ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ
ಜಿಲ್ಲಾ ಕಸಾಪದಲ್ಲಿ ಜಾತಿ ವಾಸನೆ* ಆರಂಭವಾಗಿದೆ ಅಸಮಾಧಾನದ ಅಲೆ
* ದತ್ತಾತ್ರೇಯ ಹೆಗಡೆ
ಇಂಟ್ರೊ- ಪಕ್ಷಾತೀತ ಜಾತ್ಯತೀತವಾಗಿ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಕಸಾಪ ಮಾಡಬೇಕಿದೆ. ಆದರೆ, ಭಾಷಾಭಿವೃದ್ಧಿಗೆ ಶ್ರಮಿಸಬೇಕಾದ ಲ್ಲಾ ಕಸಾಪದಲ್ಲಿ ಜಾತಿ ಸಂಕೋಲೆಯ ವಾಸನೆ ವಿಪರೀತವಾಗತೊಡಗಿದೆ. ಜಾತ್ಯತೀತ ವೇದಿಕೆಯಾಗಬೇಕಿದ್ದ ಕಸಾಪಕ್ಕೆ ಇಂದು ಸಾಹಿತ್ಯದ ಗಂಧಗಾಳಿ ಇಲ್ಲದವರನ್ನೂ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗುತ್ತಿದೆ. ಜಾತಿಯ ಮೂಲಕ ವ್ಯಕ್ತಿಯ ಪ್ರತಿಭೆ ಗುರುತಿಸುವುದು ಅನಾಗರಿಕವಾದದ್ದು. ವ್ಯಕ್ತಿಯ ಪ್ರತಿಭೆ ಮೂಲಕ ಜಾತಿ ಗುರುತಿಸುವಂತಾಗಬೇಕು. ಆದರೆ ಹಾಲಿ ಜಿಲ್ಲಾಧ್ಯಕ್ಷರು ಈಗ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಕಸಾಪಕ್ಕೆ ವ್ಯಕ್ತಿ ಮುಖ್ಯವೋ ಅಥವಾ ಜಾತಿ ಮುಖ್ಯವೋ ಎನ್ನುವುದನ್ನು ಸಾರ್ವಜನಿಕರೆದುರು ತೆರೆದಿಡಬೇಕಿದೆ.
ಶಿವಮೊಗ್ಗ: ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಡಿ.ಬಿ. ಶಂಕರಪ್ಪ ಆಯ್ಕೆಯಾದ ನಂತರ ಇತ್ತೀಚೆಗೆ ಜಿಲ್ಲಾ ಸಮಿತಿ ರಚನೆಯಾಗಿದೆ. ಆದರೆ ಸಮಿತಿಯು ಇನ್ನೂ ಕಾರ್ಯಚಟುವಟಿಕೆಗಳನ್ನು ಆರಂಭಿಸಿಲ್ಲ. ಈ ಮಧ್ಯೆ ಸ್ವಜಾತಿ ಬಾಂಧವರಿಗೆ ಶಂಕರಪ್ಪ ಮಣೆ ಹಾಕುತ್ತಿದ್ದಾರೆಂಬ ಆರೋಪ ಬಲವಾಗಿ ಕೇಳಿಬರತೊಡಗಿದೆ. ಈ ಮೂಲಕ ಆರಂಭದಲ್ಲೇ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸೊರಬ ಮತ್ತು ಶಿಕಾರಿಪುರದಲ್ಲಿ ಈ ವಿವಾದ ಭುಗಿಲೆದ್ದು, ಕಸಾಪದಲ್ಲಿ ಸಕ್ರಿಯರಾಗಿರುವವರು ಆಕ್ರೋಶಗೊಂಡಿದ್ದಾರೆ. ಇದರಿಂದ ಕಸಾಪ ಜಾತಿಯ ವಾಸನೆಯಿಂದ ನಲುಗುವಂತಾಗಿದೆ.
ಈ ಮಧ್ಯೆ ಶಂಕರಪ್ಪ ಅಧ್ಯಕ್ಷರಾಗಿದ್ದರೂ ಸಹ ಅವರ ಹಿಂದೆ ಕಾಣದ ಕೈಯೊಂದು ಎಲ್ಲ ತಾಲೂಕು ಮತ್ತು ಜಿಲ್ಲಾ ಸಮಿತಿಯ ಆಯ್ಕೆಯಲ್ಲಿ ಕೆಲಸ ನಡೆಸುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಜಾತಿ ವ್ಯಾಮೋಹಕ್ಕೆ ಸಿಲುಕಿರುವ ಈ ಕಾಣದ ಕೈ ಪ್ರತಿಭಾನ್ವಿತರನ್ನು ದೂರ ಮಾಡಿದೆ. ಇದು ಎಲ್ಲ ಸಾಹಿತ್ಯಾಸಕ್ತರನ್ನೂ ಚಿಂತೆಗೀಡುಮಾಡಿದೆ, ಅಷ್ಟೇ ಅಲ್ಲ, ಇನ್ನೂ ಚಟುವಟಿಕೆ ಆರಂಭವಾಗದ ವೇಳೆಯೇ ಇಷ್ಟೊಂದು ಜಾತಿ ವಾಸನೆ ಢಾಳಾಗಿ ಬರಲಾರಂಭಿಸಿದರೆ ಅವಧಿ ಮುಗಿಯುವವರೆಗೆ ಪರಿಸ್ಥಿತಿ ಏನಾಗಬಹುದು, ಕೇವಲ ಆ ಒಂದು ಸಮುದಾಯಕ್ಕೆ ಮಾತ್ರ ಜಿಲ್ಲಾ ಕಸಾಪ ಎಂದಾದರೂ ಆಶ್ಚರ್ಯವಿಲ್ಲ ಎನ್ನುವ ಮಾತು ಸ್ವತಃ ಸದಸ್ಯರಿಂದಲೇ ಕೇಳಿಬರತೊಡಗಿದೆ.
ಶಂಕರಪ್ಪ ನಿವೃತ್ತ ಪ್ರಾಧ್ಯಾಪಕರು. ಸಭ್ಯ ಮತ್ತು ಪ್ರಾಮಾಣಿಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಸಾಹಿತಿ ಹಾಗೂ ಬರೆಹಗಾರರು. ಅಧ್ಯಕ್ಷ ಪದವಿಗೆ ನಿಜಕ್ಕೂ ಅರ್ಹರು. ಕಸಾಪಕ್ಕೆ ಹೊಸ ಮುಖ ಬರಬೇಕು, ಗುಂಪುಗಾರಿಕೆ ನಿಲ್ಲಬೇಕೆಂಬ ದೃಷ್ಟಿಯಿಂದ ಅವರ ಆಯ್ಕೆಯಾಯಿತು. ಆದರೆ, ಅಧಿಕಾರಕ್ಕೇರಿದ ನಂತರ ಕೆಲವರು ಅಂದರೆ ಅವರ ಸುತ್ತ ಠಳಾಯಿಸುವವರು ಅದೆಲ್ಲವನ್ನೂ ದುರುಪಯೋಗಪಡಿಸಿಕೊಳ್ಳುತ್ತ, ಮೂಗುತೂರಿಸಲಾರಂಭಿಸಿರುವುದು ಕಂಡುಬರುತ್ತಿದೆ. ಶಂಕರಪ್ಪ ಅವರನ್ನು ಗೆಲ್ಲಿಸಿದ್ದೇ ತಾವೆಂಬ ಮನೋಭಾವ ಹೊಂದಿರುವ ಇಂತಹ ಜಾತಿವಾದಿಗಳಿಂದ ಜಿಲ್ಲಾ ಕಸಾಪ ಕುಲಗೆಟ್ಟು ಹೋಗುವುದರಲ್ಲಿ ಅನುಮಾನವಿಲ್ಲ. ಕೂಡಲೇ ಅವರನ್ನು ದೂರವಿಡದಿದ್ದರೆ ಇಲ್ಲಿಯವರೆಗೆ ಇದ್ದ ಅವರ ಕಳಂಕರಹಿತ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದರಲ್ಲಿ ಅನುಮಾನವಿಲ್ಲ.
ಜಿಲ್ಲಾ ಮತ್ತು ತಾಲೂಕು ಕಸಾಪ ಪದಾಧಿಕಾರಿಗಳನ್ನು ಆಯ್ಕೆ ಮಾಡುವಾಗ ಜಾತಿ, ಶ್ರೀಮಂತಿಕೆ, ಅಧಿಕಾರ ನೋಡಬಾರದು. ಇತರ ಸಾಹಿತಿಗಳ ಅಭಿಪ್ರ್ರಾಯ ಪಡೆಯಬೇಕಿತ್ತು. ತಾಲೂಕು ಮಟ್ಟದಲ್ಲಿ ಸಭೆ ನಡೆಸಿದ್ದರೂ ಅರ್ಹರನ್ನು ಆಯ್ಕೆ ಮಾಡದೆ ಜಾತಿಬಾಂಧವರಿಗೆ ಮಣೆ ಹಾಕಿದ್ದು ಶಂಕರಪ್ಪ ಅವರಿಗೆ ಈಗ ಸಂಕಟ ತಂದೊಡ್ಡಿದೆ. ಸೊರಬದಲ್ಲೇ ಹಿರಿಯ ಬರೆಹಗಾರರು, ವೈದ್ಯರೂ, ಸಂಘಟಕರೂ, ಸಾಹಿತ್ಯಾಭಿಮಾನಿಯೂ ಆದ ಎಂ. ಕೆ. ಭಟ್ ಅವರಂತಹವರು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಹೆಚ್ಚು ಕಡಿಮೆ ನಿರ್ಧರಿಸಲಾಗಿದ್ದರೂ ಶಿವಮೊಗ್ಗಕ್ಕೆ ಹೋದ ನಂತರ ಮತ್ತೊಬ್ಬರನ್ನು ನೇಮಿಸಿದ್ದೇಕೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರವಾದರೂ ಅದನ್ನು ಸರಿಪಡಿಸಿಕೊಳ್ಳಬಹುದಿತ್ತು. ಇದಾದ ಎರಡೇ ದಿನಕ್ಕೆ ಶಿಕಾರಿಪುರದಲ್ಲಿಯೂ ಇದು ಮರುಕಳಿಸಿದೆ.
ಸಾಹಿತಿ ಮಾತ್ರ ತಾಲೂಕು ಅಧ್ಯಕ್ಷನಾಗಬೇಕೆಂಬ ನಿಯಮವವಿದೆ. ಅದನ್ನೀಗ ಮುರಿಯಲಾಗಿದೆ. ಇದು ಹಿಂದಿನಿಂದಲೂ ನಡೆದ ಬಂದ ಪದ್ದತಿ ಎಂದು ಶಂಕರಪ್ಪ ಮತ್ತು ಬೆಂಬಲಿಗರು ಹೇಳಬಹುದು. ಹಿಂದಿನ ಪದ್ದತಿಯನ್ನೇ ತಾವು ಪಾಲಿಸುವುದಾದರೆ, ತಮ್ಮ ಹೊಸ ಚಿಂತನೆ ಎಲ್ಲಿಗೆ ಹೋಯಿತೆಂದು ಪ್ರಶ್ನಿಸಬೇಕಾಗುತ್ತದೆ. ಹಿಂದಿನ ಅಧ್ಯಕ್ಷರಿಗೂ, ತಮಗೂ ಏನೂ ವ್ಯತ್ಯಾಸವಿಲ್ಲ ಎಂದು ಹೇಳಬಹುದಲ್ಲವೇ? ಸಾಹಿತಿಗಳು ಮತ್ತು ಸದಸ್ಯರು ಒಗ್ಗೂಡಿ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೇ ಹೊರತು ಭಿನ್ನಾಭಿಪ್ರಾಯ ಉಂಟಾಗುವಂತೆ ಮಾಡಬಾರದು. ಸರ್ವಸಮ್ಮತ ವ್ಯಕ್ತಿಯ ಆಯ್ಕೆಯಾಗಬೇಕು. ಆಗ ಮಾತ್ರ ಕಸಾಪದ ಉತ್ತಮ ಬೆಳವಣಿಗೆ ಹಾಗೂ ಕಾರ್ಯಕ್ರಮವನ್ನು ನಿರೀಕ್ಷಿಸಬಹುದು.
ಈಗ ಆಗಿರುವ ಘಟನೆಗಳಿಂದ ಶಂಕರಪ್ಪ ಪಾಠ ಕಲಿಯಬೇಕಿದೆ. ತಮ್ಮ ಸುತ್ತಮುತ್ತ ಇರುವ ಪಟಾಲಂಗಳನ್ನು ನಿಗ್ರಹಿಸಿ, ಕಸಾಪದ ಬಗ್ಗೆ ಕಿಂಚಿತ್ತ್ತೂ ಅರಿವಿಲ್ಲದಿರುವವರನ್ನು ದೂರವಿಟ್ಟು ನಿರ್ಣಯ ಕೈಗೊಳ್ಳುವ ಮನೋಭಾವವನ್ನು ಅಧ್ಯಕ್ಷರು ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ ಜಾತಿವಾದಿಗಳಿಂದಲೇ ಜಿಲ್ಲಾ ಕಸಾಪಕ್ಕೆ ಅಪಾಯ ಒದಗಬಹುದು.