ಕವಿಗೋಷ್ಠಿ, ಸನ್ಮಾನಕ್ಕೆ ನೂಕುನುಗ್ಗಲು!
ಜಿಲ್ಲಾ ಸಾಹಿತ್ಯ ಸಮ್ಮೇಳನದ ಅವಾಂತರಗಳು* 91 ಕವಿಗಳು, 77 ಸನ್ಮಾನಿತರು!
ಸಿಕ್ಕಿದ್ದೇ ಅವಕಾಶ ಎಂದು ವೇದಿಕೆ ಏರುವವರು ಜಾಸ್ತಿಯಾಗುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲಿ ಇಂತಹ ಅವಕಾಶಕ್ಕಾಗಿಯೇ ಕೆಲವರು ಕಾದು ಕುಳಿತಿರುತ್ತಾರೆ. ನಾಡಿದ್ದು ನಡೆಯುವ ಸಮ್ಮೇಳನ ಇಂತಹ ಎಡವಟ್ಟುಗಳಿಗೆ ಸಾಕ್ಷಿಯಾಗಿದೆ. ಜಿಲ್ಲಾ ಸಮಿತಿ ಅಸ್ತಿತ್ವಲ್ಲಿದೆಯೇ, ಅಥವಾ ಕಣದ ಕೈ ಇದನ್ನು ನಡೆಸುತ್ತಿದೆಯೇ ಎನ್ನುವ ಅನುಮಾನ ಉಂಟಾಗುವಂತಾಗಿದೆ. ಇಲ್ಲಿ ಸನ್ಮಾನ, ಕವಿಗೋಷ್ಠಿಗೆ ಯಾವ ಮಾನದಂಡ, ಅರ್ಹತೆ ಬೇಕಾಗಿಲ್ಲ. ನಿಮಗೆ ವಶೀಲಿ, ಲಾಬಿ, ಜಾತೀಯತೆ ಮಾಡುವುದು ತಿಳಿದಿದ್ದರೆ ನೀವೂ ಸನ್ಮಾನಿತರಾಗಬಹುದು, ಕವಿಗಳಾಗಬಹುದು, ಅಥವಾ ಎರಡರಲ್ಲೂ ಅವಕಾಶ ಗಿಟ್ಟಿಸಬಹುದು. ಹೀಗಿದೆ ನಮ್ಮ ಜಿಲ್ಲಾ ಕಸಾಪ ಸಮಿತಿ!
ಸಾಹಿತ್ಯ ಸಮ್ಮೇಳನ ಎಂದರೆ ಜಾತ್ರೆ ಎಂಬ ವ್ಯಂಗ್ಯೋಕ್ತಿ ಇದೆ. ಇದನ್ನು ಪದೇ ಪದೇ ಎಲ್ಲ ಸಮ್ಮೇಳನಗಳೂ ಸಾಬೀತು ಮಾಡುತ್ತಲೇ ಬಂದಿವೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 18 ಮತ್ತು 19ರಂದು ನಗರದಲ್ಲಿ ನಡೆಯಲಿದೆ. ಇದರಲ್ಲಿನ ಕಾರ್ಯಕ್ರಮಗಳನ್ನು ಗಮನಿಸಿದರೆ ಹೊಸ ಚಿಂತನೆಗಳ ಮತ್ತು ಪ್ರಬುದ್ಧ ವಿಚಾರಗಳ ಗೋಷ್ಠಿಗಳನ್ನು ಮಾಡಬೇಕೆಂಬ ಕಲ್ಪನೆಯೇ ಸಮಿತಿಗೆ ಇಲ್ಲವೆನ್ನುವುದು ತಿಳಿಯುತ್ತದೆ.
ಬದಲಾಗುತ್ತಿರುವ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಸಾಹಿತ್ಯ ಕ್ಷೇತ್ರವೂ ನಿಂತ ನೀರಾಗಿಲ್ಲ. ಆದರೆ ನಮ್ಮಲ್ಲಿ ಅದನ್ನು ಅಳವಡಿಸಿಕೊಕೊಳ್ಳಲು ನಾವು ಇನ್ನೂ ಸಿದ್ಧರಿಲ್ಲ. ಜಿಲ್ಲಾ ಕಸಾಪ ಮಾತ್ರ ಹೊಸತನಕ್ಕೆ ತನ್ನನ್ನು ತೆರೆದುಕೊಂಡಿಲ್ಲ, ತೆರೆದುಕೊಳ್ಳುವ ಯತ್ನವನ್ನೂ ಮಾಡುತ್ತಿಲ್ಲ. ಅಪ್ಪ ನೆಟ್ಟ ಮರಕ್ಕೆ ನೇಣು ಹಾಕಿಕೊಳ್ಳುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ರಾಜ್ಯ ಕಸಾಪ ಕೊಡುವ ಹಣವನ್ನು ಖರ್ಚು ಮಾಡಬೇಕೆಂಬ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ಸಮ್ಮೇಳನದ ಬಗ್ಗೆ ಗಮನಿಸುವುದಾದರೆ, ಎರಡು ದಿನದ ಈ ಸಮ್ಮೇಳನದಲ್ಲಿ ಜಿಲ್ಲೆಯ ರಂಗಭೂಮಿ, ಜನಪದರ ಬದುಕು ಮತ್ತು ಬವಣೆ ಹಾಗು ಸಾಹಿತ್ಯದ ನೆಲೆಯ ಬಗ್ಗೆ ಗೋಷ್ಠಿ ಏರ್ಪಡಿಸಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದರ ಹೊರತಾಗಿ ಅಧ್ಯಕ್ಷರ ಜೊತೆ ಸಂವಾದ, ಅಧ್ಯಕ್ಷರ ಬದುಕು-ಬರಹ ಗೋಷ್ಠಿಯನ್ನಿಡಲಾಗಿದೆ. ಕಸಾಪದಲ್ಲಿ ಇಂತಿಂತಹ ಗೋಷ್ಠಿ ಇರಲೇಬೇಕೆಂಬ ಶಾಸನವೇನಾದರೂ ಇದೆಯೇ ಎಂಬ ಅನುಮಾನ ಮೂಡುವಂತಾಗಿದೆ. ಎರಡು ಕವಿಗೋಷ್ಠಿಯ ಅವಶ್ಯಕತೆ ಇತ್ತೇ ಎನ್ನುವುದು ಮತ್ತೊಂದು ಪ್ರಶ್ನೆ.
ಇದರಲ್ಲಿ ಭಾಗವಹಿಸುವವರ ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 91. ಜಿಲ್ಲೆ ಸಾಹಿತ್ಯಿಕವಾಗಿ ಮೊದಲಿನಿಂದಲೂ ಸಂಪದ್ಭರಿತವಾದುದು. ಈ ಛಾಪನ್ನು ಉಳಿಸಿಕೊಂಡೇ ಇಂದಿಗೂ ಗುರುತಿಸಲ್ಪಡುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಬರಬರುತ್ತ ಪ್ರಬುದ್ಧ ಸಾಹಿತಿಗಳಾಗಿ ಗುರುತಿಸಿಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ತೋಚಿದ್ದನ್ನೆಲ್ಲ ಗೀಚಿದವರೆಲ್ಲ ಕವಿಗಳಾಗುತ್ತಿರುವುದು ಮಾತ್ರ ದುರಂತವೇ ಸರಿ. ಬರೆದಿದ್ದೆಲ್ಲ ಸಾಹಿತ್ಯ ಅಥವಾ ಕವಿತೆ ಆಗದು. ಇದನ್ನು ಸಮಿತಿ ಅರಿತುಕೊಳ್ಳಬೇಕಿತ್ತು. ಸಶಕ್ತ ಕವನಗಳನ್ನು ಮಾತ್ರ ಆಯ್ಕೆ ಮಾಡಿ ಎರಡೂ ಗೋಷ್ಠಿಗಳಿಂದ ಗರಿಷ್ಠ 30 ಕವಿಗಳಿಗೆ ಆಹ್ವಾನ ಕೊಡಬಹುದಿತ್ತು.
ಇಲ್ಲಿ ಕವನವನ್ನು ಅಳೆದು ತೂಗಿ ನೋಡುವವರೇ ಇಲ್ಲ. ಅದನ್ನು ವಿಮರ್ಶಿಸುವವರಿಲ್ಲ. ಓದಿದ ಕವನಕ್ಕೆ ಚಪ್ಪಾಳೆ ಬಂದರಾಯಿತು. ಚಪ್ಪಾಳೆ ಬಾರದಿದ್ದರೆ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿ ಎಂದು ನಿರೂಪಕರು ಹೇಳಿದರೆ ಒಂದಷ್ಟು ಚಪ್ಪಾಳೆ ಬಂದೇ ಬರುತ್ತದೆ. ಕವಿಗೋಷ್ಠಿಯ ಮಹತ್ವವನ್ನೇ ನಾಶ ಮಾಡುವ ಮಟ್ಟಕ್ಕೆ ಬಂದು ನಿಂತಿದ್ದೇವೆ. ಇನ್ನೂ ವಿಶೇಷವೆಂದರೆ, ಜಿಲ್ಲಾ ಮತ್ತು ತಾಲೂಕು ಸಮಿತಿಯ ಪದಾಧಿಕಾರಿಗಳಲ್ಲಿ ಬಹುತೇಕರು ಕವಿಗಳಾಗಿ ಬಿಟ್ಟಿದ್ದಾರೆ. ಅವರಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲಿಗೆ ಬಂತು ಕವಿಗೋಷ್ಠಿಯ ಅವಸ್ಥೆ? ಎರಡು ಕವಿಗೋಷ್ಠಿ ಮಾಡಿದ್ದೇ ತಪ್ಪು. ಒಂದೇ ಕವಿಗೋಷ್ಠಿ ಸಾಕಿತ್ತು.
ಇನ್ನು ಸಮ್ಮೇಳನದ ಸಮಾರೋಪಕ್ಕಿಂತ ಮುಂಚೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಇದರಲ್ಲಿ ಸನ್ಮಾನಿತರ ಸಂಖ್ಯೆಯೇ 77. ಇವರಲ್ಲಿ ಎಂತೆಂತಹ ಸಾಧನೆ ಮಾಡಿದವರಿದ್ದಾರೆಂದು ಮಾತ್ರ ಕೇಳಬೇಡಿ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಮತ್ತು ಸಾಧನೆಯ ಕ್ಷೇತ್ರದ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಕನಿಷ್ಠ ತಾಲೂಕಿಗೆ ಇಬ್ಬರಂತೆ ಗರಿಷ್ಠ ಒಟ್ಟೂ 20 ಜನರನ್ನು ಸನ್ಮಾನಿಸಬಹುದಿತ್ತು. ಕೆಲವರು ಸನ್ಮಾನದಲ್ಲೂ, ಕವಿಗೋಷ್ಠಿಯಲ್ಲೂ ತೂರಿಕೊಂಡಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಜಿಲ್ಲಾಧ್ಯಕ್ಷರು ಸನ್ಮಾನ ಮತ್ತು ಕವಿಗೋಷ್ಠಿಗೆ ಮಾನದಂಡ ಏನೆನ್ನುವ ಪ್ರಶ್ನೆಗೆ ಉತ್ತರಿಸಬೇಕಿದೆ.
ಈ ರೀತಿ ವಶೀಲಿ, ಪ್ರಭಾವ, ಜಾತಿ ವ್ಯಾಮೋಹದಿಂದ ಯಾರ್ಯಾರೋ ವೇದಿಕೆ ಹಂಚಿಕೊಳ್ಳುವಮತಹ ಸ್ಥಿತಿ ಎದುರಾಗಬಾರದಿತ್ತು. ಹೊಸ ಮುಖಗಳನ್ನು ಪರಿಚಯಿಸುವ ಕೆಲಸವೇನೋ ಒಳ್ಳೆಯದು. ಆದರೆ ಆ ಮುಖಗಳು ನಿಜಕ್ಕೂ ಮುಖಗಳೇ ಅಥವಾ ಮುಖವಾಡಗಳೇ ಎನ್ನುವುದನ್ನೂ ಗಮನಿಸಬೇಕಲ್ಲವೇ? ಜಿಲ್ಲಾಧ್ಯಕ್ಷರು ವಿಮರ್ಶೆ ಮಾಡದೆ ಯಾವುದನ್ನೂ ಒಪ್ಪಬಾರದು. ಯಾರದ್ದೋ ಒತ್ತಾಯಕ್ಕೆ ಎಲ್ಲರನ್ನೂ ವೇದಿಕೆ ಹತ್ತಿಸುವ ಕೆಲಸ ಮಾಡಿದರೆ ಕೆಟ್ಟ ಹೆಸರು ಬರುವುದು ಜಿಲ್ಲಾ ಸಮಿತಿಗೆ ಎನ್ನುವುದನ್ನು ಮರೆಯಬಾರದು.
ಈ ರೀತಿಯ ಸಮ್ಮೇಳನಗಳು ನಡೆಯದೇ ಇದ್ದರೂ ಜನರೇನೂ ಪ್ರಶ್ನಿಸುವುದಿಲ್ಲ. ಎಲ್ಲೋ ಕೆಲವರು ಈ ಜಾತ್ರೆಯ ಮೋಜು ಅನುಭವಿಸಲೆಂದೇ ಇರುವವರು ಮಾತ್ರ ಪ್ರಶ್ನಿಸಬಹುದು. ಆದ್ದರಿಂದ ಜಿಲ್ಲಾಧ್ಯಕ್ಷರು ಮಾನದಂಡವಿಲ್ಲದೆ ಯಾವ ಆಯ್ಕೆಯನ್ನೂ ಮಾಡಬಾರದು. ಕೆಟ್ಟ ಹೆಸರು ಬಂದರೆ ಅದನ್ನು ಎದುರಿಸಬೇಕಾದವನು ತಾನು ಎನ್ನುವುದನ್ನು ಅರಿಯಬೇಕು. ಇನ್ನು ಮುಂದಾದರೂ ಇಂತಹುದಕ್ಕೆ ಅವಕಾಶ ಕೊಡದೆ ನಿರ್ದಿಷ್ಟ ಮಾನದಂಡ ಅಳವಡಿಸಿಕೊಂಡು ಸಾಹಿತ್ಯ ಸಮ್ಮೇಳನ ಹೆಸರಿಗೆ ತಕ್ಕಂತೆ ನಡೆಯಲು ಅವಕಾಶ ಕೊಡಬೇಕಿದೆ.
..................................

No comments:
Post a Comment