Thursday, 23 August 2018

ಕೊಡಗು, ಕೇರಳದಲ್ಲಿ ನಡೆದ ಭಾರಿ ಅನಾಹುತದ ಹಿನ್ನೆೆಲೆ
 ಕಸ್ತೂರಿರಂಗನ್  ಮತ್ತೆೆ ನೆನೆಪಾಗುತ್ತಿಿದ್ದಾಾರೆ






ಪಶ್ಚಿಿಮಘಟ್ಟಗಳನ್ನು ಉಳಿಸಲು, ಕಸ್ತೂರಿರಂಗನ್ ಮತ್ತು ಅದಕ್ಕೂ ಮೊದಲು ಮಾಧವ್ ಗಾಡ್ಗೀಳ್ ವರದಿ ನೀಡಿದಾಗ ಅದನ್ನು ಬಾಯಿಗೆ ಬಂದಂತೆ ಟೀಕಿಸಿವಿರೋಧಿಸಿದವರು ಹಲವರು. ಇಂದು ಅವರ್ಯಾಾರೂ ಚಕಾರ ಎತ್ತುತ್ತಿಿಲ್ಲ. ಗಿರಿ-ತಪ್ಪಲಲ್ಲಿರುವ ಹಳ್ಳಿಿಗಳಿಗೆ ಇದರಿಂದ ತೊಂದರೆಯಾಗಲಿದೆ. ಅಭಿವೃದ್ಧಿಿಯಿಂದ ವಂಚಿತರಾಗುತ್ತೇವೆ ಎಂದೆಲ್ಲ ಹುಯಿಲೆಬ್ಬಿಿಸಿ ಆ ವರದಿಯ ಬಗ್ಗೆೆ ಸಮರ್ಪಕ ಚರ್ಚೆ ಮಾಡುವುದಿರಲಿ, ಚರ್ಚೆಗೂ ಅವಕಾಶವಾಗದಂತೆ ನೋಡಿಕೊಂಡವರು ನಮ್ಮಲ್ಲಿದ್ದಾಾರೆ. ಅದರಲ್ಲಿದ್ದ ಎಚ್ಚರಿಕೆಯ ಗಂಟೆಯನ್ನೂ ಗಮನಿಸದಷ್ಟು ತಾಳ್ಮೆೆ ಅವರಲ್ಲಿರಲಿಲ್ಲ. ಏಕೆಂದರೆ ಅವರಿಗೆ ಜನರ ದಿಕ್ಕು ತಪ್ಪಿಿಸಿಯಾದರೂ  ಹೋರಾಟ ಯಶಸ್ವಿಿಯಾಗಬೇಕಿತ್ತು





ಈ ನೆಲದ ಮೇಲೆ ಬದುಕುವವರಿಗೆ ಉಪಕಾರ ಸ್ಮರಣೆ ಬೇಕು. ಗಿರಿ-ಶಿಖರಗಳನ್ನು ಕೊರೆಯದೆ, ಅವಳ ಒಡಲನ್ನು ಬರಿದು ಮಾಡಬಾರದೆನ್ನುವ ಪ್ರಜ್ಞೆ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಷ್ಟೇ ಬಳಸಿಕೊಳ್ಳಬೇಕು ಎಂಬ ಎಚ್ಚರ ಬೇಕು. ನಮ್ಮ ಬಾಳು ಹಸನಾಗಬೇಕೆಂದರೆ, ಜೀವ ಹಸಿರಾಗಬೇಕೆಂದರೆ, ನಾವು ನಿಸರ್ಗದ ಆರಾಧಕರಾಗಬೇಕು. ಪ್ರಕೃತಿ ಪ್ರೇಮಿಗಳಾಗಬೇಕು. ಈ ಪ್ರಕೃತಿ ಎನ್ನುವುದು ಮೂಲಬಂಡವಾಳವಿದ್ದಂತೆ. ಮೂಲಬಂಡವಾಳಕ್ಕೆೆ ಕೈಹಾಕದೆ,  ಅದರ ಬಡ್ಡಿಿಯನ್ನಷ್ಟೇ ಬಳಸುವ, ನಮ್ಮ ಹಿರಿಯರು ನಮಗಾಗಿ ಉಳಿಸಿ ಹೋದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿ ಹೋಗಬೇಕು ಎಂಬ ಎಚ್ಚರದ ಪ್ರಜ್ಞೆ ನಮ್ಮದಾಗಬೇಕು.
 ಕೊಡಗು ಜಿಲ್ಲೆೆಯಲ್ಲಿ ಇತ್ತೀಚೆಗೆ ಸಂಭವಿಸಿದ ಜಲಪ್ರಳಯ ನಮ್ಮನ್ನು ಎಚ್ಚರಿಸಿದೆ. ಇಲ್ಲಿ ಹಲವಾರು ಗ್ರಾಾಮಗಳೇ ಭೂಗರ್ಭ ಸೇರಿವೆ, ಬದುಕು ಮುಳುಗಿ ಹೋಗಿದೆ. ಜನ ಕುಸಿದು ಕುಳಿತಿದ್ದಾಾರೆ. ಇದಕ್ಕೆೆಲ್ಲ ಅವ್ಯಾಾಹತ ಕಾಡಿನ ನಾಶ, ಕಂಡಕಂಡಲ್ಲಿ ರೆಸಾರ್ಟ್, ಮನೆ ನಿರ್ಮಾಣ, ಕಾಡನ್ನು ಬೋಳಿಸಿ ರಬ್ಬರ್, ಕಾಫಿ ತೋಟ ನಿರ್ಮಿಸಿದ್ದೇ ಕಾರಣ ಎನ್ನುವುದನ್ನು ಎಲ್ಲರೂ ಒಪ್ಪುತ್ತಾಾರೆ. 
ಪಶ್ಚಿಿಮಘಟ್ಟಗಳನ್ನು ಉಳಿಸಲು, ಕಸ್ತೂರಿರಂಗನ್ ಮತ್ತು ಅದಕ್ಕೂ ಮೊದಲು ಮಾಧವ್ ಗಾಡ್ಗೀಳ್ ವರದಿ ನೀಡಿದಾಗ ಅದನ್ನು ಬಾಯಿಗೆ ಬಂದಂತೆ ಟೀಕಿಸಿವಿರೋಧಿಸಿದವರು ಹಲವರು. ಇಂದು ಅವರ್ಯಾಾರೂ ಚಕಾರ ಎತ್ತುತ್ತಿಿಲ್ಲ. ಗಿರಿ-ತಪ್ಪಲಲ್ಲಿರುವ ಹಳ್ಳಿಿಗಳಿಗೆ ಇದರಿಂದ ತೊಂದರೆಯಾಗಲಿದೆ. ಅಭಿವೃದ್ಧಿಿಯಿಂದ ವಂಚಿತರಾಗುತ್ತೇವೆ ಎಂದೆಲ್ಲ ಹುಯಿಲೆಬ್ಬಿಿಸಿ ಆ ವರದಿಯ ಬಗ್ಗೆೆ ಸಮರ್ಪಕ ಚರ್ಚೆ ಮಾಡುವುದಿರಲಿ, ಚರ್ಚೆಗೂ ಅವಕಾಶವಾಗದಂತೆ ನೋಡಿಕೊಂಡವರು ನಮ್ಮಲ್ಲಿದ್ದಾಾರೆ. ಅದರಲ್ಲಿದ್ದ ಎಚ್ಚರಿಕೆಯ ಗಂಟೆಯನ್ನೂ ಗಮನಿಸದಷ್ಟು ತಾಳ್ಮೆೆ ಅವರಲ್ಲಿರಲಿಲ್ಲ. ಏಕೆಂದರೆ ಅವರಿಗೆ ಜನರ ದಿಕ್ಕು ತಪ್ಪಿಿಸಿಯಾದರೂ  ಹೋರಾಟ ಯಶಸ್ವಿಿಯಾಗಬೇಕಿತ್ತು.
ವಿಜ್ಞಾಾನಿಗಳು ಹೇಳಿದ್ದೆೆಲ್ಲ ಸುಳ್ಳು ಎಂದೇ ವಾದಿಸಿ ಅದು ಜಾರಿಯಾಗದಂತೆ ಮಾಡಿದರು. ಇದರಿಂದ ಅವರಿಗೇನೂ ನಷ್ಟವಾಗಲಿಲ್ಲ. ಇವರನು ನಂಬಿದವರು ಸರ್ವಸ್ವವನ್ನೂ ಕಳಕೊಂಡರು. ಕೊಡಗಿನಲ್ಲ್ಲ್‌ಿ ಮತ್ತು ಕೇರಳದಲ್ಲಿ ಯಾವಾಗ ಗುಡ್ಡಗಳೇ ಜಾರಿದವೋ, ಗಿರಿಕಂದರಗಳು ಬಾಯ್ಬಿಿಡಲಾರಂಭಿಸಿದವೋ, ರಸ್ತೆೆಗಳೆಲ್ಲ ಸೀಳಿ ಹೋದವೋ, ಸೇತುಗೆಳೆಲ್ಲ ಕೊಚ್ಚಿಿಹೋದವೋ, ಮಳೆಯ ರುದ್ರನರ್ತನಕ್ಕೆೆ ಹಳ್ಳಿಿಯೇ ಕಣ್ಮರೆಯಾಯಿತೋ ಆಗ ಮತ್ತೆೆ ಈ ಇಬ್ಬರು ವಿಜ್ಞಾಾನಿಗಳ ಶಿಫಾರಸು ನೆನೆಪಿಗೆ ಬರತೊಡಗಿದೆ.
ಕೊಡಗಿನಲ್ಲಿ ಅರಣ್ಯ ಇಲಾಖೆಯ ವಶದ ಜಾಗಕ್ಕಿಿಂತ ಕಂದಾಯ ಭೂಮಿಗಳೇ ಹೆಚ್ಚು. ಇದನ್ನೆೆಲ್ಲ ವಾಣಿಜ್ಯ ಉದೇಶಕ್ಕೆೆ ಪರಿವರ್ತಿಸುವ ಕೆಲಸ ರಾಕೆಟ್ ವೇಗದಲ್ಲಿ ನಡೆದಿದೆ. ಘಟ್ಟ- ಬೆಟ್ಟಗಳನ್ನು ಕೊರೆದು ಮನೆ ನಿರ್ಮಿಸುವುದೇ ನಮ್ಮ ಗುರಿಯಾಗಿದೆ. ಜೆಸಿಬಿ ಬಂದ ಮೇಲಂತೂ ಅರ್ಧ ಗಂಟೆಯಲ್ಲಿಎಂತಹ ಗುಡ್ಡವನ್ನಾಾದರೂ ಕೊರೆದು ಸಮತಟ್ಟು ಅಥವಾ ರಸ್ತೆೆ ಮಾಡಲಾಗುತ್ತಿಿದೆ. ಪಾರಂಪರಿಕ ಕಾಡು ನೆಲಸಮ ಮಾಡಿ ಬೃಹದಾಕಾರದ ಮರಗಳನ್ನು ಕತ್ತರಿಸಿದ ಮೇಲೆ ಗುಡ್ಡವೆಲ್ಲ ಬೋಳಾಗಿದೆ.  ಗುಡ್ಡದ ಗರ್ಭದಲ್ಲಿ ಹಿಡಿಸಲಾರದಷ್ಟು ನೀರು ತುಂಬುತ್ತಿಿದೆ. ಇದರಿಂದ ಗುಡ್ಡ ಜಾರುತ್ತಿಿದೆ.
ನೆಲದ ಒಡಲಾಳದ ಕೂಗನ್ನು ಕೇಳಿಸಿಕೊಳ್ಳದೆ, ಕೇಳಿಸಿದರೂ ಅದಕ್ಕೆೆ ಕಿವಿಗೊಡದೆ ನಮ್ಮತನವನ್ನೇ ಮುಂದುವರೆಸಿದ್ದರ ಫಲ ಇಂದು ಕಾಣುತ್ತಿಿದೆ. ಪೂರ್ವಜರು  ಮನೆ ಕಟ್ಟುವಾಗ ಪ್ರತಿಯೊಂದನ್ನು ಗಮನಿಸಯೇ ನಿರ್ಮಿಸುತ್ತಿಿದ್ದರು. ಅವರು ಗುಡ್ಡ ಬಗೆಯಲಿಲ್ಲ, ಕಾಡು ಕಡಿಯಲಿಲ್ಲ. ಇದರಿಂದ ಬೇಸಾಯಕ್ಕೆೆ, ಬಳಕೆಗೆ ವರ್ಷವಿಡೀ ನೀರು ಸಿಗುತ್ತಿಿತ್ತು. ಆದರೆ ನಾವು ಅಭಿವೃದ್ಧಿಿಯ ಹುಚ್ಚಿಿನಿಂದ ಗುಡ್ಡದ ಮೇಲೆ ಭವ್ಯ ಮನೆ ನಿರ್ಮಿಸುತ್ತಿಿದ್ದೇವೆ, ರೆಸಾರ್ಟ್ ನಿರ್ಮಿಸಿ ವ್ಯಾಾಪಾರೀಕರಣ ಶುರು ಮಾಡಿದ್ದೇವೆ. ಪ್ರವಾಸೋದ್ಯಮವನ್ನು ವಾಣಿಜ್ಯೀಕರಣಗೊಳಿಸಿ ಹಣ ಮಾಡುವುದನ್ನೇ ದಂಧೆಯನ್ನಾಾಗಿಸಿಕೊಂಡಿದ್ದೇವೆ. ಭೌಗೋಳಿಕ ಸೂಕ್ಷ್ಮತೆಯ ಅರಿವಿಲ್ಲದಂತೆ ವರ್ತಿಸಿದೆವು. ಕಂಡಲ್ಲೆೆಲ್ಲ ರಸ್ತೆೆ ಮಾಡಿದೆವು. ಇದಕ್ಕೆೆಲ್ಲ ಇಂಜಿನೀಯರ್‌ಗಳು ಹೇಳಿದ್ದೇ ಸರಿ ಎಂದು ತಲೆತೂಗಿದೆವು. ಪರಿಸರ ಜ್ಞಾಾನವಿದ್ದ ಹಳ್ಳಿಿಗರ ಮಾತನ್ನೂ ಯಾರೂ ಕೇಳಲಿಲ್ಲ. 
 ಒಂದು ಸಮೀಕ್ಷೆ ಪ್ರಕಾರ, ಕೊಡಗಿನಲ್ಲಿ 2005ರಿಂದ 2015ರವರೆಗೆ ಸುಮಾರು 2,800 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಾಗಿ ಪರಿವರ್ತಿಸಲಾಗಿದೆ. ಇಲ್ಲಿ ರೆಸಾರ್ಟ್‌ಗಳು, ಮೋಜಿನ ತಾಣಗಳು ತಲೆಎತ್ತಿಿವೆ. ಇದಕ್ಕೂ ಹಿಂದೆ ಕೇರಳದಿಂದ ಬಂದವರು ವಾಣಿಜ್ಯ ಬೆಳೆಯಾದ ರಬ್ಬರ್ ತೋಟಕ್ಕಾಾಗಿ ಸುಮಾರು 9,06,440 ಹೆಕ್ಟೇರ್ ಭೂಮಿಯನ್ನು ಸವರಿ ಹಾಕಿದ್ದಾಾರೆ. ಈ ಪರಿ ಅರಣ್ಯನಾಶವಾದರೆ ಯಾವ ನಾಡು ಉಳಿದೀತು. ಇದರ ಜೊತೆಗೆ ಪ್ಲಾಾಂಟೇಶನ್ ಬೆಳೆಸಿ ನೀರಿಂಗದಂತೆ ಮಾಡಲಾಗಿದೆ.
ಕೊಡಗಿನಲ್ಲಿ ಶೇ. 18ರಷ್ಟು ಮಾತ್ರ ಅರಣ್ಯ ಇದೆ ಎಂಬ ವರದಿ ಬಂದಿದೆ. ಎಷ್ಟೇ ಗಂಭೀರ ಎಚ್ಚರಿಕೆಗಳು ಬಂದರೂ ಅದನ್ನು ಅಭಿವೃದ್ಧಿಿಯ ಗುಂಗಿನಲ್ಲಿರುವ ನಾವು ಗಮನಿಸುತ್ತಿಿಲ್ಲ. ಪಶ್ಚಿಿಮಘಟ್ಟವನ್ನು ಸರ್ವನಾಶ ಮಾಡಲೆಂದೇ ಸನ್ನದ್ಧರಾಗಿದ್ದೇವೆ. ಪ್ರವಾಹವನ್ನು ಸಹಿಕೊಳ್ಳಲಾಗದ ಮಟ್ಟದಲ್ಲಿ ಅರಣ್ಯನಾಶ, ಭೂ ನಾಶ ನಡೆಯುತ್ತಿಿದೆ. ವಿಜ್ಞಾಾನಿಗಳು ಹೇಳಿದ ಪ್ರಕಾರ, ಕೊಡಗಿನಲ್ಲಿ ಅತಿ ಹೆಚ್ಚು ಕಾಡು ನಾಶವಾದಲ್ಲೆೆಲ್ಲ ಭೀಕರ ಭೂಕುಸಿತ ಜಲಪ್ರವಾಹ ಸಂಭವಿಸಿದೆ.
ಕಸ್ತೂರಿರಂಗನ್ ಈ ಬಗ್ಗೆೆ ಎಚ್ಚರಿಸಿದರೆ ಯಾರೂ ನಂಬಲಿಲ್ಲ. ಹಾಗಾಗಿ ಮತ್ತೆೆ ಅವರೇ ನೆನೆಪಾಗುತ್ತಿಿದ್ದಾಾರೆ. ಸ್ವತಃ ಕೇರಳ ಸರಕಾರವೇ ಈ ವರದಿಯನ್ನು ಸಾರಾಸಗಟಾಗಿ ನಿರಾಕರಿಸಿದೆ. ನಮ್ಮಲ್ಲೂ ವರದಿ ಬಗ್ಗೆೆ ಅರಿಯದೆ ಹೋರಾಟವನ್ನೇ ನಡೆಸಿದರು. ಕೊನೆಗೂ ಅದು ಜಾರಿಯಾಗದಂತೆ ಮಾಡುವಲ್ಲಿ ಯಶಸ್ವಿಿಯಾಗಿದ್ದಾಾರೆ.  ಎಲ್ಲಿಯವರೆಗೆ  ಮುಂದಿನ ತಲೆಮಾರು, ನದಿ, ಕೊಳ್ಳ, ಬೆಟ್ಟ, ಗುಡ್ಡಗಳ ಅರಿವಿಲ್ಲದೆ ಎಲ್ಲವನ್ನೂ ಅಭಿವೃದ್ಧಿಿ ಮತ್ತು ನಗರೀಕರಣದ  ಕಣ್ಣಿಿನಿಂದಲೇ ಕಾಣುತ್ತೇವೆಯೋ, ಮಾಫಿಯಾಗಳಿಗೆ ಮಣೆ ಹಾಕುತ್ತೇವೆಯೋ, ಇಂಜಿನೀಯರ್‌ಗಳು ಹೇಳಿದ್ದೇ, ಮಾಡಿದ್ದೇ ಸರಿ ಎಂದು ತಿಳಿಯುತ್ತೇವೆಯೋ ಅಲ್ಲಿಯವರೆಗೆ ಇವೆಲ್ಲ ನಡೆಯುತ್ತಲೇ ಇರುತ್ತವೆ.
ಕೊಡಗಿನಲ್ಲಿ ಆಗಿದ್ದು, ಈಗ ಸಕಲೇಶಪುರದಲ್ಲಿ ಆಗುತ್ತಿಿದೆ. ನಾಳೆ ಪಕ್ಕದ ಜಿಲ್ಲೆೆಗಳಿಗೆ, ರಾಜ್ಯಗಳಿಗೆ ಬರಬಹುದು. ಆಗ ಮತ್ತೆೆ ಕಸ್ತೂರಿರಂಗನ್ ಅವರೇ ನೆನೆಪಾಗುತ್ತಾಾರೆ. ಏಕೆಂದರೆ ಅವರು ಹೇಳಿದ್ದು ಸಾರ್ವಕಾಲಿಕ ಸತ್ಯ ಎನ್ನುವುದು ಗೊತ್ತಾಾಗುತ್ತಿಿದೆ.

published on 22 aug 2018

No comments:

Post a Comment