ಗೊಂಬೆಗಳ ಕ್ರೇಜ್ ಹೆಚ್ಚಿಸಿದ ದಸರಾ
ಶನಿವಾರದಿಂದ ದಸರಾ ಆರಂಭವಾಗುತ್ತಿದೆ. ದಸರಾದಲ್ಲಿ ಗೊಂಬೆಗಳ ಪೂಜೆಯೂ ವಿಶಿಷ್ಟವಾದ ಸಂಪ್ರದಾಯವನ್ನು ಹೊಂದಿದೆ. ಈ ಪೂಜೆಗೆ ಪ್ರತಿ ವರ್ಷ ಹೊಸ ಗೊಂಬೆಯನ್ನು ಎಲ್ಲಿಂದ ತರಬೇಕು ಎನ್ನುವ ಪ್ರಶ್ನೆ ಶಿವಮೊಗ್ಗದ ಜನರಿಗೆ ಉದ್ಭವಿಸದಂತೆ ಮಾಡಿದ್ದಾರೆ ಸವಿತಾ ಚಂದ್ರು ಅವರು. ನಗರದಲ್ಲಿ ಇಂತಹ ಅಂಗಡಿಯೊಂದರ ಅವಶ್ಯಕತೆ ಇರುವದನ್ನು ಅರಿತು ಅವರು ದುರ್ಗಿಗುಡಿಯಲ್ಲಿ ಆರಂಭಿಸಿದ ಟಾಯ್ ಶಾಪ್ ಈಗ ಗೊಂಬೆಗಳ ಮನೆಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ದಸರಾ ಗೊಂಬೆಯನ್ನು ಇಲ್ಲಿ ಖರೀದಿ ಮಾಡಬಹುದು, ನೋಡಿಯೂ ಆನಂದ ಪಡೆಯಬಹುದು.
ದಸರಾದಲ್ಲಿ ಗೊಂಬೆಗಳನ್ನು ಕೂಡ್ರಿಸಿ ಪ್ರದರ್ಶಿಸಿ ಪೂಜಿಸುವ ಸಂಪ್ರದಾಯ ರಾಜ್ಯದ ಕೆಲವು ಭಾಗಗಳಲ್ಲಿದೆ. ಈ ಗೊಂಬೆಗಳು ಬಹುತೇಕ ಮರದಿಂದ ಅಥವಾ ಮಣ್ಣಿನಿಂದ ಮಾಡಿದವಾಗಿರುತ್ತವೆ. ಈ ಹಿಂದೆ ಮದುವೆಯಾಗುವ ಮಗಳಿಗೆ ತವರುಮನೆಯವರು ಒಂದು ಜೊತೆ (ಗಂಡು-ಹೆಣ್ಣು ಇರುವ) ಗೊಂಬೆಯನ್ನು ಕೊಟ್ಟು ಗಂಡನ ಮನೆಗೆ ಕಳುಹಿಸುತ್ತಿದ್ದರು. ಅವಳು ಆ ಗೊಂಬೆಯನ್ನು ಗಂಡನ ಮನೆಯಲ್ಲಿಟ್ಟು ರಾತ್ರಿ ವೇಳೆ ಪೂಜಿಸಬೇಕಿತ್ತು, ಜೊತೆಗೆ ಇನ್ನಿತರ ದೇವರ, ಜಾನಪದ, ಗೊಂಬೆಗಳನ್ನು ಪ್ರದರ್ಶನಕ್ಕಾಗಿ ಇಡಲಾಗುತ್ತಿತ್ತು. ಈ ಪದ್ಧತಿ ಇನ್ನೂ ಹಲವು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ.
ನಗರದಲ್ಲಿ ಇಂತಹ ಗೊಂಬೆಗಳನ್ನೇ ಮಾರಾಟ ಮಾಡುವ ವಿಶೇಷವೆನ್ನಬಹುದಾದ ಅಂಗಡಿಯೊಂದಿದೆ. ದುರ್ಗಿಗುಡಿ ಶನೈಶ್ಚರ ದೇವಸ್ಥಾನದ ಪಕ್ಕದಲ್ಲೇ ಗೊಂಬೆ ಅಥವಾ ಟಾಯ್ ಶಾಪ್ ಇದೆ. ಸವಿತಾ ಚಂದ್ರು ಎನ್ನುವವರು ಇದರ ಮಾಲಿಕರು. ಸುಮಾರು ಮೂರುವರೆ ವರ್ಷದಿಂದ ಈ ಅಂಗಡಿಯನ್ನು ಅವರು ನಡೆಸಿಕೊಂಡು ಬರುತ್ತಿದ್ದಾರೆ. ಈ ಅಂಗಡಿ ತನ್ನದೇ ಆದ ಮಹತ್ವವನ್ನು ಈಗ ಹೊಂದಿದೆ. ಗೊಂಬೆ ಬೇಕೆಂದಾದರೆ ಎಲ್ಲರೂ ಅಲ್ಲಿಗೇ ಹೋಗಿ ತರಹೇವಾರು ಗೊಂಬೆಗಳನ್ನು ಖರೀದಿಸುತ್ತಾರೆ.
ಮಣ್ಣಿನಿಂದ ಮಾಡಿದ, ಮರದಿಂದ ತಯಾರಿಸಿದ ಗೊಂಬೆಗಳು ಮಾತ್ರ ಇಲ್ಲಿ ಲಭ್ಯ. ಪ್ಲಾಸ್ಟರ್ ಆಫ್ ಪ್ಯಾರಿಸ್ನ ಕೆಲವು ಗೊಂಬೆಗಳೂ ಇವೆ. ಆದರೆ ಪ್ಲಾಸ್ಟಿಕ್ ಗೊಂಬೆ ಇಲ್ಲಿಲ್ಲ. ಈ ಅಂಗಡಿಗೆ ಹೊಕ್ಕರೆ ಮನಸೆಳೆಯುವ ಗೊಂಬೆಗಳ ಸಾಲು ನಮ್ಮನ್ನು ಎದುರುಗೊಳ್ಳುತ್ತದೆ. ಆಂದ್ರದ ಕೊಂಡಪಲ್ಲಿಯ ಮತ್ತು ವಾರಣಾಸಿಯ ಗುಡಿಕೈಗಾರಿಕೆಯಲ್ಲಿ ತಯಾರಾದ ಆಕರ್ಷಕ ಮರದ ಗೊಂಬೆಗಳು ಮನಮೋಹಕವಾಗಿವೆ. ತಮಿಳುನಾಡಿನ ಕುಂಭಕೋಣಂನ ಮಣ್ಣಿನ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ. ರಾಮಾಯಣ ಮತ್ತು ಮಹಾಭಾರತದ ಪಾತ್ರಧಾರಿಗಳು, ವಿವಿಧ ಜಾನಪದ ಮಾದರಿಯ, ಪ್ರಾಣಿಗಳು, ವಾದ್ಯಪರಿಕರಗಳು, ಮಕ್ಕಳು ಮನತಣಿಸುವ ಗೊಂಬೆಗಳು ಇಲ್ಲಿವೆ.
ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳು ಇಲ್ಲಿವೆ. ಶಿವಮೊಗ್ಗದಲ್ಲಿ ಗೊಂಬೆಗಳ ಅಗತ್ಯವಿರುವುದನ್ನು ಮತ್ತು ಈ ಮಾದರಿಯ ಅಂಗಡಿ ಇಲ್ಲದ್ದನ್ನು ಗಮನಿಸಿ ಸವಿತಾ ಅವರು ಇಂತಹ ಅಂಗಡಿಯನ್ನು ತೆರೆಯುವ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಅವರ ಪತಿಯ ಸಹಕಾರವೂ ಇದೆ. ದಸರಾಗೆ ಸುಮಾರು ಒಂದು ತಿಂಗಳ ಮೊದಲೇ ಹೊಸ ಮಾದರಿಯ ಗೊಂಬೆಗಳನ್ನು ತರಿಸುತ್ತಾರೆ. ನಂತರ ಅವುಗಳನ್ನು ಅಷ್ಟೇ ಸುಂದರವಾಗಿ ಜೋಡಿಸಿಡುತ್ತಾರೆ. ರಸ್ತೆಯಲ್ಲಿ ಹೋಗುವವರಿಗೂ ಸಹ ಅವು ಅತ್ಯಾಕರ್ಷಕವಾಗಿ ಗಮನಸೆಳೆಯುತ್ತವೆ. ದಸರಾದಲ್ಲಿ ಗೊಂಬೆ ಇಡುವವರು ಪ್ರತಿವರ್ಷ ಹೊಸ ಗೊಂಬೆಗಳ ಸಂಗ್ರಹವನ್ನು ಮಾಡುತ್ತಾರೆ. ಶಿವಮೊಗ್ಗದಲ್ಲಿ ಇಂತಹ ಸುಮಾರು 250ಕ್ಕೂ ಹೆಚ್ಚು ಖಾಯಂ ಗ್ರಾಹಕರು ಇವರಿಗಿದ್ದಾರೆ. ಅವರಿಗೆ ಬೇಕಾದ ಗೊಂಬೆಗಳನ್ನು ಸವಿತಾ ಮೊದಲೇ ಮಾಹಿತಿ ಪಡೆದು ತರಿಸಿಕೊಡುತ್ತಾರೆ.
ಎಲ್ಲೆಡೆ ಪ್ಲಾಸ್ಟಿಕ್ ಗೊಂಬೆಗಳೇ ರಾರಾಜಿಸುವ ಇಂದಿನ ದಿನಮಾನಗಳಲ್ಲಿ ಮರದ ಮತ್ತು ಮಣ್ಣಿನ ಗೊಂಬೆಯನ್ನು ಜನರು ಖರೀದಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದು. ಜೊತೆಗೆ ಇವು ಪ್ಲಾಸ್ಟಿಕ್ ಗಿಂತ ಬಾಳಿಕೆ ಬರುವಂತಹವಾಗಿವೆ. ಜೊತೆಗೆ ಅಷ್ಟೇ ಸುಂದರವಾಗಿಯೂ ಇರುತ್ತವೆ. ಮನೆಯ ಶೋಕೇಸ್ನಲ್ಲಿ ರಾರಾಜಿಸುವಂತೆ ಮಾಡಲು ಸಾಕಷ್ಟು ಜನರು ಇಂತಹ ಗೊಂಬೆ ಖರೀದಿಸುತ್ತಾರೆ ಎನ್ನುತ್ತಾರೆ ಅವರು. ಗೊಂಬೆಯಷ್ಟೆ ಅಲ್ಲ, ಜೊತೆಗೆ ಚನ್ನಮಣೆ, ಕಡೆಗೋಲು, ಕಲ್ಲಿನ ಕಲಾಕೃತಿಗಳು, ಉಡುಗೊರೆಗೆ ಬಳಸಬಹುದಾದ ಮರದ ವಿಗ್ರಹಗಳು, ಮರದಿಂದ ತಯಾರಿಸಿದ ಆಕರ್ಷಕ ವಸ್ತುಗಳು ಸಹ ಇಲ್ಲಿ ಲಭ್ಯವಿವೆ.

No comments:
Post a Comment