Wednesday, 13 June 2018

ಬಾನಾಡಿಗಳ ಮೂಕರೋಧನ
  ಪ್ರತಿವರ್ಷವೂ ಆತಂಕದಲ್ಲಿ ಬೆಳ್ಳಕ್ಕಿಿಗಳ ಹಿಂಡು





ಶಿವಮೊಗ್ಗ: ಎಂತಹ ದುರಂತ ನೋಡಿ. ಪ್ರತಿ ವರ್ಷ ಎಲ್ಲಿಂದಲೋ  ಸಂತಾನಕ್ಕೆೆಂದೇ ಹಾರಿ ಬಂದು ಇಲ್ಲಿ ಆತಂಕದ ಕ್ಷಣವನ್ನು ಎದುರಿಸುವುದು. ಕೆಲವೊಮ್ಮೆೆ ಮೊಟ್ಟೆೆ ಸಹಿತ ನದಿ ಪಾಲಾಗುವುದು. ಯಾರ ಶಾಪವೋ ಈ ಬಾನಾಡಿಗಳಿಗೆ.
ಮಂಡಗದ್ದೆೆ ಎಂದಾಕ್ಷಣ ನೆನಪಾಗುವುದೇ ಪಕ್ಷಿಧಾಮ. ಪಕ್ಷಿಧಾಮಕ್ಕೆೆ ಹೇಳಿ ಮಾಡಿಸಿದ ಸ್ಥಳ ಇದು. ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವಂತೆ ಯಾವುದೋ ದೇಶದಿಂದ ಹಾರಿ ಬಂದು ಇಲ್ಲಿನ ತುಂಗಾನದಿ ತೀರದಲ್ಲಿ  ಬೆಳ್ಳಕ್ಕಿಿಗಳು (ಬಾನಾಡಿಗಳು) ಸಂತಾನ ನಡೆಸುತ್ತವೆ. ಆದರೆ ಪ್ರವಾಹ ಎದುರಾಗುತ್ತದೆ, ಸಂತಾನ ನಾಶವಾಗಬಹುದು ಎನ್ನುವುದು ಅವುಗಳಿಗೆ ಹೇಗೆ ಗೊತ್ತಾಾಗಬೇಕು.
ಪ್ರತಿ ವರ್ಷ ಈ ಬಾನಾಡಿಗಳ ಗೋಳು ಇದು. ಮುಂಗಾರು ಆರಂಭವಾಗುವ ವೇಳೆ ಸಾವಿರಾರು ಸಂಖ್ಯೆೆಯಲ್ಲಿ ಆಗಮಿಸುತ್ತವೆ. ಕೆಲವೇ ತಿಂಗಳಲ್ಲಿ  ಸಂತಾನ ಮುಗಿಸಿ ಮತ್ತೆೆ ಸ್ವದೇಶಕ್ಕೆೆ ಮರಳುತ್ತವೆ. ಆದರೆ ಇಲ್ಲಿ ಅವು ಸುಖ ಸಂತಾನ ಕಾಣುವುದಕ್ಕಿಿಂತ ಆತಂಕದ ಕ್ಷಣ ಎದುರಿಸುವುದೇ ಹೆಚ್ಚು.
ಮಳೆ ಹೆಚ್ಚಾಾದಂತೆ ತುಂಗಾ ನದಿಯಲ್ಲಿ ನೀರಿನ ಪ್ರವಾಹ ಏರುತ್ತದೆ. ಪ್ರತಿವರ್ಷ ಹೂಳು ತುಂಬಿ ನದಿಯಲ್ಲಿ ಆಳವೇ ಇಲ್ಲ ಎನ್ನುವಂತಾಗಿರುವುದರಿಂದ  ಪ್ರವಾಹ ಬರುವುದು ಸಾಮಾನ್ಯವಾಗಿದೆ. ಇದ್ಯಾಾವುದರ ಪರಿವೇ ಇಲ್ಲದೆ ಪಕ್ಷಿಗಳು ಇದೇ ಋತುಮಾನದಲ್ಲಿ ಮೊಟ್ಟೆೆ ಇಡುವ ಕೆಲಸ ಮಾಡುತ್ತವೆ. ಪ್ರವಾಹ ಏರಿದಂತೆ ಗಿಡ-ಮರದ ತುದಿಯವರೆಗೆ ಪಕ್ಷಿಗಳು ಏರುತ್ತವೆ. ರಕ್ಷಣೆಗಾಗಿ ಅರಚುತ್ತವೆ, ಕಿರುಚುತ್ತವೆ. ತಾವೇ ನೇಯ್ದ ಗೂಡನ್ನು, ಅದರಲ್ಲಿರುವ ಮೊಟ್ಟೆೆಯನ್ನೋೋ, ಮರಿಯನ್ನೋೋ ತುಂಗೆ ಆಪೋಶನ ತೆಗೆದುಕೊಳ್ಳುವುದನ್ನು ಕಂಡು ಮಮ್ಮಲ ಮರುಗುತ್ತವೆ, ಮೂಕರಾಗಿ ರೋಧಿಸುತ್ತವೆ. ಈ ವರ್ಷವೂ ಕಳೆದೆರಡು ದಿನದಿಂದ ಬಾನಾಡಿಗಳು ಆತಂಕದ ಕ್ಷಣದಲ್ಲಿವೆ. ಯಾವಾಗ ಪ್ರವಾಹ ಎದುರಾಗುತ್ತದೆಯೊ ಎಂಬ ಭಯದಿಂದ ಅವು ನಡುಗುತ್ತಿಿವೆ.
 ರೆಕ್ಕೆೆಯನ್ನು ಪಟಪಟನೆ ಬಡಿದು ತನ್ನ ಸಂಗಡಿಗರನ್ನು ಎಚ್ಚರಿಸುವುದು, ಅತ್ತಿಿಂದಿತ್ತ, ಮೇಲೆ- ಕೆಳಗೆ ಹಾರುವುದು ಕಂಡುಬರುತ್ತಿಿದೆ. ಒಂದು ಪಕ್ಷಿಗೆ ಆಪತ್ತು ಎದುರಾದರೂ ಅಲ್ಲಿರುವ ಸಾವಿರಾರು ಬಾನಾಡಿಗಳುು ಒಂದುಗೂಡುತ್ತವೆ, ಶೋಕಿಸುತ್ತವೆ. ಯಾರಿಗೂ ತೊಂದರೆ ನೀಡದೆ, ಬಾನಿನಲ್ಲಿ ಹಾರಾಡುವಾಗ ಚಿತ್ತಾಾರ ಬಿಡಿಸಿದಂತೆ ಜನರ ಮನ ತಣಿಸುವ, ಪ್ರವಾಸಿಗರನ್ನು ತಮ್ಮ ಹಾಲಿನಂತಹ ಬಣ್ಣದಿಂದ ಆಕರ್ಷಿಸುತ್ತ, ಬಳುಕುವ ನಡಿಗೆಯಿಂದ ಮುದಗೊಳಿಸುವ ಈ ಪಕ್ಷಿಗಳ ಮರಿ, ಗೂಡು ನೀರುಪಾಲಾಗುವಾಗ ಸ್ಥಳೀಯರೂ ಸಹ ಅವುಗಳಿಗೆ ಎದುರಾಗುವ ಸಂಕಟವನ್ನು ನೋಡಲಾಗದೆ ವ್ಯಥೆ ಪಡುತ್ತಾಾರೆ.
ಪಕ್ಷಿ ತಜ್ಞರ ಪ್ರಕಾರ, ಇಲ್ಲಿಗೆ ಆಸ್ಟ್ರೇಲಿಯಾ, ಸೈಬೀರಿಯಾ, ಶ್ರೀಲಂಕಾ ಮೊದಲಾದ ದೇಶಗಳಿಂದ ಬಾನಾಡಿಗಳು ಅರ್ಥಾತ್ ಬೆಳ್ಕಕ್ಕಿಿಗಳು ಹಾರಿಬರುತ್ತವೆ. ಇಲ್ಲಿನ ವಾತಾವರಣ ಸಂತಾನೋತ್ಪತ್ತಿಿಗೆ ಅನುಕೂಲ ಎನ್ನುವ ಅಂಶವೂ ಇದಕ್ಕೆೆ ಕಾರಣವಿರಬಹುದು. ಪ್ರತಿವರ್ಷ ಇಲ್ಲಿಗೆ ಬರುವ ಬೆಳ್ಳಕ್ಕಿಿಗಳ ಸಂಖ್ಯೆೆ ಹೆಚ್ಚುತ್ತಲೇ ಇದೆ. ಇಲ್ಲಿನ ನದಿ ದಡದಲ್ಲಿ ಬೃಹತ್ ಮರಗಳಿರುವುದು, ಅವು ಬೀಸು ಬೀಸಾಗಿ ಹರಡಿಕೊಂಡಿರುವುದು ಗೂಡು ಕಟ್ಟಲು ಅನುಕೂಲವಾಗಿದೆ. ಇದರಿಂದ ಪ್ರತಿ ವರ್ಷ ಹೆಚ್ಚಿಿನ ಸಂಖ್ಯೆೆಯಲ್ಲಿ ಇಲ್ಲಿಗೆ ಅವು ಬರುತ್ತಿಿವೆ ಎನ್ನುತ್ತಾಾರೆ ಸ್ಥಳೀಯರು.
published o12th june
.................................. 

No comments:

Post a Comment