಿವಮೊಗ್ಗದ ಸಾಗರ ರಸ್ತೆೆಯನ್ನು ಚತುಷ್ಪಥ ರಸ್ತೆೆಯನ್ನಾಾಗಿಸುವ ಕೆಲಸಕ್ಕೆೆ ಚಾಲನೆ ನೀಡಲಾಗಿದೆ. ಇಲ್ಲಿ ಕೆಲವು ಮರಗಳನ್ನು ಅತ್ತ ಕಡಿಯಲೂ ಆಗದೆ, ಇತ್ತ ಜೀವಂತ ಬಿಡಲೂ ಆಗದೆ ಇರುವುದರಿಂದ ಹೇಗಾದರೂ ಸಾಯಿಸಬೇಕೆಂಬ ಯೋಚನೆ ಕಾಮಗಾರಿ ಮಾಡುವವರಲ್ಲಿ ಇದ್ದಂತಿದೆ. ಅದಕ್ಕಾಾಗಿ ಅವರು ಮಾಡಿದ್ದೇನೆಂದರೆ ಮರದ ಎಡ- ಬಲಕ್ಕೆೆ ಮಣ್ಣನ್ನು ತೆಗೆದು ಬಿಟ್ಟಿಿದ್ದಾಾರೆ. ಇದರಿಂದ  ತಾನಾಗಿ ಅದು ಬಿದ್ದು ಹೋಗಬೇಕು, ಇಲ್ಲವೇ ಆಹಾರ ಸರಬರಾಜಾಗದೆ ಒಣಗಿ ಸಾಯಬೇಕು.. ಎಂತಹ ಆಲೋಚನೆ!

ಹೇ ಮನುಜ, ಹತ್ತು ಬಾವಿಗಳು ಒಂದು ಕೊಳಕ್ಕೆೆ ಸಮಾನ, ಹತ್ತು ಕೊಳಗಳು ಒಂದು ಕೆರೆಗೆ ಸಮಾನ, ಹತ್ತು ಕೆರೆಗಳು ಒಬ್ಬ ಪುತ್ರನಿಗೆ ಸಮಾನ, ಹತ್ತು ಪುತ್ರರು ಒಂದು ಮರಕ್ಕೆೆ ಸಮಾನ ಎಂಬ ಮಾತಿದೆ.
ಇದಕ್ಕಾಾಗಿ ಹಿಂದಿನವರು ಸಾಲುಮರ ನೆಟ್ಟರು, ರಕ್ಷಿಸಿ ಬೆಳೆಸಿದರು. ಅವೆಲ್ಲ ಇಂದು ನಿನಗೆ ಬೀದಿಬದಿಯಲ್ಲಿ ನೆರಳು ಕೊಡುತ್ತ ನಿಂತಿವೆ. ಆದರೆ ಈಗ ಅಭಿವೃದ್ಧಿಿ ಹೆಸರಿನಲ್ಲಿ ನಮ್ಮ ಕುಲಕ್ಕೆೆ ಸಂಚಕಾರ ತಂದೊಡ್ಡಿಿರುವೆ. ರಸ್ತೆೆಯಂಚಿನಲ್ಲಿ ನೂರಾರು ವರ್ಷದಿಂದ ನಿನಗೆ ನೆರಳು, ಹಣ್ಣು ನೀಡುತ್ತ, ಉಪಕಾರದಲ್ಲೇ ಕಾಲಕಳೆಯುತ್ತಿಿರುವೆವು. ಉಪಕಾರಕ್ಕೆೆ ಪ್ರತ್ಯುಪಕಾರ ಮಾಡುವುದಿರಲಿ, ನಮ್ಮನ್ನೂ ಸಾಯಿಸಹೊರಟಿರುವೆಯಾ?  ಬುಡಕ್ಕೆೆ ನೇರವಾಗಿ ಕೊಡಲಿ ಹಾಕಲು ಭಯ. ಏಕೆಂದರೆ ಹೋರಾಟ, ಪ್ರತಿಭಟನೆ ಶುರವಾಗುತ್ತದೆ. ಅದಕ್ಕೆೆ ಸುತ್ತ ಮಣ್ಣು ತೆಗೆದು ನನಗೆ ಏನೂ ಸಿಗದಂತೆ ಮಾಡುವುದರ ಜೊತೆಗೆ ನಾನಾಗಿಯೇ ಸಾಯುವಂತೆ ಮಾಡುವ ಹುನ್ನಾಾರ ಮಾಡಿರುವೆಯಾ?
ಇನ್ನಾಾದರೂ ಎಚ್ಚರವಾಗು, ನನಗೊಂದು ಕೊಡ ನೀರುಣಿಸು. ನಿನ್ನ ಪೀಳಿಗೆಯನ್ನು ಸಂರಕ್ಷಿಸುವೆ. ನನ್ನನ್ನು ಕೇವಲ ಮೂರು ವರ್ಷ ಸಲುಹಿದರೆ ಸಾಕು, ನಾನು ನಿನ್ನ ಪೀಳಿಗೆಯನ್ನು ನೂರು ವರ್ಷ ರಕ್ಷಿಸುವೆ.
ನನ್ನಿಿಂದ ನೂರಾರು ಮರಗಳಾಗಿವೆ. ಹೂವಾಗಿ, ಕಾಯಾಗಿ, ಹಣ್ಣಾಾಗಿ, ಹಣ್ಣಿಿನ ಉದರದಲ್ಲಿ ಬೀಜವಾಗಿ ಹೊರಬಂದು ಭೂಮಿಗೆ ಬಿದ್ದು ಮತ್ತೆೆ ಮೊಳಕೆಯೊಡೆದು, ಸೊಂಪಾಗಿ ಬೆಳೆದು ನಿಮ್ಮೆೆದುರು ಬೆಳೆಯುತ್ತಿಿರುವೆ. ಇಂತಹ ನನಗೆ ದಿನಕ್ಕೊೊಂದು ಕೊಡ ನೀರು ಹಾಕಿ, ಜನ, ಜಾನುವಾರುಗಳಿಂದ ರಕ್ಷಿಸುವ ಬದಲು ಸಾಯಿಸುತ್ತಿಿರುವೆಯಲ್ಲಾಾ?  ನನ್ನ ಮೌಲ್ಯ ಬೆಲೆ ಕಟ್ಟಲಾಗದ್ದು ಎಂದರಿತು ಅದರ ಲಾಭಕ್ಕಾಾಗಿ ಯತ್ನಿಿಸುತ್ತಿಿರುವೆಯಾ? ನಿಮಗಾಗಿ, ನಿಮ್ಮ ಮಕ್ಕಳಿಗಾಗಿ, ನಿಮ್ಮ ಮೊಮ್ಮಕ್ಕಳಿಗಾಗಿ, ಮುಂದಿನ ತಲತಲಾಂತರಗಳಿಗಾಗಿ  ಗಾಳಿ, ನೀರು, ಆಹಾರ, ಹೂವು, ಹಣ್ಣು, ನೆರಳು, ಕಾಯಿ, ಬೀಜ, ಔಷಧಿ ಇನ್ನಿಿತರ ಉಪಯೊಗ ನನ್ನಿಿಂದಿದೆ. ಒಂದು ವೃಕ್ಷದ ಜೀವಿತ ಕಾಲದಲ್ಲಿ ಅದರಿಂದ ಸಿಗುವ ಆಮ್ಲಜನಕದ ಮೌಲ್ಯ 15 ಮಿಲಿಯನ್ ರೂಪಾಯಿಗಳು, ಪರಿಸರ ಮಾಲಿನ್ಯವನ್ನು ನಿಯಂತ್ರಿಿಸುವುದಕ್ಕಾಾಗಿ, ಮಣ್ಣು ಸವಕಳಿ ತಡೆಗಾಗಿ, ಆರ್ದ್ರತೆ ಕಾಪಾಡುವುದಕ್ಕಾಾಗಿ, ನೀರು ಮರುಬಳಕೆ, ಪಶುಪಕ್ಷಿಗಳಿಗೆ ಆಶ್ರಯ, ಸಸಾರಜನಕದ ಉತ್ಪಾಾದನೆ ಮುಂತಾದುವುಗಳಿಗೆಲ್ಲ ಬೇಕೇ ಬೇಕು. ಆದ್ದರಿಂದ ನನ್ನನ್ನು ಸಾಯಿಸುವ ಮುನ್ನ ಅಥವಾ ಕಡಿಯುವ ಮುನ್ನ ಯೋಚಿಸು.
ನಿನಗೆ ನನ್ನ ಸಹಾಯ ಬೇಕೆಂದಾದರೆ, ನಿನ್ನ ಮುಂದಿನ ತಲೆಮಾರು ಶುದ್ಧ ಗಾಳಿಯಿಂದ ಬದುಕಬೇಕೆಂದಾದಲ್ಲಿ, ಕನಿಷ್ಠ ನೀರನ್ನಾಾದರೂ ಉಣಿಸು.  ಅಮೂಲ್ಯವಾದ ಕುಡಿಯುವ ನೀರನ್ನು ಕೊಡು ಎಂದು ನಾನು ಕೇಳುತ್ತಿಿಲ್ಲ. ನೀನು ಕೈಕಾಲು ಮುಖ ತೊಳೆದ, ಸ್ನಾಾನ ಮಾಡಿದ ನೀರು, ಯಾವುದಾದರೂ ಆದೀತು. ಅದನ್ನು ಶುದ್ಧಗೊಳಿಸಿ ನಾನು ಮರುಬಳಕೆ ಮಾಡಿಕೊಳ್ಳುತ್ತೇನೆ. ಪುನಃ ನಿನಗೆ ಶುದ್ಧ ನೀರನ್ನು ಕೊಡುತ್ತೇನೆ. ಈಗಲೂ ಕಾಲ ಮಿಂಚಿಲ್ಲ. ಯೋಚಿಸು.
   ನಿನ್ನ ಹಿತ ಚಿಂತಕ ನಾನು, ಆದರೆ ನನ್ನ ಹಿತವನ್ನು ನೀನೇಕೆ ಯೋಚಿಸುತ್ತಿಿಲ್ಲ? ನನ್ನನ್ನು ಸಾಯಿಸಬೇಡ, ಇರಲುಬಿಡು. ಮುಂದಿನ ಪೀಳಿಗೆ ನೆಮ್ಮದಿಯಿಂದಿರಲು ಸಹಕರಿಸು. ಒಮ್ಮೆೆ ಯೋಚಿಸು. ಚತುಷ್ಪಥ ರಚಿಸಿ ಎಲ್ಲಾಾ ಬೋಳುಗಡ್ಡೆೆಯಂತಾದರೆ ನಿನಗೆ ನೆರಳು ಕೊಡುವವರಾರು? ಆಗ ಮತ್ತೆೆ ನನ್ನ ನೆನಪು ಆದೀತು. ಅದಕ್ಕಾಾಗಿ ಸಾಯಿಸಬೇಡ, ನನ್ನ ಮಕ್ಕಳು, ಮರಿಮಕ್ಕಳನ್ನು ಪೋಷಿಸಿ, ಬೆಳೆಸು. ಸಾವಿರಾರು ಜನರಿಗೆ ಉಪಕಾಕಾರಿಯಾಗುವೆ.

published on 28-9-2018
...................................

Monday, 24 September 2018

ಇಂತಹ ಡಿಸಿ ಎಲ್ಲ ಜಿಲ್ಲೆೆಗೂ ಬೇಕು



ಜಿಲ್ಲಾಾಧಿಕಾರಿ ಕೆ. ಎ. ದಯಾನಂದ ಸಮಯ ವ್ಯರ್ಥ ಮಾಡದ ಅಧಿಕಾರಿ. ಎಲ್ಲಿಯೇ ಸಮಸ್ಯೆೆ ಕಂಡುಬರಲಿ, ಅಲ್ಲಿಗೆ ತತಕ್ಷಣವೇ ದೌಡಾಯಿಸುತ್ತಾಾರೆ.  ದೂರು-ದುಮ್ಮಾಾನಗಳನ್ನು ಆಲಿಸಿ, ನಾಗರಿಕರು ನೀಡುವ ದೂರನ್ನು ಗಮನಿಸಿ ಸ್ಥಳ ಸಂದರ್ಶಿಸಿ ಸಮಸ್ಯೆೆ ಪರಿಹರಿಸುತ್ತಿಿದ್ದಾಾರೆ. ಕಳೆದ ವಾರ ಪ್ರಮುಖವಾಗಿ ಭದ್ರಾಾವತಿ ಸರ್ಕಾರಿ ಆಸ್ಪತ್ರೆೆ, ವಿದ್ಯಾಾನಗರದ ವಿದ್ಯಾಾರ್ಥಿನಿಲಯ, ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ದೂರಿನನ್ವಯ ಕ್ರಮ ಜರುಗಿಸಿದ್ದಾಾರೆ. ತಮ್ಮ ಬಿಡುವಿಲ್ಲದ ಸರ್ಕಾರಿ ಸಭೆ, ಸಮಾರಂಭಗಳ ಮಧ್ಯೆೆಯೂ ಬೆಳಿಗ್ಗೆೆ, ಮಧ್ಯಾಾಹ್ನ ಅಥವಾ ಸಂಜೆ ದಿಢೀರ್ ಭೇಟಿ ನೀಡುವ ಮೂಲಕ ಅದಿಕಾರಿಗಳಲ್ಲಿ, ನೌಕರರಲ್ಲಿ ಸಂಚಲನ ಮೂಡಿಸಿದ್ದಾಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗುವ ಮೂಲಕ ಎಲ್ಲಾಾ ಕಚೇರಿಗಳಲ್ಲೂ ಶಿಸ್ತು, ಸಮರ್ಪಕ ಕಾರ್ಯ ನಡೆಯುವಂತೆ ಮಾಡಬೇಕಿದೆ.     



 ಜಿಲ್ಲಾಾ ಆಡಳಿತದ ಶಕ್ತಿಿ ಕೇಂದ್ರವೆಂದೇ ಬಿಂಬಿತವಾಗಿರುವ ಜಿಲ್ಲಾಾಧಿಕಾರಿ ಕಚೇರಿಯು, ಜಿಲ್ಲೆೆಯಲ್ಲಿ ಈಗ ಎಲ್ಲರ ಗಮನಸೆಳೆಯುತ್ತಿಿದೆ. ಪ್ರತಿ ಕೆಲಸ ಕಾರ್ಯಗಳೂ ಇಲ್ಲಿ ವೇಗ ಪಡೆದಿವೆ, ಕಡತಗಳ ವಿಲೇವಾರಿ ಸಕಾಲದಲ್ಲಿ ನಡೆಯುತ್ತಿಿದೆ. ನಾಗರಿಕರ ದೂರು- ದುಮ್ಮಾಾನಗಳೂ ಪರಿಹರಿಸಲ್ಪಡುತ್ತಿಿವೆ. ಇದೆಲ್ಲಕ್ಕಿಿಂತ ಮುಖ್ಯವಾಗಿ ಜನರ ಸಮಸ್ಯೆೆಗೆ ಉತ್ತಮ ಸ್ಪಂದನೆ ಸಿಗುತ್ತಿಿದೆ.
 ದಯಾನಂದ ಅವರು ಜಿಲ್ಲಾಾಧಿಕಾರಿಯಾಗಿ ಆಗಮಿಸಿ ಸುಮಾರು ಎರಡು ತಿಂಗಳಾಗಿದೆ. ಇಷ್ಟರಲ್ಲೇ ಆಡಳಿತ ವ್ಯವಸ್ಥೆೆ ದಿಢೀರ್ ಆಗಿ ಚುರುಕುಗೊಂಡಿದೆ. ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕೆಲಸ ಮಾಡಲಾರಂಭಿಸಿದ್ದಾಾರೆ. ಅಂಕೆಗೆ ಸಿಗದಂತಾಗಿದ್ದ ತಾಲೂಕು ಆಡಳಿತದ ಕೆಲವು ಅಧಿಕಾರಿಗಳೂ ಸಹ ಸರಿದಾರಿಗೆ ಬರಲಾರಂಭಿಸಿದ್ದಾಾರೆ. ಇದು ಸಾರ್ವಜನಿಕರಲ್ಲಿ ಸಂತಸವನ್ನುಂಟು ಮಾಡಿದೆ.   
ದಯಾನಂದ ನೇರ, ನಿರ್ಭಿಡೆಯ ವ್ಯಕ್ತಿಿತ್ವದವರು. ಕೆಲಸವಾಗುತ್ತದೆಯೇ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಬಿಡುತ್ತಾಾರೆ. ದಕ್ಷ, ಪ್ರಾಾಮಾಣಿಕ ಕಾರ್ಯನಿರ್ವಹಣೆಯ ಮೂಲಕ ಜನರ ವಿಶ್ವಾಾಸಗಳಿಸಿದ್ದಾಾರೆ. ಓರ್ವ ಡಿ.ಸಿ. ಮನಸ್ಸು ಮಾಡಿದರೆ ಒಂದು ಜಿಲ್ಲೆೆಯ ಆಡಳಿತ ವ್ಯವಸ್ಥೆೆಯಲ್ಲಿ ಏನೆಲ್ಲ ಬದಲಾವಣೆ ತರಬಹುದು ಎನ್ನುವುದನ್ನು ಜಿಲ್ಲೆೆಗೆ ಆಗಮಿಸಿದ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಲಾರಂಭಿಸಿದ್ದಾಾರೆ. ಇತರರಿಗೆ ಮಾದರಿಯಾಗಿ ನಿಂತುಕೊಂಡಿದ್ದಾಾರೆ. ಈ ಮೂಲಕ ಸಾರ್ವಜನಿಕ ವಲಯದಲ್ಲಿ ಡಿಸಿ ಕಚೇರಿ ಬಗ್ಗೆೆ ವಿಶ್ವಾಾಸ ಮೂಡುವಂತೆ ಮಾಡಿದ್ದಾಾರೆ.
  ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆೆಯ ಎಲ್ಲ ತಾಲೂಕು, ಹೋಬಳಿ ಕೇಂದ್ರದ ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆೆ, ಗ್ರಾಾಪಂ ಕಚೇರಿಗೆ ದಿಢೀರ್ ಭೇಟಿಯಿತ್ತು ಪರಿಶೀಲಿಸುವ ಕೆಲವಾಗಬೇಕಿದೆ. ಈಗಷ್ಟೇ ಈ ಕಾರ್ಯ ಆರಂಭವಾಗಿದೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಡಿಸಿ ನಿರಂತರವಾಗಿ ಮಾಡುತ್ತಿಿದ್ದಾಾರೆ. ದಿಢೀರ್ ಭೇಟಿಯ ವೇಳೆ ಹಲವು ಲೋಪಗಳನ್ನು ಪತ್ತೆೆ ಹಚ್ಚಿಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿಿದ್ದಾಾರೆ. ಕರ್ತವ್ಯ ಲೋಪ ಎಸಗುವವರನ್ನು ಸಸ್ಪೆೆಂಡ್ ಮಾಡುವ, ನೋಟೀಸ್ ಜಾರಿಗೊಳಿಸುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಜರುಗಿಸುತ್ತಿಿದ್ದಾಾರೆ.
ಇದು ನೌಕರರ ವಲಯದಲ್ಲಿ ಸಂಚಲನ ಮೂಡಿಸಿದೆ.
 ಡಿ.ಸಿ.ಯವರು ಯಾವಾಗ ಭೇಟಿ ನೀಡುತ್ತಾಾರೋ ಎಂಬ ಭಯದಿಂದ ಕಚೇರಿಯಲ್ಲಿ ಕಾರ್ಯನಿರ್ವಹಣೆ ಮಾಡಲಾರಂಭಿಸಿದ್ದಾಾರೆ. ಕಚೇರಿ ಒಳ, ಹೊರಗಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹಿಡಿದು ಕಡತಗಳ ವಿಲೇವಾರಿಯವರೆಗೆ ಪರಿಶೀಲನೆ ನಡೆಸುತ್ತಿಿದ್ದಾಾರೆ. ಜೊತೆಗೆ ಡಿ.ಸಿ.ಯವರು ನಡೆಸುವ ಪ್ರತಿಯೊಂದು ಸಭೆಗೂ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಕಟ್ಟುನಿಟ್ಟಾಾಗಿ ಹಾಜರಾಗುತ್ತಿಿದ್ದಾಾರೆ.
 ಜಿಪಂ ಕಾರ್ಯನಿರ್ವಹಣಾಧಿಕಾರಿಯೂ ಆಗಿ ಪ್ರಭಾರ ಹುದ್ದೆೆಯಲ್ಲಿದ್ದರೂ, ಕಾರ್ಯಬಾಹುಳ್ಯ ಸಾಕಷ್ಟಿಿದ್ದರೂ ಜಿಲ್ಲೆೆಯ ಜನರ ಸಮಸ್ಯೆೆಗೆ ಮೊದಲ ಆದ್ಯತೆ ಕೊಡುತ್ತಿಿದ್ದಾಾರೆ. ಇದೇ ವೇಳೆ ನಾಳೆ 25ರಂದು ಜನಸ್ಪಂದನ ಮತ್ತು ಗ್ರಾಾಮವಾಸ್ತವ್ಯವನ್ನೂ ಸೊರಬ ತಾಲೂಕಿನ ಕುಗ್ರಾಾಮಗಳಾದ ಕೊರವಂದ ಮತ್ತು ಅಗಸನಹಳ್ಳಿಿಯಲ್ಲಿ ಏರ್ಪಡಿಸಿದ್ದಾಾರೆ. ಜಿಲ್ಲಾಾ ಕೇಂದ್ರದಿಂದ ಬಹಳ ದೂರವಿರುವ ಗ್ರಾಾಮಗಳನ್ನು ಮೊದಲ ಹಂತದಲ್ಲಿ ಆಯ್ಕೆೆಮಾಡಿಕೊಂಡಿದ್ದು, ಅಲ್ಲಿನ ಸಮಸ್ಯೆೆ ಬಗೆಹರಿಸುವ ಉತ್ಸುಕತೆ ಹೊಂದಿದ್ದಾಾರೆ. ಅದಕ್ಕೆೆ ತಕ್ಕಂತೆ ಈಗಾಗಲೇ ಜಿಲ್ಲಾಾ ಮಟ್ಟದ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದ್ದಾಾರೆ. ಬಹಳ ಸಿಂಪಲ್ ಆಗಿ ಗ್ರಾಾಮವಾಸ್ತವ್ಯ ಮಾಡಬೇಕು. ಜನರ ಸಮಸ್ಯೆೆಗೆ ಆದ್ಯತೆ ಕೊಡಬೇಕು ಎನ್ನುವುದು ಅವರ ಆಶಯ.
ಇಲ್ಲಿಯವರೆಗೆ ತಾವು ಕೆಲಸ ಮಾಡಿದ ಜಿಲ್ಲೆೆಗಳಲ್ಲಿ ಹೆಜ್ಜೆೆ ಗುರುತು ಬಿಟ್ಟು ಬಂದಿರುವ ದಯಾನಂದ, ಜಿಲ್ಲೆೆಯಲ್ಲೂ ಸಹ ಮಾದರಿಯ ಮತ್ತು ಸದಾ ಜನರು ನೆನೆಪಿಸುವ ಕೆಲಸಕ್ಕೆೆ ಮುಂದಾಗಿದ್ದಾಾರೆ. ಇಂತಹ ಜನಮೆಚ್ಚುವ ಅಧಿಕಾರಿಗೆ ರಾಜಕಾರಣಿಗಳ ಸಹಕಾರವೂ ಅಷ್ಟೇ ಪ್ರಮುಖವಾದುದು. ಕನಿಷ್ಠ ಎರಡು ವರ್ಷವಾದರೂ ಜಿಲ್ಲೆೆಯಲ್ಲಿ ಉಳಿಸಿಕೊಂಡು ಅಧಿಕಾರಿಗಳಲ್ಲಿ ಒಂದಷ್ಟು ಹೊಸತನ ಬರುವಂತೆ, ಕೆಲವು ಸಮಸ್ಯೆೆ ಶಾಶ್ವತ ಪರಿಹಾರ ಕಾಣುವಂತೆ, ಸಾಕಷ್ಟು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬಹುದು. 


ದಯಾನಂದ ಯಾವುದೇ ವಿಷಯದ ಬಗ್ಗೆೆ ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದಾಾರೆ. ಅಧ್ಯಯನ ಮಾಡಿಯೇ ಮಾತನಾಡುವುದು ಇನ್ನೊೊಂದು ವಿಶೇಷ. ಸಮಾರಂಭಗಳಲ್ಲಿ ಅವರ ಮಾತು ಕೇಳಿದವರಿಗೆ ಇದು ಗೊತ್ತಾಾಗುತ್ತದೆ. ಅಧಿಕಾರಿಗಳಿಗೂ ಸಹ ಎಚ್ಚರಿಕೆ ಕೊಡುತ್ತಾಾರೆ, ಪ್ರೀತಿಯಿಂದ ಹೇಳುತ್ತಾಾರೆ. ಕೆಲಸ ಮಾಡದವರನ್ನು ಕಂಡರೆ ಗರಂ ಆಗುತ್ತಾಾರೆ. ಇದರಿಂದಾಗಿ ಅಧಿಕಾರಿಗಳು ಮತ್ತು ನೌಕರರು ಸರಿದಾರಿಗೆ ಬರುವಂತಾಗಿದೆ. ಗ್ರಾಾಮಾಂತರ ಸಮಸೆಗೆ ಹೆಚ್ಚಿಿನ ಆದ್ಯತೆ ಕೊಡುತ್ತಿಿದ್ದಾಾರೆ. ಎಲ್ಲಕ್ಕಿಿಂತ ಮಹತ್ವವಾದದ್ದೆೆಂದರೆ ಜನರ ಸಮಸ್ಯೆೆಗೆ ಸ್ಪಂದಿಸುವುದು. ಜನಸ್ಪಂದನೆಗೆ ಬಂದ ಅರ್ಜಿಗಳನ್ನು ಆಯಾಯ ಇಲಾಖಾಧಿಕಾರಿಗಳಿಗೆ ಕಳುಹಿಸಿ ಆಮೇಲೆ ಅದರ ಬಗ್ಗೆೆ ಕೈಗೊಂಡ ಕ್ರಮವನ್ನೂ ಕೇಳುತ್ತಾಾರೆ. ಜನಪರ ಕಾಳಜಿಯುಳ್ಳ ಒಬ್ಬ ಅಧಿಕಾರಿ ನಿಜಕ್ಕೂ ಮಾಡಬೇಕಾದ ಕೆಲಸ ಇದು. ವರ್ಗಾವಣೆಯಾಗಿ ಹೋಗುವ ಮುನ್ನ ಈ ಜಿಲ್ಲೆೆಯಲ್ಲಿ ನಿಮ್ಮ ಹೆಜ್ಜೆೆ ಗುರುತು ಬಿಟ್ಟು ಹೋಗಿ ಎಂದು ಸದಾ ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಿಿರುತ್ತಾಾರೆ.   

24.9.18
...............................

Saturday, 1 September 2018

ಗೌರಿ-ಗಣೇಶ ವಿಗ್ರಹಗಳ ಅಂತಿಮ ಹಂತದ ಸಿದ್ಧತೆ 
75 ವರ್ಷದಿಂದ ವಿಗ್ರಹ ತಯಾರಿಕೆ ನಡೆಸುತ್ತಿಿರುವ ನಂಜುಂಡಪ್ಪ ಕುಟುಂಬಸ್ಥರು








ಶಿವಮೊಗ್ಗ: ಗಣೇಶ ಚವತಿಗೆ ಇನ್ನು 20 ದಿವಸ ಉಳಿದಿದೆ. ನಾಡಿನಾದ್ಯಂತ ಗಣೇಶ ಮತ್ತು ಗೌರಿ ಆಗಮನಕ್ಕೆೆ ಸಿದ್ಧತೆಯೂ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಣೇಶ ಮತ್ತು ಗೌರಿಯ ವಿಗ್ರಹ ತಯಾರಕರು ಬಿರುಸಿನಿಂದ ತಮ್ಮ ಕೆಲಸ ಮುಂದುವರೆಸಿದ್ದಾಾರೆ.
ಶಿವಮೊಗ್ಗದಲ್ಲಿ ಗೌರಿ-ಗಣೇಶ ವಿಗ್ರಹ ತಯಾರಿಸುವುದರಲ್ಲಿ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಬಿ.ಬಿ. ರಸ್ತೆೆಯಲ್ಲಿರುವ ಜಿ.ಎನ್.ನಂಜುಂಡಪ್ಪ ವಂಶಸ್ಥರು ಸುಮಾರು 75 ವರ್ಷದಿಂದ ಪ್ರಖ್ಯಾಾತರು. ನಗರದ ಅನೇಕ ಪ್ರಖ್ಯಾಾತ ಗಣಪತಿ ವಿಗ್ರಹ ಇವರ ಕೈಯಿಂದಲೇ ಅರಳುತ್ತದೆ. ಈ ವಂಶದ ಗಣೇಶ್ ಮತ್ತು ಸಹೋದರರ ಕುಟುಂಬದವರು ಈಗ ಈ ವೃತ್ತಿಿಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪ್ರತಿವರ್ಷ ಸುಮಾರು 400 ರಷ್ಟು ವಿಗ್ರಹವನ್ನು ತಯಾರಿಸುತ್ತಾಾರೆ.
ಗೌರಿ-ಗಣೇಶ ಹಬ್ಬದಲ್ಲಿ ಈ ವಿಗ್ರಹಗಳೇ ಪೂಜೆಗೊಳ್ಳಬೇಕಿರುವುದರಿಂದ ಪೂಜಿಸುವವರು ಸಾಕಷ್ಟಿಿರುವುದರಿಂದ ಅಂತಹವರೆಲ್ಲ ಖಾಯಂ ಆಗಿ ವಿಗ್ರಹ ತಯಾರಕರನ್ನು ಹೊಂದಿರುತ್ತಾಾರೆ. ನಂಜುಂಡಪ್ಪ ವಂಶಸ್ಥರು ಈ ರೀತಿ ಖಾಯಂ ಗ್ರಾಾಹಕರನ್ನೇ ಹೊಂದಿದ್ದಾಾರೆ.
ಇವರ ಜೊತೆಗೆ ಶೃಂಗೇರಿ, ಕಳಸ ಮತ್ತು ಹೊರನಾಡಿಗೆ ನೂರಾರು ವಿಗ್ರಹಗಳನ್ನು ಕಳುಹಿಸುತ್ತಾಾರೆ. ಇಲ್ಲಿಯು ಅವರ ಖಾಯಂ ಗ್ರಾಾಹ್ರಕರಿದ್ದು, ಅವರು ಗಣೇಶನ ಹಬ್ಬ ನಾಲ್ಕು ತಿಂಗಳಿರುವಾಗಲೇ ನೆನೆಪು ಮಾಡುತ್ತಾಾರೆ. ಕೆಲಸವೂ ಆಗಲೇ ಆರಂಭಗೊಳ್ಳುತ್ತದೆ. ಈಗ ಗಣಪತಿಯ ವಿಗ್ರಹಗಳೆಲ್ಲ ಸಿದ್ಧಗೊಂಡಿದ್ದು, ಅಲಂಕಾರ ಮತ್ತು ಬಣ್ಣ ಬಳಿಯುವುದು ಮಾತ್ರ ಬಾಕಿ ಇದೆ. ಅವರ ಮನೆ ಆವರಣದಲ್ಲಿ ಎಲ್ಲಿ ನೋಡಿದರೂ ಗಣಪತಿ ಮತ್ತು ಗೌರಿ ವಿಗ್ರಹ ತುಂಬಿಕೊಂಡಿದೆ. ಹೆಂಗಸರು ಮತ್ತು ಮಕ್ಕಳೂ ಸಹ ಇದೇ ಕೆಲಸದಲ್ಲಿನಿರತಾಗಿರುವುದು ಕಂಡುಬರುತ್ತಿಿದೆ.
ಸತತವಾಗಿ ನಾಲ್ಕು ತಿಂಗಳು ಕುಳಿತು ಎಡೆಬಿಡದೆ ವಿಗ್ರಹ ತಯಾರಿಸುವುದು ಸುಲಭದ ಕೆಲಸವಲ್ಲ. ಆದರೂ ತಮ್ಮ ವೃತ್ತಿಿ ಮತ್ತು ಹಬ್ಬದ ವಿಶೇಷ ಕೆಲಸವಾಗಿರುವುದರಿಂದ ಹಗಲು- ರಾತ್ರಿಿ ಎನ್ನದೆ ಈ ದಿನಗಳಲ್ಲಿ ಕಾಯಕ ನಿರತರಾಗಿರುತ್ತಾಾರೆ. ವಿಗ್ರಹಕ್ಕೆೆ ಮಣ್ಣು ತರುವುದೇ ಈಗ ಸಾಹಸದ ಕೆಲಸವಾಗಿದೆ. ಕುಂಸಿ, ಭದ್ರಾಾವತಿ, ನಗರದ ರಾಗಿಗುಡ್ಡ ಮೊದಲಾದೆಡೆ ಈ ಮಣ್ಣಿಿನ ಲಭ್ಯತೆ ಇದೆ. ಸುಮಾರು ಎರಡು ಟ್ರ್ಯಾಾಕ್ಟರ್ ಮಣ್ಣು ತರಿಸಿ, ಅದನ್ನು ಹದಗೊಳಿಸಿದ ನಂತರ ವಿಗ್ರಹ ತಯಾರಿಕೆ ಶುಭದಿನದಂದು ಆರಂಭಗೊಳ್ಳುತ್ತದೆ. ಹೀಗೆ ಮನೆಯ ಎಲ್ಲರ ಕೈಯಲ್ಲಿ ಗಣಪ- ಗೌರಿ ಅರಳತೊಡಗುತ್ತಾಾರೆ.
ಈಗ ಬಣ್ಣ ಹಚ್ಚುವ ಕೆಲಸವೂ ಆರಂಭವಾಗಿದೆ. ಇನ್ನೊೊಂದು 10 ದಿನದಲ್ಲಿ ವಿಗ್ರಹಗಳೆಲ್ಲ ಮಾರುಕಟ್ಟೆೆಗೆ ಮತ್ತು ಗ್ರಾಾಹಕರ ಮನೆ ಸೇರಲು ಸಿದ್ಧಗೊಳ್ಳುತ್ತಿಿವೆ. ಇದು ಕುಟುಂಬದ ವೃತ್ತಿಿಯಾಗಿ ಪಾರಂಪರಿಕವಾಗಿ ಬಂದಿರುವುದರಿಂದ ಎಷ್ಟೇ ತೊಂದರೆಯಾದರೂ ಎಲ್ಲರೂ ಇದರಲ್ಲಿ ಪಾಲ್ಗೊೊಳ್ಳುತ್ತಾಾರೆ. ಒಂದಷ್ಟು ದಿನ ಮಾತ್ರ ತೊಂದರೆ, ಆನಂತರ ಸಮಸ್ಯೆೆ ಇಲ್ಲ ಎನ್ನುವ ಗಣೇಶ್, ಎಲ್ಲರೂ ಕೈಜೋಡಿಸುವುದರಿಂದ ಸಾಂಗವಾಗಿ ಕೆಲಸ ಪ್ರತಿವರ್ಷ ನಡೆಯುತ್ತಿಿದೆ. ಮಗಳು ಸಹನಾ ಉತ್ತಮ ಪೇಂಟರ್ ಆಗಿರುವುದರಿಂದ ಆ ಕೆಲಸದ ಜವಾಬ್ದಾಾರಿಯನ್ನು ಅವಳಿಗೆ ವಹಿಸಿದ್ದೇನೆ ಎನ್ನುತ್ತಾಾರೆ.
ವಿಗ್ರಹದ ಜೊತೆಗೆ ಉಳಿದ ದಿನಗಳಲ್ಲಿ ಬಾಸಿಂಗ ತಯಾರಿಕೆ, ಮಡಿಕೆ ತಯಾರಿಕೆ ಮಾಡುತ್ತಾಾರೆ. ಇವಗಳಿಗೆ ಅಷ್ಟೇನೂ ಮಾರುಕಟ್ಟೆೆ ಇಲ್ಲದಿರುವುದರಿಂದ ಬೇಡಿಕೆ ಇದ್ದಾಾಗಲಷ್ಟೇ ಮಾಡಿಕೊಡುತ್ತಾಾರೆ. ನಗರದ ಪ್ರಖ್ಯಾಾತ ಗಣಪತಿಗಳೆನಿಸಿಕೊಂಡಿರುವ ಹಿಂದು ಮಹಾಸಭಾ,  ರಾಮಣ್ಣ ಶ್ರೇಷ್ಠಿಿ ಪಾರ್ಕ್, ಭಾವಸಾರ ಕ್ಷತ್ರಿಿಯ ಸಮಾಜ, ಕಡೆಕಲ್, ಶಾಂತಿನಗರ ಮೊದಲಾದೆಡೆಗಳಿಗೆ ಇವರು ದೊಡ್ಡ ಗಾತ್ರದ ಮತ್ತು ಅವರು ಸೂಚಿಸಿದ ಭಂಗಿಯ ವಿಗ್ರಹ ತಯಾರಿಸಿಕೊಡುತ್ತಾಾರೆ. ಈ ವಿಗ್ರಹಗಳೆಲ್ಲ ಈಗ ಸಿದ್ಧಗೊಂಡಿವೆ. ಗಣೇಶನಿಗೆ ಅಂತಿಮ ಟಚಪ್ ಕೊಟ್ಟು ಕಳುಹಿಸಲು ಸನ್ನದ್ಧರಾಗಿದ್ದಾಾರೆ.   
published on aug 25-2018
................................

Wednesday, 29 August 2018

ರಂಗದಲ್ಲಿ ಯಶಸ್ವಿಿ ಪ್ರಯೋಗ ಗಾಂಧಿ


ರಂಗಮುಖೇನ ಗಾಂಧೀಜಿಯ ಕಥನವನ್ನು ಮತ್ತೊೊಮ್ಮೆೆ ಅರಿಯುವಂತೆ ಮಾಡುವಲ್ಲಿ ಈ ನಾಟಕ  ಸಾರ್ಥಕ್ಯ ಕಂಡಿದೆ ಎನ್ನಬಹುದು. ಸುಮಾರು ಒಂದುವರೆ ಗಂಟೆಯ ಪ್ರದರ್ಶನದ ಈ ರೂಪಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಒಟ್ಟಾಾರೆ, ಕಥೆ ಗೊತ್ತಿಿದ್ದರೂ, ಮತ್ತೊೊಮ್ಮೆೆ ನೋಡಿ ಎಲ್ಲ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಈ ರೂಪಕವನ್ನು ನೋಡಲೇಬೇಕು.




 ಮಹಾತ್ಮಾಾ ಗಾಂಧಿ ಎಂದರೆ ಸತ್ಯ, ಅಹಿಂಸೆ ಮತ್ತು ಶಾಂತಿ. ಸಾಮಾನ್ಯ ಮನುಷ್ಯನಾಗಿ ಹುಟ್ಟಿಿ, ಹಾಗೆಯೇ ಬೆಳೆದು ಮಹಾತ್ಮನಾದ ವ್ಯಕ್ತಿಿ. ಬ್ರಿಿಟೀಷರ ಅನ್ಯಾಾಯದ ವಿರುದ್ಧ ಎದೆಗುಂದದೆ ಹೋರಾಟ ನಡೆಸಿ, ಕಷ್ಟದಲ್ಲಿರುವವರ ಬಗ್ಗೆೆ ಸದಾ ಮರುಗಿ, ಕೋಮು ಸೌಹಾರ್ದತೆಯನ್ನು ಸಾರಿದವರು. ಇಂತಹ ಮಹಾಮಾನವತಾವಾದಿಯ ಹುಟ್ಟು, ಹೋರಾಟ, ಶಿಕ್ಷಣ, ದಕ್ಷಿಣ ಆಫ್ರಿಿಕಾದಲ್ಲಿ ಅನುಭವಿಸಿದ ಯಾತನೆ, ಭಾರತದಲ್ಲಿ ತಂದ ಬದಲಾವಣೆ, ಸಾರಿದ ಸಂದೇಶ, ಅಪ್ಪಿಿಕೊಂಡ ತತ್ವಗಳು, ಒಪ್ಪಿಿಕೊಂಡ ಸತ್ಯಗಳು... ಇವನ್ನೆೆಲ್ಲ ಸಾದರಪಡಿಸುವ ರಂಗರೂಪಕವೇ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’.
ಜಿಲ್ಲಾಾ ಕೇಂದ್ರ ಕಾರಾಗೃಹದಲ್ಲಿ ಈ ರಂಗರೂಪಕವನ್ನು ಪ್ರದರ್ಶಿಸಿದವರು ಕರ್ನಾಟಕದ ವಿವಿಧೆಡೆಯ ಕಲಾವಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡದ ರಂಗಾಯಣದ ಕಲಾವಿದರ ಸಹಯೋಗ ಇದಕ್ಕಿಿದೆ. ಮಹಾತ್ಮಾಾಗಾಂಧಿ ಅವರ ಜನ್ಮದಿನ ಈ ವರ್ಷ 150 ವರ್ಷಕ್ಕೆೆ ತುಂಬುತ್ತದೆ. ಈ ಹಿನ್ನೆೆಲೆಯಲ್ಲಿ  ಇಲಾಖೆ ಈ ರೂಪಕವನ್ನು ಪ್ರಾಾಯೋಜಿಸಿದೆ. ಗಾಂಧೀಜಿಯರ ತತ್ವ್ತ, ಸಂದೇಶವನ್ನು ನಾವು ಹೇಗೆ ಅಳವಡಿಸಿಕೊಳ್ಳಬೇಕು, ಒಬ್ಬ ಸಾಮಾನ್ಯ ವ್ಯಕ್ತಿಿ ಹೇಗೆ ಮಹಾತ್ಮನಾಗಬಹುದು, ಮಹಾತ್ಮನಾಗಲು ಹೇಗೆ ಬದುಕಿ, ಬಾಳಬೇಕು ಎನ್ನುವುದನ್ನು ಸರಳವಾಗಿ, ಮನದಟ್ಟಾಾಗುವಂತೆ ಇಲ್ಲಿ ಪ್ರದರ್ಶಿಸಲಾಯಿತು.
 ಗಾಂಧೀಜಿ ಎಂದರೆ ಸತ್ಯ. ಸತ್ಯದ ಪ್ರತಿರೂಪವೇ ಗಾಂಧಿ ಎನ್ನುವ ಮಾತಿನಿಂದ ರೂಪಕ ಆರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು. ಎಷ್ಟೇ ಕಷ್ಟವಾದರೂ ಸತ್ಯವನ್ನೇ ನುಡಿಯುತ್ತೇನೆ ಎಂದು ತಾಯಿಗೆ ಮಾತು ಕೊಡುವುದು, ರೈಲಿನಲ್ಲಿ ದಕ್ಷಿಣ ಆಫ್ರಿಿಕಾಕ್ಕೆೆ ತೆರಳುವಾಗ ಪ್ರಥಮ ದರ್ಜೆಯ ಟಿಕೆಟಿದ್ದರೂ ಅಲ್ಲಿನ ರೈಲು ಅಧಿಕಾರಿ ಇವರನ್ನು ತೃತೀಯ ದರ್ಜೆಗೆ ಹೋಗುವಂತೆ ಆಗ್ರಹಿಸುವುದು, ಇದನ್ನು ಪ್ರತಿಭಟಿಸಿದಾಗ ಹೊರತಳ್ಳುವುದು, ದ. ಆಫ್ರಿಿಕಾದಲ್ಲಿ ಭಾರತೀಯರು ದಿನನಿತ್ಯ ಅನುಭವಿಸುತ್ತಿಿದ್ದ ಕಿರುಕುಳಗಳು, ಅಲ್ಲಿ ವಕೀಲಿ ವೃತ್ತಿಿ, ಸತ್ಯಕ್ಕಾಾಗಿ ಆಗ್ರಹ, ಭಾರತಕ್ಕೆೆ ಮರಳಿ ಸ್ವಾಾತಂತ್ರ್ಯಕ್ಕಾಾಗಿ ಹೋರಾಟ, ದೇಶ ವಿಭಜನೆ, ಹಿಂದು- ಮುಸ್ಲಿಿಮರೆಲ್ಲ ಅಣ್ಣ-ತಮ್ಮಂದಿರೆಂದು ಸಾರುವುದು, ಕೊನೆಯಲ್ಲಿ ಗಾಂಧೀಜಿಗೆ ಗುಂಡು ಹೊಡೆದು ಸಾಯಿಸುವುದು ಮೊದಲಾದ ದೃಶ್ಯಗಳು ಜನರ ಮನತಟ್ಟುವಂತೆ ಕಲಾವಿದರು ಪ್ರದರ್ಶಿಸುವಲ್ಲಿ ಯಶಸ್ವಿಿಯಾಗಿದ್ದಾಾರೆ.
 ಕಥೆಯಲ್ಲಿ ವಿಶೇಷತೆ ಏನೂ ಇಲ್ಲ. ಎಲ್ಲರಿಗೂ ತಿಳಿದಿರುವ ಗಾಂಧಿಯ ಕಥಾವಸ್ತು ಇದಾದರೂ, ಅದನ್ನು ಅತ್ಯಂತ ಸರಳವಾಗಿ, ಕಟ್ಟಿಿಕೊಡಲಾಗಿದೆ. ಇಂದಿನ ದಿನಗಳಲ್ಲಿ ಎಲ್ಲೆೆಡೆ ಹಿಂಸಾಚಾರ, ಕೋಮು ಕಲಹ ಹೆಚ್ಚುತ್ತಿಿರುವ ಸಂದರ್ಭದಲ್ಲಿ ಯುವಕರು ಮತ್ತು ವಿದ್ಯಾಾರ್ಥಿಗಳು ಇದನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತೀರಾ ಮುಖ್ಯ ಎನ್ನುವುದನ್ನು ಇಲ್ಲಿ ಸಾರಲಾಗಿದೆ. ಜೊತೆಗೆ ಖೈದಿಗಳ ಮನಪರಿವರ್ತನೆಗೆ ಇದೊಂದು ದಿವ್ಯೌೌಷಧ.
ಈ ರೂಪಕವನ್ನು ಹಗಲಿನಲ್ಲಿ ಮತ್ತು ತರಗತಿ ಕೋಣೆಗಳಲ್ಲೂ  ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸಲು ಅನುಕೂಲವಾಗುವಂತೆ ಸರಳ ವಿನ್ಯಾಾಸವನ್ನು ಮಾಡಲಾಗಿದೆ. ಕಲಾವಿದರೇ ಎಲ್ಲ ವಸ್ತುಗಳನ್ನು ಪಟಪಟನೆ ಎತ್ತಿಿಕೊಂಡು ಹೋಗಿ, ಎಲ್ಲಿಯೂ ಕಥೆಗೆ ಚ್ಯುತಿ ಬಾರದಂತೆ, ಪ್ರೇಕ್ಷಕರಿಗೆ ಕಿರಿಕಿರಿಯಾಗದಂತೆ ಜೋಡಿಸಿ ಕಥೆಯನ್ನು ಮುಂದುವರೆಸುತ್ತಾಾರೆ.
ಇಲ್ಲಿ ಗಾಂಧೀಜಿಯವರ ಬದುಕು, ಸಾಧನೆ ಮತ್ತು ತತ್ವಗಳನ್ನು, ಜೊತೆಗೆ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ಸಂಗತಿಗಳನ್ನು ಸಾರಲಾಗಿದೆ. ಪಾತ್ರಧಾರಿಗಳೆಲ್ಲ ಬಹುತೇಕ ಖಾದಿ ದಿರಿಸಿನಲ್ಲೇ ನಾಟಕದ ಬಹುತೇಕ ದೃಶ್ಯಗಳಲ್ಲಿ ಅಭಿನಯಿಸಿದ್ದಾಾರೆ. ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಬಿಳಿ ದಿರಿಸಿನಲ್ಲೇ ಪ್ರದರ್ಶಿತವಾಗಿವೆ. ಹುಚ್ಚು ಆವೇಶದಲ್ಲಿ ಹಿಂದು- ಮುಸ್ಲಿಿಮರು ಹೊಡೆದಾಡದೆ, ಪರಮಶ್ರತುಗಳಾಗದೆ  ಸಹೋದರರಂತೆ ಬಾಳಬೇಕು. ಮುಳ್ಳನ್ನು ಮುಳ್ಳಿಿನಿಂದಲೇ ತೆಗೆಯಬೇಕೆನ್ನುವುದು ಸಲ್ಲದು. ಕೆಟ್ಟ ಕೆಲಸ ಮಾಡುವವನು ಕ್ರೂರ ಮೃಗಕ್ಕಿಿಂತ ಕೀಳು, ಅಸ್ಪಶ್ಯತೆ ಒಂದು ಶಾಪ, ದುಡಿಮೆಯಲ್ಲಿ ಮೇಲು- ಕೀಳಿಲ್ಲ, ಸತ್ಯವೇ ಮೇಲು. ಸುಳ್ಳು ಮತ್ತು ಅನ್ಯಾಾಯದ ವಿರುದ್ದ ಎದೆಗುಂದದೆ ಹೋರಾಡಬೇಕು. ಈ ವಿಚಾರದಲ್ಲಿ  ರಾಜಿ ಇಲ್ಲ ಎಂಬಿತ್ಯಾಾದಿ ಸಂದೇಶವನ್ನು ಈ ಕಥೆ ಸಾರುತ್ತದೆ.
ಪಾತ್ರಧಾರಿಗಳೂ ಸಹ ಎಲ್ಲೂ ಪಾತ್ರಕ್ಕೆೆ ಭಂಗವಾಗದಂತೆ ನಟನೆ ಮಾಡಿದ್ದಾಾರೆ. ಕೆಲವು ಸಂದರ್ಭದಲ್ಲಿ ಸಾಂಕೇತಿಕವಾಗಿ, ಚಿತ್ರರೂಪದಲ್ಲಿ, ಸಂಗೀತದ ರೂಪದಲ್ಲಿ ದೃಶ್ಯವನ್ನು ತೋರಿಸಲಾಗಿದೆ. ರಂಗಮುಖೇನ ಗಾಂಧೀಜಿಯ ಕಥನವನ್ನು ಮತ್ತೊೊಮ್ಮೆೆ ಅರಿಯುವಂತೆ ಮಾಡುವಲ್ಲಿ ಇದು ಸಾರ್ಥಕ್ಯ ಕಂಡಿದೆ ಎನ್ನಬಹುದು. 
ಸುಮಾರು ಒಂದುವರೆ ಗಂಟೆಯ ಪ್ರದರ್ಶನದ ಈ ರೂಪಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಒಟ್ಟಾಾರೆ, ಕಥೆ ಗೊತ್ತಿಿದ್ದರೂ, ಮತ್ತೊೊಮ್ಮೆೆ ನೋಡಿ ಎಲ್ಲ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಈ ರೂಪಕವನ್ನು ನೋಡಲೇಬೇಕು.
ಈ ಕಥೆಯನ್ನು ರಂಗರೂಪಕ್ಕೆೆ ತಂದು ನಿರ್ದೇಶಿಸಿದವರು ಶ್ರೀಪಾದ ಭಟ್, ನಿರ್ವಹಣೆಯನ್ನು ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ್ ಶಿಗ್ಗಾಾಂವ್ ಮಾಡಿದ್ದಾಾರೆ. 

published on aug 28
....................................


Tuesday, 28 August 2018

ಗೌರಿ-ಗಣೇಶ ವಿಗ್ರಹಗಳ ಅಂತಿಮ ಹಂತದ ಸಿದ್ಧತೆ 
  75 ವರ್ಷದಿಂದ ವಿಗ್ರಹ ತಯಾರಿಕೆ ನಡೆಸುತ್ತಿಿರುವ ನಂಜುಂಡಪ್ಪ ಕುಟುಂಬಸ್ಥರು



ಶಿವಮೊಗ್ಗ: ಗಣೇಶ ಚವತಿಗೆ ಇನ್ನು 20 ದಿವಸ ಉಳಿದಿದೆ. ನಾಡಿನಾದ್ಯಂತ ಗಣೇಶ ಮತ್ತು ಗೌರಿ ಆಗಮನಕ್ಕೆೆ ಸಿದ್ಧತೆಯೂ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಣೇಶ ಮತ್ತು ಗೌರಿಯ ವಿಗ್ರಹ ತಯಾರಕರು ಬಿರುಸಿನಿಂದ ತಮ್ಮ ಕೆಲಸ ಮುಂದುವರೆಸಿದ್ದಾಾರೆ.
ಶಿವಮೊಗ್ಗದಲ್ಲಿ ಗೌರಿ-ಗಣೇಶ ವಿಗ್ರಹ ತಯಾರಿಸುವುದರಲ್ಲಿ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಬಿ.ಬಿ. ರಸ್ತೆೆಯಲ್ಲಿರುವ ಜಿ.ಎನ್.ನಂಜುಂಡಪ್ಪ ವಂಶಸ್ಥರು ಸುಮಾರು 75 ವರ್ಷದಿಂದ ಪ್ರಖ್ಯಾಾತರು. ನಗರದ ಅನೇಕ ಪ್ರಖ್ಯಾಾತ ಗಣಪತಿ ವಿಗ್ರಹ ಇವರ ಕೈಯಿಂದಲೇ ಅರಳುತ್ತದೆ. ಈ ವಂಶದ ಗಣೇಶ್ ಮತ್ತು ಸಹೋದರರ ಕುಟುಂಬದವರು ಈಗ ಈ ವೃತ್ತಿಿಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪ್ರತಿವರ್ಷ ಸುಮಾರು 400 ರಷ್ಟು ವಿಗ್ರಹವನ್ನು ತಯಾರಿಸುತ್ತಾಾರೆ.
ಗೌರಿ-ಗಣೇಶ ಹಬ್ಬದಲ್ಲಿ ಈ ವಿಗ್ರಹಗಳೇ ಪೂಜೆಗೊಳ್ಳಬೇಕಿರುವುದರಿಂದ ಪೂಜಿಸುವವರು ಸಾಕಷ್ಟಿಿರುವುದರಿಂದ ಅಂತಹವರೆಲ್ಲ ಖಾಯಂ ಆಗಿ ವಿಗ್ರಹ ತಯಾರಕರನ್ನು ಹೊಂದಿರುತ್ತಾಾರೆ. ನಂಜುಂಡಪ್ಪ ವಂಶಸ್ಥರು ಈ ರೀತಿ ಖಾಯಂ ಗ್ರಾಾಹಕರನ್ನೇ ಹೊಂದಿದ್ದಾಾರೆ.
ಇವರ ಜೊತೆಗೆ ಶೃಂಗೇರಿ, ಕಳಸ ಮತ್ತು ಹೊರನಾಡಿಗೆ ನೂರಾರು ವಿಗ್ರಹಗಳನ್ನು ಕಳುಹಿಸುತ್ತಾಾರೆ. ಇಲ್ಲಿಯು ಅವರ ಖಾಯಂ ಗ್ರಾಾಹ್ರಕರಿದ್ದು, ಅವರು ಗಣೇಶನ ಹಬ್ಬ ನಾಲ್ಕು ತಿಂಗಳಿರುವಾಗಲೇ ನೆನೆಪು ಮಾಡುತ್ತಾಾರೆ. ಕೆಲಸವೂ ಆಗಲೇ ಆರಂಭಗೊಳ್ಳುತ್ತದೆ. ಈಗ ಗಣಪತಿಯ ವಿಗ್ರಹಗಳೆಲ್ಲ ಸಿದ್ಧಗೊಂಡಿದ್ದು, ಅಲಂಕಾರ ಮತ್ತು ಬಣ್ಣ ಬಳಿಯುವುದು ಮಾತ್ರ ಬಾಕಿ ಇದೆ. ಅವರ ಮನೆ ಆವರಣದಲ್ಲಿ ಎಲ್ಲಿ ನೋಡಿದರೂ ಗಣಪತಿ ಮತ್ತು ಗೌರಿ ವಿಗ್ರಹ ತುಂಬಿಕೊಂಡಿದೆ. ಹೆಂಗಸರು ಮತ್ತು ಮಕ್ಕಳೂ ಸಹ ಇದೇ ಕೆಲಸದಲ್ಲಿನಿರತಾಗಿರುವುದು ಕಂಡುಬರುತ್ತಿಿದೆ.
ಸತತವಾಗಿ ನಾಲ್ಕು ತಿಂಗಳು ಕುಳಿತು ಎಡೆಬಿಡದೆ ವಿಗ್ರಹ ತಯಾರಿಸುವುದು ಸುಲಭದ ಕೆಲಸವಲ್ಲ. ಆದರೂ ತಮ್ಮ ವೃತ್ತಿಿ ಮತ್ತು ಹಬ್ಬದ ವಿಶೇಷ ಕೆಲಸವಾಗಿರುವುದರಿಂದ ಹಗಲು- ರಾತ್ರಿಿ ಎನ್ನದೆ ಈ ದಿನಗಳಲ್ಲಿ ಕಾಯಕ ನಿರತರಾಗಿರುತ್ತಾಾರೆ. ವಿಗ್ರಹಕ್ಕೆೆ ಮಣ್ಣು ತರುವುದೇ ಈಗ ಸಾಹಸದ ಕೆಲಸವಾಗಿದೆ. ಕುಂಸಿ, ಭದ್ರಾಾವತಿ, ನಗರದ ರಾಗಿಗುಡ್ಡ ಮೊದಲಾದೆಡೆ ಈ ಮಣ್ಣಿಿನ ಲಭ್ಯತೆ ಇದೆ. ಸುಮಾರು ಎರಡು ಟ್ರ್ಯಾಾಕ್ಟರ್ ಮಣ್ಣು ತರಿಸಿ, ಅದನ್ನು ಹದಗೊಳಿಸಿದ ನಂತರ ವಿಗ್ರಹ ತಯಾರಿಕೆ ಶುಭದಿನದಂದು ಆರಂಭಗೊಳ್ಳುತ್ತದೆ. ಹೀಗೆ ಮನೆಯ ಎಲ್ಲರ ಕೈಯಲ್ಲಿ ಗಣಪ- ಗೌರಿ ಅರಳತೊಡಗುತ್ತಾಾರೆ.
ಈಗ ಬಣ್ಣ ಹಚ್ಚುವ ಕೆಲಸವೂ ಆರಂಭವಾಗಿದೆ. ಇನ್ನೊೊಂದು 10 ದಿನದಲ್ಲಿ ವಿಗ್ರಹಗಳೆಲ್ಲ ಮಾರುಕಟ್ಟೆೆಗೆ ಮತ್ತು ಗ್ರಾಾಹಕರ ಮನೆ ಸೇರಲು ಸಿದ್ಧಗೊಳ್ಳುತ್ತಿಿವೆ. ಇದು ಕುಟುಂಬದ ವೃತ್ತಿಿಯಾಗಿ ಪಾರಂಪರಿಕವಾಗಿ ಬಂದಿರುವುದರಿಂದ ಎಷ್ಟೇ ತೊಂದರೆಯಾದರೂ ಎಲ್ಲರೂ ಇದರಲ್ಲಿ ಪಾಲ್ಗೊೊಳ್ಳುತ್ತಾಾರೆ. ಒಂದಷ್ಟು ದಿನ ಮಾತ್ರ ತೊಂದರೆ, ಆನಂತರ ಸಮಸ್ಯೆೆ ಇಲ್ಲ ಎನ್ನುವ ಗಣೇಶ್, ಎಲ್ಲರೂ ಕೈಜೋಡಿಸುವುದರಿಂದ ಸಾಂಗವಾಗಿ ಕೆಲಸ ಪ್ರತಿವರ್ಷ ನಡೆಯುತ್ತಿಿದೆ. ಮಗಳು ಸಹನಾ ಉತ್ತಮ ಪೇಂಟರ್ ಆಗಿರುವುದರಿಂದ ಆ ಕೆಲಸದ ಜವಾಬ್ದಾಾರಿಯನ್ನು ಅವಳಿಗೆ ವಹಿಸಿದ್ದೇನೆ ಎನ್ನುತ್ತಾಾರೆ.
ವಿಗ್ರಹದ ಜೊತೆಗೆ ಉಳಿದ ದಿನಗಳಲ್ಲಿ ಬಾಸಿಂಗ ತಯಾರಿಕೆ, ಮಡಿಕೆ ತಯಾರಿಕೆ ಮಾಡುತ್ತಾಾರೆ. ಇವಗಳಿಗೆ ಅಷ್ಟೇನೂ ಮಾರುಕಟ್ಟೆೆ ಇಲ್ಲದಿರುವುದರಿಂದ ಬೇಡಿಕೆ ಇದ್ದಾಾಗಲಷ್ಟೇ ಮಾಡಿಕೊಡುತ್ತಾಾರೆ. ನಗರದ ಪ್ರಖ್ಯಾಾತ ಗಣಪತಿಗಳೆನಿಸಿಕೊಂಡಿರುವ ಹಿಂದು ಮಹಾಸಭಾ,  ರಾಮಣ್ಣ ಶ್ರೇಷ್ಠಿಿ ಪಾರ್ಕ್, ಭಾವಸಾರ ಕ್ಷತ್ರಿಿಯ ಸಮಾಜ, ಕಡೆಕಲ್, ಶಾಂತಿನಗರ ಮೊದಲಾದೆಡೆಗಳಿಗೆ ಇವರು ದೊಡ್ಡ ಗಾತ್ರದ ಮತ್ತು ಅವರು ಸೂಚಿಸಿದ ಭಂಗಿಯ ವಿಗ್ರಹ ತಯಾರಿಸಿಕೊಡುತ್ತಾಾರೆ. ಈ ವಿಗ್ರಹಗಳೆಲ್ಲ ಈಗ ಸಿದ್ಧಗೊಂಡಿವೆ. ಗಣೇಶನಿಗೆ ಅಂತಿಮ ಟಚಪ್ ಕೊಟ್ಟು ಕಳುಹಿಸಲು ಸನ್ನದ್ಧರಾಗಿದ್ದಾಾರೆ.   
published on aug 25
................................

Thursday, 23 August 2018

  ಪ್ರಕೃತಿಯ ತಿರುಗೇಟು





ನಾವು ಮಾಡುತ್ತಿಿರುವುದೇನು? ಪ್ರಕೃತಿಯ ವಿರುದ್ದ ಸಾಗುತ್ತಿಿದ್ದೇವೆ. ಯಾವುದನ್ನು ಮಾಡಬಾರದಿತ್ತೋೋ ಅದನ್ನು ಮಾಡಿದ್ದೇವೆ. ಕಾರಣ ಹಣದ ದುರಾಸೆ. ಇದರಿಂದ ವಿನಾಶವನ್ನು ಮನೆಬಾಗಿಲಿಗೆ ಆಹ್ವಾಾನಿಸಿಕೊಂಡಿದ್ದೇವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಹಣದ ಆಸೆ ಹೆಚ್ಚಿಿದೆ. ಈ ದುರಾಸೆ ಮನುಷ್ಯನ್ನು ವಿನಾಶದೆಡೆಗೆ ತಳ್ಳುತ್ತದೆ ಎನ್ನುವ ಮಾತು ಮತ್ತೆೆ ಕೊಡಗಿನ ಘಟನೆಯಿಂದ ಕಲಿತ ಪಾಠವಾಗಿದೆ.


ಪ್ರಕೃತಿಯಲ್ಲಿ ಯಾವುದೂ ಒಂಟಿ ಅಲ್ಲ; ಮನುಷ್ಯ ಅದರ ಒಂದು ಭಾಗ. ನಿಸರ್ಗದ ವಿರುದ್ಧದ ಅವನ ಯುದ್ಧ ತನ್ನ ವಿರುದ್ಧವೇ ತಾನು ಕಾದಾಡಿದಂತೆ. ಇದು ಅಮೆರಿಕಾದ ಜೀವವಿಜ್ಞಾಾನಿ ರಾಶೆಲ್ ಕರ್ಸನ್ ಅವರ ಮಾತು.

ಜಗತ್ತಿಿನ ಕಟ್ಟಕಡೆಯ ಮರವನ್ನು ಕಡಿದುರುಳಿಸಿದ ನಂತರ, ಜಗತ್ತಿಿನ ಕಟ್ಟಕಡೆಯ ಮೀನನ್ನು ನುಂಗಿದ ನಂತರ, ಜಗತ್ತಿಿನ ಕಟ್ಟಕಡೆಯ ನೀರಿನ ಬಿಂದು ಆವಿಯಾದ ನಂತರ, ಮನುಷ್ಯ, ನಿನಗೆ ಅರ್ಥವಾಗುತ್ತದೆ ಹಣವನ್ನು ಎಂದೂ ತಿನ್ನಲಿಕ್ಕಾಾದು ಎಂದು. ಇದು ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ಮಾತು.

ಈ ಮೇಲಿನ ಎರಡೂ ಮಾತುಗಳು ಮನುಷ್ಯನ ದುರಾಸೆಗೆ ಹೋಲಿಸಿ ಹೇಳಿದ್ದು. ಕಳೆದ ವಾರ ಕೊಡಗಿನಲ್ಲಿ ಮತ್ತು ಕೇರಳದಲ್ಲಿ ಸಂಭವಿಸಿದ ಕಂಡರಿಯದ ಪ್ರವಾಹ ಮತ್ತು ಗುಡ್ಡ ಕುಸಿತ, ಅಪಾರ ಆಸ್ತಿಿ-ಪಾಸ್ತಿಿ ಹಾನಿ ಘಟನೆಯ ಹಿನ್ನೆೆಲೆಯಲ್ಲಿ ಗಮನಿಸಿದಾಗ ಈ ಹೇಳಿಕೆಗಳು ತುಂಬಾ ಅರ್ಥಗರ್ಭಿತ ಎನಿಸುತ್ತವೆ.
ಮಾನವ ಹಸ್ತಕ್ಷೇಪ ಯಾವಾಗ ಪ್ರಕೃತಿಯ ಮೇಲೆ ಅತಿಯಾಯಿತೋ, ಕಾಡನ್ನು ಕಡಿದು ಬರಿದಾಗಿಸಿದನೋ, ಗುಡ್ಡವನ್ನು ಜಾರಿಸಿ ರೆಸಾರ್ಟ್ ನಿರ್ಮಿಸಿದನೋ, ಕಂಡಲ್ಲೆೆಲ್ಲ ಶುಂಠಿ, ರಬ್ಬರ್ ಬೆಳೆಯಲಾರಂಭಿಸಿದನೋ ಅಂದೇ ಇಂತಹ ಘಟನೆಗಳಿಗೆ ನಾಂದಿ ಹಾಡಿದಂತಾಗಿತ್ತು.
ಕೇರಳ ಮತ್ತು ಕೊಡಗು ಪ್ರವಾಸೋದ್ಯಮಕ್ಕೆೆ ಹೆಸರಾದ ಸ್ಥಳಗಳು. ಇದನ್ನೇ ಸ್ಥಳೀಯರು ಮಾಫಿಯಾ ರೀತಿಯಲ್ಲಿ ಬೆಳೆಸಿದರು. ಹಣದ ಹಿಂದೆ ಅವರು ಬಿದ್ದರು. ಪ್ರವಾಸಿಗರಿಗೆ ಎಲ್ಲೆೆಂದರೆಲ್ಲಿ ರೆಸಾರ್ಟ್ ನಿರ್ಮಿಸಿ, ಬೇಕಾದ ಎಲ್ಲಾಾ ಐಶಾರಾಮಿ ವ್ಯವಸ್ಥೆೆ ಕಲ್ಪಿಿಸಿಕೊಟ್ಟು ಹಣದ ಗಿಡವನ್ನೇ ನೆಟ್ಟರು. ದಿಕ್ಕುದೆಸೆ ಇಲ್ಲದೆ ಬೆಳೆದ ಇದು ಇಂದು ಕೇರಳವನ್ನೂ, ಕೊಡಗನ್ನೂ ನುಂಗಿದೆ. ಬೃಹತ್ ರೆಸಾರ್ಟ್‌ಗಳು, ಹೋಂ ಸ್ಟೇಗಳು, ವೈಭವೋಪೇತ ಹೊಟೆಲ್‌ಗಳು ಕಂಡಲ್ಲೆೆಲ್ಲ ತಲೆಎತ್ತಿಿದ್ದವು. ಕೊಡಗಿನಲ್ಲಿ ಅಧಿಕೃತವಾಗಿ ಸುಮಾರು ಒಂದು ಸಾವಿರ ಹೋಂ ಸ್ಟೇ ಇವೆ. ಇನ್ನು ಅನಧಿಕೃತ ಎಷ್ಟಿಿರಬಹುದೆಂದು ನೀವೇ ಯೋಚಿಸಿ. ಮಡಿಕೇರಿ ಮತ್ತು ಸೋಮವರಪೇಟೆ ತಾಲೂಕಿನಲ್ಲಿ ಬೃಹತ್ ಗುಡ್ಡಗಳನ್ನೇ ಕೊರೆದು ಇವುಗಳನ್ನು ನಿರ್ಮಿಸಲಾಗಿದೆ. ಮನುಷ್ಯರು ಕಾಲಿಡಲಾಗದಂತಹ ಗುಡ್ಡದ ಮೇಲೂ ಸುಂದರವಾದ ಬಂಗಲೆಯಂತಹ ಹೋಮ್ ಸ್ಟೇಗಳಿವೆ. ವಿಜ್ಞಾಾನಿ ಕರ್ಸನ್ ಹೇಳಿರುವಂತೆ ನಿಸರ್ಗವನ್ನು ಹಾಳುಮಾಡಿ ತಾವೇ ಅದರ ವಿನಾಶಕ್ಕೆೆ ಸಿಲುಕಿದ್ದಾಾರೆ ಕೊಡಗಿನವರು.
 ಒಂದಲ್ಲ ಒಂದು ವಿಚಾರದಲ್ಲಿ ಮಾನವ  ಪ್ರಕೃತಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಲೇ ಬರುತ್ತಿಿದ್ದಾಾನೆ. ಕೊಡಗು ಮತ್ತು ಕೇರಳ ದಟ್ಟ ಕಾನನಗಳನ್ನು ಹೊಂದಿರುವಂತೆ ಎತ್ತರದ ಶಿಖರಗಳನ್ನೂ ಮಡಿಲಲ್ಲಿ ಇಟ್ಟುಕೊಂಡಿವೆ. ಜೊತೆಗೆ ಮನಸೆಳೆಯುವ, ಪ್ರಕೃತಿ ಸೌಂದರ್ಯದ ಹತ್ತಾಾರು ಸ್ಥಳಗಳಿವೆ. ಪ್ರವಾಸಕ್ಕಾಾಗಿ ಬರುವವರ ಸಂಖ್ಯೆೆ ಹೆಚ್ಚಿಿದಂತೆ ಕಾಫಿತೋಟದ ಮಧ್ಯೆೆಯೇ ರೆಸಾರ್ಟ್‌ಗಳು ತಲೆಎತ್ತಿಿದವು. ಕಾಫಿತೋಟಗಳ ಮಾಲಕರು ತಮ್ಮ ಉದ್ಯೋೋಗಕ್ಕಿಿಂತ ಹೋಮ್ ಸ್ಟೇಗಳನ್ನೇ ಹಣಗಳಿಸುವ ದಂಧೆಯನ್ನಾಾಗಿ ಮಾಡಿಕೊಂಡರು. ನಿರಾಯಾಸವಾಗಿ ನೀರು ಹರಿದುಹೋಗುತ್ತಿಿದ್ದ ಬೆಟ್ಟ-ಗುಡ್ಡದ ಮೇಲೆ ಇವು ತಲೆಎತ್ತಿಿದವು.  ಜೊತೆಗೆ ರಸ್ತೆೆ, ಇತರೇ ಕಟ್ಟಡಗಳೂ ಆರಂಭವಾದವು. ವಾಹನಗಳ ಭರಾಟೆ ಹೆಚ್ಚಾಾಯಿತು. ಭೂಮಿಯ ಮೇಲೆ ಒತ್ತಡವೂ ಹೆಚ್ಚಿಿತು.
ಮೊದಲೇ ಅತಿ ಹೆಚ್ಚು ಮಳೆ ಬೀಳುವ ಕೊಡಗಿನಲ್ಲಿ ಭೂಮಿ ಮೇಲೆ ಒತ್ತಡ ಇನ್ನಷ್ಟು ಹೆಚ್ಚಿಿದ್ದರಿಂದ ಸುಲಭದಲ್ಲಿ ಭೂಕುಸಿತ ಎದುರಾಯಿತು. ಯಾವ ವಿಜ್ಞಾಾನಿಗಳ ಮಾತನ್ನೂ ಲೆಕ್ಕಿಿದೆ ಮಾಫಿಯಾಗಳು ಮಾಡಿದ ಬೃಹತ್ ತಪ್ಪಿಿನಿಂದ ಇಂದು ಇಡೀ ಕೊಡಗು ಸಂಕಷ್ಟಕ್ಕೆೆ ತುತ್ತಾಾಗಿದೆ.
ಭೂಮಿಯ ಮೇಲೆ ಮಾನವನ ಒತ್ತಡ ನಿಲ್ಲಬೇಕಿದೆ. ಕಂಡಲ್ಲೆೆಲ್ಲ ಜಮೀನುಗಳನ್ನು ವಾಣಿಜ್ಯ ಉದ್ದೇಶಕ್ಕೆೆ ಮಾರ್ಪಡಿಸಿ ಕಟ್ಟಡ ಕಟ್ಟುವುದು, ಅರಣ್ಯನಾಶ ಮಾಡುವುದು, ಗುಡ್ಡಕೊರೆಯುವುದು ಸ್ಥಗಿತಗೊಳ್ಳಬೇಕಿದೆ. ಪ್ರಕೃತಿಯೊಂದಿಗೆ ಬಾಳಿ ಬದುಕಿದಲ್ಲಿ ಮಾತ್ರ ಅದರ ಮಿತ್ರತ್ವ ಗಳಿಸಬಹುದು. ನಮ್ಮ ಪೂರ್ವಜರು ಪಾರಂಪರಿಕವಾಗಿ ಬಂದ ಕಾಡನ್ನು, ನೆಲ-ಜಲವನ್ನು ಹಾಗೆಯೇ ಉಳಿಸಿ ಬೆಳೆಸಿದರು. ಮನೆ ಕಟ್ಟುವಾಗಲೂ ಅವರದೇ ಆದ ಸೂಕ್ಷ್ಮ ವಿಚಾರದ ಹಿನ್ನೆೆಲೆಯಲ್ಲಿ ಆಲೋಚಿಸಿ ನಿರ್ಮಿಸಿದರು.
 ಆದರೆ ನಾವು ಮಾಡುತ್ತಿಿರುವುದೇನು? ಪ್ರಕೃತಿಯ ವಿರುದ್ದ ಸಾಗುತ್ತಿಿದ್ದೇವೆ. ಯಾವುದನ್ನು ಮಾಡಬಾರದಿತ್ತೋೋ ಅದನ್ನು ಮಾಡಿದ್ದೇವೆ. ಕಾರಣ ಹಣದ ದುರಾಸೆ. ಇದರಿಂದ ವಿನಾಶವನ್ನು ಮನೆಬಾಗಿಲಿಗೆ ಆಹ್ವಾಾನಿಸಿಕೊಂಡಿದ್ದೇವೆ. ಹಣದ ಆಸೆ ಮನುಷ್ಯನ್ನು ವಿನಾಶದೆಡೆಗೆ ತಳ್ಳುತ್ತದೆ ಎನ್ನುವ ಮಾತು ಮತ್ತೆೆ ಕೊಡಗಿನ ಘಟನೆಯಿಂದ ಕಲಿತ ಪಾಠವಾಗಿದೆ.
ಈ ಭೂಮಿ ಎಲ್ಲರ ಆಶೆಗಳನ್ನು ಪೂರೈಸುತ್ತದೆ. ಆದರೆ,.. ದುರಾಸೆಗಳನ್ನಲ್ಲ. ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯವೆಂದರೆ, ನಾವೀಗ ಮುಖಾಮುಖಿ ಆಗುತ್ತಿಿರುವುದು ಪರಿಸರದೊಂದಿಗೆ! ಅಗತ್ಯಕ್ಕಿಿಂತ ಪ್ರಗತಿ ಹೆಚ್ಚಾಾಗುತ್ತಿಿರುವುದರಿಂದ ಜಾಗತಿಕ ತಾಪಮಾನ ಏರುತ್ತಿಿದೆ. ಇದರೊಟ್ಟಿಿಗೆ ಪ್ರಾಾಕೃತಿಕ ಸರಪಳಿಯಲ್ಲಿ ಪರಿಸರ ನಾಶವಿಪರೀತವಾಗಿದೆ. ಜೀವಜಂತುಗಳ ಸಂತತಿಯ ನಾಶವಾಗುತ್ತಿಿದೆ. ಇವೆಲ್ಲವೂ ನಮಗೆ ಗೊತ್ತಾಾಗುತ್ತಿಿದೆ. ಆದರೂ ಹಣದ ಮದ ಬಿಡುತ್ತಿಿಲ್ಲ. ಇಷ್ಟೆೆಲ್ಲಾಾ ನುಭವಿಸಿದ ಮೇಲೂ ಈಗಲಾದರೂ ಎಚ್ಚೆೆತ್ತುಕೊಳ್ಳದಿದ್ದರೆ...?
published on 23 aug 2018
........................................      
ಎದೆ ನಡುಗಿಸುವ ಬುಲೆಟ್, ಎನ್‌ಫೀಲ್‌ಡ್‌ ಸೈಲೆನ್ಸರ್ ಶಬ್ದ 
  ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸ ಎಂದು?


ಶಿವಮೊಗ್ಗ:   ನಗರದಲ್ಲಿ   ಬುಲೆಟ್ ಮತ್ತು  ಎನ್‌ಫೀಲ್‌ಡ್‌ ಬೈಕ್‌ಗಳ ಭರಾಟೆ ಹೆಚ್ಚುತ್ತಿಿದೆ.  ಅದರಲ್ಲೂ ತುವಕರಲ್ಲಿ ಇದರ ಕ್ರೇಜ್  ಜೋರಾಗಿದೆ. ಈ ಪೈಕಿ ಕೆಲವರು ದೊಡ್ಡ ಪ್ರಮಾಣದಲ್ಲಿ ಶಬ್ದ ಬರುವ ಸೈಲೆನ್ಸರ್‌ಗಳನ್ನು ಇದಕ್ಕೆೆ ಬದಲಿಯಾಗಿ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿಿರುವ ಪ್ರಕರಣ ಹೆಚ್ಚು ವರದಿಯಾಗುತ್ತಿಿದೆ.  ಇದರಿಂದ ನಾಗರಿಕರು ನೆಮ್ಮದಿಯಿಂದಿರದಂತಾದ ಪರಿಸ್ಥಿಿತಿ ಎದುರಾಗಿದೆ. 
ಇತ್ತೀಚೆಗೆ ಈ ಬೈಕ್‌ಗಳ ಸಂಖ್ಯೆೆ ಒಂದೇ ಸಮನೆ ಏರುತ್ತಿಿದೆ. ಇದರಿಂದ ಶಬ್ದ ಮಾಲಿನ್ಯ ವಿಪರೀತ ಮಟ್ಟಕ್ಕೆೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಈ ಬೈಕ್‌ಗಳು ನಾಗರಿಕರ ಎದೆ ನಡುಗಿಸುತ್ತಿಿವೆ. ಕರ್ಣ ಕಠೋರವಾದ ಈ ಶಬ್ದ   ಚಾಲನೆಯಲ್ಲಿರುವವರು ಮತ್ತು ಪಾದಚಾರಿಗಳೂ ಸಹ ಭಯಗೊಳ್ಳುವಂತೆ ಮಾಡುತ್ತಿಿದೆ. ಸೈಲೆನ್ಸರ್‌ಗಳನ್ನು ಬದಲಿಸುವ ದಂಧೆ ಜೋರಾಗಿದೆ. ಈ ಬೈಕ್‌ಗಳ ಗ್ಯಾಾರೇಜಿನವರಿಗೆ ಇದೇ ಕೆಲಸ. ಹೊಸ ಬೈಕ್ ತಂದವರು ನೆರವಾಗಿ ಬಂದು ಸೈಲೆನ್ಸರ್ ಬದಲಿಸುತ್ತಿಿದಾರೆ.
ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲವು ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿಿರುವ ಘಟನೆಗಳು ಕೂಡ ನಡೆಯುತ್ತಿಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸೃಷ್ಟಿಿಸುತ್ತಿಿದೆ.
’ಭಾರತ ಮೋಟಾರು ಕಾಯ್ದೆೆ’ಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಕಾಯ್ದೆೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಗದಿತ ’ಡೆಸಿಬಲ್’ಗಿಂತ ಹೆಚ್ಚಿಿನ ಶಬ್ದ ಹೊರಸೂಸುವ ವಾಹನಗಳ ಮಾಲಿಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಾಲಿಕ ಅವಧಿಗೆ ನೊಂದಣಿ ರದ್ದುಗೊಳಿಸಲು ಅವಕಾಶವಿದೆ.
ಪೊಲೀಸರು ಗ್ಯಾಾರೇಜಿನವರಿಗೆ ಸೈಲೆನ್ಸರ್ ಬದಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸೂಚನೆ ಕೊಡಬೇಕಿದೆ. ಬದಲಿಸಿದಲ್ಲಿ ಅವರ ವಿರುದ್ದ ಕೇಸ್ ದಾಖಲಿಸಬೇಕು. ಇಂತಹ ಕೆಲಸ ಕೈಗೆತ್ತಿಿಕೊಂಡರೆ ವಾಹನ ಮಾಲಕರು ಸೈಲೆನ್ಸರ್ ಬದಲಿಸಲು ಹಿಂದೇಟು ಹಾಕುತ್ತಾಾರೆ. ಈ ಬಗ್ಗೆೆ ಹೆಜ್ಜೆೆ ಇಡುವಂತಾಗಬೇಕಿದೆ.
ಇಷ್ಟೆೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಓದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಿಲ್ಲ. ಇದರಿಂದ ದಿನದಿಂದ ದಿನಕ್ಕೆೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರೆ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆೆ ತಲುಪಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.
  80 ಡೆಸಿಬಲ್ ಮೀರಬಾರದು:
  ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲವು ಮಾಲಿಕರು ಶೋಕಿಗಾಗಿ ಅಥವಾ ಜನರ ಗಮನಸೆಳೆಯಲು ವಾಹನಗಳ ಶಬ್ದ ಹೆಚ್ಚಿಿಸಿಕೊಳ್ಳುತ್ತಾಾರೆ. ಇದಕ್ಕಾಾಗಿ ಸೈಲೈನ್ಸರ್‌ಗಳನ್ನು ಬದಲಾಯಿಸಿಕೊಳ್ಳುತ್ತಾಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾಾರೆ. ಇದರಿಂದ ಈ ವಾಹನಗಳು ರಸ್ತೆೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಸಂಬಂಧಿಸಿದ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ಪತ್ತೆೆಗೆ ಇಲಾಖೆಯಲ್ಲಿ ಡೆಸಿಬಲ್ ಮೀಟರ್‌ನಂತಹ ಅತ್ಯಾಾಧುನಿಕ ಉಪಕರಣಗಳಿವೆ.
 ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆೆಟ್, ಸೀಟ್ ಬೆಲ್‌ಟ್‌ ಸಹಿತ ಇನ್ನಿಿತರ ಕೇಸ್ ಹಾಕುತ್ತಿಿದ್ದಾಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಿಸುವ ವಾಹನಗಳ ಮಾಲಿಕರ ವಿರುದ್ದವು ಕಾನೂನು ರೀತ್ಯ ಕ್ರಮ ಜರುಗಿಸಬೇಕು.  ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಓ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆೆಗಳ ನೆರವಿನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಿಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.



’ಬೈಕ್ ಅಥವಾ ಇತರೆ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾರು ವಾಹನ ಕಾಯ್ದೆೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇಂತಹ ವಾಹನಗಳ ನೊಂದಣಿ ಕೂಡ ತಡೆಹಿಡಿಯಬಹುದಾಗಿದೆ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆೆ : 94498-64014 ಗೆ ಮಾಹಿತಿ ರವಾನಿಸಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು.
-ಶಿವರಾಜ್ ಪಾಟೀಲ್, ಪ್ರಾಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ 

published on aug 21
 ...............................