Saturday, 11 August 2018

ಸದಾ ನೆನೆಪಿನಲ್ಲುಳಿವ ‘ದಶಾನನ ಸ್ವಪ್ನಸಿದ್ಧಿಿ’  



ಜಿಲ್ಲಾಾ ಬ್ರಾಾಹ್ಮಣ ಮಹಾಸಭಾ ಶತಮಾನೋತ್ಸವ ನಿಮಿತ್ತ ಮೊನ್ನೆೆ ಕುವೆಂಪುರಂಗಮಂದಿರದಲ್ಲಿ ‘ದಶಾನನ ಸ್ವಪ್ನಸಿದ್ಧಿಿ’ ಎಂಬ ನಾಟಕವನ್ನು ಏರ್ಪಡಿಸಿತ್ತು. ಕುವೆಂಪು ಮಹಾಕಾವ್ಯದ ಈ ತುಣುಕನ್ನು ’ದಶಾನನ ಸ್ವಪ್ನಸಿದ್ಧಿಿ’ ಎಂಬ ಹೆಸರಿನಲ್ಲಿ ರಂಗದ  ಮೇಲೆ ಬಹಳ ಅಚ್ಚುಕಟ್ಟಾಾಗಿ ತಂದ ಹಿರಿಮೆ ಉಡುಪಿ ಜಿಲ್ಲೆೆಯ ಮುದ್ರಾಾಡಿಯ ’ನಮ ತುಳುವೆರ್’ ಕಲಾ ಸಂಘಟನೆಯವರದ್ದು. ಒಂದರ್ಥದಲ್ಲಿ ಈ ನಾಟಕವನ್ನು ಏಕವ್ಯಕ್ತಿಿ ಪ್ರದರ್ಶನವೆಂದರೂ ತಪ್ಪಾಾಗಲಾರದು





ಮಹಾಕಾವ್ಯಗಳಲ್ಲಿ ಒಂದಾದ ವಾಲ್ಮೀಕಿ ರಾಮಾಯಣ ಕಾಲಕಾಲಕ್ಕೆೆ ಅನುಗುಣವಾಗಿ, ಮಹಾನ್ ಕವಿ-ಸಾಹಿತಿಗಳ ಕುಂಚದಲ್ಲಿ ತೆರೆದುಕೊಂಡಿರುವುದನ್ನು ನಾವು ಗಮನಿಸಬಹುದು. ಜೈನ-ಬೌದ್ಧ ರಾಮಾಯಣಗಳಂತೂ ವಾಲ್ಮೀಕಿ ರಾಮಾಯಣಕ್ಕಿಿಂತ ತೀರಾ ಭಿನ್ನವಾಗಿ, ವೈರುಧ್ಯವಾಗಿ ತೆರೆದುಕೊಂಡಿವೆ. ಪ್ರಾಾಯಶಃ ಧರ್ಮ ಸಂಘರ್ಷ ನಡೆಯುತ್ತಿಿದ್ದ ಆ ಕಾಲಕ್ಕೆೆ ತಮ್ಮ ತಮ್ಮ ಧರ್ಮದ ಉಳಿವಿಗಾಗಿ, ಅಸ್ತಿಿತ್ವಕ್ಕಾಾಗಿ ಅನ್ಯ ಧರ್ಮವನ್ನು ತೆಗಳುವುದು ಅವರಿಗೆ ಅನಿವಾರ್ಯವಾಗಿತ್ತೇನೋ.....?
ಕಲಾಕೃತಿಯೊಂದನ್ನು ತಮಗೆ ಬೇಕಾದಂತೆ ಒಗ್ಗಿಿಸಿಕೊಳ್ಳುವುದು-ಬಗ್ಗಿಿಸಿಕೊಳ್ಳುವುದು, ಹಿಗ್ಗಿಿಸಿಕೊಳ್ಳುವುದು-ಕುಗ್ಗಿಿಸಿಕೊಳ್ಳುವುದು ಕವಿ-ಕಲಾವಿದ-ಸಾಹಿತಿಗಳಿಗಿರುವ ಸ್ವಾಾತಂತ್ರ್ಯವೆಂದೇ ಹೇಳಬೇಕು. ರಾಷ್ಟ್ರಕವಿ ಕುವೆಂಪು ಕೂಡ ಇದರಿಂದ ಹೊರತಲ್ಲ. ಮಹಾಛಂದಸ್ಸಿಿನಲ್ಲಿ ರಚಿತವಾದ ಅವರ ’ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಅನೇಕ ವಿನೂತನ ಮಾರ್ಪಾಟು-ಬೇರ್ಪಾಟುಗಳಾಗಿವೆ. ಯಾವುದೂ, ಯಾರೂ ಯಃಕಶ್ಚಿಿತ್   ಅಲ್ಲ ಎನ್ನುವ ಕವಿಯ ವಿಶ್ವಮಾನವ ಧೋರಣೆಯೇ ಇದಕ್ಕೆೆ ಕಾರಣವಿರಬಹುದು.
ಹೀಗಾಗಿಯೇ ರಸಋಷಿ ಕುವೆಂಪು ಅವರ ಮಹಾಕಾವ್ಯ ’ಶ್ರೀ ರಾಮಾಯಣದರ್ಶನಂ’ಲ್ಲಿ ಮಂಥರೆ, ಕೈಕೇಯಿ, ಊರ್ಮಿಳೆಯರಿಗೆ, ಶಂಬೂಕ, ವಾಲಿ, ರಾವಣರಿಗೆ ವಿಶಿಷ್ಟವಾದ ಸ್ಥಾಾನವಿದೆ. ಅವರ ರಾವಣನ ಪಾತ್ರಚಿತ್ರಣ ಅನೇಕ ಸಂದರ್ಭಗಳಲ್ಲಿ ಜೈನಕವಿ ನಾಗಚಂದ್ರನ ರಾವಣನನ್ನು ನೆನೆಪಿಸುವುದು ಮಾತ್ರ ಸುಳ್ಳಲ್ಲ. ಸೀತೆಯ ರೂಪಿಗೆ, ಕಣ್ಣ ಹೊಳಪಿಗೆ ಇಂದ್ರಿಿಯನಿಗ್ರಹ ಕಳೆದುಕೊಂಡ ರಾವಣನಿಗೆ ಸೀತೆಯನ್ನು ಕುರಿತಾಗಿ ಇರುವ ಸೆಳೆತ-ಎಳೆತಗಳು, ಆದರೂ ಆಕೆ ಒಲಿದು ಬಂದಾಗಲಷ್ಟೇ ಅವಳನ್ನು ಸೇರಬೇಕು ಎನ್ನುವ ಉದಾತ್ತ ನಿಲುವಿಗೆ ಬದ್ಧನಾಗುವ ರಾವಣನಿಗೆ ಸೀತೆ ಕನಸಾಗಿ ಕಾಣುವುದು ಹೀಗೆ:
ಜಿಲ್ಲಾಾ ಬ್ರಾಾಹ್ಮಣ ಮಹಾಸಭಾ ಶತಮಾನೋತ್ಸವ ನಿಮಿತ್ತ ಮೊನ್ನೆೆ ಕುವೆಂಪುರಂಗಮಂದಿರದಲ್ಲಿ ‘ದಶಾನನ ಸ್ವಪ್ನಸಿದ್ಧಿಿ’ ಎಂಬ ನಾಟಕವನ್ನು ಏರ್ಪಡಿಸಿತ್ತು. ಕುವೆಂಪು ಮಹಾಕಾವ್ಯದ ಈ ತುಣುಕನ್ನು ’ದಶಾನನ ಸ್ವಪ್ನಸಿದ್ಧಿಿ’ ಎಂಬ ಹೆಸರಿನಲ್ಲಿ ರಂಗದ  ಮೇಲೆ ಬಹಳ ಅಚ್ಚುಕಟ್ಟಾಾಗಿ ತಂದ ಹಿರಿಮೆ ಉಡುಪಿ ಜಿಲ್ಲೆೆಯ ಮುದ್ರಾಾಡಿಯ ’ನಮ ತುಳುವೆರ್’ ಕಲಾ ಸಂಘಟನೆಯವರದ್ದು. ಒಂದರ್ಥದಲ್ಲಿ ಈ ನಾಟಕವನ್ನು ಏಕವ್ಯಕ್ತಿಿ ಪ್ರದರ್ಶನವೆಂದರೂ ತಪ್ಪಾಾಗಲಾರದು.
ನಮ್ಮ ಈಡೇರದ ಬಯಕೆಗಳ ಪೂರೈಕೆಯೇ ಕನಸು - ಎನ್ನುವ ವೈದ್ಯವಿಜ್ಞಾಾನವನ್ನು ಪುಷ್ಠೀಕರಿಸುವ ರೀತಿಯಲ್ಲಿ ಈ ನಾಟಕದಲ್ಲಿ  ರಾವಣನ ಕನಸು ತೆರೆದುಕೊಳ್ಳುತ್ತದೆ. ವಾಸ್ತವದಲ್ಲಿ ಈಡೇರದ ಸೀತೆಯ ಕುರಿತಾದ ಬಯಕೆಗಳು ಆಂದರೆ ಆಕೆಯನ್ನು ಬಿಗಿದಪ್ಪಿಿಕೊಳ್ಳುವ, ತುಟಿಗೆ ತುಟಿಯೊತ್ತುವ ರಾವಣನ ಬಯಕೆಗಳೆಲ್ಲ ಸ್ವಪ್ನದಲ್ಲಿ ಈಡೇರುತ್ತದೆ. ಇದು ಈಡೇರುವುದು ಮಾತ್ರ ತೀರ ಭಿನ್ನವಾಗಿ. ಯುದ್ಧದಲ್ಲಿ ರಾವಣ ಸೋತು ಸಾವನ್ನಪ್ಪುವುದು, ರಾವಣ ಅಂಶ ಸೀತೆಯ ಗರ್ಭದಲ್ಲಿ ಕುಶ-ಲವರಾಗಿ ಜನ್ಮ ತಳೆಯುವುದು, ಸೀತೆ ಆ ಮಕ್ಕಳನ್ನು ತೆಗೆದಪ್ಪಿಿಕೊಳ್ಳುವುದು, ಮುದ್ದಾಾಡುವುದು.
ಹಾಗೆಂದ ಮಾತ್ರಕ್ಕೆೆ ನಿದ್ದೆೆ ತಿಳಿದೆದ್ದ ರಾವಣ ಇದರಿಂದ ನಿರಾಶನಾಗುವುದಿಲ್ಲ. ಪುಳಕಗೊಳ್ಳುತ್ತಾಾನೆ; ರೋಮಾಂಚಿತನಾಗುತ್ತಾಾನೆ. ಸನಿಹದಲ್ಲಿದ್ದ ಮಡದಿ ಮಂಡೋದರಿಗೆ ಕನಸಿನ ಮರ್ಮವನ್ನು ಅರುಹುತ್ತಾಾನೆ. ಕಲಕಿ ಹೋಗಿದ್ದ ತನ್ನ ಮನಸ್ಸನ್ನು ತಿಳಿಗೊಳಿಸಿದ ಸೀತೆಯನ್ನು ಮನದಣಿಯೆ ಕೊಂಡಾಡುತ್ತಾಾನೆ. (ಕವಿ ನಾಗಚಂದ್ರನ ’ಉದಾತ್ತನೊಳ್ ಪುಟ್ಟದಲ್ತೆೆ ನೀಲೀರಾಗಂ)
 ನಾಲ್ಕು ಜನ ಸೂತ್ರಧಾರರು ಕಥೆಯ ಹಿನ್ನೆೆಲೆ-ಮುನ್ನೆೆಲೆಯನ್ನು ರಂಗದ ಮೇಲೆ ಅತ್ಯಾಾಕರ್ಷಕವಾಗಿ ತೆರೆದಿಡುತ್ತಾಾರೆ. ಮಂಡೋದರಿಯನ್ನು ಹೊರತುಪಡಿಸಿದರೆ,  ಉಳಿದಂತೆ ಸೀತೆ ಕೂಡ ಇಲ್ಲಿ ಕಾಣಿಸಿಕೊಳ್ಳುವುದು ಸ್ವಪ್ನದಲ್ಲಿಯೇ. ನೆರಳು-ಬೆಳಕಿನ ವಿನ್ಯಾಾಸದಡಿಯಲ್ಲಿ ರಚಿತವಾದ ರಂಗಸಜ್ಜಿಿಕೆ ನಿಜಕ್ಕೂ ಕಣ್ಮನ ಸೆಳೆಯುವಂತಿತ್ತು. ಕುವೆಂಪು ಪಾಂಡಿತ್ಯ-ಪ್ರತಿಭೆಯ ಪ್ರಗಲ್ಭ ಭಾಷೆಯನ್ನು ಎಲ್ಲ ಸಾಮಾನ್ಯ ಕಲಾವಿದರೂ ಲೀಲಾಜಾಲವಾಗಿ ತೆರೆದಿಟ್ಟದ್ದು ಸಾಮಾನ್ಯ ಸಂಗತಿಯೇನಲ್ಲ.
ನಾಟಕದ ಮುಖ್ಯ ಫೂಮಿಕೆಯಲ್ಲಿ ಕಾಣಿಸಿಕೊಂಡ ರಾವಣ ಪಾತ್ರಧಾರಿ ಸುಕುಮಾರ್ ಮೋಹನ್ ಅವರ ಆಳೆತ್ತರದ ನಿಲುವು, ಕಂಚಿನ ಕಂಠ ಆ ಪಾತ್ರಕ್ಕೆೆ ಹೆಚ್ಚಿಿನ ಮೆರುಗನ್ನು ತಂದಿತ್ತುದು  ಅತಿಶಯವೇನಲ್ಲ. ಉಳಿದಂತೆ ಲಂಕಾಲಕ್ಷ್ನೀ ಲಂಕಿಣಿಯ ವಿನೂತನ ವೇಷಭೂಷಣದಲ್ಲಿ ಮಿಂಚಿದ ಸುಧೀಂದ್ರ ಮೋಹನ್, ಮಂಡೋದರಿಯಾಗಿ ವಾಣಿ ಸುಕುಮಾರ್, ಸುಗಂಧಿ ಉಮೇಶ್, ಕೋಲ್ಮಿಿಂಚಿನಂತೆ ಕಾಣಿಸಿಕೊಳ್ಳುವ ಸೀತೆ, ಕೌಪೀನಧಾರಿ ವಟು-ಹೀಗೆ ಪ್ರತಿಯೊಬ್ಬರು ತಂತಮ್ಮ ಕಲಾಸೇವೆಯಲ್ಲಿ ಸೈ ಎನ್ನಿಿಸಿಕೊಂಡರು.
ಸುಮಾರು ಒಂದೂವರೆ ಗಂಟೆಗಳ ಈ ನಾಟಕ ನೋಡುಗರನ್ನು ಹಿಡಿದಿಡುವಲ್ಲಿ ಸಫಲವಾಯಿತು. ಅತಿ ಕಡಿಮೆ ಕಲಾವಿದರನ್ನು ಬಳಸಿ, ಸದಾ ನೆನೆಪಿನಲ್ಲಿರುವಂತೆ ನಾಟಕ ಪ್ರದರ್ಶಿಸಲ್ಪಟ್ಟಿಿತು.
published on Aug 8-2018
................................. 


No comments:

Post a Comment