ಹೊಗೆಮಂಜಿನಲ್ಲಿ ಮುಳುಗಿದೆ ದೆಹಲಿ
ದೆಹಲಿ ನಾಲ್ಕು ದಿನದಿಂದ ಕತ್ತಲಲ್ಲಿ ಮುಳುಗಿದೆ. ವಿಪರೀತ ಹೊಗೆ, ದಟ್ಟಮಂಜು, ಎಡೆಬಿಡದೆ ಬೀಳುತ್ತಿದೆ. 18 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಮಾರಕವಾದ ಹೊಗೆಮಂಜಿನ ಸಮಸ್ಯೆ ಎದುರಾಗಿದೆ. ಇದರಿಂದ ಅಸ್ತಮಾ, ಉಸಿರಾಟದ ಸಮಸ್ಯೆ, ಶ್ವಾಸಕೋಶಗಳ ಊತ ಮೊದಲಾದ ತೀವ್ರ ಸ್ವರೂಪದ ಕಾಯಿಲೆ ಹೆಚ್ಚಾಗಿದೆ. ಹೆಚ್ಚುತ್ತಿರುವ ವಾಹನಗಳು ವಾತಾವರಣವನ್ನು ನಾಶ ಮಾಡುತ್ತಿದೆ. ದೆಹಲಿಯ ಸದ್ಯದ ಪರಿಸ್ಥಿತಿ ದೇಶದ ಇತರ ಮಹಾನಗರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ದೆಹಲಿಯ ಜನ ಈ ನಗರದ ಬದುಕೇ ಬೇಡ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
* ದತ್ತಾತ್ರೇಯ ಹೆಗಡೆ
ದೇಶದ ರಾಜಧಾನಿ ನಾಲ್ಕು ದಿನಗಳಿಂದ ಹೊಗೆ, ಧೂಳು ಮತ್ತು ಮಂಜಿನಿಂದ ಸಂಪೂರ್ಣವಾಗಿ ಆವರಿಸಿದ್ದು, ಜನರು ಪರದಾಡುತ್ತಿದ್ದಾರೆ. ಇನ್ನೊಂದೆಡೆ ಉಸಿರಾಡುವುದೇ ದೊಡ್ಡ ಸಮಸ್ಯೆಯಾಗಿದೆ. ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಮಾಡಲಾಗಿದೆ ಎಂದು ಸ್ವತಃ ನ್ಯಾಯಾಲಯವೇ ತರಾಟೆಗೆ ತೆಗೆದುಕೊಂಡಿದೆ.
ಇದರಿಂದ ವಾಹನಗಳ ಸಂಚಾರ ದುಸ್ತರವಾಗಿದೆ. ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ವಾಹನಗಳು ದಾರಿ ಕಾಣದೆ ಪರಸ್ಪರ ಡಿಕ್ಕಿ ಹೊಡೆದುಕೊಳ್ಳುತ್ತಿವೆ. ಜನರು ಸಹ ಓಡಾಡುವುದು ಅಷ್ಟೇ ಕಷ್ಟವಾಗಿದೆ. ಪರಿಸ್ಥಿತಿ ಎಷ್ಟೊಂದು ಗಂಭೀರ ಮತ್ತು ಚಿಂತಾಜನಕವಾಗಿದೆ ಎಂದರೆ ಪ್ರತಿ ವರ್ಷ ನವೆಂಬರ್ನಲ್ಲಿ ಇದೇ ಸ್ಥಿತಿ ಎದುರಾಗುವ ಸಂಭವವಿದೆ. ಕಳೆದ ನವೆಂಬರ್ ನಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು.
ಬೆಳಿಗ್ಗೆಯಿಂದ ಸಂಜೆಯವರೆಗೆ ಎಲ್ಲಿ ನೋಡಿದರೂ ಹೊಗೆ, ಮಂಜು ಮುಸುಕಿದ ವಾತಾವರಣ, ಸೂರ್ಯನ ದರ್ಶನವೇ ಇಲ್ಲ. ಹೊಗೆ ಬಿಟ್ಟರೆ ಮತ್ತೇನೂ ಕಾಣಿಸುತ್ತಿಲ್ಲ. ಯಾರೂ ಮನೆಯಿಂದ ಹೊರಕ್ಕೆ ಬಾರದಂತಾಗಿದೆ. ಮನೆ ಒಳಕ್ಕೆ ಇದ್ದರೂ ಉಸಿರಾಡಲು ಶುಭ್ರ ಗಾಳಿ ಇಲ್ಲ. ಇಲ್ಲಿರುವ ಸುಮಾರು 6 ಸಾವಿರ ಶಾಲೆಗೆ ಒಂದು ವಾರ ರಜೆ ಘೋಷಿಸಲಾಗಿದೆ. ಆದಷ್ಟು ಮನೆಯ ಒಳಗೇ ಇರುವಂತೆ ಜನರಿಗೆ ಸೂಚಿಸಲಾಗುತ್ತಿದೆ.
ದೈನಂದಿನ ಚಟುವಟಿಕೆ ನಡೆಯಲೇಬೇಕಿದೆ. ಆದರೆ ಇದೂ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನ ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಇದು ಸ್ವಲ್ಪ ಸುರಕ್ಷಿತವೆನಿಸಿದೆ. ಜನರು ತಮ್ಮ ಭವಿಷ್ಯದ ಆರೋಗ್ಯದ ಬಗ್ಗೆ ಈಗ ಚಿಂತಿತರಾಗುವಂತಾಗಿದೆ. ಏಕೆಂದರೆ ದಿನೇ ದಿನೇ ಹೊಗೆ, ಮಂಜಿನ ಪ್ರಮಾಣ ಹೆಚ್ಚಿದರೆ ಆರೋಗ್ಯ ಏುರುಪೇರಾಗುವುದು ನಿಶ್ಚಿತ ಎನ್ನುತ್ತಾರೆ ವೈದ್ಯರು.
ದೆಹಲಿಯ ಹಿರಿಯ ವೈದ್ಯ ಅರವಿಂದ್ಕುಮಾರ್ ಎನ್ನುವವರು, 35 ವರ್ಷದಿಂದ ತಾನು ವೈದ್ಯ ವೃತ್ತಿಯಲ್ಲಿದ್ದು, ಇಂತಹ ಗಂಭೀರ ಸ್ಥಿತಿ ನೋಡಿರಲಿಲ್ಲ. ಇದು ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಮಾರಕವಾಗಿದೆ. ಜನರು ಮೊದಲು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಆದಷ್ಟು ಮನೆಯೊಳಗೆ ಇರುವುದು ಒಳ್ಳೆಯದು. ಸರ್ಕಾರಿ ಕಚೇರಿಗಳನ್ನು ಕೆಲವು ದಿನಗಳ ಮಟ್ಟಿಗಾದರೂ ಮುಚ್ಚಬೇಕು. ಹೊರಗೆ ಜನರು ಅವಶ್ಯಕ ಕೆಲಸದ ಹೊರತಾಗಿ ತಿರುಗಾಡದಂತೆ ಮನವಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಸ್ವಚ್ಛ ಉಸಿರಿಗಾಗಿ ಜನರು ಪರದಾಡುವುದು ಕಂಡುಬರುತ್ತಿದೆ. ತಲೆನೋವು, ಕಣ್ಣು ಉರಿ ಮತ್ತು ಅಸ್ತಮಾ ಸಂಖ್ಯೆ ಹೆಚ್ಚುತ್ತಿದೆ. ದಿನೇ ದಿನೇ ಆಸ್ಪತ್ರೆಗೆ ಹೊರರೋಗಿಳಾಗಿ ಬರುತ್ತಿರುವವರ ಸಂಖ್ಯೆ ಏರುತ್ತಿದೆ. ಈ ಎಲ್ಲವೂ ಮಾನಸಿಕ ಖಿನ್ನತೆಗೆ ದಾರಿ ಮಾಡಿಕೊಡಲಿವೆ ಎನ್ನುತ್ತವೆ ವೈದ್ಯಕೀಯ ಸಂಸ್ಥೆಗಳು.
ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ಶೇ. 15ರಿಂದ 20ರಷ್ಟು ಮಾತ್ರ ಪರಿಸರ ಮಾಲಿನ್ಯ ಪ್ರಭಾವದಿಂದ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಸದ್ಯ ಇದು ಶೇ. 60ಕ್ಕೇರಿದೆ. ಅತಿ ದೊಡ್ಡ ಸಮಸ್ಯೆ ಎದುರಾಗಿರುವುದು ಶ್ವಾಸೋಚ್ಛಾಸದ ಮೇಲೆ. ಈ ವರ್ಷ ಉಸಿರಾಟದ ಸಮಸ್ಯೆ ಎನ್ನುತ್ತ ಬರುವವರೇ ಜಾಸ್ತಿಯಾಗಿದ್ದಾರೆ, ಇದರೊಂದಿಗೆ ಕೆಮ್ಮು, ಕಫ ಮತ್ತು ಸೀನುವಿಕೆ ಸಹ ಹೆಚ್ಚಾಗಿದೆ. ಶ್ವಾಸನಾಳಗಳ ಊತದ ಬಗ್ಗೆಯೂ ವರದಿಯಾಗುತ್ತಿದೆ. ಇದಕ್ಕೆಲ್ಲ ಇತ್ತೀಚೆಗೆ ಕಾಣಿಸಿಕೊಂಡಿರುವ ಹೊಗೆ ಮತ್ತು ಮಂಜಿನ ಮಿಶ್ರಣದ ವಾತಾವರಣ (ಹೊಗೆಮಂಜು) ಎನ್ನುತ್ತಾರೆ ಅಲ್ಲಿನ ವೈದ್ಯರು.
ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಮಾಲಕರು ಸಹ ಅತಿ ಕಡಿಮೆ ದರದ ಇಂಧನವನ್ನೇ ಬಯಸುತ್ತಾರೆ. ಅದರಲ್ಲೂ ಡೀಸೆಲ್ ಬಳಕೆಯೇ ಹೆಚ್ಚುತ್ತಿದೆ. ಪ್ರತಿವರ್ಷ ಮಾರಾಟವಾಗುವ ಕಾರುಗಳಲ್ಲಿ ಶೇ. 50ರಷ್ಟು ಕಾರುಗಳು ಡೀಸೆಲ್ ಬಳಸುವಂತಹವಾಗಿವೆ. ಡೀಸೆಲ್ ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್ ಎದುರಾಗುತ್ತದೆ. ಈಗ ಲಾರಿಗಳಿಗೆ ದೆಹಲಿ ಪ್ರವೇಶಿಸದಂತೆ ಸೂಚಿಸಲಾಗಿದೆ. 15 ವರ್ಷಗಳ ಹಿಂದಿನ ವಾಹ ಮತ್ತು ಡೀಸೆಲ್ ವಾಹನ ಬಳಸಬಾರದು. ಕಟ್ಟಡಗಳನ್ನು ಒಡೆಯಬಾರದು ಮತ್ತು ನಿರ್ಮಿಸಬಾರದು ಮುಂತಾದ ಎಚ್ಚರಿಕೆಯನ್ನು ಕೊಡಲಾಗಿದೆ.
ಇದೇನೇ ಇದ್ದರೂ, ದೆಹಲಿ ಜನ ಭವಿಷ್ಯತ್ತಿನಲ್ಲಿ ಇನ್ನೂ ಹೆಚ್ಚಿನ ಆಪತ್ತಿನಲ್ಲಿ ಸಿಕ್ಕಿಬೀಳುವುದು ನಿಶ್ಚಿತ ಎನ್ನಲಾಗುತ್ತಿದೆ. ಇದರ ಪರಿಣಾಮ ಪಕ್ಕದ ರಾಜ್ಯ, ನಗರಗಳ ಮೇಲೂ ಬೀರಬಹುದು ಎಂಬ ಎಚ್ಚರಿಕೆಯನ್ನೂ ಕೊಡಲಾಗುತ್ತಿದೆ.
ಈಗ ನಿರ್ಮಾಣವಾಗಿರುವ ಉಸಿರಾಟದ ತುರ್ತು ಪರಿಸ್ಥಿತಿ ಜನರನ್ನು ಕಂಗಾಲಾಗಿಸಿದೆ. ಅತಿ ಹೆಚ್ಚು ಮಾಲಿನ್ಯ ನಗರವಾದ ಬೀಜಿಂಗ್ನ್ನು ದೆಹಲಿ ಮೀರಿಸುತ್ತಿದೆ. ಆದ್ದರಿಂದ ದೆಹಲಿಯನ್ನು ಖಾಲಿ ಮಾಡಬೇಕಾದ ಸ್ಥಿತಿ ಬರಬಹುದು. ಆದರೆ ಇದು ಸಾಧ್ಯವಿಲ್ಲದ ಮಾತು. ಜನರೇ ದೆಹಲಿಯನ್ನು ಖಾಲಿ ಮಾಡುವ ದಿನ ದೂರವಿಲ್ಲ. ಇದು ಸಂಭವಿಸಿದರೆ ದೆಹಲಿಯನ್ನು ಕೇವಲ ಕಟ್ಟಡಗಳ ರಾಜಧಾನಿ ಎಂದು ಕರೆಯಬೇಕಾಗುತ್ತದೆ. ಜನರೇ ಮುಂಜಾಗ್ರತೆಯಾಗಿ ಪರಿಸರ ಕಾಪಾಡುವ ಕೆಲಸ ಮಾಡಿಕೊಳ್ಳಬೇಕು. ವಾಹನ ಸಂಚಾರ ತೀವ್ರವಾಗಿ ಇಳಿಮುಖವಾಗಲೇಬೇಕು. ಅಕ್ಕಪಕ್ಕದ ರಾಜ್ಯ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಪ್ರಾಂತ್ಯಗಳಲ್ಲಿ ಹೊಲದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಸುಡುತ್ತಿದ್ದಾರೆ. ಇವೆರಡೂ ದೆಹಲಿಯ ಇಂದಿನ ದುರಂತ ಜೀವನಕ್ಕೆ ಪ್ರಮುಖ ಕಾರಣ.
-ಏಮ್ಸ್ ವೈದ್ಯರ ತಂಡ.
* (ಮಾಹಿತಿ-ವಿವಿಧ ಮೂಲಗಳಿಂದ)
.........................................................