ಪಾಲಿಕೆ ಅಧಿಕಾರಿಗಳೇ ನಮ್ಮತ್ತ ತಿರುಗಿ ನೋಡಿ
ಪಾಲಿಕೆ ನಿರ್ಜೀವ ವಾಹನಗಳ ದುಸ್ಥಿತಿಯ ಕಥೆ
ಶಿವಮೊಗ್ಗ: ನಮ್ಮನ್ನು ಪಾಲಿಕೆಯವರು 15-20 ವರ್ಷಗಳ ಕಾಲ ದುಡಿಸಿಕೊಂಡಿದ್ದಾರೆ. ನಮ್ಮಲ್ಲಿ ಯಾವಾಗ ಕಸುವಿಲ್ಲದಾಯಿತೋ ಅಂದಿನಿಂದ ಯಾರೂ ಇರಬಾರದ ಸ್ಥಳದಲ್ಲಿ ತಳ್ಳಿದ್ದಾರೆ. ನಾವು ಅನುಭವಿಸುತ್ತಿರುವ ಸಂಕಟವನ್ನು ಕನಿಷ್ಠ ಪಕ್ಷ ತಿರುಗಿ ನೋಡುತ್ತಲೂ ಇಲ್ಲ.
ನಮ್ಮ ಮಾತುಗಳಲ್ಲೇ ನನ್ನ ಹಾಗೂ ಸಹೋದರರ ಕತೆಯನ್ನು ಹೇಳುತ್ತೇನೆ. ನಾವು ಸುಮಾರು 10 ಜನರು ಈಗ ಯಾರಿಗೂ ಬೇಡವಾದ ಸ್ಥಿತಿಯಲ್ಲಿದ್ದೇವೆ. ಕಾರಣ ನಮ್ಮಲ್ಲಿ ದುಡಿಯುವ ಶಕ್ತಿ ಇಲ್ಲ. ಹಾಗಂತ ನಮ್ಮನ್ನು ಬೇರೆ ಯಾವುದಾದರೂ ಕೆಲಸಕ್ಕೆ ಬಳಸಿಕೊಂಡಿದ್ದರೆ ನಮ್ಮದೇನೂ ತಕರಾರಿಲ್ಲವಾಗಿತ್ತು. ಆದರೆ ಇಷ್ಟು ವರ್ಷ ದುಡಿದರೂ ಕನಿಷ್ಠ ದಯೆಯನ್ನೂ ತೋರಿಸದೆ ಬಿಸಿಲು, ಮಳೆ, ಬಿರುಗಾಳಿ, ಚಳಿ ಎನ್ನದೆ ಮೂಲೆಗಟ್ಟಿದ್ದಾರೆ. ನಮ್ಮ ಇಂದಿನ ಸ್ಥಿತಿ ಯಾವ ವೈರಿಗೂ ಬರಬಾರದು. ಏಕೆ ಗೊತ್ತೆ? ನಮ್ಮನ್ನು ನೋಡುವವರಾರೂ ಇಲ್ಲ. ನಮ್ಮ ಸುತ್ತಮುತ್ತಲೂ ಗಲೀಜಿನ ವಾತಾವರಣ. ಪಾಲಿಕೆಗೆ ಬಂದವರೆಲ್ಲ ನಮ್ಮ ಬಳಿ ಬಂದು ಮೂತ್ರ ಮಾಡಿ ಹೋಗುತ್ತಾರೆ. ಜೊತೆಗೆ ಹುಲ್ಲು, ಕಸ, ಕಡ್ಡಿಗಳೂ ಸಹ ನಮ್ಮನ್ನಾವರಿಸಿವೆ.
ಇಷ್ಟೊಂದು ಹೀನಾಯ ಸ್ಥಿತಿಯಲ್ಲಿದ್ದರೂ ನಮ್ಮನ್ನು ಯಾರಿಗೂ ಮಾರಾಟ ಮಾಡುತ್ತಿಲ್ಲ. ಮಾರಿದ್ದರೆ ಅಲ್ಲಾದರೂ ಹಾಯಾಗಿ ಇರುತ್ತಿದ್ದೆವು. ಇಲ್ಲವೇ ನಮ್ಮ ಮೂಲರೂಪಕ್ಕೆ ಹೋಗುತ್ತಿದ್ದೆವು. ಪಾಲಿಕೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಮ್ಮ ಬಗ್ಗೆ ಸೌಜನ್ಯವೇ ಇಲ್ಲ ನೋಡಿ.
ನಾವಿರುವ ಪಕ್ಕದಲ್ಲೇ ಇರುವ ಮಾರ್ಗದಲ್ಲಿ ಹಲವರು ಹಾದುಹೋಗುವಾಗ ನಮ್ಮನ್ನು ನೋಡಿ ಮರುಕಪಡುತ್ತಾರೆ. ಇವರನ್ನೆಲ್ಲ ಎಲ್ಲಾದರೂ ಬೇರೆಡೆ ಶೆಡ್‌ನಲ್ಲಿ ಕೂಡಿಹಾಕಬಾರದಿತ್ತೇ, ಯಾರಿಗಾದರೂ ಮಾರಾಟ ಮಾಡಬಾರದಿತ್ತೇ, ಇಲ್ಲಿ ನಿಲ್ಲಿಸಿ ವಿನಾಕಾರಣ ಇವರನ್ನು ಹಾಳುಮಾಡುತ್ತಿದ್ದಾರಲ್ಲಾ ಎಂದು ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ನಮ್ಮ ಬಗ್ಗೆ ಯಾರೂ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿಲ್ಲ. ದುರಂತವೆಂದರೆ, ನಮ್ಮನ್ನು ನಡೆಸಿದ ಚಾಲಕರೂ ಸಹ ಈಗ ನಮ್ಮತ್ತ ತಿರುಗಿ ನೋಡುತ್ತಿಲ್ಲ. ಅವರೆಲ್ಲ ನಮ್ಮ ಹೊಸ ತಲೆಮಾರಿನವರ ಆಕರ್ಷಣೆಗೆ ಮನಸೋತಿದ್ದಾರೆ. ಕೆಲವು ಪಾಲಿಕೆ ಅಧಿಕಾರಿಗಳೂ, ನೌಕರರು, ಸಿಬ್ಬಂದಿಗಳೂ ಸಹ ನಮ್ಮ ಬಳಿ ಬಂದು ಮೂತ್ರ ಮಾಡುತ್ತಾರೆ. ನಮ್ಮ ಜೊತೆಯೇ ಓಡಾಡಿದವರು ನಮ್ಮನ್ನು ಈ ರೀತಿ ಕಾಣುವುದು ತರವೇ?
ಮನುಷ್ಯನೇ ಹೀಗೆ, ಬೇಕಾದಾಗ ಬಳಸಿ, ಬೇಡವಾದಾಗ ಮೂಲೆಗುಂಪು ಮಾಡುತ್ತಾನೆ. ನಾವಾದರೂ ಹತ್ತಿಪ್ಪತ್ತು ವರ್ಷ ಜೀವತೆತ್ತು ದುಡಿದಿದ್ದೇವೆ. ನಂತರ ನಮ್ಮ ಕಸುವು ಕಳೆದುಕೊಂಡಿದ್ದೇವೆ. ಸೇವೆಯಿಂದ ನಿವೃತ್ತರಾದ ನಮ್ಮನ್ನು ಕನಿಷ್ಠ ಸೌಜನ್ಯಕ್ಕಾದರೂ ಈ ರೀತಿ ಕಂಡಕಂಡಲ್ಲಿ ನಿಲ್ಲಿಸದೆ ಬೇರೆ ಯಾರಿಗಾದರೂ ಮಾರಾಟ ಮಾಡಿದ್ದರೆ ನೆಮ್ಮದಿಯಾಗಿರುತ್ತಿದ್ದೆವು. ನಿವೃತ್ತರಿಂದ ಉಪಯೋಗವಿಲ್ಲ ಎಂದುಕೊಂಡಿದ್ದಾರೆ. ಆದರೆ ನಮ್ಮ ಮೂಲರೂಪಕ್ಕೆ ಹೋದರೆ ನಾವು ಇನ್ನೊಂದು ಅವತಾರ ತಾಳುತ್ತೇವೆ. ಅದಕ್ಕಾದರೂ ಅವಕಾಶ ಮಾಡಿಕೊಡಿ ಎನ್ನುವುದೇ ನನ್ನ ಕೊನೆಯ ಮನವಿ.