ರಾಜಾಕಾಲುವೆ ಹುಡುಕುತ್ತಿದ್ದಾರೆ ಅಧಿಕಾರಿಗಳು!
* ದಾಖಲೆಯಲ್ಲಿಲ್ಲ ರಾಜಾಕಾಲುವೆ* ಪತ್ತೆಗೆ ಏರಿಯಲ್ ಸಮಿಕ್ಷೆ
ಮಳೆ ನೀರು ಸರಾಗವಾಗಿ ಹರಿದುಹೋಗಲು ರಾಜಾಕಾಲುವೆ ಅಗತ್ಯ. ಆದರೆ ದಾಖಲೆಗಳಲ್ಲಿ ರಾಜಾಕಾಲುವೆ ಎನ್ನುವ ಪದವೇ ಇಲ್ಲ. ಸರಹದ್ದು, ಗಡಿ, ಬಾಂದು ಮುಂತಾದ ಪದಗಳಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಏರಿಯಲ್ ಸರ್ವೇ ಮೂಲಕ ಪತ್ತೆ ಮಾಡಬೇಕಿದೆ. ಸ್ಬುಡಾ ಅಧ್ಯಕ್ಷರು ಒಂದು ವಾರದೊಳಗೆ ಪತ್ತೆ ಮಾಡಲು ಸಭೆ ಮರೆದು ಸೂಚಿಸಿದ್ದಾರೆ. ಕೆಲಸ ನಡೆಯುತ್ತಿದೆ. ಇದರಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ನೆರವಾಗುತ್ತಿದ್ದಾರೆ.
-ಮೂುಕಪ್ಪ ಕರಭೀಮಣ್ಣನವರ್, ಸ್ಬುಡಾ ಆಯುಕ್ತ
ಶಿವಮೊಗ್ಗ: ದಿನಬೆಳಗಾದರೆ ಬೆಂಗಳೂರಿನಲ್ಲಿ ರಾಜಾಕಾಲುವೆ ಒತ್ತುವರಿಯಾದ ಬಗ್ಗೆ, ಅದನ್ನು ಬಿಡಿಎ ಮತ್ತು ಬಿವಬಿಎಂಪಿ ಅಧಿಕಾರಿಗಳು ತೆರವುಗೊಳಿಸುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ, ಟಿವಿಯಲ್ಲಿ ನೋಡುತ್ತಿದ್ದೇವೆ. ಆದರೆ ನಮ್ಮೂರಿನಲ್ಲೂ ಇಂತಹುದೇ ಸಮಸ್ಯೆ ಇದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತೆ ಇಲ್ಲ. ಇಷ್ಟೇ ಏಕೆ, ಇಲ್ಲಿನ ಅಧಿಕಾರಿಗಳಿಗೇ ರಾಜಾಕಾಲುವೆ ಇದೆಯೇ, ಇದ್ದರೆ ಅದು ಎಲ್ಲಿದೆ ಎನ್ನುವುವ ಬಗ್ಗೆ ಮಾಹಿತಿಯೇ ಇಲ್ಲ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಾಕಾಲುವೆ ಹಾದುಹೋಗಿದೆ. ಈ ಕಾಲುವೆ ಇದೆ ಎನ್ನುವುದು ಮಾತ್ರ ಸಾರ್ವಜನಿಕರಿಗೆ ಗೊತ್ತು. ಆದರೆ ಅದರ ಉದ್ದಗಲ ಎಷ್ಟು, ಎಲ್ಲೆಲ್ಲಿಹಾದು ಹೋಗಿದೆ ಎನ್ನುವುದರ ಬಗ್ಗೆ ವಿಚಾರ ಗೊತ್ತಿಲ್ಲ. ಬೆಂಗಳೂರಿನಲ್ಲಿ ಯಾವಾಗ ಈ ಕಾಲುವೆಯನ್ನು ಒತ್ತುವರಿ ಮಾಡಿಯೋ, ಮುಚ್ಚಿಯೋ ನಿವೇಶನ ಮಾಡಿ ಮಾರಾಟ ಮಡಿ, ಮನೆಕಟ್ಟಿಕೊಂಡರೋ, ಆಗ ಮಳೆಯ ನೀರು ಹರಿಯಲಾಗದೆ ಅರ್ಧ ಬೆಂಗಳೂರು ಮುಳುಗುವ ಹಂತಕ್ಕೆ ಪ್ರತಿ ಸಲ ಕಾಡಲಾರಂಭಿಸಿತು. ಅಲ್ಲಿಂದ ರಾಜಾಕಾಲುವೆ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರವಾಗತೊಡಗಿತು. ಅದರ ಪರಿಣಾಮ ರಾಜಾಕಾಲುವೆ ಹುಡುಕಡತೊಡಗಿದರು. ನಂತರ ಗೊತ್ತ್ತಾಗಿದ್ದು, ಈ ಕಾಲುವೆ ಎಲ್ಲಿ ಒತ್ತುವರಿಯಾಗಿದೆ ಎನ್ನುವುದು.
ನಗರದಲ್ಲಿಯೂ ಈ ಕಾಲುವೆ ಸಾಕಷ್ಟು ಒತ್ತುವರಿಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಕಾಲುವೆ ಬಗ್ಗೆ ಪಾಲಿಕೆಯಲ್ಲಾಗಲೀ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲೀ ಮಾಹಿತಿಯೇ ಇಲ್ಲ. ಸರಕಾರ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪಾಲಿಕೆಗಳಿಗೆ ಇತ್ತೀಚೆಗೆ ಆದೇಶ ಕಳುಹಿಸಿ, ರಾಜಾಕಾಲುವೆ ಪತ್ತೆ ಮಾಡಿ, ಒತ್ತುವರಿ ತೆರವುಗೊಳಿಸಿ ಎಂಬ ನಿರ್ದೇಶನ ನೀಡಿದೆ. ಇದರನ್ವಯ ಎಚ್ಚೆತ್ತ ಈ ಎರಡೂ ಸಂಸ್ಥೆಗಳ ಅಧಿಕಾರಿಗಳು ರಾಜಾಕಾಲುವೆ ಹುಡಕತೊಡಗಿದ್ದಾರೆ.
ಆಗಸ್ಟ್ 24ರಂದು ಈ ಸಂಬಂಧ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿ ಕಾಲುವೆ ಹುಡುಕುವಂತೆ ಸೂಚಿಸಿದ್ದಾರೆ. ನೈಸರ್ಗಿಕ ಕಾಲುವೆ ಮತ್ತು ಕೆರೆ, ಹಳ್ಳವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣ ಇದ್ದರೆ ಗಮನಕ್ಕೆ ತನ್ನಿ ಎಂದು ಸೂಚಿಸಿದ್ದಾರೆ. ಬಹುತೇಕವಾಗಿ ಇಂತಹ ಒತ್ತುವರಿ ಆಗುವುದು ಹಣವಂತರಿಂದ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈಗ ಈ ರಾಜಾಕಾಲುವೆ ಪತ್ತೆಹಚ್ಚಲು ಅಧಿಕಾರಿಗಳು ಏರಿಯಲ್ ಸರ್ವೇ ನಡೆಸುತ್ತಿದ್ದಾರೆ. ಒಂದು ವಾರ, ಹತ್ತು ದಿನದೊದಳಗೆ ಮ್ಯಾಪ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ನಗರದ ಮಧ್ಯಭಾಗದಲ್ಲಿ ರಾಜಾಕಾಲುವೆ ಹಾದುಹೋಗಿದೆ. ಆಟೊ ಕಾಂಪ್ಲೆಕ್ಸ್, ಗಾರ್ಡನ್ ಏರಿಯಾ, ಕಮಲಾ ನೆಹರೂ ಕಾಲೇಜು ಪಕ್ಕ, ಗಾಂಧಿ ಪಾರ್ಕ್, ರಂಗಮಂದಿರ ಮೂಲಕ ಮುಂದಿನ ಬಡಾವಣೆಗಳಲ್ಲಿ ಸಾಗಿದೆ. ಕಾಲುವೆಯೇನೋ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅದರ ಒತ್ತುವರಿ ಪತ್ತೆ ಮಾಡುವುದು ಮತ್ತು ಒತ್ತುವರಿ ತೆರವುಗೊಳಿಸುವುದು ಈಗ ಅಧಿಕಾರಿಗಳ ಮುಂದಿರುವ ಸವಾಲು. ಕಾಲುವೆಯಿಂದ ನಿಗದಿತ ಅಂತರ ಬಿಟ್ಟು ಮನೆ ಕಟ್ಟಬೇಕು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿರುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ಇವನ್ನೆಲ್ಲ ಅಧಿಕಾರಿಗಳು ಪತ್ತೆ ಹಚ್ಚಿದರೂ ಈಗಿನ ರಾಜಕಿಯ ವ್ಯವಸ್ಥೆಯಲ್ಲಿ ಅದನ್ನು ತೆರವುಗೊಳಿಸುವುದು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ಪಕ್ಷ ರಾಜಕೀಯಗಳ ಮೇಲಾಟವೇ ಅಧಿಕವಾಗಿರುವ ಶಿವಮೊಗ್ಗದಲ್ಲಿ ಇದು ಕಷ್ಟವಾಗಬಹುದು. ರಾಜಾಕಾಲುವೆ ಗುರುತಿಸುವ ವಿಚಾರದಲ್ಲಿ ಭೂಮಾಪನಾ ಇಲಾಖೆಯವರ ಕೆಲಸ ಜಾಸ್ತಿ ಇದೆ. ಅವರಿಗೆ ನಕ್ಷೆಯೊಂದಿಗೆ ಮಾಹಿತಿ ನೀಡಬೇಕು. ಆದರ ಈಗ ನಕ್ಷೆ ತಯಾರಿಸಲಾಗುತ್ತಿದೆ. ನಕ್ಷೆ ತಯಾರಿಕೆ ಸಮರ್ಪಕವಾಗಿ, ನ್ಯಾಯಯುತವಾಗಿ ನಡೆಯುತ್ತದೆ ಎನ್ನುವ ಗ್ಯಾರಂಟಿಯೂ ಇಲ್ಲ. ಮೀಟಿಂಗ್‌ಗಳಲ್ಲಿ ಅಧಿಕಾರಿಗಳ ಜೊತೆ ಗರಂ ಆಗಿ ಮಾತನಾಡುವ ಜನಪ್ರತಿನಿಧಿಗಳು ಅಥವಾ ರಾಜಕೀಯ ಮುಖಂಡರು, ಇದೇ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಾಕ್ಷಣ ಇಲ್ಲಸಲ್ಲದ ಒತ್ತಡ ತರಲು ಮುಂದಾಗುತ್ತಾರೆ.
ಇದೇನೇ ಇರಲಿ, ಮೊದಲು ರಾಜಾಕಲುವೆ ಪತ್ತೆ ಮಾಡಿ ಮಳೆ ನೀರು ಹರಿಯಲು ತೊಂದರೆಯಾಗದಂತೆ ಮಾಡಬೇಕಿದೆ. ಕೆಲವು ವರ್ಷಗಳಿಂದ ನಗರದಲ್ಲಿ ಭೂಮಿಗೆ ಚಿನ್ನದ ಬೆಲೆ ನಂತರ ಕಂಡಕಂಡಲ್ಲೆಲ್ಲ ಲೇಔಟ್ ಮಾಡಿ ನಿವೇಶನ ಮಾರಾಟ ಮಾಡಲಾಗುತ್ತಿದೆ. ಇದೊಂದು ದೊಡ್ಡ ಮಾಫಿಯಾ ತರ ಬೆಳೆದಿರುವುದರಿಂದ ರಾಜಾಕಾಲುವೆ, ಕೆರೆ, ಹಳ್ಳಗಳೆಲ್ಲವೂ ಭೂಬಾಕರ ಪಾಲಾಗಿವೆ. ಜೊತೆಗೆ ನಿವೇಶನ ಪರಿವರ್ತನೆ ಮಾಡುವಾಗ ನಿರಾಕ್ಷೇಪಣ ಪತ್ರದ ಜೊತೆಗೆ ನಗರಮಾಪನ ಇಲಾಖೆ ನೀಡುವ 11 ಇ ನಕ್ಷೆ ಅಗತ್ಯ. ಈ ನಕ್ಷೆಯಲ್ಲಿ ಸುತ್ತಮುತ್ತಲ ನೈಸರ್ಗಿಕದ ಬಗ್ಗೆ ಮಾಹಿತಿ ಇರುತ್ತದೆ. ತಹಸೀಲ್ದಾರ್ ದೃಢೀಕರಣವೂ ಬೇಕಾಗುತ್ತದೆ.
ರಾಜಾಕಾಲುವೆ ನೈಜವಾಗಿ ಸಮೀಕ್ಷೆಯಾದರೆ ಯಾವ್ಯಾವ ಅಧಿಕಾರಿಗಳು ಒತ್ತುವರಿಯಲ್ಲಿ ಶಾಮೀಲಾಗಿದ್ದಾರೆ. ಯಾರ‌್ಯಾರ ಕಾಲದಲ್ಲಿ ಇದು ನಡೆದಿದೆ, ಇವರ ಬೆನ್ನಹಿಂದಿರುವವರಾರು ಎನ್ನುವುದು ಬೆಳಕಿಗೆ ಬರುತ್ತದೆ.
,,,,,,,,,,,,,,,,,,,,,,,,,,,