ಪಕ್ಷನಿಷ್ಠರನ್ನು ಮರೆತರೆ...
ಅತೃಪ್ತ ಶಾಸಕರಿಂದಾಗಿ ಕರ್ನಾಟಕದಲ್ಲಿ ಕಾಂಗ್ರೆೆಸ್- ಜೆಡಿಎಸ್ ಮೈತ್ರಿಿಕೂಟದ ಸರಕಾರ ಉರುಳಿದ ನಂತರ ಕಾಂಗ್ರೆೆಸ್ನಲ್ಲಿ ಪಕ್ಷ ನಿಷ್ಠರು ಮತ್ತು ಹೊರಗಿನವರ ಬಗ್ಗೆೆ ಚರ್ಚೆ ಆರಂಭವಾಗಿದೆ. ಹೊರಗಿನವರು ಅತೃಪ್ತರಾಗಿ ಮುಂಬೈಗೆ ಹೋಗಿ ಹೊಟೆಲ್ ವಾಸಿಗಳಾದ ಬಳಿಕ ಅವರ ಬಗ್ಗೆೆ ಅಸಹನೆ ಹೆಚ್ಚಿಿತ್ತು. ಆದ್ದರಿಂದಲೇ ಪಕ್ಷದ ಈಗಿನ ನಾಯಕರನ್ನು ಕೆಲವು ನಿಷ್ಠರು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದಾಾರೆ.
ಕಳೆದ ವಿಧಾನಸಭೆ ಚುನಾವಣೆಗಿಂತ ಸ್ವಲ್ಪ ಮುಂಚೆ ಪಕ್ಷ ಸೇರಿದವರೇ ಕಾಂಗ್ರೆೆಸ್ ಟಿಕೆಟ್ ಪಡೆದು ಗೆದ್ದಿದ್ದರು. ಹೆಚ್ಚಿಿನ ಸಂಖ್ಯೆೆಯ ಅತೃಪ್ತರೆನಿಸಿಕೊಂಡು ಈಗ ಸರಕಾರದ ಪತನಕ್ಕೆೆ ಕಾರಣರಾದವರೂ ಇವರೇ. ಈ ರೀತಿ ಚುನಾವಣೆ ಸಂದರ್ಭದಲ್ಲಿ ಟಿಕೆಟನ್ನು ಸರಿಯಾದ ರೀತಿಯಲ್ಲಿ ವಿಮರ್ಶಿಸದೆ, ವ್ಯಕ್ತಿಿಯ ಹಿನ್ನೆೆಲೆ ಗಮನಿಸದೆ ನೀಡಿರುವುದು ಇಂದಿನ ಸ್ಥಿಿತಿಗೆ ಕಾರಣವಾಗಿದೆ. ಈ ರೀತಿಯ ಹೊರಗಿನವರಲ್ಲಿ ಗುತ್ತಿಿಗೆದಾರರು, ಉದ್ಯಮಿಗಳೇ ಹೆಚ್ಚಿಿನವರಿದ್ದರು. ಇವರಿಗೆ ಪಕ್ಷ ನಿಷ್ಠೆೆ ಸ್ವಲ್ಪವೂ ಇರಲಿಲ್ಲ. ಕೇವಲ ಹಣ ಚೆಲ್ಲುವುದು, ಚುನಾವಣೆ ಗೆಲ್ಲುವುದು. ಹೇಗಾದರೂ ಮಾಡಿ ಅಧಿಕಾರ ಹಿಡಿಯುವುದು (ಸಚಿವರಾಗುವುದು) ಅಷ್ಟೇ ಉದ್ದೇಶವಾಗಿತ್ತು.
ಬಹುಮತ ಸಾಬೀತು ಸಂದರ್ಭದಲ್ಲಿ ನಡೆದ ಅಧಿವೇಶನದಲ್ಲಿ ಈ ಮಾತನ್ನು ಆ ಪಕ್ಷದ ಶಾಸಕರೊಬ್ಬರು ಪ್ರಸ್ತಾಾಪಿಸಿದರು. ನೀವು ರಿಯಲ್ ಎಸ್ಟೇಟ್ ಏಜೆಂಂಟರಿಗೆ, ಬಿಲ್ಡರ್ಸ್ಗೆ, ಅಬಕಾರಿ ಗುತ್ತಿಿಗೆದಾರರಿಗೆ ಟಿಕೆಟ್ ಕೊಟ್ಟಿಿದ್ದೀರಿ. ಅವರಲ್ಲಿ ಪಕ್ಷಕ್ಕೆೆ ನಿಷ್ಠರಾಗಿರಿ ಎಂದು ಹೇಗೆ ಕೇಳುತ್ತೀರಿ ಎಂದು ಪಶ್ನಿಿಸಿದ್ದರು.
ರಾಹುಲ್ ಗಾಂಧಿ ಸಹ ತಮ್ಮ ಟ್ವೀಟ್ನಲ್ಲಿ ಪಕ್ಷದೊಳಗಿನ ಸ್ಥಾಾಪಿತ ಹಿತಾಸಕ್ತಿಿಗಳೇ ಅಧಿಕಾರ ಕಳೆದುಕೊಳ್ಳಲು ಕಾರಣರೆಂದು ಹೇಳಿದ್ದರು. ಅಧಿಕಾರಕ್ಕೇರಿದ ದಿನದಿಂದಲೂ ಇವರು ಮುಳ್ಳಾಾದರು. ಸರಕಾರಕ್ಕೆೆ ಬೆದರಿಕೆ ಒಡ್ಡುತ್ತಲೇ ನಡೆದರು. ಸರಕಾರವನ್ನು ಕೆಡಹುವುದೇ ತಮ್ಮ ಗುರಿಮಾಡಿಕೊಂಡರು. ಈಗ ಅವರ ದುರಾಸೆ ಗೆದ್ದಿದೆ. ಪ್ರಜಾಪ್ರಭುತ್ವ, ಕರ್ನಾಟಕದ ಜನರ ಗೌರವ ಮಣ್ಣುಪಾಲಾಗಿದೆ.
ಪರತಂತ್ರರು, ಪಕ್ಷ ತ್ಯಜಿಸಿ ಮರಳಿ ಪಕ್ಷಕ್ಕೆೆ ಬಂದವರು, ಅತೃಪ್ತರು ಮತ್ತು ಇತರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಡಬಾರದೆಂದು ಕಾಂಗ್ರೆೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನ 2017ರಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ಜೊತೆಗೆ ಇಂತಹವರಿಗೆ ಟಿಕೆಟ್ ಕೊಡುವುದೇ ಆದಲ್ಲಿ ಪಕ್ಷದ ಕಾರ್ಯಕರ್ತರನ್ನು ಕೇಳಿ ಕೊಡಬೇಕು. ಹೆಲಿಕಾಪ್ಟರ್ನಲ್ಲಿ ಬರುವವರಿಗೆ ಟಿಕೆಟ್ ಬೇಡ ಎಂಬ ಮಾತನ್ನೂ ಸಹ ಅಂದು ಆಡಿದ್ದರು.
ಆದರೆ ಚುನಾವಣೆ ಹೊತ್ತಿಿನಲ್ಲಿ ಗೆಲ್ಲಲೇಬೇಕೆಂಬ ಏಕೈಕ ಗುರಿ ಇದ್ದುದರಿಂದ ಪರತಂತ್ರರಿಗೂ ಟಿಕೆಟ್ ಕೊಡಲಾಯಿತು. ರಾಹುಲ್ ಗಾಂಧಿ ಅಡಿದ ಮಾತನ್ನು ಕಸದ ಬುಟ್ಟಿಿಗೆ ಎಸೆಯಲಾಯಿತು. ಇದಕ್ಕೂ ಮುನ್ನವೇ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವಾಾ, ವೀರಪ್ಪ ಮೊಯ್ಲಿಿ ಮೊದಲಾದವರು ಚುನಾವಣೆ ಸಂದರ್ಭದಲ್ಲಿ ಟಿಕೆಟನ್ನು ಮಾರಾಟ ಮಾಡಲಾಗುತ್ತಿಿದೆ ಎಂದು ಹೇಳಿದ್ದರಿಂದ ಅಂದು ಅವರ ವಿರುದ್ದವೇ ಆಕ್ರೋೋಶ ಕೇಳಿಬಂದಿತ್ತು. ಈಗ ಮತ್ತೆೆ ಪಕ್ಷದ ನಿಷ್ಠಾಾವಂತರಿಗೆ ಮಾತ್ರ ಟಿಕೆಟ್ ಕೊಡಬೇಕೆಂಬ ಮಾತು ಎಲ್ಲಾಾ ನಾಯಕರಿಂದ ಕೇಳಿಬರುತ್ತಿಿದೆ.
ಮಹಾತ್ಮಾಾ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕಾಲದಲ್ಲಿ ಕಾಂಗ್ರೆೆಸ್ ಟಿಕೆಟ್ ಗೌರವಾನ್ವಿಿತ ಮತ್ತು ಜವಾಬ್ದಾಾರಿಯುತ ಕೆಲಸದಲ್ಲಿರುವವರಿಗೆ ಅಂದರೆ, ಶಿಕ್ಷಕರು, ವೈದ್ಯರು, ಪತ್ರಕರ್ತರು, ವಕೀಲರು, ಟ್ರೇಡ್ ಯೂನಿಯನ್ ಮುಖಂಡರು ಮತ್ತು ನಿಷ್ಠಾಾವಂತರಿಗೆ ಮಾತ್ರ ಸಿಗುತ್ತಿಿತ್ತು. ಈಗ ಮತ್ತೆೆ ಅದೇ ಪದ್ದತಿಗೆ ಪಕ್ಷ ಮರಳಬೇಕಿದೆ.
ಇದು ಕೇವಲ ಕಾಂಗ್ರೆೆಸ್ ಪಕ್ಷದ ಕಥೆ ಮಾತ್ರವಲ್ಲ, ಎಲ್ಲಾಾ ರಾಜಕೀಯ ಪಕ್ಷಗಳಿಗೂ ಅನ್ವಯಿಸುವ ಮಾತು. ಎಲ್ಲ ಪಕ್ಷದವರೂ ಇಂತಹವರಿಂದ ತೊಂದರೆ ಅನುಭವಿಸಿದ ಇತಿಹಾಸ ಮತದಾರರ ಮುಂದಿದೆ. ಉದಾಹರಣೆಗೆ- ನಟ ಜಗ್ಗೇಶ್, ಉದ್ಯಮಿ ಆನಂದ್ ಅಸ್ನೋೋಟಿಕರ್ ಮೊದಲಾದವರು. ಆದರೂ ಪಕ್ಷಾಂತರಿಗಳಿಗೇ ಮತ್ತೆೆ ಮತ್ತೆೆ ಮಣೆ ಹಾಕುವ, ಅಂತಹವರನ್ನೇ ಆರಿಸಿ ಕಳುಹಿಸುವ ಕೆಲಸ ನಡೆಯುತ್ತಿಿದೆ.
published on- 30 ಜುಲಾಯ್ 2019
.........................................

No comments:
Post a Comment