Thursday, 29 August 2019

ಪಕ್ಷನಿಷ್ಠರನ್ನು ಮರೆತರೆ...


ಅತೃಪ್ತ ಶಾಸಕರಿಂದಾಗಿ ಕರ್ನಾಟಕದಲ್ಲಿ ಕಾಂಗ್ರೆೆಸ್- ಜೆಡಿಎಸ್ ಮೈತ್ರಿಿಕೂಟದ ಸರಕಾರ ಉರುಳಿದ ನಂತರ ಕಾಂಗ್ರೆೆಸ್‌ನಲ್ಲಿ  ಪಕ್ಷ ನಿಷ್ಠರು ಮತ್ತು ಹೊರಗಿನವರ ಬಗ್ಗೆೆ ಚರ್ಚೆ ಆರಂಭವಾಗಿದೆ. ಹೊರಗಿನವರು ಅತೃಪ್ತರಾಗಿ ಮುಂಬೈಗೆ ಹೋಗಿ  ಹೊಟೆಲ್ ವಾಸಿಗಳಾದ ಬಳಿಕ ಅವರ ಬಗ್ಗೆೆ ಅಸಹನೆ ಹೆಚ್ಚಿಿತ್ತು.  ಆದ್ದರಿಂದಲೇ ಪಕ್ಷದ ಈಗಿನ ನಾಯಕರನ್ನು ಕೆಲವು ನಿಷ್ಠರು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದಾಾರೆ.
ಕಳೆದ ವಿಧಾನಸಭೆ ಚುನಾವಣೆಗಿಂತ ಸ್ವಲ್ಪ ಮುಂಚೆ ಪಕ್ಷ ಸೇರಿದವರೇ ಕಾಂಗ್ರೆೆಸ್ ಟಿಕೆಟ್ ಪಡೆದು ಗೆದ್ದಿದ್ದರು. ಹೆಚ್ಚಿಿನ ಸಂಖ್ಯೆೆಯ ಅತೃಪ್ತರೆನಿಸಿಕೊಂಡು ಈಗ ಸರಕಾರದ ಪತನಕ್ಕೆೆ ಕಾರಣರಾದವರೂ ಇವರೇ. ಈ ರೀತಿ ಚುನಾವಣೆ ಸಂದರ್ಭದಲ್ಲಿ ಟಿಕೆಟನ್ನು ಸರಿಯಾದ ರೀತಿಯಲ್ಲಿ ವಿಮರ್ಶಿಸದೆ, ವ್ಯಕ್ತಿಿಯ ಹಿನ್ನೆೆಲೆ ಗಮನಿಸದೆ ನೀಡಿರುವುದು ಇಂದಿನ ಸ್ಥಿಿತಿಗೆ ಕಾರಣವಾಗಿದೆ. ಈ ರೀತಿಯ ಹೊರಗಿನವರಲ್ಲಿ ಗುತ್ತಿಿಗೆದಾರರು, ಉದ್ಯಮಿಗಳೇ ಹೆಚ್ಚಿಿನವರಿದ್ದರು. ಇವರಿಗೆ ಪಕ್ಷ ನಿಷ್ಠೆೆ ಸ್ವಲ್ಪವೂ ಇರಲಿಲ್ಲ. ಕೇವಲ ಹಣ ಚೆಲ್ಲುವುದು, ಚುನಾವಣೆ ಗೆಲ್ಲುವುದು. ಹೇಗಾದರೂ ಮಾಡಿ ಅಧಿಕಾರ ಹಿಡಿಯುವುದು (ಸಚಿವರಾಗುವುದು) ಅಷ್ಟೇ ಉದ್ದೇಶವಾಗಿತ್ತು.
ಬಹುಮತ ಸಾಬೀತು ಸಂದರ್ಭದಲ್ಲಿ ನಡೆದ ಅಧಿವೇಶನದಲ್ಲಿ ಈ ಮಾತನ್ನು ಆ ಪಕ್ಷದ ಶಾಸಕರೊಬ್ಬರು ಪ್ರಸ್ತಾಾಪಿಸಿದರು. ನೀವು  ರಿಯಲ್ ಎಸ್ಟೇಟ್ ಏಜೆಂಂಟರಿಗೆ, ಬಿಲ್ಡರ್ಸ್‌ಗೆ, ಅಬಕಾರಿ ಗುತ್ತಿಿಗೆದಾರರಿಗೆ ಟಿಕೆಟ್ ಕೊಟ್ಟಿಿದ್ದೀರಿ. ಅವರಲ್ಲಿ ಪಕ್ಷಕ್ಕೆೆ ನಿಷ್ಠರಾಗಿರಿ ಎಂದು ಹೇಗೆ ಕೇಳುತ್ತೀರಿ ಎಂದು ಪಶ್ನಿಿಸಿದ್ದರು.
ರಾಹುಲ್ ಗಾಂಧಿ ಸಹ ತಮ್ಮ ಟ್ವೀಟ್‌ನಲ್ಲಿ ಪಕ್ಷದೊಳಗಿನ ಸ್ಥಾಾಪಿತ ಹಿತಾಸಕ್ತಿಿಗಳೇ ಅಧಿಕಾರ ಕಳೆದುಕೊಳ್ಳಲು ಕಾರಣರೆಂದು ಹೇಳಿದ್ದರು. ಅಧಿಕಾರಕ್ಕೇರಿದ ದಿನದಿಂದಲೂ ಇವರು ಮುಳ್ಳಾಾದರು. ಸರಕಾರಕ್ಕೆೆ ಬೆದರಿಕೆ ಒಡ್ಡುತ್ತಲೇ ನಡೆದರು. ಸರಕಾರವನ್ನು ಕೆಡಹುವುದೇ ತಮ್ಮ ಗುರಿಮಾಡಿಕೊಂಡರು. ಈಗ ಅವರ ದುರಾಸೆ ಗೆದ್ದಿದೆ. ಪ್ರಜಾಪ್ರಭುತ್ವ, ಕರ್ನಾಟಕದ ಜನರ ಗೌರವ ಮಣ್ಣುಪಾಲಾಗಿದೆ.
ಪರತಂತ್ರರು, ಪಕ್ಷ ತ್ಯಜಿಸಿ ಮರಳಿ ಪಕ್ಷಕ್ಕೆೆ ಬಂದವರು, ಅತೃಪ್ತರು ಮತ್ತು ಇತರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಡಬಾರದೆಂದು ಕಾಂಗ್ರೆೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನ 2017ರಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ಜೊತೆಗೆ ಇಂತಹವರಿಗೆ ಟಿಕೆಟ್ ಕೊಡುವುದೇ ಆದಲ್ಲಿ ಪಕ್ಷದ ಕಾರ‌್ಯಕರ್ತರನ್ನು ಕೇಳಿ ಕೊಡಬೇಕು. ಹೆಲಿಕಾಪ್ಟರ್‌ನಲ್ಲಿ ಬರುವವರಿಗೆ ಟಿಕೆಟ್ ಬೇಡ ಎಂಬ ಮಾತನ್ನೂ ಸಹ ಅಂದು ಆಡಿದ್ದರು.
ಆದರೆ ಚುನಾವಣೆ ಹೊತ್ತಿಿನಲ್ಲಿ ಗೆಲ್ಲಲೇಬೇಕೆಂಬ ಏಕೈಕ ಗುರಿ ಇದ್ದುದರಿಂದ ಪರತಂತ್ರರಿಗೂ ಟಿಕೆಟ್ ಕೊಡಲಾಯಿತು. ರಾಹುಲ್ ಗಾಂಧಿ ಅಡಿದ ಮಾತನ್ನು ಕಸದ ಬುಟ್ಟಿಿಗೆ ಎಸೆಯಲಾಯಿತು. ಇದಕ್ಕೂ ಮುನ್ನವೇ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾಾ, ವೀರಪ್ಪ ಮೊಯ್ಲಿಿ ಮೊದಲಾದವರು ಚುನಾವಣೆ ಸಂದರ್ಭದಲ್ಲಿ ಟಿಕೆಟನ್ನು ಮಾರಾಟ ಮಾಡಲಾಗುತ್ತಿಿದೆ ಎಂದು ಹೇಳಿದ್ದರಿಂದ ಅಂದು ಅವರ ವಿರುದ್ದವೇ ಆಕ್ರೋೋಶ ಕೇಳಿಬಂದಿತ್ತು. ಈಗ ಮತ್ತೆೆ ಪಕ್ಷದ ನಿಷ್ಠಾಾವಂತರಿಗೆ ಮಾತ್ರ ಟಿಕೆಟ್ ಕೊಡಬೇಕೆಂಬ ಮಾತು ಎಲ್ಲಾಾ ನಾಯಕರಿಂದ ಕೇಳಿಬರುತ್ತಿಿದೆ.
ಮಹಾತ್ಮಾಾ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕಾಲದಲ್ಲಿ ಕಾಂಗ್ರೆೆಸ್ ಟಿಕೆಟ್ ಗೌರವಾನ್ವಿಿತ ಮತ್ತು ಜವಾಬ್ದಾಾರಿಯುತ ಕೆಲಸದಲ್ಲಿರುವವರಿಗೆ ಅಂದರೆ, ಶಿಕ್ಷಕರು, ವೈದ್ಯರು, ಪತ್ರಕರ್ತರು, ವಕೀಲರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ನಿಷ್ಠಾಾವಂತರಿಗೆ ಮಾತ್ರ ಸಿಗುತ್ತಿಿತ್ತು. ಈಗ ಮತ್ತೆೆ ಅದೇ ಪದ್ದತಿಗೆ ಪಕ್ಷ ಮರಳಬೇಕಿದೆ.
ಇದು ಕೇವಲ ಕಾಂಗ್ರೆೆಸ್ ಪಕ್ಷದ ಕಥೆ ಮಾತ್ರವಲ್ಲ, ಎಲ್ಲಾಾ ರಾಜಕೀಯ ಪಕ್ಷಗಳಿಗೂ ಅನ್ವಯಿಸುವ ಮಾತು. ಎಲ್ಲ ಪಕ್ಷದವರೂ ಇಂತಹವರಿಂದ ತೊಂದರೆ ಅನುಭವಿಸಿದ ಇತಿಹಾಸ ಮತದಾರರ ಮುಂದಿದೆ. ಉದಾಹರಣೆಗೆ- ನಟ ಜಗ್ಗೇಶ್, ಉದ್ಯಮಿ ಆನಂದ್ ಅಸ್ನೋೋಟಿಕರ್ ಮೊದಲಾದವರು. ಆದರೂ ಪಕ್ಷಾಂತರಿಗಳಿಗೇ ಮತ್ತೆೆ ಮತ್ತೆೆ ಮಣೆ ಹಾಕುವ, ಅಂತಹವರನ್ನೇ ಆರಿಸಿ ಕಳುಹಿಸುವ ಕೆಲಸ ನಡೆಯುತ್ತಿಿದೆ. 
published on- 30 ಜುಲಾಯ್ 2019
.........................................
 

Friday, 12 July 2019

ಮತ್ತೆೆ ಚಿಲಿಪಿಲಿಗುಡುತ್ತಿಿದೆ ಕೆ. ಆರ್. ಪುರಂ ಶಾಲೆ 


ಈ ಸರ್ಕಾರಿ ಪ್ರಾಾಥ"ುಕ ಶಾಲೆ ಇನ್ನೇನು ಮುಚ್ಚಿಿ ಹೋಗುವುದಕ್ಕೆೆ ಸಿದ್ಧವಾಗಿತ್ತು. ಉತ್ತಮವಾದ ಹತ್ತಾಾರು ಕೊಠಡಿ ಇರುವ ಕಟ್ಟಡವನ್ನು ಬಾಡಿಗೆಗೆ ಕೊಡಲು ಇಲಾಖೆ ನಿರ್ಧರಿಸಿಯೂ ಆಗಿತ್ತು. ಏಕೆಂದರೆ ಇಲ್ಲಿ ಒಂದರಿಂದ 7ನೆಯ ತರಗತಿಯವರೆಗೆ ಕೇವಲ 6 ಮಕ್ಕಳಿದ್ದರು. ಆದರೆ 85 ವರ್ಷದ ಈ ಶಾಲೆ ಮುಚ್ಚಲು ಬಿಡಬಾರದೆಂದು ತೀರ್ಮಾನಿಸಿ, ಸುತ್ತಮುತ್ತಲ ನಾಗರಿಕರು ಚರ್ಚಿಸಿ, ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕರ್ನಾಟಕ ಪಬ್ಲಿಿಕ್ ತೆರೆಯಲು ತೀಮಾನಿಸಲಾುತು. ಪರಿಣಾಮವಾಗಿ, ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆೆ 70 ದಾಟಿದೆ.
ಸ್ವಾಾತಂತ್ರ್ಯಪೂರ್ವ ಕಾಲ ಅಂದರೆ 1935ರಲ್ಲಿ ತೆರೆದ ಶಾಲೆ ಇದು. ಸಾ"ರಾರು "ದ್ಯಾಾವಂತರನ್ನು ಸಮಾಜಕ್ಕೆೆ ನೀಡಿದೆ. ಆದರೆ ಇಂದು ತನ್ನ ಅಸ್ತಿಿತ್ವವನ್ನು ಉಳಿಸಿಕೊಳ್ಳಲಾಗದ ಸ್ಥಿಿತಿಗೆ ಅದು ತಲುಪಿತ್ತು. ಇಂತಹ ಅನಾಹುತ ಸಂಭ"ಸಬಾರದೆಂದು, ಗತವೈಭವ ಮರುಕಳಿಸಬೇಕೆಂದು ತೀರ್ಮಾನಿಸಿ ಸ್ಥಳೀಯರು ಈಗ ಶಾಲೆ ಉಳಿಸುವಲ್ಲಿ ಮುಂದಾಗಿದ್ದಾಾರೆ. ನಾ ಕಲಿತ ಶಾಲೆಗೆ ನಾ ಬೆಳಕಾಗುವೆ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಹಳೆಯ "ದ್ಯಾಾರ್ಥಿಗಳ ಸಂಘವನ್ನು ರಚಿಸಿ ಶಾಲೆಯ ಬೆಳವಣಿಗೆಗೆ ನಾಂದಿ ಹಾಡಲು ಚಿಂತನೆ ನಡೆಸಲಾಗಿದೆ.
ಇದು ನಗರದ ಕೆ. ಆರ್. ಪುರಂ ಪ್ರಾಾಥ"ುಕ ಶಾಲೆಯ ಕತೆ. ಕಳೆದ ಸಾಲಿನಲ್ಲಿ 8 ಮಕ್ಕಳಿದ್ದರು. ಈ ಬಾರಿ ಕನ್ನಡ ಮಾಧ್ಯಮಕ್ಕೆೆ 6 ಮಾತ್ರ ಉಳಿದಿದ್ದರು. ಸಕಲ ಮೂಲಸೌಕರ್ಯ, ಉತ್ತಮ ಕಟ್ಟಡ, ನಗರದ ಹೃದಯಭಾಗದ ಈ ಶಾಲೆಗೆ ಆಟದ ಮೈದಾನ"ದೆ, ಬಯಲು ರಂಗಮಂದಿರ"ದೆ. ಇಲ್ಲಿ ಕೊರತೆ ಎನ್ನುವುದು ಕೇವಲ ಮಕ್ಕಳು ಮಾತ್ರವಾಗಿತ್ತು.
ಈಗ ಇದನ್ನು ನಿವಾರಿಸಿ ಈ ಶಾಲೆ ಮತ್ತೆೆ ಹೊಸವೈಭವ ಕಾಣುವಂತೆ ನಾಂದಿ ಹಾಡಲಾಗಿದೆ. ಇದಕ್ಕೆೆ ಕೈಜೋಡಿಸಿದವರು ಅಲ್ಲಿನ ಪಾಲಿಕೆ ಸದಸ್ಯೆೆ ಸುನೀತಾ ಅಣ್ಣಪ್ಪ, ಜಿಪಂ ಶಿಕ್ಷಣ ಸ್ಥಾು ಸ"ುತಿ ಅಧ್ಯಕ್ಷ ಕೆ. ಇ. ಕಾಂತೇಶ್, ಶಾಸಕ ಕೆ. ಎಸ್. ಈಶ್ವರಪ್ಪ ಮತ್ತು ಡಿಡಿಪಿಐ ಸುಮಂಗಲಾ ಕುಚಿನಾಡ್ ಮತ್ತು ಬಿಇಓ ಕೆ. ಬಿ. ಲೋಕೇಶಪ್ಪ, ಜೊತೆಗೆ ಮಕ್ಕಳ ಪಾಲಕರು.  ಜನಪ್ರತಿನಿಧಿಗಳಲ್ಲಿ ಈ ಬಗೆಯ ಕಾಳಜಿ ಅಥವಾ ಇಚ್ಛಾಾಶಕ್ತಿಿ ಹಾಗೂ ಅಧಿಕಾರಿಗಳಲ್ಲೂ ಶಾಲೆ ಉಳಿಸಬೇಕೆಂಬ ಮನೋಭಾವ ಇದ್ದರೆ ಯಾವ ಶಾಲೆಯನ್ನು ಬೇಕಾದರೂ ಬೆಳೆಸಬಹುದು ಎನ್ನುವುದಕ್ಕೆೆ ಇದು ಸಾಕ್ಷಿ.
ಕೆ. ಆರ್. ಪುರಂ ಶಾಲೆ ಈಗ ಮತ್ತೆೆ ಮಕ್ಕಳಿಂದ ಚಿಲಿಪಿಲಿಗುಡುವಂತಾಗಿದೆ. ಕರ್ನಾಟಕ ಪಬ್ಲಿಿಕ್ ಸ್ಕೂಲ್ ಇತ್ತೀಚೆಗೆ ಉದ್ಘಾಾಟನೆಯೂ ಆಗಿದೆ. ಪಾಲಕರು ಆಂಗ್ಲ ಮಾಧ್ಯಮಕ್ಕೆೆ ತಮ್ಮ ಮಕ್ಕಳನ್ನು ಸಾಲಿನಲ್ಲಿ ಬಂದು ಸೇರಿಸತೊಡಗಿದ್ದಾಾರೆ. ಬೇಡಿಕೆ ಹೆಚ್ಚಾಾಗಿದೆ. ಎಲ್‌ಕೆಜಿಗೆ 30 ಮಕ್ಕಳನ್ನು ಮತ್ತು ಮೊದಲ ತರಗತಿಗೆ 30 ಮಕ್ಕಳನ್ನು ಸೇರಿಸಿಕೊಳ್ಳಲು ಮಾತ್ರ ಅವಕಾಶ"ದೆ. ಆದರೆ ಇಲ್ಲಿ ಯುಕೆಜಿಗೂ ಮಕ್ಕಳು ದಾಖಲಾಗಿದ್ದಾಾರೆ. ಇದರಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆೆ ಮೊದಲ ತರಗತಿಗೆ ಅನುಕೂಲವಾಗಲಿದೆ. ಜೊತೆಗೆ ಅಂಗನವಾಡಿಯನ್ನೂ ಇಲ್ಲಿಯೇ ಆರಂಭಿಸಲಾಗಿದೆ. ಅಂಗನವಾಡಿಗೆ ಸುಮಾರು 20ಕ್ಕೂ ಹೆಚ್ಚು ಮಕ್ಕಳು ಪ್ರವೇ ಸಪಡೆದಿದ್ದಾಾರೆ.
ಕಳೆದ ವರ್ಷ ಈ ಶಾಲೆಯ ಸ್ಥಿಿತಿ ನೋಡಿದವರಿಗೆ ಮರುಕ ಬರುತ್ತಿಿತ್ತು. ಹತ್ತಾಾರು ಉತ್ತಮ ಕೊಠಡಿಗಳಿದ್ದರೂ, ಮೂವರು ಶಿಕ್ಷಕರಿದ್ದರೂ, ಸಾಕಷ್ಟು ಗಾಳಿ-ಬೆಳಕು, ಸುತ್ತಮುತ್ತ ಭದ್ರ ಗೋಡೆ, ಸೌಕರ್ಯ"ದ್ದರೂ,  ಗಿಡ-ಮರಗಳ ನೆರಳಿದ್ದರೂ ಮಕ್ಕಳು ಇಲ್ಲದ ಬಣಗುಡುತಿತ್ತು. ಆದರೆ ಈಗ ಅದೇ ಶಾಲೆಯನ್ನು ನಿಂತು ನೋಡುವಂತಹ ಸ್ಥಿಿತಿಗೆ ಜನಪ್ರತಿನಿಧಿಗಳು ಮಾಡಿ ಜನರಲ್ಲಿ ತಮ್ಮ ಕಾಳಜಿಯಲ್ಲಿ ತೋರ್ಪಡಿಸಿದ್ದಾಾರೆ.
ಸ್ಥಳೀಯರು ಮನಸ್ಸು ಮಾಡಿದರೆ, ಜನಪ್ರತಿನಿಧಿಗಳು ತಮ್ಮನ್ನು ಆಯ್ಕೆೆ ಮಾಡಿದವರ ಅವರ ಋಣ ತೀರಿಸಬೇಕೆಂದರೆ ಸಮಾಜಮುಖಿ ಕೆಲಸವನ್ನು ಎಷ್ಟೇ ಕಷ್ಟವಾದರೂ ಮಾಡಬಹುದು. ಅದರಲ್ಲೂ ಕೆ. ಆರ್. ಪುರಂ ಭಾಗದಲ್ಲಿ ಇರುವವರೆಲ್ಲ ಬಹುತೇಕ ಬಡವರು. ಅವರಿಗೆ ಈ ಶಾಲೆಯೇ ಆಧಾರ. ಮಕ್ಕಳನ್ನು ಖಾಸಗಿ ಶಾಲೆಗೆ ಹೆಚ್ಚು ಶುಲ್ಕ ನೀಡಿ ಕಳು"ಸುವ ಸ್ಥಿಿತಿಯಲ್ಲಿ ಅವರಿಲ್ಲ. ಹಾಗಾಗಿಯೇ ಸಭೆ ನಡೆಸಿ, ಮನೆ-ಮನೆಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿ, ಹೆಚ್ಚು ಮಕ್ಕಳು ದಾಖಲಾಗುವಂತೆ ಮಾಡಿದ್ದಾಾರೆ. ಇದನ್ನು ಅವರೇ ಹೆಮ್ಮೆುಂದ ಹೇಳಿಕೊಳ್ಳುತ್ತಿಿದ್ದಾಾರೆ.
ಸರ್ಕಾರವೇ ಎಲ್ಲ ಕೆಲಸವನ್ನು ಮಾಡುತ್ತದೆ ಎಂದು ನಂಬಿ ಕುಳಿತುಕೊಳ್ಳುವ ಕಾಲ ಈಗಿಲ್ಲ. ಜನರೂ ಸಹ ತಮ್ಮ ಸಹಭಾಗಿತ್ವವನ್ನು ಇಂತಹ ಕಾರ‌್ಯಕ್ರಮಗಳಲ್ಲಿ ತೋರ್ಪಡಿಸಿ, ತಾವೂ ಸಹ ಮುಂದಾಗಿ ಶಕ್ತಿಿತುಂಬಬೇಕಿದೆ. ಜನಪ್ರತಿನಿಧಿಗಳು "ಶೇಷ ಆಸಕ್ತಿಿ ವ"ಸಿದರೆ ಬಾಗಿಲು ಮುಚ್ಚಲು ಸಿದ್ಧವಾಗಿರುವ ಎಲ್ಲ ಶಾಲೆಗಳನ್ನೂ ಮತ್ತೆೆ ಉಳಿಸಬಹುದು ಎನ್ನುವುದಕ್ಕೆೆ ಇದೊಂದು ಉದಾಹರಣೆ ಮಾತ್ರ.
published on 22nd june
..................................
   


ಹಳ್ಳಿಿಮೇಷ್ಟ್ರು ರೂಪಿಸಿದ ಮಾದರಿ ಸರ್ಕಾರಿ ಶಾಲೆ









ಈ ಶಾಲೆಯಲ್ಲಿ ಒಂದನೆಯ ತರಗತಿಗೆ ಸೇರುವ ಪ್ರತಿ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ವನ್ನು ಹತ್ತು ವರ್ಷದವರೆಗೆ ಠೇವಣಿಯನ್ನಿಿಡಲಾಗುತ್ತಿಿದೆ. ಇದರ ಬಾಂಡ್‌ನ್ನು ತಾಯಿ ಮತ್ತು ಮಗುವಿನ ಹೆಸರಲ್ಲಿ ನೀಡಲಾಗುತ್ತಿಿದೆ. ಮಗು ಎಸ್ಸೆೆಸೆಲ್ಸಿಿಗೆ ಬರುವಾಗ ಈ ಹಣ ಮಗುವಿಗೆ ದೊರೆಯುತ್ತದೆ. ಈ ಹಣವನ್ನು ದಾನಿಗಳಿಂದ ಪಡೆಯುತ್ತಾಾರೆ. ಈವರೆಗೆ 200 ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟಿಿದ್ದಾಾರೆ. ಇದರಿಂದ ಶಾಲೆಗೆ ಸೇರುವ ಮಕ್ಕಳ ಸಂಖ್ಯೆೆ ಏರಿಕೆಯಾಗುತ್ತಲೇ ಇದೆ. ಶಿಸ್ತು, ಹಾಜರಾತಿ  ಮತ್ತು ಕಲಿಕಾ ಪ್ರಗತಿಯಲ್ಲಿ ವರ್ಷಾಂತ್ಯಲ್ಲಿ ಅತ್ಯಂತ ಹೆಚ್ಚು ಸ್ಟಾಾರ್ ಪಡೆದವರಿಗೆ ವರ್ಷದ ಸ್ಟಾಾರ್ ಪ್ರಶಸ್ತಿಿಯನ್ನು ಕೊಡಲಾಗುತ್ತಿಿದೆ. ಪ್ರತಿ ಶುಕ್ರವಾರ ಮಕ್ಕಳಿಗೆ ರಸಪ್ರಶ್ನೆೆ ಏರ್ಪಡಿಸಿ ಬಹುಮಾನ ಕೊಡಲಾಗುತ್ತಿಿದೆ. ಮಕ್ಕಳೇ ಪೌಷ್ಠಿಿಕ ತರಕಾರಿ ಬೆಳೆಯುತ್ತಾಾರೆ. ಬಿಸಿಯೂಟಕ್ಕೆೆ ಬೇಕಾಗುವಷ್ಟು ತರಕಾರಿ ಬೆಳೆಯಲಾಗುತ್ತಿಿದೆ. ಮಣ್ಣು, ನೀರು, ಗೊಬ್ಬರ, ಮಡಿ ಮಾಡುವುದು, ಸಸಿ ಬೆಳೆಸುವುದು ಎಲ್ಲ ಕೆಲಸವನ್ನೂ ಮಕ್ಕಳೇ ಮಾಡುತ್ತಾಾರೆ.



ಈ ಸರ್ಕಾರಿ ಶಾಲೆಯ ಆವರಣದ ತುಂಬಾ ವಿವಿಧ ಜಾತಿಯ ಗಿಡಮರಗಳು, ಹಣ್ಣು ಮತ್ತು ಹೂವಿನ ಗಿಡಗಳು ಬೆಳೆದು ನಿಂತು ಸದಾ ನೆರಳನ್ನು ನೀಡುತ್ತಿಿವೆ. ಇದರೊಟ್ಟಿಿಗೆ ಮನಸೆಳೆಯುವ ಉದ್ಯಾಾನವನ. ಪಕ್ಕದಲ್ಲೇ ತರಕಾರಿ ಬೆಳೆಯಲಾಗುತ್ತಿಿದೆ. ಶಾಲೆಯ ಸುತ್ತ ತೆಂಗು, ಮಾವು, ಬೇವು, ಸಾಗವಾನಿ ಮೊದಲಾದ ಉತ್ತಮ ಜಾತಿಯ ಮರಗಳನ್ನು ನೆಡಲಾಗಿದೆ. ತಣ್ಣೆೆಳಲ ತಂಪು ಇಲ್ಲಿ ಸದಾ ನೆಲೆಸಿದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ವ್ಯವಸ್ಥೆೆ ಇಲ್ಲಿದೆ. ಎಲ್ಲಿ ನೋಡಿದರೂ ಸ್ವಚ್ಛತೆ, ಅಂದ, ಚೆಂದ. ದೂರದಿಂದ ನೋಡುವವರಿಗೆ ಯಾವುದೋ ಖಾಸಗಿ ಶಾಲೆಯಂತೆ ಕಾಣುತ್ತದೆಯಾದರೂ ಅದು ಖಾಸಗಿ ಶಾಲೆಯಲ್ಲ, ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ.
ಈ ಶಾಲೆ ಭದ್ರಾಾವತಿ ತಾಲೂಕು ಹಿರಿಯೂರಿನ ಪಕ್ಕದ ಹಳ್ಳಿಿಕೇರಿಯಲ್ಲಿದೆ. 8 ವರ್ಷಗಳ ಹಿಂದೆ ಈ ಶಾಲೆ ಯಾರಿಗೂ ಬೇಡವಾದ ಶಾಲೆಯಾಗಿತ್ತು. ಆದರೆ 2011ರಲ್ಲಿ ಮುಖ್ಯಾಾಧ್ಯಾಾಪಕರಾಗಿ ಬಂದ ಕೂಬಾ ನಾಯ್‌ಕ್‌ ಶಾಲೆಯನ್ನು ಅಭಿವೃಧಿಪಥದತ್ತ ಕೊಂಡೊಯ್ಯಲು ತಮ್ಮದೇ ಆದ ಯೋಜನೆ ರೂಪಿಸಿದರು. ಆ ಪ್ರಕಾರ ಶಾಲೆಯ ಚಿತ್ರಣವೇ ಬದಲಾಗುತ್ತಾಾ ಹೋಯಿತು. ಅಂದು ಕೇವಲ 90 ಮಕ್ಕಳಿದ್ದರು. ಆದರೆ ಬರಬರುತ್ತ ಮಕ್ಕಳ ಸಂಖ್ಯೆೆ ಇಳಿಕೆಯಾಗುತ್ತಾಾ ಸಾಗಿದಾಗ ಅವರು ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದರು. 6 ಮತು 7ನೆಯ ತರಗತಿಗೆ ಆಂಗ್ಲ ಮಾಧ್ಯಮವನ್ನೂ ಮಂಜೂರು ಮಾಡಿಸಿ ತಂದರು. ಈಗ ಎಲ್‌ಕೆಜಿ, ಯುಕೆಜಿಗೆ  50 ಮಕ್ಕಳು ಪ್ರತಿ ವರ್ಷ ದಾಖಲಾಗುತ್ತಿಿದ್ದಾಾರೆ. 1ರಿಂದ 8ನೆಯ ತರಗತಿಯವರೆಗೆ 128 ಮಕ್ಕಳಿದ್ದಾಾರೆ. 
 ಶಿಕ್ಷಕನಿಗೆ ಸಹ ಶಿಕ್ಷಕರ ಸಹಕಾರ ಮತ್ತು ದಾನಿಗಳ ನೆರವು ಸಿಕ್ಕಲ್ಲಿ ಆತ ಶಾಲೆಯನ್ನು ಆಕರ್ಷಣೀಯವಾಗಿ, ಮಾದರಿಯಾಗಿ, ಕಲಿಕೆಗೆ ಪೂರಕವಾಗಿರುವಂತೆ, ತನ್ನತನದಿಂದ ಎಲ್ಲೆೆಡೆ ಹೆಸರುಗಳಿಸುವಂತೆ ಅಪಾರ ಕಾಳಜಿಯಿಂದ ಹೇಗೆ ನಿರ್ಮಿಸಬಹುದು ಎನ್ನುವುದಕ್ಕೆೆ ಇದು ಒಂದು ಮಾದರಿ. ಶಿಕ್ಷಕರಲ್ಲಿ ಶೈಕ್ಷಣಿಕ ಮತ್ತು ಸೇವಾಮನೋಭಾವವಿದ್ದರೆ, ಐಕ್ಯತೆಯಿದ್ದರೆ ಇದೆಲ್ಲ ಸಾಧ್ಯ.
ಕೂಬಾ ನಾಯ್‌ಕ್‌ ಶಾಲೆಯ ಹಳೆಯ ವಿದ್ಯಾಾರ್ಥಿಗಳಿಂದ ನೆರವು ಪಡೆದು ಈ ಎಲ್ಲ ಅಭಿವೃದ್ಧಿಿ ಮಾಡಿದ್ದಾಾರೆ. ಹಿಂದುಳಿದವರು ಮತ್ತು ಕೂಲಿಕಾರ್ಮಿಕರಿಂದಲೇ ತುಂಬಿರುವ ಹಳ್ಳಿಿಕೆರೆ ಗ್ರಾಾಮದ ಶಾಲೆಯಲ್ಲಿ 1ರಿಂದ 8ನೆಯ ತರಗತಿಯವರೆಗೆ ಕಲಿಕೆ ಇದೆ. ಈಗ 7 ಶಿಕ್ಷಕರಿದ್ದಾಾರೆ. ಇಲ್ಲಿಗೆ ಮಕ್ಕಳನ್ನು ಹೇಗೆ ಆಕರ್ಷಿಸಬಹುದೆಂದು ಯೋಚಿಸಿ, ಉತ್ತಮ ಉಪಾಯ ಹುಡುಕಿ ಅದರಲ್ಲಿ ಯಶಸ್ವಿಿಯಾಗಿದ್ದಾಾರೆ. ಇವರು ಮಾಡಿದ ಮೊದಲ ಕೆಲಸವೆಂದರೆ, ಒಂದನೆಯ ತರಗತಿಗೆ ಸೇರುವ ಪ್ರತಿ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ವನ್ನು ಹತ್ತು ವರ್ಷದವರೆಗೆ ಠೇವಣಿಯನ್ನಿಿಡುವುದು, ಇದರ ಬಾಂಡ್‌ನ್ನು ತಾಯಿ ಮತ್ತು ಮಗುವಿನ ಹೆಸರಲ್ಲಿ ನೀಡುವುದು. ಮಗು ಎಸ್ಸೆೆಸೆಲ್ಸಿಿಗೆ ಬರುವಾಗ ಈ ಹಣ ಮಗುವಿಗೆ ದೊರೆಯುತ್ತದೆ. ಈ ಹಣವನ್ನು ದಾನಿಗಳಿಂದ ಪಡೆಯುತ್ತಾಾರೆ. ಈವರೆಗೆ 200 ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟಿಿದ್ದಾಾರೆ. ಇದರಿಂದ ಶಾಲೆಗೆ ಸೇರುವ ಮಕ್ಕಳ ಸಂಖ್ಯೆೆ ಏರಿಕೆಯಾಗುತ್ತಲೇ ಇದೆ.
 ಎರಡನೆಯದಾಗಿ, ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿಯನ್ನು 2016ರಲ್ಲೇ ಆರಂಭಿಸಿರುವುದು. ಇದನ್ನು ಅಂದಿನ ಜಿಪಂ ಸಿಇಒ ರಾಕೇಶ್‌ಕುಮಾರ್ ಉದ್ಘಾಾಟಿಸಿದ್ದಾಾರೆ. ಇವರಿಗೆ ಇಬ್ಬರು ಶಿಕ್ಷಕರು ಮತ್ತು ಒಬ್ಬ ಆಯಾ ನೇಮಕ, ಖರ್ಚು ಭರಿಸಲು ದಾನಿಗಳಿಂದ ಹಣ ಸಂಗ್ರಹಿಸಿ ಶಿಕ್ಷಣ ನಿಧಿ ಆರಂಭ. ಹಾಲಿ 50 ಮಕ್ಕಳು ಇಲ್ಲಿ ಸೇರ್ಪಡೆಯಾಗಿದ್ದಾಾರೆ. ಖಾಸಗಿ ಶಾಲೆಯಲ್ಲಿ 50-60 ಸಾವಿರ ರೂ. ಡೊನೇಶನ್ ಕೊಟ್ಟು ಸೇರಬೇಕಾದ ಸ್ಥಿಿತಿಗೆ ಕಡಿವಾಣ ಹಾಕುವ ಮೂಲಕ ಇಲ್ಲಿ ಉಚಿತ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲೇ ಕಲಿಸುವ ವ್ಯವಸ್ಥೆೆ ಮಾಡಿದ್ದಾಾರೆ. ಇದಕ್ಕೆೆ ಜಿಪಂ ಮಾಜಿ ಸದಸ್ಯ ಎಸ್. ಕುಮಾರ್ ನೆರವು ನೀಡಿದ್ದಾಾರೆ. ಪ್ರತಿ ತಿಂಗಳೂ ಈ ಇಬ್ಬರು ಶಿಕ್ಷಕರು ಮತ್ತು ಆಯಾಗೆ ಅವರೇ ಸಂಬಳ ಪಾವತಿಸುತ್ತಿಿದ್ದಾಾರೆ. ಈ ಮಕ್ಕಳಿಗೆ ಸ್ಮಾಾರ್ಟ್ ಕ್ಲಾಾಸ್ ವ್ಯವಸ್ಥೆೆ ಇದೆ. ದಾನಿಗಳಿಂದ ಪ್ರೊಜೆಕ್ಟರ್ ಕೊಡಿಸಿದ್ದಾಾರೆ. 
ಉಳಿದಂತೆ  ಶಿಕ್ಷಕ ಸಮೂಹದ ಕೊಡುಗೆಯೂ ದೊಡ್ಡದಿದೆ. ಕಲಿಕೆಗೆ ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಿಸಲಾಗಿದೆ. ಮಕ್ಕಳೇ ಪೌಷ್ಠಿಿಕ ತರಕಾರಿ ಬೆಳೆಯುತ್ತಾಾರೆ. ಬಿಸಿಯೂಟಕ್ಕೆೆ ಬೇಕಾಗುವಷ್ಟು ತರಕಾರಿ ಬೆಳೆಯಲಾಗುತ್ತಿಿದೆ. ಮಣ್ಣು, ನೀರು, ಗೊಬ್ಬರ, ಮಡಿ ಮಾಡುವುದು, ಸಸಿ ಬೆಳೆಸುವುದು ಎಲ್ಲ ಕೆಲಸವನ್ನೂ ಮಕ್ಕಳೇ ಮಾಡುತ್ತಾಾರೆ.
 ಪ್ರತಿ ದಿನ ಶಾಲೆಯಲ್ಲಿ ಮಕ್ಕಳ ಹಾಜರಾತಿ ಇರುವಂತೆ ಮಾಡಲು, ಶಿಸ್ತು ಬೆಳೆಸಲು ಸ್ಟಾಾರ್ ಕೊಡುವ ಪದ್ದತಿ ಆರಂಭಿಸಿ ಅದರಲ್ಲೂ ಯಶಸ್ವಿಿಯಾಗಿದ್ದಾಾರೆ. ಸ್ಟಾಾರ್ ಪಡೆಯಲಿಕ್ಕಾಾಗಿ ಮಕ್ಕಳು ಗೈರುಹಾಜರಾಗುತ್ತಿಿಲ್ಲ. ಜೊತೆಗೆ ಶಿಸ್ತು ಮತ್ತು ಕಲಿಕಾ ಪ್ರಗತಿ ಏರಿದೆ. ವರ್ಷಾಂತ್ಯಲ್ಲಿ ಅತ್ಯಂತ ಹೆಚ್ಚು ಸ್ಟಾಾರ್ ಪಡೆದವರಿಗೆ ವರ್ಷದ ಸ್ಟಾಾರ್ ಪ್ರಶಸ್ತಿಿಯನ್ನು ಕೊಡಲಾಗುತ್ತಿಿದೆ. ಪ್ರತಿ ಶುಕ್ರವಾರ ಮಕ್ಕಳಿಗೆ ರಸಪ್ರಶ್ನೆೆ ಏರ್ಪಡಿಸಿ ಬಹುಮಾನ ಕೊಡಲಾಗುತ್ತಿಿದೆ. ಒಂದೊಂದು ವಾರ ಒಬ್ಬೊೊಬ್ಬ ಶಿಕ್ಷಕರ ಜವಾಬ್ದಾಾರಿ ಇದು. 
ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ಏಕೈಕ ಕಾರಣಕ್ಕೆೆ  ಅತಿ ಬಡತನದಲ್ಲಿ ಶಿಕ್ಷಣ ಕಲಿತ ಕೂಬಾ ನಾಯ್‌ಕ್‌ ಈ ಕೆಲಸ ಮಾಡುತ್ತಿಿದ್ದಾಾರೆ. ಊರಿನಲ್ಲಿ 4 ಖಾಸಗಿ ಶಾಲೆಗಳಿದ್ದರೂ ಅಲ್ಲಿಗಿಂತ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಯಲ್ಲಿದ್ದಾಾರೆ.  ಇಲ್ಲಿನ ಶಿಸ್ತು, ವಾತಾವರಣ, ಸುಂದರ ವಾತಾವರಣ ಮತ್ತು ಶಾಲೆಯ ಅಭಿವೃದ್ಧಿಿ ನೋಡಲು ಸರ್ಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕರು ಬರುತ್ತಾಾರೆ.
ಸರ್ಕಾರ ಸಮವಸ್ತ್ರ, ಶೂ, ಸಾಕ್‌ಸ್‌ ನೀಡುತ್ತಿಿದೆ. ಬೆಲ್‌ಟ್‌ ಮತ್ತು ಟೈಯನ್ನು ದಾನಿಗಳಿಂದ ಪಡೆಯುತ್ತಿಿದ್ದಾಾರೆ. ಜೊತೆಗೆ ಭದ್ರಾಾವತಿಯ ಆನಂದ್ ಟೆಕ್‌ಸ್‌‌ಟೈಲ್‌ಸ್‌ ಮಾಲಕರು ಪ್ರತಿ ವರ್ಷ ಸುಮಾರು 40 ಸಾವಿರ ರೂ. ಮೌಲ್ಯದ ಸಮವಸ್ತ್ರವನ್ನು ಉಚಿತವಾಗಿ ಕೊಡುತ್ತಿಿದ್ದಾಾರೆ. ಈ ಸಮವಸ್ತ್ರ ವಾರದಲ್ಲಿ 2 ದಿನ ಧರಿಸುವಂತೆ ವ್ಯವಸ್ಥೆೆ ಮಾಡಲಾಗಿದೆ. ಇವರ ಬಗ್ಗೆೆ ಪತ್ರಿಿಕೆಯೊಂದರಲ್ಲಿ ಓದಿದ ನಟ ಶ್ರೀನಿವಾಸಮೂರ್ತಿ ಈ ಶಾಲೆಗೆ 4 ಕಂಪ್ಯೂಟರ್ ನೀಡಿದ್ದಾಾರೆ. 
ಇಷ್ಟೆೆಲ್ಲ ಅಸಾಧಾರಣ ಕೆಲಸ ಮಾಡುತ್ತಿಿರುವ ಮುಖ್ಯಾಾಧ್ಯಾಾಪಕ ಕೂಬಾ ನಾಯ್‌ಕ್‌ ಅವರು ಈಗ ರಾಜ್ಯದಲ್ಲಿ ಮನೆಮಾತಾಗಿದ್ದಾಾರೆ. ರಾಜ್ಯಮಟ್ಟದ ಅಸಾಮಾನ್ಯ ಕನ್ನಡಿಗ ವಾರ್ಷಿಕ ಪ್ರಶಸ್ತಿಿ, ಪಬ್ಲಿಿಕ್ ಟಿವಿಯ ಪಬ್ಲಿಿಕ್ ಹೀರೋ, ಕನ್ನಡ ಪ್ರಭ- ಸುವರ್ಣ ನ್ಯೂಸ್ ಕೊಡಮಾಡುವ ಅಸಾಮಾನ್ಯ ಕನ್ನಡಿಗ ಪ್ರಶಸ್ತಿಿಯನ್ನು ತಮ್ಮದಾಗಿಸಿಕೊಂಡಿದ್ದಾಾರೆ.
 ಇವರು ಹೆಸರಿಗೆ, ಪದವಿಗೆ ಮಾತ್ರ ಸೀಮಿತರಾಗದೆ, ಶಾಲೆಯ ಉಳಿದ ಎಲ್ಲಾಾ ಶಿಕ್ಷಕರಿಗೂ ಮಾರ್ಗದರ್ಶಕರಾಗಿದ್ದಾಾರೆ. ಈ ಶಾಲೆಗೆ ಅತಿ ಹೆಚ್ಚಿಿನ ದಾನಿಗಳೆಂದರೆ ಹಳೆಯ ವಿದಾರ್ಥಿ ಸಂಘದವರು. ಇಲ್ಲಿ ಕಲಿತ ಹಲವರು ಇಂಜಿನಿಯರ್, ವೈದ್ಯರು ಮತ್ತು ಉನ್ನತ ಹುದ್ದೆೆಯಲ್ಲಿದ್ದಾಾರೆ. ಪ್ರತಿವರ್ಷ ಮರೆಯದೆ ತಮ್ಮ ಪಾಲಿನ ನೆರವನ್ನು ನೀಡುತ್ತಾಾರೆ. ಇದರಿಂದ ಶಾಲೆಯಲ್ಲಿ ವಿವಿಧ ಯೋಜನೆ ಆರಂಭಿಸಲು ಸಾಧ್ಯವಾಗಿದೆ ಎನ್ನುತ್ತಾಾರೆ ಕೂಬಾ ನಾಯ್‌ಕ್‌. ಇದರ ಜೊತೆಗೆ ಮಾಜಿ ಶಾಸಕ ಅಪ್ಪಾಾಜಿಗೌಡರು ಸುಮಾರು 300 ಮಕ್ಕಳು ಏಕಕಾಲದಲ್ಲಿ ಕುಳಿತು ಊಟ ಮಾಡಬಲ್ಲ ಹಾಲ್ ಕಟ್ಟಿಿಸಿಕೊಟ್ಟಿಿದ್ದಾಾರೆ. 
ಪ್ರತಿ ಶುಕ್ರವಾರ ಕೊನೆಯಲ್ಲಿ ಒಂದೂವರೆ ಗಂಟೆ ಪಠ್ಯೇತರ ಚಟುವಟಿಕೆ ತಪ್ಪದೆ ನಡೆಯುತ್ತದೆ. ಮಕ್ಕಳಿಗೆ ವಿವಿಧ ಚಟುವಟಿಕೆ ಕಲಿಸಲಾಗುತ್ತದೆ. ಸ್ಪರ್ಧೆ  . ಕೊನೆಯಲ್ಲಿ ಶಾರದಾ ಪೂಜೆ ನಡೆಯುತ್ತದೆ. 
ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂಬ ಕೂಗೆದ್ದಿರುವ ಇಂದಿನ ದಿನಗಳಲ್ಲಿ, ದಾನಿಗಳ ಜೊತೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆೆಗಳ ಜೊತೆ  ಸೃಜನಶೀಲ ಶಿಕ್ಷಕರೂ ಸಹ ಪ್ರಮುಖ ಪಾತ್ರ ವಹಿಸುತ್ತಾಾರೆ. ತಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಾಗಿ ಮಾಡಬೇಕೆಂಬ ಇಚ್ಛೆೆಯುಳ್ಳ ಇತರ ಸರ್ಕಾರಿ ಶಾಲೆಯವರು ಒಮ್ಮೆೆ ಹಳ್ಳಿಿಕೇರಿ ಶಾಲೆಗೆ ಹೋಗಿಬರಬೇಕಿದೆ. 



 ವಿದ್ಯೆೆ ಸಾಧಕನ ಸ್ವತ್ತು. ಯಾರು ಕಷ್ಟಪಟ್ಟು ಕಲಿಯುತ್ತಾಾರೋ ಅವರು ಸಾಧಕರಾಗುತ್ತಾಾರೆ. ಈ ಕಲಿಕೆಯ ಹಂತದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಬಡಮಕ್ಕಳಿಗೂ ಕೊರತೆ ಇಲ್ಲದಂತೆ ವಿದ್ಯೆೆಯ ಸಕಲ ಸವಲತ್ತನ್ನು ಒದಗಿಸಿದರೆ ಅವರೂ ಸಹ ವಿದ್ಯಾಾವಂತರಾಗಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುತ್ತಾಾರೆ. ಶಿಕ್ಷಕ ವೃತ್ತಿಿ ಅತ್ಯಂತ ಪವಿತ್ರವಾದುದು. ಶಿಕ್ಷಕ ನಿವೃತ್ತನಾದರೂ ಅವನಿಂದ ಕಲಿತ ವಿದ್ಯಾಾರ್ಥಿಗಳು ಸದಾ ಸ್ಮರಿಸುತ್ತಾಾರೆ. ಇದರಂತಹ ಪವಿತ್ರ ವೃತ್ತಿಿ ಇನ್ನೊೊಂದಿಲ್ಲ, ಶಿಕ್ಷಕನಾದವ ಸಕ್ರಿಿಯನಾಗಿದ್ದು, ಸೃಜನಶೀಲತೆಯನ್ನು ಬೆಳೆಸಿಕೊಂಡರೆ ಎಲ್ಲಾಾ ಶಾಲೆಗಳು ಮಾದರಿಯಾಗಬಲ್ಲವು ಎಂದು ನುಡಿಯುತ್ತಾಾರೆ
 -ಮುಖ್ಯಾಾಧ್ಯಾಾಪಕ ಕೂಬಾ ನಾಯ್‌ಕ್‌. 
published on 27th june
................................


Wednesday, 12 June 2019

ಪ್ರತಿಷ್ಠೆೆ, ಹಠ, ದ್ವೇಷ, ಜಿದ್ದು 
  ನಾಳೆ ಸರ್ಕಾರಿ ನೌಕರರ ಸಂಘದ ಚುನಾವಣೆ





 ಇದು ಸರ್ಕಾರಿ ನೌಕರರ ಸಂಘದ ಚುನಾವಣೆ ಎಂಬ ಅರಿವು ಮತದಾರರಾದ ಸದಸ್ಯರಿಗಿರಬೇಕು. ರಾಜಕೀಯ ಚುನಾವಣೆಯಂತಾಗಬಾರದು. ಆಸೆ, ಆಮಿಷಕ್ಕೆೆ ಬಲಿಯಾಗಿ ಆಯ್ಕೆೆ ಮಾಡಿದರೆ ಗೆದ್ದ ಅಭ್ಯರ್ಥಿಯು ತಪ್ಪು ಮಾಡಿದಾಗ ತಿದ್ದಿ ಬುದ್ಧಿಿ ಹೇಳುವ ನೈತಿಕತೆ, ಧೈರ್ಯ ಸದಸ್ಯರಿಗೆ ಇರುವುದಿಲ್ಲ. ಇದನ್ನು ವಿದ್ಯಾಾವಂತ, ಬುದ್ಧಿಿವಂತರಾದ ಸರ್ಕಾರಿ ನೌಕರ ಮತದಾರರು ಅರ್ಥೈಸಿಕೊಳ್ಳಬೇಕಿದೆ. ಸಂಘದ ಪ್ರತಿಷ್ಠೆೆಗಿಂತ ದ್ವೇಷ, ಹಠ, ಜಿದ್ದು ಪ್ರಧಾನವಾಗಿ ಕಂಡುಬರುತ್ತಿಿದೆ. ಈಗ ನಡೆಯುತ್ತಿಿರುವ ಚುನಾವಣೆಯಲ್ಲಿ ಸ್ಪರ್ಧಾಳುಗಳು ಒಡ್ಡುತ್ತಿಿರುವ ಆಮಿಷ, ಮೋಜು ಮಸ್ತಿಿಯ ಗೀಳಿಗೆ ಬಲಿಯಾಗದಂತೆ ಸಮರ್ಥರನ್ನು ಆಯ್ಕೆೆ ಮಾಡುವುದು ಸದಸ್ಯರ ಮುಂದಿರುವ ಗುರಿಯಾಗಿದೆ. 



ಜಿಲ್ಲೆೆಯಲ್ಲೀಗ ಸರ್ಕಾರಿ ನೌಕರರ ಸಂಘದ ಚುನಾವಣೆಯ ಜ್ವರ.  ಭಾರೀ ಪೈಪೋಟಿಯೂ ಇದರಲ್ಲಿದೆ. ಹಾಲಿ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ಮಾಜಿ  ಅಧ್ಯಕ್ಷ ರಘುರಾಮ ದೇವಾಡಿಗ ಅವರ ಎರಡು ಬಣಗಳು ಇಲ್ಲಿ ಕಾದಾಟಕ್ಕಿಿಳಿದಿವೆ. ಅದರಲ್ಲೂ ವಿಶೇಷವಾಗಿ, 22 ಸ್ಥಾಾನಗಳು ಅವಿರೋಧವಾಗಿದ್ದು, ಇವರಲ್ಲಿ ತಮ್ಮವರೇ ಜಾಸ್ತಿಿ ಎಂದು ಇಬ್ಬರೂ ಹೇಳಿಕೊಳ್ಳುತ್ತಿಿದ್ದಾಾರೆ. ಬಲಾಬಲ ಪ್ರದರ್ಶನದವರೆಗೂ ಇದು ತಲುಪಿದೆ.
   ಜೂನ್ 13ರಂದು ಮತದಾನ ಮತ್ತು ಸಂಜೆ ಫಲಿತಾಂಶ ಪ್ರಕಟಣೆ ನಡೆಯಲಿದೆ. ಒಟ್ಟೂ  68 ಸ್ಥಾಾನಗಳ ಪೈಕಿ  6 ಸ್ಥಾಾನಗಳು ತಾಲೂಕು ಅಧ್ಯಕ್ಷರದ್ದಾಾಗಿವೆ. ಉಳಿದ 62ರಲ್ಲಿ 22 ಅವಿರೋಧವಾಗಿದೆ. ಉಳಿದ 40 ಸ್ಥಾಾನಕ್ಕೆೆ (27 ಇಲಾಖೆಯಿಂದ) ಚುನಾವಣೆ ನಡೆಯಲಿದೆ. ಸುಮಾರು 110ರಷ್ಟು ಉಮೇದುವಾರರು ಕಣದಲ್ಲಿದ್ದಾಾರೆ. ಅತಿ ಹೆಚ್ಚು ಸ್ಪರ್ಧಿಗಳು ಮತ್ತು ಮತದಾರರಿರುವುದು ಶಿಕ್ಷಕರ ಕ್ಷೇತ್ರದಲ್ಲಿ.   
ಆದರೆ ಈ ಚುನಾವಣೆ ಈಗ ತುರುಸಿಗೊಳಗಾಗಿದೆ. ಇಲ್ಲಿ ಜಾತಿ ಮತ್ತು ಹಣದ ಬಲ ಸದ್ದುಮಾಡುತ್ತಿಿರುವ ಬಗ್ಗೆೆ ಮಾತು ಕೇಳಿಬರತೊಡಗಿದೆ. ಗುಂಪುಗಾರಿಕೆಯಂತೂ ಮಿತಿಮೀರಿದೆ. ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪವೂ ಇದೆ. ಹಿರಿಯರು ಯಾವ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಈ ಸಂಘ ಸ್ಥಾಾಪನೆ ಮಾಡಿದ್ದರೋ ಆ ಸಿದ್ಧಾಾಂತಗಳೆಲ್ಲ ಹೆಚ್ಚು- ಕಡಿಮೆ ಮೂಲೆಗುಂಪಾಗಿ ರಾಜಕೀಯವೇ ಇಲ್ಲಿ ಮೆರೆಯುತ್ತಿಿದೆ.
ಸಂಘದ ಪ್ರತಿಷ್ಠೆೆಗಿಂತ ದ್ವೇಷ, ಹಠ, ಜಿದ್ದು ಪ್ರಧಾನವಾಗಿ ಕಂಡುಬರುತ್ತಿಿದೆ. ಈಗ ನಡೆಯುತ್ತಿಿರುವ ಚುನಾವಣೆಯಲ್ಲಿ ಸ್ಪರ್ಧಾಳುಗಳು ಒಡ್ಡುತ್ತಿಿರುವ ಆಮಿಷ, ಮೋಜು ಮಸ್ತಿಿಯ ಗೀಳಿಗೆ ಬಲಿಯಾಗದಂತೆ ಸಮರ್ಥರನ್ನು ಆಯ್ಕೆೆ ಮಾಡುವುದು ಸದಸ್ಯರ ಮುಂದಿರುವ ಗುರಿಯಾಗಿದೆ. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಿಗಳನ್ನು ಆಯ್ಕೆೆ ಮಾಡದೆ ಸಂಘವನ್ನು ಬಲಿಷ್ಠವಾಗಿ ಕಟ್ಟುವ ಜವಾಬ್ದಾಾರಿ ಅವರದ್ದಾಾಗಬೇಕು. ಸ್ಪರ್ಧಿಗಳು ಧಾರಾಳವಾಗಿ ಖರ್ಚು ಮಾಡುವುದನ್ನು ನೋಡಿದರೆ ಇಷ್ಟೊೊಂದು ಹಣ ಹೇಗೆ ಬಂತು? ಅದನ್ನು ಮುಂದೆ ಹೇಗೆ ಸಂಪಾದಿಸುತ್ತಾಾರೆ ಎಂಬುದೇ ಒಂದು ಯಕ್ಷಪ್ರಶ್ನೆೆಯಾಗಿ ಕಾಡುತ್ತಿಿದೆ.
ಎಲ್ಲಾಾ ಅಭ್ಯರ್ಥಿಗಳ ಹಿನ್ನೆೆಲೆ, ಇಲ್ಲಿಯವರೆಗಿನ ಸಂಘಟನಾ ಕಾರ್ಯಚಟುವಟಿಕೆಗಳಲ್ಲಿ ಅವರ ಸಕ್ರಿಿಯ ಪಾಲ್ಗೊೊಳ್ಳುವಿಕೆ, ಪ್ರಾಾಮಾಣಿಕತೆ, ಕರ್ತವ್ಯ ನಿಷ್ಠೆೆ, ಸಮಾಜಮುಖಿ ಕಾಳಜಿ, ಸಂಘಟನಾ ಚಟುವಟಿಕೆಗಳಲ್ಲಿ ಅವರ ಪಾತ್ರ ಇವೆಲ್ಲವನ್ನೂ ಗಮನಿಸಿ ಮತದಾರರು ಆಯ್ಕೆೆಮಾಡಬೇಕಿದೆ. ಹೀಗಾದಲ್ಲಿ ಮಾತ್ರ ಸಂಘಕ್ಕೆೆ ಉತ್ತಮ ನಿರ್ದೇಶಕರು ಸಿಗಬಹುದು. ಜೊತೆಗೆ ಆರ್ಥಿಕ ಸಹಕಾರ, ಸಿಬ್ಬಂದಿಗಳ ನಡುವಿನ ಸಾಮರಸ್ಯ ಬೆಳೆಸುವಲ್ಲಿ ಅವರು ಕೊಡುಗೆ ನೀಡಬಹುದು. ಸಿಬ್ಬಂದಿಗಳ ಸಮಸ್ಯೆೆಗಳನ್ನು ಬಗೆಹರಿಸುವಲ್ಲಿ ಅವರ ಸಾಮರ್ಥ್ಯ, ತಮ್ಮ ಕೇಡರನ್ನೂ ಮೀರಿ ನಿಲ್ಲಬಲ್ಲ ಹೃದಯ ವೈಶಾಲ್ಯತೆ, ದೃಷ್ಟಿಿಕೋನ , ದಿಢೀರ್ ಎದುರಾಗುವ ಸೂಕ್ಷ್ಮ ಘಟನೆಯನ್ನು ಸಮರ್ಥವಾಗಿ ನಿಭಾಯಿಸುವ ಎದೆಗಾರಿಕೆಯನ್ನೂ ಇಲ್ಲಿ ಗಮನಿಸಿ ಗೆಲ್ಲಿಸಬೇಕಿದೆ.
ಹೊಸದಾಗಿ ಕಣಕ್ಕಿಿಳಿದಿರುವವರಲ್ಲಿ ಇರುವ ಕೆಲಸದ ಸಾಮರ್ಥ್ಯ, ಅವರ ಒಳ್ಳೆೆಯತನ, ಸಂಘವನ್ನು ಬೆಳೆಸಬಲ್ಲ ಶಕ್ತಿಿ, ಸಂಘಟನಾ ಚಾತುರ‌್ಯ ಗಮನಿಸಿ ಮತದಾರರು ಆಯ್ಕೆೆಮಾಡಬೇಕು. ಈ ಹಿಂದಿನವರೇ ಮತ್ತೆೆ ಅಭ್ಯರ್ಥಿಯಾಗಿದ್ದಲ್ಲಿ  ಹಿಂದೆ ಗೆದ್ದಾಾಗ ಏನು ಮಾಡಿದ್ದಾಾರೆ, ಮುಂದೆ ಗೆದ್ದು ಏನು ಮಾಡಲಿದ್ದಾಾರೆ, ಆಯ್ಕೆೆಯಾಗುವವರು ಸಂಘಕ್ಕೆೆ ಹೆಚ್ಚಿಿನದೇನನ್ನು ಮಾಡಬಲ್ಲರು ಎನ್ನುವುದನ್ನೂ ಗಮನಿಸಿ ಆಯ್ಕೆೆಮಾಡುವುದು ಉತ್ತಮ.
 ನಡವಳಿಕೆ, ಸಾಮರ್ಥ್ಯ ಮತ್ತು ಅರ್ಹತೆ ಒಬ್ಬ ಪ್ರತಿನಿಧಿ ಆಗುವವನಲ್ಲಿ ಮುಖ್ಯವಾಗಿರಬೇಕು. ಇವುಗಳನ್ನೆೆಲ್ಲಾಾ ಕೂಲಂಕಷವಾಗಿ ಗಮನಿಸಿ ಸೂಜಿದಾರದಂತೆ ಕೆಲಸ ಮಾಡುವವರನ್ನು ಬೆಂಬಲಿಸಿ, ಕತ್ತರಿ ಕೆಲಸ ಮಾಡುವವರನ್ನು ದೂರವಿಟ್ಟು ಎಲ್ಲಾಾ ಇಲಾಖೆಯವರು ಸಮರ್ಥರನ್ನಷ್ಟೇ ಆಯ್ಕೆೆ ಮಾಡಿದರೆ ಮಾತ್ರ ಸಂಘ ಇನ್ನಷ್ಟು ಪ್ರವರ್ಧಮಾನಕ್ಕೆೆ ಬರಲು ಸಾಧ್ಯ. ಹುದ್ದೆೆ, ವೃಂದ, ಸಂಸ್ಥೆೆ, ಜಾತಿ, ಧರ್ಮವನ್ನು ಮೀರಿದ ವಿಶಾಲ ಮನೋಭಾವ ಮತ್ತು ಪ್ರಬುದ್ಧತೆ ಮೀರಿ ನೌಕರರು ಮತ ಚಲಾಯಿಸುವ ಕೆಲಸವನ್ನು ಮೊದಲು ಮಾಡಬೇಕಿದೆ. ಸಂಘಕ್ಕೆೆ ಸಮರ್ಥ ವ್ಯಕ್ತಿಿಗಳನ್ನು ಚುನಾಯಿಸಿದರೆ ಮಾತ್ರ  ಸಂಘದ ಪ್ರತಿಷ್ಠೆೆಯೂ ಹೆಚ್ಚಲಿದೆ.

published on 12.6.19
.................................................
ಜ್ಞಾಾನ ಪ್ರಸಾರದಲ್ಲಿ ಶಿಕ್ಷಕರೆಷ್ಟು ಅಪ್‌ಡೇಟ್ ಆಗಿದ್ದಾಾರೆ?

ಎಲ್ಲಾಾ ಕ್ಷೇತ್ರಗಳೂ ಇಂದು ಅಪ್‌ಡೇಟ್ ಆಗುತ್ತಿಿವೆ. ಆದರೆ ಶಿಕ್ಷಕರು ಮಾತ್ರ ಈ ವಿಷಯದಲ್ಲಿ ಹಿಂದುಳಿದಿರುವುದು ಏಕೆ ಎಂಬ ಪ್ರಶ್ನೆೆ ಇದೆ. ನಿಜಕ್ಕೂ ಎಲ್ಲರಿಗಿಂತ ಮೊದಲೇ ಶಿಕ್ಷಕರು ಅಪ್‌ಡೇಟ್ ಆಗಬೇಕಿತ್ತು. ಈಗ ಇದರ ಅನಿವಾರ‌್ಯತೆ ಎದುರಾಗಿದೆ. ಸರ್ಕಾರವು ಈ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಲ್ಲಿ ಸ್ವಲ್ಪ ಕಠೋರವೆನಿಸುವ ನಿರ್ಧಾರ ಅಂದರೆ ಬಡ್ತಿಿಗೆ ತಡೆ, ವೇತನ ಕಟ್ ಮೊದಲಾದ ಕ್ರಮ ಜರುಗಿಸಬೇಕಿತ್ತು. ವಿದ್ಯಾಾರ್ಥಿಗಳ ಒಳ್ಳೆೆಯದಕ್ಕಾಾಗಿ ಶಿಕ್ಷಕರು ಗುಣಾತ್ಮಕವಾಗಿ ಪಾಠ ಮಾಡುವುದನ್ನು ಕಲಿಯಲೇಬೇಕಿದೆ. 





‘ಹಳೆಯ ಕೋಟು ತೊಡು, ಹೊಸ ಪುಸ್ತಕ ಓದು’ ಎನ್ನುವುದು ಜ್ಞಾಾನದ ಮಹತ್ತನ್ನು ಸಾರುವ ಒಂದು ನುಡಿಗಟ್ಟು. ಹೌದು, ನಾವು ತೊಡುವ ಬಟ್ಟೆೆ ಹಳೆಯದಾದರೂ ಪರವಾಗಿಲ್ಲ, ಸದಾ ಹೊಸಹೊಸ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು, ತನ್ಮೂಲಕ ನಮ್ಮ ಜ್ಞಾಾನವನ್ನು ಹೆಚ್ಚಿಿಸಿಕೊಳ್ಳಬೇಕು ಎನ್ನುವುದು ಈ ಮಾತಿನ ಅರ್ಥ. ‘ದೇಶ ಸುತ್ತು, ಕೋಶ ಓದು’ ಇದೇ ಅರ್ಥವನ್ನು ಧ್ವನಿಸುವ ಮತ್ತೊೊಂದು ನುಡಿಗಟ್ಟು. ಜ್ಞಾಾನವೆಂದರೆ ನಿಂತ ನೀರಲ್ಲ. ನಿತ್ಯನಿರಂತರವಾಗಿ ಹರಿಯುತ್ತಿಿರಬೇಕಾದಂತಹುದು. ನಿಂತ ನೀರು ರಾಡಿಯಾಗುತ್ತದೆ; ಬಗ್ಗಡವಾಗುತ್ತದೆ; ಕ್ರಿಿಮಿಕೀಟಗಳು ಹುಟ್ಟಿಿಕೊಳ್ಳುತ್ತವೆ; ರೋಗರುಜಿನಗಳ ಆಗರವಾಗುತ್ತದೆ. ಹರಿಯುತ್ತಿಿರುವ ನೀರು ಹಾಗಲ್ಲ. ಹಳೆ ನೀರು ಕೊಚ್ಚಿಿ ಹೋಗುತ್ತದೆ; ಹೊಸ ನೀರು ಹರಿದು ಬರುತ್ತದೆ. ಜ್ಞಾಾನದ ಗುಣವೂ ಇದುವೇ. 
  ಜಗತ್ತಿಿನಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳಲು, ಹೇಗೆ ಬದುಕಬೇಕು ಎಂದು ತಿಳಿದುಕೊಳ್ಳಲು ಜ್ಞಾಾನ ಬೇಕು. ಜ್ಞಾಾನ ಎಂಬುದು ಸಮುದ್ರವಿದ್ದಂತೆ. ಶಿಕ್ಷಣ ಎಂಬ ಸಮುದ್ರದಲ್ಲಿ ಜ್ಞಾಾನವೆನ್ನುವುದು ಒಂದು ಅರಿವಿನ ದಾರಿ. ದುರದೃಷ್ಟವಶಾತ್, ಇಂದು ಜ್ಞಾಾನ ಎನ್ನುವುದು ಕಳೆದುಹೋಗಿದೆ. ಇದಕ್ಕೆೆ ಯಾರೊಬ್ಬರೇ ಕಾರಣರಲ್ಲ, ನಮ್ಮನ್ನಾಾಳುವ ಸರ್ಕಾರ, ಕಲಿಸುವ ಶಿಕ್ಷಕರು, ಪಾಲಕರು ಎಲ್ಲರೂ ಕಾರಣ.
ಮಗುವಿನ ಜ್ಞಾಾನ ಹೆಚ್ಚಿಿಸುವ ಕೌಶಲ್ಯ ಇಂದಿನ ಪಠ್ಯದಲ್ಲಿರುವುದಿಲ್ಲ. ಸರ್ಕಾರಗಳು ಬದಲಾದ ಹಾಗೆ  ಶಿಕ್ಷಣ ನೀತಿಯೂ, ಪಠ್ಯಪುಸ್ತಕ ರಚನೆಯೂ ಬದಲಾಗುತ್ತಿಿದೆ. ಮಕ್ಕಳ ವಯಸ್ಸನ್ನು ಗಮನಿಸಿ, ಅವರಿಗೆ ಗ್ರಹಿಸಲು ಅನುಕೂಲವಾಗುವ ಪಠ್ಯವನ್ನು ಜಾರಿಗೊಳಿಸಬೇಕು. ಆದರೆ ಹಾಗಾಗುತ್ತಿಿಲ್ಲ. ಮಕ್ಕಳ ಸ್ಕೂಲ್ ಬ್ಯಾಾಗ್ ಭಾರವನ್ನು ಇಳಿಸಲು ಹೊರಟಿರುವ ಸರಕಾರ, ಅದೇ ಮಕ್ಕಳಿಗೆ ಹೋಮ್ ವರ್ಕ್ ಕೊಡಬೇಡಿ ಎಂಬ ಸೂಚನೆಯನ್ನೂ ಶಾಲೆಗಳಿಗೆ ನೀಡಲು ಮುಂದಾಗಿದೆ. ಹಾಗಾದರೆ ಮಕ್ಕಳು ಮನೆಯಲ್ಲಿ ಆಟವಾಡಬೇಕೇ, ಶಾಲೆಯಲ್ಲಿ ಮಾತ್ರ ಓದಿದರೆ ಸಾಕೇ ಎಂಬ ಪ್ರಶ್ನೆೆಗೆ ಉತ್ತರವಿಲ್ಲ. ಮಕ್ಕಳಿಗೆ ಕಲಿಯಲು, ಶಿಕ್ಷಕರಿಗೆ ಕಲಿಸಲು ಮತ್ತು ವಿದ್ಯಾಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಉಪಯುಕ್ತವೆನಿಸುವ ಯೋಜನೆಗಳನ್ನು ಮೊದಲು ಜಾರಿಗೊಳಿಸಬೇಕಿದೆ. ಇನ್ನು ಪಠ್ಯದಲ್ಲಿ ಬಹುಕಾಲ ಮೆದುಳಿನಲ್ಲಿ ನಿಲ್ಲುವ, ಜೀವನಕ್ಕೆೆ ಉಪಯುಕ್ತವಾಗುವ ಸಂಗತಿಗಳನ್ನು ಪಠ್ಯದಲ್ಲಿ ತರುವ ಕೆಲಸವಾಗಬೇಕು.
 ಇಂದು ಏನಿದ್ದರೂ ಅಂಕಗಳನ್ನು ಬೇಟೆಯಾಡುವ ಕಾಲ. ಜ್ಞಾಾನದ ಮಹತ್ವಕ್ಕೆೆ ಬೆಲೆಯೇ ಇಲ್ಲ. ಮಗು ಹೆಚ್ಚೆೆಚ್ಚು ಅಂಕಗಳಿಸಬೇಕೆನ್ನುವುದಷ್ಟೇ ಪಾಲಕರ ಉದ್ದೇಶ. ಇದಕ್ಕಾಾಗಿ ಪಾಲಕರು ಎಷ್ಟು ಬೇಕಾದರೂ ಖರ್ಚು ಮಾಡುವ ಸ್ಥಿಿತಿಗೆ ತಲುಪಿದ್ದಾಾರೆ. ಮಗುವಿಗೆ ಒತ್ತಡ ಹೇರಿ, ಬಾಯಿಪಾಠ ಮಾಡಿಸಿಯಾದರೂ ಹೆಚ್ಚು ಅಂಕ ಬರುವಂತೆ ನೋಡಿಕೊಳ್ಳುತ್ತಾಾರೆಯೇ ವಿನಾ ಮಗುವಿನ ಗ್ರಹಿಕೆಯ ಮತ್ತು ಕಲಿಕೆಯ ಸಾಮರ್ಥ್ಯವನ್ನು ಗಮನಿಸುತ್ತಿಿಲ್ಲ. ಅರ್ಥ ಮಾಡಿಕೊಳ್ಳದೆ  ಕೇವಲ ಬಾಯಿಪಾಠ ಮಾಡಿ ಕಲಿತರೆ ಅದು ಬಹುಕಾಲ ನೆನಪಿನಲ್ಲಿ ಉಳಿಯುವುದಿಲ್ಲ. ಮಕ್ಕಳಲ್ಲಿ ಓದಿನ ವಿಧಾನವನ್ನು ಬೆಳೆಸುವ, ದಿನನಿತ್ಯದ ಪಾಠವನ್ನು ಅಂದೇ ಮರುಅಧ್ಯಯನ ಮಾಡುವ ಕ್ರಮಕ್ಕೆೆ ಒತ್ತು ಕೊಡಬೇಕು. ಆಗ ಮಾತ್ರ ಜ್ಞಾಾನದ ಮಟ್ಟ ಹೆಚ್ಚಲು ಸಾಧ್ಯ. 
ಎಲ್ಲಕ್ಕಿಿಂತ ಹೆಚ್ಚಿಿನ ಹೊಣೆ ಮಕ್ಕಳನ್ನು ತಿದ್ದಿ-ತೀಡಿ ಅವರ ಭವಿಷ್ಯವನ್ನು ರೂಪಿಬೇಕಾದ ಶಿಕ್ಷಕರ ಹೆಗಲ ಮೇಲಿದೆ. ಆದರೆ ಶಿಕ್ಷಕರ ವಿಷಯದಲ್ಲಿ ಮೂಗುಮುರಿಯುವವರೇ ಜಾಸ್ತಿಿ. ಏಕೆಂದರೆ, ಬಹುತೇಕ ಶಿಕ್ಷಕರು ಅಪ್‌ಡೇಟ್ ಆಗದೇ ಇರುವುದು. ಇಂದು ಪ್ರತಿಕ್ಷೇತ್ರದಲ್ಲೂ ಹೊಸತನಕ್ಕೆೆ ಆದ್ಯತೆ. ಕೇಶವಿನ್ಯಾಾಸ, ಆಭರಣ, ಬಟ್ಟೆೆ,  ಕೃಷಿ, ವಿಜ್ಞಾಾನ ಯಾವುದೇ ಕ್ಷೇತ್ರ ತೆಗೆದುಕೊಳ್ಳಿಿ-ಹೊಸತನಕ್ಕೆೆ ನಮ್ಮನ್ನು ತೆರೆದುಕೊಳ್ಳದಿದ್ದರೆ ಅಂತಹವರಿಗೆ ಉಳಿಗಾಲವಿಲ್ಲ. ಅದನ್ನು ಸಂಬಂಧಿತರು ಎಷ್ಟೇ ಕಷ್ಟವಾದರೂ ಅಳವಡಿಸಿಕೊಳ್ಳಲೇಬೇಕಿದೆ. ಏಕೆಂದರೆ, ಇದು ತಂತ್ರಜ್ಞಾಾನದ, ಬದಲಾವಣೆಯ ಯುಗ.
ಆದರೆ ಶಿಕ್ಷಕರ ವಿಷಯದಲ್ಲಿ ಹೊಸತನಕ್ಕೆೆ ಅಂಟಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ ಎನಿಸುತ್ತಿಿದೆ. ಹಾಗೆಂದು ಎಲ್ಲಾಾ ಶಿಕ್ಷಕರು ಅಪ್‌ಡೇಟ್ ಆಗಿಲ್ಲ ಎಂದರ್ಥವಲ್ಲ. ಶಿಕ್ಷಕರು ಓದುವುದಿಲ್ಲ, ಬೋಧನೆಯ ಹೊಸವಿಧಾನಗಳನ್ನು ಕಲಿಯುವ ಬಗ್ಗೆೆ ಮನಸ್ಸು ಮಾಡುತ್ತಿಿಲ್ಲ. ಪಾಠವನ್ನು ತರಗತಿಯಲ್ಲಿ ಮಾಡುತ್ತಾಾರೆಯೇ ವಿನಾ ಅದಕ್ಕೆೆ ಬೇಕಾದ ಪೂರ್ವತಯಾರಿ ಇರುವುದಿಲ್ಲ. ಎಷ್ಟೋೋ ಶಿಕ್ಷಕರಿಗೆ ಕಂಪ್ಯೂಟರ್ ಆನ್ ಮಾಡಲು ಬರುವುದಿಲ್ಲ, ಇಂಟರ್‌ನೆಟ್, ಇ-ಮೇಲ್, ಗೂಗಲ್ ಬಳಕೆ ಬಗ್ಗೆೆ ಗೊತ್ತಿಿಲ್ಲ. ದಿನಪತ್ರಿಿಕೆಯನ್ನೇ ಓದದ ಶಿಕ್ಷಕರೂ ಸಾಕಷ್ಟಿಿದ್ದಾಾರೆ. ಹೊರಜಗತ್ತಿಿನ ಮಾಹಿತಿಯೇ ಇಲ್ಲದ ಮೇಲೆ ಇಂತಹ ಶಿಕ್ಷಕರಿಂದ ಪರಿಣಾಮಕಾರಿಯಾಗಿ ಕಲಿಸಲು ಎಷ್ಟರ ಮಟ್ಟಿಿಗೆ ಸಾಧ್ಯ?
ಎಲ್ಲಾಾ ಕ್ಷೇತ್ರಗಳೂ ಇಂದು ಅಪ್‌ಡೇಟ್ ಆಗುತ್ತಿಿವೆ. ಆದರೆ ಶಿಕ್ಷಕರು ಮಾತ್ರ ಈ ವಿಷಯದಲ್ಲಿ ಹಿಂದುಳಿದಿರುವುದು ಏಕೆ ಎಂಬ ಪ್ರಶ್ನೆೆ ಇದೆ. ನಿಜಕ್ಕೂ ಎಲ್ಲರಿಗಿಂತ ಮೊದಲೇ ಶಿಕ್ಷಕರು ಅಪ್‌ಡೇಟ್ ಆಗಬೇಕಿತ್ತು. ಈಗ ಇದರ ಅನಿವಾರ‌್ಯತೆ ಎದುರಾಗಿದೆ. ಸರ್ಕಾರವು ಈ ವಿಚಾರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಲ್ಲಿ ಸ್ವಲ್ಪ ಕಠೋರವೆನಿಸುವ ನಿರ್ಧಾರ ಅಂದರೆ ಬಡ್ತಿಿಗೆ ತಡೆ, ವೇತನ ಕಟ್ ಮೊದಲಾದ ಕ್ರಮ ಜರುಗಿಸಬೇಕಿತ್ತು. ವಿದ್ಯಾಾರ್ಥಿಗಳ ಒಳ್ಳೆೆಯದಕ್ಕಾಾಗಿ ಶಿಕ್ಷಕರು ಗುಣಾತ್ಮಕವಾಗಿ ಪಾಠ ಮಾಡುವುದನ್ನು ಕಲಿಯಲೇಬೇಕಿದೆ.
ಶಿಕ್ಷಕರಾಗಿ ನೇಮಕವಾದ ನಂತರ ಅವರು ವರ್ಷಕ್ಕೊೊಮ್ಮೆೆ ಪರೀಕ್ಷೆ ಎದುರಿಸುವ ಕ್ರಮ ಜಾರಿಯಾಗಬೇಕು. ಅವರ ಗುಣಮಟ್ಟ ಹೇಗಿದೆ ಎನ್ನುವ ಪರೀಕ್ಷೆಯಾಗಬೇಕು. ಎಷ್ಟೋೋ ಶಿಕ್ಷಕರು ನೇಮಕವಾದ ನಂತರ ವಿಶ್ರಾಾಂತಿಗೆ ಜಾರಿದವರಂತಾಗುತ್ತಾಾರೆ, ಕ್ರಿಿಯಾಶೀಲತೆ ಇಲ್ಲದವರಾಗುತ್ತಾಾರೆ ಎಂಬ ಆರೋಪವಿದೆ. ಹೊಸ ಹೊಸ ಸವಾಲುಗಳನ್ನು ಅವರ ಮುಂದಿಟ್ಟು, ಅದನ್ನು ಜಾರಿಗೊಳಿಸುವ ಗುರಿ ಕೊಡಬೇಕು. ಇದರಿಂದ ಅವರಲ್ಲೂ ಉತ್ಸಾಾಹ ಮೂಡುತ್ತದೆ. ಅವರಿಂದಲೇ ಸಮಸ್ಯೆೆಗೆ ಪರಿಹಾರ ದೊರೆಯುವಂತೆ ಮಾಡಬೇಕು. ಶಿಕ್ಷಕ ಹುದ್ದೆೆ ನಿಜಕ್ಕೂ ಸಮಾಜ ತನ್ನಿಿಂದ ಏನನ್ನು ಬಯಸುತ್ತದೆಯೋ ಅದನ್ನು ಮೀರಿ ನೀಡುವಂತಹುದು. ಇದನ್ನು ಇಂದಿಗೂ ನಿಭಾಯಿಸುವ ಶಿಕ್ಷಕರಿಲ್ಲವೆಂದಲ್ಲ; ಆದರೆ ಇಲ್ಲದಿರುವವರ ಸಂಖ್ಯೆೆಯೇ ಅಧಿಕ.
ಹೊಸ ಪುಸ್ತಕ ಓದುವ, ಇತರೆ ಮೂಲಗಳಿಂದ ವಿಷಯ ಸಂಗ್ರಹಿಸುವ ಮತ್ತು ಜ್ಞಾಾನವೃದ್ಧಿಿಯ ದಾರಿ ಅನ್ವೇಷಿಸುವ ಮನೋಭಾವ ಶಿಕ್ಷಕರಲ್ಲಿರಬೇಕು. ಇತ್ತೀಚೆಗೆ ನೇಮಕವಾದ ಶಿಕ್ಷಕರಲ್ಲಿ ಈ ರೀತಿಯ ಹುರುಪು ಹೆಚ್ಚಿಿನ ಪ್ರಮಾಣದಲ್ಲಿದೆ. ಎಲ್ಲಿಯವರೆಗೆ ಶಿಕ್ಷಕರಲ್ಲಿ ಹೊಸತನ ಮತ್ತು ಜ್ಞಾಾನದ ಹಸಿವು ಇರುವುದಿಲ್ಲವೋ ಅಲ್ಲಿಯವರೆಗೆ ಅವರೆಷ್ಟೇ ಮಕ್ಕಳಿಗೆ ಕಲಿಸಿದರೂ ಅಂತಹ ಮಕ್ಕಳು ಬುದ್ಧಿಿವಂತರಾಗಲು ಸಾಧ್ಯವಿಲ್ಲ. ಆದ್ದರಿಂದ ಈ ದಿಸೆಯಲ್ಲೂ ಶಿಕ್ಷಕರು ಎಚ್ಚೆೆತ್ತುಕೊಳ್ಳಬೇಕಿದೆ.
ಶಾಲೆಗಳು ಆರಂಭವಾಗಿ ಹತ್ತು ದಿನಗಳಾಗಿದೆ. ಪಾಠಗಳೂ ಆರಂಭವಾಗಿವೆ. ಈ ವರ್ಷದಿಂದಲಾದರೂ ಅಪ್‌ಡೇಟ್ ಆಗಿರುವಂತೆ ಸರ್ಕಾರ ಶಿಕ್ಷಕರಿಗೆ ಸೂಚಿಸಿ, ಹೊಸತನದ ಕಲಿಕೆ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವಂತಾದರೆ ನಿಜಕ್ಕೂ ಹೊಸತನದ ಮಕ್ಕಳೇ ನಿರ್ಮಾಾಣವಾಗುವುದರಲ್ಲಿ ಸಂಶಯವೇ ಇಲ್ಲ.

published on 11.6.19
................................................................ 

Friday, 7 June 2019

ಬನ್ನಿಿ ಮಾವು, ಹಲಸು ಮೇಳಕ್ಕೆೆ








 ಇಂದಿನಿಂದ ಮೂರು ದಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಾವು, ಹಲಸು, ಜೇನು ಮೇಳ ಆಯೋಜನೆಗೊಂಡಿದೆ. ಜಿಲ್ಲೆೆಯ ರೈತರಿಗೆ ಮಾವು, ಹಲಸು, ಜೇನು ಮತ್ತು ಸಾವಯವ ಪದಾರ್ಥಗಳ ವಿವಿಧ ಬಗೆಯ ತಳಿಗಳು ಹಾಗೂ ಉತ್ಪನ್ನಗಳನ್ನು ಪರಿಚಯಿಸಲು ತೋಟಗಾರಿಕೆ ಇಲಾಖೆಯು  ಈ ಮೇಳವನ್ನು ಹಮ್ಮಿಿಕೊಂಡಿದೆ. ವಿವಿಧ ತಳಿಗಳನ್ನು ಪರಿಚಯಿಸುವುದರ ಮೂಲಕ, ಮಾರುಕಟ್ಟೆೆ ಕಲ್ಪಿಿಸುವುದು, ಮತ್ತು ರೈತರಲ್ಲಿ ಈ ಬೆಳೆ ಬೆಳೆಯಲು ಆಸಕ್ತಿಿ ಮೂಡಿಸುವುದು ಮೇಳದ ಮುಖ್ಯ ಉದ್ದೇಶ. 



ಈಗ ಮಾವಿನ ಮತ್ತು ಹಲಸಿನ ಹಣ್ಣಿಿನ ಸೀಜನ್. ಯಾವ ಹಳ್ಳಿಿಗೆ ಕಾಲಿಟ್ಟರೂ ಮಾವು, ಹಲಸಿನ ಸುವಾಸನೆ ಗಮನಸೆಳೆಯುತ್ತದೆ, ಬಾಯಲ್ಲಿ ನೀರೂರಿಸುತ್ತದೆ. ಇನ್ನು ಪೇಟೆಯಲ್ಲಿ ಮಾರುಕಟ್ಟೆೆಯಲ್ಲಂತೂ ಎಲ್ಲರ ಚಿತ್ತ ಹರಿಯುವುದೇ ರಸ್ತೆೆ ಬದಿಯಲ್ಲಿ ಹಾಕಿಕೊಂಡು ಮಾರಾಟ ಮಾಡುವ ಮಾವು ಮತ್ತು ಹಲಸಿನ ಹಣ್ಣಿಿನ ಮೇಲೆ. ಈ ಎರಡೂ ಹಣ್ಣುಗಳು ಒಂದೇ ಋತುಮಾನದಲ್ಲಾಾಗುವ ಮೂಲಕ ಹಣ್ಣುಪ್ರಿಿಯರಿಗೆ, ಅದರಲ್ಲೂ ಬೇಸಿಗೆ ಕಾಲದಲ್ಲಿ ಹೆಚ್ಚು ಇಷ್ಟವಾಗುವಂತಾಗಿದೆ.
ರಾಜ್ಯದ ಹಲವೆಡೆ ಮಾವು ಮತ್ತು ಹಲಸನ್ನು ನೈಸರ್ಗಿಕವಾಗಿ ಹಣ್ಣು ಮಾಡಿ ಮಾರಾಟ ಮಾಡಲಾಗುತ್ತಿಿದೆ. ಏಕೆಂದರೆ, ಮಾರುಕಟ್ಟೆೆಯಲ್ಲಿ ರಾಸಾಯನಿಕ (ಕ್ಯಾಾಲ್ಸಿಿಯಂ ಕಾರ್ಬೈಡ್) ಮೂಲಕ ಹಣ್ಣಾಾಗಿಸಿ ಜನರಿಗೆ ಮಾರಾಟ ಮಾಡಲಾಗುತ್ತಿಿದೆ. ಈ ಹಣ್ಣುಗಳು ವಿಷಕಾರಿ. ಆದರೂ ಜನರು ಗೊತ್ತಿಿದ್ದೋೋ, ಗೊತ್ತಿಿಲ್ಲದೆಯೋ ಖರೀದಿಸಿ ತಿನ್ನುತ್ತಿಿದ್ದಾಾರೆ. ಇವು ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರುವಂತಹವು ಎನ್ನುವುದೂ ಅಷ್ಟೇ ಕಟು ಸತ್ಯ.
ಜನರಿಗೆ ಇಂತಹ ರಾಸಾಯನಿಕ ಹಣ್ಣು ಕೊಡುವುದಕ್ಕಿಿಂತ ನೈಸರ್ಗಿಕವಾದ ಹಣ್ಣನ್ನು ಮಾರಾಟ ಮಾಡಲು ತೋಟಗಾರಿಕಾ ಇಲಾಖೆಯ ಅಂಗ ಸಂಸ್ಥೆೆಯಾದ  ರಾಜ್ಯ ಮಾವು ಅಭಿವೃದ್ಧಿಿ ಮತ್ತು ಮಾರಾಟ ಮಂಡಳಿ ಈ ವರ್ಷವೂ ಮುಂದಾಗಿದೆ. ಮಾವು ಮತ್ತು ಹಲಸಿನ ಮೇಳ ಏರ್ಪಡಿಸುವ ಮೂಲಕ ಜನರ ಬಳಿಯೇ ಹೋಗಿ ಪರಿಶುದ್ಧ ಮಾವು ಕೊಡುತ್ತಿಿದೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ವಿವಿಧ ತಳಿಯ ಮಾವು ಇಲ್ಲಿ ಲಭ್ಯವಿರುತ್ತವೆ.
 ಈಗಾಗಲೇ ರಾಜ್ಯದ ಹಲವೆಡೆ ಈ ಮಂಡಳಿ ಮಾವಿನ ಮೇಳ ನಡೆಸಿ ಯಶಸ್ಸನ್ನು ಕಂಡಿದೆ. ಈಗ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಈ ಮೇಳ ಇಂದಿನಿಂದ ಮೂರು ದಿನ ನಡೆಯಲಿದೆ. ಇಂದು ಸಂಜೆ ಇದು ಉದ್ಘಾಾಟನೆಯಾದ ಬಳಿಕ ಶನಿವಾರ ಮತ್ತು ಭಾನುವಾರದವರೆಗೆ ಮಾರಾಟ ನಡೆಯಲಿದೆ. ಜಿಲ್ಲೆೆಯ ಜನರಿಗೆ ಅತ್ಯುತ್ತಮ ಮಾವಿನ ಹಣ್ಣು, ಹಲಸು ಖರೀದಿಗೆ ಇದು ಸಕಾಲ. ಜಿಲ್ಲೆೆಯ ಮಾವು ಬೆಳೆಗಾರರು ಸ್ಥಳೀಯವಾಗಿ ಬೆಳೆದ ವಿವಿಧ ತಳಿಗಳನ್ನು ಹಾಗೂ ರಾಜ್ಯದಲ್ಲಿ ಮಾವು ಬೆಳೆಯುವ ಇತರ ಪ್ರಮುಖ ಜಿಲ್ಲೆೆಗಳಾದ ರಾಮನಗರ, ಚಿಕ್ಕಬಳ್ಳಾಾಪುರ  ಮತ್ತು ಕೋಲಾರ ಮೊದಲಾದ ಕಡೆಗಳಿಂದ ಸುಮಾರು 18 ರಿಂದ 20 ತಳಿಯ ಮಾವನ್ನು ಇಲ್ಲಿ ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು. ಸ್ಥಳೀಯ ರೈತರು ಬೆಳೆದ ಹಣ್ಣುಗಳನ್ನು ವಿವಿಧ ಮಳಿಗೆಗಳಲ್ಲಿ ಮತ್ತು ಇತರ ಜಿಲ್ಲೆೆಯ ರೈತರ ಹಣ್ಣುಗಳನ್ನು ಸುಮಾರು 15 ಮಳಿಗೆಗಳಲ್ಲಿ ಪ್ರದರ್ಶಿಸಲಾಗುವುದು.
ಜಿಲ್ಲೆೆಯ ರೈತರು ಹೊಸ ತಳಿಗಳನ್ನು ಪರಿಚಯಿಸುವುದರೊಂದಿಗೆ  ಮಾವು ಮೇಳದಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬೆಳೆಯಬಹುದಾದ ವಿವಿಧ ತಳಿಗಳು, ಹೈಬ್ರಿಿಡ್‌ಗಳನ್ನು ಪ್ರದರ್ಶನಕ್ಕಿಿಡಲಾಗುವುದು. ಇವೆಲ್ಲವೂ ರಾಸಾಯನಿಕ ಮುಕ್ತ ಹಣ್ಣುಗಳೆನ್ನುವುದು ವಿಶೇಷ. ಜೊತೆಗೆ ಮಾವು ಬೆಳೆಯನ್ನು ಜಿಲ್ಲೆೆಯಲ್ಲಿಉತ್ತೇಜಿಸುವುದು ಈ ಮೇಳದ ಉದ್ದೇಶವಾಗಿದೆ.
ಜಿಲ್ಲೆೆಯಲ್ಲಿ ಸೊರಬ, ಶಿಕಾರಿಪುರ ತಾಲೂಕಿನಲ್ಲಿ ವಿವಿಧ ತಳಿಯ ಮಾವುಗಳನ್ನು ಬೆಳೆಯಲಾಗುತ್ತಿಿದೆ. ಜಿಲ್ಲೆೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಾಗುವುದು ಇಲ್ಲಿಯೇ. ಈ ಬಾರಿ ಅತಿ ಹೆಚ್ಚು ಮಾವು ರಾಜ್ಯದಲ್ಲಿದೆ. ಮಾರುಕಟ್ಟೆೆಯಲ್ಲೂ ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತಿಿದೆ. ಆದರೆ ನೈಸರ್ಗಿಕ ಹಣ್ಣಿಿನ ರುಚಿಯ ಮುಂದೆ ರಾಸಾಯನಿಕ ಹಣ್ಣಿಿನ ರುಚಿಯೇನೂ ಅಲ್ಲ. ಆದ್ದರಿಂದ ಮೇಳದಲ್ಲಿಯೇ ಖರೀದಿಸಲು ಅವಕಾಶ ಕಲ್ಪಿಿಸಲಾಗಿದೆ.
ಇದರ ಜೊತೆಗೆ ಜಿಲ್ಲೆೆಯಲ್ಲಿ ಬೆಳೆಯುತ್ತಿಿರುವ ವಿವಿಧ ತಳಿಯ ಹಲಸು ಮತ್ತು ಹಲಸಿನ ಉತ್ಪನ್ನಗಳನ್ನು ಸಹ ಮಾರಾಟ ಮತ್ತು ಪ್ರದರ್ಶನಕ್ಕಿಿಡಲಾಗುವುದು. ದೊಡ್ಡಬಳ್ಳಾಾಪುರ ತಾಲೂಕಿನ ತೂಬುಗೆರೆ ಹಲಸು ರೈತರ ಸಂಘವು ವಿವಿಧ ತಳಿಯ ಹಲಸು ಬೆಳೆಯುವುದರಲ್ಲಿ ಎತ್ತಿಿದ ಕೈ. ಇವರು ಚಂದ್ರ ಹಲಸು, ರುದ್ರಾಾಕ್ಷಿ ಹಲಸು ಮೊದಲಾದವನ್ನು ಇಲ್ಲಿಗೆ ತರಲಿದ್ದಾಾರೆ. ಇದರಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳನ್ನೂ ಇಲ್ಲಿ ಪ್ರದರ್ಶಿಸಲಾಗುವುದು. ಜೊತೆಗೆ ಕಸಿ ಮಾಡಿದ ಸಸಿಗಳೂ ಸಹ ಮಾರಾಟಕ್ಕೆೆ ಲಭ್ಯವಿರುತ್ತವೆ. ಜಿಲ್ಲೆೆಯಲ್ಲಿ ಸಾವಯವವಾಗಿ ಬೆಳೆದ ಹಲಸನ್ನೂ, ಅದರ ಉಪ ಉತ್ಪನ್ನವನ್ನೂ ಸಹ ಮಾರಾಟಕ್ಕೆೆ ಇಡಲಾಗುವುದು. 
ಮಲೆನಾಡು ಜಿಲ್ಲೆೆ ಶಿವಮೊಗ್ಗದಲ್ಲಿ ಜೇನುಗಾರಿಕೆಯನ್ನು ಉತ್ತೇಜಿಸಲು ಹೆಚ್ಚು ಅವಕಾಶವಿದೆ. ಈ ಹಿನ್ನೆೆಲೆಯಲ್ಲಿ ರೈತರಲ್ಲಿ ಆಸಕ್ತಿಿ ಮೂಡಿಸಲು ಜೇನುಮೇಳವನ್ನೂ ಸಹ ಇಲ್ಲಿ ಆಯೋಜಿಸಲಾಗಿದೆ. ರೈತರು ಉತ್ಪಾಾದಿಸುತ್ತಿಿರುವ ಜೇನುತುಪ್ಪ, ವಿವಿಧ ಬಗೆಯ ಜೇನು ಉತ್ಪನ್ನವನ್ನೂ ಸಹ 4 ಮಳಿಗೆಗಳಲ್ಲಿ ಮಾರಾಟಕ್ಕಿಿಡಲಾಗುವುದು. ಜೇನು ಕೃಷಿ ಕುರಿತು ತರಬೇತಿ, ಹಲಸಿನ ಖಾದ್ಯ ತಯಾರಿಕೆ ತರಬೇತಿ, ಪ್ರಗತಿಪರರೊಂದಿಗೆ ಸಂವಾದ, ಸಾವಯವ ಕೃಷಿ ಬಗ್ಗೆೆ ಚರ್ಚೆ ಕಾರ‌್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ.
ಒಟ್ಟಿಿನಲ್ಲಿ, ಜಿಲ್ಲೆೆಯ ಜನರಿಗೆ ಬಾಯಲ್ಲಿ ನೀರೂರಿಸುವ ಮಾವು, ಹಲಸು, ಜೇನು ಮೇಳ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ತಪ್ಪದೇ ಮೇಳವನ್ನು ಸಂದರ್ಶಿಸಿ ಖರೀದಿಸುವ ಮೂಲಕ ಮೇಳವನ್ನು ಹಾಗೂ ಬೆಳೆಗಾರರನ್ನು ಪ್ರೋತ್ಸಾಾಹಿಸಬೇಕಿದೆ.
published on 7th june 2019
................................

Wednesday, 5 June 2019

ಎಲ್ಲಿ ಹೋದವು ನಿತ್ಯಹರಿದ್ವರ್ಣದ ಸಹಜ ವನಗಳು 
 ಇಂದು ವಿಶ್ವ ಪರಿಸರ ದಿನ






 ಕಾಡು-ನಾಡಿನ ಕುರಿತು ಬರೆಯುವವರಿಗೆ ಬರವಿಲ್ಲ; ಭಾಷಣ ಬಿಗಿಯುವವರಿಗೆ ಕೊರತೆಯೂ ಇಲ್ಲ. ಈ ಬರಹ ಭಾಷಣಗಳನ್ನು ಬದಿಗಿಟ್ಟು, ಕಾಡನ್ನು ಕುರಿತು ಚಿಂತಿಸಬೇಕಾದ ಸಂಕ್ರಮಣ ಕಾಲವಿದು. ದಿನದಿಂದ ದಿನಕ್ಕೆೆ ಭಾರತದಲ್ಲಿ ಕಾಡುಗಳು ಬರಿದಾಗುತ್ತಿಿವೆ; ಮನುಷ್ಯನ ಸ್ವಾಾರ್ಥಕ್ಕಾಾಗಿ, ಔದ್ಯಮಿಕ ಬೆಳವಣಿಗೆಗಾಗಿ ಕಾಡಿನ ಮಾರಣಹೋಮ ನಡೆಯುತ್ತಿಿದೆ. ಇದು ಹೀಗೆಯೇ ಮುಂದುವರೆದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಚಿತ್ರಗಳ ಮೂಲಕ ಕಾಡನ್ನು ತೋರಿಸುವ, ವಿವರಿಸುವ ಪ್ರಸಂಗ ಬಂದರೆ, ನಾಡಿನ ಪರಿಸ್ಥಿಿತಿ ಉಲ್ಬಣಗೊಂಡರೆ ಅಚ್ಚರಿಯೇನಿಲ್ಲ.  

ನಾಗಾಲೋಟದಿಂದ ಪ್ರಗತಿ ಕಾಣುತ್ತಿಿರುವ ನಮ್ಮ ಪಟ್ಟಣದ ತ್ಯಾಾಜ್ಯಗಳು, ಕಾರ್ಖಾನೆಗಳ ತ್ಯಾಾಜ್ಯಗಳು, ನೆಲದೊಳಗೆ ಸೇರಿ ರಾಡಿಯಾಗುತ್ತಿಿವೆ. ನೆಲ, ಬಂಡೆ, ಮರ-ಗಿಡಗಳನ್ನು ಅಗೆದು, ಬಗೆದು ಬರಿದಾಗಿಸುವ ಭರದಲ್ಲಿ ಭೂಮಿ ಬರಡಾಗುತ್ತಿಿದೆ; ಬರಿದಾಗುತ್ತಿಿದೆ. ಇಂತಹವುಗಳನ್ನು ತಡೆಗಟ್ಟಬೇಕು. ಕ್ಷಮಯಾ ಧರಿತ್ರಿಿಯಾದ ಭೂಮಿ ತನ್ನ ಮೇಲಾಗುತ್ತಿಿರುವ ಶೋಷಣೆಯನ್ನು ವಿರೋಧಿಸಿ ನಿಂತು ಜೀವಜಗತ್ತು ಹಸಿರಿನಿಂದ ನಳನಳಿಸುವಂತೆ ಮಾಡಬೇಕಿದೆ.
 ಪೃಥ್ವಿಿ ಎಂದರೆ ಇಲ್ಲಿ ಬರಿ ಭೂಮಿಯಲ್ಲ; ಇಡಿಯ ಬ್ರಹ್ಮಾಾಂಡ. ಈ ಬ್ರಹ್ಮಾಾಂಡವನ್ನು ದೇವಿ ಸ್ವರೂಪದಲ್ಲಿ ಕಂಡ ಏಕೈಕ ದೇಶ ಭಾರತ. ಜೀವರಾಶಿಗಳನ್ನು ತನ್ನೊೊಳಗಿಟ್ಟುಕೊಂಡು ಭೂಮಿ ಗಾಣದೆತ್ತಿಿನಂತೆ ಸುತ್ತುತ್ತಾಾಳೆ. ಯಾರ ಬಗೆಗೂ ಭೇದ- ಭಾವ ತೋರಿಸದ ಆಕೆ ತನ್ನ ಮೇಲಾಗುತ್ತಿಿರುವ ಅನ್ಯಾಾಯವನ್ನು ನಿರಂತರವಾಗಿ ಸಹಿಸುತ್ತಲೇ ಬಂದಿದ್ದಾಾಳೆ.  ಸಾಲುಮರಗಳಿದ್ದ, ಅರವಟ್ಟಿಿಗೆಗಳಿದ್ದ, ಪ್ರಕೃತಿಸಿರಿಯ ಮಡಿಲಾಗಿದ್ದ ಭೂಮಿ ಈಗ ಬರಡಾಗಿದೆ. 
   ಗಣಿಗಾರಿಕೆಗಾಗಿ, ಕಾರ್ಖಾನೆಗಳಿಗಾಗಿ, ವಿದ್ಯುತ್ ಸ್ಥಾಾವರಗಳಿಗಾಗಿ, ರೈಲು- ವಿಮಾನ ನಿಲ್ದಾಾಣ ಯೋಜನೆಗಳಿಗಾಗಿ ಫಲವತ್ತಾಾದ ಭೂಮಿಯೆಲ್ಲ ಬಳಕೆಯಾಗುತ್ತಿಿದೆ. ನಿರಂತರವಾಗಿ  ತನ್ನನ್ನು ಶೋಷಿಸುತ್ತಿಿರುವ ಜನರನ್ನು ಕಂಡು ಭೂಮಿತಾಯಿ ಬೆರಗಾಗುತ್ತಾಾಳೆ. ಉಬ್ಬಿಿರುವ ಹೆಬ್ಬಂಡೆಗಳೆನ್ನು ಒಡೆದು ಪುಡಿಪುಡಿ ಮಾಡಿದ್ದಾಾರೆ. ಆ ಧೂಳಿನಲ್ಲೇ ಆಕೆ ನಡೆಯುತ್ತಿಿದ್ದಾಾಳೆ. ಆಧುನಿಕತೆಯ ಹೆಸರಿನಲ್ಲಿ ಸೌಲಭ್ಯ, ಸೌಕರ್ಯಗಳ ಅರಸುವಿಕೆಯಲ್ಲಿ ಭೂಮಿತಾಯಿಯ ಗರ್ಭವನ್ನು ಕಲುಷಿತಗೊಳಿಸಲಾಗುತ್ತಿಿದೆ.
ಗೋವಿನ ನೀತಿಪಾಠ ಮಾಡುವ ನಾವು ಮೊದಲು ನೀತಿ ಪಾಲನೆ ಮಾಡಬೇಕು. ಆ ಬಳಿಕ ಇತರರಿಗೆ ಬೋಧನೆ ಮಾಡಬೇಕು. ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ವಾತಾವರಣ ಕಲ್ಪಿಿಸಬೇಕು. ಸಮೃದ್ಧವಾದ ಗಿಡಗಂಟಿಗಳಲ್ಲಿ ಪಕ್ಷಿಸಂಕುಲ ನಿರ್ಭೀತವಾಗಿ ಸಂಗೀತ ಹಾಡಬೇಕು. ಮರಗಳಿಗೆ ಬಳ್ಳಿಿಗಳು ಹಬ್ಬಿಿಕೊಂಡಿರುವುದನ್ನು ಕಂಡು- ದೊಡ್ಡವರ ನೆರಳಿನಲ್ಲಿ ಸಣ್ಣವರ  ಬದುಕು ಅರಳುವಂತಾಗಬೇಕು, ಅದು ಬಿಟ್ಟು ನರಳುವಂತಾಗಬಾರದು.
  ಮುಳ್ಳಿಿನ ಗಿಡದಲ್ಲಿ ಆಕರ್ಷಕವಾದ, ಸುಗಂಧಭರಿತವಾದ ಹೂವುಗಳರಳಿ ನಿಲ್ಲುವಂತೆ ನಮ್ಮ ಬದುಕು, ನಮ್ಮ ಮನಸ್ಸು ಅರಳಬೇಕು;ಹರಿಯುವ ನದಿಗೆ ಬಂಡೆಗಳು ದಾರಿ ಬಿಡುವಂತೆ ಕಾಡಿನಲ್ಲಿರುವ ಅಮಾಯಕ ಪ್ರಾಾಣಿಗಳ ಬದುಕಿಗೆ ಅನುವು ಮಾಡಿಕೊಡಬೇಕು. ಅರಣ್ಯ ನಾಶ ನಿಲ್ಲಬೇಕು, ಕಾಡು ಕಾಡಾಗಿಯೇ ಉಳಿಯಬೇಕು.
 ನಾಡಿನಲ್ಲಿ ನಮ್ಮ ದೊರೆಗಳು ನೆಟ್ಟ ಸಾಲುಮರಗಳು, ಸಹಜವಾಗಿ ಬೆಳೆದ ನಿತ್ಯಹರಿದ್ವರ್ಣದ ವನಗಳು ನಮ್ಮ ಶೋಕಿಗೆ ಬಲಿಯಾಗುತ್ತಿಿವೆ. ಇದರಿಂದಾಗಿ ವಾತಾವರಣದಲ್ಲಿ ಉಷ್ಣಾಾಂಶ ದಿನೇದಿನೇ ಹೆಚ್ಚಳವಾಗುತ್ತಿಿದೆ. ಮಲೆನಾಡಿನಲ್ಲೂ ಬಯಲಸೀಮೆಯ ಬಿಸಿಲು ಪ್ರಖರಿಸತೊಡಗಿದೆ. ಕುಡಿಯುವ ನೀರಿಗೂ ತತ್ವಾಾರ ಎದುರಾಗತೊಡಗಿದೆ. ಪಶ್ಚಿಿಮಘಟ್ಟದ ಶ್ರೇಣಿಯಲ್ಲೇ ಅರಣ್ಯ ನಾಶ ಸತತವಾಗಿ ಮುಂದುವರೆದಿದೆ. ಕಾಡನ್ನು ಉಳಿಸದಿದ್ದರೆ ನಮಗೆ ಸುಖವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿಿದ್ದರೂ ಉಳಿಸುವ ಕೆಲಸಕ್ಕೆೆ ಮುಂದಾಗುವವರ ಸಂಖ್ಯೆೆ ಕಡಿಮೆ. ಎಷ್ಟೇ ಜನಜಾಗೃತಿ, ಆಂದೋಲನ, ಹೋರಾಟ ನಡೆಯುತ್ತಿಿದ್ದರೂ ಅರಣ್ಯದ
ಪ್ರಮಾಣ ಹೆಚ್ಚುತ್ತಿಿಲ್ಲ. ಹಸಿರಿನ ನಾಶ ನಿಂತಿಲ್ಲ. ಇವೆಲ್ಲ ನಮ್ಮ ಮುಂದಿನ ಬಾಳಿಗೆ  ಮಾರಕ ಎನ್ನುವುದರಲ್ಲಿ ಎರಡು ಮಾತಿಲ್ಲ. 
ರತ್ನಗರ್ಭಾ ವಸುಂಧರಾ ಎನ್ನುವ ಮಾತನ್ನು ಪುಷ್ಟೀಕರಿಸುವಂತೆ, ಭೂಮಿತಾಯಿ ಎಂದೂ ಬಡವಳಲ್ಲ ಎಂದೂ ಸಹ ಹೇಳಬಹುದು. ಅವಳ ಗರ್ಭದಲ್ಲಿ ಅತ್ಯಮೂಲ್ಯ ಖನಿಜ ನಿಕ್ಷೇಪವಿದೆ. ಮತ್ತು, ರತ್ನ, ವಜ್ರ, ವೈಢೂರ್ಯಗಳಿವೆ. ಅವುಗಳನ್ನು ಪಡೆಯುವುದಕ್ಕಾಾಗಿ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಕೆಯ ಗರ್ಭವನ್ನು ಸೀಳುತ್ತಿಿದ್ದ್ದಾಾರೆ. ಅದರೂ ಸಹನಾಮಯಿಯಾದ ಆಕೆ ಎಂದೂ ಕೋಪಗೊಂಡಿಲ್ಲ. ಇಂತಹ ಅಮೂಲ್ಯ ವಸ್ತುಗಳನ್ನು ತನ್ನೊೊಡಲಲಲ್ಲಿ ಇಟ್ಟುಕೊಂಡ ಆಕೆ ವಂದನೀಯಳು.
ಈ ನೆಲದ ಮೇಲೆ ಬದುಕುವವರಿಗೆ ಉಪಕಾರ ಸ್ಮರಣೆ ಬೇಕು.  ಅವಳ ಒಡಲನ್ನು ಬರಿದು ಮಾಡಬಾರದೆನ್ನುವ ಪ್ರಜ್ಞೆ ಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಅಗತ್ಯಕ್ಕಷ್ಟೇ ಬಳಸಿಕೊಳ್ಳಬೇಕು ಎಂಬ ಎಚ್ಚರ ಬೇಕು. ನಮ್ಮ ಬಾಳು ಹಸನಾಗಬೇಕೆಂದರೆ, ಜೀವ ಹಸಿರಾಗಬೇಕೆಂದರೆ ನಾವು ನಿಸರ್ಗದ ಆರಾಧಕರಾಗಬೇಕು. ಪ್ರಕೃತಿ ಪ್ರೇಮಿಗಳಾಗಬೇಕು. ಈ ಪ್ರಕೃತಿ ಎನ್ನುವುದು ಮೂಲಬಂಡವಾಳವಿದ್ದಂತೆ. ಮೂಲಬಂಡವಾಳಕ್ಕೆೆ ಕೈಹಾಕದೆ,  ಅದರ ಬಡ್ಡಿಿಯನ್ನಷ್ಟೇ ಬಳಸುವ, ನಮ್ಮ ಹಿರಿಯರು ನಮಗಾಗಿ ಉಳಿಸಿ ಹೋದ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಿ ಹೋಗಬೇಕು ಎಂಬ ಎಚ್ಚರದ ಪ್ರಜ್ಞೆ ನಮ್ಮದಾಗಬೇಕು. ಭೂದೇವಿಯನ್ನು ನೆನಪಿಸಿಕೊಂಡು ಅವಳಿಗೆ ಕೃತಜ್ಞರಾಗಿರಬೇಕಿದೆ.

published on June 5-2019
,,,,,,,,,,,,,,,,,,,,,,,