ಮತ್ತೆ ಮೈಕೊಡವಿ ನಿಲ್ಲಿ
ಎಸ್ಸೆಸೆಲ್ಸಿ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಫಲಿತಾಂಶ ನೋಡಿ ಮಕ್ಕಳು ಹತಾಶರಾಗಬಾರದು. ಜೀವನ ಇನ್ನೂ ಇದೆ ಎನ್ನುವುದನ್ನು ಅರಿತು ದಿಟ್ಟ ಹೆಜ್ಜೆ ಇಡಬೇಕಿದೆ. ಪರೀಕ್ಷೆಗಳೇ ಅಂತಿಮವಲ್ಲ. ನಮ್ಮ ಜೀವನ ಎಂಬ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು. ಇದನ್ನರಿತು ಹೆಜ್ಜೆ ಇಡಬೇಕು.
ಮಕ್ಕಳೇ, ಬೀಳುವುದು ಏಳುವುದಕ್ಕಾಗಿ; ಏಳುವುದು ಎದ್ದು ನಿಲ್ಲುವುದಕ್ಕಾಗಿ; ಎದ್ದು ನಿಲ್ಲುವುದು ಗಟ್ಟಿಗೊಂಂಡು ಬದುಕುವುದಕ್ಕಾಗಿ. ‘ಸೋಲೇ ಗೆಲುವಿನ ಸೋಪಾನ’ ಎಂದರು ನಮ್ಮ ಹಿರಿಯರು. ಪರೀಕ್ಷೆ ಮುಗಿದ ಬಳಿಕ ಎಷ್ಟೊಂದು ನಿರೀಕ್ಷೆಗಳೊಂದಿಗೆ ಫಲಿತಾಂಶಕ್ಕಾಗಿ ಕಾದು ಕೂತಿದ್ದ ನಿಮಗೆ ಬಹಳಷ್ಟು ನಿರಾಸೆಯಾಗಿದೆಯಲ್ಲವೇ? ವಿದ್ಯಾರ್ಥಿಗಳೇ, ಸೋಲು ನಮ್ಮ ಬದುಕಿಗೆ ಸ್ಫೂರ್ತಿಯಾಗಬೇಕೇ ಹೊರತು, ಸೋತು ಸುಣ್ಣವಾಗುವುದಲ್ಲ. ನಿಮ್ಮ ಸೋಲಿಗೆ ನೀವೊಬ್ಬರೇ ಕಾರಣರಲ್ಲ ಎನ್ನುವುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೆತ್ತವರ ಅತಿಯಾದ ಒತ್ತಡ, ನಿರೀಕ್ಷೆಗಳಿಂದ ನೀವು ತತ್ತರಿಸಿರಬಹುದು; ನಿಮ್ಮ ಸಹಪಾಠಿಗಳೊಂದಿಗೆ ನಿಮ್ಮನ್ನು ತೂಗಿ ನೋಡುವ ನಿಮ್ಮ ಅಧ್ಯಾಪಕ ವರ್ಗ ನಿಮ್ಮ ಸೋಲಿಗೆ ಕಾರಣವಾಗಿರಬಹುದು; ಸ್ವಲ್ಪ ಮಟ್ಟಿನ ನಿಮ್ಮ ಹುಡುಗಾಟವೂ ಇದಕ್ಕೆ ಕಾರಣವಾಗಿರಬಹುದು. ಅದೇನೇ ಇರಲಿ, ಫಲಿತಾಂಶ ಈಗ ನಿಮ್ಮ ಮುಂದಿದೆ. ಅದನ್ನು ನೋಡುತ್ತ ನಿರಾಶರಾಗಿ ಆಕಾಶದತ್ತ ಮುಖಮಾಡಿ, ನಾವು ‘ನಾಲಾಯಕ್’ ಎಂದು ನಮ್ಮನ್ನು ನಾವೇ ಹಗುರವಾಗಿ ಕಾಣದೆ, ಮೈಕೊಡವಿ ನಿಲ್ಲಬೇಕಾಗಿದೆ.
ಎಸ್ಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾದೊಡನೆ ಅದರಲ್ಲಿ ಫೇಲಾದವರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುವುದನ್ನು ಕಾಣುತ್ತೇವೆ, ಕೇಳುತ್ತೇವೆ. ಅಥವಾ ಫಲಿತಾಂಶ ನೋಡಲು ತೆರಳಿದವರು ಕಾಣೆಯಾಗುತ್ತಾರೆ. ವಿದ್ಯಾರ್ಥಿಗಳಲ್ಲಿ ಇಂತಹ ಅಧೀರತ್ವವವನ್ನು ಪರೀಕ್ಷೆ ಮುನ್ನವೇ ಶಿಕ್ಷಕರಾದವರು ಹೊಡೆದೋಡಿಸಬೇಕು. ಜೀವನವೇ ಒಂದು ಪರೀಕ್ಷೆಯಾಗಿರುವಾಗ ಅದರಲ್ಲಿ ಏಳುಬೀಳುಗಳು ಸಹಜ. ಜೊತೆಗೆ ಎಸ್ಸೆಸೆಲ್ಸಿ ಮತ್ತು ಪಿಯು ಪರೀಕ್ಷೆಗಳೇ ಅಂತಿಮವಲ್ಲ. ನಮ್ಮ ಜೀವನ ಎಂಬ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು. ಇದನ್ನರಿತು ಹೆಜ್ಜೆ ಇಡಬೇಕು.
ಈಸಬೇಕು ಇದ್ದು ಜಯಿಸಬೇಕೆಂದು ದಾಸರು ಹೇಳಿದ್ದಾರೆ. ಆ ಪ್ರಕಾರ ಯಾವುದೇ ಪರೀಕ್ಷೆ ಇರಲಿ, ಅದರಲ್ಲಿನ ಸೋಲನ್ನೇ ಮನಸ್ಸಿಗೆ ತೆಗೆದುಕೊಳ್ಳದೆ, ಜಯಿಸಲು ಏನು ಮಾಡಬೇಕೆನ್ನುವುದರ ಬಗ್ಗೆ ಚಿಂತನೆ ಮಾಡಬೇಕು. ಆಗ ಮುಂದಿನ ಹೆಜ್ಜೆ ಇಡಲು ಸರಿಯಾದ ಮಾರ್ಗ ಕಾಣುತ್ತದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಈ ಫಲಿತಾಂಶ ನೋಡಿ ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅಧೀರರಾಗಬಾರದು. ಒಂದು ವೇಳೆ ಫಲಿತಾಂಶ ಹೆಚ್ಚುಕಡಿಮೆ ಆಗಿದ್ದರೂ ತಮ್ಮನ್ನು ತಾವೇ ಸಂತೈಸಿಕೊಂಡು ಮುಂದಿನ ಹೆಜ್ಜೆ ಇಡಬೇಕು. ಅದನ್ನು ಬಿಟ್ಟು ಆತ್ಮಹತ್ಯೆಯಂತಹ ಕೃತ್ಯಕ್ಕೆ ಖಂಡಿತ ಇಳಿಯಬಾರದು.
ಹೋದ ಜೀವ ಮರಳಿಬಾರದು. ಆದರೆ ಫೇಲಾದವರು ಮತ್ತೆ ಪರೀಕ್ಷೆ ತೆಗೆದುಕೊಂಡರೆ ಚೆನ್ನಾಗಿ ಓದಿ ಪಾಸಾಗಬಹುದು, ಉನ್ನತ ಸಾಧನೆ ಮಾಡಲು ಅವಕಾಶವಿದೆ. ಇದನ್ನು ಮೊದಲು ಯೋಚನೆ ಮಾಡಬೇಕು. ಫಲಿತಾಂಶದಿಂದ ಹೆದರಿ, ಅಥವಾ ಬೇಸರಪಟ್ಟುಕೊಂಡು ಏನಾದರೂ ಅನಾಹುತ ಮಾಡಿಕೊಂಡರೆ ಲಾಭವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಫೇಲಾದರೂ ಮುಂದಿನ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪಾಲಕರೂ ಸಹ ತಮ್ಮ ಮಕ್ಕಳು ಫೇಲಾಗಿದ್ದರೆ ಅಥವಾ ಕಡಿಮೆ ಅಂಕ ಗಳಿಸಿದ್ದರೆ ಬಯ್ಯುವುದು, ನಿಂದಿಸುವುದನ್ನು ಮಾಡಬಾರದು. ಇದೂ ಸಹ ಅವರ ಮನಸ್ಸಿಗೆ ನೋವನ್ನುಂಟು ಮಾಡುವುದರ ಜೊತೆಗೆ ಅಧೀರರನ್ನಾಗಿರಿಸುತ್ತದೆ. ಒಂದು ವೇಳೆ ಫೇಲಾಗಿದ್ದರೂ ಅವರಲ್ಲಿ ಸಾಂತ್ವನ ಹೇಳಿ ಮತ್ತೆ ಮತ್ತೆ ಓದಿ ಪಾಸಾಗುವಂತೆ ಹುರಿದುಂಬಿಸಬೇಕು. ಹಿನ್ನಡೆ ಕಂಡವರೂ ಸಹ ಎದೆಗುಂದಬೇಕಿಲ್ಲ. ಏಕೆಂದರೆ ಮತ್ತೆ ಅವಕಾಶಗಳಿರುತ್ತವೆ. ಪರೀಕ್ಷೆಯೊಂದೇ ಜೀವನವನ್ನು ಅಳೆಯುವ ಸಾಧನವಲ್ಲ ಎನ್ನುವುದನ್ನು ಮೊದಲು ಅರಿಯಬೇಕು. ಜೀವನದ ಕೊನೆ ಇದೇ ಎಂದು ತಿಳಿದುಕೊಳ್ಳಬಾರದು. ಒಂದು ವೇಳೆ ಮಕ್ಕಳಲ್ಲಿ ಓದುವ ಆಸಕ್ತಿ ಇಲ್ಲವಾದಲ್ಲಿ ಅವರಲ್ಲಿರುವ ಇನ್ನಿತರ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಪಾಲಕರು ಅವಕಾಶ ಕೊಡಬೇಕು. ಒಟ್ಟಿನಲ್ಲಿ ವಿದ್ಯಾರ್ಥಿಗಳು ದುಡುಕದಂತೆ ಪಾಲಕರು ನಿಗಾ ವಹಿಸಬೇಕು.
ಮಕ್ಕಳೂ ಸಹ ಯಾವ ಕಾರಣಕ್ಕೂ ತಮ್ಮ ಭವಿಷ್ಯ ಇಲ್ಲಿಗೆ ಅಂತ್ಯವಾಯಿತು ಎಂದು ಭಾವಿಸಬಾರದು. ವಿದ್ಯಾಭ್ಯಾಸವಿರಲಿ, ಜೀವನವಿರಲಿ ಯಶಸ್ಸು ಸುಲಭದಲ್ಲಿ ಸಿಗದು. ಹೋರಾಟ ಮಾಡಿ ಮುನ್ನುಗ್ಗಿದರೆ ಮಾತ್ರ ಯಶಸ್ಸು ಕಟ್ಟಿಟ್ಟದ್ದು ಎನ್ನುವುದನ್ನು ಮರೆಯಬಾರದು. ಅರಳುವ ಹೂವುಗಳು ಮೊಗ್ಗಿನಲ್ಲೇ ಕಮರಬಾರದು. ಅವು ಹೂವಾಗಿ ಅರಳಿ ಇಡೀ ಸಮಾಜಕ್ಕೆ ಕಂಪನ್ನು ಬೀರಬೇಕು. ಅದಕ್ಕಾಗಿಯೇ ಹೇಳಿದ್ದು: ಬಾಳೊಂದು ಹೋರಾಟ ಎಂದು. ಹೋರಾಟ ಮಾಡಿ ಬೆಳೆದರೆ ಸಮಾಜದಲ್ಲಿ ಕಂಪು ಬೀರಲು ಸಾಧ್ಯ. ಅಂಜದೆ, ಅಳುಕದೆ ಮುನ್ನುಗ್ಗಿದರೆ ಯಶಸ್ಸು ಕಾಣಲು ಸಾಧ್ಯ.
..............................................