Wednesday, 29 August 2018

ರಂಗದಲ್ಲಿ ಯಶಸ್ವಿಿ ಪ್ರಯೋಗ ಗಾಂಧಿ


ರಂಗಮುಖೇನ ಗಾಂಧೀಜಿಯ ಕಥನವನ್ನು ಮತ್ತೊೊಮ್ಮೆೆ ಅರಿಯುವಂತೆ ಮಾಡುವಲ್ಲಿ ಈ ನಾಟಕ  ಸಾರ್ಥಕ್ಯ ಕಂಡಿದೆ ಎನ್ನಬಹುದು. ಸುಮಾರು ಒಂದುವರೆ ಗಂಟೆಯ ಪ್ರದರ್ಶನದ ಈ ರೂಪಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಒಟ್ಟಾಾರೆ, ಕಥೆ ಗೊತ್ತಿಿದ್ದರೂ, ಮತ್ತೊೊಮ್ಮೆೆ ನೋಡಿ ಎಲ್ಲ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಈ ರೂಪಕವನ್ನು ನೋಡಲೇಬೇಕು.




 ಮಹಾತ್ಮಾಾ ಗಾಂಧಿ ಎಂದರೆ ಸತ್ಯ, ಅಹಿಂಸೆ ಮತ್ತು ಶಾಂತಿ. ಸಾಮಾನ್ಯ ಮನುಷ್ಯನಾಗಿ ಹುಟ್ಟಿಿ, ಹಾಗೆಯೇ ಬೆಳೆದು ಮಹಾತ್ಮನಾದ ವ್ಯಕ್ತಿಿ. ಬ್ರಿಿಟೀಷರ ಅನ್ಯಾಾಯದ ವಿರುದ್ಧ ಎದೆಗುಂದದೆ ಹೋರಾಟ ನಡೆಸಿ, ಕಷ್ಟದಲ್ಲಿರುವವರ ಬಗ್ಗೆೆ ಸದಾ ಮರುಗಿ, ಕೋಮು ಸೌಹಾರ್ದತೆಯನ್ನು ಸಾರಿದವರು. ಇಂತಹ ಮಹಾಮಾನವತಾವಾದಿಯ ಹುಟ್ಟು, ಹೋರಾಟ, ಶಿಕ್ಷಣ, ದಕ್ಷಿಣ ಆಫ್ರಿಿಕಾದಲ್ಲಿ ಅನುಭವಿಸಿದ ಯಾತನೆ, ಭಾರತದಲ್ಲಿ ತಂದ ಬದಲಾವಣೆ, ಸಾರಿದ ಸಂದೇಶ, ಅಪ್ಪಿಿಕೊಂಡ ತತ್ವಗಳು, ಒಪ್ಪಿಿಕೊಂಡ ಸತ್ಯಗಳು... ಇವನ್ನೆೆಲ್ಲ ಸಾದರಪಡಿಸುವ ರಂಗರೂಪಕವೇ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’.
ಜಿಲ್ಲಾಾ ಕೇಂದ್ರ ಕಾರಾಗೃಹದಲ್ಲಿ ಈ ರಂಗರೂಪಕವನ್ನು ಪ್ರದರ್ಶಿಸಿದವರು ಕರ್ನಾಟಕದ ವಿವಿಧೆಡೆಯ ಕಲಾವಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರವಾಡದ ರಂಗಾಯಣದ ಕಲಾವಿದರ ಸಹಯೋಗ ಇದಕ್ಕಿಿದೆ. ಮಹಾತ್ಮಾಾಗಾಂಧಿ ಅವರ ಜನ್ಮದಿನ ಈ ವರ್ಷ 150 ವರ್ಷಕ್ಕೆೆ ತುಂಬುತ್ತದೆ. ಈ ಹಿನ್ನೆೆಲೆಯಲ್ಲಿ  ಇಲಾಖೆ ಈ ರೂಪಕವನ್ನು ಪ್ರಾಾಯೋಜಿಸಿದೆ. ಗಾಂಧೀಜಿಯರ ತತ್ವ್ತ, ಸಂದೇಶವನ್ನು ನಾವು ಹೇಗೆ ಅಳವಡಿಸಿಕೊಳ್ಳಬೇಕು, ಒಬ್ಬ ಸಾಮಾನ್ಯ ವ್ಯಕ್ತಿಿ ಹೇಗೆ ಮಹಾತ್ಮನಾಗಬಹುದು, ಮಹಾತ್ಮನಾಗಲು ಹೇಗೆ ಬದುಕಿ, ಬಾಳಬೇಕು ಎನ್ನುವುದನ್ನು ಸರಳವಾಗಿ, ಮನದಟ್ಟಾಾಗುವಂತೆ ಇಲ್ಲಿ ಪ್ರದರ್ಶಿಸಲಾಯಿತು.
 ಗಾಂಧೀಜಿ ಎಂದರೆ ಸತ್ಯ. ಸತ್ಯದ ಪ್ರತಿರೂಪವೇ ಗಾಂಧಿ ಎನ್ನುವ ಮಾತಿನಿಂದ ರೂಪಕ ಆರಂಭವಾಗುತ್ತದೆ. ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು. ಎಷ್ಟೇ ಕಷ್ಟವಾದರೂ ಸತ್ಯವನ್ನೇ ನುಡಿಯುತ್ತೇನೆ ಎಂದು ತಾಯಿಗೆ ಮಾತು ಕೊಡುವುದು, ರೈಲಿನಲ್ಲಿ ದಕ್ಷಿಣ ಆಫ್ರಿಿಕಾಕ್ಕೆೆ ತೆರಳುವಾಗ ಪ್ರಥಮ ದರ್ಜೆಯ ಟಿಕೆಟಿದ್ದರೂ ಅಲ್ಲಿನ ರೈಲು ಅಧಿಕಾರಿ ಇವರನ್ನು ತೃತೀಯ ದರ್ಜೆಗೆ ಹೋಗುವಂತೆ ಆಗ್ರಹಿಸುವುದು, ಇದನ್ನು ಪ್ರತಿಭಟಿಸಿದಾಗ ಹೊರತಳ್ಳುವುದು, ದ. ಆಫ್ರಿಿಕಾದಲ್ಲಿ ಭಾರತೀಯರು ದಿನನಿತ್ಯ ಅನುಭವಿಸುತ್ತಿಿದ್ದ ಕಿರುಕುಳಗಳು, ಅಲ್ಲಿ ವಕೀಲಿ ವೃತ್ತಿಿ, ಸತ್ಯಕ್ಕಾಾಗಿ ಆಗ್ರಹ, ಭಾರತಕ್ಕೆೆ ಮರಳಿ ಸ್ವಾಾತಂತ್ರ್ಯಕ್ಕಾಾಗಿ ಹೋರಾಟ, ದೇಶ ವಿಭಜನೆ, ಹಿಂದು- ಮುಸ್ಲಿಿಮರೆಲ್ಲ ಅಣ್ಣ-ತಮ್ಮಂದಿರೆಂದು ಸಾರುವುದು, ಕೊನೆಯಲ್ಲಿ ಗಾಂಧೀಜಿಗೆ ಗುಂಡು ಹೊಡೆದು ಸಾಯಿಸುವುದು ಮೊದಲಾದ ದೃಶ್ಯಗಳು ಜನರ ಮನತಟ್ಟುವಂತೆ ಕಲಾವಿದರು ಪ್ರದರ್ಶಿಸುವಲ್ಲಿ ಯಶಸ್ವಿಿಯಾಗಿದ್ದಾಾರೆ.
 ಕಥೆಯಲ್ಲಿ ವಿಶೇಷತೆ ಏನೂ ಇಲ್ಲ. ಎಲ್ಲರಿಗೂ ತಿಳಿದಿರುವ ಗಾಂಧಿಯ ಕಥಾವಸ್ತು ಇದಾದರೂ, ಅದನ್ನು ಅತ್ಯಂತ ಸರಳವಾಗಿ, ಕಟ್ಟಿಿಕೊಡಲಾಗಿದೆ. ಇಂದಿನ ದಿನಗಳಲ್ಲಿ ಎಲ್ಲೆೆಡೆ ಹಿಂಸಾಚಾರ, ಕೋಮು ಕಲಹ ಹೆಚ್ಚುತ್ತಿಿರುವ ಸಂದರ್ಭದಲ್ಲಿ ಯುವಕರು ಮತ್ತು ವಿದ್ಯಾಾರ್ಥಿಗಳು ಇದನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ತೀರಾ ಮುಖ್ಯ ಎನ್ನುವುದನ್ನು ಇಲ್ಲಿ ಸಾರಲಾಗಿದೆ. ಜೊತೆಗೆ ಖೈದಿಗಳ ಮನಪರಿವರ್ತನೆಗೆ ಇದೊಂದು ದಿವ್ಯೌೌಷಧ.
ಈ ರೂಪಕವನ್ನು ಹಗಲಿನಲ್ಲಿ ಮತ್ತು ತರಗತಿ ಕೋಣೆಗಳಲ್ಲೂ  ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶಿಸಲು ಅನುಕೂಲವಾಗುವಂತೆ ಸರಳ ವಿನ್ಯಾಾಸವನ್ನು ಮಾಡಲಾಗಿದೆ. ಕಲಾವಿದರೇ ಎಲ್ಲ ವಸ್ತುಗಳನ್ನು ಪಟಪಟನೆ ಎತ್ತಿಿಕೊಂಡು ಹೋಗಿ, ಎಲ್ಲಿಯೂ ಕಥೆಗೆ ಚ್ಯುತಿ ಬಾರದಂತೆ, ಪ್ರೇಕ್ಷಕರಿಗೆ ಕಿರಿಕಿರಿಯಾಗದಂತೆ ಜೋಡಿಸಿ ಕಥೆಯನ್ನು ಮುಂದುವರೆಸುತ್ತಾಾರೆ.
ಇಲ್ಲಿ ಗಾಂಧೀಜಿಯವರ ಬದುಕು, ಸಾಧನೆ ಮತ್ತು ತತ್ವಗಳನ್ನು, ಜೊತೆಗೆ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ಸಂಗತಿಗಳನ್ನು ಸಾರಲಾಗಿದೆ. ಪಾತ್ರಧಾರಿಗಳೆಲ್ಲ ಬಹುತೇಕ ಖಾದಿ ದಿರಿಸಿನಲ್ಲೇ ನಾಟಕದ ಬಹುತೇಕ ದೃಶ್ಯಗಳಲ್ಲಿ ಅಭಿನಯಿಸಿದ್ದಾಾರೆ. ಕೆಲವು ದೃಶ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಬಿಳಿ ದಿರಿಸಿನಲ್ಲೇ ಪ್ರದರ್ಶಿತವಾಗಿವೆ. ಹುಚ್ಚು ಆವೇಶದಲ್ಲಿ ಹಿಂದು- ಮುಸ್ಲಿಿಮರು ಹೊಡೆದಾಡದೆ, ಪರಮಶ್ರತುಗಳಾಗದೆ  ಸಹೋದರರಂತೆ ಬಾಳಬೇಕು. ಮುಳ್ಳನ್ನು ಮುಳ್ಳಿಿನಿಂದಲೇ ತೆಗೆಯಬೇಕೆನ್ನುವುದು ಸಲ್ಲದು. ಕೆಟ್ಟ ಕೆಲಸ ಮಾಡುವವನು ಕ್ರೂರ ಮೃಗಕ್ಕಿಿಂತ ಕೀಳು, ಅಸ್ಪಶ್ಯತೆ ಒಂದು ಶಾಪ, ದುಡಿಮೆಯಲ್ಲಿ ಮೇಲು- ಕೀಳಿಲ್ಲ, ಸತ್ಯವೇ ಮೇಲು. ಸುಳ್ಳು ಮತ್ತು ಅನ್ಯಾಾಯದ ವಿರುದ್ದ ಎದೆಗುಂದದೆ ಹೋರಾಡಬೇಕು. ಈ ವಿಚಾರದಲ್ಲಿ  ರಾಜಿ ಇಲ್ಲ ಎಂಬಿತ್ಯಾಾದಿ ಸಂದೇಶವನ್ನು ಈ ಕಥೆ ಸಾರುತ್ತದೆ.
ಪಾತ್ರಧಾರಿಗಳೂ ಸಹ ಎಲ್ಲೂ ಪಾತ್ರಕ್ಕೆೆ ಭಂಗವಾಗದಂತೆ ನಟನೆ ಮಾಡಿದ್ದಾಾರೆ. ಕೆಲವು ಸಂದರ್ಭದಲ್ಲಿ ಸಾಂಕೇತಿಕವಾಗಿ, ಚಿತ್ರರೂಪದಲ್ಲಿ, ಸಂಗೀತದ ರೂಪದಲ್ಲಿ ದೃಶ್ಯವನ್ನು ತೋರಿಸಲಾಗಿದೆ. ರಂಗಮುಖೇನ ಗಾಂಧೀಜಿಯ ಕಥನವನ್ನು ಮತ್ತೊೊಮ್ಮೆೆ ಅರಿಯುವಂತೆ ಮಾಡುವಲ್ಲಿ ಇದು ಸಾರ್ಥಕ್ಯ ಕಂಡಿದೆ ಎನ್ನಬಹುದು. 
ಸುಮಾರು ಒಂದುವರೆ ಗಂಟೆಯ ಪ್ರದರ್ಶನದ ಈ ರೂಪಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಒಟ್ಟಾಾರೆ, ಕಥೆ ಗೊತ್ತಿಿದ್ದರೂ, ಮತ್ತೊೊಮ್ಮೆೆ ನೋಡಿ ಎಲ್ಲ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಈ ರೂಪಕವನ್ನು ನೋಡಲೇಬೇಕು.
ಈ ಕಥೆಯನ್ನು ರಂಗರೂಪಕ್ಕೆೆ ತಂದು ನಿರ್ದೇಶಿಸಿದವರು ಶ್ರೀಪಾದ ಭಟ್, ನಿರ್ವಹಣೆಯನ್ನು ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ್ ಶಿಗ್ಗಾಾಂವ್ ಮಾಡಿದ್ದಾಾರೆ. 

published on aug 28
....................................


Tuesday, 28 August 2018

ಗೌರಿ-ಗಣೇಶ ವಿಗ್ರಹಗಳ ಅಂತಿಮ ಹಂತದ ಸಿದ್ಧತೆ 
  75 ವರ್ಷದಿಂದ ವಿಗ್ರಹ ತಯಾರಿಕೆ ನಡೆಸುತ್ತಿಿರುವ ನಂಜುಂಡಪ್ಪ ಕುಟುಂಬಸ್ಥರು



ಶಿವಮೊಗ್ಗ: ಗಣೇಶ ಚವತಿಗೆ ಇನ್ನು 20 ದಿವಸ ಉಳಿದಿದೆ. ನಾಡಿನಾದ್ಯಂತ ಗಣೇಶ ಮತ್ತು ಗೌರಿ ಆಗಮನಕ್ಕೆೆ ಸಿದ್ಧತೆಯೂ ಆರಂಭವಾಗಿದೆ. ಈ ಸಂದರ್ಭದಲ್ಲಿ ಗಣೇಶ ಮತ್ತು ಗೌರಿಯ ವಿಗ್ರಹ ತಯಾರಕರು ಬಿರುಸಿನಿಂದ ತಮ್ಮ ಕೆಲಸ ಮುಂದುವರೆಸಿದ್ದಾಾರೆ.
ಶಿವಮೊಗ್ಗದಲ್ಲಿ ಗೌರಿ-ಗಣೇಶ ವಿಗ್ರಹ ತಯಾರಿಸುವುದರಲ್ಲಿ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಬಿ.ಬಿ. ರಸ್ತೆೆಯಲ್ಲಿರುವ ಜಿ.ಎನ್.ನಂಜುಂಡಪ್ಪ ವಂಶಸ್ಥರು ಸುಮಾರು 75 ವರ್ಷದಿಂದ ಪ್ರಖ್ಯಾಾತರು. ನಗರದ ಅನೇಕ ಪ್ರಖ್ಯಾಾತ ಗಣಪತಿ ವಿಗ್ರಹ ಇವರ ಕೈಯಿಂದಲೇ ಅರಳುತ್ತದೆ. ಈ ವಂಶದ ಗಣೇಶ್ ಮತ್ತು ಸಹೋದರರ ಕುಟುಂಬದವರು ಈಗ ಈ ವೃತ್ತಿಿಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪ್ರತಿವರ್ಷ ಸುಮಾರು 400 ರಷ್ಟು ವಿಗ್ರಹವನ್ನು ತಯಾರಿಸುತ್ತಾಾರೆ.
ಗೌರಿ-ಗಣೇಶ ಹಬ್ಬದಲ್ಲಿ ಈ ವಿಗ್ರಹಗಳೇ ಪೂಜೆಗೊಳ್ಳಬೇಕಿರುವುದರಿಂದ ಪೂಜಿಸುವವರು ಸಾಕಷ್ಟಿಿರುವುದರಿಂದ ಅಂತಹವರೆಲ್ಲ ಖಾಯಂ ಆಗಿ ವಿಗ್ರಹ ತಯಾರಕರನ್ನು ಹೊಂದಿರುತ್ತಾಾರೆ. ನಂಜುಂಡಪ್ಪ ವಂಶಸ್ಥರು ಈ ರೀತಿ ಖಾಯಂ ಗ್ರಾಾಹಕರನ್ನೇ ಹೊಂದಿದ್ದಾಾರೆ.
ಇವರ ಜೊತೆಗೆ ಶೃಂಗೇರಿ, ಕಳಸ ಮತ್ತು ಹೊರನಾಡಿಗೆ ನೂರಾರು ವಿಗ್ರಹಗಳನ್ನು ಕಳುಹಿಸುತ್ತಾಾರೆ. ಇಲ್ಲಿಯು ಅವರ ಖಾಯಂ ಗ್ರಾಾಹ್ರಕರಿದ್ದು, ಅವರು ಗಣೇಶನ ಹಬ್ಬ ನಾಲ್ಕು ತಿಂಗಳಿರುವಾಗಲೇ ನೆನೆಪು ಮಾಡುತ್ತಾಾರೆ. ಕೆಲಸವೂ ಆಗಲೇ ಆರಂಭಗೊಳ್ಳುತ್ತದೆ. ಈಗ ಗಣಪತಿಯ ವಿಗ್ರಹಗಳೆಲ್ಲ ಸಿದ್ಧಗೊಂಡಿದ್ದು, ಅಲಂಕಾರ ಮತ್ತು ಬಣ್ಣ ಬಳಿಯುವುದು ಮಾತ್ರ ಬಾಕಿ ಇದೆ. ಅವರ ಮನೆ ಆವರಣದಲ್ಲಿ ಎಲ್ಲಿ ನೋಡಿದರೂ ಗಣಪತಿ ಮತ್ತು ಗೌರಿ ವಿಗ್ರಹ ತುಂಬಿಕೊಂಡಿದೆ. ಹೆಂಗಸರು ಮತ್ತು ಮಕ್ಕಳೂ ಸಹ ಇದೇ ಕೆಲಸದಲ್ಲಿನಿರತಾಗಿರುವುದು ಕಂಡುಬರುತ್ತಿಿದೆ.
ಸತತವಾಗಿ ನಾಲ್ಕು ತಿಂಗಳು ಕುಳಿತು ಎಡೆಬಿಡದೆ ವಿಗ್ರಹ ತಯಾರಿಸುವುದು ಸುಲಭದ ಕೆಲಸವಲ್ಲ. ಆದರೂ ತಮ್ಮ ವೃತ್ತಿಿ ಮತ್ತು ಹಬ್ಬದ ವಿಶೇಷ ಕೆಲಸವಾಗಿರುವುದರಿಂದ ಹಗಲು- ರಾತ್ರಿಿ ಎನ್ನದೆ ಈ ದಿನಗಳಲ್ಲಿ ಕಾಯಕ ನಿರತರಾಗಿರುತ್ತಾಾರೆ. ವಿಗ್ರಹಕ್ಕೆೆ ಮಣ್ಣು ತರುವುದೇ ಈಗ ಸಾಹಸದ ಕೆಲಸವಾಗಿದೆ. ಕುಂಸಿ, ಭದ್ರಾಾವತಿ, ನಗರದ ರಾಗಿಗುಡ್ಡ ಮೊದಲಾದೆಡೆ ಈ ಮಣ್ಣಿಿನ ಲಭ್ಯತೆ ಇದೆ. ಸುಮಾರು ಎರಡು ಟ್ರ್ಯಾಾಕ್ಟರ್ ಮಣ್ಣು ತರಿಸಿ, ಅದನ್ನು ಹದಗೊಳಿಸಿದ ನಂತರ ವಿಗ್ರಹ ತಯಾರಿಕೆ ಶುಭದಿನದಂದು ಆರಂಭಗೊಳ್ಳುತ್ತದೆ. ಹೀಗೆ ಮನೆಯ ಎಲ್ಲರ ಕೈಯಲ್ಲಿ ಗಣಪ- ಗೌರಿ ಅರಳತೊಡಗುತ್ತಾಾರೆ.
ಈಗ ಬಣ್ಣ ಹಚ್ಚುವ ಕೆಲಸವೂ ಆರಂಭವಾಗಿದೆ. ಇನ್ನೊೊಂದು 10 ದಿನದಲ್ಲಿ ವಿಗ್ರಹಗಳೆಲ್ಲ ಮಾರುಕಟ್ಟೆೆಗೆ ಮತ್ತು ಗ್ರಾಾಹಕರ ಮನೆ ಸೇರಲು ಸಿದ್ಧಗೊಳ್ಳುತ್ತಿಿವೆ. ಇದು ಕುಟುಂಬದ ವೃತ್ತಿಿಯಾಗಿ ಪಾರಂಪರಿಕವಾಗಿ ಬಂದಿರುವುದರಿಂದ ಎಷ್ಟೇ ತೊಂದರೆಯಾದರೂ ಎಲ್ಲರೂ ಇದರಲ್ಲಿ ಪಾಲ್ಗೊೊಳ್ಳುತ್ತಾಾರೆ. ಒಂದಷ್ಟು ದಿನ ಮಾತ್ರ ತೊಂದರೆ, ಆನಂತರ ಸಮಸ್ಯೆೆ ಇಲ್ಲ ಎನ್ನುವ ಗಣೇಶ್, ಎಲ್ಲರೂ ಕೈಜೋಡಿಸುವುದರಿಂದ ಸಾಂಗವಾಗಿ ಕೆಲಸ ಪ್ರತಿವರ್ಷ ನಡೆಯುತ್ತಿಿದೆ. ಮಗಳು ಸಹನಾ ಉತ್ತಮ ಪೇಂಟರ್ ಆಗಿರುವುದರಿಂದ ಆ ಕೆಲಸದ ಜವಾಬ್ದಾಾರಿಯನ್ನು ಅವಳಿಗೆ ವಹಿಸಿದ್ದೇನೆ ಎನ್ನುತ್ತಾಾರೆ.
ವಿಗ್ರಹದ ಜೊತೆಗೆ ಉಳಿದ ದಿನಗಳಲ್ಲಿ ಬಾಸಿಂಗ ತಯಾರಿಕೆ, ಮಡಿಕೆ ತಯಾರಿಕೆ ಮಾಡುತ್ತಾಾರೆ. ಇವಗಳಿಗೆ ಅಷ್ಟೇನೂ ಮಾರುಕಟ್ಟೆೆ ಇಲ್ಲದಿರುವುದರಿಂದ ಬೇಡಿಕೆ ಇದ್ದಾಾಗಲಷ್ಟೇ ಮಾಡಿಕೊಡುತ್ತಾಾರೆ. ನಗರದ ಪ್ರಖ್ಯಾಾತ ಗಣಪತಿಗಳೆನಿಸಿಕೊಂಡಿರುವ ಹಿಂದು ಮಹಾಸಭಾ,  ರಾಮಣ್ಣ ಶ್ರೇಷ್ಠಿಿ ಪಾರ್ಕ್, ಭಾವಸಾರ ಕ್ಷತ್ರಿಿಯ ಸಮಾಜ, ಕಡೆಕಲ್, ಶಾಂತಿನಗರ ಮೊದಲಾದೆಡೆಗಳಿಗೆ ಇವರು ದೊಡ್ಡ ಗಾತ್ರದ ಮತ್ತು ಅವರು ಸೂಚಿಸಿದ ಭಂಗಿಯ ವಿಗ್ರಹ ತಯಾರಿಸಿಕೊಡುತ್ತಾಾರೆ. ಈ ವಿಗ್ರಹಗಳೆಲ್ಲ ಈಗ ಸಿದ್ಧಗೊಂಡಿವೆ. ಗಣೇಶನಿಗೆ ಅಂತಿಮ ಟಚಪ್ ಕೊಟ್ಟು ಕಳುಹಿಸಲು ಸನ್ನದ್ಧರಾಗಿದ್ದಾಾರೆ.   
published on aug 25
................................

Thursday, 23 August 2018

  ಪ್ರಕೃತಿಯ ತಿರುಗೇಟು





ನಾವು ಮಾಡುತ್ತಿಿರುವುದೇನು? ಪ್ರಕೃತಿಯ ವಿರುದ್ದ ಸಾಗುತ್ತಿಿದ್ದೇವೆ. ಯಾವುದನ್ನು ಮಾಡಬಾರದಿತ್ತೋೋ ಅದನ್ನು ಮಾಡಿದ್ದೇವೆ. ಕಾರಣ ಹಣದ ದುರಾಸೆ. ಇದರಿಂದ ವಿನಾಶವನ್ನು ಮನೆಬಾಗಿಲಿಗೆ ಆಹ್ವಾಾನಿಸಿಕೊಂಡಿದ್ದೇವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಹಣದ ಆಸೆ ಹೆಚ್ಚಿಿದೆ. ಈ ದುರಾಸೆ ಮನುಷ್ಯನ್ನು ವಿನಾಶದೆಡೆಗೆ ತಳ್ಳುತ್ತದೆ ಎನ್ನುವ ಮಾತು ಮತ್ತೆೆ ಕೊಡಗಿನ ಘಟನೆಯಿಂದ ಕಲಿತ ಪಾಠವಾಗಿದೆ.


ಪ್ರಕೃತಿಯಲ್ಲಿ ಯಾವುದೂ ಒಂಟಿ ಅಲ್ಲ; ಮನುಷ್ಯ ಅದರ ಒಂದು ಭಾಗ. ನಿಸರ್ಗದ ವಿರುದ್ಧದ ಅವನ ಯುದ್ಧ ತನ್ನ ವಿರುದ್ಧವೇ ತಾನು ಕಾದಾಡಿದಂತೆ. ಇದು ಅಮೆರಿಕಾದ ಜೀವವಿಜ್ಞಾಾನಿ ರಾಶೆಲ್ ಕರ್ಸನ್ ಅವರ ಮಾತು.

ಜಗತ್ತಿಿನ ಕಟ್ಟಕಡೆಯ ಮರವನ್ನು ಕಡಿದುರುಳಿಸಿದ ನಂತರ, ಜಗತ್ತಿಿನ ಕಟ್ಟಕಡೆಯ ಮೀನನ್ನು ನುಂಗಿದ ನಂತರ, ಜಗತ್ತಿಿನ ಕಟ್ಟಕಡೆಯ ನೀರಿನ ಬಿಂದು ಆವಿಯಾದ ನಂತರ, ಮನುಷ್ಯ, ನಿನಗೆ ಅರ್ಥವಾಗುತ್ತದೆ ಹಣವನ್ನು ಎಂದೂ ತಿನ್ನಲಿಕ್ಕಾಾದು ಎಂದು. ಇದು ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತ ಸಾಹಿತಿ ಯು.ಆರ್. ಅನಂತಮೂರ್ತಿ ಅವರ ಮಾತು.

ಈ ಮೇಲಿನ ಎರಡೂ ಮಾತುಗಳು ಮನುಷ್ಯನ ದುರಾಸೆಗೆ ಹೋಲಿಸಿ ಹೇಳಿದ್ದು. ಕಳೆದ ವಾರ ಕೊಡಗಿನಲ್ಲಿ ಮತ್ತು ಕೇರಳದಲ್ಲಿ ಸಂಭವಿಸಿದ ಕಂಡರಿಯದ ಪ್ರವಾಹ ಮತ್ತು ಗುಡ್ಡ ಕುಸಿತ, ಅಪಾರ ಆಸ್ತಿಿ-ಪಾಸ್ತಿಿ ಹಾನಿ ಘಟನೆಯ ಹಿನ್ನೆೆಲೆಯಲ್ಲಿ ಗಮನಿಸಿದಾಗ ಈ ಹೇಳಿಕೆಗಳು ತುಂಬಾ ಅರ್ಥಗರ್ಭಿತ ಎನಿಸುತ್ತವೆ.
ಮಾನವ ಹಸ್ತಕ್ಷೇಪ ಯಾವಾಗ ಪ್ರಕೃತಿಯ ಮೇಲೆ ಅತಿಯಾಯಿತೋ, ಕಾಡನ್ನು ಕಡಿದು ಬರಿದಾಗಿಸಿದನೋ, ಗುಡ್ಡವನ್ನು ಜಾರಿಸಿ ರೆಸಾರ್ಟ್ ನಿರ್ಮಿಸಿದನೋ, ಕಂಡಲ್ಲೆೆಲ್ಲ ಶುಂಠಿ, ರಬ್ಬರ್ ಬೆಳೆಯಲಾರಂಭಿಸಿದನೋ ಅಂದೇ ಇಂತಹ ಘಟನೆಗಳಿಗೆ ನಾಂದಿ ಹಾಡಿದಂತಾಗಿತ್ತು.
ಕೇರಳ ಮತ್ತು ಕೊಡಗು ಪ್ರವಾಸೋದ್ಯಮಕ್ಕೆೆ ಹೆಸರಾದ ಸ್ಥಳಗಳು. ಇದನ್ನೇ ಸ್ಥಳೀಯರು ಮಾಫಿಯಾ ರೀತಿಯಲ್ಲಿ ಬೆಳೆಸಿದರು. ಹಣದ ಹಿಂದೆ ಅವರು ಬಿದ್ದರು. ಪ್ರವಾಸಿಗರಿಗೆ ಎಲ್ಲೆೆಂದರೆಲ್ಲಿ ರೆಸಾರ್ಟ್ ನಿರ್ಮಿಸಿ, ಬೇಕಾದ ಎಲ್ಲಾಾ ಐಶಾರಾಮಿ ವ್ಯವಸ್ಥೆೆ ಕಲ್ಪಿಿಸಿಕೊಟ್ಟು ಹಣದ ಗಿಡವನ್ನೇ ನೆಟ್ಟರು. ದಿಕ್ಕುದೆಸೆ ಇಲ್ಲದೆ ಬೆಳೆದ ಇದು ಇಂದು ಕೇರಳವನ್ನೂ, ಕೊಡಗನ್ನೂ ನುಂಗಿದೆ. ಬೃಹತ್ ರೆಸಾರ್ಟ್‌ಗಳು, ಹೋಂ ಸ್ಟೇಗಳು, ವೈಭವೋಪೇತ ಹೊಟೆಲ್‌ಗಳು ಕಂಡಲ್ಲೆೆಲ್ಲ ತಲೆಎತ್ತಿಿದ್ದವು. ಕೊಡಗಿನಲ್ಲಿ ಅಧಿಕೃತವಾಗಿ ಸುಮಾರು ಒಂದು ಸಾವಿರ ಹೋಂ ಸ್ಟೇ ಇವೆ. ಇನ್ನು ಅನಧಿಕೃತ ಎಷ್ಟಿಿರಬಹುದೆಂದು ನೀವೇ ಯೋಚಿಸಿ. ಮಡಿಕೇರಿ ಮತ್ತು ಸೋಮವರಪೇಟೆ ತಾಲೂಕಿನಲ್ಲಿ ಬೃಹತ್ ಗುಡ್ಡಗಳನ್ನೇ ಕೊರೆದು ಇವುಗಳನ್ನು ನಿರ್ಮಿಸಲಾಗಿದೆ. ಮನುಷ್ಯರು ಕಾಲಿಡಲಾಗದಂತಹ ಗುಡ್ಡದ ಮೇಲೂ ಸುಂದರವಾದ ಬಂಗಲೆಯಂತಹ ಹೋಮ್ ಸ್ಟೇಗಳಿವೆ. ವಿಜ್ಞಾಾನಿ ಕರ್ಸನ್ ಹೇಳಿರುವಂತೆ ನಿಸರ್ಗವನ್ನು ಹಾಳುಮಾಡಿ ತಾವೇ ಅದರ ವಿನಾಶಕ್ಕೆೆ ಸಿಲುಕಿದ್ದಾಾರೆ ಕೊಡಗಿನವರು.
 ಒಂದಲ್ಲ ಒಂದು ವಿಚಾರದಲ್ಲಿ ಮಾನವ  ಪ್ರಕೃತಿಯ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಲೇ ಬರುತ್ತಿಿದ್ದಾಾನೆ. ಕೊಡಗು ಮತ್ತು ಕೇರಳ ದಟ್ಟ ಕಾನನಗಳನ್ನು ಹೊಂದಿರುವಂತೆ ಎತ್ತರದ ಶಿಖರಗಳನ್ನೂ ಮಡಿಲಲ್ಲಿ ಇಟ್ಟುಕೊಂಡಿವೆ. ಜೊತೆಗೆ ಮನಸೆಳೆಯುವ, ಪ್ರಕೃತಿ ಸೌಂದರ್ಯದ ಹತ್ತಾಾರು ಸ್ಥಳಗಳಿವೆ. ಪ್ರವಾಸಕ್ಕಾಾಗಿ ಬರುವವರ ಸಂಖ್ಯೆೆ ಹೆಚ್ಚಿಿದಂತೆ ಕಾಫಿತೋಟದ ಮಧ್ಯೆೆಯೇ ರೆಸಾರ್ಟ್‌ಗಳು ತಲೆಎತ್ತಿಿದವು. ಕಾಫಿತೋಟಗಳ ಮಾಲಕರು ತಮ್ಮ ಉದ್ಯೋೋಗಕ್ಕಿಿಂತ ಹೋಮ್ ಸ್ಟೇಗಳನ್ನೇ ಹಣಗಳಿಸುವ ದಂಧೆಯನ್ನಾಾಗಿ ಮಾಡಿಕೊಂಡರು. ನಿರಾಯಾಸವಾಗಿ ನೀರು ಹರಿದುಹೋಗುತ್ತಿಿದ್ದ ಬೆಟ್ಟ-ಗುಡ್ಡದ ಮೇಲೆ ಇವು ತಲೆಎತ್ತಿಿದವು.  ಜೊತೆಗೆ ರಸ್ತೆೆ, ಇತರೇ ಕಟ್ಟಡಗಳೂ ಆರಂಭವಾದವು. ವಾಹನಗಳ ಭರಾಟೆ ಹೆಚ್ಚಾಾಯಿತು. ಭೂಮಿಯ ಮೇಲೆ ಒತ್ತಡವೂ ಹೆಚ್ಚಿಿತು.
ಮೊದಲೇ ಅತಿ ಹೆಚ್ಚು ಮಳೆ ಬೀಳುವ ಕೊಡಗಿನಲ್ಲಿ ಭೂಮಿ ಮೇಲೆ ಒತ್ತಡ ಇನ್ನಷ್ಟು ಹೆಚ್ಚಿಿದ್ದರಿಂದ ಸುಲಭದಲ್ಲಿ ಭೂಕುಸಿತ ಎದುರಾಯಿತು. ಯಾವ ವಿಜ್ಞಾಾನಿಗಳ ಮಾತನ್ನೂ ಲೆಕ್ಕಿಿದೆ ಮಾಫಿಯಾಗಳು ಮಾಡಿದ ಬೃಹತ್ ತಪ್ಪಿಿನಿಂದ ಇಂದು ಇಡೀ ಕೊಡಗು ಸಂಕಷ್ಟಕ್ಕೆೆ ತುತ್ತಾಾಗಿದೆ.
ಭೂಮಿಯ ಮೇಲೆ ಮಾನವನ ಒತ್ತಡ ನಿಲ್ಲಬೇಕಿದೆ. ಕಂಡಲ್ಲೆೆಲ್ಲ ಜಮೀನುಗಳನ್ನು ವಾಣಿಜ್ಯ ಉದ್ದೇಶಕ್ಕೆೆ ಮಾರ್ಪಡಿಸಿ ಕಟ್ಟಡ ಕಟ್ಟುವುದು, ಅರಣ್ಯನಾಶ ಮಾಡುವುದು, ಗುಡ್ಡಕೊರೆಯುವುದು ಸ್ಥಗಿತಗೊಳ್ಳಬೇಕಿದೆ. ಪ್ರಕೃತಿಯೊಂದಿಗೆ ಬಾಳಿ ಬದುಕಿದಲ್ಲಿ ಮಾತ್ರ ಅದರ ಮಿತ್ರತ್ವ ಗಳಿಸಬಹುದು. ನಮ್ಮ ಪೂರ್ವಜರು ಪಾರಂಪರಿಕವಾಗಿ ಬಂದ ಕಾಡನ್ನು, ನೆಲ-ಜಲವನ್ನು ಹಾಗೆಯೇ ಉಳಿಸಿ ಬೆಳೆಸಿದರು. ಮನೆ ಕಟ್ಟುವಾಗಲೂ ಅವರದೇ ಆದ ಸೂಕ್ಷ್ಮ ವಿಚಾರದ ಹಿನ್ನೆೆಲೆಯಲ್ಲಿ ಆಲೋಚಿಸಿ ನಿರ್ಮಿಸಿದರು.
 ಆದರೆ ನಾವು ಮಾಡುತ್ತಿಿರುವುದೇನು? ಪ್ರಕೃತಿಯ ವಿರುದ್ದ ಸಾಗುತ್ತಿಿದ್ದೇವೆ. ಯಾವುದನ್ನು ಮಾಡಬಾರದಿತ್ತೋೋ ಅದನ್ನು ಮಾಡಿದ್ದೇವೆ. ಕಾರಣ ಹಣದ ದುರಾಸೆ. ಇದರಿಂದ ವಿನಾಶವನ್ನು ಮನೆಬಾಗಿಲಿಗೆ ಆಹ್ವಾಾನಿಸಿಕೊಂಡಿದ್ದೇವೆ. ಹಣದ ಆಸೆ ಮನುಷ್ಯನ್ನು ವಿನಾಶದೆಡೆಗೆ ತಳ್ಳುತ್ತದೆ ಎನ್ನುವ ಮಾತು ಮತ್ತೆೆ ಕೊಡಗಿನ ಘಟನೆಯಿಂದ ಕಲಿತ ಪಾಠವಾಗಿದೆ.
ಈ ಭೂಮಿ ಎಲ್ಲರ ಆಶೆಗಳನ್ನು ಪೂರೈಸುತ್ತದೆ. ಆದರೆ,.. ದುರಾಸೆಗಳನ್ನಲ್ಲ. ಆಧುನಿಕ ಬದುಕಿನ ಬಹುದೊಡ್ಡ ವ್ಯಂಗ್ಯವೆಂದರೆ, ನಾವೀಗ ಮುಖಾಮುಖಿ ಆಗುತ್ತಿಿರುವುದು ಪರಿಸರದೊಂದಿಗೆ! ಅಗತ್ಯಕ್ಕಿಿಂತ ಪ್ರಗತಿ ಹೆಚ್ಚಾಾಗುತ್ತಿಿರುವುದರಿಂದ ಜಾಗತಿಕ ತಾಪಮಾನ ಏರುತ್ತಿಿದೆ. ಇದರೊಟ್ಟಿಿಗೆ ಪ್ರಾಾಕೃತಿಕ ಸರಪಳಿಯಲ್ಲಿ ಪರಿಸರ ನಾಶವಿಪರೀತವಾಗಿದೆ. ಜೀವಜಂತುಗಳ ಸಂತತಿಯ ನಾಶವಾಗುತ್ತಿಿದೆ. ಇವೆಲ್ಲವೂ ನಮಗೆ ಗೊತ್ತಾಾಗುತ್ತಿಿದೆ. ಆದರೂ ಹಣದ ಮದ ಬಿಡುತ್ತಿಿಲ್ಲ. ಇಷ್ಟೆೆಲ್ಲಾಾ ನುಭವಿಸಿದ ಮೇಲೂ ಈಗಲಾದರೂ ಎಚ್ಚೆೆತ್ತುಕೊಳ್ಳದಿದ್ದರೆ...?
published on 23 aug 2018
........................................      
ಎದೆ ನಡುಗಿಸುವ ಬುಲೆಟ್, ಎನ್‌ಫೀಲ್‌ಡ್‌ ಸೈಲೆನ್ಸರ್ ಶಬ್ದ 
  ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸ ಎಂದು?


ಶಿವಮೊಗ್ಗ:   ನಗರದಲ್ಲಿ   ಬುಲೆಟ್ ಮತ್ತು  ಎನ್‌ಫೀಲ್‌ಡ್‌ ಬೈಕ್‌ಗಳ ಭರಾಟೆ ಹೆಚ್ಚುತ್ತಿಿದೆ.  ಅದರಲ್ಲೂ ತುವಕರಲ್ಲಿ ಇದರ ಕ್ರೇಜ್  ಜೋರಾಗಿದೆ. ಈ ಪೈಕಿ ಕೆಲವರು ದೊಡ್ಡ ಪ್ರಮಾಣದಲ್ಲಿ ಶಬ್ದ ಬರುವ ಸೈಲೆನ್ಸರ್‌ಗಳನ್ನು ಇದಕ್ಕೆೆ ಬದಲಿಯಾಗಿ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವುದರ ಜೊತೆಗೆ ಸಾರ್ವಜನಿಕರಿಗೂ ತೊಂದರೆ ಕೊಡುತ್ತಿಿರುವ ಪ್ರಕರಣ ಹೆಚ್ಚು ವರದಿಯಾಗುತ್ತಿಿದೆ.  ಇದರಿಂದ ನಾಗರಿಕರು ನೆಮ್ಮದಿಯಿಂದಿರದಂತಾದ ಪರಿಸ್ಥಿಿತಿ ಎದುರಾಗಿದೆ. 
ಇತ್ತೀಚೆಗೆ ಈ ಬೈಕ್‌ಗಳ ಸಂಖ್ಯೆೆ ಒಂದೇ ಸಮನೆ ಏರುತ್ತಿಿದೆ. ಇದರಿಂದ ಶಬ್ದ ಮಾಲಿನ್ಯ ವಿಪರೀತ ಮಟ್ಟಕ್ಕೆೆ ತಲುಪಿದೆ. ಭಾರೀ ಶಬ್ದ ಮಾಡುತ್ತ ಹೋಗುವ ಈ ಬೈಕ್‌ಗಳು ನಾಗರಿಕರ ಎದೆ ನಡುಗಿಸುತ್ತಿಿವೆ. ಕರ್ಣ ಕಠೋರವಾದ ಈ ಶಬ್ದ   ಚಾಲನೆಯಲ್ಲಿರುವವರು ಮತ್ತು ಪಾದಚಾರಿಗಳೂ ಸಹ ಭಯಗೊಳ್ಳುವಂತೆ ಮಾಡುತ್ತಿಿದೆ. ಸೈಲೆನ್ಸರ್‌ಗಳನ್ನು ಬದಲಿಸುವ ದಂಧೆ ಜೋರಾಗಿದೆ. ಈ ಬೈಕ್‌ಗಳ ಗ್ಯಾಾರೇಜಿನವರಿಗೆ ಇದೇ ಕೆಲಸ. ಹೊಸ ಬೈಕ್ ತಂದವರು ನೆರವಾಗಿ ಬಂದು ಸೈಲೆನ್ಸರ್ ಬದಲಿಸುತ್ತಿಿದಾರೆ.
ಏಕಾಏಕಿ ಕೇಳಿಬರುವ ಈ ಕರ್ಕಶ ಸದ್ದಿನಿಂದ ಕೆಲವು ಬೈಕ್ ಸವಾರರು ಚಾಲನೆಯ ನಿಯಂತ್ರಣ ಕಳೆದುಕೊಂಡು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿಿರುವ ಘಟನೆಗಳು ಕೂಡ ನಡೆಯುತ್ತಿಿವೆ. ಈ ಕರ್ಕಶ ಸದ್ದು ನಾಗರಿಕ ವಲಯದಲ್ಲಿ ನಾನಾ ರೀತಿಯ ಅವಾಂತರ ಸೃಷ್ಟಿಿಸುತ್ತಿಿದೆ.
’ಭಾರತ ಮೋಟಾರು ಕಾಯ್ದೆೆ’ಯ ಪ್ರಕಾರ ಮೋಟಾರ್ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಕರ್ಕಶ ಸದ್ದು ಮಾಡುವಂತಿಲ್ಲ. ಬೈಕ್, ಬಸ್, ಲಾರಿ ಮತ್ತಿಿತರ ವಾಹನಗಳಿಂದ ಹೊರಹೊಮ್ಮಬಹುದಾದ ಶಬ್ದದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಬೇಕೆಂದು ಕಾಯ್ದೆೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಿಗದಿತ ’ಡೆಸಿಬಲ್’ಗಿಂತ ಹೆಚ್ಚಿಿನ ಶಬ್ದ ಹೊರಸೂಸುವ ವಾಹನಗಳ ಮಾಲಿಕರ ಮೇಲೆ ಪೊಲೀಸ್ ಇಲಾಖೆ ಹಾಗೂ ಆರ್‌ಟಿಓ ಕೇಸ್ ದಾಖಲಿಸಬಹುದು. ದಂಡ ಹಾಕಬಹುದು. ಜೊತೆಗೆ ವಾಹನ ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದು. ತಾತ್ಕಾಾಲಿಕ ಅವಧಿಗೆ ನೊಂದಣಿ ರದ್ದುಗೊಳಿಸಲು ಅವಕಾಶವಿದೆ.
ಪೊಲೀಸರು ಗ್ಯಾಾರೇಜಿನವರಿಗೆ ಸೈಲೆನ್ಸರ್ ಬದಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸೂಚನೆ ಕೊಡಬೇಕಿದೆ. ಬದಲಿಸಿದಲ್ಲಿ ಅವರ ವಿರುದ್ದ ಕೇಸ್ ದಾಖಲಿಸಬೇಕು. ಇಂತಹ ಕೆಲಸ ಕೈಗೆತ್ತಿಿಕೊಂಡರೆ ವಾಹನ ಮಾಲಕರು ಸೈಲೆನ್ಸರ್ ಬದಲಿಸಲು ಹಿಂದೇಟು ಹಾಕುತ್ತಾಾರೆ. ಈ ಬಗ್ಗೆೆ ಹೆಜ್ಜೆೆ ಇಡುವಂತಾಗಬೇಕಿದೆ.
ಇಷ್ಟೆೆಲ್ಲದರ ಹೊರತಾಗಿಯೂ ಶಿವಮೊಗ್ಗ ನಗರದಲ್ಲಿ ಈ ಕರ್ಕಶ ಸದ್ದಿಗೆ ಬ್ರೇಕ್ ಹಾಕುವ ಕೆಲಸಗಳು ಪೊಲೀಸ್ ಇಲಾಖೆ ಹಾಗೂ ಆರ್‌ಟಿಓದಿಂದ ಪರಿಣಾಮಕಾರಿಯಾಗಿ ನಡೆಯುತ್ತಿಿಲ್ಲ. ಇದರಿಂದ ದಿನದಿಂದ ದಿನಕ್ಕೆೆ ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ ಇತರೆ ವಾಹನಗಳ ಹಾವಳಿ ವಿಪರೀತ ಮಟ್ಟಕ್ಕೆೆ ತಲುಪಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ.
  80 ಡೆಸಿಬಲ್ ಮೀರಬಾರದು:
  ವಾಹನ ತಯಾರಿಸುವ ಕಂಪೆನಿಗಳು ಮೋಟಾರು ಕಾಯ್ದೆೆಯನುಸಾರ ವಾಹನಗಳ ಶಬ್ದ ನಿಗದಿಪಡಿಸಿರುತ್ತವೆ. ಆದರೆ ಕೆಲವು ಮಾಲಿಕರು ಶೋಕಿಗಾಗಿ ಅಥವಾ ಜನರ ಗಮನಸೆಳೆಯಲು ವಾಹನಗಳ ಶಬ್ದ ಹೆಚ್ಚಿಿಸಿಕೊಳ್ಳುತ್ತಾಾರೆ. ಇದಕ್ಕಾಾಗಿ ಸೈಲೈನ್ಸರ್‌ಗಳನ್ನು ಬದಲಾಯಿಸಿಕೊಳ್ಳುತ್ತಾಾರೆ. ಹೆಚ್ಚು ಶಬ್ದ ಹೊರಹೊಮ್ಮುವ ಸೈಲೈನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾಾರೆ. ಇದರಿಂದ ಈ ವಾಹನಗಳು ರಸ್ತೆೆಗಿಳಿದ ವೇಳೆ ಭಾರೀ ಪ್ರಮಾಣದ ಸದ್ದು ಮಾಡಿಕೊಂಡು ಹೋಗುತ್ತವೆ. ಈ ರೀತಿಯ ಮಾರ್ಪಾಡು ಮಾಡುವುದು ಕಾನೂನುಬಾಹಿರವಾಗಿದೆ. ಸಂಬಂಧಿಸಿದ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಶಬ್ದ ಮಾಲಿನ್ಯ ಉಂಟು ಮಾಡುವ ವಾಹನಗಳ ಪತ್ತೆೆಗೆ ಇಲಾಖೆಯಲ್ಲಿ ಡೆಸಿಬಲ್ ಮೀಟರ್‌ನಂತಹ ಅತ್ಯಾಾಧುನಿಕ ಉಪಕರಣಗಳಿವೆ.
 ಇತ್ತೀಚೆಗೆ ಪೊಲೀಸರು ಸಾಲುಸಾಲಾಗಿ ಹೆಲ್ಮೆೆಟ್, ಸೀಟ್ ಬೆಲ್‌ಟ್‌ ಸಹಿತ ಇನ್ನಿಿತರ ಕೇಸ್ ಹಾಕುತ್ತಿಿದ್ದಾಾರೆ. ಅದೇ ರೀತಿಯಲ್ಲಿ ಕರ್ಕಶ ಶಬ್ದ ಹೊರಹೊಮ್ಮಿಿಸುವ ವಾಹನಗಳ ಮಾಲಿಕರ ವಿರುದ್ದವು ಕಾನೂನು ರೀತ್ಯ ಕ್ರಮ ಜರುಗಿಸಬೇಕು.  ಈ ಮೂಲಕ ಶಬ್ದ ಮಾಲಿನ್ಯ ತಡೆಗಟ್ಟು, ನಾಗರಿಕರ ಆರೋಗ್ಯ ಸಂರಕ್ಷಣೆಯತ್ತ ಗಮನಹರಿಸಬೇಕಾಗಿದೆ. ಹಾಗೆಯೇ ಆರ್‌ಟಿಓ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ, ಸಂಘಸಂಸ್ಥೆೆಗಳ ನೆರವಿನೊಂದಿಗೆ ಶಬ್ದ ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ವಾಹನ ಮಾಲಿಕರು, ಚಾಲಕರು, ನಾಗರಿಕರಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು.



’ಬೈಕ್ ಅಥವಾ ಇತರೆ ಯಾವುದೇ ವಾಹನವಾಗಿರಲಿ ಶಬ್ದ ಮಾಲಿನ್ಯ ಉಂಟು ಮಾಡುವಂತಿಲ್ಲ. ಮೋಟಾರು ವಾಹನ ಕಾಯ್ದೆೆಯನುಸಾರ ನಿಗದಿತ ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ವಾಹನಗಳ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದಾಗಿದೆ.  ಕಂಪೆನಿ ನಿಗದಿಪಡಿಸಿದ ಸೈಲೈನ್ಸರ್‌ಗಳನ್ನೇ ಬಳಕೆ ಮಾಡಬೇಕು. ಇದನ್ನು ಮಾರ್ಪಡಿಸಿಕೊಳ್ಳುವುದು ಕಾನೂನುಬಾಹಿರವಾಗಿದೆ. ಇಂತಹ ವಾಹನಗಳ ನೊಂದಣಿ ಕೂಡ ತಡೆಹಿಡಿಯಬಹುದಾಗಿದೆ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಕಶ ಶಬ್ದ ಹೊರಹೊಮ್ಮುವ ವಾಹನಗಳು ಕಂಡುಬಂದರೆ ತಮ್ಮ ಮೊಬೈಲ್ ಸಂಖ್ಯೆೆ : 94498-64014 ಗೆ ಮಾಹಿತಿ ರವಾನಿಸಬಹುದಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಕ್ರಮ ಜರುಗಿಸಲಾಗುವುದು.
-ಶಿವರಾಜ್ ಪಾಟೀಲ್, ಪ್ರಾಾದೇಶಿಕ ಸಾರಿಗೆ ಇಲಾಖೆಯ ಜಂಟಿ ಆಯುಕ್ತ 

published on aug 21
 ...............................

ಕೊಡಗು, ಕೇರಳದಲ್ಲಿ ನಡೆದ ಭಾರಿ ಅನಾಹುತದ ಹಿನ್ನೆೆಲೆ
 ಕಸ್ತೂರಿರಂಗನ್  ಮತ್ತೆೆ ನೆನೆಪಾಗುತ್ತಿಿದ್ದಾಾರೆ






ಪಶ್ಚಿಿಮಘಟ್ಟಗಳನ್ನು ಉಳಿಸಲು, ಕಸ್ತೂರಿರಂಗನ್ ಮತ್ತು ಅದಕ್ಕೂ ಮೊದಲು ಮಾಧವ್ ಗಾಡ್ಗೀಳ್ ವರದಿ ನೀಡಿದಾಗ ಅದನ್ನು ಬಾಯಿಗೆ ಬಂದಂತೆ ಟೀಕಿಸಿವಿರೋಧಿಸಿದವರು ಹಲವರು. ಇಂದು ಅವರ್ಯಾಾರೂ ಚಕಾರ ಎತ್ತುತ್ತಿಿಲ್ಲ. ಗಿರಿ-ತಪ್ಪಲಲ್ಲಿರುವ ಹಳ್ಳಿಿಗಳಿಗೆ ಇದರಿಂದ ತೊಂದರೆಯಾಗಲಿದೆ. ಅಭಿವೃದ್ಧಿಿಯಿಂದ ವಂಚಿತರಾಗುತ್ತೇವೆ ಎಂದೆಲ್ಲ ಹುಯಿಲೆಬ್ಬಿಿಸಿ ಆ ವರದಿಯ ಬಗ್ಗೆೆ ಸಮರ್ಪಕ ಚರ್ಚೆ ಮಾಡುವುದಿರಲಿ, ಚರ್ಚೆಗೂ ಅವಕಾಶವಾಗದಂತೆ ನೋಡಿಕೊಂಡವರು ನಮ್ಮಲ್ಲಿದ್ದಾಾರೆ. ಅದರಲ್ಲಿದ್ದ ಎಚ್ಚರಿಕೆಯ ಗಂಟೆಯನ್ನೂ ಗಮನಿಸದಷ್ಟು ತಾಳ್ಮೆೆ ಅವರಲ್ಲಿರಲಿಲ್ಲ. ಏಕೆಂದರೆ ಅವರಿಗೆ ಜನರ ದಿಕ್ಕು ತಪ್ಪಿಿಸಿಯಾದರೂ  ಹೋರಾಟ ಯಶಸ್ವಿಿಯಾಗಬೇಕಿತ್ತು





ಈ ನೆಲದ ಮೇಲೆ ಬದುಕುವವರಿಗೆ ಉಪಕಾರ ಸ್ಮರಣೆ ಬೇಕು. ಗಿರಿ-ಶಿಖರಗಳನ್ನು ಕೊರೆಯದೆ, ಅವಳ ಒಡಲನ್ನು ಬರಿದು ಮಾಡಬಾರದೆನ್ನುವ ಪ್ರಜ್ಞೆ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಷ್ಟೇ ಬಳಸಿಕೊಳ್ಳಬೇಕು ಎಂಬ ಎಚ್ಚರ ಬೇಕು. ನಮ್ಮ ಬಾಳು ಹಸನಾಗಬೇಕೆಂದರೆ, ಜೀವ ಹಸಿರಾಗಬೇಕೆಂದರೆ, ನಾವು ನಿಸರ್ಗದ ಆರಾಧಕರಾಗಬೇಕು. ಪ್ರಕೃತಿ ಪ್ರೇಮಿಗಳಾಗಬೇಕು. ಈ ಪ್ರಕೃತಿ ಎನ್ನುವುದು ಮೂಲಬಂಡವಾಳವಿದ್ದಂತೆ. ಮೂಲಬಂಡವಾಳಕ್ಕೆೆ ಕೈಹಾಕದೆ,  ಅದರ ಬಡ್ಡಿಿಯನ್ನಷ್ಟೇ ಬಳಸುವ, ನಮ್ಮ ಹಿರಿಯರು ನಮಗಾಗಿ ಉಳಿಸಿ ಹೋದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿ ಹೋಗಬೇಕು ಎಂಬ ಎಚ್ಚರದ ಪ್ರಜ್ಞೆ ನಮ್ಮದಾಗಬೇಕು.
 ಕೊಡಗು ಜಿಲ್ಲೆೆಯಲ್ಲಿ ಇತ್ತೀಚೆಗೆ ಸಂಭವಿಸಿದ ಜಲಪ್ರಳಯ ನಮ್ಮನ್ನು ಎಚ್ಚರಿಸಿದೆ. ಇಲ್ಲಿ ಹಲವಾರು ಗ್ರಾಾಮಗಳೇ ಭೂಗರ್ಭ ಸೇರಿವೆ, ಬದುಕು ಮುಳುಗಿ ಹೋಗಿದೆ. ಜನ ಕುಸಿದು ಕುಳಿತಿದ್ದಾಾರೆ. ಇದಕ್ಕೆೆಲ್ಲ ಅವ್ಯಾಾಹತ ಕಾಡಿನ ನಾಶ, ಕಂಡಕಂಡಲ್ಲಿ ರೆಸಾರ್ಟ್, ಮನೆ ನಿರ್ಮಾಣ, ಕಾಡನ್ನು ಬೋಳಿಸಿ ರಬ್ಬರ್, ಕಾಫಿ ತೋಟ ನಿರ್ಮಿಸಿದ್ದೇ ಕಾರಣ ಎನ್ನುವುದನ್ನು ಎಲ್ಲರೂ ಒಪ್ಪುತ್ತಾಾರೆ. 
ಪಶ್ಚಿಿಮಘಟ್ಟಗಳನ್ನು ಉಳಿಸಲು, ಕಸ್ತೂರಿರಂಗನ್ ಮತ್ತು ಅದಕ್ಕೂ ಮೊದಲು ಮಾಧವ್ ಗಾಡ್ಗೀಳ್ ವರದಿ ನೀಡಿದಾಗ ಅದನ್ನು ಬಾಯಿಗೆ ಬಂದಂತೆ ಟೀಕಿಸಿವಿರೋಧಿಸಿದವರು ಹಲವರು. ಇಂದು ಅವರ್ಯಾಾರೂ ಚಕಾರ ಎತ್ತುತ್ತಿಿಲ್ಲ. ಗಿರಿ-ತಪ್ಪಲಲ್ಲಿರುವ ಹಳ್ಳಿಿಗಳಿಗೆ ಇದರಿಂದ ತೊಂದರೆಯಾಗಲಿದೆ. ಅಭಿವೃದ್ಧಿಿಯಿಂದ ವಂಚಿತರಾಗುತ್ತೇವೆ ಎಂದೆಲ್ಲ ಹುಯಿಲೆಬ್ಬಿಿಸಿ ಆ ವರದಿಯ ಬಗ್ಗೆೆ ಸಮರ್ಪಕ ಚರ್ಚೆ ಮಾಡುವುದಿರಲಿ, ಚರ್ಚೆಗೂ ಅವಕಾಶವಾಗದಂತೆ ನೋಡಿಕೊಂಡವರು ನಮ್ಮಲ್ಲಿದ್ದಾಾರೆ. ಅದರಲ್ಲಿದ್ದ ಎಚ್ಚರಿಕೆಯ ಗಂಟೆಯನ್ನೂ ಗಮನಿಸದಷ್ಟು ತಾಳ್ಮೆೆ ಅವರಲ್ಲಿರಲಿಲ್ಲ. ಏಕೆಂದರೆ ಅವರಿಗೆ ಜನರ ದಿಕ್ಕು ತಪ್ಪಿಿಸಿಯಾದರೂ  ಹೋರಾಟ ಯಶಸ್ವಿಿಯಾಗಬೇಕಿತ್ತು.
ವಿಜ್ಞಾಾನಿಗಳು ಹೇಳಿದ್ದೆೆಲ್ಲ ಸುಳ್ಳು ಎಂದೇ ವಾದಿಸಿ ಅದು ಜಾರಿಯಾಗದಂತೆ ಮಾಡಿದರು. ಇದರಿಂದ ಅವರಿಗೇನೂ ನಷ್ಟವಾಗಲಿಲ್ಲ. ಇವರನು ನಂಬಿದವರು ಸರ್ವಸ್ವವನ್ನೂ ಕಳಕೊಂಡರು. ಕೊಡಗಿನಲ್ಲ್ಲ್‌ಿ ಮತ್ತು ಕೇರಳದಲ್ಲಿ ಯಾವಾಗ ಗುಡ್ಡಗಳೇ ಜಾರಿದವೋ, ಗಿರಿಕಂದರಗಳು ಬಾಯ್ಬಿಿಡಲಾರಂಭಿಸಿದವೋ, ರಸ್ತೆೆಗಳೆಲ್ಲ ಸೀಳಿ ಹೋದವೋ, ಸೇತುಗೆಳೆಲ್ಲ ಕೊಚ್ಚಿಿಹೋದವೋ, ಮಳೆಯ ರುದ್ರನರ್ತನಕ್ಕೆೆ ಹಳ್ಳಿಿಯೇ ಕಣ್ಮರೆಯಾಯಿತೋ ಆಗ ಮತ್ತೆೆ ಈ ಇಬ್ಬರು ವಿಜ್ಞಾಾನಿಗಳ ಶಿಫಾರಸು ನೆನೆಪಿಗೆ ಬರತೊಡಗಿದೆ.
ಕೊಡಗಿನಲ್ಲಿ ಅರಣ್ಯ ಇಲಾಖೆಯ ವಶದ ಜಾಗಕ್ಕಿಿಂತ ಕಂದಾಯ ಭೂಮಿಗಳೇ ಹೆಚ್ಚು. ಇದನ್ನೆೆಲ್ಲ ವಾಣಿಜ್ಯ ಉದೇಶಕ್ಕೆೆ ಪರಿವರ್ತಿಸುವ ಕೆಲಸ ರಾಕೆಟ್ ವೇಗದಲ್ಲಿ ನಡೆದಿದೆ. ಘಟ್ಟ- ಬೆಟ್ಟಗಳನ್ನು ಕೊರೆದು ಮನೆ ನಿರ್ಮಿಸುವುದೇ ನಮ್ಮ ಗುರಿಯಾಗಿದೆ. ಜೆಸಿಬಿ ಬಂದ ಮೇಲಂತೂ ಅರ್ಧ ಗಂಟೆಯಲ್ಲಿಎಂತಹ ಗುಡ್ಡವನ್ನಾಾದರೂ ಕೊರೆದು ಸಮತಟ್ಟು ಅಥವಾ ರಸ್ತೆೆ ಮಾಡಲಾಗುತ್ತಿಿದೆ. ಪಾರಂಪರಿಕ ಕಾಡು ನೆಲಸಮ ಮಾಡಿ ಬೃಹದಾಕಾರದ ಮರಗಳನ್ನು ಕತ್ತರಿಸಿದ ಮೇಲೆ ಗುಡ್ಡವೆಲ್ಲ ಬೋಳಾಗಿದೆ.  ಗುಡ್ಡದ ಗರ್ಭದಲ್ಲಿ ಹಿಡಿಸಲಾರದಷ್ಟು ನೀರು ತುಂಬುತ್ತಿಿದೆ. ಇದರಿಂದ ಗುಡ್ಡ ಜಾರುತ್ತಿಿದೆ.
ನೆಲದ ಒಡಲಾಳದ ಕೂಗನ್ನು ಕೇಳಿಸಿಕೊಳ್ಳದೆ, ಕೇಳಿಸಿದರೂ ಅದಕ್ಕೆೆ ಕಿವಿಗೊಡದೆ ನಮ್ಮತನವನ್ನೇ ಮುಂದುವರೆಸಿದ್ದರ ಫಲ ಇಂದು ಕಾಣುತ್ತಿಿದೆ. ಪೂರ್ವಜರು  ಮನೆ ಕಟ್ಟುವಾಗ ಪ್ರತಿಯೊಂದನ್ನು ಗಮನಿಸಯೇ ನಿರ್ಮಿಸುತ್ತಿಿದ್ದರು. ಅವರು ಗುಡ್ಡ ಬಗೆಯಲಿಲ್ಲ, ಕಾಡು ಕಡಿಯಲಿಲ್ಲ. ಇದರಿಂದ ಬೇಸಾಯಕ್ಕೆೆ, ಬಳಕೆಗೆ ವರ್ಷವಿಡೀ ನೀರು ಸಿಗುತ್ತಿಿತ್ತು. ಆದರೆ ನಾವು ಅಭಿವೃದ್ಧಿಿಯ ಹುಚ್ಚಿಿನಿಂದ ಗುಡ್ಡದ ಮೇಲೆ ಭವ್ಯ ಮನೆ ನಿರ್ಮಿಸುತ್ತಿಿದ್ದೇವೆ, ರೆಸಾರ್ಟ್ ನಿರ್ಮಿಸಿ ವ್ಯಾಾಪಾರೀಕರಣ ಶುರು ಮಾಡಿದ್ದೇವೆ. ಪ್ರವಾಸೋದ್ಯಮವನ್ನು ವಾಣಿಜ್ಯೀಕರಣಗೊಳಿಸಿ ಹಣ ಮಾಡುವುದನ್ನೇ ದಂಧೆಯನ್ನಾಾಗಿಸಿಕೊಂಡಿದ್ದೇವೆ. ಭೌಗೋಳಿಕ ಸೂಕ್ಷ್ಮತೆಯ ಅರಿವಿಲ್ಲದಂತೆ ವರ್ತಿಸಿದೆವು. ಕಂಡಲ್ಲೆೆಲ್ಲ ರಸ್ತೆೆ ಮಾಡಿದೆವು. ಇದಕ್ಕೆೆಲ್ಲ ಇಂಜಿನೀಯರ್‌ಗಳು ಹೇಳಿದ್ದೇ ಸರಿ ಎಂದು ತಲೆತೂಗಿದೆವು. ಪರಿಸರ ಜ್ಞಾಾನವಿದ್ದ ಹಳ್ಳಿಿಗರ ಮಾತನ್ನೂ ಯಾರೂ ಕೇಳಲಿಲ್ಲ. 
 ಒಂದು ಸಮೀಕ್ಷೆ ಪ್ರಕಾರ, ಕೊಡಗಿನಲ್ಲಿ 2005ರಿಂದ 2015ರವರೆಗೆ ಸುಮಾರು 2,800 ಎಕರೆ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಾಗಿ ಪರಿವರ್ತಿಸಲಾಗಿದೆ. ಇಲ್ಲಿ ರೆಸಾರ್ಟ್‌ಗಳು, ಮೋಜಿನ ತಾಣಗಳು ತಲೆಎತ್ತಿಿವೆ. ಇದಕ್ಕೂ ಹಿಂದೆ ಕೇರಳದಿಂದ ಬಂದವರು ವಾಣಿಜ್ಯ ಬೆಳೆಯಾದ ರಬ್ಬರ್ ತೋಟಕ್ಕಾಾಗಿ ಸುಮಾರು 9,06,440 ಹೆಕ್ಟೇರ್ ಭೂಮಿಯನ್ನು ಸವರಿ ಹಾಕಿದ್ದಾಾರೆ. ಈ ಪರಿ ಅರಣ್ಯನಾಶವಾದರೆ ಯಾವ ನಾಡು ಉಳಿದೀತು. ಇದರ ಜೊತೆಗೆ ಪ್ಲಾಾಂಟೇಶನ್ ಬೆಳೆಸಿ ನೀರಿಂಗದಂತೆ ಮಾಡಲಾಗಿದೆ.
ಕೊಡಗಿನಲ್ಲಿ ಶೇ. 18ರಷ್ಟು ಮಾತ್ರ ಅರಣ್ಯ ಇದೆ ಎಂಬ ವರದಿ ಬಂದಿದೆ. ಎಷ್ಟೇ ಗಂಭೀರ ಎಚ್ಚರಿಕೆಗಳು ಬಂದರೂ ಅದನ್ನು ಅಭಿವೃದ್ಧಿಿಯ ಗುಂಗಿನಲ್ಲಿರುವ ನಾವು ಗಮನಿಸುತ್ತಿಿಲ್ಲ. ಪಶ್ಚಿಿಮಘಟ್ಟವನ್ನು ಸರ್ವನಾಶ ಮಾಡಲೆಂದೇ ಸನ್ನದ್ಧರಾಗಿದ್ದೇವೆ. ಪ್ರವಾಹವನ್ನು ಸಹಿಕೊಳ್ಳಲಾಗದ ಮಟ್ಟದಲ್ಲಿ ಅರಣ್ಯನಾಶ, ಭೂ ನಾಶ ನಡೆಯುತ್ತಿಿದೆ. ವಿಜ್ಞಾಾನಿಗಳು ಹೇಳಿದ ಪ್ರಕಾರ, ಕೊಡಗಿನಲ್ಲಿ ಅತಿ ಹೆಚ್ಚು ಕಾಡು ನಾಶವಾದಲ್ಲೆೆಲ್ಲ ಭೀಕರ ಭೂಕುಸಿತ ಜಲಪ್ರವಾಹ ಸಂಭವಿಸಿದೆ.
ಕಸ್ತೂರಿರಂಗನ್ ಈ ಬಗ್ಗೆೆ ಎಚ್ಚರಿಸಿದರೆ ಯಾರೂ ನಂಬಲಿಲ್ಲ. ಹಾಗಾಗಿ ಮತ್ತೆೆ ಅವರೇ ನೆನೆಪಾಗುತ್ತಿಿದ್ದಾಾರೆ. ಸ್ವತಃ ಕೇರಳ ಸರಕಾರವೇ ಈ ವರದಿಯನ್ನು ಸಾರಾಸಗಟಾಗಿ ನಿರಾಕರಿಸಿದೆ. ನಮ್ಮಲ್ಲೂ ವರದಿ ಬಗ್ಗೆೆ ಅರಿಯದೆ ಹೋರಾಟವನ್ನೇ ನಡೆಸಿದರು. ಕೊನೆಗೂ ಅದು ಜಾರಿಯಾಗದಂತೆ ಮಾಡುವಲ್ಲಿ ಯಶಸ್ವಿಿಯಾಗಿದ್ದಾಾರೆ.  ಎಲ್ಲಿಯವರೆಗೆ  ಮುಂದಿನ ತಲೆಮಾರು, ನದಿ, ಕೊಳ್ಳ, ಬೆಟ್ಟ, ಗುಡ್ಡಗಳ ಅರಿವಿಲ್ಲದೆ ಎಲ್ಲವನ್ನೂ ಅಭಿವೃದ್ಧಿಿ ಮತ್ತು ನಗರೀಕರಣದ  ಕಣ್ಣಿಿನಿಂದಲೇ ಕಾಣುತ್ತೇವೆಯೋ, ಮಾಫಿಯಾಗಳಿಗೆ ಮಣೆ ಹಾಕುತ್ತೇವೆಯೋ, ಇಂಜಿನೀಯರ್‌ಗಳು ಹೇಳಿದ್ದೇ, ಮಾಡಿದ್ದೇ ಸರಿ ಎಂದು ತಿಳಿಯುತ್ತೇವೆಯೋ ಅಲ್ಲಿಯವರೆಗೆ ಇವೆಲ್ಲ ನಡೆಯುತ್ತಲೇ ಇರುತ್ತವೆ.
ಕೊಡಗಿನಲ್ಲಿ ಆಗಿದ್ದು, ಈಗ ಸಕಲೇಶಪುರದಲ್ಲಿ ಆಗುತ್ತಿಿದೆ. ನಾಳೆ ಪಕ್ಕದ ಜಿಲ್ಲೆೆಗಳಿಗೆ, ರಾಜ್ಯಗಳಿಗೆ ಬರಬಹುದು. ಆಗ ಮತ್ತೆೆ ಕಸ್ತೂರಿರಂಗನ್ ಅವರೇ ನೆನೆಪಾಗುತ್ತಾಾರೆ. ಏಕೆಂದರೆ ಅವರು ಹೇಳಿದ್ದು ಸಾರ್ವಕಾಲಿಕ ಸತ್ಯ ಎನ್ನುವುದು ಗೊತ್ತಾಾಗುತ್ತಿಿದೆ.

published on 22 aug 2018

Saturday, 11 August 2018

ಸದಾ ನೆನೆಪಿನಲ್ಲುಳಿವ ‘ದಶಾನನ ಸ್ವಪ್ನಸಿದ್ಧಿಿ’  



ಜಿಲ್ಲಾಾ ಬ್ರಾಾಹ್ಮಣ ಮಹಾಸಭಾ ಶತಮಾನೋತ್ಸವ ನಿಮಿತ್ತ ಮೊನ್ನೆೆ ಕುವೆಂಪುರಂಗಮಂದಿರದಲ್ಲಿ ‘ದಶಾನನ ಸ್ವಪ್ನಸಿದ್ಧಿಿ’ ಎಂಬ ನಾಟಕವನ್ನು ಏರ್ಪಡಿಸಿತ್ತು. ಕುವೆಂಪು ಮಹಾಕಾವ್ಯದ ಈ ತುಣುಕನ್ನು ’ದಶಾನನ ಸ್ವಪ್ನಸಿದ್ಧಿಿ’ ಎಂಬ ಹೆಸರಿನಲ್ಲಿ ರಂಗದ  ಮೇಲೆ ಬಹಳ ಅಚ್ಚುಕಟ್ಟಾಾಗಿ ತಂದ ಹಿರಿಮೆ ಉಡುಪಿ ಜಿಲ್ಲೆೆಯ ಮುದ್ರಾಾಡಿಯ ’ನಮ ತುಳುವೆರ್’ ಕಲಾ ಸಂಘಟನೆಯವರದ್ದು. ಒಂದರ್ಥದಲ್ಲಿ ಈ ನಾಟಕವನ್ನು ಏಕವ್ಯಕ್ತಿಿ ಪ್ರದರ್ಶನವೆಂದರೂ ತಪ್ಪಾಾಗಲಾರದು





ಮಹಾಕಾವ್ಯಗಳಲ್ಲಿ ಒಂದಾದ ವಾಲ್ಮೀಕಿ ರಾಮಾಯಣ ಕಾಲಕಾಲಕ್ಕೆೆ ಅನುಗುಣವಾಗಿ, ಮಹಾನ್ ಕವಿ-ಸಾಹಿತಿಗಳ ಕುಂಚದಲ್ಲಿ ತೆರೆದುಕೊಂಡಿರುವುದನ್ನು ನಾವು ಗಮನಿಸಬಹುದು. ಜೈನ-ಬೌದ್ಧ ರಾಮಾಯಣಗಳಂತೂ ವಾಲ್ಮೀಕಿ ರಾಮಾಯಣಕ್ಕಿಿಂತ ತೀರಾ ಭಿನ್ನವಾಗಿ, ವೈರುಧ್ಯವಾಗಿ ತೆರೆದುಕೊಂಡಿವೆ. ಪ್ರಾಾಯಶಃ ಧರ್ಮ ಸಂಘರ್ಷ ನಡೆಯುತ್ತಿಿದ್ದ ಆ ಕಾಲಕ್ಕೆೆ ತಮ್ಮ ತಮ್ಮ ಧರ್ಮದ ಉಳಿವಿಗಾಗಿ, ಅಸ್ತಿಿತ್ವಕ್ಕಾಾಗಿ ಅನ್ಯ ಧರ್ಮವನ್ನು ತೆಗಳುವುದು ಅವರಿಗೆ ಅನಿವಾರ್ಯವಾಗಿತ್ತೇನೋ.....?
ಕಲಾಕೃತಿಯೊಂದನ್ನು ತಮಗೆ ಬೇಕಾದಂತೆ ಒಗ್ಗಿಿಸಿಕೊಳ್ಳುವುದು-ಬಗ್ಗಿಿಸಿಕೊಳ್ಳುವುದು, ಹಿಗ್ಗಿಿಸಿಕೊಳ್ಳುವುದು-ಕುಗ್ಗಿಿಸಿಕೊಳ್ಳುವುದು ಕವಿ-ಕಲಾವಿದ-ಸಾಹಿತಿಗಳಿಗಿರುವ ಸ್ವಾಾತಂತ್ರ್ಯವೆಂದೇ ಹೇಳಬೇಕು. ರಾಷ್ಟ್ರಕವಿ ಕುವೆಂಪು ಕೂಡ ಇದರಿಂದ ಹೊರತಲ್ಲ. ಮಹಾಛಂದಸ್ಸಿಿನಲ್ಲಿ ರಚಿತವಾದ ಅವರ ’ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಅನೇಕ ವಿನೂತನ ಮಾರ್ಪಾಟು-ಬೇರ್ಪಾಟುಗಳಾಗಿವೆ. ಯಾವುದೂ, ಯಾರೂ ಯಃಕಶ್ಚಿಿತ್   ಅಲ್ಲ ಎನ್ನುವ ಕವಿಯ ವಿಶ್ವಮಾನವ ಧೋರಣೆಯೇ ಇದಕ್ಕೆೆ ಕಾರಣವಿರಬಹುದು.
ಹೀಗಾಗಿಯೇ ರಸಋಷಿ ಕುವೆಂಪು ಅವರ ಮಹಾಕಾವ್ಯ ’ಶ್ರೀ ರಾಮಾಯಣದರ್ಶನಂ’ಲ್ಲಿ ಮಂಥರೆ, ಕೈಕೇಯಿ, ಊರ್ಮಿಳೆಯರಿಗೆ, ಶಂಬೂಕ, ವಾಲಿ, ರಾವಣರಿಗೆ ವಿಶಿಷ್ಟವಾದ ಸ್ಥಾಾನವಿದೆ. ಅವರ ರಾವಣನ ಪಾತ್ರಚಿತ್ರಣ ಅನೇಕ ಸಂದರ್ಭಗಳಲ್ಲಿ ಜೈನಕವಿ ನಾಗಚಂದ್ರನ ರಾವಣನನ್ನು ನೆನೆಪಿಸುವುದು ಮಾತ್ರ ಸುಳ್ಳಲ್ಲ. ಸೀತೆಯ ರೂಪಿಗೆ, ಕಣ್ಣ ಹೊಳಪಿಗೆ ಇಂದ್ರಿಿಯನಿಗ್ರಹ ಕಳೆದುಕೊಂಡ ರಾವಣನಿಗೆ ಸೀತೆಯನ್ನು ಕುರಿತಾಗಿ ಇರುವ ಸೆಳೆತ-ಎಳೆತಗಳು, ಆದರೂ ಆಕೆ ಒಲಿದು ಬಂದಾಗಲಷ್ಟೇ ಅವಳನ್ನು ಸೇರಬೇಕು ಎನ್ನುವ ಉದಾತ್ತ ನಿಲುವಿಗೆ ಬದ್ಧನಾಗುವ ರಾವಣನಿಗೆ ಸೀತೆ ಕನಸಾಗಿ ಕಾಣುವುದು ಹೀಗೆ:
ಜಿಲ್ಲಾಾ ಬ್ರಾಾಹ್ಮಣ ಮಹಾಸಭಾ ಶತಮಾನೋತ್ಸವ ನಿಮಿತ್ತ ಮೊನ್ನೆೆ ಕುವೆಂಪುರಂಗಮಂದಿರದಲ್ಲಿ ‘ದಶಾನನ ಸ್ವಪ್ನಸಿದ್ಧಿಿ’ ಎಂಬ ನಾಟಕವನ್ನು ಏರ್ಪಡಿಸಿತ್ತು. ಕುವೆಂಪು ಮಹಾಕಾವ್ಯದ ಈ ತುಣುಕನ್ನು ’ದಶಾನನ ಸ್ವಪ್ನಸಿದ್ಧಿಿ’ ಎಂಬ ಹೆಸರಿನಲ್ಲಿ ರಂಗದ  ಮೇಲೆ ಬಹಳ ಅಚ್ಚುಕಟ್ಟಾಾಗಿ ತಂದ ಹಿರಿಮೆ ಉಡುಪಿ ಜಿಲ್ಲೆೆಯ ಮುದ್ರಾಾಡಿಯ ’ನಮ ತುಳುವೆರ್’ ಕಲಾ ಸಂಘಟನೆಯವರದ್ದು. ಒಂದರ್ಥದಲ್ಲಿ ಈ ನಾಟಕವನ್ನು ಏಕವ್ಯಕ್ತಿಿ ಪ್ರದರ್ಶನವೆಂದರೂ ತಪ್ಪಾಾಗಲಾರದು.
ನಮ್ಮ ಈಡೇರದ ಬಯಕೆಗಳ ಪೂರೈಕೆಯೇ ಕನಸು - ಎನ್ನುವ ವೈದ್ಯವಿಜ್ಞಾಾನವನ್ನು ಪುಷ್ಠೀಕರಿಸುವ ರೀತಿಯಲ್ಲಿ ಈ ನಾಟಕದಲ್ಲಿ  ರಾವಣನ ಕನಸು ತೆರೆದುಕೊಳ್ಳುತ್ತದೆ. ವಾಸ್ತವದಲ್ಲಿ ಈಡೇರದ ಸೀತೆಯ ಕುರಿತಾದ ಬಯಕೆಗಳು ಆಂದರೆ ಆಕೆಯನ್ನು ಬಿಗಿದಪ್ಪಿಿಕೊಳ್ಳುವ, ತುಟಿಗೆ ತುಟಿಯೊತ್ತುವ ರಾವಣನ ಬಯಕೆಗಳೆಲ್ಲ ಸ್ವಪ್ನದಲ್ಲಿ ಈಡೇರುತ್ತದೆ. ಇದು ಈಡೇರುವುದು ಮಾತ್ರ ತೀರ ಭಿನ್ನವಾಗಿ. ಯುದ್ಧದಲ್ಲಿ ರಾವಣ ಸೋತು ಸಾವನ್ನಪ್ಪುವುದು, ರಾವಣ ಅಂಶ ಸೀತೆಯ ಗರ್ಭದಲ್ಲಿ ಕುಶ-ಲವರಾಗಿ ಜನ್ಮ ತಳೆಯುವುದು, ಸೀತೆ ಆ ಮಕ್ಕಳನ್ನು ತೆಗೆದಪ್ಪಿಿಕೊಳ್ಳುವುದು, ಮುದ್ದಾಾಡುವುದು.
ಹಾಗೆಂದ ಮಾತ್ರಕ್ಕೆೆ ನಿದ್ದೆೆ ತಿಳಿದೆದ್ದ ರಾವಣ ಇದರಿಂದ ನಿರಾಶನಾಗುವುದಿಲ್ಲ. ಪುಳಕಗೊಳ್ಳುತ್ತಾಾನೆ; ರೋಮಾಂಚಿತನಾಗುತ್ತಾಾನೆ. ಸನಿಹದಲ್ಲಿದ್ದ ಮಡದಿ ಮಂಡೋದರಿಗೆ ಕನಸಿನ ಮರ್ಮವನ್ನು ಅರುಹುತ್ತಾಾನೆ. ಕಲಕಿ ಹೋಗಿದ್ದ ತನ್ನ ಮನಸ್ಸನ್ನು ತಿಳಿಗೊಳಿಸಿದ ಸೀತೆಯನ್ನು ಮನದಣಿಯೆ ಕೊಂಡಾಡುತ್ತಾಾನೆ. (ಕವಿ ನಾಗಚಂದ್ರನ ’ಉದಾತ್ತನೊಳ್ ಪುಟ್ಟದಲ್ತೆೆ ನೀಲೀರಾಗಂ)
 ನಾಲ್ಕು ಜನ ಸೂತ್ರಧಾರರು ಕಥೆಯ ಹಿನ್ನೆೆಲೆ-ಮುನ್ನೆೆಲೆಯನ್ನು ರಂಗದ ಮೇಲೆ ಅತ್ಯಾಾಕರ್ಷಕವಾಗಿ ತೆರೆದಿಡುತ್ತಾಾರೆ. ಮಂಡೋದರಿಯನ್ನು ಹೊರತುಪಡಿಸಿದರೆ,  ಉಳಿದಂತೆ ಸೀತೆ ಕೂಡ ಇಲ್ಲಿ ಕಾಣಿಸಿಕೊಳ್ಳುವುದು ಸ್ವಪ್ನದಲ್ಲಿಯೇ. ನೆರಳು-ಬೆಳಕಿನ ವಿನ್ಯಾಾಸದಡಿಯಲ್ಲಿ ರಚಿತವಾದ ರಂಗಸಜ್ಜಿಿಕೆ ನಿಜಕ್ಕೂ ಕಣ್ಮನ ಸೆಳೆಯುವಂತಿತ್ತು. ಕುವೆಂಪು ಪಾಂಡಿತ್ಯ-ಪ್ರತಿಭೆಯ ಪ್ರಗಲ್ಭ ಭಾಷೆಯನ್ನು ಎಲ್ಲ ಸಾಮಾನ್ಯ ಕಲಾವಿದರೂ ಲೀಲಾಜಾಲವಾಗಿ ತೆರೆದಿಟ್ಟದ್ದು ಸಾಮಾನ್ಯ ಸಂಗತಿಯೇನಲ್ಲ.
ನಾಟಕದ ಮುಖ್ಯ ಫೂಮಿಕೆಯಲ್ಲಿ ಕಾಣಿಸಿಕೊಂಡ ರಾವಣ ಪಾತ್ರಧಾರಿ ಸುಕುಮಾರ್ ಮೋಹನ್ ಅವರ ಆಳೆತ್ತರದ ನಿಲುವು, ಕಂಚಿನ ಕಂಠ ಆ ಪಾತ್ರಕ್ಕೆೆ ಹೆಚ್ಚಿಿನ ಮೆರುಗನ್ನು ತಂದಿತ್ತುದು  ಅತಿಶಯವೇನಲ್ಲ. ಉಳಿದಂತೆ ಲಂಕಾಲಕ್ಷ್ನೀ ಲಂಕಿಣಿಯ ವಿನೂತನ ವೇಷಭೂಷಣದಲ್ಲಿ ಮಿಂಚಿದ ಸುಧೀಂದ್ರ ಮೋಹನ್, ಮಂಡೋದರಿಯಾಗಿ ವಾಣಿ ಸುಕುಮಾರ್, ಸುಗಂಧಿ ಉಮೇಶ್, ಕೋಲ್ಮಿಿಂಚಿನಂತೆ ಕಾಣಿಸಿಕೊಳ್ಳುವ ಸೀತೆ, ಕೌಪೀನಧಾರಿ ವಟು-ಹೀಗೆ ಪ್ರತಿಯೊಬ್ಬರು ತಂತಮ್ಮ ಕಲಾಸೇವೆಯಲ್ಲಿ ಸೈ ಎನ್ನಿಿಸಿಕೊಂಡರು.
ಸುಮಾರು ಒಂದೂವರೆ ಗಂಟೆಗಳ ಈ ನಾಟಕ ನೋಡುಗರನ್ನು ಹಿಡಿದಿಡುವಲ್ಲಿ ಸಫಲವಾಯಿತು. ಅತಿ ಕಡಿಮೆ ಕಲಾವಿದರನ್ನು ಬಳಸಿ, ಸದಾ ನೆನೆಪಿನಲ್ಲಿರುವಂತೆ ನಾಟಕ ಪ್ರದರ್ಶಿಸಲ್ಪಟ್ಟಿಿತು.
published on Aug 8-2018
................................. 


ಯುವರಾಜಕೀಯ ಶಕ್ತಿಿಗೆ ಆದ್ಯತೆ ಸಿಗಲಿ


ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಯುವ ಹೊಸ ಮುಖಗಳಿಗೆ ಆದ್ಯತೆ ಕೊಡಬೇಕಿದೆ. ಪಾಲಿಕೆಯಲ್ಲಿ ಜನಪರ ಕೆಲಸ ಮಾಡಲು ಮತ್ತು ಸಾವ
ಜನಿಕ ಸಮಸ್ಯೆೆಗಳನ್ನು ಪ್ರಸ್ತಾಾಪಿಸಲು ಹಾಗೂ ಅದನ್ನು ಪರಿಹರಿಸಲು, ಎಲ್ಲಕ್ಕಿಿಂತ ಮುಖ್ಯವಾಗಿ ಭ್ರಷ್ಟಾಾಚಾರವನ್ನು ಕಿತ್ತೊೊಗೆಯಲು ಹೋರಾಡುವಂತಹ ಯುವಕರನ್ನು ಪಕ್ಷಗಳು ಪತ್ತೆೆ ಮಾಡಿ ಅವರಿಗೆ ಟಿಕೆಟ್ ಕೊಡುವ ಕೆಲಸವಾಗಬೇಕಿದೆ. ಹಣ, ಜಾತಿ, ಧರ್ಮವನ್ನು ಗಮನಿಸದೆ ಪಕ್ಷಕ್ಕಾಾಗಿ ಮತ್ತು ಜನಹಿತಕ್ಕಾಾಗಿ ದುಡಿದವರನ್ನು, ದುಡಿಯುತ್ತಿಿರುವವರನ್ನು ಪಕ್ಷಗಳು ಗುರುತಿಸಿ ಹೆಚ್ಚಿಿನ ಸಂಖ್ಯೆೆಯಲ್ಲಿ ಯುವಕರ ರಾಜಕೀಯ ಪ್ರವೇಶಕ್ಕೆೆ  ಅನುವು ಮಾಡಿಕೊಡಬೇಕಿದೆ.



ರಾಜಕೀಯದಲ್ಲಿ ಯುವಕರ ಪಾಲ್ಗೊೊಳ್ಳುವಿಕೆ ಹೆಚ್ಚಬೇಕು ಎನ್ನುವುದು ಎಲ್ಲ ಪಕ್ಷಗಳ ಕರೆಯಾಗಿದೆ. ಆ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ರಾಜಕೀಯಕ್ಕೆೆ ಹೆಚ್ಚಿಿನ ಸಂಖ್ಯೆೆಯಲ್ಲಿ ಯುವಜನತೆ ಪಾದಾರ್ಪಣೆ ಮಾಡುತ್ತಿಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆ ಘೋಷಣೆಯಾಗುತ್ತಿಿದ್ದಂತೆಯೇ ಕಣಕ್ಕಿಿಳಿಯಲು ಯುವಕರ ಪಡೆಯೇ ಬಹು ದಿನಗಳಿಂದ ಕಾದು ಕುಳಿತಿದೆ. ಈಗ ರಾಜಕೀಯ ಪಕ್ಷಗಳು ಇಂತಹ ಯುವಕರನ್ನು ಉಮೇದುವಾರರನ್ನಾಾಗಿ ಮಾಡುವ ಕೆಲಸಕ್ಕೆೆ ಆದ್ಯತೆ ಕೊಡಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಕೇಂದ್ರದಿಂದ ಹಿಡಿದು ಗ್ರಾಾಪಂವರೆಗೆ ಯುವಕರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾಾರೆ. ವಿದ್ಯಾಾರ್ಥಿ ದೆಸೆಯಲ್ಲೇ ವಿವಿಧ ಪಕ್ಷಗಳ ವಿದ್ಯಾಾರ್ಥಿ ಸಂಘಟನೆಗಳನ್ನು ಸೇರಿ ಕೆಲಸ ಮಾಡುವ ಮೂಲಕ ಕೆಲವು ರಾಜಕೀಯ ಪಟ್ಟುಗಳನ್ನು ಕಲಿಯುತ್ತಿಿದ್ದಾಾರೆ. ಪದವಿ ಅಥವಾ ಶಿಕ್ಷಣ ಮುಗಿದ ನಂತರ ರಾಜಕೀಯಕ್ಕೆೆ ಕಾಲಿಡುತ್ತಿಿದ್ದಾಾರೆ. ನಗರದಲ್ಲಿ ಇಂತಹ ಯುವಮುಖಗಳು ಹೆಚ್ಚುತ್ತಿಿರುವುದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಹಿರಿಯರ ಮಾರ್ಗದರ್ಶನದಲ್ಲಿ, ಅನುಭವಿಕರ ನೆರವಿನಿಂದ ಯುವಕರು ರಾಜಕೀಯ ಕ್ಷೇತ್ರಕ್ಕೆೆ ಕಾಲಿಡುವುದು ಇಂದು ಅವಶ್ಯವಾಗಿದೆ. ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ  ಈಗ ಬಹುತೇಕ ಪಕ್ಷಗಳಿಗೆ ಯುವ ನಾಯಕರೇ ಅಧ್ಯಕ್ಷರಾಗಿದ್ದಾಾರೆ. ಇದರಿಂದಾಗಿ ಸುಮಾರು 5-6 ವರ್ಷದಿಂದ ಯುವಪಡೆ ರಾಜಕೀಯದಲ್ಲಿ ಕಂಡುಬರುತ್ತಿಿದೆ. ದೇಶದ ಹಿತದೃಷ್ಟಿಿಯಿಂದ ಇಂತಹವರ ಸಂಖ್ಯೆೆ ಹೆಚ್ಚಬೇಕಿದೆ.
ಪ್ರಜಾಪ್ರಭುತ್ವ, ಸಂವಿಧಾನ, ಸ್ವಾಾತಂತ್ರ್ಯ, ಕಾಯ್ದೆೆ, ಕಾನೂನು ಮತ್ತು ಇತರೆ ಮೂಲಭೂತ ವಿಷಯಗಳನ್ನು ಅರಿತು ರಾಜಕೀಯಕ್ಕೆೆ ಕಾಲಿಟ್ಟರೆ ಅಂತಹವರಿಗೆ ಬೇರೂರಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಕಷ್ಟ- ನಷ್ಟಗಳನ್ನು ಅರಿತು ಬಂದವರು , ಅದರಲ್ಲೂ ಗ್ರಾಾಮೀಣ ಜನರ ಸಂಕಷ್ಟಗಳನ್ನು ಅರಿತುಬಂದವರು ಇಂದು ರಾಜಕಿಯಕ್ಕೆೆ ಬೇಕಾಗಿದ್ದಾಾರೆ. ಸದ್ಯ ಇಂತಹ ಯುವ ರಾಜಕಾರಣಿಗಳು ಹೆಚ್ಚುತ್ತಿಿರುವುದು ದೇಶದ ಭವಿಷ್ಯದ ದೃಷ್ಟಿಿಯಿಂದ ಒಳ್ಳೆೆಯದು ಎಂದೇ ಹೇಳಬಹುದು. ಇಂತಹವರಿಂದ ಎಲ್ಲ ವರ್ಗದ ಸಮಸ್ಯೆೆ ಬಗೆಹರಿಯುವ ಸಾಧ್ಯತೆ ಹೆಚ್ಚಿಿರುತ್ತದೆ.
ಲೋಕಸಭೆ, ವಿಧಾನಸಭೆ ಮತ್ತು ಜಿಪಂ, ತಾಪಂ ಸಹಿತ ಸ್ಥಳೀಯ ಸಂಸ್ಥೆೆಗಳಲ್ಲಿ ಯುವಕರಿಗೆ ಆದ್ಯತೆ ಕೊಡಬೇಕೆನ್ನುವ ಕೂಗು ಚುನಾವಣೆ ಸಮಯದಲ್ಲಿ ಕೇಳಿಬರುತ್ತಿಿದೆ. ಅವರು ನಿರೀಕ್ಷಿಸಿದಷ್ಟು ಸಂಖ್ಯೆೆಯಲ್ಲಿ ಸ್ಥಾಾನ ಅಥವಾ ಸ್ಪರ್ಧೆಗೆ ಅವಕಾಶ ದೊರೆಯದಿದ್ದರೂ ಯಾವ ಪಕ್ಷದವರೂ ಯುವಕರನ್ನು ನಿರ್ಲಕ್ಷಿಸುತ್ತಿಿಲ್ಲ. ಸಾಕಷ್ಟು ಯುವಕರು ಒಂದು, ಎರಡು ಬಾರಿ ಆಯ್ಕೆೆಯಾದಾಗಲೇ ತಾವು ದೇಶದ ಉತ್ತಮ ಜನಪ್ರತಿನಿಧಿ ಆಗಬಲ್ಲೆೆವು ಎನ್ನುವುದನ್ನು ಸಾಬೀತು ಮಾಡುತ್ತಿಿದ್ದಾಾರೆ. ಸಚಿವ ಸಂಪುಟದಲ್ಲಿ ಸಚಿವರಾಗಿಯೂ ಮಿಂಚುತ್ತಿಿದ್ದಾಾರೆ.
ಈ ಹಿನ್ನೆೆಲೆಯಲ್ಲಿ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಪಾಲಿಕೆ ಚುನಾವಣೆಗೆ ಯುವಕರ ದಂಡೇ ಸ್ಪರ್ಧಿಸಲು ಕಾತರವಾಗಿದೆ. ಒಂದೊಂದು ವಾರ್ಡಿನಿಂದ ನಾಲ್ಕಾಾರು ಜನ ತಯಾರಾಗಿದ್ದಾಾರೆ. ಪಕ್ಷದ ಮುಖಂಡರಿಗೆ ಇವರನ್ನು ಸಮಾಧಾನಿಸಿ ಒಬ್ಬರಿಗೆ ಟಿಕೆಟ್ ಕೊಡುವ ಕೆಲಸ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.
ಪ್ರತಿ ಪಕ್ಷದವರೂ ಕೆಲವರು ಹಿರಿಯರನ್ನಿಿಟ್ಟುಕೊಂಡು ಹೆಚ್ಚಿಿನ ಯುವಕರಿಗೆ ಟಿಕೆಟ್ ಕೊಡುವುದು ಅನಿವಾರ್ಯ ಎನ್ನುವ ಸ್ಥಿಿತಿ ಬಂದೊದಗಿದೆ. ಏಕೆಂದರೆ ಅವರವರ ವಾರ್ಡಿನಲ್ಲಿ ಆ ಯುವಕರು ವಿವಿಧ ಸಂಘ, ಸಂಸ್ಥೆೆ, ಟ್ರಸ್‌ಟ್‌ ಮುಂತಾದುವುಗಳನ್ನು ಸ್ಥಾಾಪಿಸಿಕೊಂಡು ಅಥವಾ ಜನರ ಸಮಸ್ಯೆೆಗಳಿಗೆ ಧ್ವನಿಯಾಗಿ ಅದನ್ನು ಬಗೆಹರಿಸುವಲ್ಲಿ ಸತತ ಕೆಲಸ ಮಾಡುತ್ತಲೇ ಇದ್ದಾಾರೆ. ಅಂತಹವರ ಸಂಖ್ಯೆೆ ದೊಡ್ಡದಿದೆ.
ಪಾಲಿಕೆಯಲ್ಲಿ ಈ ಬಾರಿ ಯುವ ಹೊಸ ಮುಖಗಳಿಗೆ ಆದ್ಯತೆ ಕೊಡಬೇಕಿದೆ. ಪಾಲಿಕೆಯಲ್ಲಿ ಜನಪರ ಕೆಲಸ ಮಾಡಲು ಮತ್ತು ಸಾವ
ಜನಿಕ ಸಮಸ್ಯೆೆಗಳನ್ನು ಪ್ರಸ್ತಾಾಪಿಸಲು ಹಾಗೂ ಅದನ್ನು ಪರಿಹರಿಸಲು, ಎಲ್ಲಕ್ಕಿಿಂತ ಮುಖ್ಯವಾಗಿ ಭ್ರಷ್ಟಾಾಚಾರವನ್ನು ಕಿತ್ತೊೊಗೆಯಲು ಹೋರಾಡುವಂತಹ ಯುವಕರನ್ನು ಪಕ್ಷಗಳು ಪತ್ತೆೆ ಮಾಡಿ ಅವರಿಗೆ ಟಿಕೆಟ್ ಕೊಡುವ ಕೆಲಸವಾಗಬೇಕಿದೆ. ಹಣ, ಜಾತಿ, ಧರ್ಮವನ್ನು ಗಮನಿಸದೆ ಪಕ್ಷಕ್ಕಾಾಗಿ ಮತ್ತು ಜನಹಿತಕ್ಕಾಾಗಿ ದುಡಿದವರನ್ನು, ದುಡಿಯುತ್ತಿಿರುವವರನ್ನು ಪಕ್ಷಗಳು ಗುರುತಿಸಿ ಹೆಚ್ಚಿಿನ ಸಂಖ್ಯೆೆಯಲ್ಲಿ ಯುವಕರ ರಾಜಕೀಯ ಪ್ರವೇಶಕ್ಕೆೆ  ಅನುವು ಮಾಡಿಕೊಡಬೇಕಿದೆ.
published on 10th aug 18
/....................................