ಕುಮಾರ್ ಬಂಗಾರಪ್ಪ ಆರೋಪ : ಕಾಗೋಡು ಮೌನಕ್ಕೆ ಶರಣು
ಶಮನಕ್ಕೆ ಮುಂದಾಗದ ವರಿಷ್ಠರು * ಸೊರಬ ಕಾಂಗ್ರೆಸ್‌ಗೆ ತೀವ್ರ ಪೆಟ್ಟು
ಶಿವಮೊಗ್ಗ : ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪಕ್ಷದ ಹಿರಿಯ ಮುಖಂಡ, ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ವಿರುದ್ದ ನಡೆಸುತ್ತಿರುವ ವಾಗ್ದಾಳಿ ಮುಂದುವರೆಸಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕಾಗೋಡು ಮೌನಕ್ಕೆ ಶರಣಾಗಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರು ಕುಮಾರ್‌ಗೆ ಬುದ್ಧಿ ಹೇಳಿದ್ದರೂ ಅವರು ಸಮಾಧಾನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ. ಇದು ಕುಮಾರ್ ತಮ್ಮ ಭವಿಷ್ಯಕ್ಕೆ ಕಂಟಕ ತಂದುಕೊಳ್ಳುತ್ತಿರುವುದರ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ೆ ಪಕ್ಷದ ರಾಜ್ಯ ಮುಖಂಡರಿಗೆ ಜಿಲ್ಲಾ ಕಾಂಗ್ರೆಸ್ ಎಲ್ಲ ಬೆಳವಣಿಗೆಗಳ ಮಾಹಿತಿಯನ್ನು ಕೆಲವು ದಿನಗಳ ಹಿಂದೆಯೇ ಇದೇ ರೀತಿ ವಿವಾದ ಸೃಷ್ಟಿಯಾದಾಗಲೇ ನೀಡಿದೆ. ಪಕ್ಷದ ಮುಖಂಡರು ಕುಮಾರ್ ಜೊತೆ ಮಾತನಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ. ನ. ಶ್ರೀನಿವಾಸ ಸಹ ಕುಮಾರ್‌ಗೆ ಆಗಿರುವ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರು. ಇಷ್ಟಾದರೂ ಕುಮಾರ್ ಸುಮ್ಮನಿರುವ ಲಕ್ಷಣ ಕಂಡುಬರುತ್ತಿಲ್ಲ. ಇದರರ್ಥ ಪಕ್ಷದಿಂದ ಹೊರಹೋಗಲು ಅವರೇನಾದರೂ ಯೋಚನೆ ಮಾಡಿದ್ದಾರೆಯೇ, ಬೇರೆ ಪಕ್ಷದವರು ಬಲೆ ಬೀಸಿದ್ದಾರೆಯೇ, ಟಿಕೆಟ್ ಆಮಿಷವೇನಾದರೂ ನೀಡಲ್ಪಟ್ಟಿದೆಯೇ ಎಂಬೆಲ್ಲ ಚರ್ಚೆಗೆ ಇದು ಗ್ರಾಸವಾಗಿದೆ.
ಕೆಲವು ದಿನಗಳ ಹಿಂದೆ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ವರದಿ ಕೇಳಿಬಂದಿತ್ತು. ಆದರೆ ಅದನ್ನು ಅವರೇ ನಿರಾಕರಿಸಿದ್ದರು. ಇದು ಎಷ್ಟರ ಮಟ್ಟಿಗೆ ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಮತ್ತೆ ಮತ್ತೆ ಪಕ್ಷದ ಹಿರಿಯ ನಾಯಕನ ವಿರುದ್ಧವೇ ಗುಟುರು ಹಾಕುತ್ತಿರುವುದರ ಹಿಂದೆ ಏನಾದರೂ ಕೈವಾಡ ಇರಬಹುದೇ ಎಂಬ ಶಂಕೆಯೂ ಕಾಂಗ್ರೆಸಿಗರಲ್ಲಿ ಈಗ ವ್ಯಕ್ತವಾಗುತ್ತಿದೆ. ಎರಡನೆಯದಾಗಿ, ಈಡಿಗ ಜನಾಂಗದ ನಾಯಕನಾಗಿ ಕಾಗೋಡು ಬೆಳೆದಿದ್ದಾರೆ. ಕುಮಾರ್‌ಗೆ ಇದು ಸಾಧ್ಯವಾಗಲೇ ಇಲ್ಲ. ಇದೇ ವೇಳೆ ಮಧು ಸಹ ಕಾಗೋಡು ನಂತರ ನಾಯಕನಾಗಬಲ್ಲ ವರ್ಚಸ್ಸು ಹೊಂದಿದ್ದಾರೆ. ಸದ್ಯದ ಮಟ್ಟಿಗೆ ಸೊರಬದಲ್ಲಿ ಮಧುಗೆ ಸಮಾನವಾಗಿ ಪೈಪೋಟಿ ಕೊಡಬಲ್ಲವರು ಯಾವ ಪಕ್ಷದಲ್ಲೂ ಇಲ್ಲ.
ಬಿಜೆಪಿಯವರಿಗೂ ಉತ್ತಮ ಉಮೇದುವಾರನ ಅವಶ್ಯಕತೆ ಅಲ್ಲಿದೆ. ಕಾಂಗ್ರೆಸ್‌ಗೆ ಕುಮಾರ್ ಬಿಟ್ಟರೆ ಉಮೇದುವಾರರೇ ಇಲ್ಲದ ಸ್ಥಿತಿ. ಕುಮಾರ್ ಪರಿಸ್ಥಿತಿಯೂ ಅಲ್ಲಿ ಚೆನ್ನಾಗಿಲ್ಲ. ಇದು ಅಲ್ಲಿನ ವಿಚಿತ್ರ ರಾಜಕೀಯ ಬೆಳವಣಿಗೆಯೂ ಹೌದು. ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಮಧು ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ನಡುವಿನ ವೈಯಕ್ತಿಕ ಸಂಬಂಧ ಮೊದಲಿನಿಂದಲೂ ಚೆನ್ನಾಗಿದೆ. ಇದು ಕುಮಾರ್ ಕೆರಳಲು ಮೂಲ ಕಾರಣ ಎನ್ನುವುದು ಸೂರ್ಯನಷ್ಟೇ ಸತ್ಯ. ಜೊತೆಗೆ, ಮಧು ಹೇಳಿದ ಕೆಲಸಗಳನ್ನು ಕಾಗೋಡು ಮಾಡಿಕೊಡುತ್ತಿದ್ದಾರೆ. ಆ ಮೂಲಕ ತನ್ನನ್ನು ತುಳಿಯುತ್ತಿದ್ದಾರೆ ಎನ್ನುವ ಆರೋಪ ಕುಮಾರ್ ಅವರದ್ದು. ಕೆಲವು ವರ್ಷಗಳಿಂದ, ನಾನಾ ಕಾರಣಗಳಿಂದ ಕಾಗೋಡು ಹಾಗೂ ಕುಮಾರ್ ನಡುವಿನ ಸಂಬಂಧ ಹಳಸಿರುವುದು ಇತಿಹಾಸ.
ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ಮುಖಂಡರು ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ಇವರಿಬ್ಬರ ನಡುವೆ ಹಳಸಿರುವ ಸಂಬಂಧಕ್ಕೆ ನಿದರ್ಶನವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾಗೋಡು ತಿಮ್ಮಪ್ಪ ಹಾಳುಗೆಡುವುತ್ತಿದ್ದಾರೆ. ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇವರನ್ನು ಪಕ್ಷದಿಂದ ಉಚ್ಛಾಟಿಸಿ ಎಂದು ಮುಖಂಡರಿಗೆ ಆಗ್ರಹಿಸುತ್ತಿದ್ದಾರೆ. ಮೊನ್ನೆ ಎಂಎಲ್‌ಸಿ ಆರ್. ಪ್ರಸನ್ನಕುಮಾರ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿವಾದ ಹೇಗೆ ಅಂತ್ಯಗೊಳ್ಳುತ್ತದೆ ಎನ್ನುವುದು ಕಾಂಗ್ರೆಸ್ಸಿಗರಿಗೇ ಗೊತ್ತಿಲ್ಲ. ಹಾಗಂತ ಇದು ಇಡೀ ಜಿಲ್ಲೆಗೇನೂ ಬಾಧಿತವಾಗದು. ಏಕೆಂದರೆ ಸೊರಬ, ಸಾಗರದಲ್ಲಿ ಇವರಿಬ್ಬರ ಗಲಾಟೆಗೆ ಮಹತ್ವವಿದೆ. ಆದರೆ ಕುಮಾರ್ ಇದೇ ರೀತಿ ಮುಂದುವರೆದರೆ ಅವರ ಭವಿಷ್ಯಕ್ಕೇ ಮುಳುವು ಖಚಿತ ಎನ್ನಲೇನೂ ಅಡ್ಡಿಯಿಲ್ಲ.
ಮಧ್ಯಪ್ರವೇಶಿಸುತ್ತಿಲ್ಲ
ಕುಮಾರ್ ಕಾಗೋಡು ವಿರುದ್ದ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ತೀವ್ರ ಇರುಸುಮುರುಸು ಉಂಟು ಮಾಡಿದೆ. ಅವರನ್ನು ಸಮಾಧಾನಗೊಳಿಸುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ವರಿಷ್ಠರಿಗೆ ವರದಿ ರವಾನಿಸಿ ಮೌನಕ್ಕೆ ಶರಣಾಗಿದ್ದಾರೆ. ಏನೂ ಹೇಳಲಾಗದ ಸ್ಥಿತಿಯಲ್ಲಿ ಮುಖಂಡರಿದ್ದು, ಈ ಗೊಂದಲದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಚುನಾವಣೆಗೆ ಒಂದು ವರ್ಷ 4 ತಿಂಗಳು ಬಾಕಿ ಇರುವಂತೆಯೇ ಕುಮಾರ್ ಈ ರೀತಿ ಹೇಳಿಕೆ ಮೂಲಕ ಸಕ್ರಿಯರಾಗುತ್ತಿದ್ದಾರೆ.
ಕುಮಾರ್ ಆರೋಪ
ಕೆಲವು ತಿಂಗಳ ಹಿಂದೆ ಸೊರಬ ತಾಲೂಕಿನ ಬಗರ್‌ಹುಕುಂ ಸಮಿತಿಗೆ ಸದಸ್ಯರ ನೇಮಕವನ್ನು ರಾಜ್ಯ ಸರ್ಕಾರ ಮಾಡಿತ್ತು. ಸಮಿತಿಯ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎಂಬುವುದು ಕುಮಾರ್ ಬಂಗಾರಪ್ಪರ ಆರೋಪವಾಗಿತ್ತು. ಸೊರಬ ಶಾಸಕ ಮಧು ಬಂಗಾರಪ್ಪರವರು ಸೂಚಿಸಿದ ವ್ಯಕ್ತಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪರವರು ಮಣೆ ಹಾಕಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಕುಮಾರ್ ದೂರಿದ್ದರು. ಸಮಿತಿಯ ಸದಸ್ಯರ ಬದಲಾವಣೆಗೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಹಾಗೂ ಪಕ್ಷದ ಮುಖಂಡರಿಗೆ ಒತ್ತಾಯಿಸಿದ್ದರು. ಇದರ ಹೊರತಾಗಿಯೂ ಸಮಿತಿಯ ಸದಸ್ಯರ ಬದಲಾವಣೆ ಮಾಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕುಮಾರ್‌ರವರು ಕಾಗೋಡು ತಿಮ್ಮಪ್ಪ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ.
.......................................