Wednesday, 13 June 2018

ಪುರುಷಪೀಡಕ  ಮಹಿಳೆಯರೇ ಎಚ್ಚರ!
ರಕ್ಷಣೆಗೆ ಬಂದಿದೆ ಸಂಸ್ಥೆೆ



ಎಷ್ಟೋೋ ಪುರುಷರು ತಮ್ಮ ಪತ್ನಿಿ ಅಥವಾ ಕುಟುಂಬದವರಿಂದ ಸುಳ್ಳು ದೂರಿಗೆ ಬಲಿಯಾಗಿ ಸಂಕಟಪಡುತ್ತಿಿದ್ದಾಾರೆ. ನಿಜಕ್ಕೂ ಅದು ಸುಳ್ಳು ದೂರು ಎಂದು ಆದಲ್ಲಿ ಅವರು ಇನ್ನು ಭಯಪಡುವ ಅಗತ್ಯವಿಲ್ಲ. ಅವರ ನೆರವಿಗೆ ಸೇವ್ ಇಂಡಿಯನ್ ಫ್ಯಾಾಮಿಲಿ ಫೌಂಡೇಶನ್ ಬಂದಿದೆ. ಇದು ಎಲ್ಲ ವಿಚಾರಗಳನ್ನು ಪರಿಶೀಲಿಸಿ, ಪ್ರಕರಣದ ಸತ್ಯಾಾಸತ್ಯತೆಯನ್ನು ನೋಡಿ ತಪ್ಪಿಿದ್ದಲ್ಲಿ ಪೊಲೀಸರನ್ನೂ ನ್ಯಾಾಯಾಲಯಕ್ಕೆೆ ಎಳೆಯುತ್ತದೆ. ಜೊತೆಗೆ ಸುಳ್ಳು ದೂರು ಕೊಟ್ಟವರ ವಿರುದ್ದವೂ ಪ್ರಕರಣ ದಾಖಲಿಸುತ್ತದೆ. ಮಹಿಳೆಯಿಂದ ನೊಂದವರಿದ್ದರೆ ಈ ಸಂಘಟನೆಯ ಸಹಾಯ ಪಡೆಯಬಹುದು.



 : ವರದಕ್ಷಿಣೆ ಕಿರುಕುಳ, ದೈಹಿಕ ಹಿಂಸೆ, ದೌರ್ಜನ್ಯ, ಚುಡಾವಣೆ.... ಮೊದಲಾದ ಪ್ರಕರಣಗಳನ್ನು ಪುರುಷರ ವಿರುದ್ದ ದಾಖಲಿಸಲಾಗುತ್ತಿಿದೆ. ಜೊತೆಗೆ ಕೆಲವು ಪುರುಷಪೀಡಕ ಯುವತಿ- ಮಹಿಳೆಯರೂ ಅನಗತ್ಯವಾಗಿ ಶೋಷಿಸುತ್ತಾಾರೆ. ಪೊಲೀಸರೂ ಸಹ ಇಂತಹ ಪ್ರಕರಣಗಳನ್ನು ಹೆಂಗಸರು ದೂರು ಕೊಟ್ಟ ತತಕ್ಷಣ ದಾಖಲಿಸಿತ್ತಾಾರೆ. ಆದರೆ ಪುರುಷರ ವಿಷಯದಲ್ಲಿ ಮಾತ್ರ  ಇದು ಉಲ್ಟಾಾ ಆಗುತ್ತಿಿದೆ. ಈ ಮೂಲಕ ಪುರುಷರು ಶೋಷಣೆಗೆ ಒಳಗಾಗುತ್ತಿಿದ್ದಾಾರೆ. 
ಇದು ಎಲ್ಲರಿಗೂ ಗೊತ್ತಿಿರುವ ವಿಚಾರವೇ ಅದರೂ ಸಹ, ಇಲ್ಲಿಯವರೆಗೆ ಪುರುಷರನ್ನು ರಕ್ಷಿಸುವ ಅಥವಾ ಅವರಿಗೆ ಇಂತಹ ಸಂದರ್ಭಲ್ಲಿ ಧೈರ್ಯ ತುಂಬುವ, ಸಲಹೆ-ಸೂಚನೆ ಕೊಡುವ ಯಾವ ಸಂಸ್ಥೆೆ ಅಥವಾ ವ್ಯಕ್ತಿಿ ಇರಲಿಲ್ಲ. ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸೇವ್ ಇಂಡಿಯನ್ ಫ್ಯಾಾಮಿಲಿ ಫೌಂಡೇಶನ್ ಹುಟ್ಟಿಿಕೊಂಡಿದೆ. ಇದರ ಮೂಲ ಉದ್ದೇಶ ಶೋಷಣೆ ಅಥವಾ ಮಹಿಳಾ ದೌರ್ಜನ್ಯಕ್ಕೆೆ ಸಿಲುಕಿ ಸಂಕಟಪಡುತ್ತಿಿರುವವರಿಗೆ ನೆರವಾಗುವುದು. ಇದರ ಘಟಕ ಶಿವಮೊಗ್ಗದಲ್ಲೂ ಆರಂಭವಾಗಿದೆ. ನಗರದಲ್ಲಿ ಸಾಕಷ್ಟು ಪುರುಷರು ಇಂತಹ ವಿಚಾರದಲ್ಲಿ ಅನಗತ್ಯವಾಗಿ ತೊಂದರೆಗೊಳಗಾಗಿರಬಹುದು. ಅವರು ಇನ್ನು ಮುಂದೆ ಸಂಘಟನೆಗೆ ತಮ್ಮ ಸಮಸ್ಯೆೆ ನಿವೇದಿಸಿಕೊಂಡು ನಿರಾಳರಾಗಬಹುದು. ಸಂಘಟನೆ ಅವರಿಗೆ ಮಾರ್ಗದರ್ಶನ ಮಾಡಲಿದೆ.
ಇನ್ನು ಮುಂದೆ ಮಹಿಳೆಯರು ಪುರುಷರ ವಿರುದ್ದ ವರದಕ್ಷಿಣೆ ಪ್ರಕರಣ ದಾಖಲಿಸಿ ಕಿರುಕುಳ ಕೊಡುವುದಕ್ಕೆೆ ಇದು ತಡೆ ಹಾಕಲಿದೆ. ವಿಶೇಷವೆಂದರೆ, ಇಂತಹ ಪ್ರಕರಣದಲ್ಲಿ ಸಾಕಷ್ಟು ನೊಂದು, ಬೆಂದು, ಪೊಲೀಸ್ ಠಾಣೆ, ನ್ಯಾಾಯಾಲಯ ಅಲೆಯುತ್ತಿಿರುವ ನಗರದ ವಾಸಿಯೊಬ್ಬರು ಈ ಸಂಘಟನೆಯ ನೆರವು ಪಡೆದು ತಮಗಾದ ಅನುಕೂಲ ಇತರ ಶೋಷಿತ ಪುರುಷರಿಗೂ ಆಗಲಿ ಎನ್ನುವ ದೃಷ್ಟಿಿಯಿಂದ ಇದರ ಶಾಖೆಯನ್ನು ಆರಂಭಿಸಿದ್ದಾಾರೆ.
ಇರ ಕಾರ್ಯನಿರ್ವಹಣೆ ಹೇಗೆಂದರೆ, ವ್ಯಕ್ತಿಿ ತನ್ನ ಸಮಸ್ಯೆೆಯನ್ನು ಹೇಳಿಕೊಂಡ ಬಳಿಕ ಸಂಘಟನೆ ಖುದ್ದಾಾಗಿ ಆತನ ಮನೆಗೆ ಅಥವಾ ಘಟನಾ ಸ್ಥಳಕ್ಕೆೆ ತೆರಳಿ ದೂರಿನಲ್ಲಿ ಸತ್ಯಾಾಂಶ ಇದೆಯೇ, ಇಲ್ಲವೇ ಎನ್ನುವುದನ್ನು ಗಮನಿಸುತ್ತದೆ. ಆನಂತರ, ಪ್ರಕರಣ ದಾಖಲಿಸಿದ್ದರೆ ಅಂತಹ ಪೊಲೀಸ್ ಅಧಿಕಾರಿಗೆ ಮನವರಿಕೆ ಮಾಡಿಕೊಡುತ್ತದೆ. ಸಂಬಂಧಿಸಿದ ಪುರಾವೆ ಕೊಡುತ್ತದೆ.  ಸುಳ್ಳು ದೂರನ್ನು ಏಕೆ ದಾಖಲಿಸಲಾಗಿದೆ ಎನ್ನುವುದರ ಬಗ್ಗೆೆ ಮಾಹಿತಿ ಕೊಡುತ್ತದೆ. ಒಂದು ವೇಳೆ ಪ್ರಕರಣ ನ್ಯಾಾಯಾಲಯದಲ್ಲಿದ್ದರೆ, ಅಲ್ಲಿಯೂ ಅಗತ್ಯ ಮಾಹಿತಿ, ದಾಖಲೆ ಕೊಟ್ಟು ಸುಳ್ಳುದ ಊರು ಎಂದು ಸಾಬೀತು ಮಡಲು ಅಹಕರಿಸುತ್ತದೆ. ಜೊತೆಗೆ ಸುಳ್ಳು ದೂರು ಕೊಟ್ಟವರ ವಿರುದ್ದವೂ ಪ್ರಕರಣ ದಾಖಲಿಸುತ್ತದೆ. 
ಚಾಲುಕ್ಯನಗರದ ವಾಸಿ ಎಸ್.ಪಿ. ಶಿವಾನಂದ (ಮೊಬೈಲ್ ನಂ-78926-89790) ಸ್ವತಃ ಪತ್ನಿಿ ಕಡೆಯವರಿಂದ ಸಾಕಷ್ಟು ನೋವು ಅನುಭವಿಸಿದವರು. ಇವರ ಪ್ರಕರಣ ಇನ್ನೂ ನ್ಯಾಾಯಾಲಯದಲ್ಲಿದೆ. ಇವರಿಗೆ ಪೊಲೀಸರು ಕೊಟ್ಟ ತೊಂದರೆಯೂ ಕಡಿಮೆ ಏನಿಲ್ಲ. ಇವರ ಪತ್ನಿಿ ಕೊಟ್ಟ ದೂರನ್ನು ಕೂಡಲೇ ಸ್ವೀಕರಿಸಿದ ಪೊಲೀಸರು, ಇವರ ಕೊಟ್ಟ ದೂರನ್ನು ಮಾತ್ರ ದಾಖಲಿಸಲೇ ಇಲ್ಲ. ಸ್ವತಃ ಎಸ್.ಪಿಯವರಿಗೆ ಮನವಿ ಮಾಡಿದರೂ ಅವರು ದಾಖಲಿಸಿಲ್ಲವಂತೆ. ಆಮೇಲೆ ಐಜಿಪಿಗೆ ಮನವಿ ಮಾಡಿದ ಮೇಲೆ ದೂರು ಅಂದರೆ ಎಫ್ ಐಆರ್ ದಾಖಲಿಸಿದ್ದಾಾರಂತೆ. ಆಮೇಲೆ ಇವರೇ ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾಾರೆ. ಅದರ ವಿಚಾರಣೆ ಇನ್ನೂ ನಡೆಯುತ್ತಿಿದೆ. ಪುರುಷರ ವಿಚಾರದಲ್ಲಿ ಪೊಲೀಸರ ವರ್ತನೆ ಹೇಗೆ ವಿಚಿತ್ರವಾಗಿರುತ್ತದೆ ಎನ್ನುವುದನ್ನು ತನ್ನ ಉದಾಹರಣೆ ಮೂಲಕವೇ ಅವರು ವಿವರಿಸುತ್ತಾಾರೆ.
ಇದೇನೇ ಇರಲಿ, ಪೊಲೀಸರಿಂದ ಮತ್ತು ಪತ್ನಿಿ, ಇತರೆ ಮಹಿಳೆಯರಿಂದ ಅನಗತ್ಯವಾಗಿ ಕಿರುಕುಳಕ್ಕೊೊಳಗಾಗುವ ಪುರುಷರನ್ನು ರಕ್ಷಿಸುವ ಸೇವ್ ಇಂಡಿಯನ್ ಫ್ಯಾಾಮಿಲಿ ನಗರಕ್ಕೆೆ ಕಾಲಿಟ್ಟಿಿದೆ. ಮಹಿಳೆ ದೂರು ನೀಡಿದಾಕ್ಷಣ ಬಂಧಿಸುವ ಆತುರವನ್ನು ಪೊಲೀಸರು ತೋರುತ್ತಾಾರೆ. ಆದರೆ ಪುರುಷ ದೂರು ನೀಡಿದರೆ ಅದನ್ನು ಸ್ವೀಕರಿಸುವುದೇ ಇಲ್ಲ. ಇದೇಕೆ ಎನ್ನುವುದ ಹಲವು ಸಂಶಯ ಹುಟ್ಟುಹಾಕುತ್ತದೆ.  ಸಾಮಾನ್ಯ ವ್ಯಕ್ತಿಿ ಇದನ್ನೆೆಲ್ಲ ಪ್ರಶ್ನಿಿಸಲು ಹೋಗುವುದೇ ಇಲ್ಲ. ಬದಲಿಗೆ ತಾನೇ ಎಷ್ಟು ಕಷ್ಟ ಬೇಕಾದರೂ ಅನುಭವಿಸುತ್ತಾಾನೆ. ಇದೆಲ್ಲ ತಪ್ಪಬೇಕು. ಪೊಲೀಸರು ತಮಗೆ ಬೇಕಾದಂತೆ ಕಾನೂನನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ಜನರಿಗೆ ಗೊತ್ತಾಾಗಬೇಕು ಎನ್ನುತ್ತಾಾರೆ ಅವರು. 
  ಪೊಲೀಸ್ ಅಧಿಕಾರಿಗಳ ವಿರುದ್ದ ದೂರು ಕೊಡಲು ಪೊಲೀಸ್ ದೂರು ಪ್ರಾಾಧಿಕಾರವಿದೆ. ಆದರೆ ಅದು ಜಿಲ್ಲೆೆಯಲ್ಲಿ ಒಂದುವರೆ ವರ್ಷದಿಂದ ಒಂದೇ ಒಂದು ಪ್ರಕರಣವನ್ನು ಇತ್ಯರ್ಥಗೊಳಿಸಿಲ್ಲ. ಹೀಗಾದಲ್ಲಿ ಇಲಾಖೆಯ ಬಗ್ಗೆೆ ಜನರಲ್ಲಿ ನಂಬಿಕೆ ಉಳಿಯುವುದು ಹೇಗೆ ಎಂದು ಪ್ರಶ್ನಿಿಸುವ ಶಿವಾನಂದ, ಫೌಂಡೇಶನ್ ನಿಜಕ್ಕೂ ಪುರುಷ ಶೋಷಿತರಿಗೆ ನೆರವಾಗಲಿದೆ ಎನ್ನುತ್ತಾಾರೆ.
ಕಿರುಕುಳಕ್ಕೊೊಳಗಾದ ಪುರುಷರು ಶಿವಾನಂದ (ಮೊ 7892689790) ಗೆ ಸಂಪರ್ಕಿಸಿ ನೆರವು ಪಡೆಯಬಹುದು.
published on 13th june
.........................................
 ಜಿದ್ದಾಾಜಿದ್ದಿನ ಎಂಎಲ್‌ಸಿ ಚುನಾವಣೆಗೆ ಕಣ ಸಜ್ಜು 


ವಿಧಾನಪರಿಷತ್‌ನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಾಳೆ ನಡೆಯಲಿದೆ. ಇಲ್ಲಿ ಪದವೀಧರರ ಸಮಸ್ಯೆೆ, ಶಿಕ್ಷಕರ ಸಮಸ್ಯೆೆ ಹೊರತಾಗಿ ರಾಜ್ಯ. ರಾಷ್ಟ್ರೀಯ ವಿಚಾರಗಳೂ ಚರ್ಚೆಗೀಡಾಗಿವೆ. ವಿಶೇಷವಾಗಿ ಸಕಾರಿ ನೌಕರರ ಎನ್‌ಪಿಎಸ್ ಹೆಚ್ಚು ಪ್ರಸ್ತಾಾಪದಲ್ಲಿದೆ. ಇದು ಪರಸ್ಪರ ಕಾಂಗ್ರೆೆಸ್- ಬಿಜೆಪಿ ಮಧ್ಯೆೆ ಆರೋಪಕ್ಕೂ ತುತ್ತಾಾಗಿದೆ.  ಇನ್ನೊೊಂದೆಡೆ, ಶಿಕ್ಷಕರ ಕ್ಷೇತ್ರಕ್ಕೆೆ ಶಿಕ್ಷಕರಾದವರೇ ಸ್ಪರ್ಧಿಸಬೇಕೆಂಬ ಮಾತೂ ಸಹ ಕೇಳಿಬರುತ್ತಿಿದೆ.





* ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆೆ ಜೂನ್ 8ಕ್ಕೆೆ ಚುನಾವಣೆ, 12ಕ್ಕೆೆ ಫಲಿತಾಂಶ
* ಪದವೀಧರ ಕ್ಷೇತ್ರಕ್ಕೆೆ 7, ಶಿಕ್ಷಕರ ಕ್ಷೇತ್ರಕ್ಕೆೆ 12 ಉಮೇದುವಾರರು ಕಣದಲ್ಲಿ
* ಪದವೀಧರ ಕ್ಷೇತ್ರಕ್ಕೆೆ 67,500 ಮತದಾರರು, ಶಿಕ್ಷಕರ ಕ್ಷೇತ್ರಕ್ಕೆೆ 20,481 ಮತದಾರರು.
* ಪದವೀಧರರು ಶಿವಮೊಗ್ಗ ಜಿಲ್ಲೆೆಯಲ್ಲಿ ಅಧಿಕ, ಶಿಕ್ಷಕ ಮತದಾರರು ದಕ್ಷಿಣ ಕನ್ನಡ ಜಿಲ್ಲೆೆಯಲ್ಲಿ ಅಧಿಕ.
* ಪದವೀಧರ ಮತ್ತು ಶಿಕ್ಷಕ ಕ್ಷೇತ್ರಕ್ಕೆೆ ಕಾಂಗ್ರೆೆಸ್‌ನಿಂದ  ಹಿಂದಿನ ಚುನಾವಣೆಯದ್ದೇ ಅಭ್ಯರ್ಥಿಗಳು
* ಆಯನೂರು ಮಂಜುನಾಥ ಅವರನ್ನು ಡಿ. ಎಚ್. ಶಂಕರಮೂರ್ತಿ ಬದಲು ಕಣಕ್ಕಿಿಳಿಸಿದ ಬಿಜೆಪಿ
* ಡಿ. ಎಚ್. ಶಂಕರಮೂರ್ತಿ ಪದವೀಧರ ಕ್ಷೇತ್ರವನ್ನು ಸತತ 5 ಬಾರಿ ಪ್ರತಿನಿಧಿಸಿದ್ದರು.
* ಕಳೆದ ಎರಡು ಬಾರಿ ಗಣೇಶ್ ಕಾರ್ಣಿಕ್ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿದ್ದಾಾರೆ.



ವಿಧಾನಪರಿಷತ್‌ನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಾಳೆ ನಡೆಯಲಿದೆ. ಚುನಾವಣೆಗೆ ಈಗಾಗಲೇ ಕ್ಷಣಗಣನೆಯೂ ಆರಂಭವಾಗಿದೆ. ತೀವ್ರ ತುರುಸಿನಿಂದ ಈ ಬಾರಿಯ ಚುನಾವಣೆ ಕೂಡಿದೆ. ಇಲ್ಲಿಯವರೆಗೆ ಪ್ರಜ್ಞಾಾವಂತರ ಕ್ಷೇತ್ರ ಇವು ಎನಿಸಿಕೊಂಡಿದ್ದರೂ ಈ ಬಾರಿ ಅದೇಕೋ ಸ್ವಲ್ಪ ಇದು  ಗಡಿದಾಟಿದೆ ಎಂದೆನಿಸುತ್ತಿಿದೆ. ಪದವೀಧರ ಅಭ್ಯರ್ಥಿಯೊಬ್ಬರು ಬಾಡೂಟ, ಊಟ (ದೇವರ ಪ್ರಸಾದ ಎಂದು ಹೇಳಿ) ಹಾಕಿಸಿರುವ ಆರೋಪ ಹೊತ್ತರೆ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯೊಬ್ಬರು ಬ್ಯಾಾಗ್ ಹಂಚಿರುವ ಬಲವಾದ ಆರೋಪ ಕೇಳಿಬಂದಿದೆ. ಎರಡೂ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆೆಸ್ ಮತ್ತು ಜೆಡಿಎಸ್ ಹಾಗೂ ಪಕ್ಷೇತರರು ಕಣದಲ್ಲಿದ್ದಾಾರೆ.
 ಶಿಕ್ಷಕರ ಕ್ಷೇತ್ರಕ್ಕೆೆ 12 ಉಮೇದುವಾರರಿದ್ದಾಾರೆ. ಬಹುಶ: ಈ ಕ್ಷೇತ್ರದ ಮತದಾರರ ಸಂಖ್ಯೆೆ ಕಡಿಮೆ ಇರುವುದರಿಂದ ಗೆಲ್ಲುವುದು ಸುಲಭ ಎಂದು ಅಭ್ಯರ್ಥಿಗಳು ಅರಿತು ಕಣಕ್ಕಿಿಳಿದಿರುವ ಸಾಧ್ಯತೆ ಇದೆ. 12 ಅಭ್ಯರ್ಥಿಗಳಿಗೆ ಮತ ವಿಭಜನೆಯಾದರೂ ಚಲಾವಣೆಯಾದ ಮತದ ಶೇ. 50ರಷ್ಟು ಪಡೆದರೆ ಆತ ಆಯ್ಕೆೆಯಾಗುತ್ತಾಾನೆ. ಜೊತೆಗೆ ಇಲ್ಲಿ ಪ್ರಾಾಶಸ್ತ್ಯ ಮತವೇ ಪ್ರಮುಖವಾಗಿದೆ. ಈ ಕ್ಷೇತ್ರದಲ್ಲಿ ಈ ಹಿಂದೆ ಕೆಲಸ ಮಾಡಿದವರೇ ಹೆಚ್ಚು ಉಮೇದುವಾರರಾಗಿದ್ದಾಾರೆ. 
 ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆೆಸ್‌ನಿಂದ ಎಸ್. ಪಿ. ದಿನೇಶ್, ಬಿಜೆಪಿಯಿಂದ ಆಯನೂರು ಮಂಜುನಾಥ ಮತ್ತು ಜೆಡಿಎಸ್‌ನಿಂದ ಅರುಣ್‌ಕುಮಾರ್ ಪ್ರಮುಖವಾಗಿ ಕಣದಲ್ಲಿದ್ದಾಾರೆ. ಮೇಲ್ನೋೋಟಕ್ಕೆೆ ಪೈಪೋಟಿ ಕಾಂಗ್ರೆೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮಧ್ಯೆೆಯೇ ಕಂಡುಬರುತ್ತಿಿದೆ. ಇನ್ನೊೊಂದು ವಿಶೇಷವೆಂದರೆ, ಈ ಇಬ್ಬರೂ ಶಿವಮೊಗ್ಗದವರೇ ಆಗಿರುವುದು. 5 ಬಾರಿ ಈ ಕ್ಷೇತ್ರವನ್ನು  ಗೆದ್ದಿದ್ದ ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಈ ಬಾರಿ ಚುನಾವಣೆಯಿಂದ ಹಿಂದೆ ಸರಿದಿದ್ದು,  ಆಯನೂರು ಮಂಜುನಾಥ ಅವರನ್ನು ಪಕ್ಷ ಕಣಕ್ಕಿಿಳಿಸಿದೆ. ಸುಮಾರು 30 ವರ್ಷವನ್ನು ಶಂಕರಮೂರ್ತಿ ಈ ಕ್ಷೇತ್ರದ ಸದಸ್ಯರಾಗಿ ಮೇಲ್ಮನೆಯಲ್ಲಿ ಕಳೆದಿದ್ದಾಾರೆ.
ಆಯನೂರು ಮಂಜುನಾಥ್ ಇದೇ ಮೊದಲ ಬಾರಿ ಇಲ್ಲಿ ಕಣಕ್ಕಿಿಳಿದಿದ್ದಾಾರೆ. ಹೊಸನಗರದಿಂದ ವಿಧಾನಸಭೆ ಸದಸ್ಯರಾಗಿ, ರಾಜ್ಯಸಭೆ ಸದಸ್ಯರಾಗಿ ಅವಧಿ ಮುಗಿಸಿರುವ ಇವರನ್ನು ಪಕ್ಷ ಮತ್ತೆೆ ವಿಧಾನಪರಿಷತ್‌ಗೆ ಕಣಕ್ಕಿಿಳಿಸಿದೆ. ಕಾಂಗ್ರೆೆಸ್‌ನಿಂದ ಎಸ್. ಪಿ. ದಿನೇಶ್ ಉಮೇದುವಾರರಾಗಿದ್ದಾಾರೆ. ದಿನೇಶ್ ಪದವೀಧರ ಸಹಕಾರ ಸಂಘವನ್ನು ಸ್ಥಾಾಪಿಸಿದವರು, ಯುವ ಹೋರಾಟಗಾರರಾಗಿ ಕಾಲೇಜು ದಿನದಿಂದ ಗುರುತಿಸಿಕೊಂಡವರು. ಜೊತೆಗೆ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿದ್ದರು.
 ಕಳೆದ ಬಾರಿಯೂ ಇದೇ ಕ್ಷೇತ್ರದಿಂದ ಕಣಕ್ಕಿಿಳಿದು ಪರಾಭವಗೊಂಡಿದ್ದರು. ಆದರೆ ಈ ಬಾರಿ ಒಂದು ವರ್ಷ ಮೊದಲೇ ಇವರನ್ನು ಪಕ್ಷ ಅಭ್ಯರ್ಥಿ ಎಂದು ಘೋಷಿಸಿದೆ. ಇದರಿಂದ ಬಹು ಹಿಂದೆಯೇ ಅವರ ಪ್ರಚಾರ ಕಾರ್ಯ ಆರಂಭವಾಗಿದೆ. ಈಗ ಇಬ್ಬರೂ ತುರುಸಿನಲ್ಲಿ ಪ್ರಚಾರದಲ್ಲಿದ್ದಾಾರೆ. ಬಿಜೆಪಿಯು ತನ್ನ ಸ್ಥಾಾನವನ್ನು ಉಳಿಸಿಕೊಳ್ಳುತ್ತದೆಯೋ ಅಥವಾ ಕಾಂಗ್ರೆೆಸ್ ಅದನ್ನು ಪಡೆಯುತ್ತದೆಯೋ ಎನ್ನುವುದು ಕುತೂಹಲದಲ್ಲಿದೆ. ಏಕೆಂದರೆ, ದಿನೇಶ್ ಸುಮಾರು 47 ಪದವೀಧರನ್ನು ಈ ವರ್ಷ ನೊಂದಣಿ ಮಾಡಿಸಿದ್ದಾಾರೆ. ಈ ಬಾರಿ ಪದವೀಧರರಿಗೆ ಆಮಿಷವೊಡ್ಡವ ಕೆಲಸ ಸಹ ನಡೆಯುತ್ತಿಿದೆ ಎಂಬ ಆರೋಪ ಕೇಳಿಬರುತ್ತಿಿದೆ.
ಈ ಕ್ಷೇತ್ರದಲ್ಲಿ ಒಟ್ಟೂ 67,500 ಮತಗಳಿವೆ. ಇದರಲ್ಲಿ ಅತಿ ಹೆಚ್ಚು ಶಿವಮೊಗ್ಗ ಜಿಲ್ಲೆೆಯಲ್ಲಿ ಅಂದರೆ 27 ಸಾವಿರದಷ್ಟಿಿದೆ. ಉಳಿದಂತೆ ಮಂಗಳೂರಿನಲ್ಲಿ 16,300, ಚಿಕ್ಕಮಗಳೂರಿನಲ್ಲಿ 7,900, ಉಡುಪಿಯಲ್ಲಿ 8,300, ಹೊನ್ನಾಾಳಿ, ಚನ್ನಗಿರಿಯಲ್ಲಿ 6300 ಮತ್ತು ಕೊಡಗಿನಲ್ಲಿ 1600 ಮತಗಳಿವೆ. ಪದವೀಧರರು ಆಸಕ್ತಿಿಯಿಂದ ಹೆಚ್ಚಿಿನ ಸಂಖ್ಯೆೆಯಲ್ಲಿ ಮತ ಚಲಾಯಿಸಬೇಕಿದೆ.  ಇದರಿಂದ ತಮ್ಮ ಅಭ್ಯರ್ಥಿಯನ್ನು ಆಯ್ಕೆೆ ಮಾಡಿ ಸಮಸ್ಯೆೆ ಪರಿಹಾರಕ್ಕೆೆ ಯತ್ನ ನಡೆಸಲು ಸಾಧ್ಯವಾಗುತ್ತದೆ. ಮತ ಹಾಕದೆ ಆಯ್ಕೆೆಯಾದ ಅಭ್ಯರ್ಥಿಯನ್ನು ಟೀಕಿಸುತ್ತ ಕಾಲ ಕಳೆಯುವ ಬದಲು ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸುವ ಕೆಲಸವಾಗಬೇಕಿದೆ.
ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಜಿದ್ದಾಾಜಿದ್ದಿ ಹೋರಾಟವೇ ಕಂಡುಬರುತ್ತಿಿದೆ. ಕಳೆದ ವರ್ಷದ ಅಭ್ಯರ್ಥಿಗಳೇ ಈ ವರ್ಷವೂ ಎದುರಾಗಿದ್ದಾಾರೆ. ಬಿಜೆಪಿಯ ಗಣೇಶ್ ಕಾರ್ಣಿಕ್ ಮೂರನೆಯ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ, ಕಳೆದ ಬಾರಿ ಪಕ್ಷೇತರರಾಗಿ, ಕಾಂಗ್ರೆೆಸ್ ಬೆಂಬಲಿತರಾಗಿ ಕಣಕ್ಕಿಿಳಿದು ತೀವ್ರ ಸ್ಪರ್ಧೆ ನೀಡಿದ್ದ ಕುಶಾಲನಗರದ ಕೆ.ಕೆ. ಮಂಜುನಾಥಕುಮಾರ್ ಕಾಂಗ್ರೆೆಸ್‌ನಿಂದ ಉಮೇದುವಾರರಾಗಿದ್ದಾಾರೆ. ಇವರ ಮಧ್ಯೆೆ ಚಿಕ್ಕಮಗಳೂರಿನ ಎಸ್.ಎಲ್.ಭೋಜೇಗೌಡ ಜೆಡಿಸ್‌ನಿಂದ ಕಣದಲ್ಲಿದ್ದಾಾರೆ. ಅರುಣ್ ಹೊಸಕೊಪ್ಪ, ಅಲೋಶಿಯಸ್ ಡಿಸೋಜಾ ಮಂಗಳೂರು, ಜೆ. ಬಿ. ಚಂದ್ರೋಜಿರಾವ್ ಭದ್ರಾಾವತಿ, ಡಿ. ಕೆ. ತುಳಸಪ್ಪ ಶಿವಮೊಗ್ಗ, ಅಂಪಾರು ನಿತ್ಯಾಾನಂದ ಶೆಟ್ಟಿಿ, ಬಿ. ಆರ್. ಪ್ರಭುಲಿಂಗ, ಕೆ. ಸಿ.ಬಸವರಾಜ ಶಿವಮೊಗ್ಗ, ಎಂ. ರಮೇಶ್ ಶಂಕರಘಟ್ಟ ಮತ್ತು ಕೆ. ಪಿ. ರಾಜೇಂದ್ರಕುಮಾರ್ ಸ್ಪರ್ಧಿಸಿದ್ದಾಾರೆ. ಆದರೆ ಇಲ್ಲಿ ಹಣಾಹಣಿ ಕಂಡುಬರುತ್ತಿಿರುವು ಕಾಂಗ್ರೆೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರಾದ ಎಂ. ರಮೇಶ್ ಮಧ್ಯೆೆ ಮಾತ್ರ, ಈ ಕ್ಷೇತ್ರದಲ್ಲಿ ಒಟ್ಟೂ 20, 481 ಮತದಾರರಿದ್ದಾಾರೆ. ಅರ್ಧಕ್ಕಿಿಂತ ಹೆಚ್ಚು ಮತದಾರರು ಉಡುಪಿ, ಮಂಗಳೂರು ಜಿಲ್ಲೆೆಯಲ್ಲಿದ್ದಾಾರೆ. ಶಿವಮೊಗ್ಗಕ್ಕೆೆ ಮೂರನೆಯ ಸ್ಥಾಾನವಿದೆ.  ಇದರಿಂದಾಗಿ ಶಿಕ್ಷಕಕರ ಮೇಲೆ ಪ್ರಭಾವ ಬೀರಲು ದಕ್ಷಿಣ ಕನ್ನಡ ಮತ್ತು ಶಿವಮೊಗ್ಗದತ್ತ ಹೆಚ್ಚಿಿನ ಗಮನ ಕೊಟ್ಟಿಿದ್ದಾಾರೆ.
ವಿಶೇಷವೆಂದರೆ ಶಿಕ್ಷಕರಾಗಿ ಕಣಕ್ಕಿಿಳಿದವರು ತಮಗೇ ಗೆಲುವು ಎಂದು ನಂಬಿದ್ದಾಾರೆ. ಮಂಜುನಾಥಕುಮಾರ್, ಎಂ. ರಮೇಶ್, ಬಸವರಾಜ, ಡಿ. ಕೆ. ತುಳಸಪ್ಪ,  ಅರುಣ್ ಹೊಸಕೊಪ್ಪ, ಚಂದ್ರೋಜಿರಾವ್ ಮೊದಲಾದವರು ಶಿಕ್ಷಕರು. ಇದನ್ನೇ ಹೇಳಿಕೊಂಡು ಅವರು ಮತಯಾಚನೆ ಮಾಡುತ್ತಿಿದ್ದಾಾರೆ.
ಬಿಜೆಪುಯವರು ಈ ಬಾರಿ ತಾವೇ ಈ ಎರಡೂ ಕ್ಷೇತ್ರ ಗೆಲ್ಲುತ್ತೇವೆ ಎಂಬ ಉತ್ಸಾಾಹದಲ್ಲಿದ್ದಾಾರೆ.  ಅವರು ಇದಕ್ಕೆೆ ಕೊಡುವ ಕಾರಣವೇನೆಂದರೆ, ಈ ವ್ಯಾಾಪ್ತಿಿಯ 30 ವಿಧಾನಸಭೆ ಕ್ಷೇತ್ರಗಳಲ್ಲಿ 27ರಲ್ಲಿ ಬಿಜೆಪಿ ಶಾಸಕರಿದ್ದಾಾರೆ.  ಇವರೆಲ್ಲ ತಮ್ಮ ಪಕ್ಷಕ್ಕೆೆ ಮತ ಹಾಕಿಸುತ್ತಾಾರೆಂದು ನಂಬಿದ್ದಾಾರೆ. ಆದರೆ ಇಲ್ಲಿ ಪಕ್ಷರಹಿತ ವಿಷಯವೇ ಪ್ರಾಾಧಾನ್ಯವಾಗಲಿದೆ.
 ಭೋಜೇಗೌಡ ಈ ಹಿಂದೆ ಪದವೀಧರ ಕ್ಷೇತ್ರದಿಂದ ಕಣಕ್ಕಿಿಳಿದು ಪರಾಭವಗೊಂಡಿದ್ದು, ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಉಮೇದುವಾರರಾಗಿದ್ದಾಾರೆ. ಬಿಜೆಪಿಯವರು ಅವರ ವಿರುದ್ದ ಆರೋಪಗಳನ್ನು ಮಾಡಿದ್ದಾಾರೆ. ಇಲ್ಲಿ ಶಿಕ್ಷಕರ ಸಮಸ್ಯೆೆಯನ್ನೇ ಎಲ್ಲರೂ ಬಳಕೆ ಮಾಡಿಕೊಂಡು ಪ್ರಚಾರ ಮಾಡುತ್ತಿಿರುವರಾದರೂ ಇಲ್ಲಿಯವರೆಗೆ ಆಯ್ಕೆೆಯಾದವರು ಮಾತ್ರ ಇದನ್ನು ವಿಧಾನ ಪರಿಷತ್‌ನಲ್ಲಿ ಗಂಭೀರವಾಗಿ ಪ್ರಸ್ತಾಾಪಿಸುವ ಕೆಲಸವನ್ನು ಮಾಡಲೇ ಇಲ್ಲ. 
ನಿರಂತರ ಗೆಲುವನ್ನು ದಾಖಲಿಸಿಕೊಂಡು ಬಂದಿರುವ ಬಿಜೆಪಿಗೆ ಈ ಬಾರಿ ಕಾಂಗ್ರೆೆಸ್, ಬಿಜೆಪಿ ಜೊತೆಗೆ ಪಕ್ಷೇತರರು ಪ್ರಬಲ ಸವಾಲಾಗಿದ್ದಾಾರೆ. ಬಿಜೆಪಿಗೆ ಅದರ ಶಾಸಕರ ಬಲ ಅನುಕೂಲವಾಗಲಿದೆಯೇ ಅಥವಾ ಅಭ್ಯರ್ಥಿಗಳ ವೈಯಕ್ತಿಿಕ ವರ್ಚಸ್ಸು ಇಲ್ಲಿ ಕೆಲಸ ಮಾಡಲಿದೆಯೇ ಎನ್ನುವುದು ಫಲಿತಾಂಶದಿಂದಲೇ ಬೆಳಕಿಗೆ ಬರಬೇಕಿದೆ.

ಬಾಕ್‌ಸ್‌
ಪದವೀಧರ ಕ್ಷೇತ್ರದ ಮತಗಳ ವಿವರ

ಶಿವಮೊಗ್ಗ-27,100.
ಮಂಗಳೂರು 16,300,
 ಚಿಕ್ಕಮಗಳೂರು 7,900,
ಉಡುಪಿ 8,300,
 ಹೊನ್ನಾಾಳಿ, ಚನ್ನಗಿರಿಯಲ್ಲಿ 6300
 ಕೊಡಗಿನಲ್ಲಿ 1600
ಒಟ್ಟೂ -67,500
...........................................

ಶಿಕಕ್ಷರ ಕ್ಷೇತ್ರದ ಮತಗಳ ವಿವರ

ಶಿವಮೊಗ್ಗ-4960
ಮಂಗಳೂರು 7140
 ಚಿಕ್ಕಮಗಳೂರು3338,
ಉಡುಪಿ 2768,
 ಹೊನ್ನಾಾಳಿ, ಚನ್ನಗಿರಿಯಲ್ಲಿ 1025
 ಕೊಡಗಿನಲ್ಲಿ 1250
ಒಟ್ಟೂ -20,481
..................................................
published on 7th june
ಬಾನಾಡಿಗಳ ಮೂಕರೋಧನ
  ಪ್ರತಿವರ್ಷವೂ ಆತಂಕದಲ್ಲಿ ಬೆಳ್ಳಕ್ಕಿಿಗಳ ಹಿಂಡು





ಶಿವಮೊಗ್ಗ: ಎಂತಹ ದುರಂತ ನೋಡಿ. ಪ್ರತಿ ವರ್ಷ ಎಲ್ಲಿಂದಲೋ  ಸಂತಾನಕ್ಕೆೆಂದೇ ಹಾರಿ ಬಂದು ಇಲ್ಲಿ ಆತಂಕದ ಕ್ಷಣವನ್ನು ಎದುರಿಸುವುದು. ಕೆಲವೊಮ್ಮೆೆ ಮೊಟ್ಟೆೆ ಸಹಿತ ನದಿ ಪಾಲಾಗುವುದು. ಯಾರ ಶಾಪವೋ ಈ ಬಾನಾಡಿಗಳಿಗೆ.
ಮಂಡಗದ್ದೆೆ ಎಂದಾಕ್ಷಣ ನೆನಪಾಗುವುದೇ ಪಕ್ಷಿಧಾಮ. ಪಕ್ಷಿಧಾಮಕ್ಕೆೆ ಹೇಳಿ ಮಾಡಿಸಿದ ಸ್ಥಳ ಇದು. ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವಂತೆ ಯಾವುದೋ ದೇಶದಿಂದ ಹಾರಿ ಬಂದು ಇಲ್ಲಿನ ತುಂಗಾನದಿ ತೀರದಲ್ಲಿ  ಬೆಳ್ಳಕ್ಕಿಿಗಳು (ಬಾನಾಡಿಗಳು) ಸಂತಾನ ನಡೆಸುತ್ತವೆ. ಆದರೆ ಪ್ರವಾಹ ಎದುರಾಗುತ್ತದೆ, ಸಂತಾನ ನಾಶವಾಗಬಹುದು ಎನ್ನುವುದು ಅವುಗಳಿಗೆ ಹೇಗೆ ಗೊತ್ತಾಾಗಬೇಕು.
ಪ್ರತಿ ವರ್ಷ ಈ ಬಾನಾಡಿಗಳ ಗೋಳು ಇದು. ಮುಂಗಾರು ಆರಂಭವಾಗುವ ವೇಳೆ ಸಾವಿರಾರು ಸಂಖ್ಯೆೆಯಲ್ಲಿ ಆಗಮಿಸುತ್ತವೆ. ಕೆಲವೇ ತಿಂಗಳಲ್ಲಿ  ಸಂತಾನ ಮುಗಿಸಿ ಮತ್ತೆೆ ಸ್ವದೇಶಕ್ಕೆೆ ಮರಳುತ್ತವೆ. ಆದರೆ ಇಲ್ಲಿ ಅವು ಸುಖ ಸಂತಾನ ಕಾಣುವುದಕ್ಕಿಿಂತ ಆತಂಕದ ಕ್ಷಣ ಎದುರಿಸುವುದೇ ಹೆಚ್ಚು.
ಮಳೆ ಹೆಚ್ಚಾಾದಂತೆ ತುಂಗಾ ನದಿಯಲ್ಲಿ ನೀರಿನ ಪ್ರವಾಹ ಏರುತ್ತದೆ. ಪ್ರತಿವರ್ಷ ಹೂಳು ತುಂಬಿ ನದಿಯಲ್ಲಿ ಆಳವೇ ಇಲ್ಲ ಎನ್ನುವಂತಾಗಿರುವುದರಿಂದ  ಪ್ರವಾಹ ಬರುವುದು ಸಾಮಾನ್ಯವಾಗಿದೆ. ಇದ್ಯಾಾವುದರ ಪರಿವೇ ಇಲ್ಲದೆ ಪಕ್ಷಿಗಳು ಇದೇ ಋತುಮಾನದಲ್ಲಿ ಮೊಟ್ಟೆೆ ಇಡುವ ಕೆಲಸ ಮಾಡುತ್ತವೆ. ಪ್ರವಾಹ ಏರಿದಂತೆ ಗಿಡ-ಮರದ ತುದಿಯವರೆಗೆ ಪಕ್ಷಿಗಳು ಏರುತ್ತವೆ. ರಕ್ಷಣೆಗಾಗಿ ಅರಚುತ್ತವೆ, ಕಿರುಚುತ್ತವೆ. ತಾವೇ ನೇಯ್ದ ಗೂಡನ್ನು, ಅದರಲ್ಲಿರುವ ಮೊಟ್ಟೆೆಯನ್ನೋೋ, ಮರಿಯನ್ನೋೋ ತುಂಗೆ ಆಪೋಶನ ತೆಗೆದುಕೊಳ್ಳುವುದನ್ನು ಕಂಡು ಮಮ್ಮಲ ಮರುಗುತ್ತವೆ, ಮೂಕರಾಗಿ ರೋಧಿಸುತ್ತವೆ. ಈ ವರ್ಷವೂ ಕಳೆದೆರಡು ದಿನದಿಂದ ಬಾನಾಡಿಗಳು ಆತಂಕದ ಕ್ಷಣದಲ್ಲಿವೆ. ಯಾವಾಗ ಪ್ರವಾಹ ಎದುರಾಗುತ್ತದೆಯೊ ಎಂಬ ಭಯದಿಂದ ಅವು ನಡುಗುತ್ತಿಿವೆ.
 ರೆಕ್ಕೆೆಯನ್ನು ಪಟಪಟನೆ ಬಡಿದು ತನ್ನ ಸಂಗಡಿಗರನ್ನು ಎಚ್ಚರಿಸುವುದು, ಅತ್ತಿಿಂದಿತ್ತ, ಮೇಲೆ- ಕೆಳಗೆ ಹಾರುವುದು ಕಂಡುಬರುತ್ತಿಿದೆ. ಒಂದು ಪಕ್ಷಿಗೆ ಆಪತ್ತು ಎದುರಾದರೂ ಅಲ್ಲಿರುವ ಸಾವಿರಾರು ಬಾನಾಡಿಗಳುು ಒಂದುಗೂಡುತ್ತವೆ, ಶೋಕಿಸುತ್ತವೆ. ಯಾರಿಗೂ ತೊಂದರೆ ನೀಡದೆ, ಬಾನಿನಲ್ಲಿ ಹಾರಾಡುವಾಗ ಚಿತ್ತಾಾರ ಬಿಡಿಸಿದಂತೆ ಜನರ ಮನ ತಣಿಸುವ, ಪ್ರವಾಸಿಗರನ್ನು ತಮ್ಮ ಹಾಲಿನಂತಹ ಬಣ್ಣದಿಂದ ಆಕರ್ಷಿಸುತ್ತ, ಬಳುಕುವ ನಡಿಗೆಯಿಂದ ಮುದಗೊಳಿಸುವ ಈ ಪಕ್ಷಿಗಳ ಮರಿ, ಗೂಡು ನೀರುಪಾಲಾಗುವಾಗ ಸ್ಥಳೀಯರೂ ಸಹ ಅವುಗಳಿಗೆ ಎದುರಾಗುವ ಸಂಕಟವನ್ನು ನೋಡಲಾಗದೆ ವ್ಯಥೆ ಪಡುತ್ತಾಾರೆ.
ಪಕ್ಷಿ ತಜ್ಞರ ಪ್ರಕಾರ, ಇಲ್ಲಿಗೆ ಆಸ್ಟ್ರೇಲಿಯಾ, ಸೈಬೀರಿಯಾ, ಶ್ರೀಲಂಕಾ ಮೊದಲಾದ ದೇಶಗಳಿಂದ ಬಾನಾಡಿಗಳು ಅರ್ಥಾತ್ ಬೆಳ್ಕಕ್ಕಿಿಗಳು ಹಾರಿಬರುತ್ತವೆ. ಇಲ್ಲಿನ ವಾತಾವರಣ ಸಂತಾನೋತ್ಪತ್ತಿಿಗೆ ಅನುಕೂಲ ಎನ್ನುವ ಅಂಶವೂ ಇದಕ್ಕೆೆ ಕಾರಣವಿರಬಹುದು. ಪ್ರತಿವರ್ಷ ಇಲ್ಲಿಗೆ ಬರುವ ಬೆಳ್ಳಕ್ಕಿಿಗಳ ಸಂಖ್ಯೆೆ ಹೆಚ್ಚುತ್ತಲೇ ಇದೆ. ಇಲ್ಲಿನ ನದಿ ದಡದಲ್ಲಿ ಬೃಹತ್ ಮರಗಳಿರುವುದು, ಅವು ಬೀಸು ಬೀಸಾಗಿ ಹರಡಿಕೊಂಡಿರುವುದು ಗೂಡು ಕಟ್ಟಲು ಅನುಕೂಲವಾಗಿದೆ. ಇದರಿಂದ ಪ್ರತಿ ವರ್ಷ ಹೆಚ್ಚಿಿನ ಸಂಖ್ಯೆೆಯಲ್ಲಿ ಇಲ್ಲಿಗೆ ಅವು ಬರುತ್ತಿಿವೆ ಎನ್ನುತ್ತಾಾರೆ ಸ್ಥಳೀಯರು.
published o12th june
.................................. 

Thursday, 31 May 2018

ಜಿಲ್ಲೆೆಯ ಸಿಎಂಗಳಿಗೆ ಪೂರ್ಣಾವಧಿಯ ಭಾಗ್ಯವಿಲ್ಲ




ಶಿವಮೊಗ್ಗ: ಜಿಲ್ಲೆೆಯಿಂದ ಈವರೆಗೆ ನಾಲ್ವರು ಮುಖ್ಯಮಂತ್ರಿಿಯಾದರೂ ಅವರ್ಯಾಾರೂ ಪೂರ್ಣಾವಧಿಯನ್ನು ಪೂರೈಸಿಲ್ಲ. ರಾಜ್ಯಕ್ಕೆೆ ಅತಿ ಹೆಚ್ಚು ಮುಖ್ಯಮಂತ್ರಿಿಯನ್ನು ನೀಡಿದ ಜಿಲ್ಲೆೆ ಎಂಬ ಖ್ಯಾಾತಿಯನ್ನು ಮಾತ್ರ ಉಳಿಸಿಕೊಳ್ಳುವಂತಾಗಿದೆ. ಕಡಿದಾಳು ಮಂಜಪ್ಪ, ಎಸ್. ಬಂಗಾರಪ್ಪ, ಜೆ. ಎಎಚ್.ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಜಿಲ್ಲೆೆಯಿಂದ ಮುಖ್ಯಮಂತ್ರಿಿಯಾದವರು.
ತೀರ್ಥಹಳ್ಳಿಿಯಿಂದ 1952ರ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಕಡಿದಾಳು ಮಂಜಪ್ಪ ರಾಜ್ಯದ 3ನೆಯ ಮುಖ್ಯಮಂತ್ರಿಿಯಾಗಿ 1956ರ ಆಗಸ್‌ಟ್‌ 19ರಂದು ಅಧಿಕಾರ ಸ್ವೀಕರಿಸಿದ್ದರು. ಆದರೆ ಅವರು ಸಿಎಂ ಆಗಿದ್ದು 74 ದಿನ ಮಾತ್ರ. ಅದೇ ವರ್ಷದ ಅಕ್ಟೋೋಬರ್ 31ರಂದು ಸ್ಥಾಾನ ತ್ಯಜಿಸಿದರು. ಅವರಿಗಿಂತ ಮುನ್ನ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಿಯಾಗಿದ್ದರು. ಅವರು ರಾಜೀನಾಮೆ ನೀಡಿದ್ದರಿಂದ ಗಾಂಧಿವಾದಿ  ಕಡಿದಾಳು ಅವರಿಗೆ ಹುದ್ದೆೆ ತಾನಾಗಿಯೇ ಒಲಿದು ಬಂದಿತ್ತು. ಅದನ್ನು ಸಮರ್ಥವಾಗಿಯೇ  ನಿಭಾಯಿಸಿದ್ದರು. ಆನಂತರ ಸರ್ಕಾರದ ಅವಧಿ ಮುಕ್ತಾಾಯವಾಗಿದ್ದರಿಂದ ಅವರು ನಿರ್ಗಮಿಸಿದ್ದರು.
ಎಸ್. ಬಂಗಾರಪ್ಪ ಸೊರಬದಿಂದ 7 ಬಾರಿ ಆಯ್ಕೆೆಯಾದವರು. 1990ರ ಅಕ್ಟೋೋಬರ್ 17ರಂದು ಮುಖ್ಯಮಂತ್ರಿಿಯಾಗಿ 1992ರ  ನವೆಂಬರ್ 19ರವರೆಗೆ ಆಡಳಿತ ನಡೆಸಿದರು. ಒಟ್ಟಾಾರೆ  ಅವರು ಆಡಳಿತ ನಡೆಸಿದ್ದು 756 ದಿನ. ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಏಕಾಏಕಿ ಹುದ್ದೆೆಯಿಂದ ಕೆಳಗಿಳಿಸಿ ಬಂಗಾರಪ್ಪಗೆ ಹುದ್ದೆೆ ನೀಡಿದ್ದರು. ಆದರೆ ಬಂಗಾರಪ್ಪ ಅಂದಿನ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರ ವಿರೋಧ ಕಟ್ಟಿಿಕೊಂಡು ಹುದ್ದೆೆ ಕಳಕೊಂಡರು.
ಜೆ.ಎಚ್. ಪಟೇಲ್ ಅವರು ಅವಿಭಜಿತ ಚನ್ನಗಿರಿಯಿಂದ ಶಾಸಕರಾಗಿ ಆಯ್ಕೆೆಯಾಗಿದ್ದರು. 1996ರ ಮೇ 31ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ 1999ರ ಅಕ್ಟೋೋಬರ್ 7ರಂದು ಸ್ಥಾಾನಕ್ಕೆೆ ರಾಜೀನಾಮೆ ನೀಡಿದರು.  ಇವರ ಆಳ್ವಿಿಕೆಯ ಅವಧಿ 1 ವರ್ಷ 172 ದಿನ. ಇವರಿಗಿಗಿಂತ ಮೊದಲು ಎಚ್. ಡಿ. ದೇವೇಗೌಡ ಸಿಎಂ ಆಗಿದ್ದರು. ಆದರೆ ಕೇಂದ್ರದಲ್ಲಿ ದೇವೇಗೌಡರು ಪ್ರಧಾನಿಯಾದರು. ಇದರಿಂದ ಪಟೇಲ್‌ಗೆ ಸಿಂಎ ಆಗುವ ಅವಕಾಶ ಲಭಿಸಿತ್ತು.
ಬಿ. ಎಸ್. ಯಡಿಯೂರಪ್ಪ ಒಟ್ಟೂ ಈವರೆಗೆ 8 ಬಾರಿ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆೆಯಾಗಿದ್ದಾಾರೆ. 200ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಜೆಡಿಎಸ್- ಕಾಂಗ್ರೆೆಸ್ ಮೈತ್ರಿಿ ಆಳ್ವಿಿಕೆ ನಡೆದು ಧರ್ಮಸಿಂಗ್ ಮುಖ್ಯಮಂತ್ರಿಿಯಾಗಿದ್ದರು. ಆದರೆ ಜೆಡಿಎಸ್ ಅಲ್ಪಕಾಲದಲೇ ಕಾಂಗ್ರೆೆಸ್‌ಗೆ ಕೈಕೊಟ್ಟಿಿತ್ತು. ಬಿಜೆಪಿ ಜೊತೆ ಮೈತ್ರಿಿ ಸಾಧಿಸಿ ಎಚ್. ಡಿ. ಕುಮಾರಸ್ವಾಾಮಿ ಸಿಎಂ ಆದರು. ಮೊದಲ 20 ತಿಂಗಳು ಎಚ್‌ಡಿಕೆ, ಆನಂತರ 20 ತಿಂಗಳು ಬಿಎಸ್ವೈ ಎಂದು ನಿರ್ಧರಿಸಲಾಗಿತ್ತು. ಅವರು ಮೊದಲ ಬಾರಿಗೆ 2007ರ ನವೆಂಬರ್ 12ರಂದು ಮುಖ್ಯಮಂತ್ರಿಿಯಾಗಿ ಅಧಿಕಾರ ಸ್ವೀಕರಿಸಿದರು. ಜೆಡಿಎಸ್ ಬೆಂಬಲದ ಮೇಲೆ ಪ್ರಮಾಣ ವಚನ ಮಾಡಿದ್ದರಾದರೂ ಅವರು ಬೆಂಬಲ ವಾಪಸ್ ಪಡೆದಿದ್ದರಿಂದ ಕೇವಲ 7 ದಿನಕ್ಕೆೆ ಅಧಿಕಾರದಿಂದ ನಿರ್ಗಮಿಸಿದರು.
 ಎರಡನೆಯ ಬಾರಿಗೆ 2008ರ ಮೇ 30ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಭ್ರಷ್ಟಾಾಚಾರ ಪ್ರಕರಣಗಳ ಹಿನ್ನೆೆಲೆಯಲ್ಲಿ 2012ರ ಜುಲೈ 12ಕ್ಕೆೆ ಅಧಿಕಾರ ಬಿಡಬೇಕಾಯಿತು. ಮೂರನೆಯ ಬಾರಿಗೆ ಮೊನ್ನೆೆ 17ರಂದು ಅಧಿಕಾರ ಸ್ವೀಕರಿಸಿ 19ರಂದು ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಎರಡೇ ದಿನಕ್ಕೆೆ ರಾಜೀನಾಮೆ ನೀಡಿದರು.
published on May 21
.................................
ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆೆಯ ಭಯ 


ಕರ್ನಾಟಕ ವಿಧಾನಸಭೆಯಲ್ಲಿ ಆಡಳಿತದ ಚುಕ್ಕಾಾಣಿ ಹಿಡಿಯಲು ಯಾವುದೇ ಪಕ್ಷಕ್ಕೆೆ ಬಹುಮತ ಬಾರದ ಹಿನ್ನೆೆಲೆಯಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿಿವೆ. ಅತಿ ಹೆಚ್ಚು ಸ್ಥಾಾನ ಗಳಿಸಿರುವ ಬಿಜೆಪಿಯನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾಾನಿಸಿರುವುದೂ ಸಹ ವಿವಾದವಾಗಿ ಮಾರ್ಪಟ್ಟಿಿದೆ. ಏಕೆಂದರೆ ಕಾಂಗ್ರೆೆಸ್- ಜೆಡಿಎಸ್ ಚುನಾವಣೋತ್ತರದಲ್ಲಿ ಮೈತ್ರಿಿ ಮಾಡಿಕೊಂಡು ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಸನ್ನದ್ಧವಾಗಿದ್ದವು,
ಬಿಜೆಪಿ ಈಗ 103, ಕಾಂಗ್ರೆೆಸ್ 78 ಮತ್ತು ಜೆಡಿಎಸ್ 38, ಪಕ್ಷೇತರರು ಇಬ್ಬರು ಇದ್ದಾಾರೆ. ಪಕ್ಷೇತರರಿಬ್ಬರೂ ಕಾಂಗ್ರೆೆಸ್ ಪರ ಗುರುತಿಸಿಕೊಂಡು ಬೆಂಬಲ ಘೋಷಿಸಿದ್ದಾಾರೆ. ಆದ್ದರಿಂದ ಈಗ ಬಿಜೆಪಿ ಬಹುಮತ ಸಾಬೀತುಪಡಿಸಲು 111 ಸದಸ್ಯರನ್ನು ಹೊಂದಬೇಕಿದೆ. ಆದರೆ ಇದಕ್ಕೆೆ 8 ಸದಸ್ಯರ ಕೊರತೆ ಎದುರಾಗಿದೆ. ಈ 8 ಸದಸ್ಯರನ್ನು ಪಡೆಯಲು ತಂತ್ರಗಾರಿಕೆ ನಡೆಯುತ್ತಿಿದೆ.
ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆೆಯ ದೊಡ್ಡ ಭಯ ಇರುವುದರಿಂದ ಸುಲಭದಲ್ಲಿ ಪಕ್ಷಾಂತರಕ್ಕೆೆ ಅವಕಾಶವಿಲ್ಲ. ಬಿಜೆಪಿ ವಿಶ್ವಾಾಸಮತ ಗೆಲ್ಲಬೇಕಾದರೆ ಜೆಡಿಎಸ್ ಅಥವಾ ಕಾಂಗ್ರೆೆಸ್ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಬೇಕಿದೆ. ಆದರೆ ಅದು ಅಷ್ಟು ಸುಲಭದ ಕೆಲಸವಂತೂ ಅಲ್ಲ. ಜೆಡಿಎಸ್ ಮತ್ತು ಕಾಂಗ್ರೆೆಸ್ ಈಗ ಮೈತ್ರಿಿ ಮಾಡಿಕೊಂಡಿರುವುದು ಮತ್ತು ತಮ್ಮದೇ ಸುರಕ್ಷೆಯಲ್ಲಿ ಇಟ್ಟುಕೊಂಡಿರುವುದು ಸಹ ಬಿಜೆಪಿಗೆ ತೊಂದರೆ ತಂದೊಡ್ಡಿಿದೆ.
ವಿಶ್ವಾಾಸಮತ ಯಾಚನೆ ಸಂದರ್ಭದಲ್ಲಿಯೂ ಕಾಂಗ್ರೆೆಸ್- ಜೆಡಿಎಸ್ ಶಾಸಕರು ಬಿಜೆಪಿಗೆ ಮತ ಹಾಕದಂತೆ ವ್ಹಿಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ಸೂಚನೆಗೆ ವಿರುದ್ಧವಾಗಿ ಅವರು ನಡೆದುಕೊಳ್ಳುವಂತಿಲ್ಲ. ಆದ್ದರಿಂದ ಪಕ್ಷದ ಸೂಚನೆಯಂತೆ ಅವರು ನಡೆದುಕೊಳ್ಳಬೇಕಾಗುತ್ತದೆ. ವ್ಹಿಿಪ್ ಉಲ್ಲಂಘಿಸಿದ ಶಾಸಕ ತನ್ನ ಸದಸ್ಯತ್ವವನ್ನು ಮತ್ತು ಶಾಸಕ ಸ್ಥಾಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಆತ ಸದಸ್ಯನಾಗುವ ಮುನ್ನ ಸಂಬಂಧಿತ ಪಕ್ಷದ ಹೆಸರಿನಲ್ಲಿ ಟಕೆಟ್ ಪಡೆದು ಸ್ಪರ್ಧಿಸಿ ಸದಸ್ಯನಾಗಿರುತ್ತಾಾನೆ. ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆೆಯಡಿ ಶಾಸಕರು ಬಂದಲ್ಲಿ ಅವರು  ಕೂಡಲೇ ತಮ್ಮ ಸ್ಥಾಾನ ತೆರವುಗೊಳಿಸಬೇಕಾಗುತ್ತದೆ. ಮತ್ತು ಆ ಸ್ಥಾಾನಕ್ಕೆೆ  ಮರು ಚುನಾವಣೆ ನಡೆಸಬೇಕಾಗುತ್ತದೆ. ಈ ಕಾಯ್ದೆೆ ಉಲ್ಲಂಘಿಸಿದಲ್ಲಿ ಶಾಸಕರು ಬಹಳ ದೊಡ್ಡ ತೊಂದರೆಯನ್ನು ಎದುರಿಸಬೇಕಾಗುತ್ತದೆ.
ಒಂದು ವೇಳೆ ಪಕ್ಷ ವಿಭಜನೆಯಾದಲ್ಲಿ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆೆ ಅನ್ವಯವಾಗುವುದಿಲ್ಲ. ಆದರೆ ಮೂರನೆಯ ಒಂದರಷ್ಟು ಸದಸ್ಯರಾದರೂ ವಿಭಜನೆ ಮಾಡಿಕೊಂಡು ಹೊರಬಂದಿರಬೇಕಾಗುತ್ತದೆ. 
ಪಕ್ಷಾಂತರ ನಿಷೇಧ ಕಾಯ್ದೆೆಯ ಅಂತಿಮ ನಿರ್ಧಾರ ವಿಧಾನಸಭೆಯ ಅಧ್ಯಕ್ಷರದ್ದಾಾಗಿರುತ್ತದೆ. ಇಲ್ಲಿ ನ್ಯಾಾಯಾಲಯದ ಮೆಟ್ಟಿಿಲೇರುವ ಪ್ರಮೇಯವೇ ಇಲ್ಲ. ಏಕೆಂದರೆ ಸಭೆಯ ಸಂಪೂರ್ಣ ನಿಭಾವಣೆಯ ಜವಾಬ್ದಾಾರಿ ಸಭಾಧ್ಯಕ್ಷರಾಗಿರುವುದರಿಂದ ಅವರ ನಿರ್ಣಯವೇ ಅಂತಿಮ ತೀರ್ಪು ಆಗಿರುತ್ತದೆ.
ವಿಶ್ವಾಾಸಮತ ಯಾಚನೆಗೂ ಮುನ್ನ ಸಭಾಧ್ಯಕ್ಷರ ಆಯ್ಕೆೆಯಾಗಬೇಕಿದೆ. ಇಲ್ಲಿ ಕಾಂಗ್ರೆೆಸ್- ಜೆಡಿಎಸ್ ಮೈತ್ರಿಿ ಸರಳ ಬಹುಮತ ಹೊಂದಿರುವುದರಿಂದ ಇವರೇ ತಮ್ಮಲ್ಲೊೊಬ್ಬರನ್ನು ಆಯ್ಕೆೆ ಮಾಡಬಹುದು. ಸಭಾಧ್ಯಕ್ಷರು ಎಲ್ಲ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಕೆಲಸ ಮೊದಲು ಮಾಡುತ್ತಾಾರೆ. ಆನಂತರವಷ್ಟೇ ವಿಶ್ವಾಾಸಮತ ನಡೆಯುತ್ತದೆ.
published on May 18
............................................. 




ಜಿಲ್ಲೆೆಯಲ್ಲಿ ಕಾಂಗ್ರೆೆಸ್‌ಗೆ ಸೋಲು: ನೀರವ ಮೌನ

ಶಿವಮೊಗ್ಗ: ಅನಿರೀಕ್ಷಿತ ಸೋಲು ಎಂತಹವರನ್ನೂ ಕಂಗೆಡಿಸುತ್ತದೆ. ಕನಿಷ್ಠ 5 ಕ್ಷೇತ್ರವನ್ನಾಾದರೂ ಗೆಲ್ಲುತ್ತೇವೆ ಎಂದು ಹೇಳುತ್ತಿಿದ್ದ ಜಿಲ್ಲಾಾ ಕಾಂಗ್ರೆೆಸ್ ಮುಖಂಡರು ಏಕೈಕ ಸ್ಥಾಾನ ದಕ್ಕಿಿದ್ದರಿಂದ ಸ್ವಾಾಭಾವಿಕವಾಗಿಯೇ ಹತಾಶರಾಗಿದ್ದಾಾರೆ. ಹಿಂದುತ್ವದ ಅಲೆಯಲ್ಲಿ ತಾವು ಸೋತಿರುವುದು ಅವರಿಗೆ ಸ್ಪಷ್ಟವಾಗಿ ಅರಿವಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದ್ದರಿಂದ ಮೂರು ಸ್ಥಾಾನಗಳನ್ನು ಪಡೆದು ತಮ್ಮದೇ  ಸರ್ಕಾರ ರಚನೆಯಾಗಿದ್ದರಿಂದ ಸಚಿವ ಸ್ಥಾಾನ, ವಿಧಾನಸಭಾಧ್ಯಕ್ಷ ಸ್ಥಾಾನವೂ ಜಿಲ್ಲೆೆಯ ಪಾಲಾಗಿತ್ತು. ಜಿಲ್ಲೆೆಯಲ್ಲಿ ಕಾಂಗ್ರೆೆಸ್ ಬಲಿಷ್ಠವಿತ್ತು. ಸಚಿವರಾಗಲಿ, ಶಾಸಕರಾಗಲಿ ಹೆಸರು ಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸರ್ಕಾರದ ಸಾಧನೆಯ ಆಧಾರದಲ್ಲೂ ಮತವನ್ನು ಕೇಳಿದ್ದರು. ಈ ಹಿನ್ನೆೆಲೆಯಲ್ಲಿ ಕನಿಷ್ಠ  5 ಸ್ಥಾಾನವನ್ನು ಗೆಲ್ಲಬಹುದೆಂಬ ಲೆಕ್ಕಾಾಚಾರವನ್ನು ಕಾಂಗ್ರೆೆಸ್ಸಿಿಗರು ಹಾಕಿದ್ದರು.
ಆದರೆ ಚುನಾವಣೆಯಲ್ಲಿ ಆಗಿದ್ದೇ ಬೇರೆ. ಎಲ್ಲವೂ ಉಲ್ಟಾಾ ಹೊಡೆದಿದೆ. ಭದ್ರಾಾವತಿಯಲ್ಲಿ ಮಾತ್ರ ಜೆಡಿಎಸ್ ಸ್ಥಾಾನವನ್ನು ಕಾಂಗ್ರೆೆಸ್ ಕಿತ್ತುಕೊಂಡಿದೆ. ಸೊರಬ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾಾನಕ್ಕೆೆ ತೃಪ್ತಿಿಪಟ್ಟಿಿದೆ. ಸಣ್ಣಪುಟ್ಟ ವೈಮನಸ್ಸುಗಳಿದ್ದರೂ ಚುನಾವಣೆಯ ಆರಂಭದಿಂದ ಕೊನೆಯ ಕೆಲವು ದಿನಗಳವರೆಗೆ ಕಾಂಗ್ರೆೆಸ್ ಹವಾ ಜಿಲ್ಲೆೆಯಲ್ಲಿ ಚೆನ್ನಾಾಗಿಯೇ ಇತ್ತು. ಯಾವಾಗ ಪ್ರಧಾನಿ ನರೇಂದ್ರ ಮೋದಿ ಬಂದು ಹೋದರೋ ಅಲ್ಲಿಂದ ಬದಲಾವಣೆ ಆಗಿದ್ದನ್ನು ಗಮನಿಸಬಹುದು. ಹಿಂದುತ್ವದ ಆಧಾರದ ಮೇಲೆಯೇ ಜನರು ಮತ ಹಾಕಿರುವುದು ಅರಿವಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುವಕರು ಮತ್ತು ಹೊಸ ಮತದಾರರು ಇದಕ್ಕೆೆ ಹೆಚ್ಚಿಿನ ಒತ್ತು ಕೊಟ್ಟರು. ಇದರಿಂದ ಬಿಜೆಪಿ ಮೊದಲಿದ್ದ ಒಂದೆರಡು ಸ್ಥಾಾನಗಳ ಗೆಲುವಿನ ಅಂದಾಜನ್ನು ಇನ್ನೊೊಂದೆರಡಕ್ಕೇರಿಸಿಕೊಂಡಿತು ಎನ್ನಬಹುದು.
ಆದರೆ ಕಾಂಗ್ರೆೆಸ್ 6 ಸ್ಥಾಾನವನ್ನು ಸೋಲುತ್ತದೆ. ಬಿಜೆಪಿ 6 ಸ್ಥಾಾನ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕಾಂಗ್ರೆೆಸ್‌ಗೆ ಕನಿಷ್ಠ 3ರಿಂದ 4 ಸ್ಥಾಾನವಾದರೂ ದಕ್ಕಬಹುದೆಂಬ ನಿರೀಕ್ಷೆ ಇತ್ತು. ಅದರಲ್ಲೂ ತೀರ್ಥಹಳ್ಳಿಿ, ಸಾಗರ ಕೈತಪ್ಪಲಿದೆ ಎಂದು ತಿಳಿದಿರಲಿಲ್ಲ. ಮಾಜಿ ಸಚಿವ ಕಿಮ್ಮನೆ ಮತ್ತು ಕಾಗೋಡು ಗೆಲುವಿನ ವಿಶ್ವಾಾಸ ಎಲ್ಲರಲ್ಲಿತ್ತು. ಆದರೆ ಕೊನೆಯ ವಾರದಲ್ಲಾಾದ ಬದಲಾವಣೆ ಯಾರಿಗೂ ಅರಿವಾಗಲೇ ಇಲ್ಲ. ಇದರ ಒಳಪೆಟ್ಟು ಚೆನ್ನಾಾಗಿಯೇ ಕಾಂಗ್ರೆೆಸ್‌ಗೆ ಬಿತ್ತು. 
ಭದ್ರಾಾವತಿಯಲ್ಲಿ ಕಾಂಗ್ರೆೆಸ್- ಜೆಡಿಎಸ್ ಕಾದಾಟ ನಡೆಯಲಿದ್ದು, ಇಲ್ಲಿಯೂ ಸಮಾನ ಅವಕಾಶ ಎರಡೂ ಪಕ್ಷಕ್ಕಿಿತ್ತು. ಆದರೆ ಕೊನೆಯ ದಿನಗಳಲ್ಲಿ ಕಾಂಗ್ರೆೆಸ್ ಪರ ವಾತಾವರಣ ಹೆಚ್ಚು ಕಂಡುಬಂದಿತ್ತು. ಸೊರಬದಲ್ಲಿ ಬಿಜೆಪಿ- ಜೆಡಿಎಸ್ (ಸಹೋದರರ ಸವಾಲ್) ನಡೆಯಲಿದೆ ಎನ್ನುವುದನ್ನು ಮೊದಲೇ ಕಾಂಗ್ರೆೆಸಿಗರು ಅರಿತಿದ್ದರು. ಬಂಗಾರಪ್ಪ ಕುಟುಂಬದವರು ಕಾಂಗ್ರೆೆಸ್‌ನಿಂದ ಹೊರಬಿದ್ದ ನಂತರ ಕಾಂಗ್ರೆೆಸ್ ಬೇರು ಅಲ್ಲಿ ಸಡಿಲವಾಗಿದೆ. ಸಹೋದರರ ಮಧ್ಯೆೆಯ ಕಾದಾಟ (ಕಾಂಗ್ರೆೆಸ್- ಜೆಡಿಎಸ್) ಇದಾಗಿರುತ್ತಿಿತ್ತು. ಆದರೆ ಕುಮಾರ್ ಬಂಗಾರಪ್ಪ ಕಾಗೋಡು ತಿಮ್ಮಪ್ಪ ಅವರೊಂದಿಗೆ ಮುನಿಸಿಕೊಂಡು ಬಿಜೆಪಿಗೆ ಪಕ್ಷಾಂತರ ಮಾಡಿದ್ದರಿಂದ ಕಾಂಗ್ರೆೆಸ್ ಇನ್ನಷ್ಟು ಸೊರಗಿರುವುದು ಸತ್ಯ. ಪಕ್ಷವನ್ನು ಅಲ್ಲಿ ಕಟ್ಟಲು ಸಾಕಷ್ಟು ಯತ್ನವನ್ನು ಜಿಲ್ಲಾಾಧ್ಯಕ್ಷ ಸಹಿತ ಮುಖಂಡರು ಯತ್ನಿಿಸಿದ್ದರಾದರೂ ತಾಲೂಕಿನ ನಾಯಕರಾರೂ ಅಣ್ಣ-ತಮ್ಮನೆದುರು ಸೆಣೆಸುವ ಮಟ್ಟಕ್ಕೆೆ ಬೆಳೆಯದಿರುವುದು ದೊಡ್ಡ ಪೆಟ್ಟಾಾಗಿ ಪರಿಣಮಿಸಿತು.
 ಹೊಸಬರಿಗೆ ಟಿಕೆಟ್ ಕೊಟ್ಟ ಬಗ್ಗೆೆಯೂ ಪಕ್ಷದೊಳಕ್ಕೆೆ ಬೇಸರವಿತ್ತು. ಟಿಕೆಟ್‌ಗೆ ಮೊದಲೇ ಕಣ್ಣಿಿಟ್ಟಿಿದ್ದ ಹುಲ್ತಿಿಕೊಪ್ಪ ಶ್ರೀಧರ್ ಟಿಕೆಟ್ ಗಿಟ್ಟಿಿಸಿದ್ದ ರಾಜು ತಲ್ಲೂರು ವಿರುದ್ದ ಆರಂಭದಲ್ಲೇ ಗುಡುಗಿದ್ದು ಇದಕ್ಕೆೆ ಸಾಕ್ಷಿಯಾಗಿತ್ತು. ಆದರೆ ಇದು ಬಹಿರಂಗವಾಗಿ ಆನಂತರ ಕಾಣಿಸಿಕೊಳ್ಳಲಿಲ್ಲವಾದರೂ ಬೂದಿ ಮುಚ್ಚಿಿದ ಕೆಂಡದಂತಿತ್ತು. ಇನ್ನಾಾದರೂ ಪಕ್ಷದ ನಾಯಕರು ಸೊರಬದ ಮಟ್ಟಿಿಗೆ ಇನ್ನಷ್ಟು ಕೆಲಸ ಮಾಡಲೇಬೇಕಿದೆ. ಇಲ್ಲವಾದಲ್ಲಿ ಸಂಘಟನೆಗೆ ಇನ್ನಷ್ಟು ಗೆದ್ದಲು ಹತ್ತುವ ಸಂಭವವಿದೆ. ವೈಮನಸ್ಸು, ಅಂತಃಕಲಹವನ್ನು ಬದಿಗೊತ್ತಿಿ ಉತ್ತಮ ನಾಯಕನನ್ನು ಈಗಿನಿಂದಲೇ ಬೆಳೆಸುವ ಕೆಲಸವನ್ನು ಸೊರಬದ ಮಟ್ಟಿಿಗೆ ಮಾಡುವ ಅವಶ್ಯಕತೆ ತುರ್ತಾಗಿದೆ.
ತೀರ್ಥಹಳ್ಳಿಿಯಲ್ಲಿ ಕಿಮ್ಮನೆ ರತ್ನಾಾಕರ್ ಅವರ ಅಭಿವೃದ್ಧಿಿ ಕೆಲಸಗಳೆಲ್ಲ ಕಣ್ಣುಕುಕ್ಕುವಂತಹವಾಗಿದ್ದರೂ ಜನರು ಮಾತ್ರ ಅವರ ಆಯ್ಕೆೆಗೆ ಮುಂದಾಗಲಿಲ್ಲ. ಪ್ರಾಾಮಾಣಿಕ, ಸಜ್ಜನ ಎಂಬ ಹೆಸರು ಗಿಟ್ಟಿಿಸಿದ್ದರೂ ಅಭಿವೃದ್ಧಿಿ ಕಾರ್ಯ ಕೈಹಿಡಿಯಲಿಲ್ಲ. ಜೆಡಿಎಸ್ ಅಭ್ಯರ್ಥಿ ಕಾಂಗ್ರೆೆಸ್‌ನ ಮತವನ್ನು ಪಡೆದಿದ್ದು ಮತ್ತು ಹಿದುಂತ್ವದ ಒಂದಷ್ಟು ಮತಗಳು ಆರಗ ಜ್ಞಾಾನೇಂದ್ರ ಪರವಾಗಿದ್ದು ಕಾಂಗ್ರೆೆಸ್ ಸೋಲಿಗೆ ಕಾರಣವಾಯಿತು. ಶಿವಮೊಗ್ಗ ಗ್ರಾಾಮಾಂತರದಲ್ಲಿ ಮಾಜಿ ಶಾಸಕ ಕರಿಯಣ್ಣ ಅವರ ವರ್ಚಸ್ಸಿಿನ ಮೇಲೆ ಅವರ ಪುತ್ರ ಸ್ಪರ್ಧಿಸಿದ್ದರಾದರೂ ಮತದಾರರು ಅವರನ್ನು ಗೆಲ್ಲಿಸಲಿಲ್ಲ. ಇಲ್ಲಿಯೂ ಹಿಂದುತ್ವ ಕೆಲಸ ಮಾಡಿದ್ದು ನಿಜ.
 ಕಾಂಗ್ರೆೆಸ್ಸಿಿಗರು ಸೋಲಿಗೆ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡುವ ಬದಲು ಪಕ್ಷವನ್ನು ಸಂಘಟಿಸುವುದೇ ಮೇಲೆಂದು ಅದರ ನಾಯಕರು ಅರಿಯಬೇಕಿದೆ. ಸೋಲಿನಿಂದ ಧೈರ್ಯಗುಂದದೆ, ಒಬ್ಬರನ್ನು ಒಬ್ಬರು ದೂರದೆ, ದ್ವೇಷ ಸಾಧಿಸದೆ ಮುಂದಿನ ಚುನಾವಣೆಗಳಿಗೆ ಸಿದ್ಧರಾಗುವತ್ತ ಹೆಜ್ಜೆೆ ಹಾಕಬೇಕಿದೆ.
published on May 19-2018
.................................
ಪೊಲೀಸರಿಂದ ತಪ್ಪಿಿಸಿಕೊಂಡರೂ ಸಿಸಿ ಕ್ಯಾಾಮರಾ ಬಿಡೊಲ್ಲ
   ಮನೆ ಬಾಗಿಲಿಗೆ ಬರುತ್ತಿಿದೆ ದಂಡದ ಪತ್ರ 



ಕಾನೂನಿನಿಂದ ತಪ್ಪಿಿಸಿಕೊಳ್ಳಲು, ಪೊಲೀಸರಿಗೆ ಟೋಪಿ ಹಾಕಲು ಯಾವಾಗಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಸಿಕ್ಕಿಿಬೀಳಲೇಬೇಕು. ತಪ್ಪಿಿಸಿಕೊಳ್ಳುವವರು ಮತ್ತು ಕಾನೂನು ಇರುವುದೇ ಉಲ್ಲಂಘನೆಗೆ  ಎನ್ನುವ ಮನಃಸ್ಥಿಿತಿಯವರು ಜಾಸ್ತಿಿಯಾಗುತ್ತಿಿರುವುದರಿಂದ ಅತ್ಯಾಾಧುನಿಕ ತಂತ್ರಜ್ಞಾಾನ ಇಲ್ಲೂ ಬಳಕೆಯಾಗುವ ಸ್ಥಿಿತಿ ಎದುರಾಗಿದೆ.  


ಹೆಲ್ಮೆೆಟ್ ಕಡ್ಡಾಾಯ ಮಾಡಿದ್ದರೂ ಪಾಲಿಸುವವರ ಸಂಖ್ಯೆೆ ವಿರಳ. ಇಬ್ಬರಿಗಿಂತ ಅಧಿಕ ಪ್ರಯಾಣಿಕರು ಬೈಕಿನಲ್ಲಿ ತೆರಳಬಾರದೆಂದಿದ್ದರೂ ಮೂರು- ನಾಲ್ಕು ಜನ ಸಾಗುವವರಿದ್ದಾಾರೆ. ಏಕಮುಖ ಸಂಚಾರವಿದ್ದರೂ ಅದನ್ನು ಪಾಲಿಸುವವರು ಕಡಿಮೆ. ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಮಾಡುವುದು, ಅತಿ ವೇಗದಲ್ಲಿ ವಾಹನ ಚಲಾಯಿಸುವುದು ಮೊದಲಾದ ಕೃತ್ಯಗಳನ್ನು ತಡೆಗಟ್ಟಲು ಪೊಲೀಸರು ಎಷ್ಟೇ ಪ್ರಯತ್ನಿಿಸಿದರೂ, ಹಿಡಿದು ದಂಡ ಹಾಕಿದರೂ ಸುಲಭದಲ್ಲಿ ಬಹುತೇಕ ವಾಹನ ಸವಾರರು ಅರ್ಥಮಾಡಿಕೊಂಡಿಲ್ಲ.
ಈ ಸಂಬಂಧ ಅವರೊಂದಿಗೆ ವಾಗ್ವಾಾದ ನಡೆಸುವವರೂ ಕಡಿಮೆ ಏನಿಲ್ಲ. ಪೊಲೀಸರು ಹಿಡಿಯಬಂದರೆ ತಪ್ಪಿಿಸಿಕೊಂಡು ಓಡಿಹೋಗಿ ಬಿದ್ದು ಪೆಟ್ಟು ಮಾಡಿಕೊಂಡವರೂ ಇದ್ದಾಾರೆ. ಮತ್ತೆೆ ಪೊಲೀಸರೇ ಅಡ್ಡ ಹಾಕಿ ಕೆಡವಿದರೆನ್ನುವ ಆರೋಪ ಹೊರಿಸಿರುವ ಪ್ರಕರಣವೂ ಇದೆ. ಇದನ್ನೆೆಲ್ಲ ಕೇವಲ ಪೊಲೀಸರಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಸಾರ್ವಜನಿಕರು ವಾಹನ ಚಲಾಯಿಸುವಾಗ ಕನಿಷ್ಠ ನಿಯಮವನ್ನು ಪಾಲಿಸದಿದ್ದರೆ ಅವರನ್ನು ಸರಿದಾರಿಗೆ ತರುವವರಾದರೂ ಯಾರು?
ಈ ಹಿನ್ನೆೆಲೆಯಲ್ಲಿ ಬಹುತೇಕ ದೊಡ್ಡ ನಗರಗಳಲ್ಲಿ ಅಟೊಮೇಶನ್ ಕೇಂದ್ರ ತೆರೆದು ಸಿಸಿ ಕ್ಯಾಾಮರಾ ಮೂಲಕ ಚಾಲಕರ ನಿಯಮ ಉಲ್ಲಂಘನೆಯನ್ನು ಗಮನಿಸಿ ದಂಡ ಹಾಕುವ ಯೋಜನೆ ಜಾರಿಯಲ್ಲಿದೆ. ಅದು ಈಗ ಶಿವಮೊಗ್ಗದಲ್ಲೂ ಮೇ 5ರಿಂದ ಜಾರಿಯಾಗಿದೆ. ನಗರದಲ್ಲಿ ವಾಹನಗಳಿಗೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವ ವಾಹನ ಮತ್ತು ಚಾಲಕರಿಗೆ ದಂಡ ವಿಧಿಸುವ ತಾಂತ್ರಿಿಕ ಆಧಾರಿತ ಟ್ರಾಾಫಿಕ್ ಎನ್‌ಫೋರ್ಸ್‌ಮೆಂಟ್ ಮಾಡುವ ಸದುದ್ದೇಶದಿಂದ ನಗರದಲ್ಲಿ ಆಟೊಮೇಶನ್ ಕೇಂದ್ರವನ್ನು ತೆರೆಯಲಾಗಿದೆ
  ವಾಹನ ಸಂಚಾರ ದಟ್ಟಣೆ ದಿನೇದಿನೇ ಹೆಚ್ಚಳವಾಗುತ್ತಿಿದ್ದು, ಸಂಚಾರ ವ್ಯವಸ್ಥೆೆಯನ್ನು ನಿಯಂತ್ರಿಿಸುವುದು ಕಷ್ಟಕರವಾಗುತ್ತಿಿದೆ. ಆದ್ದರಿಂದ  ಆಟೊಮೇಶನ್ ತಂತ್ರಾಾಂಶ ಅಭಿವೃದ್ಧಿಿಪಡಿಸಿ, ಕಾರ್ಯರೂಪಕ್ಕೆೆ ತರಲಾಗಿದೆ. ಮೇ 5ರಿಂದ 28ರವರೆಗೆ ಸುಮಾರು 8,700ಚಾಲಕರಿಗೆ  ನೋಟೀಸ್‌ಗಳನ್ನು ವಾಹನ ನೋಂದಣಿಯಾಗಿರುವ ವಿಳಾಸಕ್ಕೆೆ ಕಳುಹಿಸಿಕೊಡಲಾಗಿದೆ.
ಇನ್ಲಾಾಂಡ್ ಪತ್ರದ ರೀತಿಯಲ್ಲಿ ಇಲಾಖೆ ಪತ್ರ ರೂಪಿಸಿದೆ. ಅದರಲ್ಲಿ ಚಾಲಕ ಉಲ್ಲಂಘನೆ ಮಾಡುತ್ತಿಿರುವ ಚಿತ್ರವನ್ನೂ ಸಹ ಸಿಸಿ ಕ್ಯಾಾಮರಾ ಸಹಾಯದಿಂದ ಪಡೆದು ಹಾಕಲಾಗುತ್ತಿಿದೆ. ಜೊತೆಗೆ ಉಲ್ಲಂಘನೆಯನ್ನು ಮಾಡಿದ ಸ್ಥಳ, ದಿನಾಂಕ, ಸಮಯ, ವಾಹನದ ಸಂಖ್ಯೆೆಯನ್ನು ಮುದ್ರಿಿಸಲಾಗುವುದು. ಆರ್‌ಟಿಓ ಜೊತೆಗೆ ಇದಕ್ಕೆೆ ಲಿಂಕ್ ಇರುವುದರಿಂದ ವಾಹನ ಸಂಖ್ಯೆೆಯನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿದರೆ  ವಾಹನದ ಮಾಲಕನ ಅಥವಾ ಚಾಲಕನ ಸಂಪೂರ್ಣ ವಿಳಾಸ ಬರುತ್ತದೆ. ಅದೇ ವಿಳಾಸಕ್ಕೆೆ ಪತ್ರ ಕಳುಹಿಸಲ್ಪಡುತ್ತದೆ.
ಇಲ್ಲಿಯವರೆಗೆ 1267 ನೋಟೀಸುಗಳಿಗೆ ಸುಮಾರು 1,27,500ರೂ.ಗಳ ದಂಡ ಪಾವತಿಯಾಗಿದೆ. ನೋಟೀಸುಗಳಿಗೆ ದಂಡವನ್ನು ಜಿಲ್ಲಾಾ ಪೋಲೀಸ್ ವರಿಷ್ಠಾಾಧಿಕಾರಿ ಕಚೇರಿಯಲ್ಲಿ ಅಥವಾ ಜೂನ್ 1ರಿಂದ ನಗರದ ಶಿವಮೊಗ್ಗ 1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ದಂಡದ ಮೊತ್ತ 100 ರೂ. ಇದು ಕಡಿಮೆ ಎನಿಸಿದರೂ ಇದನ್ನು ಕಟ್ಟುವುದು ಅನಿವಾರ್ಯ. ಜೊತೆಗೆ ಮೂರಕ್ಕಿಿಂತ ಹೆಚ್ಚು ಬಾರಿ ಅದೇ ಕೃತ್ಯ ಎಸಗಿದಲ್ಲಿ ಆತನ ಚಾಲನಾ ಪರವಾನಿಗೆಯನ್ನು ಪೊಲೀಸ್ ಇಲಾಖೆಯ ಮನವಿ ಮೇರೆಗೆ ಆರ್ಟಿಿಓ ರದ್ದುಗೊಳಿಸುತ್ತಾಾರೆ. ಈ ನಿಯಮ ಚಾಲಕರಲ್ಲಿ ಹೆದರಿಕೆ ಉಂಟುಮಾಡಿದೆ.
ಇದರಲ್ಲಿ ಪೊಲೀಸರ ಕಣ್ತಪ್ಪಿಿಸಿ ಬಂದೆ ಎಂದು ಜಂಭದಿಂದ ಹೇಳಿಕೊಳ್ಳುವಂತಿಲ್ಲ. ಸಿಸಿ ಕ್ಯಾಾಮರಾ ಕಣ್ತಪ್ಪಿಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತು ಚಾಲಕರು ಸಂಯಮದಿಂದ, ಕಾನೂನು ಪ್ರಕಾರ ಚಲಾಯಿಸಿದರೆ ದಂಡದಿಂದಲೂ, ಚಾಲನಾ ಪರವಾನಿಗೆ ರದ್ದಾಾಗುವಿಕೆಯಿಂದಲೂ ಮುಕ್ತಿಿ ಪಡೆಯಬಹುದು. ಕಾನೂನಿನಿಂದ ತಪ್ಪಿಿಸಿಕೊಳ್ಳಲು, ಪೊಲೀಸರಿಗೆ ಟೋಪಿ ಹಾಕಲು ಯಾವಾಗಲೂ ಸಾಧ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ತಪ್ಪು ಮಾಡಿದವನು ಒಂದಲ್ಲ ಒಂದು ದಿನ ಸಿಕ್ಕಿಿಬೀಳಲೇಬೇಕು. ತಪ್ಪಿಿಸಿಕೊಳ್ಳುವವರು ಮತ್ತು ಕಾನೂನು ಇರುವುದೇ ಉಲ್ಲಂಘನೆಗೆ  ಎನ್ನುವ ಮನಃಸ್ಥಿಿತಿಯವರು ಜಾಸ್ತಿಿಯಾಗುತ್ತಿಿರುವುದರಿಂದ ಅತ್ಯಾಾದುನಿಕ ತಂತ್ರಜ್ಞಾಾನ ಇಲ್ಲೂ ಬಳಕೆಯಾಗುವ ಸ್ಥಿಿತಿ ಎದುರಾಗಿದೆ.


ಶಿವಮೊಗ್ಗ ನಗರದಲ್ಲಿ ಅಟೊಮೇಶನ್ ತಂತ್ರಾಾಂಶ ಮೇ 5ರಿಂದ ಆರಂಭವಾಗಿದೆ. ಆದರೆ ಎಪ್ರಿಿಲ್ 14ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನಗರಕ್ಕೆೆ ಆಗಮಿಸಿದ್ದ ವೇಳೆ  ಉದ್ಘಾಾಟನೆ ನಡೆಸಿದ್ದರು. ಇಲ್ಲಿಯವರೆಗೆ ಒಟ್ಟು 8700 ಪ್ರಕರಣ ದಾಖಲಾಗಿದೆ. ಅವುಗಳಲ್ಲಿ 1267 ನೋಟೀಸುಗಳಿಗೆ ಸುಮಾರು 1,27,500ರೂ.ಗಳ ದಂಡ ಪಾವತಿಯಾಗಿದೆ. ನೋಟೀಸುಗಳಿಗೆ ದಂಡವನ್ನು ಜಿಲ್ಲಾಾ ಪೋಲೀಸ್ ವರಿಷ್ಠಾಾಧಿಕಾರಿ ಕಚೇರಿಯಲ್ಲಿ, ನಗರದ ವಿದ್ಯಾಾನಗರದ ಪೂರ್ವ ಸಂಚಾರಿ ಠಾಣೆ, ಬಸ್ ನಿಲ್ದಾಾಣದ ಬಳಿ ಇರುವ ಪಶ್ಚಿಿಮ ಸಂಚಾರಿ ಠಾಣೆ , ಭದ್ರಾಾವತಿಯ ಸಂಚಾರಿ ಪೊಲೀಸ್  ಠಾಣೆಯಲ್ಲಿ  ಅಥವಾ ಜೂನ್ 1ರಿಂದ ನಗರದ ಶಿವಮೊಗ್ಗ 1 ಕೇಂದ್ರಗಳಲ್ಲಿ ಪಾವತಿಸಬಹುದಾಗಿದೆ. ಆನ ಲೈನನ್‌ಲಲ್ಲೂ ತಿತಿತಿ.ಞಚಿಡಿಟಿಚಿಣಚಿಞಚಿಟಿ..ಟಿ ಪಾವತಿಸಬಹುದಾಗಿದೆ.
-ಅಭಿನವ್ ಖರೆ, ಜಿಲ್ಲಾಾ ಪೊಲೀಸ್ ವರಿಷ್ಠ

Published on 30th May
...........................................................