Thursday, 23 August 2018

ಎದೆ ನಡುಗಿಸುವ ಬುಲೆಟ್, ಎನ್‌ಫೀಲ್‌ಡ್‌ ಸೈಲೆನ್ಸರ್ ಶಬ್ದ 
  ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸ ಎಂದು?


ಶಿವಮೊಗ್ಗ:   ನಗರದಲ್ಲಿ   ಬುಲೆಟ್ ಮತ್ತು  ಎನ್‌ಫೀಲ್‌ಡ್‌ ಬೈಕ್‌ಗಳ ಭರಾಟೆ ಹೆಚ್ಚುತ್ತಿಿದೆ.  ಅದರಲ್ಲೂ ತುವಕರಲ್ಲಿ ಇದರ ಕ್ರೇಜ್  ಜೋರಾಗಿದೆ. ಈ ಪೈಕಿ ಕೆಲವರು ದೊಡ್ಡ ಪ್ರಮಾಣದಲ್ಲಿ ಶಬ್ದ ಬರುವ ಸೈಲೆನ್ಸರ್‌ಗಳನ್ನು ಇದಕ್ಕೆೆ ಬದಲಿಯಾಗಿ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿಿರುವ ಪ್ರಕರಣ ಹೆಚ್ಚು ವರದಿಯಾಗುತ್ತಿಿದೆ.  ಇದರಿಂದ ನಾಗರಿಕರು ನೆಮ್ಮದಿಯಿಂದಿರದಂತಾದ ಪರಿಸ್ಥಿಿತಿ ಎದುರಾಗಿದೆ. 
ಇತ್ತೀಚೆಗೆ ಈ ಬೈಕ್‌ಗಳ ಸಂಖ್ಯೆೆ ಒಂದೇ ಸಮನೆ ಏರುತ್ತಿಿದೆ. ಇದರಿಂದ ಶಬ್ದ ಮಾಲಿನ್ಯ ವಿಪರೀತ ಮಟ್ಟಕ್ಕೆೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಈ ಬೈಕ್‌ಗಳು ನಾಗರಿಕರ ಎದೆ ನಡುಗಿಸುತ್ತಿಿವೆ. ಕರ್ಣ ಕಠೋರವಾದ ಈ ಶಬ್ದ   ಚಾಲನೆಯಲ್ಲಿರುವವರು ಮತ್ತು ಪಾದಚಾರಿಗಳೂ ಸಹ ಭಯಗೊಳ್ಳುವಂತೆ ಮಾಡುತ್ತಿಿದೆ. ಸೈಲೆನ್ಸರ್‌ಗಳನ್ನು ಬದಲಿಸುವ ದಂಧೆ ಜೋರಾಗಿದೆ. ಈ ಬೈಕ್‌ಗಳ ಗ್ಯಾಾರೇಜಿನವರಿಗೆ ಇದೇ ಕೆಲಸ. ಹೊಸ ಬೈಕ್ ತಂದವರು ನೆರವಾಗಿ ಬಂದು ಸೈಲೆನ್ಸರ್ ಬದಲಿಸುತ್ತಿಿದಾರೆ.
ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲವು ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿಿರುವ ಘಟನೆಗಳು ಕೂಡ ನಡೆಯುತ್ತಿಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸೃಷ್ಟಿಿಸುತ್ತಿಿದೆ.
’ಭಾರತ ಮೋಟಾರು ಕಾಯ್ದೆೆ’ಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಕಾಯ್ದೆೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಗದಿತ ’ಡೆಸಿಬಲ್’ಗಿಂತ ಹೆಚ್ಚಿಿನ ಶಬ್ದ ಹೊರಸೂಸುವ ವಾಹನಗಳ ಮಾಲಿಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಾಲಿಕ ಅವಧಿಗೆ ನೊಂದಣಿ ರದ್ದುಗೊಳಿಸಲು ಅವಕಾಶವಿದೆ.
ಪೊಲೀಸರು ಗ್ಯಾಾರೇಜಿನವರಿಗೆ ಸೈಲೆನ್ಸರ್ ಬದಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸೂಚನೆ ಕೊಡಬೇಕಿದೆ. ಬದಲಿಸಿದಲ್ಲಿ ಅವರ ವಿರುದ್ದ ಕೇಸ್ ದಾಖಲಿಸಬೇಕು. ಇಂತಹ ಕೆಲಸ ಕೈಗೆತ್ತಿಿಕೊಂಡರೆ ವಾಹನ ಮಾಲಕರು ಸೈಲೆನ್ಸರ್ ಬದಲಿಸಲು ಹಿಂದೇಟು ಹಾಕುತ್ತಾಾರೆ. ಈ ಬಗ್ಗೆೆ ಹೆಜ್ಜೆೆ ಇಡುವಂತಾಗಬೇಕಿದೆ.
ಇಷ್ಟೆೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಓದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಿಲ್ಲ. ಇದರಿಂದ ದಿನದಿಂದ ದಿನಕ್ಕೆೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರೆ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆೆ ತಲುಪಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.
  80 ಡೆಸಿಬಲ್ ಮೀರಬಾರದು:
  ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲವು ಮಾಲಿಕರು ಶೋಕಿಗಾಗಿ ಅಥವಾ ಜನರ ಗಮನಸೆಳೆಯಲು ವಾಹನಗಳ ಶಬ್ದ ಹೆಚ್ಚಿಿಸಿಕೊಳ್ಳುತ್ತಾಾರೆ. ಇದಕ್ಕಾಾಗಿ ಸೈಲೈನ್ಸರ್‌ಗಳನ್ನು ಬದಲಾಯಿಸಿಕೊಳ್ಳುತ್ತಾಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾಾರೆ. ಇದರಿಂದ ಈ ವಾಹನಗಳು ರಸ್ತೆೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಸಂಬಂಧಿಸಿದ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ಪತ್ತೆೆಗೆ ಇಲಾಖೆಯಲ್ಲಿ ಡೆಸಿಬಲ್ ಮೀಟರ್‌ನಂತಹ ಅತ್ಯಾಾಧುನಿಕ ಉಪಕರಣಗಳಿವೆ.
 ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆೆಟ್, ಸೀಟ್ ಬೆಲ್‌ಟ್‌ ಸಹಿತ ಇನ್ನಿಿತರ ಕೇಸ್ ಹಾಕುತ್ತಿಿದ್ದಾಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಿಸುವ ವಾಹನಗಳ ಮಾಲಿಕರ ವಿರುದ್ದವು ಕಾನೂನು ರೀತ್ಯ ಕ್ರಮ ಜರುಗಿಸಬೇಕು.  ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಓ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆೆಗಳ ನೆರವಿನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಿಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.



’ಬೈಕ್ ಅಥವಾ ಇತರೆ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾರು ವಾಹನ ಕಾಯ್ದೆೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇಂತಹ ವಾಹನಗಳ ನೊಂದಣಿ ಕೂಡ ತಡೆಹಿಡಿಯಬಹುದಾಗಿದೆ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆೆ : 94498-64014 ಗೆ ಮಾಹಿತಿ ರವಾನಿಸಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು.
-ಶಿವರಾಜ್ ಪಾಟೀಲ್, ಪ್ರಾಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ 

published on aug 21
 ...............................

No comments:

Post a Comment