ಮತ್ತೆ ತೇಲಿಬರುತ್ತಿದೆ ಗಾಂಜಾ ಘಾಟು
ಒಂದು ಕಾಲದಲ್ಲಿ ಅತಿ ಹೆಚ್ಚು ಶ್ರೀಗಂಧ ಮರಗಳನ್ನು ಬೆಳೆಯುತ್ತಿದ್ದ ಜಿಲ್ಲೆ ನಂತರ ಅದರ ಕಳ್ಳಸಾಗಾಣಿಕೆಗೂ ಹೆಸರಾಗಿ, ತನ್ನೆಲ್ಲ ಶ್ರೀಗಂಧವನ್ನು ದಂಧೆಕೋರರಿಂದ ಬರಿದುಮಾಡಿಕೊಂಡಿತು. ಈಗ ಪಶ್ಚಿಮಘಟ್ಟದಲ್ಲಿರುವ ಅಪೂರ್ವ ಔಷಧಿ ಸಸ್ಯಗಳ ನಾಶ ಮತು ವನ್ಯ ಜೀವಿಗಳ ಸಂತತಿಯ ಹನನವೂ ಸಾಗಿದೆ. ಇದೇ ವೇಳೆ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗಾಂಜಾವನ್ನು ಬೆಳೆಯುವ ಮೂಲಕ ಗಾಂಜಾ ಕಾರ್ಖಾನೆ ಎಂಬ ಹೆಸರಿಗೂ ಕಾರಣವಾಗುತ್ತಿದೆ.
ಶಿವಮೊಗ್ಗ ತನ್ನ ಪರಿಸರ ಸಂಪತ್ತಿನಿಂದ ಒಂದೆಡೆ ಹೆಸರಾದರೆ, ಇನ್ನೊಂದೆಡೆ ಇದೇ ಹಸಿರಿನ ಒಡಲಲ್ಲಿ ಗಾಂಜಾ ದಂಧೆಯ ನಡೆಸುವ ಮೂಲಕ ಕುಖ್ಯಾತಿಯನ್ನೂ ಪಡೆಯುತ್ತಿದೆ. ಪ್ರತಿವರ್ಷ ಈ ದಂಧೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈ ವರ್ಷವಂತೂ ಈಗಾಗಲೇ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ದಾಳಿ ನಡೆಸಿ ಗಾಂಜಾ ವಶಪಡಿಸಕೊಂಡು ಹಲವರ ವಿರುದ್ದ ಕೇಸು ದಾಖಲಿಸಿದ್ದಾರೆ. ಯಾರೋ ಕೆಲವರು ಮಾಡುತ್ತಿರುವ ಈ ಅಕ್ರಮ ದಂಧೆಯಿಂದ ಜಿಲ್ಲೆಯ ಹೆಸರು ಈಗ ಗಾಂಜಾದಿಂದ ಕಳಂಕಿತವಾಗುವಂತಾಗಿದೆ.
ಯಾವ ಬಂಡವಾಳವಿಲ್ಲದೆ ನೋಟು ಎಣಿಸುವ ದಂಧೆಯಾಗಿದೆ ಗಾಂಜಾ. ಇದನ್ನು ಬೆಳೆಯದಂತೆ
ಸುಮಾರು ಮೂರ್ನಾಲ್ಕು ತಿಂಗಳ ಹಿಂದೆಯೇ ಪೊಲೀಸರು ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದ್ದರು. ಕರಪತ್ರಗಳನ್ನೂ ಸಹ ವಿತರಿಸಿದ್ದರು. ಜೊತೆಗೆ ಬೆಳೆದು ಸಿಕ್ಕಿಬಿದ್ದರೆ ಜೈಲು ಶಿಕ್ಷೆ ನಿಶ್ಚಿತ ಎನ್ನುವುದನ್ನೂ ಮನದಟ್ಟು ಮಾಡಿಕೊಟ್ಟಿದ್ದರು. ಆದರೆ ಇದರಿಂದ ಯಾವ ಪ್ರಯೋಜನವೂ ಆದಂತೆ ಕಂಡುಬರುತ್ತಿಲ್ಲ. ಏಕೆಂದರೆ ಈಗ ಗಾಂಜಾ ಹೂವು ಬಿಡುವ ಸಮಯ ಆರಂಭವಾಗಿರುವುದರಿಂದ ಪೊಲೀಸರ ಬಲೆಗೆ ಬೀಳುತ್ತಿರುವವರು ಜಾಸ್ತಿಯಾಗಿದ್ದಾರೆ. ಅದರಲ್ಲೂ ಗ್ರಾಮಾಂತರ ಭಾಗದಲ್ಲಿರುವ ಠಾಣೆಯವರಿಗೆ ಗಾಂಜಾ ಹುಡುಕುವುದೇ ಕೆಲಸವಾಗಿದೆ.
ಈಗ ಗಾಂಜಾ ಹೂವು ಬಿಡುತ್ತಿರುವುದರಿಂದ ತನ್ನಿಂತಾನೆ ಅದರ ಸುವಾಸನೆ ಸುತ್ತಮುತ್ತಲ ಪ್ರದೇಶದಲ್ಲಿ ಬೀರುವುದರಿಂದ ಸುಲಭದಲ್ಲಿ ಅದನ್ನು ಪತ್ತೆ ಹಚ್ಚಲಾಗುತ್ತಿದೆ. ಶಿಕಾರಿಪುರ, ಸೊರಬ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿರುವುದು ಬೆಳಕಿಗೆ ಬಂದಿದೆ. ಹೊಸನಗರ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲೂ ಇದರ ಪ್ರಮಾಣ ಕಡಿಮೆ ಏನಿಲ್ಲ. ಜೋಳದ ಹೊಲದ ಮಧ್ಯೆ ಇದನ್ನು ಬೆಳೆಯುತ್ತಾರೆ. ಆದ್ದರಿಂದ ಹೂವು ಬಿಡುವವರೆಗೆ ಇದರ ಸುಳಿವು ಸಹ ಸಿಗುವುದಿಲ್ಲ. ಚೆಂಡು ಹೂವಿನ ಮಧ್ಯೆ ಇದನ್ನು ಬೆಳೆದರೆ ಯಾರಿಗೂ ಗೊತ್ತ್ತಾಗುವುದೇ ಇಲ್ಲ. ಏಕೆಂದರೆ ಚೆಂಡು ಹೂವಿನ ಎಲೆ ಮತ್ತು ಗಾಂಜಾ ಎಲೆ ಒಂದೇ ರೀತಿಯಾಗಿರುತ್ತದೆ.
ರೈತರು ಬೆಳೆ ಮಧ್ಯೆ ಗಾಂಜಾ ಬೆಳೆದು ಹೊರರಾಜ್ಯ ಮತ್ತು ಜಿಲ್ಲೆಗೆ ಕಳುಹಿಸುತ್ತಿರುವುದು ಈಗ ಹೆಚ್ಚುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಬೆಳೆ ಏರಿಕೆಯಾಗುತ್ತಿರುವುದು ಆತಂಕವನ್ನು ಹುಟ್ಟುಹಾಕಿದೆ. ಶುಂಠಿ ಬೆಳೆಯುವ ನೆಪದಲ್ಲಿ ಜಿಲ್ಲೆಗೆ ಕಾಲಿಟ್ಟ ಕೇರಳಿಗರು ಬರುವಾಗ ಗಾಂಜಾ ದಂಧೆಯನ್ನು ತಂದರು. ರೈತರಿಗೆ ಇದರ ರುಚಿ ತೋರಿದರು. ಇದರಿಂದ ಮಲೆನಾಡಿನಲ್ಲಿ ಗಾಂಜಾ ಗುಂಗು ಹೆಚ್ಚುವಂತೆ ಮಾಡಿದ್ದಾರೆ. ರೈತರ ಬದುಕು ಯಾವತ್ತೂ ಹಣದ ಅಮಿಷಕ್ಕೆ ಬಲಿಯಾಗಬಾರದು. ಆದರೇನು ಮಾಡುವುದು, ನಾರ್ಕೊಟಿಕ್ ಆಕ್ಟ್ ಬಗ್ಗೆ ಗೊತ್ತಿಲ್ಲದೆ ಗಾಂಜಾ ಬೆಳೆದು ಮೈಮೇಲೆ ಕೇಸು ಎಳೆದುಕೊಂಡು ಜೈಲು ಸೇರುತ್ತಿದ್ದಾರೆ.
ಹವಾಮಾನ ವೈಪರಿತ್ಯ, ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರನ್ನು ದಾರಿ ತಪ್ಪಿಸಿದ್ದೇ ಈ ಗಾಂಜಾ ದಂಧೆ. ಮೂಲ ಕೃಷಿ ಮತ್ತು ಸಾಂಪ್ರದಾಯಿಕವಾಗಿ ಬಂದ ಕೃಷಿಯನ್ನು ಬಿಟ್ಟು ಆರ್ಥಿಕವಾಗಿ ಹೆಚ್ಚು ಲಾಭವನ್ನು ಕೆಲವೇ ತಿಂಗಳಲ್ಲಿ ಗಳಿಸಿಕೊಡಬಲ್ಲ ಗಾಂಜಾ ಬೆಳೆಯಲಾರಂಭಿಸಿದ್ದಾರೆ. ಗಾಂಜಾ ಬೀಜವನ್ನು ನೀಡಿ ಬೆಳೆಯಲು ಪ್ರೇರೇಪಿಸಿದವರೇ ಖರೀದಿಯ ಜವಾಬ್ದಾರಿಯನ್ನೂ ಹೊರುತ್ತಾರೆ. ನೀರು, ಗೊಬ್ಬರ, ಔಷಧ ಯಾವುದೂ ಇದಕ್ಕೆ ಬೇಡ. ಕೇವಲ ಮೂರು ತಿಂಗಳಲ್ಲಿ ಹೂವು ಬಿಡುವ ಸಸ್ಯ. ಯಾವ ಚಿಂತೆಯೂ ಇಲ್ಲದೆ ಹಣ ಗಳಿಸಬಹುದೆಂಬ ಆಸೆ ತೋರಿಸಿ ರೈತರು ಈಗ ಜೈಲು ಕಾಣಬೇಕಾದ ಸ್ಥಿತಿಯನ್ನು ಈ ದಂಧೆಕೋರರು ತಂದೊಡ್ಡಿದ್ದಾರೆ.
ಒಂದು ಗಾಂಜಾ ಗಿಡ 250ರಿಂದ 300 ಗ್ರಾಂ ಗಾಂಜಾವನ್ನು ಕೊಡುತ್ತದೆ. ಒಂದು ಎಕ್ರೆಯಲ್ಲಿ 30ರಿಂದ 40 ಗಿಡವನ್ನು ಬೆಳೆಯಬಹುದು. 3 ತಿಂಗಳಲ್ಲಿ ಇದರ ಬೆಳೆ ಸಿಗುವುದರಿಂದ ರೈತನಿಗೆ ಕನಿಷ್ಟ 10 ಸಾವಿರ ರೂ. ತಿಂಗಳಿಗೆ ಲಾಭ ಬರಲಿದೆ. ಹಸಿ ಗಾಂಜಾ ಒಂದು ಕೆಜಿಗೆ 2 ಸಾವಿರ ರೂ. ಒಣ ಗಾಂಜಾ ಕೆಜಿಗೆ 10 ಸಾವಿರ ರೂ. ಅದರಲ್ಲೂ ಮಲೆನಾಡಿನ ಗಾಂಜಾಕ್ಕೆ ವಿಶೇಷ ಬೇಡಿಕೆ ಇದೆಯಂತೆ. ಇದರಲ್ಲಿರುವ ಕಿಕ್ ಅಥವಾ ರುಚಿಯೇ ಉಳಿದ ಗಾಂಜಾಕ್ಕಿಂತ ಶ್ರೇಷ್ಠವಾದುದು ಎಂದು ತಜ್ಞರು ಹೇಳುತ್ತಾರೆ. ಈಗ ವರ್ಷವಿಡೀ ದುಡಿದರೂ ಇಷ್ಟು ಲಾಭ ರೈತನಿಗೆ ಸಿಗದಿರುವ ಕಾರಣ ಸುಲಭದಲ್ಲಿ ಆಕರ್ಷಿತನಾಗುತ್ತಿದ್ದಾನೆ. ಒಂದು ರೀತಿಯಲ್ಲಿ ಪರ್ಯಾಯ ಬೆಳೆ ಎನ್ನುವಂತಾಗಿದೆ.
ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹುಹಿಂದಿನಿಂದಲೂ ಕಾಫಿ ತೋಟದಲ್ಲಿ ಜೊತೆಗೆ ದಟ್ಟಾರಣ್ಯದಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಇದೂ ಸಹ ಕೇರಳಿಗರ ಕೊಡುಗೆಯೇ ಆಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟಿರುವುದು ಮತ್ತು ಇಲ್ಲಿನ ಯುವಕರನ್ನು ಗಾಂಜಾ ಗುಂಗಿಗೆ ನೂಕಿರುವುದು ಪ್ರಜ್ಞಾವಂತರ ಜಿಲ್ಲೆಯ ಜನ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಇದರಿಂದಾಗಿ ಗಾಂಜಾ ಜಾಲ ಹಬ್ಬುತ್ತಿದೆ. ಎಷ್ಟೇ ಕೇಸು ಹಾಕುತ್ತಿದ್ದರೂ ಅವರ ಕಣ್ತಪ್ಪಿಸಿಯೇ ಬೆಳೆ ಬೆಳೆಯಲಾಗುತ್ತಿದೆ. ಇದು ಜಿಲ್ಲೆಯಲ್ಲಿ ಕಳವಳವನ್ನುಂಟು ಮಾಡಿದೆ.
ಗಾಂಜಾ ಬೆಳೆದವರು ಅಧಿಕಾರಿಗಳ ದಾಳಿಗೆ ಒಳಗಾದರೆ ಜಮೀನು ಕಳೆದುಕೊಳ್ಳುವುದರ ಜೊತೆಗೆ ಕೇಸು ಹಾಕಿಸಿಕೊಂಡು ಜೈಲು ಸೇರಬೇಕಾಗುತ್ತದೆ. ಈ ಕೇಸಿನಲ್ಲಿ ಜಾಮೀನೂ ಸಹ ಸಿಗುವುದಿಲ್ಲ. 3 ವರ್ಷ ಶಿಕ್ಷೆ ಖಚಿತ. ಹಲವು ವರ್ಷದಿಂದ ನೂರಾರು ರೈತರು ಈ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ. ನಾರ್ಕೊಟಿಕ್ ಆಕ್ಟ್ನ ತೀವ್ರತೆಯನ್ನು ಅರಿತು ರೈತರು ಗಾಂಜಾದಿಂದ ದೂರ ಸರಿಯಬೇಕು. ಅಬಕಾರಿ ಪೊಲೀಸ್ ಇಲಾಖೆಯವರು ಸಂಶಯಬಂದ ಕಡೆಯೆಲ್ಲ ಪರಿಶೀಲಿಸುವ ಕೆಲಸವನ್ನು ಈಗ ಮಾಡುತ್ತಿದ್ದಾರೆ. ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳಬೇಡಿ.
-ವೈ.ಆರ್. ಮೋಹನ್, ಜಿಲ್ಲಾ ಅಬಕಾರಿ ವರಿಷ್ಠಾಧಿಕಾರಿ

No comments:
Post a Comment