Tuesday, 20 February 2018

ಅಡಿಕೆುಂದ ಕ್ಯಾಾನ್ಸರ್: ಮತ್ತೆೆ ಬೆಳೆಗಾರ ತಲ್ಲಣ 



2017ರ ಡಿಸೆಂಬರ್ 22ರಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ನೀಡಿದದ ಉತ್ತರದಲ್ಲಿ  ಅಡಿಕೆಯಲ್ಲಿ ಕ್ಯಾಾನ್ಸರ್‌ಕಾರಕ ಅಂಶ"ದೆ. ಇದರ ನಿಷೇಧಕ್ಕೆೆ ಎಲ್ಲಾಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾಾರೆ. ಇದರಿಂದ 2011ರಲ್ಲಿ ಯುಪಿಎ ಸರ್ಕಾರ ಹೇಳಿದ್ದ ನಿಲು"ಗೆ ತಾನು ಬದ್ಧ ಎನ್ನುವುದನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಬೀತುಪಡಿಸಿದೆ. ಅಡಿಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟಿಗೆ ಯುಪಿಎ ಪ್ರಮಾಣ ಪತ್ರ ಸಲ್ಲಿಸಿದೆ ಎಂದು ಆರೋಪಿಸಿದ್ದ ಬಿಜೆಪಿ ಈಗ ಯುಪಿಎ ನಿಲುವೇ ಸರಿಎನ್ನುವುದನ್ನು ಸಮರ್ಥಿಕೊಂಡಂತಾಗಿದೆ.


ಭಾರತೀಯ ಸಂಸ್ಕೃತಿಯಲ್ಲಿ ಬಹಳ "ಂದಿನಿಂದಲೂ ಅಡಿಕೆಗೆ  "ಶಿಷ್ಟ ಸ್ಥಾಾನ"ದೆ. ವ್ಯಾಾವಹಾರಿಕ ಒಪ್ಪಂದ, ಶುಭ ಕಾರ್ಯಕ್ಕೆೆ "ೀಳ್ಯದೆಲೆ ಜೊತೆ ಅಡಿಕೆಗೆ ಮಾನ್ಯತೆ. ಮನೆಯಲ್ಲಿ ಶುಭ ಸಮಾರಂಭವಾದಾಗ ಎಲೆ ಮತ್ತು ಅಡಿಕೆಗೆ ಮಹತ್ವದ ಸ್ಥಾಾನ. ಜೊತೆಗೆ ತಾಂಬೂಲವಾಗಿಯೂ ಸ"್ಮುಲನ. ಒಟ್ಟಿಿನಲ್ಲಿ ಸಾ"ರಾರು ವರ್ಷಗಳ ಇತಿಹಾಸ ಅಡಿಕೆಗೆ ಇದೆ. ಆದರೆ ಕ್ಯಾಾನ್ಸರ್‌ಕಾರಕ ಅಂಶ"ದೆ ಎಂದು ಹೇಳುವ ಮೂಲಕ ಬೆಳೆಗಾರರಲ್ಲಿ ತಲ್ಲಣ ಮೂಡಿಸಲಾಗಿತ್ತು. ಈಗ ಮತ್ತೆೆ ಇದನ್ನೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪುನರುಚ್ಛರಿಸುವ ಮೂಲಕ ಬೆಳೆಗಾರ ಕಂಗೆಡುವಂತೆ ಮಾಡಿದೆ.
ಇಂತಹ ಅಡಿಕೆ ಬೆಳೆಗಾರನ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯಲ್ಲೂ "ಶಿಷ್ಟ ಪಾತ್ರವನ್ನು ವ"ಸುತ್ತಿಿದೆ. ಔಷಧೀಯ ಗುಣವನ್ನು ಹೊಂದಿದೆ. ಇದು ಕೆಲವೆಡೆ ಪಾರಂಪರಿಕ, ಸಾಂಪ್ರದಾುಕ ಬೆಳೆಯಾದರೆ, ಇತ್ತೀಚೆಗೆ ಇದನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಾಗಿ ಮಾಡಿಕೊಂಡು ಬಯಲುಸೀಮೆ ಪ್ರಾಾಂತ್ಯದಲ್ಲಿಯೂ ಬೆಳೆಯುತ್ತಿಿದ್ದಾಾರೆ. ಒಟ್ಟಿಿನಲ್ಲಿ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯ ಪ್ರಮುಖ ವಾಣಿಜ್ಯ ಬೆಳೆ ಎನ್ನಬಹುದು. ರಾಜ್ಯದ 22 ಜಿಲ್ಲೆೆಯಲ್ಲಿ 2.15 ಹೆಕ್ಟೇರ್‌ನಲ್ಲಿ ಇದನ್ನು ಬೆಳೆಯಲಾಗುತ್ತಿಿದೆ. ಉತ್ಪಾಾದನೆ 3.16 ಲಕ್ಷ ಟನ್‌ನ್ಟದೆ. ದೇಶದ ಅಡಿಕೆ ಉತ್ಪಾಾದನೆಯ ಶೇ. 47 ಭಾಗವನ್ನು ಕರ್ನಾಟಕವೊಂದೇ ಬೆಳೆಯುತ್ತಿಿದೆ. ಅಡಿಕೆ ಉತ್ಪಾಾದನೆ ಈಗ ಬೇಡಿಕೆಗಿಂತ ಹೆಚ್ಚಿಿದೆ.
2017ರ ಡಿಸೆಂಬರ್ 22ರಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ನೀಡಿದದ ಉತ್ತರದಲ್ಲಿ  ಅಡಿಕೆಯಲ್ಲಿ ಕ್ಯಾಾನ್ಸರ್‌ಕಾರಕ ಅಂಶ"ದೆ. ಇದರ ನಿಷೇಧಕ್ಕೆೆ ಎಲ್ಲಾಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ನೀಡಿದ್ದಾಾರೆ. ಇದರಿಂದ 2011ರಲ್ಲಿ ಯುಪಿಎ ಸರ್ಕಾರ ಹೇಳಿದ್ದ ನಿಲು"ಗೆ ತಾನು ಬದ್ಧ ಎನ್ನುವುದನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಬೀತುಪಡಿಸಿದೆ. ಅಡಿಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟಿಗೆ ಯುಪಿಎ ಪ್ರಮಾಣ ಪತ್ರ ಸಲ್ಲಿಸಿದೆ ಎಂದುಉ ಆರೋಪಿಸಿದ್ದ ಬಿಜೆಪಿ ಈಗ ಅದರ ನಿಲುವನ್ನೇ ಸಮರ್ಥಿಕೊಂಡಿದೆ.
ಡಿ.22ರಂದು ಅಡಕೆ ನಿಷೇಧಕ್ಕೆೆ ಸಂಬಂಧಿಸಿ ಸಾಂಸದ ಓಂಪ್ರಕಾಶ್ ಯಾದವ್ ಆರೋಗ್ಯ ಸಚಿವೆ ಅನುಪ್ರಿಿಯಾ ಪಟೇಲ್ ಅವರಿಗೆ ಪ್ರಶ್ನೆೆ ಕೇಳಿದ್ದರು. ಸಚಿವರು ನೀಡಿದ ಉತ್ತರ ಈಗ ಅಡಿಕೆ ಬೆಳೆಗಾರರನ್ನು ಆತಂಕಕ್ಕೆೆ ತಳ್ಳಿಿದೆ. ಅಡಿಕೆ ತಿನ್ನುವುದರಿಂದ ದವಡೆ ಮತ್ತು ವಸಡಿಗೆ ಸಂಬಂಧಿಸಿದ ಕ್ಯಾಾನ್ಸರ್ ಬರುತ್ತದೆ. ಆದ್ದರಿಂದ ಆಹಾರ ಸುರಕ್ಷಾ ಕಾಯ್ದೆೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಾಧಿಕಾರದ ಸೂಚನೆಯಂತೆ ಅಡಕೆ "ುಶ್ರಿತ ಗುಟ್ಕಾಾ, ಉತ್ಪಾಾದನೆ, ಮಾರಾಟ ಮತ್ತು ಸಂಗ್ರಹ ನಿಷೇಧಿಸಲಾಗಿದೆ ಎಂದು ಉತ್ತರ ಕೊಟ್ಟಿಿದ್ದಾಾರೆ.
 1990ರಲ್ಲಿ ಅಡಿಕೆಯ ಬೆಲೆ ಹೆಚ್ಚಾಾಗತೊಡಗಿದ್ದರಿಂದ ಇದರ ವ್ಯಾಾಪ್ತಿಿ ಹೆಚ್ಚಾಾಗುತ್ತ ಬಯಲುಸೀಮೆಯಲ್ಲೂ ಕೂಡ ವ್ಯಾಾಪಿಸಿತು. ಇದರ ಬೆಲೆ ಒಂದೊಮ್ಮೆೆ ಒಂದು ಕ್ವಿಿಂಟಾಲ್‌ಗೆ ಒಂದು ಲಕ್ಷದವರೆಗೆ ಹೋಗಿದ್ದು ನೆನಪಿರಬಹುದು. ಇಡೀ ಮಲೆನಾಡು ಅಡಿಕೆಯ ಮೇಲಿನ ಆರ್ಥಿಕತೆಯ ಮೇಲೆ ಎಲ್ಲಾಾ ವ"ವಾಟುಗಳು ನಿಂತಿವೆ ಎಂದರೆ ತಪ್ಪಾಾಗಲಾರದು. "ಜ್ಞಾಾನ, ತಂತ್ರಜ್ಞಾಾನ ಹೆಚ್ಚಾಾದ ಹಾಗೆ ರೈತರಿಗೆ ಉಚಿತ "ದ್ಯುತ್ ಕೊಟ್ಟಿಿದ್ದರಿಂದ ನೀರಿನ ಸೌಕರ‌್ಯಗಳನ್ನು ಮಾಡಿಕೊಂಡು ಸಣ್ಣ ಸಣ್ಣ ರೈತರು ಕೂಡ ಒಂದು ಎಕರೆ, ಅರ್ಧ ಎಕರೆ ಅಡಿಕೆ ತೋಟಗಳನ್ನು ಮಾಡಿಕೊಂಡಿದ್ದಾಾರೆ.
  ಇಂತಹ ಸಂದರ್ಭದಲ್ಲಿ ಹಠಾತ್ ಆಗಿ ಅಡಿಕೆ ಸಂಶೋಧನೆಗೆ ಒಳಪಟ್ಟು ಅದರಲ್ಲಿ "ಷ ಇದೆ, ಇದು ಕ್ಯಾಾನ್ಸರ್‌ಗೆ ಕಾರಣ ಎಂಬ "ಚಾರ ಬಂದಿರುವುದರಿಂದ ರೈತ ತನ್ನ ಮುಂದಿನ ಅಡಿಕೆಯ ಬೆಲೆಯ "ಚಾರದಲ್ಲಿ ಅಲ್ಲಿ ತನ್ನ ಜೀವನದ "ಚಾರದಲ್ಲಿ ಚಿಂತೆಗೊಳಗಾಗಿದ್ದಾಾನೆ.
ಈಗಾಗಲೇ ಈ "ಚಾರ ಕೋರ್ಟಿನಲ್ಲಿದೆ. ತೀರ್ಪು ಬರಬೇಕಿದೆ. ಇದಕ್ಕಾಾಗಿ ಅಡಿಕೆ ಬೆಳೆಗಾರರ ಒಕ್ಕೂಟ ಹೋರಾಡುತ್ತಿಿದೆ. "ಷ"ದ್ದರೆ ಎಂದೋ ಇದು ಬ್ಯಾಾನ್ ಆಗಿರುತ್ತಿಿತ್ತು. ಹಾಗೆಯೇ ಹೊರ ದೇಶಗಳಲ್ಲಿ ಅಡಿಕೆ ಬೆಳೆಯುತ್ತಾಾರೆ. ಅಲ್ಲಿಯೂ ನಿಷೇಧಿಸಲ್ಪಡುತ್ತಿಿತ್ತು.
ಅಡಿಕೆಯಲ್ಲಿ ಒಂದಿಷ್ಟು ಮತ್ತು ಬರಿಸುವ ರಾಸಾಯನಿಕಗಳಿವೆ. ಕೆಲವು ವರ್ಷಗಳ "ಂದೆ ಇದನ್ನು ವೈನ್ ಮಾಡಲು ಪ್ರಯತ್ನ ಮಾಡಿದ್ದರು. ಅಡಿಕೆ ಕೈಮಗ್ಗದ ಬಟ್ಟೆೆಗಳಿಗೆ ಬಣ್ಣ ಹಾಕಲು ಹೋಗುತ್ತಿಿತ್ತು ಎಂಬ "ಚಾರ"ದೆ.  ತ"ುಳುನಾಡಿನಲ್ಲಿ ಕೇವಲ ತಿನ್ನಲು ಕರ್ನಾಟಕದಿಂದ ಅಡಿಕೆಯನ್ನು ಒಯ್ಯುತ್ತಿಿದ್ದರು ಎಂಬ ಸಾಕ್ಷ್ಯಗಳಿವೆ. ಬಹುಶಃ ತ"ುಳುನಾಡೇ ಬಹು"ಂದೆ ಕರ್ನಾಟಕದ ಅಡಿಕೆಗೆ ಮಾರುಕಟ್ಟೆೆಯಾಗಿತ್ತು ಎಂದು ಹೇಳಬಹುದು. ಆದರೆ, ಅಡಿಕೆಗೆ ಅತ್ಯುತ್ತಮವಾದ ಧಾರಣೆ ಬರತೊಡಿಗದ್ದು ಹೇಗೆ ಎಂಬ ಪ್ರಶ್ನೆೆ ಹುಟ್ಟುತ್ತದೆ.
    ಹಠಾತ್ ಆಗಿ 1990ರಲ್ಲಿ ಅಡಿಕೆಯ ಧಾರಣೆ 10 ಸಾ"ರದಿಂದ 12ರವರೆಗೆ ಏರಿಬಿಟ್ಟಿಿತು. ಅಡಿಕೆ ಬೆಳೆಗಾರರಿಗೆ ಸ್ವರ್ಗ ಸಿಕ್ಕ ಹಾಗೆ ಆುತು. ಕಾರಣ, ಗುಟ್ಕಾಾ ಎಂಬ ಅಡಿಕೆಯ ವೈ"ಧ್ಯತೆಯ ಮಾರಾಟ.   ಇದರ ಅವತಾರ ಎಲ್ಲೆೆಡೆ ಕಾಣಿಸತೊಡಗಿತು.  ತದನಂತರ ತಾಲೂಕು ಮಟ್ಟದಲ್ಲಿ ಮಾರುಕಟ್ಟೆೆ ಪ್ರಾಾರಂಭವಾುತು. ಮ್ಯಾಾಮ್ಕೋೋಸ್ ಮತ್ತು ಕ್ಯಾಾಂಪ್ಕೋ ಎಂಬ ಎರಡು ಖಾಸಗಿ ಮಾರುಕಟ್ಟೆೆಗಳು ರೈತನನ್ನು ಎತ್ತಿಿ "ಡಿದವು. ಮ್ಯಾಾಮ್ಕೋೋಸ್ ಸಾಲವನ್ನು ಕೊಡಲೂ ಪ್ರಾಾರಂಭಿಸಿತು. ಇದರಿಂದ ಅಡಿಕೆ ರೈತ ಸ್ವಾಾವಲಂಬಿಯಾದ. 
ಗೋರಕ್‌ಸಿಂಗ್ ವರದಿಯಲ್ಲಿ ಅಡಕೆ ಬೆಳೆಯುವ ಪ್ರದೇಶದ "ಸ್ತರಣೆಗೆ ಅವಕಾಶ ಕೊಡಬಾರದು ಎಂದು ಹೇಳಿತ್ತು. ಇದರಿಂದ ಸಾಕಷ್ಟು ಪ್ರತಿಭಟನೆಗಳು ನಡೆದವಲ್ಲದೆ, ಈ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರ"ಸಿದ್ದವು. ಇದೇ ವೇಳೆ ಅಂದರೆ ಕಳೆದ ಲೋಕಸಭೆ ಚುನಾವಣೆ ವೇಳೆ ಅಡಿಕೆಕ್ಯಾಾನ್ಸರ್‌ಕಾರಕ ಎಂಬ "ಚಾರ ಪ್ರಚಾರಕ್ಕೆೆ ಬಂದಾಗ ತೀವ್ರ ಹೋರಾಟ ನಡೆದಿತ್ತು. ಇಂದಿನ ಪಧಾನಿ ನರೇಂದ್ರ ಮೋದಿ ಸಹ ಚಿಕ್ಕಮಗಳೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅಡಕೆ ನಿಷೇಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಯಾರಿಗೂ ಗೊತ್ತಾಾಗದಂತೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುವ ಮೂಲಕ ಗುಟ್ಟಾಾಗಿ ಅಡಕೆ ನಿಷೇಧಕ್ಕೆೆ ಕೇಂದ್ರ ಮುಂದಾಗಿದೆ.
    ಎಷ್ಟೋೋ ಬಾರಿ ಈ ಬಿಸಿ  ಬಂದು ಹೋಗಿದೆ. ಕ್ಯಾಾನ್ಸರ್ ಅಡಿಕೆುಂದ ಮಾತ್ರ ಬರುತ್ತದೆಯೋ ಅಥವಾ ಇಂದಿನ ದಿನದಲ್ಲಿ ಯಾವ ಆಹಾರದಿಂದ ಕ್ಯಾಾನ್ಸರ್ ಬರುವುದಿಲ್ಲ. ಗುಟ್ಕಾಾದಲ್ಲೂ ಕೂಡ ಯಾವುದೋ ಮಾದಕ ವಸ್ತು ಇಲ್ಲದೆ ಅದು ಇಷ್ಟು ಪ್ರಸಿದ್ಧಿಿಯಾಗಲು ಸಾಧ್ಯವೇ ಇಲ್ಲ. ಅದನ್ನು ಯಾಕೆ ನಿಷೇಧ ಮಾಡಲಿಲ್ಲ. ದೆಹಲಿಯ ಜವಾಹರಲಾಲ್ ನೆಹರೂ ""ಯ ಕ್ಯಾಾನ್ಸರ್ ಬಯಾಲಜಿ "ಭಾಗವು ಕ್ಯಾಾನ್ಸರ್‌ಕಾರಕ ಅಂಶ ಅಡಿಕೆಯಲ್ಲಿಲ್ಲ ಎಂದು ಹೇಳಿದೆ. ಆದರೂ ಮತ್ತೆೆ ಮತ್ತೆೆ ಈ "ಚಾರ ಚಾಲ್ತಿಿಗೆ ಬರುತ್ತಿಿರುವುದರಿಂದ ಅಡಿಕೆ ಬೆಳೆಗಾರ ನಿದ್ದೆೆಗೆಡುವಂತೆ ಆಗಿದೆ. 
Published on 19.2.1018
.......................................
   ಪಕ್ಷಾಂತರದಿಂದಲೇ ಹೆಸರು ಗಳಿಸಿದ ಆರ್‌ಎಂಎಂ
................................................




ಡಿಸಿಸಿ ಬ್ಯಾಾಂಕ್ ಅಧ್ಯಕ್ಷ ಮಂಜುನಾಥ ಗೌಡರಿಂದ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಲೆಕ್ಕಾಾಚಾರದಲ್ಲಿರುವ ಆ ಪಕ್ಷದ ಕೆಲವು ನಾಯಕರಿಗಂತೂ ಎಷ್ಟು ಖುಷಿಯಾಗಿದೆ ಎಂದರೆ ತೀರ್ಥಹಳ್ಳಿಿಯಲ್ಲಿ ಜೆಡಿಎಸ್ ಗೆದ್ದಷ್ಟೇ ಸಂಭ್ರಮಪಡುತ್ತಿಿದ್ದಾಾರೆ. ಶಾಸಕ ಕಿಮ್ಮನೆ ಮತ್ತೆೆ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದೊಡನೆಯೇ ಗೌಡರು ಜೆಡಿಎಸ್ ಕದ ತಟ್ಟಿಿ ಆ ಪಕ್ಷ ಸೇರಿ, ಟಿಕೆಟನ್ನೂ ತಂದುಕೊಂಡು ಪ್ರಚಾರ ಆರಂಭಿಸಿದ್ದಾಾರೆ. ಚುನಾವಣೆ ಮೂಲಕ ಮಾತ್ರ ಜನಸೇವೆ ಸಾಧ್ಯ ಎಂದು ಅವರು ಅರಿತಂತಿದೆ. ಕೆಲವರು ಸಾಧನೆಯಿಂದ ಹೆಸರುಗಳಿಸುತ್ತಾಾರೆ. ಆದರೆ, ಪಕ್ಷಾಂತರದಿಂದಲೇ ಹೆಸರು ಗಳಿಸಲೂಬಹುದು ಎನ್ನುವುದನ್ನು ಆರ್‌ಎಂಎಂ ತೋರಿಸಿಕೊಟ್ಟಿಿದ್ದಾಾರೆ. 


ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರನಾಗುತ್ತನೆ. ಮಿತ್ರನೂ ಶತ್ರುವಾಗುತ್ತಾಾನೆ. ಇದಕ್ಕೆೆಲ್ಲ ಅಧಿಕಾರದ ಲಾಲಸೆಯೇ ಪ್ರಮುಖವಾಗುತ್ತದೆ.  ಇದನ್ನು ಈಗ ತೀರ್ಥಹಳ್ಳಿಿ ಕ್ಷೇತ್ರದ ರಾಜಕೀಯದಲ್ಲಿ ಕಾಣಬಹುದಾಗಿದೆ. ಅಲ್ಲಿನ ಶಾಸಕ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಾಕರ್ ಮತ್ತು ಅಪೆಕ್‌ಸ್‌ ಬ್ಯಾಾಂಕ್ ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಾಂಕ್ ಹಾಲಿ ಅಧ್ಯಕ್ಷ ಆರ್. ಎಂ ಮಂಜುನಾಥ ಗೌಡ ಆಪ್ತರಾಗಿ ಈಗ ಮತ್ತೆೆ ಪರಸ್ಪರ ತೊಡೆತಟ್ಟುತ್ತಿಿದ್ದಾಾರೆ.
ಮಂಜುನಾಥ ಗೌಡ ಅವರು ಮೂಲತಃ ಜನತಾ ಪಕ್ಷದವರಾದರೂ ಈ ಹಿಂದೆ ಕಾಂಗ್ರೆೆಸ್‌ನಲ್ಲಿದ್ದರು. ಆದರೆ ಬಿ ವೈ ರಾಘವೇಂದ್ರ ಲೋಕಸಭಾ ಸದಸ್ಯರಾದ ಬಳಿಕ ಅವರೊಂದಿಗೆ ಬಿಜೆಪಿ ಸೇರಿದ್ದರು. ಅಲ್ಲಿ ಯಡಿಯೂರಪ್ಪ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿಿದ್ದರು. ಯಡಿಯೂರಪ್ಪ ಕೆಜೆಪಿ ಕಟ್ಟಿಿದಾಗ ಪ್ರಮುಖ ನಾಯಕರಾಗಿ ಅವರೊಟ್ಟಿಿಗೆ ಕೆಲಸ ಮಾಡಿ, ತೀರ್ಥಹಳ್ಳಿಿ ಕ್ಷೇತ್ರದಿಂದ ಕಣಕ್ಕಿಿಳಿದು ಕಿಮ್ಮನೆ ವಿರುದ್ಧ 1300 ಮತಗಳಿಂದ ಪರಾಭವಗೊಂಡಿದ್ದರು. ಇದಾದ ಬಳಿಕ  ಮತ್ತೆೆ ಯಡಿಯೂರಪ್ಪ ಬಿಜೆಪಿ ಸೇರಿದಾಗ ರಾಜಕೀಯದಿಂದ ದೂರವಾಗಿ  ಕೇವಲ ಸಹಕಾರಿ ಕ್ಷೇತ್ರದಲ್ಲಿ ಮತ್ತೆೆ ರಾರಾಜಿಸತೊಡಗಿದ್ದರು.
ಆನಂತರ ಮತ್ತೆೆ ಸಚಿವ ಕಿಮ್ಮನೆ ಜೊತೆ ಕಾಣಿಸಿಕೊಂಡರು. ಡಿಸಿಸಿ  ಬ್ಯಾಾಂಕಿನಲ್ಲಿ ನಡೆದ ಸಾಲ ವಿತರಣೆ ಕಾರ್ಯಕ್ರಮಕ್ಕೆೆ ಸಚಿವರನ್ನು ಆಹ್ವಾಾನಿಸಿ ಅವರಿಂದಲೇ ಸಾಲದ ಚೆಕ್‌ನ್ನು ಕೊಡಿಸಿದ್ದರು. ಕ್ರಮೇಣ ಕಾಲ ಸರಿದಂತೆ ಇಬ್ಬರೂ ಮತ್ತೆೆ ಶತ್ರುಗಳಾಗಿದ್ದಾಾರೆ. 360 ಡಿಗ್ರಿಿಯನ್ನು ಸುತ್ತುಹಾಕಿ ಬಂದಿರುವ ಆರ್‌ಎಂಎಂ ಮತ್ತೆೆ ಜೆಡಿಎಸ್ ಸೇರಿ ತಾನೂ ಪ್ರಬಲ ರಾಜಕಾರಣಿ ಎನ್ನುವುದನ್ನು ತೋರಿಸಲಾರಂಭಿಸಿದ್ದಾಾರೆ.
ಬಿಜೆಪಿ ಮತ್ತು ಕಾಂಗ್ರೆೆಸ್‌ನ ಸಮಾವೇಶಗಳು ತೀರ್ಥಹಳ್ಳಿಿಯಲ್ಲಿ ಮುಗಿದ ನಂತರ ಮೊನ್ನೆೆಯಷ್ಟೇ ಜೆಡಿಎಸ್ ಸಮಾವೇಶವನ್ನೂ ಏರ್ಪಡಿಸಿ ಬಲಾಬಲ ಪ್ರದರ್ಸಿಸಿದ್ದಾಾರೆ. ಈಗ ಶಾಸಕರ ವಿರುದ್ದ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿಿದ್ದಾಾರೆ. ಜೊತೆಗೆ ಕಾಂಗ್ರೆೆಸ್‌ನಿಂದ ಹಲವರನ್ನು ಸೆಳೆಯುತ್ತಿಿದ್ದಾಾರೆ. ಕೆಲವು ನಾಯಕರು ಸದಾ ಗೌಡರ ಜೊತೆಗಿದ್ದಾಾರೆ. ಗೌಡರು ಎಲ್ಲಿರುತ್ತಾಾರೋ ಅವರು ಅಲ್ಲಿ ಕಾಣಿಸಿಕೊಳ್ಳುತ್ತಾಾರೆ. ಅವರೂ ಸಹ ಗೌಡರಂತೆ ಯಾವ ಪಕ್ಷ ನಿಷ್ಠರೂ ಅಲ್ಲ. ಗೌಡರು ಹೇಳಿದ್ದೇ ಅವರಿಗೆ ಅಂತಿಮ. ಸ್ವಂತ ನಿರ್ಧಾರ ತೆಗೆದುಕೊಳ್ಳುವವರು ತಾವಲ್ಲ ಎನ್ನುವುದನ್ನು ಮತ್ತೆೆ ಮತ್ತೆೆ ತೋರಿಸಿಕೊಳ್ಳುತ್ತಿಿದ್ದಾಾರೆ.
   ಮಂಜುನಾಥ ಗೌಡರಿಂದ ಜೆಡಿಎಸ್ ಬಲಿಷ್ಠವಾಗಿದೆ ಎಂಬ ಲೆಕ್ಕಾಾಚಾರದಲ್ಲಿರುವ ಜೆಡಿಎಸ್‌ನವರಿಗಂತೂ ಎಷ್ಟು ಖುಷಿಯಾಗಿದೆ ಎಂದರೆ ತೀರ್ಥಹಳ್ಳಿಿಯಲಿ ಜೆಡಿಎಸ್ ಗೆದ್ದಷ್ಟೇ ಸಂಭ್ರಮಪಡುತ್ತಿಿದ್ದಾಾರೆ. ಮಿತ್ರರಾಗಿದ್ದ ವೇಳೆ ಅಕ್ಕಪಕ್ಕದಲ್ಲಿರುತ್ತಿಿದ್ದವರು ಶತ್ರುಗಳದೊಡನೆ ಆರೋಪಗಳನ್ನೆೆ ಹರಿಬಿಟ್ಟಿಿದ್ದಾಾರೆ. ಶಾಸಕ ಕಿಮ್ಮನೆ ಮತ್ತೆೆ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದೊಡನೆಯೇ ಗೌಡರು ಜೆಡಿಎಸ್ ಕದ ತಟ್ಟಿಿ ಆ ಪಕ್ಷ ಸೇರಿ, ಟಿಕೆಟನ್ನೂ ತಂದುಕೊಂಡು ಪ್ರಚಾರ ಆರಂಭಿಸಿದ್ದಾಾರೆ. ಚುನಾವಣೆ ಮೂಲಕ ಮಾತ್ರ ಜನಸೇವೆ ಸಾಧ್ಯ ಎಂದು ಅವರು ಅರಿತಂತಿದೆ.
ಪತ್ರಿಿಕಾಗೋಷ್ಠಿಿಯಲ್ಲಿ ಕಿಮ್ಮನೆ ವಿರುದ್ಧ ಆರೋಪ ಹೊರಿಸುವುದೇ ಅವರ ಕೆಲಸವಾಗಿದೆಯೇ ವಿನಾ ತಾನೇನನ್ನು ಮಾಡಬಲ್ಲೆೆ, ತನ್ನ ಜೆಡಿಎಸ್ ಸೇರ್ಪಡೆಯ ಉದ್ದೇಶವೇನು ಎನ್ನುವುದರ ಬಗ್ಗೆೆ ಚಕಾರ ಎತ್ತುತ್ತಿಿಲ್ಲ. ತೀರ್ಥಹಳ್ಳಿಿ ಕ್ಷೇತ್ರದ ಸಮಸ್ಯೆೆಯ ಅರಿವು ಈಗ ಅವರಿಗೆ ಆಗುತ್ತಿಿದೆ. ಸ್ವತಃ ಆ ಕ್ಷೇತ್ರದವರಾದರೂ ಬಹುತೇಕ ಹಳ್ಳಿಿಗಳ ಅವಸ್ಥೆೆ ಏನಿದೆ ಎನ್ನುವುದು ಗೊತ್ತಿಿರಲಿಲ್ಲ. ಈ ಹಿಂದೆ ಕಾಂಗ್ರೆೆಸ್‌ನಲ್ಲಿದ್ದಾಾಗ ಸದಾ ಕಾಂಗ್ರೆೆಸ್‌ನಲ್ಲೇ ಇರುತ್ತೇನೆ ಎಂದು ಪತ್ರಕರ್ತರುರೇ ಘೋಷಿಸಿದ್ದ ಗೌಡರು ಈಗ ಸದಾ ಜೆಡಿಎಸ್‌ನಲ್ಲೇ ಇರುತ್ತೇನೆ, ಮತ್ತೆೆ ತವರಿಗೆ ಮರಳಿದ್ದೇನೆ ಎಂದು ಹೇಳುತ್ತಿಿದ್ದಾಾರೆ.
 ಆದರೆ ಆರ್‌ಎಂಎಂ ಅವರ ರಾಜಕೀಯದ ಹಾದಿ ಗೊತ್ತಿಿದ್ದವರೆಲ್ಲ ಮುಸಿಮುಸಿ ನಗುತ್ತಿಿದ್ದಾಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಕಣಕ್ಕಿಿಳಿದು ಶಾಸಕ ಕಿಮ್ಮನೆ ಮತ್ತು ಜೆಡಿಎಸ್‌ನ ಮದನ್ ವಿರುದ್ದ ಸ್ಪರ್ಧಿಸಿದ್ದ ಆರ್‌ಎಂಎಂ ಆನಂತರ ಕಿಮ್ಮನೆ ಅವರ ಪಕ್ಕ ಕುಳಿತುಕೊಳ್ಳುತ್ತಿಿದ್ದರು. ಈಗ ಮದನ್ ಅವರ ಪಕ್ಕದ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿಿದ್ದಾಾರೆ.
 ಬಿಜೆಪಿಯವರು ತನ್ನನ್ನು ರಾಜಕೀಯವಾಗಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮುಗಿಸಲು ಇನ್ನಿಿಲ್ಲದ ಯತ್ನ ನಡೆಸಿದ್ದಾಾರೆಂಬ ಕೋಪವಿದೆ. ಆರಗ ಜ್ಞಾಾನೇಂದ್ರ ಅವರೇ ತನ್ನ ವಿರುದ್ಧ ಲೋಕಾಯುಕ್ತದ ಅಸ್ತ್ರವನ್ನೂ ಬಿಟ್ಟಿಿದ್ದರೆನ್ನುವ ಸಂಶಯವೂ ಗೌಡರಲ್ಲಿದೆ.
ತೀರ್ಥಹಳ್ಳಿಿಯ ಮತದಾರ ಇಂತಹವರನ್ನು ಹೇಗೆ ನಂಬಬೇಕು ಎನ್ನುವ ಗೊಂದಲಕ್ಕೆೆ ಸಿಲುಕಿದ್ದಂತೂ ನಿಜ. ಜೊತೆಗೆ ಮುಂದಿನ ಚುನಾವಣೆಗೆ ಆರ್‌ಎಂಎಂ ಮತ್ತೆೆ ಯಾವ ಪಕ್ಷದಲ್ಲಿರುತ್ತಾಾರೆ ಎಂದೂ ಸಹ ಪ್ರಶ್ನಿಿಸುತ್ತಿಿದ್ದಾಾನೆ. ಏಕೆಂದರೆ ಅವರಿಗೆ ಒಂದೇ ಪಕ್ಷದಲ್ಲಿರುವುದು ಎಂದೂ ರುಚಿಸುವುದಿಲ್ಲ ಎಂದೂ ಸಹ ವ್ಯಂಗ್ಯವಾಡುತ್ತಿಿದ್ದಾಾರೆ. ರಾಜಕೀಯ ಲಾಭಕ್ಕಾಾಗಿ ಪಕ್ಷಾಂತರ ಮಾಡುತ್ತಾಾ, ಇನ್ನೊೊಬ್ಬರನ್ನು ತೆಗಳುತ್ತ ಇರುವವರನ್ನು ಜನರು ನಂಬುತ್ತಾಾರೆಯೇ ಎನ್ನುವುದು ಚುನಾವಣೆಯಲ್ಲೇ ತಿಳಿಯಬೇಕಿದೆ.
Published on 14.2.18
........................................

Monday, 12 February 2018

ಕೆರೆಯ ಕರೆಗೆ ಓಗೊಡದಿದ್ದರೆ ಕಾಲ ಕರೆದಾನು


ಮುಂದಿನ ಮಹಾಯುದ್ಧ ನಡೆದರೆ ಅದು ನೀರಿಗಾಗಿ ಎನ್ನುವ ಎಚ್ಚರಿಕೆಯ ಮಾತು ಆಗಾಗ ಕೇಳಿಬರುತ್ತಿದ್ದರೂ ಇದನ್ನು ನಾವು ನಿರ್ಲಕ್ಷಿಸುತ್ತ ಜಲಮೂಲವನ್ನು ಮುಚ್ಚುತ್ತಿದ್ದೇವೆ. ಅನಗತ್ಯವಾಗಿ ನೀರನ್ನು ಚೆಲ್ಲುತ್ತಿದ್ದೇವೆ. 31 ಎಕ್ರೆ ವಿಸ್ತೀರ್ಣದ ನವುಲೆ ಕೆರೆಯನ್ನೇ ಆಡಳಿತಶಾಹಿ ಮತ್ತು ಅಧಿಕಾರಶಾಹಿಗಳು ಸೇರಿ ನಿರ್ಮೂಲನೆ ಮಾಡುತ್ತಿರುವ ದೃಶ್ಯ ನಮ್ಮ ಕಣ್ಣೆದುರೇ ಇದ್ದರೂ ನಾವಿನ್ನೂ ಎಚ್ಚೆತ್ತಿಲ್ಲ. ಹೋದರೆ ಹೋಗಲಿ, ನಮ್ಮ ಮನೆಯಲ್ಲಿ ಸಾಕಷ್ಟು ನೀರಿದೆ ಎನ್ನುವ ಮನಃಸ್ಥಿತಿ ನಮ್ಮದು. ಪರಿಸರ ಉಳಿಸಿ ಎಂದು ಕೇವಲ ಜುಲೈನಲ್ಲಿ ಮಾತ್ರ ಘೋಷಣೆ ಹಾಕಿದರೆ ಸಾಲದು. ವರ್ಷದುದ್ದಕ್ಕೂ ಪರಿಸರ (ನೆಲ, ಜಲ, ಗಾಳಿ, ಅರಣ್ಯ)ದ ಮೇಲೆ ನಡೆಯುವ ಅತ್ಯಾಚಾರ, ಅನಾಚಾರ ತಡೆಯುವ ಕೆಲಸಮಾಡಿದರೆ ಸಮತೋಲಿತ ಪರಿಸರ ಉಳಿಸಬಹುದು.



ದಕ್ಷಿಣ ಆಪ್ರಿಕಾದ ಕೇಪ್‌ಟೌನ್‌ನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿದೆ. ಕಳೆದ ವರ್ಷ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ಜನರು ಪರದಾಡಿದ ಕ್ಷಣಗಳು ಇನ್ನೂ ಮನಃಪಟದಲ್ಲಿವೆ. ಆಫ್ರಿಕಾಕಾದ ಆರು ದೇಶಗಳಿಗೆ ನೀರೊದಗಿಸುವ ಸರೋವರವೊಂದು ಬತ್ತಿಹೋಗಿ ನೀರಿಗಾಗಿ ಹೊಡೆದಾಡುವ ಸ್ಥಿತಿ ಎದುರಾಗಿದೆ. ಸೂಡಾನ್ ಎನ್ನುವ ಸಣ್ಣ ದೇಶದ ಸ್ಥಿತಿಯೂ ಇದೇ ಆಗಿದೆ.
ನಾವು ಬದುಕಲು ನೀರು, ಗಾಳಿ, ಶುದ್ಧ ಪರಿಸರ ಅಗತ್ಯ. ಆದರೆ ಇಂದು ಅವೆಲ್ಲವನ್ನೂ ಅಭಿವೃದ್ಧಿ ಹೆಸರಿನಲ್ಲಿ ಬಲಿಕೊಡುತ್ತಿದ್ದೇವೆ. ತುಂಗಾ ನದಿ ತಟದಲ್ಲಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಾಳೆ ಅದು ಬತ್ತಿ ಹೋದರೆ ಏನಾದೀತೆಂಬ ಬಗ್ಗೆ ಯೋಚಿಸುತ್ತಿಲ್ಲ. ಭವಿಷ್ಯದ ಚಿಂತನೆ ಮಾಡದೆ ಜೀವನ ಸಾಗಿಸಿದರೆ ಅದು ಮುಂದಿನ ಜನಾಂಗವನ್ನು ಕಷ್ಟಕ್ಕೆ ನೂಕಿದಂತಾಗುತ್ತದೆ.
ಇಷ್ಟೆಲ್ಲ ಹೇಳುವುದಕ್ಕೆ ಕಾರಣವೇನೆಂದರೆ, ನಗರದ ನವುಲೆ ಕೆರೆಯನ್ನು ಉಳಿಸುವ ಸಂಬಂಧ ಈಗ ಹಲವು ಸಂಘಟನೆಗಳು ಮುಂದಾಗಿವೆ. ಆದರೆ ನಾಗರಿಕರು ಮತ್ತು ನಗರದ ಹತ್ತಾರು ಸಂಘಟನೆಗಳು ಇದು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು. ಕೆರೆಯ ಮಹತ್ವ, ಅದರಿದಂ ನಗರದ ಮೇಲಾಗುವ ಸತ್ಪ ರಿಣಾಮಗಳ ಬಗ್ಗೆ ಜನರು ಯೋಚಿಸಬೇಕಿದೆ. ಪರಿಸರ ಹಾನಿ ಮಾಡಿಕೊಳ್ಳಬಾರದೆಂದು ಎಲ್ಲೆಡೆ ಡಂಗುರ ಸಾರುತ್ತಿದ್ದರೂ ಅದನ್ನು ಉಳಿಸುವತ್ತ ನಾವ್ಯಾರೂ ಮನಸ್ಸು ಮಾಡುತ್ತಿಲ್ಲ. ಕೆಲವೇ ಪರಿಸರಾಸಕ್ತರು ಮಾತ್ರ ಇದಕ್ಕೆ ಮುಂದಾಗುತ್ತಿದ್ದಾರೆ.
ನವುಲೆ ಕೆರೆಯ ಮಧ್ಯೆ ರಾಷ್ಟ್ರೀಯ ಹೆದ್ದಾರಿ ನಿಗಮದವರು ಶಿಕಾರಿಪುರ- ಶಿವಮೊಗ್ಗ ರಸ್ತೆ ಮಾಡಲು ಮುಂದಾಗಿರುವುದು ವಿವಾದವನ್ನು ಹುಟ್ಟುಹಾಕಿದೆ. ಹೇಗಾದರೂ ಮಾಡಿ ಇದನ್ನು ನಿಲ್ಲಿಸಲೆಬೇಕೆಂದು ನಾಲ್ಕಾರು ಸಂಘಟನೆಯವರು ಮುಂದಾಗಿದ್ದಾರೆ. 31 ಎಕ್ರೆಯ ಕೆರೆ ಈಗ ಕೇವಲ 5 ಎಕ್ರೆಯಷ್ಟು ಮಾತ್ರ ಉಳಿದಿದೆ. ಇದರಲ್ಲೂ 1.26 ಎಕ್ರೆಯನ್ನು ರಸ್ತೆ ಮಾಡಲು ಮುಚ್ಚುವ ಕೆಲಸ ಆರಂಭಿಸಲಾಗಿದೆ. ಎಷ್ಟೇ ಮನವರಿಕೆ ಮಾಡಿಡಿಕೊಟ್ಟರೂ ಪರಿಸರ ಕಾಳಜಿ ಇಲ್ಲದ ಆಡಳಿತಶಾಹಿ ನಾಗರಿಕರ ಮನವಿಯನ್ನು ಪುರಸ್ಕರಿಸದೆ ರಸ್ತೆ ಮಾಡುವುದೇ ತಮ್ಮ ಗುರಿ ಎಂಬಂತೆ ವರ್ತಿಸುತ್ತಿದೆ.
  ಕೆರೆ ಮಧ್ಯೆ ರಸ್ತೆ ಮಾಡುವುದನ್ನು ಕೈಬಿಟ್ಟು ಈಗಿರುವ ದಂಡೆ ಮೇಲಿನ ರಸ್ತೆಯನ್ನೇ ತಡೆಗೋಡೆ ನಿರ್ಮಿಸಿ ವಿಸ್ತಾರಗೊಳಿಸುವ ಅವಕಾಶವಿದ್ದರೂ ಅಲ್ಲಿ ಮೂರ್ನಾಲ್ಕು ತಿರುವು ಬರುತ್ತದೆ. ಇದರಿಂದ ಸಂಚಾರಕ್ಕೆ ಅಪಾಯ ಎದುರಾಗುತ್ತದೆ ಎನ್ನುವುದು ಅಧಿಕಾರಿಗಳ ವಾದ. ಇದು  ಮಲೆನಾಡು. ಇಲ್ಲಿನ ರಸ್ತೆಗಳೆಲ್ಲಾ ಓರೆ-ಕೋರೆಯಲ್ಲೇ ಇರುತ್ತವೆ. ಅದರಲ್ಲೂ ನಗರದೊಳಗಿನ ರಸ್ತೆ ಈ ರೀತಿ ಇರಬಾರದು ಎನ್ನುವ ಮನಃಸ್ಥಿತಿ ಅಧಿಕಾರಶಾಹಿಯದ್ದು. ಹೆದ್ದಾರಿಯಾಗಿರುವುದರಿಂದ 60-80 ಕಿ. ಮೀಯಲ್ಲಿ ಸಂಚರಿಸುತ್ತಾರೆ ಎನ್ನುವ ಇಂಜಿನೀಯರ್‌ಗಳಿಗೆ ನಗರದೊಳಕ್ಕೆ ವೇಗದ ಮಿತಿ ಎಷ್ಟೆನ್ನುವುದನ್ನೂ ಕಲಿಸಿಕೊಡಬೇಕಾಗಿದೆ.
ಇಂತಹ ಕನಿಷ್ಟ ಜ್ಞಾನವನ್ನು ಹೊಂದಿರದ ಇಂಜಿನೀಯರ್ ಮತ್ತು ಅಧಿಕಾರಿಗಳು ಕೆರೆಯ ಮಧ್ಯದಲ್ಲಿ ರಸ್ತೆ ಮಾಡಲು ಮುಂದಾಗಿ ಈಗ ಜನರ ಆಕ್ರೋಶ ಎದುರಿಸುವಂತಾಗಿದೆ. 2005-06ರ ಸಾಲಿನಲ್ಲಿ ಇಲ್ಲಿ ಕೃಷಿ ಮಾಡಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಂದಿನ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಸ್ಟೇಡಿಯಂಗೆ 26 ಎಕರೆ ಜಾಗ ನೀಡಿತು. ಆಗ ಹಲವರು ಪ್ರತಿಭಟಿಸಿದರೂ ಅದು ಅಷ್ಟೊಂದು ಉಗ್ರವಾಗಿರದ ಕಾರಣ ಜನರ ಸ್ಟೇಡಿಯಂ ನಿರ್ಮಾಣವಾಗಿದೆ. ಈಗ ಇರುವ 5 ಎಕರೆಯನ್ನಾದರೂ ಉಳಿಸಿ ಚೆನ್ನಾಗಿ ಅಭಿವೃದ್ಧಿಪಡಿಸಿ, ದಂಡೆ ಕಟ್ಟುವ ಮೂಲಕ ಸುತ್ತ ಮರ-ಗಿಡ ಬೆಳೆಸಿ, ನೆರಳು, ಪ್ರಾಣಿ- ಪಕ್ಷಿಗಳಿಗೆ ಆಹಾರ,ವಾಸಸ್ಥಾನ ಕಲ್ಪಿಸಿದರೆ ನಗರಕ್ಕೂ ಒಂದು ಸೌಂದರ್ಯ ಬರುತ್ತದೆ. ಸ್ಮಾರ್ಟ್ ಸಿಟಿ ಆಗಲಿರುವ ಶಿವಮೊಗ್ಗ ಒಂದು ಸುಂದರ ತಾಣವೂ ಆಗುತ್ತದೆ.
   ಕೆರೆಗಳು ನಗರದೊಳಕ್ಕೆ ಅಥವಾ ನಗರದಂಚಿನಲ್ಲಿದ್ದರೆ ಅವು ಶಾಖವನ್ನು ಹೀರಿಕೊಳ್ಳುತ್ತವೆ. ನೀರಿನ ಸೆಲೆ ಬತ್ತದಂತೆ ಮಾಡುತ್ತವೆ. ಇದರಿಂದ ಅಂತರ್ಜಲ ವೃದ್ಧಿ ಸಾಧ್ಯ. ಹಲವು ಜಲಚರ-ಪ್ರಾಣಿ ಪಕ್ಷಿಗಳಿಗೆ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ಇದರಿಂದಾಗಿ ನಾಡಿನ ಒಂದು ಸಣ್ಣ ಜಲಮೂಲವನ್ನೂ ರಕ್ಷಿಸುವ ಕೆಲಸವಾಗಬೇಕಿದೆ. ಈ ಸಂಬಂಧ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಇಂದು ಹೋರಾಟ ನಡೆಯುತ್ತಿದೆ. ಆದರೆ ನಗರದವರು ಮಾತ್ರ ಇನ್ನೂ ಜಾಗೃತರಾಗದಿರುವುದು ವಿಷಾನೀಯ.
ನಾವು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ಶುದ್ಧ ನೀರು, ಗಾಳಿ (ಪರಿಸರ)ಯನ್ನು ಮಾತ್ರ. ಇದನ್ನೂ ಕೊಡದಿದ್ದರೆ ಮುಂದಿನ ಅವರು ನಮ್ಮನ್ನು  ಕ್ಷಮಿಸಲಾರರು. ನಗರದ ಹಿತಚಿಂತನೆ ಮಾಡುವ ಸ್ಥಿತಿ ನಗರದ ಎಲ್ಲರದ್ದಾಗಬೇಕಿತ್ತು. ಆದರೆ ಕೆಲವು ಪರಿಸರಾಸಕ್ತರು ಮಾತ್ರ ಗಮನ ಹರಿಸುವಂತಾಗಿದೆ. ಹೋರಾಟಗಾರರು ಎಂದುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿನಿತ್ಯ ಠಳಾಯಿಸುವವರಿಗೆ ಇದರ ಪರಿವೇ ಇಲ್ಲವೇ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಕನ್ನಡ ನೆಲ-ಜಲಕ್ಕಾಗಿ ಹೋರಾಟ ಎಂದು ಹೆಸರಿಟ್ಟುಕೊಂಡ ಸಂಘಟನೆಯವರೂ ಸಹ ನಾಪತ್ತೆಯಾಗಿದ್ದಾರೆ. ಅವರ ಪ್ರಕಾರ ಜಲವಿವಾದಕ್ಕೆ ಮಾತ್ರ ಹೋರಾಟ ಮಾಡುವುದಿರಬಹುದೇನೋ.
ಈಗ ಅಣ್ಣಾ ಹಜಾರೆ ಹೋರಾಟ ಸಮಿತಿ ಮತ್ತು ನಾಗರಿಕ ಹಿತರಕ್ಷಣಾ ಸಮಿತಿ ಒಕ್ಕೂಟದವರು ನೇತೃತ್ವ ವಹಿಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಜೀವವನ್ನಾದರೂ ಕೊಟ್ಟೇವು, ನವುಲೆ ಕೆರೆಯನ್ನು ಉಳಿಸದೆ ಬಿಡುವುದಿಲ್ಲ ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿದ್ದಾರೆ. ಅವರಿಗೆ ಬೆಂಬಲ ನೀಡಿ ನಾವೂ ಅವರೊಂದಿಗೆ ಕೈಜೋಡಿಸಬೇಕಿದೆ.


* ಕೆಎಲ್‌ಸಿಡಿಎ ಅಧಿನಿಯಮ 2014ರ ಅಧ್ಯಾಯ 3 (14)ರಲ್ಲಿ (6) ಪ್ರಕಾರ ಕೆರೆ ಅಂಗಳದಲ್ಲಿ ಯಾವುದೇ ಕಾಮಗಾರಿ  ಕೈಗೊಳ್ಳುವಂತಿಲ್ಲ.    
* ಇದಕ್ಕೆ 3ರಿಂದ 5 ವರ್ಷದ ಶಿಕ್ಷೆ ಇದೆ. 
* ಯಾವುದೇ ಕೆರೆ ಅಂಗಳದಲ್ಲಿ ಕಾಮಗಾರಿ ಆರಂಭಿಸುವ ಮುನ್ನ ರಾಷ್ಟ್ರೀಯ ಹಸಿರು ಪೀಠ (ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್-ಎನ್‌ಜಿಟಿ)ಯ ಅನುಮತಿ ಕಡ್ಡಾಯ. 
* ನವುಲೆ ಕೆರೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಬರವುದರಿಂದ ಕಾಮಗಾರಿ ಮುನ್ನ ಅವರ ಅನುಮತಿ ಪಡೆದಿಲ್ಲ.
*  ಜಿಲ್ಲಾ ಸರೋವರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರೇ ಈ ಕೆರೆ ಮುಚ್ಚಿ ರಸ್ತೆ ಮಾಡಲು ಅನುಮತಿ ನೀಡಿರುವುದು ಕಾನೂನುನುಬಾಹೀರವಾದದ್ದು. 
* ವಿಶ್ವ ಬ್ಯಾಂಕ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಇದಾಗಿರುವುದರಿಂದ ಅದರ ಕಾನೂನಿನಲ್ಲಿ ಕೆರೆ, ಪರಿಸರರಿ, ಕಾಡು ಇವುಗಳನ್ನು ಹಾನಿಯಾಗುವುದಿದ್ದರೆ ಇರುವ ರಸ್ತೆಯನ್ನೇ ಅಭಿವೃದ್ಧಿಪಡಿಸಬೇಕೆನ್ನುವ ನಿಯಮವಿದೆ. ಆದರೆ ಇಲ್ಲಿ ಅದನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಅವರಿಗೆ ದೂರು ನೀಡಿದಲ್ಲಿ ಯೋಜನೆಯ ಹಣ ಬಿಡುಗಡೆಯಾಗುವುದಿಲ್ಲ.
* ಸದ್ಯ ಈ ಕಾಮಗಾರಿಗೆ ಕರ್ನಾಟಕ ಸರೋವರ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ತಡೆಯಾಜ್ಞೆ ನೀಡಿದೆ. ಕೆರೆಯಲ್ಲಿ ಕೈಗೊಂಡಿರುವ ಕಾಮಗಾರಿಯ ವಿವರ ನೀಡುವಂತೆ ಡಿಸಿ ಮತ್ತು ಕಾಮಗಾರಿ ನಡೆಸುತ್ತಿರುವ ಕೆ-ಶಿಪ್ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದೆ. 
*  ವಿಶ್ವಬ್ಯಾಂಕ್‌ಗೆ, ರಾಷ್ಟ್ರೀಯ ಹಸಿರು ಪೀಠಕ್ಕೆ, ಜಿಲ್ಲಾಧಿಕಾರಿಗೆ, ಪಾಲಿಕೆ ಆಯುಕ್ತರಿಗೆ, ಪೊಲೀಸರಿಗೆ ಮುಂದಿನ ಕ್ರಮಕ್ಕಾಗಿ ದೂರು ನೀಡಲಾಗಿದೆ. 

published on-12 feb/18

................................... 

Friday, 9 February 2018

ಮರೆಯಲಿ ನಿನ್ನ ಹ್ಯಾಂಗ?



ಹಳೆಯ ಸಿನಿಮಾ ಗೀತೆಗಳಿಗೆ 50 ವರ್ಷ ದಾಟಿದ್ದರೂ ಇಂದಿಗೂ  ಅವು ಆಸಕ್ತರ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಸುಮಾರು 60,70,80ರ ದಶಕದವರೆಗೆ ಸಿನಿಮಾ ಗೀತೆಗಳಿ.ಗೆ ಇದ್ದ ಜನಪ್ರಿಯತೆ ಇಂದಿನ ಹಾಡಿಗಿಲ್ಲ. ಅಂದಿನ ಹಾಡು ಇಂದಿಗೂ ಗುನುಗುನಿಸಲ್ಪಡುತ್ತದೆ. ಕೇಳುವಾಗ ನಮಗರಿವಿಲ್ಲದಂತೆ ಕೈಕಾಲುಗಳು ಅಲ್ಲಾಡುತ್ತವೆ. ಎಂತಹ ಕಂಠಸಿರಿ, ಎಂತಹ ಚಿತ್ತಾಕರ್ಷಕ ಸಂಗೀತ, ಎಂತಹ ಭವ್ಯ ಅರ್ಥ. ಇಂತಹ ಅಪೂರ್ವ ‘ಗಾನಯಾನವನ್ನು ನಗರದ ನಾಗರಿಕರಿಗೆ ವಾರ್ತಾ ಇಲಾಖೆ ಉಣಬಡಿಸಿತು 




ಸುಮಾರು 60ರಿಂದ 80ರ ದಶಕದ ಕನ್ನಡ ಚಲನಚಿತ್ರದ ಗೀತೆಗಳು ಇಂದಿಗೂ ಹಸಿರಾಗಿ ಜನರ ಮನದಲ್ಲಿ ನೆಲೆಸಿವೆ. ಆ ಕಾಲದಲ್ಲಿ ಅವುಗಳನ್ನು ಆಕಾಶವಾಣಿಯಲ್ಲಿ ಮಾತ್ರ ಕೇಳುವ ಅವಕಾಶವಿತ್ತು. ಹಾಗಾಗಿ ಚಲನಚಿತ್ರಗೀತೆ ಪ್ರಸಾರವಾಗುವ ಸಮಯದಲ್ಲಿ ಆಸಕ್ತರು ರೇಡಿಯೋವನ್ನು ಆನ್ ಮಾಡಿಡುತ್ತಿದ್ದರು. ಎಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು.
ಇಂದು ಅದೇ ಹಾಡುಗಳನ್ನು ಗಾಯಕರ ಬಾಯಲ್ಲಿ ಕೇಳಬಹುದಾಗಿದೆ. ಎಸ್.ಪಿ ಬಾಲಸುಬ್ರಹ್ಮಣ್ಯಂ, ರಾಜಕುಮಾರ್, ಪಿ. ಸುಶೀಲಾ, ಬಾಲಮುರಳಿ ಕೃಷ್ಣ, ಘಂಟಸಾಲಾ, ಎಸ್. ಜಾನಕಿ, ಪಿ. ಬಿ. ಶ್ರೀನಿವಾಸ್, ಮೊದಲಾದವರು ಹಾಡಿರುವ ಈ ಗೀತೆಗಳು ಇಂದಿಗೂ ನೆನಪಾದಾಗ ಗುನುಗುನಿಸಲ್ಪಡುತ್ತಿವೆ. ಅಂದರೆ ಅವುಗಳಲ್ಲಿರುವ ಲಯ, ಅರ್ಥ, ಸುಮಧುರತೆ ಎಂತಹವರನ್ನೂ ಮೋಡಿ ಮಾಡುವ ಶಕ್ತಿಯನ್ನು ಹೊಂದಿದೆ ಎನ್ನಬಹುದು.
ಶಿವಮೊಗ್ಗದ ಸರ್ಕಾರಿ ನೌಕರರ ಕಚೇರಿಯ ಸಭಾಂಗಣದಲ್ಲಿ ಫೆ. 8ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಏರ್ಪಡಿಸಿದ್ದ ‘ಗಾನಯಾನ’ ಹಳೆಯ ಹಾಡುಗಳನ್ನು ಮತ್ತೆ ಮೆಲುಕು ಹಾಕುವ ಹಾಗೂ ಸುಮಾರು ಎರಡು ಗಂಟೆಗಳ ಕಾಲ ಸಂಸಾರದ ಹೊಯ್ದಾಟವನ್ನೆಲ್ಲ ದೂರೀಕರಿಸುವ,  ಸುಮಧುರತೆಯನ್ನು ಆಸ್ವಾದಿಸುವ ಅವಕಾಶ ಕಲಿಸಿತು.
ಬೆಂಗಳೂರಿನ ಕಲಾನಮನ ಸಾಂಸ್ಕೃತಿಕ ಪ್ರತಿಷ್ಠಾನ ತಂಡದವರು ಪ್ರಸ್ತುತಪಡಿಸಿದ ಈ ಕಾರ್ಯಕ್ರಮ ನೆರೆದಿದ್ದವರನ್ನು ತಣಿಸುವಲ್ಲಿ ಸಫಲವಾಯಿತು. ತಂಡದ ಗಾಯಕರಾದ ನಾಗಚಂದ್ರಿಕಾ ಭಟ್, ದಾಕ್ಷಾಯಿಣಿ ನಾಗರಾಜ್, ಶ್ರೀನಿವಾಸಮೂರ್ತಿ ಮತ್ತು ಉದಯ್ ಅಂಕೋಲಾ ಸುಮಧುರ ಕಂಠದಲ್ಲಿ ಹಳೆಯ ಹಾಡುಗಳನ್ನು ಅವುಗಳ ಧಾಟಿಯಲ್ಲೇ ಎದೆ ತುಂಬಿ ಹಾಡಿ ಮನರಂಜಿಸಿದರು.
ವಿಶೇಷವೆಂದರೆ, ಇಲ್ಲಿ ಸಿಳ್ಳೆ ಹೊಡೆಯುವವರಿರಲಿಲ್ಲ, ಕುಣಿಯುವವರಿರಲಿಲ್ಲ. ಏಕೆಂದರೆ ಈ ಹಾಡುಗಳನ್ನು ಆಲಿಸಲು ಬಂದವರೆಲ್ಲ ಬಹುತೇಕ ಹಳೆಯ ಹಾಡುಗಳ ರಸಾಸ್ವಾದನೆಗೆ ಆಗಮಿಸಿದವರಾಗಿದ್ದರು. ಅವುಗಳ ಪ್ರಿಯರೂ ಆಗಿದ್ದರು. ಆದ್ದರಿಂದ ಚಪ್ಪಾಳೆಯೊಂದೇ ಅಲ್ಲಿ ಹೆಚ್ಚಿನ ಸದ್ದು ಮಾಡುತ್ತಿತ್ತು.
ಪ್ರೇಕ್ಷಕರು ಕುಳಿತಲ್ಲಿಯೇ ಅವರಿಗೆ ಅರಿವಿಲ್ಲದಂತೆ ತಲೆದೂಗುತ್ತಿದ್ದರು, ಕೈಕಾಲುಗಳು ಸಂಗೀತದ ನಿನಾದಕ್ಕೆ ಸ್ಪಂದಿಸುತ್ತಿದ್ದವು, ಹಾಡಿನಲ್ಲೇ ತನ್ಮಯರಾಗಿ, ಅವುಗಳನ್ನು ಆಸ್ವಾದಿಸಿದರು. 60, 70 ಮತ್ತು 80ರ ದಶಕದ ವರೆಗಿನ ಗೀತೆಗಳೆಲ್ಲ ಈ ರೀತಿ ಸಂಗೀತದ ಹುಚ್ಚು ಹಿಡಿಸುವಂತಹವಾಗಿದ್ದರಿಂದ, ಅವುಗಳಿಗೆ ವಿಶೇಷ ಮಹತ್ವವಿತ್ತು, ವಿಶೇಷ ಅರ್ಥವಿತ್ತು. ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು. ಇವುಗಳಲ್ಲಿ ನವರಸಗಳು ತುಂಬಿರುತ್ತಿದ್ದವು. ಎಷ್ಟು ಸೊಗಸಾಗಿರುತ್ತಿದ್ದವೆಂದರೆ ಹತ್ತಾರು ಬಾರಿ ಅದನ್ನೇ ಕ್ಯಾಸೆಟ್‌ನಲ್ಲಿ ರಿವೈಂಡ್ ಮಾಡಿ ಕೇಳುವವರೂ ಇದ್ದರು. ಗೊತ್ತಿಲ್ಲದಂತೆ ತನ್ಮಯರಾಗುತ್ತಿದ್ದರು. ಸೊಬಗು, ಸೊಗಡಿನಿಂದ ಕೂಡಿರುತ್ತಿದ್ದವು.
ಇತೀಚಿನ ವರ್ಷಗಳಲ್ಲಿ ಈ ಹಳೆಯ ಹಾಡುಗಳನ್ನು ಕೇಳುವ ಜನರು ಹೆಚ್ಚುತ್ತಿದ್ದಾರೆ ಎನ್ನುವುದಕ್ಕೆ ಕಾರ್ಯಕ್ರಮ ಸಾಕ್ಷಿಯಾಯಿತು. ಟಿವಿಯಲ್ಲಿ ವಿವಿಧ ಹೆಸರಿನಲ್ಲಿ ಇಂತಹ ಹಾಡುಗಳನ್ನು ಪ್ರಸಾರಮಾಡಲಾಗುತ್ತಿದೆ. ಸ್ಪರ್ಧೆಯ ಹೆಸರಿನಲ್ಲಿ ಮಕ್ಕಳಿಂದ ಹಾಡಿಸಲಾಗುತ್ತಿದೆ. ಇದರಿಂದಾಗಿ ಇನ್ನಷ್ಟು ಇದರ ಕಂಪು ಉಳಿದಿದೆಯೇನೋ. ರೇಡಿಯೋ ಮೂಲೆಗುಂಪಾಗಿರುವುದರಿಂದ ಈಗ ಮೊಬೈಲ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ಅದರ ಪ್ರಿಯರು ಕೇಳುತ್ತಿದ್ದಾರೆ. ಒಂದಷ್ಟು ರಸನಿಮಿಷದ ಅವಕಾಶ ಸಿಗುವಂತಾಗಿದೆ. ಜೊತೆಗೆ ವಿವಿಧ ಸಂಗೀತ ತಂಡದವರು, ಗಾಯಕರು ಇಂತಹ ಗೀತೆಗಳನ್ನು ಹಾಡುತ್ತಿರುವುದರಿಂದ ಅವು ಎಂದೂ ಮರೆಯದ ಹಾಡಾಗಿರುವುದು ಸುಳ್ಳಲ್ಲ.
ನಿನ್ನೆಯ ‘ಗಾನಯಾನ’  ಕಾರ್ಯಕ್ರಮದಲ್ಲಿ ಗಾಯಕರು ಹಾಡಿದ ಎಲ್ಲಾ ಹಾಡುಗಳು ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದವು. ಕೊನೆಕೊನೆಗೆ ಕೆಲವು ಹಳೆಯ ಹಾಡುಗಳನ್ನು ಹಾಡುವಂತೆ ಮನವಿ ಸಹ ಸಲ್ಲಿಸಲಾಯಿತು. ಅವುಗಳನ್ನು ಕೇಳಿ ಖುುಷಿಪಟ್ಟರು. ಕಾರ್ಯಕ್ರಮದ ಅಂತ್ಯದವರೆಗೂ ಜನಸಾಗರವಿತ್ತು. ಹಳೆಯ ಹಾಡುಗಳ ವೈಭವ ಮರುಕಳಿಸುವಂತೆ ಮಾಡಿದ  ಗಾನಯಾನ ಇದಾಗಿತ್ತು. ಮೆಚ್ಚಿನ ಗೀತೆಗಳ ನಾದಯಾನದಲ್ಲಿ ಸಾರ್ವಜನಿಕರು ಮಿಂದೆದ್ದರು.
Published on 9.2.2018
............................................  

Thursday, 8 February 2018

   ಎಲ್ಲೆಮೀರಿದ ನಕಲಿ ವೈದ್ಯರ ಹಾವಳಿ
  * ಸರ್ಕಾರದ ಪ್ರಕಾರ 634, ಡಿಎಚ್‌ಓ ಪ್ರಕಾರ 82 ನಕಲಿ ವೈದ್ಯರು! 
* ಕ್ರಮ ಜರುಗಿಸಲು ಅಧಿಕಾರವಿಲ್ಲ!




ನಕಲಿ ವೈದ್ಯರ ಕಾಟ ದೇಶದ ಪ್ರತಿಷ್ಠಿತ ಆಸ್ಪತ್ರೆ ನವದೆಹಲಿಯಲ್ಲಿರುವ ಎಐಐಎಂಎಸ್‌ಗೂ ಬಿಟ್ಟಿಲ್ಲ. ಫೆ. 5ರಂದು ಇಬ್ಬರು ನಕಲಿ ವೈದ್ಯರು ಆಸ್ಪತ್ರೆಗೆ ಬಂದು ರೋಗಿಗಳನ್ನು ತಪಾಸಿಸುವಾಗಲೇ ಸಿಕ್ಕಿಬಿದ್ದಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಇವರಿಂದ ಎಷ್ಟು ಅಪಾಯವಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಸುಳ್ಳು ಹೇಳಿ ತಾವೇ ಡ್ಯೂಟಿ ಡಾಕ್ಟರ್ ಎಂದು ನಂಬಿಸಿ ಏನನ್ನೋ ಬರೆದುಕೊಟ್ಟು, ಹಣ ಪಡೆದು ಜೀವಹಾನಿ ಮಾಡುವವರು ದೊಡ್ಡ ಆಸ್ಪತ್ರೆಗೂ ಕಾಲಿಟ್ಟಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಬಹುದು. ಇದಕ್ಕಾಗಿಯೇ ಆಂದ್ರ ಸರ್ಕಾರ ಎಲ್ಲಾ ಪ್ರಿಸ್ಕಿಪ್ಶನ್ ಮತ್ತು ಫಾರ್ಮಾಸಿಸ್‌ಗಳನ್ನು ಡಿಜಿಟಲ್ ಮಾಡುವತ್ತ ಹೆಜ್ಜೆ ಇಟ್ಟಿದೆ. ಮೊಬೈಲ್‌ಗೆ ಬರುವ ಒಟಿಪಿ ಮುಖಾಂತರ ರೋಗಿ ಔಷಧವನ್ನು ಪಡೆಯುವ ವ್ಯವಸ್ಥೆ ಇನ್ನು ಆ ರಾಜ್ಯದಲ್ಲಿ ಜಾರಿಬರಲಿದೆ. ಕರ್ನಾಟಕವೂ ಸಹ ಈ ಮಾದರಿಯನ್ನು ಅನುಸರಿಸುವ ದಿನ ಬರುವುದು ನಿಶ್ಚಿತ.


 ನಿಗದಿತ ವಿದ್ಯಾರ್ಹತೆ ಹೊಂದಿರದೆ ಜಿಲ್ಲೆಯಲ್ಲಿ ವೈದ್ಯ ವೃತ್ತಿ ನಡೆಸುವವರ ಸಂಖ್ಯೆ 82. ಇದು ಸ್ವತಃ ಜಿಲ್ಲಾ ಆರೋಗ್ಯಾಧಿಕಾರಿ ನೀಡಿರುವ ಮಾಹಿತಿ. ಎಲ್ಲ ತಾಲೂಕು ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಅರೋಗ್ಯಾಧಿಕಾರಿಗಳಿಂದ ಪಡೆದ ಮಾಹಿತಿ ಕ್ರೋಢೀಕರಿಸಿ ತಾಲೂಕುವಾರು ನಕಲಿ ವೈದ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಆದರೆ ಸರ್ಕಾರ 2017ರ ಜೂನ್‌ನಲ್ಲಿ ಜಿಲ್ಲೆಯಲ್ಲಿರುವ ನಕಲಿ ವೈದ್ಯರ ಸಂಖ್ಯೆ 634 ಎಂದು ವಿಧಾನಸಭೆಯಲ್ಲಿ ಹೇಳಿತ್ತು. ರಾಜ್ಯದಲ್ಲೇ ಅತ್ಯಧಿಕ ನಕಲಿ ವೈದ್ಯರನ್ನು ಹೊಂದಿರುವ ಜಿಲ್ಲೆ ಶಿವಮೊಗ್ಗವಾಗಿದೆ. ಆದರೆ ಜಿಲ್ಲೆಯ ಆರೋಗ್ಯಾಧಿಕಾರಿಗಳು ನೀಡಿರುವ ಸಂಖ್ಯೆ ಗಮನಿಸಿದಾಗ ಉಳಿದ ಸುಮಾರು 552 ನಕಲಿ ವೈದ್ಯರು  ಊರು ಬಿಟ್ಟು ಎಲ್ಲಿಗೆ ಹೋದರೆನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಯವರೇ ಉತ್ತರ ನೀಡಬೇಕಿದೆ.
ಶಿವಮೊಗ್ಗ ನಗರದ ಪ್ರತಿ ಗಲ್ಲಿಯಲ್ಲಿ ನಕಲಿ ವೈದ್ಯರಿದ್ದಾರೆ. ಎಂಬಿಬಿಎಸ್, ಎಂದೇ ಬೋರ್ಡು ಹಾಕಿಕೊಂಡು ಧೈರ್ಯದಿಂದ ಕಾರ್ಯಾಚರಿಸುತ್ತಿದ್ದಾರೆ. ಇದನ್ನು ಅಧಿಕಾರಿಗಳು ಪರಿಶೀಲಿಸಿದರೆ ಇನ್ನಷ್ಟು ನಕಲಿಗಳು ಪತ್ತೆಯಾಗಬಹುದು. ಅದರಲ್ಲೂ ಸೊರಬ, ಶಿಕಾರಿಪುರ ಮತ್ತು ಗ್ರಾಮಾಂತರದಲ್ಲಿ ಇವರ ಸಂಖ್ಯೆ ಅತ್ಯಧಿಕವಿದೆ. ಎಲ್ಲಿಂದಲೋ ಬಂದು ಎಂಬಿಬಿಎಸ್, ಬಿಎಎಂಸ್ ಎಂದೆಲ್ಲಾ ಡಿಗ್ರಿ ಬರೆದುಕೊಂಡು ಬೋರ್ಡು ಹಾಕಿಕೊಂಡು ಜನರನ್ನು ಯಾಮಾರಿಸಿ ವೃತ್ತಿ ನಡೆಸುತ್ತಿದ್ದಾರೆ. ಇವರನ್ನು ನಂಬಿ ಅವರಲ್ಲಿ ಚಿಕಿತ್ಸೆಗೆ ಹೋಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಔಷಧಿ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ಖಾಸಗಿ ಡಾಕ್ಟರ್ ಳಿ ಕಾಂಪೌಂಡರ್ ಆಗಿದ್ದವರು, ಹೊರರಾಜ್ಯದ ಮೆಡಿಕಲ್ ಕಾಲೇಜ್ ಹೆಸರಿನ ನಕಲಿ ಪ್ರಮಾಣ ಪತ್ರ ಪಡೆದು ದಂಧೆ ನಡೆಸುವವರೂ ನಕಲಿಗಳ ಪಟ್ಟಿಯಲ್ಲಿದ್ದಾರೆ. ಇನ್ನೂ ಕೆಲವರು ಆರೋಗ್ಯ ಇಲಾಖೆಯ ಬೇರೆ ಬೇರೆ ಹುದ್ದೆಯಲ್ಲಿದ್ದವರೂ ವೈದ್ಯರಾಗಿ ‘ಜನಸೇವೆ’ ಆರಭಿಸಿದ್ದಾರೆ. ಆದರೆ ಇಂತಹವರನ್ನು ಪತ್ತೆ ಹಚ್ಚುವ ಕೆಲಸ ಮಾತ್ರ ನಡೆಯುತ್ತಿಲ್ಲ.
ಇಲಾಖೆ ಪತ್ತೆ ಮಾಡಿದ 82  ನಕಲಿ ವೈದ್ಯರಿಗೆ ನೋಟೀಸ್‌ನ್ನು ನೀಡಲಾಗಿದೆ. ಇದಕ್ಕೆ ಪ್ರತಿಯಾಗಿ ಉಚ್ಛ ನ್ಯಾಯಾಲಯ ತನ್ನ 23-6-2017ರ ಆದೇಶದಲ್ಲಿ ಅನುಭವಿ ಮತ್ತು ವಂಶಪರಂಪರೆಯಾಗಿ ವೈದ್ಯ ವೃತ್ತಿ ಕೈಗೊಳ್ಳುವವರಿಗೆ  ಎರಡು ತಿಂಗಳ ಒಳಗಾಗಿ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರನ್ವಯ ನೋಟೀಸ್ ಜಾರಿ ಮಾಡಿರುವ ಕ್ರಮವು ನ್ಯಾಯಾಂಗ ನಿಂದನೆಯಾಗುವುದಾಗಿ ನೋಟೀಸ್ ನೀಡಿದಂತಹ ವ್ಯಕ್ತಿಗಳು ವಕೀಲರ ಮೂಲಕ  ಇಲಾಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ಹಾಗೂ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಂತಾಗಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಮಸೂದೆ 2007ರಿಂದ ಜಾರಿಯಾಗಿದೆ. ಇದರನ್ವಯ ಯಾವುದೇ ವೈದ್ಯ ವಿದ್ಯಾರ್ಹತೆ ಹೊಂದಿದ್ದರೂ ಈ ಅಧಿನಿಯಮದನ್ವಯ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಈ ಪ್ರಕಾರ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 482. ಕಾಯ್ದೆ ಜಾರಿಯಾದ ನಂತರ ವಿದ್ಯಾರ್ಹತೆ ಹೊಂದಿರದ ಅಂದರೆ ನಕಲಿ ಎನ್ನಲಾಗುವ 19 ಜನರ ವಿರುದ್ದ ಪ್ರಕರಣವನ್ನು ಇಲಾಖೆ ದಾಖಲಿಸಿದೆ. ಇದು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದೆ.
ಈ ನಕಲಿಗಳಲ್ಲಿ ಕೆಲವರು ಎಲೆಕ್ಟ್ರೋ ಹೋಮಿಯೋಪಥಿ, ಆಲ್ಟರ್‌ನೆಟಿನ್‌ವ ಸಿಸ್ಟಂ ಆಫ್ ಮೆಡಿಸಿನ್ಸ್ ಮತ್ತಿತರ ವೈದ್ಯ ಪದ್ದತಿಗಳಲ್ಲಿ ಚಿಕಿತ್ಸೆ ನೀಡಲು ಅವಕಾಶವಿರುವುದಾಗಿ ನ್ಯಾಯಾಲಯದ ಆದೇಶದೊಂದಿಗೆ ಅರ್ಜಿ ಸಲ್ಲಿಸಿ ನೋಂದಣಿಗೆ ಅವಕಾಶ ಕೊಡುವಂತೆ ಕೋರಿದ್ದಾರೆ. ಆದರೆ ಈವರೆಗೆ ಇವರನ್ನು ನೊಂದಾಯಿಸಿಕೊಂಡಿಲ್ಲ.
 ಈ  ರೀತಿ ನಿಗದಿತ ವಿದ್ಯಾರ್ಹತೆ ಇಲ್ಲದೇ ಇರುವವರು ವೈದ್ಯ ವೃತ್ತಿ ಮಾಡುವುದರಿಂದ ಜನರಿಗೆ ಅಪಾಯವಿದೆ. ಕಳೆದ ವರ್ಷ ಸಾಗರ ತಾಲೂಕು ಮಾಸೂರು ಸಮೀಪದ ಮೆಳವರಿಗೆ ಎಂಬಲ್ಲಿ ಸಕ್ಕರೆ ಕಾಯಿಲೆ ಇದ್ದ ವ್ಯಕ್ತಿಗೆ ನಕಲಿ ವೈದ್ಯ ಚಿಕಿತ್ಸೆ ನೀಡಿದ್ದನು. ಅಲ್ಲದೆ ಇನ್ನು ಮುಂದೆ ಬೇರೆ ಯಾವ ಔಷಧಿ ತೆಗೆದುಕೊಳ್ಳದಂತೆ ಸೂಚಿಸಿದ್ದನು. ಜೊತೆಗೆ ಆ ಗ್ರಾಮದ ಸಕ್ಕರೆ ಕಾಯಿಲೆ ರೋಗಿಗಳಿಗೆಲ್ಲ ತಾನು ಹೇಳಿದ ಔಷಧಿಯನ್ನೇ ತೆಗೆದುಕೊಳ್ಳುವಂತೆ ಸೂಚಿಸಿದ್ದನು. ಅದರೆ ಮೊದಲು ಔಷಧಿ ತೆಗೆದುಕೊಂಡವನು ಒಂದೇ ವಾರದಲ್ಲಿ ಸತ್ತುಹೋದದ್ದನ್ನು ಸ್ಮರಿಸಬಹುದು.
ಈಗ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು ನಕಲಿಗಳ ವಿರುದ್ದ ಕ್ರಮ ಜರುಗಿಸಲು ಅವಕಾಶವಿಲ್ಲ. ಇದೇನಿದ್ದರೂ ಸರ್ಕಾರದ ಮಟ್ಟದಲ್ಲಿ ತೀರ್ಮಾನಮವಾಗಬೇಕಿದೆ. ಪಾರಂಪರಿಕ ನಾಟಿ ವೈದ್ಯರು ಮತ್ತು ಅನುಭವಿ ವೈದ್ಯರನ್ನು ಬಿಟ್ಟು ಉಳಿದವರ ವಿರುದ್ದ ಯಾವ ರೀತಿಯ ಕ್ರಮ ತೆದುಕೊಳ್ಳಬೇಕೆನ್ನುವುದನ್ನು ಸರ್ಕಾರ ಶೀಘ್ರವೇ ಸೂಚಿಸಿದರೆ ಇವರೆಲ್ಲರನ್ನು ಮಟ್ಟ ಹಾಕಲು ಸಾಧ್ಯವಿದೆ. ಇಲ್ಲವಾದಲ್ಲಿ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಇನ್ನಷ್ಟು ನಕಲಿ ವೈದ್ಯರು ಹುಟ್ಟಿಕೊಂಡು ಪ್ರಾಕ್ಟೀಸ್ ನಡೆಸುವ ಅಪಾಯವೂ ಇದೆ.
ಸರ್ಕಾರ ಮುಲಾಜಿಲ್ಲದೆ ನಕಲಿ ವೈದ್ಯರನ್ನು ಮಟ್ಟ ಹಾಕುವ ಕೆಲಸ ಮಾಡಿದರೆ ಮಾತ್ರ ಗ್ರಾಮಾಂತರದಲ್ಲಿ ಅಮಾಯಕರ ಜೀವ ಉಳಿಸಬಹುದು. ಇಲ್ಲವಾದಲ್ಲಿ ಅಜ್ಞಾನದಿಂದಾಗಿ ಮತ್ತು ನಾಟಿ ಔಷಧಿ ಎಂದು ನಂಬಿ ಜೀವ ಕಳೆದುಕೊಳ್ಳಲೂಬಹುದು.



ತಾಲೂಕುವಾರು ಪತ್ತೆಯಾದ ನಕಲಿ ವೈದ್ಯರ ಸಂಖ್ಯೆ
ಶಿವಮೊಗ್ಗ-13
ಭದ್ರಾವತಿ-13
ಶಿಕಾರಿಪುರ-32
ತೀರ್ಥಹಳ್ಳಿ-5
ಸೊರಬ-9
ಸಾಗರ-8
ಹೊಸನಗರ-2
ಒಟ್ಟೂ- 82
..........................

published on 9. feb-2018
..................................
  .............................................


ಮಂಗನ ಕಾಯಿಲೆ ನಿರ್ಮೂಲನೆ ಎಂದು?


ಮಂಗನ ಕಾಯಲೆ ಬಗ್ಗೆ ಹತ್ತಾರು ಸಭೆ ನಡೆಯುತ್ತದೆ. ಆದರೆ ಫಲಿತಾಂಶ ಶೂನ್ಯ. ಕಾಡಿಗೆ ಹೋಗಬೇಡಿ ಎಂಬ ಪುಕ್ಕಟೆ ಸಲಹೆಯನ್ನು ಅಧಿಕಾರಿಗಳು  ನೆನಪಿಟ್ಟು ಪ್ರತಿವರ್ಷ ಕೊಡುತ್ತಿದ್ದಾರೆ. ಇದು ಸರಿಯಾದುದೇ ಆದರೂ, ಜನರು ಕಾಡಿಗೆ ಹೋಗದೆ ಹಳ್ಳಿಯಲ್ಲಿ ಜೀವನ ನಡೆಯುವುದಿಲ್ಲ. ಪ್ರತಿಯೊಂದಕ್ಕೂ ಕಾಡನ್ನೇ ಆಶ್ರಯಿಸುತ್ತಾರೆ. ಮನೆಯ ಸುತ್ತಮುತ್ತವೇ ಕಾಡಿರುತ್ತದೆ ಎನ್ನುವುದು ನಗರದ ಕಾಂಕ್ರೀಟ್ ಕಾಡಿನಲ್ಲಿರುವವರಿಗೆ ಅರ್ಥವೇ ಆಗುತ್ತಿಲ್ಲ.



ಪ್ರತಿವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಮಂಗನ ಕಾಯಿಲೆ ಬಗ್ಗೆ ವರದಿಗಳು ಆರಂಭವಾಗುತ್ತವೆ. ಚಳಿಗಾಲ ಮುಗಿಯುತ್ತಿದ್ದಂತೆಯೇ ಇದರ ಪ್ರಮಾಣ ಹೆಚ್ಚುತ್ತಿದೆ. ಬಿಸಿಲು ಧಗಧಗಿಸುವ ವೇಳೆ ಇನ್ನಷ್ಟು ಉಲ್ಬಣಿಸಿರುತ್ತದೆ. ಇಷ್ಟರ ಮಧ್ಯೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹತ್ತಾರು ಸಭೆ ನಡೆದಿರುತ್ತದೆ. ಕೇವಲ ಸಭೆ ನಡೆಸಿ ಜಾಗೃತಿ ಮೂಡಿಸುವುದಷ್ಟೇ ಈಗಿನ ಕೆಲಸವಾಗಿದೆಯೇ ವಿನಾ ರೋಗ ನಿರ್ಮೂಲನೆಗೆ ಯಾವ ಸರ್ಕಾರಗಳೂ ಮುಂದಾಗದಿರುವುದು ಬೇಸರದ ವಿಚಾರ.
ಮಂಗನ ಕಾಯಿಲೆ 1957ರಲ್ಲಿ ಮೊಟ್ಟಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಅಲ್ಲಿಂದೀಚೆಗೆ ಇದರ ಬಗ್ಗೆ ಸಾಕಷ್ಟು ವಿದೇಶಿ ತಜ್ಞರು ಸಹ ಬಂದು ಚರ್ಚಿಸಿ ಹೋದರು. ಆದರೆ ಸಂಶೋಧನಾಲಯವನ್ನು ಸ್ಥಾಪಿಸಲು ಯಾರೂ ಮುಂದಾಗಲಿಲ್ಲ. ಕೇವಲ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದಷ್ಟೇ ಸದ್ಯದ ಕೆಲಸವಾಗಿದೆ. ಈ ಅರಿವನ್ನು ಅಧಿಕಾರಿಗಳು ಮೂಡಿಸಬೇಕೇಂದೇನಿಲ್ಲ. ಯಾವ ರೀತಿ ರಕ್ಷಿಸಿಕೊಳ್ಳಬೇಕೆನ್ನುವುದು ಜನರಿಗೆ ಚೆನ್ನಾಗಿ ಗೊತ್ತಿದೆ.
ಇಷ್ಟೊಂದು ವೈಜ್ಞಾನಿಕವಾಗಿ ಮುಂದುವರೆದಿರುವಾಗ ಈ ರೋಗಕ್ಕೆ ಇನ್ನೂ ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇನ್ನೂ ವಿಚಿತ್ರವೆಂದರೆ, ಇದರ ಸಂಶೋದನಯೆನ್ನು ಜಿಲ್ಲೆಯಲ್ಲಿ ನಡೆಸದೆ ಪುಣೆಯಲ್ಲಿ ನಡೆಸಲಾಗುತ್ತಿದೆ. ಸತ್ತ ಮಂಗನ ಬಗ್ಗೆ ಸಂಶೋಧನೆ ಪುಣೆಯಲ್ಲಾದರೆ ಅದರ ವರದಿ ಬರಲು ತಿಂಗಳೇ ಕಳೆಯುತ್ತದೆ. ಅಲ್ಲಿಯವರೆಗೆ ಇದರ ಬಾಧೆಗೆ ಒಳಗಾದವರ ಗತಿ ಏನು, ಈ ಬಗ್ಗೆ ಜನಪ್ರತಿನಿಧಿಗಳು ಏಕೆ ಗಂಭೀರವಾಗಿ ಯೋಚಿಸುತ್ತಿಲ್ಲ. ಇದನ್ನೆಲ್ಲ ನೋಡಿದಾಗ ಈವರೆಗಿನ ಸರ್ಕಾರಗಳು, ಮಲೆನಾಡಿನ ರಾಜಕಾರಣಿಗಳು ಇದರ ನಿರ್ಮೂಲನೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಗೋಚರವಾಗುತ್ತದೆ.
ಪೋಲಿಯೋ ನಿರ್ಮೂಲನೆ ಮಾಡಿಯಾಗಿದೆ. ಇದರಂತೆ ಇನ್ನೂ ಹತ್ತಾರು ರೋಗಗಳು ಈಗ ನಾಪತ್ತೆಯಾಗಿವೆ. ಆದರೆ 60 ವರ್ಷದ ಮಂಗನ ಕಾಯಿಲೆ ಮಾತ್ರ ನಿರ್ಮೂಲನೆಯಾಗಿಲ್ಲ. ಇದಕ್ಕೆ ಕಾರಣವೂ ಇದೆ. ಇದು ಕೇವಲ ಮಲೆನಾಡಿನ ಜನರ ಸಮಸ್ಯೆ ಆಗಿದೆ. ಎರಡನೆಯದಾಗಿ, ನಿರ್ದಿಷ್ಟ ಕಾಲದಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ  ವಿಶೇಷ ಗಮನವನ್ನು ಸರ್ಕಾರ ನೀಡುತ್ತಿಲ್ಲ. ಮಂಗನ ಕಾಯಿಲೆ ಪ್ರತಿ ವರ್ಷ ಬಂದು ನಾಲ್ಕಾರು ತಿಂಗಳಲ್ಲಿ ಹಲವರನ್ನು ಬಲಿ ಪಡೆಯುತ್ತಿದ್ದರೂ ಗಮನಹರಿಸುವವರಿಲ್ಲ ಎಂದರೆ ಇದರ ಗಂಭೀರತೆ ಇನ್ನೂ ಅರ್ಥವಾಗಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ.
ಇನ್ನು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಭೆ ನಡೆಸುವುದೇ ಒಂದು ಕೆಲಸ. ನಾಲ್ಕಾರು ಸಭೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಿದ್ದೇ, ಜನರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿದ್ದೇವೆ, ಸತ್ತ ಮಂಗನ ಬಗ್ಗೆ ಸಂಶೋಧನೆಗೆ ಪುಣೆಗೆ ಮಾದರಿ ರವಾನಿಸಲಾಗಿದೆ, ಕಾಡಿಗೆ ತೆರಳದಂತೆ ಸೂಚಿಸಲಾಗಿದೆ. ಎರಡು ಬಾರಿ ಲಸಿಕೆ ಹಾಕಲಾಗಿದೆ ಎನ್ನುವುದು ಸಭೆಯಿಂದ ಬರುವ ಸಿದ್ಧ ನಿರ್ಣಯ. ಇವಿಷ್ಟನ್ನು ಮಾಡಲು ಸಭೆ ಕರೆದು ಚರ್ಚಿಸಬೇಕಾದ್ದೇನಿದೆ?
ಜಿಲ್ಲಾಧಿಕಾರಿ ಹಂದಿಗೋಡಿಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿಯ ವಸ್ತ್ತುಸ್ಥಿತಿ ಗಮನಿಸಿದ್ದಾರೆ. ಸ್ವತಃ ಅವರೇ ವೈದ್ಯರಾಗಿರುವುದರಿಂದ  ಇನ್ನಷ್ಟು ಕಾಳಜಿ ವಹಿದ್ದಾರೆ. ಇದು ಮೆಚ್ಚತಕ್ಕ ವಿಚಾರವಾದರೂ ಮುಂದೇನು ಎನ್ನುವ ಪ್ರಶ್ನೆಗೆ ಅವರು ಉತ್ತರಿಸಬೇಕಾಗುತ್ತದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೇವಲ ಸರ್ಕಾರಕ್ಕೆ ಪ್ರಸ್ತಾವನೆ, ವರದಿ ಕಳುಹಿಸಿದರೆ ಮುಗಿಯಿತು ಎಂದು ಭಾವಿಸಿದಂತಿದೆ.
ಇದನ್ನೆಲ್ಲ ಕೈಬಿಟ್ಟು ಅಧಿಕರಿಗಳು, ಜನಪ್ರತಿನಿಧಿಗಳು ಮತ್ತು ಸರ್ಕಾರ ಮುಂದಾಗಿ ಖಾಯಂ ನಿವಾರಣೆಗೆ ಮುಂದಾಗಬೇಕಿದೆ. ಸಂಶೋಧನಾ ಕೇಂದ್ರ, ಆಸ್ಪತ್ರೆ ಆರಂಭಿಸಬೇಕಿದೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ್ದರೆ ಮಾತ್ರ ಇದಕ್ಕೆ ಮಹತ್ವ ಬರುತ್ತಿತೇನೋ. ದುರ್ದೈವವೆಂದರೆ, ಮಲೆನಾಡಿನ ಮೂಲೆಯಲ್ಲಿರುವವರಿಗೆ ಮಾತ್ರ ಇದರ ಅಪಾಯ ತಟ್ಟುತ್ತಿದೆ.  ಸೇವಾ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಿರುವುದು ಕಂಡುಬರುತ್ತಿಲ್ಲ. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಅವರು ಗ್ರಾಮಗಳಿಗೆ ಹೋಗಿ ಜನರ ಆರೋಗ್ಯದ ಬಗ್ಗೆ ಕೆಲಸ ಮಾಡಬೇಕಿದೆ.
ಕೇವಲ ಸಭೆ ನಡೆಸಿ ಮತ್ತು ಸಲಹೆ ಕೊಡುವುದರಿಂದ ಮಂಗನ ಕಾಯಿಲೆಯನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಇಚ್ಛಾಶಕ್ತಿ ಹೊಂದಿ ಮುನ್ನುಗ್ಗಿ ಕೆಲಸ ಮಾಡುವವವರು ಈಗ ಬೇಕಾಗಿದ್ದಾರೆ.
ಒಟ್ಟಿನಲ್ಲಿ, ಮಂಗನ ಕಾಯಿಲೆಯನ್ನು ಸರ್ಕಾರಗಳು ನಿರ್ಲಕ್ಷಿಸದೆ ಸಂಶೋಧನೆ ಕೇಂದ್ರ, ವಿಶೇಷ ಆಸ್ಪತ್ರೆ ತೆರೆಯುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಜೊತೆಗೆ ಅವಶ್ಯಕ ಔಷಧಿಯನ್ನು ಅತಿ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಜನರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕಿದೆ. ಲಯನ್ಸ್, ರೋಟರಿಯಂತಹ ಸೇವಾಮನೋಭಾವದ ವಿವಿಧ ಸಂಘ-ಸಂಸ್ಥೆಗಳು ಇದರಲ್ಲಿ ಕೈಜೋಡಿಸಬೇಕಿದೆ.  



ಈ ವರ್ಷ ಮಂಗನ ಕಾಯಿಲೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಒಂದು ಸಾವು ಸಂಭವಿಸಿದೆ. 2012ರಲ್ಲಿ 92, 2013ರಲ್ಲಿ 3, 2014ರಲ್ಲಿ ಜಿಲ್ಲೆಯಲ್ಲಿ 147 ಮಂಗನ ಕಾಯಿಲೆ ಪ್ರಕರಣಗಳು, 2015ರಲ್ಲಿ 41ಪ್ರಕರಣಗಳು, 2016ರಲ್ಲಿ 13, 2017ರಲ್ಲಿ 37ಪ್ರಕರಣಗಳು ಪತ್ತೆಯಾಗಿತ್ತು. ಪ್ರಸ್ತುತ ಮಂಗನ ಕಾಯಿಲೆ ದೃಢೀಕರಿಸಲು ಪುಣೆಯ ಪ್ರಯೋಗಾಲಯಕ್ಕೆ ಸತ್ತ ಮಂಗದ ಜೈವಿಕ ಅಂಶಗಳನ್ನು ಕಳುಹಿಸಲಾಗುತ್ತಿದೆ. ವರದಿ ಸಿಗುವುದು ವಿಳಂಬವಾಗುತ್ತಿದೆ.
-ಪ್ರಭಾರ ಡಿಎಚ್‌ಓ ಹನುಮಂತಪ್ಪ.

published on Feb  6/2018
..........................................

 ಗ್ಯಾಸ್ ವಿತರಕರ ವಿರುದ್ದ ಅಧಿಕಾರಿಗಳ ಮೌನ
  ಹೆಚ್ಚುವರಿ 50 ರೂ ಪಡೆದರೂ ಕ್ರಮವಿಲ್ಲ





ಅಡುಗೆ ಅನಿಲ ವಿತರಕರು ಮೊದಲ 5 ಕಿ. ಮೀ ವರೆಗೆ ಯಾವುದೇ ಶುಲ್ಕವಿಲ್ಲದೆ ಸಿಲಿಂಡರ್ ಪೂರೈಸಬೇಕು. ಆನಂತರ ಪ್ರತಿ ಒಂದು ಕಿ. ಮೀಗೆ ಒಂದೂವರೆ ರೂ. ನಂತೆ ಶುಲ್ಕ ವಿಧಿಸಬೇಕು. ಇದನ್ನು ಗ್ರಾಹಕರು ಮೊದಲು ಅರಿತುಕೊಳ್ಳಬೇಕಿದೆ. ಆನಂತರ ಪ್ರಶ್ನಿಸಬೇಕಿದೆ. ಪ್ರಶ್ನಿಸುವ ಮನೋಭಾವ ಪ್ರತಿ ಮನೆಯಿಂದ ಆರಂಭವಾದರೆ ಇದನ್ನು ನಿಲ್ಲಿಸಲು ಸಾಧ್ಯ. ಜೊತೆಗೆ ಅನಿವಾರ್ಯಾವಾದರೆ ಸಂಘಟನೆಗಳು, ಸಾರ್ವಜನಿಕರು ಧರಣಿ ಹೂಡಿಯಾದರೂ ಈ ಶುಲ್ಕ ಪಡೆಯುವ ಪದ್ದತಿಗೆ ಪೂರ್ಣವಿರಾಮ ಹಾಕಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕಿನ ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಕೂಡಲೇ ಕ್ರಮ ಕೈಗೊಳ್ಳಬೇಕಿದೆ.


ಶಿವಮೊಗ್ಗ ಜಿಲ್ಲೆಯಾದ್ಯಂತ ಅಡುಗೆ ಅನಿಲ ಸಿಲಿಂಡರ್ ವಿತರಕರು ವಿತರಣೆಯ ವೇಳೆ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುತ್ತಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಇದೇ ವಿಚಾರ ಮೊನ್ನೆ ಜರುಗಿದ ಜಿಪಂ ಸಭೆಯಲ್ಲೂ ಚರ್ಚೆಗೆ ಒಳಗಾಗಿದೆ. ಆದರೆ ಸಾರ್ವಜನಿಕರು ಮತ್ತು ಸಂಘಟನೆಗಳು ಮಾತ್ರ ಈ ಬಗ್ಗೆ ಮೌನ ತಾಳಿರುವುದು ವಿಶೇಷವಾಗಿದೆ.
ಅಡುಗೆ ಅನಿಲ ಸಿಲಿಂಡರ್ ವಿತರಣೆಯಲ್ಲಿ ನಿಗದಿತ ದರಕ್ಕಿಂತ 50 ರಿಂದ 100ರೂ.ಗಳನ್ನು ಸಂಬಂಧಿಸಿದ ಏಜೆನ್ಸಿಯವರು ಜನಸಾಮಾನ್ಯರಿಂದ ವಸೂಲಿ ಮಾಡುತ್ತಿದ್ದಾರೆ.  ಈ ರೀತಿ ವಸೂಲಿ ಮಾಡಬೇಕೆಂದು ಯಾವ ಅಡುಗೆ ಅನಿಲ ಕಂಪೆನಿಯವರೂ ಹೇಳಿಲ್ಲ. ಪ್ರತಿ ಮನೆಯ ಬಾಗಿಲಿಗೂ ತಲುಪಿಸುವ ಜವಾಬ್ದಾರಿಯ ಜೊತೆಗೆ ಕಂಪನಿ ನಿಗದಿಪಡಿಸಿದ ದರವನ್ನು ಮಾತ್ರ ವಸೂಲು ಮಾಡಬೇಕು. ಆದರೆ ಸಿಲಿಂಡರ್ ವಿತರಕರು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ವಿತರಕರು ಏಕೆ ಗಮನಹರಿಸುತ್ತಿಲ್ಲ ಎನ್ನುವುದು ಬಹುಮುಖ್ಯ ಪ್ರಶ್ನೆ.
ಕೇವಲ ಒಂದು ಸಿಲಿಂಡರ್‌ಗೆ 50 ರೂ ಪಡೆದರೂ ದಿನವೊಂದಕ್ಕೆ ಲೋಡ್‌ಗಟ್ಟಲೆ ಸಿಲಿಂಡರ್ ವಿತರಿಸುವ ಏಜೆನ್ಸಿಯವರು ಎಷ್ಟು ಹಣ ಗಳಿಸಬಹುದೆನ್ನುವುದುನ್ನು ಯೋಚಿಸಬೇಕಿದೆ. ಇದನ್ನೇ ವಾರ್ಷಿಕವಾಗಿ ಲೆಕ್ಕಹಾಕಿದರೆ ಎಷ್ಟೋ ಲಕ್ಷ ರೂ. ಪುಕ್ಕಟೆಯಾಗಿ ಅವರಿಗೆ ಲಾಭವಾಗುತ್ತದೆ.
ದಿನಸಿ ಅಂಗಡಿ, ತರಕಾರಿ ಅಂಗಡಿಯಲ್ಲಿ ಚೌಕಾಸಿ ಮಾಡುವ ಸಾರ್ವಜನಿಕರು ಈ ಬಗ್ಗೆ ತುಟಪಿಟಕ್ಕೆನ್ನುತ್ತಿಲ್ಲ. ಏಕೆ ಎನ್ನುವುದೇ ಪ್ರಶ್ನೆಯಾಗಿದೆ. ಎಲ್ಲಿಯವರೆಗೆ ಸಾರ್ವಜನಿಕರು ಇಂತಹ ಅನ್ಯಾಯದ ವಿರುದ್ದ ಪ್ರತಿಭಟಿಸುವುದಿಲ್ಲವೋ ಅಲ್ಲಿಯವರೆಗೆ ಅನ್ಯಾಯ ಮುಂದುವರೆಯುತ್ತಲೇ ಇರುತ್ತದೆ. ಕೆಲವು ಸಂಘಟನೆಗಳು ಬೇಡವಾದ, ತಮಗೆ ಸಂಬಂಧಿಸದ ಅಥವಾ ರಾಜಕೀಯ ವಿಷಯಗಳ ಬಗ್ಗೆ ಹೋರಾಡುತ್ತಾರೆ. ಆದರೆ ಸಾರ್ವಜನಿಕ ಸಮಸ್ಯೆಯನ್ನು ಏಕೆ ಕೈಗೆತ್ತಿಕೊಳ್ಳುತ್ತಿಲ್ಲ. ಏಜೆನ್ಸಿಯವರ ಶೋರೂಮ್ ಮುಂದೆ ಧರಣಿ ಮಾಡಿ ಇದನ್ನು ಪ್ರತಿಭಟಿಸುವ ಕೆಲಸವಾಗಬೇಕಿದೆ.
ಇಲ್ಲಿಯವರೆಗೆ ಯಾವ ಗ್ರಾಹಕನೂ ಇದನ್ನು ಧೈರ್ಯವಾಗಿ ಪ್ರಶ್ನಿಸಿಲ್ಲ. ಏಕೆ ಗೊತ್ತೇ? ಪ್ರಶ್ನ್ನಿಸಿದವರಿಗೆ ಸಕಾಲದಲ್ಲಿ ಸಿಲಿಂಡರ್ ತಲುಪಿಸುವುದಿಲ್ಲ. ಇಲ್ಲಸಲ್ಲದ ನೆವ ಹೇಳಿ ತೊಂದರೆ ಕೊಡುತ್ತಾರೆ. ಇಂತಹ ಬಲಿಷ್ಠ ಅನಿಲ ವಿತರಕರ  ವಿರುದ್ದ ಜನರು ಇನ್ನಾದರೂ ಪ್ರತಿಭಟಿಸಬೇಕಿದೆ. ಪ್ರತಿ ಗ್ರಾಹಕ ವರ್ಷಕ್ಕೆ ಕನಿಷ್ಠ 10 ಸಿಲಿಂಡರ್ ಪಡೆದರೂ ಕನಿಷ್ಟ 500 ರೂ. ವನ್ನು ಪುಕ್ಕಟೆಯಾಗಿ ಏಜೆನ್ಸಿಯವರಿಗೆ ಕೊಟ್ಟಂತಾಗುತ್ತದೆ. ಇದನ್ನೆಲ್ಲ ಕೇಳುವವರಿಲ್ಲವೇ?
ಶಿವಮೊಗ್ಗ ನಗರದಲ್ಲೇ ಸುಮಾರು 8 ಗ್ಯಾಸ್ ಏಜೆನ್ಸಿಗಳಿವೆ. ಇವು ಕೂಡಲೇ ಇಂತಹ ಅನಧಿಕೃತ ಶುಲ್ಕ ಪಡೆಯುವುದನ್ನು ನಿಲ್ಲಿಸಬೇಕಿದೆ. ಜೊತೆಗೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟು ಯಾರೂ ಹೆಚ್ಚುವರಿ ಸಾಗಾಣಿಕೆ ವೆಚ್ಚ ಕೊಡಬಾರದೆಂದು ಪ್ರಚುರಪಡಿಬೇಕು. ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಇದನ್ನು ತಡೆಗಟ್ಟುವ ಕೆಲಸವನ್ನು ಮಾಡಬೇಕಿದೆ.
ಜಿಪಂ ಸಭೆಯಲ್ಲಿ ಈ ಬಗ್ಗೆ ಸಮರ್ಪಕ ಉತ್ತರವನ್ನು ಕೊಡದೆ ಅಧಿಕಾರಿಗಳು ನುಣುಚಿಕೊಂಡಿದ್ದಾರೆ. ಕಾಯಿದೆ ಇದೆ ಎಂದು ಹೇಳುವವರು ಅದನ್ನು ಅನುಷ್ಠಾನಕ್ಕೆ ತರುವಂತೆ ನೋಡಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಏಜೆನ್ಸಿಗಳ ಪರ ಕೆಲಸ ಮಾಡುತ್ತಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಇನ್ನಷು ಪುಷ್ಠಿ ಬಂದಂತಾಗುತ್ತದೆ.

published on Feb-5/2018
 ......................................