ಗೌರಿ-ಗಣೇಶ ವಿಗ್ರಹಗಳ ಅಂತಿಮ ಹಂತದ ಸಿದ್ಧತೆ
75 ವರ್ಷದಿಂದ ವಿಗ್ರಹ ತಯಾರಿಕೆ ನಡೆಸುತ್ತಿಿರುವ ನಂಜುಂಡಪ್ಪ ಕುಟುಂಬಸ್ಥರು
ಶಿವಮೊಗ್ಗ: ಗಣೇಶ ಚವತಿಗೆ ಇನ್ನು 20 ದಿವಸ ಉಳಿದಿದೆ. ನಾಡಿನಾದ್ಯಂತ ಗಣೇಶ ಮತ್ತು ಗೌರಿ ಆಗಮನಕ್ಕೆೆ ಸಿದ್ಧತೆಯೂ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಣೇಶ ಮತ್ತು ಗೌರಿಯ ವಿಗ್ರಹ ತಯಾರಕರು ಬಿರುಸಿನಿಂದ ತಮ್ಮ ಕೆಲಸ ಮುಂದುವರೆಸಿದ್ದಾಾರೆ.
ಶಿವಮೊಗ್ಗದಲ್ಲಿ ಗೌರಿ-ಗಣೇಶ ವಿಗ್ರಹ ತಯಾರಿಸುವುದರಲ್ಲಿ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಬಿ.ಬಿ. ರಸ್ತೆೆಯಲ್ಲಿರುವ ಜಿ.ಎನ್.ನಂಜುಂಡಪ್ಪ ವಂಶಸ್ಥರು ಸುಮಾರು 75 ವರ್ಷದಿಂದ ಪ್ರಖ್ಯಾಾತರು. ನಗರದ ಅನೇಕ ಪ್ರಖ್ಯಾಾತ ಗಣಪತಿ ವಿಗ್ರಹ ಇವರ ಕೈಯಿಂದಲೇ ಅರಳುತ್ತದೆ. ಈ ವಂಶದ ಗಣೇಶ್ ಮತ್ತು ಸಹೋದರರ ಕುಟುಂಬದವರು ಈಗ ಈ ವೃತ್ತಿಿಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪ್ರತಿವರ್ಷ ಸುಮಾರು 400 ರಷ್ಟು ವಿಗ್ರಹವನ್ನು ತಯಾರಿಸುತ್ತಾಾರೆ.
ಗೌರಿ-ಗಣೇಶ ಹಬ್ಬದಲ್ಲಿ ಈ ವಿಗ್ರಹಗಳೇ ಪೂಜೆಗೊಳ್ಳಬೇಕಿರುವುದರಿಂದ ಪೂಜಿಸುವವರು ಸಾಕಷ್ಟಿಿರುವುದರಿಂದ ಅಂತಹವರೆಲ್ಲ ಖಾಯಂ ಆಗಿ ವಿಗ್ರಹ ತಯಾರಕರನ್ನು ಹೊಂದಿರುತ್ತಾಾರೆ. ನಂಜುಂಡಪ್ಪ ವಂಶಸ್ಥರು ಈ ರೀತಿ ಖಾಯಂ ಗ್ರಾಾಹಕರನ್ನೇ ಹೊಂದಿದ್ದಾಾರೆ.
ಇವರ ಜೊತೆಗೆ ಶೃಂಗೇರಿ, ಕಳಸ ಮತ್ತು ಹೊರನಾಡಿಗೆ ನೂರಾರು ವಿಗ್ರಹಗಳನ್ನು ಕಳುಹಿಸುತ್ತಾಾರೆ. ಇಲ್ಲಿಯು ಅವರ ಖಾಯಂ ಗ್ರಾಾಹ್ರಕರಿದ್ದು, ಅವರು ಗಣೇಶನ ಹಬ್ಬ ನಾಲ್ಕು ತಿಂಗಳಿರುವಾಗಲೇ ನೆನೆಪು ಮಾಡುತ್ತಾಾರೆ. ಕೆಲಸವೂ ಆಗಲೇ ಆರಂಭಗೊಳ್ಳುತ್ತದೆ. ಈಗ ಗಣಪತಿಯ ವಿಗ್ರಹಗಳೆಲ್ಲ ಸಿದ್ಧಗೊಂಡಿದ್ದು, ಅಲಂಕಾರ ಮತ್ತು ಬಣ್ಣ ಬಳಿಯುವುದು ಮಾತ್ರ ಬಾಕಿ ಇದೆ. ಅವರ ಮನೆ ಆವರಣದಲ್ಲಿ ಎಲ್ಲಿ ನೋಡಿದರೂ ಗಣಪತಿ ಮತ್ತು ಗೌರಿ ವಿಗ್ರಹ ತುಂಬಿಕೊಂಡಿದೆ. ಹೆಂಗಸರು ಮತ್ತು ಮಕ್ಕಳೂ ಸಹ ಇದೇ ಕೆಲಸದಲ್ಲಿನಿರತಾಗಿರುವುದು ಕಂಡುಬರುತ್ತಿಿದೆ.
ಸತತವಾಗಿ ನಾಲ್ಕು ತಿಂಗಳು ಕುಳಿತು ಎಡೆಬಿಡದೆ ವಿಗ್ರಹ ತಯಾರಿಸುವುದು ಸುಲಭದ ಕೆಲಸವಲ್ಲ. ಆದರೂ ತಮ್ಮ ವೃತ್ತಿಿ ಮತ್ತು ಹಬ್ಬದ ವಿಶೇಷ ಕೆಲಸವಾಗಿರುವುದರಿಂದ ಹಗಲು- ರಾತ್ರಿಿ ಎನ್ನದೆ ಈ ದಿನಗಳಲ್ಲಿ ಕಾಯಕ ನಿರತರಾಗಿರುತ್ತಾಾರೆ. ವಿಗ್ರಹಕ್ಕೆೆ ಮಣ್ಣು ತರುವುದೇ ಈಗ ಸಾಹಸದ ಕೆಲಸವಾಗಿದೆ. ಕುಂಸಿ, ಭದ್ರಾಾವತಿ, ನಗರದ ರಾಗಿಗುಡ್ಡ ಮೊದಲಾದೆಡೆ ಈ ಮಣ್ಣಿಿನ ಲಭ್ಯತೆ ಇದೆ. ಸುಮಾರು ಎರಡು ಟ್ರ್ಯಾಾಕ್ಟರ್ ಮಣ್ಣು ತರಿಸಿ, ಅದನ್ನು ಹದಗೊಳಿಸಿದ ನಂತರ ವಿಗ್ರಹ ತಯಾರಿಕೆ ಶುಭದಿನದಂದು ಆರಂಭಗೊಳ್ಳುತ್ತದೆ. ಹೀಗೆ ಮನೆಯ ಎಲ್ಲರ ಕೈಯಲ್ಲಿ ಗಣಪ- ಗೌರಿ ಅರಳತೊಡಗುತ್ತಾಾರೆ.
ಈಗ ಬಣ್ಣ ಹಚ್ಚುವ ಕೆಲಸವೂ ಆರಂಭವಾಗಿದೆ. ಇನ್ನೊೊಂದು 10 ದಿನದಲ್ಲಿ ವಿಗ್ರಹಗಳೆಲ್ಲ ಮಾರುಕಟ್ಟೆೆಗೆ ಮತ್ತು ಗ್ರಾಾಹಕರ ಮನೆ ಸೇರಲು ಸಿದ್ಧಗೊಳ್ಳುತ್ತಿಿವೆ. ಇದು ಕುಟುಂಬದ ವೃತ್ತಿಿಯಾಗಿ ಪಾರಂಪರಿಕವಾಗಿ ಬಂದಿರುವುದರಿಂದ ಎಷ್ಟೇ ತೊಂದರೆಯಾದರೂ ಎಲ್ಲರೂ ಇದರಲ್ಲಿ ಪಾಲ್ಗೊೊಳ್ಳುತ್ತಾಾರೆ. ಒಂದಷ್ಟು ದಿನ ಮಾತ್ರ ತೊಂದರೆ, ಆನಂತರ ಸಮಸ್ಯೆೆ ಇಲ್ಲ ಎನ್ನುವ ಗಣೇಶ್, ಎಲ್ಲರೂ ಕೈಜೋಡಿಸುವುದರಿಂದ ಸಾಂಗವಾಗಿ ಕೆಲಸ ಪ್ರತಿವರ್ಷ ನಡೆಯುತ್ತಿಿದೆ. ಮಗಳು ಸಹನಾ ಉತ್ತಮ ಪೇಂಟರ್ ಆಗಿರುವುದರಿಂದ ಆ ಕೆಲಸದ ಜವಾಬ್ದಾಾರಿಯನ್ನು ಅವಳಿಗೆ ವಹಿಸಿದ್ದೇನೆ ಎನ್ನುತ್ತಾಾರೆ.
ವಿಗ್ರಹದ ಜೊತೆಗೆ ಉಳಿದ ದಿನಗಳಲ್ಲಿ ಬಾಸಿಂಗ ತಯಾರಿಕೆ, ಮಡಿಕೆ ತಯಾರಿಕೆ ಮಾಡುತ್ತಾಾರೆ. ಇವಗಳಿಗೆ ಅಷ್ಟೇನೂ ಮಾರುಕಟ್ಟೆೆ ಇಲ್ಲದಿರುವುದರಿಂದ ಬೇಡಿಕೆ ಇದ್ದಾಾಗಲಷ್ಟೇ ಮಾಡಿಕೊಡುತ್ತಾಾರೆ. ನಗರದ ಪ್ರಖ್ಯಾಾತ ಗಣಪತಿಗಳೆನಿಸಿಕೊಂಡಿರುವ ಹಿಂದು ಮಹಾಸಭಾ, ರಾಮಣ್ಣ ಶ್ರೇಷ್ಠಿಿ ಪಾರ್ಕ್, ಭಾವಸಾರ ಕ್ಷತ್ರಿಿಯ ಸಮಾಜ, ಕಡೆಕಲ್, ಶಾಂತಿನಗರ ಮೊದಲಾದೆಡೆಗಳಿಗೆ ಇವರು ದೊಡ್ಡ ಗಾತ್ರದ ಮತ್ತು ಅವರು ಸೂಚಿಸಿದ ಭಂಗಿಯ ವಿಗ್ರಹ ತಯಾರಿಸಿಕೊಡುತ್ತಾಾರೆ. ಈ ವಿಗ್ರಹಗಳೆಲ್ಲ ಈಗ ಸಿದ್ಧಗೊಂಡಿವೆ. ಗಣೇಶನಿಗೆ ಅಂತಿಮ ಟಚಪ್ ಕೊಟ್ಟು ಕಳುಹಿಸಲು ಸನ್ನದ್ಧರಾಗಿದ್ದಾಾರೆ.
published on aug 25
................................

No comments:
Post a Comment