ಹಳ್ಳಿಗಳಲ್ಲಿ ಓಡಲಿದೆ ಸರ್ಕಾರಿ ಬಸ್
ಒಬ್ಬ ಅಧಿಕಾರಿಗೆ ಜನಪರ ಕಾಳಜಿ ಇದ್ದರೆ ಸಾರ್ವಜನಿಕ ಕೆಲಸಕ್ಕೆ ಯಾರು ಎಷ್ಟೇ ಅಡ್ಡಿ ಮಾಡಿದರೂ ಅದನ್ನು ಲೆಕ್ಕಕ್ಕೆ ತೆಗದುಕೊಳ್ಳದೆ ಜನೋಪಕಾರಿ ಅಥವಾ ಸಮಾಜಮುಖಿ ಕೆಲಸವನ್ನೇ ಮಾಡುುತ್ತಾನೆ. ಜಿಲ್ಲೆಯಲ್ಲಿ ಇಂತಹ ಜಿಲ್ಲಾಧಿಕಾರಿ ಇರುವುದು ಜನರಿಗೆ ಅನುಕೂಲವಾಗಿದೆ. ಖಾಸಗಿ ಬಸ್ನವರ ದೌರ್ಜನ್ಯ, ದಬ್ಬಾಳಿಕೆಯಿಂದ ಬೇಸತ್ತಿದ್ದ ಜನರಿಗೆ ಈಗ ಅವರ ಹಳ್ಳಿಗೂ ಸರ್ಕಾರಿ ಬಸ್ ಸೌಲಭ್ಯ ಸಿಗಲು ನೆರವಾಗಿದ್ದಾರೆ. ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಇಲ್ಲಿಯವರೆಗೆ ಸಲ್ಲಿಸಿದ ಮನವಿಯನ್ನೆಲ್ಲ ಕಸದ ಬುಟ್ಟಿಗೆ ಎಸೆದು, ಖಾಸಗಿಯವರ ಪರ ಕೆಲಸ ಮಾಡಿದ ಆರ್ಟಿಒ ಅಧಿಕಾರಿಗಳು, ಇನ್ನಾದರೂ ತಮಗೆ ಸಂಬಳ ಕೊಡುವ ಸರ್ಕಾರದ ನಿಗಮವಾದ ಕೆಎಸ್ಸಾರ್ಟಿಸಿ ಪರ ನಿಲ್ಲಬೇಕಿದೆ. ಜಿಲ್ಲೆಯಲ್ಲಿ ನಿಗಮದ ಬಸ್ ಇನ್ನೂ ಹೆಚ್ಚು ಪ್ರಮಾಣದಲ್ಲಿ ಓಡಿಸಲು ಕೆಎಸ್ಸಾರ್ಟಿಸಿಯವರೂ ಲಕ್ಷ್ಯ ವಹಿಸಬೇಕಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಬೇಕೆನ್ನುವ ನಾಗರಿಕರ ಬೇಡಿಕೆ ಈಗ ಬಗೆಹರಿಯುವ ಹಂತಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ನಿಗಮವು ವಿಭಾಗಿಯ ಕಚೇರಿಯನ್ನು ಆರಂಭಿಸಿದ ನಂತರ ಹೊಸ ಬಸ್ಗಳು ಬರಲಾರಂಭಿಸಿದ್ದು, ಮಾರ್ಗದ ಸರ್ವೆಯೂ ನಡೆದಿದೆ. ಮೊನ್ನೆ ಜರುಗಿದ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸುಮಾರು 49 ಬಸ್ಗಳಿಗೆ ಪರವಾನಿಗೆಯೂ ದೊರೆತಿದೆ.
ಖಾಸಗಿ ಬಸ್ನವರ ಆಟಾಟೋಪ, ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಮುಕ್ತಿಯೇ ಇಲ್ಲ ಎನ್ನುವಂತಹ ವಾತಾವರಣ ದೂರವಾಗುವ ಸಂದರ್ಭ ಹತ್ತಿರ ಬಂದಿದೆ. ಇಲ್ಲಿಯವರೆಗೆ ಅವರದ್ದೇ ದರ್ಬಾರ್ ಇದ್ದುದರಿಂದ ಬಾಯ್ಮುಚ್ಚಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಈಗ ಬದಲಾವಣೆಯ ಸಮಯ ಬಂದಿದೆ. ಸೊರಬ, ಶಿಕಾರಿಪುರ ಮತ್ತು ಶಿವಮೊಗ್ಗ ಗ್ರಾಮಾಂತರ ಹಾಗೂ ಹೊನ್ನಾಳಿ ತಾಲೂಕಿನ ಸಾಕಷ್ಟು ಹಳ್ಳಿಗಳಿಗೆ ನಿಗಮವು ಕೆಲವೇ ವಾರಗಳಲ್ಲಿ ಬಸ್ ಬಿಡಲು ತೀರ್ಮಾನಿಸಿದೆ.
ಪ್ರಾಧಿಕಾರದ ಸಭೆಯಲ್ಲಿ ಈ ತಾಲೂಕುಗಳ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆ, ವಿದ್ಯಾರ್ಥಿಗಳು ಪಡುತ್ತಿರುವ ಪಡಿಪಾಲನ್ನು ಹಲವರು ಎಳೆಎಳೆಯಾಗಿ ಬಿಚ್ಚಿಟ್ಟಾಗ ಖಾಸಗಿಯವರ ಏಕಸ್ವಾಮ್ಯದಿಂದ ಆಗುತ್ತಿರುವ ತೊಂದರೆಯನ್ನು ಕೇಳಿ ಸ್ವತಃ ಜಿಲ್ಲಾಧಿಕಾರಿಯವರೇ ದಂಗುಬಡಿದಂತಾದರು. ನಿಗಮದ ಬಸ್ ನಿಲ್ದಾಣದೊಳಕ್ಕೆ ಬಸ್ ಬಾರದಂತೆ ತಡೆಯುವ, ಹಲ್ಲೆ ನಡೆಸುವ ಖಾಸಗಿ ಬಸ್ ಏಜೆಂಟರ ವಿರುದ್ದ ದೂರು ನೀಡಿದರೂ ದಾಖಲಿಸಿದೆ ಅವರ ಪರ ನಿಂತಿದ್ದಕ್ಕೆ ಶಿಕಾರಿಪುರ ಮತ್ತು ಶಿರಾಳಕೊಪ್ಪ ಪೊಲೀಸರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರ ಫಲವಾಗಿಯೇ ನಿಗಮಕ್ಕೆ ಬಸ್ ಓಡಿಸಲು ಪರವಾನಿಗೆ ದೊರೆಯಿತು. ಜನಪರ ಕಾಳಜಿಗೆ ಕೊನೆಗೂ ಜಯ ಸಿಕ್ಕಿತು.
ಸುಮಾರು ನಾಲ್ಕಾರು ವರ್ಷದಿಂದ ಗ್ರಾಮಾಂತರ ಭಾಗಗಳಿಗೆ ಸರ್ಕಾರಿ ಬಸ್ ಸೌಲಭ್ಯ ಬೇಕೆಂದು ಸಾರ್ವಜನಿಕರು ಮನವಿ ಕೊಡುತ್ತಲೇ ಇದ್ದರು. ಸಾರಿಗೆ ಅಧಿಕಾರಿಗಳು ಖಾಸಗಿಯವರ ಪರ ನಿಂತು ಅರ್ಜಿಯನ್ನು ಮೂಲೆಗೆಸೆಯುತ್ತ, ಮರುಪ್ರಶ್ನಿಸಿದರೆ ಸಬೂಬು ಹೇಳುತ್ತ ಕಾಲಕಳೆದರು. ಕೆಎಸ್ಸಾರ್ಟಿಸಿ ಬಳಿ ಬಸ್ಗಳು ಇಲ್ಲದ್ದರಿಂದ ಇದಕ್ಕೆ ಅವಕಾಶ ಸಿಕ್ಕಿದಂತಾಗಿತ್ತು. ಯಾವಾಗ ವಿಭಾಗೀಯ ಕಚೇರಿ ಆರಂಭವಾಯಿತೋ ಅಗ ಎಚ್ಚೆತ್ತ ಖಾಸಗಿಯವರು ಇನ್ನು ತಮ್ಮ ಬುಡಕ್ಕೇ ನೀರು ಬರುತ್ತದೆ ಎಂದರಿತು ಪರವಾನಿಗೆ ಕೊಡದಂತೆ ಮಾಡಲು ಶತಪ್ರಯತ್ನ ಮಾಡಿದರು. ಇಲ್ಲಸಲ್ಲದ ಕಾರಣ ಕೊಟ್ಟರು. ಖಾಸಗಿಯವರು ಬೀದಿಪಾಲಾಗುತ್ತಾರೆ. ಅವರನ್ನು ನಂಬಿಕೊಂಡ ಸಾವಿರಾರು ಸಿಬ್ಬಂದಿಗಳು ಕೆಲಸವಿಲ್ಲದೆ ಅತಂತ್ರತರಾಗಬೇಕಾಗುತ್ತದೆ ಎಂದೆಲ್ಲ ಮಾತನಾಡತೊಡಗಿದರು.
ಈಗ ಆರ್ಟಿಒ ಅಧಿಕಾರಿಗಳು ಏನೂ ಮಾಡದಂತಾಗಿದ್ದಾರೆ. ಏಕೆಂದರೆ, ಪ್ರತಿ ತಿಂಗಳೂ ಹೊಸ ಬಸ್ಗಳು ಶಿವಮೊಗ್ಗ ವಿಭಾಗಕ್ಕೆ ಬರುತ್ತಿವೆ. ಹೊಸ ಮಾರ್ಗಕ್ಕೆ ಪರವಾನಿಗೆ ಕೊಡಲೇಬೇಕಿದೆ. ಜನರಿಗೆ ಅನುಕೂಲ ಕಲ್ಪಿಸಬೇಕೆಂಬ ಸದುದ್ದೇಶ ಇರುವ ಜಿಲ್ಲಾಧಿಕಾರಿ ಖಾಸಗಿಯವರ ಲಾಬಿಗೆ ಸೊಪ್ಪು ಹಾಕದಿರುವುದು ಅವರನ್ನು ಇನ್ನಷ್ಟು ಆತಂಕಕ್ಕೆ ನೂಕಿದೆ. ಹೊಸ ಬಸ್ಗಳು ಸಂಚಾರ ಆರಂಭಿಸಿದರೆ ಗ್ರಾಮಾಂತರ ಭಾಗದವರು ಅದನ್ನು ಸದುಪಯೋಗಪಡಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ.
ಖಾಸಗಿಯವರು ಎಷ್ಟೋ ಪರವಾನಿಗೆ ಪಡೆದು ಬಸ್ನ್ನೇ ಓಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಸಿಟ್ಟಿಗೆದ್ದು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೂ ಸೌಕರ್ಯ ಕೊಡಲ್ಲ, ನಿಗಮಮದವರೂ ಕೊಡಬಾರದು ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ. ಜಿಲ್ಲೆಯ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದಾಗಿದೆ. ಸೊರಬ ಮತ್ತು ಶಿಕಾರಿಪುರ ಗ್ರಾಮಾಂತರದವರು ಪಡುತ್ತಿದ್ದ ಬವಣೆಗೆ ಕೆಎಸ್ಸಾರ್ಟಿಸಿ ಇನ್ನಾದರೂ ಪರಿಹಾರ ಕೊಡಬೇಕಿದೆ. ಜೊತೆಗೆ ಈ ಮಾರ್ಗವಾಗಿ ಕೆಲವು ದೂರದ ಊರುಗಳಿಗೆ ಬಸ್ ಓಡಿಸಲೂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದರಿಂದ ವಿಶೇಷವಾಗಿ ಮಣಿಪಾಲ, ಹುಬ್ಬಳ್ಳಿ, ರಾಣೆಬೆನ್ನೂರು, ಹಾನಗಲ್, ಬೆಂಗಳೂರು, ಶಿರಸಿಗೆ ತೆರಳುವವರಿಗೆ ಅನುಕೂಲವಾಗಲಿದೆ. ನೂರಾರು ಸಾರ್ವಜನಿಕರು ಶಿವಮೊಗ್ಗಕ್ಕೆ ಬಂದು ಇನ್ನೊಂದು ಬಸ್ ಏರಿ ಪ್ರಯಾಣ ಮಾಡುವುದು ತಪ್ಪಿದಂತಾಗಲಿದೆ.
ಈಗಾಗಲೇ ಕೆಎಸ್ಸಾರ್ಟಿಸಿಯವರು ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರದ ಕೆಲವು ಭಾಗಗಳಿಗೆ ಬಸ್ ಓಡಿಸಲಾರಂಭಿಸಿದ್ದಾರೆ. ಇನ್ನೂ ಅನೇಕ ಗ್ರಾಮಗಳಿಗೆ ಇಲ್ಲಿ ಬಸ್ ಸೌಕರ್ಯ ಇಲ್ಲದಿರುವುದನ್ನು ಮನಗಂಡು ಅಲ್ಲಿಗೂ ಬಸ್ ಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಸುಲಭದಲ್ಲಿ ಜಿಲ್ಲಾ ಕೇಂದ್ರಕ್ಕೆ ಬಂದು ಕೆಲಸ ಮುಗಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಇನ್ನಾದರೂ ನೆಪ ಹೇಳಿ ಜನರನ್ನು ದೂರವಿಡದೆ ಅವಶ್ಯವಿದ್ದಲ್ಲಿ ಬಸ್ ಸೌಕರ್ಯವನ್ನು ನೀಡುವ ಮನಸ್ಸು ಮಾಡಬೇಕು. ಖಾಸಗಿಯವರಿಗೆ ಆರೋಗ್ಯಕರ ಸ್ಪರ್ಧೆಯ ಮೂಲಕ ಪೈಪೋಟಿ ನೀಡಿ ಉತ್ತರ ಕೊಡಬೇಕು ಮತ್ತು ಇದೇ ವೆಳೆ ಉತ್ತಮ ಸೇವೆಯ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕಿದೆ.
......................................

No comments:
Post a Comment