ಮತ್ತೆ ಬಂತು ಮಂಗನ ಕಾಯಿಲೆ
* ಜಿಲ್ಲೆಯ 8 ಜನರಲ್ಲಿ ಪತ್ತೆ * ಇನ್ನೂ ಪತ್ತೆಯಾಗದ ನಿಖರ ಔಷಧಿ
1957ರಿಂದ ಇಲ್ಲಿಯವರೆಗೆ ಈ ರೋಗಕ್ಕೆ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 531 ಎಂಬ ಮಾಹಿತಿಯನ್ನು ಇಲಾಖೆ ನೀಡಿದೆ.
ಈ ವರ್ಷ ಮಂಗನ ಕಾಯಿಲೆ ಕೇವಲ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರವಲ್ಲ, ಪಕ್ಕದ ಗೋವಾ ರಾಜ್ಯದಲ್ಲೂ ಪತ್ತೆಯಾಗಿದೆ. ಸುಮಾರು 14 ಜನರಲ್ಲಿ ಮಂಗನ ಕಾಯಿಲೆಯ ವೈರಸ್ ಇರುವುದು ಕಂಡುಬಂದಿದೆ. ಪಕ್ಕದ ಉತ್ತರ ಕನ್ನಡ ಜಿಲ್ಲೆ ಜೋಯಡಾ ತಾಲೂಕಿನಲ್ಲಿ 6 ಜನರಲ್ಲಿ ಇದು ಪತ್ತೆಯಾಗಿದೆ. ಹೊನ್ನಾವರದಲ್ಲಿ ಮಹಿಳೆಯೊಬ್ಬರಲ್ಲಿ ಕಂಡುಬಂದಿದೆ. ಹೀಗೆ ಸುತ್ತಮುತ್ತಲ ಜಿಲ್ಲೆ, ತಾಲೂಕಿನಲ್ಲಿ ರೋಗ ವಿಸ್ತ್ತಾರಗೊಳ್ಳುತ್ತಿರುವುದು ಅದರ ತೀವ್ರತೆ ಹೆಚ್ಚಿದೆ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದೆ. ಗೋವಾದಲ್ಲಿ ಕಳೆದ ವರ್ಷ 24 ಜನರಲ್ಲಿ ಇದು ಪತ್ತೆಯಾಗಿ ನಾಲ್ವರು ಮೃತಪಟ್ಟಿದ್ದರು. ಜಿಲ್ಲೆಯಲ್ಲಿ 2012ರಲ್ಲಿ 92, 2013ರಲ್ಲಿ 03, 2014ರಲ್ಲಿ 143, 2015ರಲ್ಲಿ 41 ಜನರಿಗೆ ಮಂಗನ ಕಾಯಿಲೆ ತಗುಲಿರುವುದು ದೃಢಪಟ್ಟಿತ್ತು
ಬಿರುಬಿಸಿಲಿನ ಆರ್ಭಟ ಹೆಚ್ಚಾಗುತ್ತಿರುವಂತೆಯೇ ಪ್ರತಿವರ್ಷದಂತೆ ಮಂಗನ ಕಾಯಿಲೆ ಅಥವಾ ಕ್ಯಾಸನೂರು ಅರಣ್ಯ ಕಾಯಿಲೆ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಕೆಲವು ಭಾಗಗಳಲ್ಲಿ ಕಾಲಿಟ್ಟಿದೆ. ಈ ವರ್ಷ ಈಗಾಗಲೆ 8 ಜನರಲ್ಲಿ ಮಂಗನ ಕಾಯಿಲೆಯ ವೈರಸ್ ಇರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಅದರಲ್ಲೂ ಕಾಡಿನಂಚಿನಲ್ಲಿರುವ ಗ್ರಾಮಗಳಲ್ಲಿ ಜನಜಾಗೃತಿ ಆರಂಭಿಸಲಾಗಿದೆ. ಎರಡು ಬಾರಿ ಲಸಿಕೆಯನ್ನು ಹಾಕಲಾಗಿದೆ.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯವರು ರೋಗ ತಡೆಗೆ ವ್ಯಾಪಕ ಕ್ರಮವನ್ನು ಸಾಗರದಲ್ಲಿರುವ ಮಂಗನ ಕಾಯಿಲೆ ಸಂಶೋಧನಾ ಕೇಂದ್ರದವರೊಂದಿಗೆ ಕೈಗೊಂಡಿದೆ. ಆದರೂ ರೋಗ ಕಂಡುಬಂದಿದೆ. ಇದರಿಂದ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರೋಗ ತಡೆ ಅಭಿಯಾನವನ್ನು ಆರಂಭಿಸಲಾಗಿದೆ. ಕರಪತ್ರದ ಮೂಲಕ ಜನರನ್ನು ಎಚ್ಚರಿಸಲಾಗುತ್ತಿದೆ. ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಈ ಬಗ್ಗೆ ಜನರಿಗೆ ತಿಳುವಳಿಕೆ ಕೊಡಲಾಗುತ್ತಿದೆ.
ಮಂಗನ ಕಾಯಿಲೆ ಲಕ್ಷಣ ಇರುವ 19 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 8 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. 1957ರಿಂದ ಈ ರೋಗ ಆರಂಭವಾಗಿದ್ದರೂ ಇಲ್ಲಿಯವರೆಗೆ ರೋಗವನ್ನು ಸಂಪೂರ್ಣ ಮಟ್ಟ ಹಾಕುವಲ್ಲಿ ಸರ್ಕಾರ ಅಥವಾ ಸಂಬಂಧಿತ ಸಂಶೋಧನಾ ಕೇಂದ್ರದವರು ಯಶಸ್ವಿಯಾಗಿಲ್ಲ. ಜೊತೆಗೆ ಸೂಕ್ತ ಔಷಧಿಯನ್ನೂ ಕಂಡುಹಿಡಿಯುವಲ್ಲಿ ಸಫಲರಾಗಿಲ್ಲ. ಇಷ್ಟೆ ಏಕೆ, ಆಡಳಿತ ನಡೆಸುವ ಸರ್ಕಾರ ರಕ್ತ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಮನಸ್ಸು ಮಾಡಿಲ್ಲ. ಇದರಿಂದ ರಕ್ತ ತಪಾಸಣೆಗೆ ಪೂನಾಗೆ ತೆರಳಬೇಕಿದೆ. ರಕ್ತವನ್ನು ಸಂಗ್ರಹಿಸಿ ಅಲ್ಲಿಗೆ ಕಳುಹಿಸಿ, ಪರೀಕ್ಷೆ ನಡೆದು ವರದಿ ತಲುವಪುವವರೆಗೆ ಕನಿಷ್ಠ 15 ದಿನವಾಗುತ್ತಿದೆ. ಅಷ್ಟರೊಳಗೆ ಕಾಯಿಲೆಯ ಸೋಂಕು ಇರುವವರಿಗೆ ಅದು ಉಲ್ಬಣಿಸುವ ಸಾಧ್ಯತೆ ಇದೆ.
ಈ ವರ್ಷ ಕಳೆದ ಡಿಸೆಂಬರ್ (2ನೆಯ ತಾರೀಕಿನಿಂದ 5ರವರೆಗೆ) ಮೊದಲ ಹಂತದ ಲಸಿಕಾ ಅಭಿಯಾನವನ್ನು ತೀರ್ಥಹಳ್ಳಿ ಮತ್ತು ಹೊಸನಗರದ ನಿರ್ದಿಷ್ಟ ಗ್ರಾಮಗಳಲ್ಲಿ ನಡೆಸಲಾಗಿದೆ. ಎರಡನೆಯ ಹಂತದ ಲಸಿಕೆಯನ್ನು ಜನವರಿಯಲ್ಲಿ ನಡೆಸಲಾಗಿದೆ. ಕಾಡಿನಂಚಿನಿಂದ 5 ಕಿ. ಮೀ ದೂರವಿರುವ ಗ್ರಾಮಗಳಲ್ಲಿ ವಿಶೇಷವಾಗಿ ಈ ಅಭಿಯಾನ ನಡೆಸಲಾಗಿದೆ. ಏಕೆಂದರೆ, ಕಾಡಿನಿಂದಲೇ ಈ ರೋಗ ಹಬ್ಬುವುದರಿಂದ ಸುತ್ತಮುತ್ತಲಿನ ವಾಸಿಗಳಿಗೆ ಇದರ ಪ್ರಭಾವ ಆಗದಿರಲೆಂದು. ಆದರೂ ಮತ್ತೆ ರೋಗ ಬಂದಿರುವುದು ಆತಂಕವನ್ನು ಉಂಟುಮಾಡಿದೆ. ಲಸಿಕೆಯಿಂದ ರೋಗದ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಅದರ ತೀವ್ರತೆಯೂ ಇಳಿಮುಖವಾಗುವಂತೆ ಮಾಡಬಹುದೇ ವಿನಾ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.
ಪ್ರತಿ ವರ್ಷ 100ರಿಂದ 500 ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಈ ವರ್ಷ 31,550 ಜನರಿಗೆ ಲಸಿಕೆ ಹಾಕಲಾಗಿದೆ. ಪ್ರತಿ ವರ್ಷ ನವೆಂಬರ್‌ನಿಂದ ಮಾರ್ಚ್‌ವರೆಗೆ ವಿಶೇಷವಾಗಿ ಕಾಣಿಸಿಕೊಳ್ಳುವ ಈ ರೋಗ ಬಿಸಿಲಿನ ಪ್ರಮಾಣ ಏರಿದಂತೆ ಏರಿಕೆಯಾಗುತ್ತದೆ. ಇನ್ನೂ ಎರಡು ತಿಂಗಳು ಬಿಸಿಲಿನ ತಾಪಮಾನ ಹೆಚ್ಚಲಿರುವುದರಿಂದ ರೋಗ ಇನ್ನಷ್ಟು ಬಾಧಿಸಬಹುದೆಂಬ ಆತಂಕದಲ್ಲಿ ಅಧಿಕಾರಿಗಳಿದ್ದಾರೆ. ಜನರಲ್ಲೂ ಸಹ ಇದು ಗಾಬರಿಯನ್ನುಂಟು ಮಾಡಿದೆ.
ಗ್ರಾಪಂ, ಗ್ರಾಮಸ್ಥರು ಏನು ಮಾಡಬಹುದು?:
ಅರಣ್ಯಕ್ಕೆ ಹೋಗುವುದನ್ನು ಕಡಿಮೆ ಮಾಡಬೇಕು. ಹೋಗುವ ಅವಶ್ಯಕತೆ ಇದ್ದರೆ ಮೈ ತುಂಬಾ ಬಟ್ಟೆ ಧರಿಸಬೇಕು. ಜೊತೆಗೆ ಲಭ್ಯವಿರುವ ಕೆಲವು ನಿಗದಿಪಡಿಸಿದ ತೈಲಗಳನ್ನು ಮೈಕೈಗೆ ಲೇಪಿಸಿಕೊಳ್ಳಬೇಕು. ಮನೆಗೆ ಬಂದ ನಂತರ ಕೈಕಾಲು ತೊಳೆದು ಬಟ್ಟೆ ಬದಲಿಸಿ ಉಣ್ಣೆ ಇಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು.
ಇದರೊಟ್ಟಿಗೆ ಸ್ಥಳೀಯ ಗ್ರಾಪಂನವರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಿದೆ. ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವುದುರ ಜೊತೆ ರೋಗ ತಡೆಯಲು ಏನು ಮಾಡಬೇಕೆನ್ನುವುದನ್ನು ತಿಳಿಹೇಳಬೇಕು. ಗ್ರಾಪಂ ಪಿಡಿಓಗಳು ಮನೆಮನೆ ಭೇಟಿ ಮಾಡಿ ರೋಗದಿಂದ ದೂರವಿರುವಂತೆ ಮಾಹಿತಿ ಕೊಡಬೇಕು. ಕರಪತ್ರ ಪ್ರಕಟಿಸಿ ಪ್ರತಿ ಮನೆಗೂ ತಲುಪಿಸಬೇಕು. ತಾವೇ ಮುಂದಾಗಿ ನಿಂತು ಜನಜಾಗೃತಿ ಸಭೆ ನಡೆಸಬೇಕು. ರೋಗ ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಿಳಿಸಬೇಕು. ಆರೋಗ್ಯಾಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿ ಮಾಹಿತಿ ನೀಡುತ್ತಿರಬೇಕು. ಗ್ರಾಪಂ ಸದಸ್ಯರು ಮತ್ತು ಪಿಡಿಓಗಳು ಇತ್ತ ಗಮನಹರಿಸಿದಲ್ಲಿ ಈ ಕಾಯಿಲೆಯ ಬಗ್ಗೆ ಜನಾಂದೋಲನ ರೂಪಿಸಬಹುದಾಗಿದೆ.
ಏನಿದು ಮಂಗನ ಕಾಯಿಲೆ?
ಮಂಗನ ಕಾಯಿಲೆ 1957ರಲ್ಲಿ ಮೊಟ್ಟಮೊದಲ ಬಾರಿಗೆ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಪತ್ತೆಯಾಗಿತ್ತು. ಇದರಿಂದಾಗಿ ಇದಕ್ಕೆ ಕ್ಯಾಸನೂರು ಕಾಯಿಲೆ ಎಂಬ ಹೆಸರು ಬಂದಿದೆ. ಮಂಗನ ಕಾಯಿಲೆ, ಕ್ಯಾಸನೂರು ಅರಣ್ಯ ಕಾಯಿಲೆ ಎಂದೂ ಸಹ ಕರೆಯಲಾಗುತ್ತಿದೆ.
ಕಾಡಿನಲ್ಲಿ ಮಂಗ ಸತ್ತುಬಿದ್ದಾಗ ಅದರ ವೈರಸ್ ಹರಡುವುದರಿಂದ, ಆ ಮಂಗವನ್ನು ತಿನ್ನುವ ಇಲಿ, ಹಕ್ಕಿ, ಅಳಿಲು ಮುಂತಾದ ಪ್ರಾಣಿಗಳಿಂದಲೂ ಇದು ಹರಡುತ್ತದೆ. ಮಂಗನಿಗೆ ಉಣ್ಣೆ ಕಚ್ಚುವುದರಿಂದ ಮಂಗ ಸಾಯಲೂಬಹುದು. ಈ ಸತ್ತ ಮಂಗನಿಂದ ಕಾಯಿಲೆ ಹರಡುತ್ತಿದೆ. ಕೇರಳದ ವೈನಾಡ್ ಮತ್ತು ಮಲಪ್ಪುರಂ, ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೆಲವೆಡೆ ಇದು ಕಂಡುಬಂದಿದೆ. ಕಾಡಿನಲ್ಲಿ ಉಣ್ಣೆ ಕಂಡುಬಂದರೆ ಅದರಿಂದ ಈ ರೋಗ ಹಬ್ಬುವ ಪ್ರಮಾಣವೇ ಅಧಿಕ. ಕಾಡಿಗೆ ತೆರಳುವ ಜನರಿಗೆ ಈ ಉಣ್ಣೆ ಕಚ್ಚಿದಾಗ ಜನರಲ್ಲಿ ಮಂಗನ ಕಾಯಿಲೆ ವೈರಸ್ ಹಬ್ಬುತ್ತಿದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಹರಡುವುದಿಲ್ಲ. ರೋಗ ಹಬ್ಬುವ ಸಮಯದಲ್ಲಿ ಅರಣ್ಯಕ್ಕೆ ಹೋಗದಂತೆ ಸೂಚಿಸಲಾಗುತ್ತಿದೆ. ಇನ್ನೂ ಕೆಲವೆಡೆ ಮೇಯಲು ಕಾಡಿಗೆ ಹೋಗಿ ಬರುವ ದನಗಳಿಗೆ ಉಣ್ಣೆ ತಗುಲಿ ಆ ಮೂಲಕ ಮನುಷ್ಯನಿಗೆ ಉಣ್ಣೆ ಕಚ್ಚಿ ಇದು ಬರಬಹುದಾದ ಸಾಧ್ಯತೆ ಸಹ ಇದೆ.
ರೋಗ ಲಕ್ಷಣ:
ಹೆಚ್ಚು ಜ್ವರ, ತಲೆ ನೋವು, ಸ್ನಾಯುಗಳ ಸೆಳೆತ, ನಿಶ್ಯಕ್ತಿ, ಮೂಗಿನಿಂದ ಅಥವಾ ಗಂಟಲಿನಿಂದ ರಕ್ತ ಬರುವುದು, ಕಫ ಉಂಟಾಗುವುದು.
ಇದಕ್ಕೆ ಔಷಧಿಗಳಿವೆ. ಆದರೆ ಗುಣಮುಖರಾಗಲು ಕನಿಷ್ಟ 2 ವಾರದಿಂದ ಕೆಲವು ತಿಂಳು ಬೇಕಾಗಬಹುದು. ಮನೆಯ ಸುತ್ತಮುತ್ತ ಉಣ್ಣೆ ಸೃಷ್ಠಿಯಾಗದಂತೆ ಮಾಡುವುದು ಅತ್ಯುತ್ತಮ ರೋಗ ನಿರೋಧಕ ಪದ್ದತಿಯಾಗಿದೆ. \
.................................