ಕೆರೆಯ ಕರೆಗೆ ಓಗೊಡದಿದ್ದರೆ ಕಾಲ ಕರೆದಾನು
ಮುಂದಿನ ಮಹಾಯುದ್ಧ ನಡೆದರೆ ಅದು ನೀರಿಗಾಗಿ ಎನ್ನುವ ಎಚ್ಚರಿಕೆಯ ಮಾತು ಆಗಾಗ ಕೇಳಿಬರುತ್ತಿದ್ದರೂ ಇದನ್ನು ನಾವು ನಿರ್ಲಕ್ಷಿಸುತ್ತ ಜಲಮೂಲವನ್ನು ಮುಚ್ಚುತ್ತಿದ್ದೇವೆ. ಅನಗತ್ಯವಾಗಿ ನೀರನ್ನು ಚೆಲ್ಲುತ್ತಿದ್ದೇವೆ. 31 ಎಕ್ರೆ ವಿಸ್ತೀರ್ಣದ ನವುಲೆ ಕೆರೆಯನ್ನೇ ಆಡಳಿತಶಾಹಿ ಮತ್ತು ಅಧಿಕಾರಶಾಹಿಗಳು ಸೇರಿ ನಿರ್ಮೂಲನೆ ಮಾಡುತ್ತಿರುವ ದೃಶ್ಯ ನಮ್ಮ ಕಣ್ಣೆದುರೇ ಇದ್ದರೂ ನಾವಿನ್ನೂ ಎಚ್ಚೆತ್ತಿಲ್ಲ. ಹೋದರೆ ಹೋಗಲಿ, ನಮ್ಮ ಮನೆಯಲ್ಲಿ ಸಾಕಷ್ಟು ನೀರಿದೆ ಎನ್ನುವ ಮನಃಸ್ಥಿತಿ ನಮ್ಮದು. ಪರಿಸರ ಉಳಿಸಿ ಎಂದು ಕೇವಲ ಜುಲೈನಲ್ಲಿ ಮಾತ್ರ ಘೋಷಣೆ ಹಾಕಿದರೆ ಸಾಲದು. ವರ್ಷದುದ್ದಕ್ಕೂ ಪರಿಸರ (ನೆಲ, ಜಲ, ಗಾಳಿ, ಅರಣ್ಯ)ದ ಮೇಲೆ ನಡೆಯುವ ಅತ್ಯಾಚಾರ, ಅನಾಚಾರ ತಡೆಯುವ ಕೆಲಸಮಾಡಿದರೆ ಸಮತೋಲಿತ ಪರಿಸರ ಉಳಿಸಬಹುದು.
ದಕ್ಷಿಣ ಆಪ್ರಿಕಾದ ಕೇಪ್‌ಟೌನ್‌ನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿದೆ. ಕಳೆದ ವರ್ಷ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೇಸಿಗೆಯಲ್ಲಿ ನೀರಿಗಾಗಿ ಜನರು ಪರದಾಡಿದ ಕ್ಷಣಗಳು ಇನ್ನೂ ಮನಃಪಟದಲ್ಲಿವೆ. ಆಫ್ರಿಕಾಕಾದ ಆರು ದೇಶಗಳಿಗೆ ನೀರೊದಗಿಸುವ ಸರೋವರವೊಂದು ಬತ್ತಿಹೋಗಿ ನೀರಿಗಾಗಿ ಹೊಡೆದಾಡುವ ಸ್ಥಿತಿ ಎದುರಾಗಿದೆ. ಸೂಡಾನ್ ಎನ್ನುವ ಸಣ್ಣ ದೇಶದ ಸ್ಥಿತಿಯೂ ಇದೇ ಆಗಿದೆ.
ನಾವು ಬದುಕಲು ನೀರು, ಗಾಳಿ, ಶುದ್ಧ ಪರಿಸರ ಅಗತ್ಯ. ಆದರೆ ಇಂದು ಅವೆಲ್ಲವನ್ನೂ ಅಭಿವೃದ್ಧಿ ಹೆಸರಿನಲ್ಲಿ ಬಲಿಕೊಡುತ್ತಿದ್ದೇವೆ. ತುಂಗಾ ನದಿ ತಟದಲ್ಲಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಾವು ನಾಳೆ ಅದು ಬತ್ತಿ ಹೋದರೆ ಏನಾದೀತೆಂಬ ಬಗ್ಗೆ ಯೋಚಿಸುತ್ತಿಲ್ಲ. ಭವಿಷ್ಯದ ಚಿಂತನೆ ಮಾಡದೆ ಜೀವನ ಸಾಗಿಸಿದರೆ ಅದು ಮುಂದಿನ ಜನಾಂಗವನ್ನು ಕಷ್ಟಕ್ಕೆ ನೂಕಿದಂತಾಗುತ್ತದೆ.
ಇಷ್ಟೆಲ್ಲ ಹೇಳುವುದಕ್ಕೆ ಕಾರಣವೇನೆಂದರೆ, ನಗರದ ನವುಲೆ ಕೆರೆಯನ್ನು ಉಳಿಸುವ ಸಂಬಂಧ ಈಗ ಹಲವು ಸಂಘಟನೆಗಳು ಮುಂದಾಗಿವೆ. ಆದರೆ ನಾಗರಿಕರು ಮತ್ತು ನಗರದ ಹತ್ತಾರು ಸಂಘಟನೆಗಳು ಇದು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು. ಕೆರೆಯ ಮಹತ್ವ, ಅದರಿದಂ ನಗರದ ಮೇಲಾಗುವ ಸತ್ಪ ರಿಣಾಮಗಳ ಬಗ್ಗೆ ಜನರು ಯೋಚಿಸಬೇಕಿದೆ. ಪರಿಸರ ಹಾನಿ ಮಾಡಿಕೊಳ್ಳಬಾರದೆಂದು ಎಲ್ಲೆಡೆ ಡಂಗುರ ಸಾರುತ್ತಿದ್ದರೂ ಅದನ್ನು ಉಳಿಸುವತ್ತ ನಾವ್ಯಾರೂ ಮನಸ್ಸು ಮಾಡುತ್ತಿಲ್ಲ. ಕೆಲವೇ ಪರಿಸರಾಸಕ್ತರು ಮಾತ್ರ ಇದಕ್ಕೆ ಮುಂದಾಗುತ್ತಿದ್ದಾರೆ.
ನವುಲೆ ಕೆರೆಯ ಮಧ್ಯೆ ರಾಷ್ಟ್ರೀಯ ಹೆದ್ದಾರಿ ನಿಗಮದವರು ಶಿಕಾರಿಪುರ- ಶಿವಮೊಗ್ಗ ರಸ್ತೆ ಮಾಡಲು ಮುಂದಾಗಿರುವುದು ವಿವಾದವನ್ನು ಹುಟ್ಟುಹಾಕಿದೆ. ಹೇಗಾದರೂ ಮಾಡಿ ಇದನ್ನು ನಿಲ್ಲಿಸಲೆಬೇಕೆಂದು ನಾಲ್ಕಾರು ಸಂಘಟನೆಯವರು ಮುಂದಾಗಿದ್ದಾರೆ. 31 ಎಕ್ರೆಯ ಕೆರೆ ಈಗ ಕೇವಲ 5 ಎಕ್ರೆಯಷ್ಟು ಮಾತ್ರ ಉಳಿದಿದೆ. ಇದರಲ್ಲೂ 1.26 ಎಕ್ರೆಯನ್ನು ರಸ್ತೆ ಮಾಡಲು ಮುಚ್ಚುವ ಕೆಲಸ ಆರಂಭಿಸಲಾಗಿದೆ. ಎಷ್ಟೇ ಮನವರಿಕೆ ಮಾಡಿಡಿಕೊಟ್ಟರೂ ಪರಿಸರ ಕಾಳಜಿ ಇಲ್ಲದ ಆಡಳಿತಶಾಹಿ ನಾಗರಿಕರ ಮನವಿಯನ್ನು ಪುರಸ್ಕರಿಸದೆ ರಸ್ತೆ ಮಾಡುವುದೇ ತಮ್ಮ ಗುರಿ ಎಂಬಂತೆ ವರ್ತಿಸುತ್ತಿದೆ.
ಕೆರೆ ಮಧ್ಯೆ ರಸ್ತೆ ಮಾಡುವುದನ್ನು ಕೈಬಿಟ್ಟು ಈಗಿರುವ ದಂಡೆ ಮೇಲಿನ ರಸ್ತೆಯನ್ನೇ ತಡೆಗೋಡೆ ನಿರ್ಮಿಸಿ ವಿಸ್ತಾರಗೊಳಿಸುವ ಅವಕಾಶವಿದ್ದರೂ ಅಲ್ಲಿ ಮೂರ್ನಾಲ್ಕು ತಿರುವು ಬರುತ್ತದೆ. ಇದರಿಂದ ಸಂಚಾರಕ್ಕೆ ಅಪಾಯ ಎದುರಾಗುತ್ತದೆ ಎನ್ನುವುದು ಅಧಿಕಾರಿಗಳ ವಾದ. ಇದು ಮಲೆನಾಡು. ಇಲ್ಲಿನ ರಸ್ತೆಗಳೆಲ್ಲಾ ಓರೆ-ಕೋರೆಯಲ್ಲೇ ಇರುತ್ತವೆ. ಅದರಲ್ಲೂ ನಗರದೊಳಗಿನ ರಸ್ತೆ ಈ ರೀತಿ ಇರಬಾರದು ಎನ್ನುವ ಮನಃಸ್ಥಿತಿ ಅಧಿಕಾರಶಾಹಿಯದ್ದು. ಹೆದ್ದಾರಿಯಾಗಿರುವುದರಿಂದ 60-80 ಕಿ. ಮೀಯಲ್ಲಿ ಸಂಚರಿಸುತ್ತಾರೆ ಎನ್ನುವ ಇಂಜಿನೀಯರ್‌ಗಳಿಗೆ ನಗರದೊಳಕ್ಕೆ ವೇಗದ ಮಿತಿ ಎಷ್ಟೆನ್ನುವುದನ್ನೂ ಕಲಿಸಿಕೊಡಬೇಕಾಗಿದೆ.
ಇಂತಹ ಕನಿಷ್ಟ ಜ್ಞಾನವನ್ನು ಹೊಂದಿರದ ಇಂಜಿನೀಯರ್ ಮತ್ತು ಅಧಿಕಾರಿಗಳು ಕೆರೆಯ ಮಧ್ಯದಲ್ಲಿ ರಸ್ತೆ ಮಾಡಲು ಮುಂದಾಗಿ ಈಗ ಜನರ ಆಕ್ರೋಶ ಎದುರಿಸುವಂತಾಗಿದೆ. 2005-06ರ ಸಾಲಿನಲ್ಲಿ ಇಲ್ಲಿ ಕೃಷಿ ಮಾಡಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಂದಿನ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಸ್ಟೇಡಿಯಂಗೆ 26 ಎಕರೆ ಜಾಗ ನೀಡಿತು. ಆಗ ಹಲವರು ಪ್ರತಿಭಟಿಸಿದರೂ ಅದು ಅಷ್ಟೊಂದು ಉಗ್ರವಾಗಿರದ ಕಾರಣ ಜನರ ಸ್ಟೇಡಿಯಂ ನಿರ್ಮಾಣವಾಗಿದೆ. ಈಗ ಇರುವ 5 ಎಕರೆಯನ್ನಾದರೂ ಉಳಿಸಿ ಚೆನ್ನಾಗಿ ಅಭಿವೃದ್ಧಿಪಡಿಸಿ, ದಂಡೆ ಕಟ್ಟುವ ಮೂಲಕ ಸುತ್ತ ಮರ-ಗಿಡ ಬೆಳೆಸಿ, ನೆರಳು, ಪ್ರಾಣಿ- ಪಕ್ಷಿಗಳಿಗೆ ಆಹಾರ,ವಾಸಸ್ಥಾನ ಕಲ್ಪಿಸಿದರೆ ನಗರಕ್ಕೂ ಒಂದು ಸೌಂದರ್ಯ ಬರುತ್ತದೆ. ಸ್ಮಾರ್ಟ್ ಸಿಟಿ ಆಗಲಿರುವ ಶಿವಮೊಗ್ಗ ಒಂದು ಸುಂದರ ತಾಣವೂ ಆಗುತ್ತದೆ.
ಕೆರೆಗಳು ನಗರದೊಳಕ್ಕೆ ಅಥವಾ ನಗರದಂಚಿನಲ್ಲಿದ್ದರೆ ಅವು ಶಾಖವನ್ನು ಹೀರಿಕೊಳ್ಳುತ್ತವೆ. ನೀರಿನ ಸೆಲೆ ಬತ್ತದಂತೆ ಮಾಡುತ್ತವೆ. ಇದರಿಂದ ಅಂತರ್ಜಲ ವೃದ್ಧಿ ಸಾಧ್ಯ. ಹಲವು ಜಲಚರ-ಪ್ರಾಣಿ ಪಕ್ಷಿಗಳಿಗೆ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ಇದರಿಂದಾಗಿ ನಾಡಿನ ಒಂದು ಸಣ್ಣ ಜಲಮೂಲವನ್ನೂ ರಕ್ಷಿಸುವ ಕೆಲಸವಾಗಬೇಕಿದೆ. ಈ ಸಂಬಂಧ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಇಂದು ಹೋರಾಟ ನಡೆಯುತ್ತಿದೆ. ಆದರೆ ನಗರದವರು ಮಾತ್ರ ಇನ್ನೂ ಜಾಗೃತರಾಗದಿರುವುದು ವಿಷಾನೀಯ.
ನಾವು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ಶುದ್ಧ ನೀರು, ಗಾಳಿ (ಪರಿಸರ)ಯನ್ನು ಮಾತ್ರ. ಇದನ್ನೂ ಕೊಡದಿದ್ದರೆ ಮುಂದಿನ ಅವರು ನಮ್ಮನ್ನು ಕ್ಷಮಿಸಲಾರರು. ನಗರದ ಹಿತಚಿಂತನೆ ಮಾಡುವ ಸ್ಥಿತಿ ನಗರದ ಎಲ್ಲರದ್ದಾಗಬೇಕಿತ್ತು. ಆದರೆ ಕೆಲವು ಪರಿಸರಾಸಕ್ತರು ಮಾತ್ರ ಗಮನ ಹರಿಸುವಂತಾಗಿದೆ. ಹೋರಾಟಗಾರರು ಎಂದುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿನಿತ್ಯ ಠಳಾಯಿಸುವವರಿಗೆ ಇದರ ಪರಿವೇ ಇಲ್ಲವೇ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಕನ್ನಡ ನೆಲ-ಜಲಕ್ಕಾಗಿ ಹೋರಾಟ ಎಂದು ಹೆಸರಿಟ್ಟುಕೊಂಡ ಸಂಘಟನೆಯವರೂ ಸಹ ನಾಪತ್ತೆಯಾಗಿದ್ದಾರೆ. ಅವರ ಪ್ರಕಾರ ಜಲವಿವಾದಕ್ಕೆ ಮಾತ್ರ ಹೋರಾಟ ಮಾಡುವುದಿರಬಹುದೇನೋ.
ಈಗ ಅಣ್ಣಾ ಹಜಾರೆ ಹೋರಾಟ ಸಮಿತಿ ಮತ್ತು ನಾಗರಿಕ ಹಿತರಕ್ಷಣಾ ಸಮಿತಿ ಒಕ್ಕೂಟದವರು ನೇತೃತ್ವ ವಹಿಸಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಜೀವವನ್ನಾದರೂ ಕೊಟ್ಟೇವು, ನವುಲೆ ಕೆರೆಯನ್ನು ಉಳಿಸದೆ ಬಿಡುವುದಿಲ್ಲ ಎಂಬ ಧ್ಯೇಯದೊಂದಿಗೆ ಮುನ್ನುಗ್ಗಿದ್ದಾರೆ. ಅವರಿಗೆ ಬೆಂಬಲ ನೀಡಿ ನಾವೂ ಅವರೊಂದಿಗೆ ಕೈಜೋಡಿಸಬೇಕಿದೆ.
* ಕೆಎಲ್‌ಸಿಡಿಎ ಅಧಿನಿಯಮ 2014ರ ಅಧ್ಯಾಯ 3 (14)ರಲ್ಲಿ (6) ಪ್ರಕಾರ ಕೆರೆ ಅಂಗಳದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ.
* ಇದಕ್ಕೆ 3ರಿಂದ 5 ವರ್ಷದ ಶಿಕ್ಷೆ ಇದೆ.
* ಯಾವುದೇ ಕೆರೆ ಅಂಗಳದಲ್ಲಿ ಕಾಮಗಾರಿ ಆರಂಭಿಸುವ ಮುನ್ನ ರಾಷ್ಟ್ರೀಯ ಹಸಿರು ಪೀಠ (ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್-ಎನ್‌ಜಿಟಿ)ಯ ಅನುಮತಿ ಕಡ್ಡಾಯ.
* ನವುಲೆ ಕೆರೆ ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಬರವುದರಿಂದ ಕಾಮಗಾರಿ ಮುನ್ನ ಅವರ ಅನುಮತಿ ಪಡೆದಿಲ್ಲ.
* ಜಿಲ್ಲಾ ಸರೋವರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಯವರೇ ಈ ಕೆರೆ ಮುಚ್ಚಿ ರಸ್ತೆ ಮಾಡಲು ಅನುಮತಿ ನೀಡಿರುವುದು ಕಾನೂನುನುಬಾಹೀರವಾದದ್ದು.
* ವಿಶ್ವ ಬ್ಯಾಂಕ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಇದಾಗಿರುವುದರಿಂದ ಅದರ ಕಾನೂನಿನಲ್ಲಿ ಕೆರೆ, ಪರಿಸರರಿ, ಕಾಡು ಇವುಗಳನ್ನು ಹಾನಿಯಾಗುವುದಿದ್ದರೆ ಇರುವ ರಸ್ತೆಯನ್ನೇ ಅಭಿವೃದ್ಧಿಪಡಿಸಬೇಕೆನ್ನುವ ನಿಯಮವಿದೆ. ಆದರೆ ಇಲ್ಲಿ ಅದನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಅವರಿಗೆ ದೂರು ನೀಡಿದಲ್ಲಿ ಯೋಜನೆಯ ಹಣ ಬಿಡುಗಡೆಯಾಗುವುದಿಲ್ಲ.
* ಸದ್ಯ ಈ ಕಾಮಗಾರಿಗೆ ಕರ್ನಾಟಕ ಸರೋವರ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ತಡೆಯಾಜ್ಞೆ ನೀಡಿದೆ. ಕೆರೆಯಲ್ಲಿ ಕೈಗೊಂಡಿರುವ ಕಾಮಗಾರಿಯ ವಿವರ ನೀಡುವಂತೆ ಡಿಸಿ ಮತ್ತು ಕಾಮಗಾರಿ ನಡೆಸುತ್ತಿರುವ ಕೆ-ಶಿಪ್ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದೆ.
* ವಿಶ್ವಬ್ಯಾಂಕ್‌ಗೆ, ರಾಷ್ಟ್ರೀಯ ಹಸಿರು ಪೀಠಕ್ಕೆ, ಜಿಲ್ಲಾಧಿಕಾರಿಗೆ, ಪಾಲಿಕೆ ಆಯುಕ್ತರಿಗೆ, ಪೊಲೀಸರಿಗೆ ಮುಂದಿನ ಕ್ರಮಕ್ಕಾಗಿ ದೂರು ನೀಡಲಾಗಿದೆ.
published on-12 feb/18
...................................