ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೇಕೆ ನಿರ್ಲಕ್ಷ್ಯ
ಜಿಲ್ಲೆಯ ಪ್ರತಿಯೊಂದು ತಾಲೂಕು ಹತ್ತು ಹಲವು ಐತಿಹಾಸಿ, ಪಾರಂಪರಿಕ, ಪ್ರಾಕೃತಿಕ ಪ್ರವಾಸಿ ತಾಣಗಳನ್ನೊಳಗೊಂಡಿದೆ. ಪ್ರತಿ ತಾಲೂಕಿನಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ದಿಗೊಳಿಸಬೇಕು. ಸೂಕ್ತ ಮೂಲಸೌಕರ್ಯ, ಭದ್ರತೆ ಕಲ್ಪಿಸಬೇಕು. ತಾಲೂಕುವಾರು ಪ್ರವಾಸಿ ಪ್ಯಾಕೇಜ್ಗಳನ್ನು ರೂಪಿಸಬೇಕು. ದೇಶ - ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಸಮರ್ಪಕವಾಗಿ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರವಾಸಿ ತಾಣಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಸಂಘಸಂಸ್ಥೆಗಳ ನೆರವು ಪಡೆದುಕೊಳ್ಳಬೇಕು. ಇಲ್ಲವೇ ಸಹಭಾಗಿತ್ವದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಸಾಧ್ಯವಾಗಲಿದೆ.
ಮಲೆನಾಡ ಹೆಬ್ಬಾಗಿಲು ಬಿರುದಾಂಕಿತ ಶಿವಮೊಗ್ಗ ಜಿಲ್ಲೆಯು ವಿಶ್ವ ಭೂಪಟಣದಲ್ಲಿ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ. ಹಲವು ಐತಿಹಾಸಿಕ, ಪಾರಂಪರಿಕ, ಸಾಂಪ್ರದಾಯಿಕ, ವಿಶಿಷ್ಟ ಕಲಾ ಪ್ರಕಾರ, ಪ್ರಾಕೃತಿಕ ಸ್ಥಳ ಸೇರಿದಂತೆ ಹಲವು ವೈವಿಧ್ಯತೆಯನ್ನು ಒಳಗೊಂಡಿರುವ ಜಿಲ್ಲೆಯು ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ.
ಆದರೆ ಜಿಲ್ಲೆಯಲ್ಲಿರುವ ಅದೆಷ್ಟೊ ಮಹತ್ವದ ಪ್ರವಾಸಿ ತಾಣಗಳು ಪ್ರಚಾರದ ಕೊರತೆ, ಮೂಲಸೌಲಭ್ಯದ ಅಲಭ್ಯತೆ, ಅಭಿವೃದ್ದಿಗೆ ಅನುದಾನದ ಕೊರತೆ ಸೇರಿದಂತೆ ಮತ್ತಿತರ ಹಲವು ಕಾರಣಗಳಿಂದ ಪ್ರವಾಸಿಗರಿಂದ ದೂರವೇ ಉಳಿಯುತ್ತಿವೆ. ಶಿವಮೊಗ್ಗವೆಂದರೇ ಕೇವಲ ಜೋಗ ಜಲಪಾತ ಎಂಬ ಹಣೆಪಟ್ಟಿಗೆ ಸೀಮಿತವಾಗುವಂತಾಗಿದೆ. ಜಿಲ್ಲೆಯ ಹತ್ತು ಹಲವು ಪ್ರವಾಸಿ ತಾಣಗಳು ಮೂಲೆಗುಂಪಾಗುವಂತಾಗಿದೆ.
ದೇಶ - ವಿದೇಶಿ ಪ್ರವಾಸಿಗರನ್ನು ಸೆಳೆಯುವಂತಹ ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೆ ಈ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲ. ಕೆಲವೆಡೆ ಕುಡಿಯುವ ನೀರು, ಶೌಚಾಲಯದ ಸೌಲಭ್ಯವೂ ಇಲ್ಲ. ಇದರಿಂದ ಈ ಪ್ರವಾಸಿ ತಾಣಗಳು ದೇಶ - ವಿದೇಶಿ ಪ್ರವಾಸಿಗರಿಂದ ದೂರವೇ ಉಳಿಯುವಂತಾಗಿದೆ.
ಜಿಲ್ಲೆಯ ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಪ್ರಸ್ತಾವಗಳು ಈ ಹಿಂದಿನಿಂದಲೂ ಕೇಂದ್ರ - ರಾಜ್ಯ ಸರ್ಕಾರಗಳ ಮುಂಭಾಗ ಸಲ್ಲಿಕೆಯಾಗುತ್ತಾ ಬಂದಿವೆ. ಹಲವು ಪ್ರಸ್ತಾವಗಳ ಬಗ್ಗೆ ನಾಗರೀಕರಲ್ಲಿ ಚರ್ಚೆಯಾಗುತ್ತಿವೆ. ಆದರೆ ಇವ್ಯಾವು ಇಲ್ಲಿಯವರೆಗೂ ಕಾರ್ಯಗತಕ್ಕೆ ಬಂದಿಲ್ಲವಾಗಿದೆ. ಸೂಕ್ತ ಅನುದಾನವು ಲಭ್ಯವಾಗುತ್ತಿಲ್ಲ.
ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯದ ಬಳಿ ಮೈಸೂರಿನ ಬೃಂದಾವನ ಮಾದರಿಯಲ್ಲಿ ಅಭಿವೃದ್ದಿಗೊಳಿಸುವ ಪ್ರಸ್ತಾಪವಿತ್ತು. ಆದರೆ ಇಲ್ಲಿಯವರೆಗೂ ಇದಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹಾಗೆಯೇ ಥೀಮ್ ಪಾರ್ಕ್ ನಿರ್ಮಾಣ, ದೋಣಿ ವಿಹಾರ ಸೌಲಭ್ಯ, ಲೇಸರ್ ಶೋ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯೂ ಇದೆ.
ಈ ಡ್ಯಾಂಗೆ ಸಮೀಪದಲ್ಲಿಯೇ ಇರುವ ಸಕ್ರೆಬೈಲು ಆನೆ ಬಿಡಾರದಲ್ಲಿ ಮೂಲಸೌಕರ್ಯ ಕಲ್ಪಿಸಿ, ಡಾರ್ಮೆಂಟರಿ ನಿರ್ಮಾಣ ಮಾಡಬೇಕು. ಬಿಡಾರಕ್ಕೆ ಹೊಂದಿಕೊಂಡಂತಿರುವ ತುಂಗಾ ಡ್ಯಾಂ ಹಿನ್ನೀರಿನಲ್ಲಿ ಬೋಟಿಂಗ್, ಜಲ ಸಾಹಸ ಕ್ರೀಡೆಗಳಿಗೆ ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯ ಜಿಲ್ಲೆಯ ಪ್ರವಾಸಿಗರದ್ದಾಗಿದೆ. ತುಂಗಾಭದ್ರಾ ನದಿಗಳ ಸಂಗಮ ಸ್ಥಳವಾದ ಭದ್ರಾವತಿ ತಾಲೂಕಿನ ಕೂಡ್ಲಿಯಲ್ಲಿ ಎರಡು ನದಿ ಸಂಗಮ ಸ್ಥಳಕ್ಕೆ ತೆರಳಲು ರೋಪ್ ವೇ ನಿರ್ಮಿಸಿ, ಸಂಗಮೇಶ್ವರ ದೇವಾಲಯವನ್ನು ಕೂಡಲಸಂಗಮದ ರೀತಿಯಲ್ಲಿ ಅಭಿವೃದ್ಧಿಗೊಳಿಸಬೇಕು.
ಶಿಕಾರಿಪುರ ತಾಲೂಕಿನ ಅಂಜನಾಪುರ ಡ್ಯಾಂ ಸಮೀಪ ಜಲಕ್ರೀಡೆಗಳಿಗೆ ಪ್ರೋತ್ಸಾಹಿಸುವ ವ್ಯವಸ್ಥೆ ಆರಂಭಿಸಬೇಕು. ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ, ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಗಳನ್ನು ಪಾರಂಪರಿಕ ಪ್ರವಾಸಿ ತಾಣಗಳಾಗಿ ಘೋಷಿಸಿ ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ರೂಪಿಸಬೇಕು.
ಶಿವಮೊಗ್ಗ ನಗರದಲ್ಲಿರುವ ಶಿವಪ್ಪನಾಯಕ ಅರಮನೆಯ ಆವರಣದಲ್ಲಿ ’ಲೈಟ್ಸ್ ಅಂಡ್ ಸೌಂಡ್ಸ್ ಸಿಸ್ಟಮ್’ ಅನುಷ್ಠಾನ, ಅರಮನೆಯಿಂದ ಪಕ್ಕದಲ್ಲಿಯೇ ಹೋದು ಹೋಗಿರುವ ತುಂಗಾ ನದಿಯ ಮಧ್ಯದಲ್ಲಿ ನಿಂತು ನದಿ ವೀಕ್ಷಣೆ ಮಾಡಲು ತೂಗು ಸೇತುವೆ ನಿರ್ಮಿಸಬೇಕು. ಆಗುಂಬೆ ದಟ್ಟ ಅರಣ್ಯದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಚಾರಣ ವ್ಯವಸ್ಥೆ ಮಾಡಬೇಕು. ಅಲ್ಲಿರುವ ಜಲಪಾತ, ರಮ್ಯ ತಾಣಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು. ಸಾಗರ ಹಾಗೂ ಸೊರಬ ತಾಲೂಕುಗಳನ್ನು ಕರಕುಶಲ ಕೇಂದ್ರಗಳೆಂದು ಘೋಷಿಸುವುದು.
ಹೊಸನಗರ, ಸಾಗರ, ಶಿಕಾರಿಪುರ ತಾಲೂಕಿನಲ್ಲಿರುವ ಹತ್ತು ಹಲವು ಐತಿಹಾಸಿಕ, ಪಾರಂಪರಿಕ, ಪ್ರಾಕೃತಿಕ ಪ್ರವಾಸಿ ತಾಣಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂಬುವುದು ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ದಿಗೆ ಆಸಕ್ತಿವಹಿಸಿರುವ ಮುಖಂಡರ ಆಗ್ರಹವಾಗಿದೆ.
----------------------------------

No comments:
Post a Comment