Friday, 9 March 2018




ರಾಜಕೀಯವಾಗಿ  ಮಹಿಳೆ ಅಲ್ಪಸಂಖ್ಯಾಾತೆ ಆಗಿದ್ದೇಕೆ



ಮಹಿಳೆಯ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ವಿಚಾರ ಇನ್ನೂ ಹಲವರ ಮನಸ್ಸಿಿನಿಂದ ಹೊರಬಂದಿಲ್ಲ. ಕುಟುಂಬ ನಿರ್ವಹಣೆಯನ್ನು ಅವಳು ನೋಡಿಕೊಂಡರೆ ಸಾಕು ಎನ್ನುತ್ತ ಕಟ್ಟುಪಾಡನ್ನು ಹೇರುವುದು ಇನ್ನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಹೆಚ್ಚಿಿನ ಸಂಖ್ಯೆೆಯಲ್ಲಿ ಮಹಿಳೆಯರು ರಾಜಕೀಯಕ್ಕೆೆ ಬರುತ್ತಿಿದ್ದಾಾರೆ. ಆದರೆ ಅವರಿಗೆ ಅವಕಾಶ ಕೊಡಲಾಗುತ್ತಿಿಲ್ಲ. ಹೆಣ್ಣಿಿನ ಅಭಿವೃದ್ಧಿಿಯ ಕುಂಠಿತಕ್ಕೆೆ ಪುರುಷ ಸಮಾಜ ಒಂದು ರೀತಿ ಕಾರಣವಾದರೆ ಹೆಣ್ಣಿಿಗೆ ಹೆಣ್ಣೇ ಶತ್ರು ಸಹ ಆಗಿದ್ದಾಾಳೆ. ಜೊತೆಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಲ್ಲಿ ಆಕೆ ವಿಫಲಳಾಗಿದ್ದಾಾಳೆ. 




ಶಾಂತಿ, ಸಹನೆ, ಸೌಹಾರ್ದತೆ, ವೀರ ಧೈರ್ಯ ಎಲ್ಲದರ ಪ್ರತೀಕ ಹೆಣ್ಣು. ’ಹೆಣ್ಣು ಸಮಾಜ ಕಣ್ಣು’ ಎಂಬ ಪ್ರಸಿದ್ಧ ನಾಣ್ಣುಡಿಯಂತೆ ಒಂದು ಕುಟುಂಬದ ಬೆಳಕಾಗಬೇಕಾದವಳು, ಗಂಡನನ್ನು ಪೋಷಿಸಿಕೊಂಡು ಮಕ್ಕಳನ್ನು ವಿದ್ಯೆೆ, ಸದ್ಗುಣಗಳಿಂದ ಸತ್ಪ್ರಜೆಗಳನ್ನಾಾಗಿ ಮಾಡಿ ಸಮಾಜಕ್ಕೆೆ ಒಪ್ಪಿಿಸಬೇಕಾದವಳು ಜ್ಞಾಾನವಂತೆ, ಬುದ್ಧಿಿವಂತೆಯಾಗಿರಬೇಕು.
ಆಧುನಿಕ ಮಹಿಳೆ ಹಿಂದಿಗಿಂತ ವಿದ್ಯಾಾವಂತೆಯಾಗಿದ್ದಾಾಳೆ, ಬುದ್ಧಿಿವಂತೆಯಾಗಿದ್ದಾಾಳೆ. ಗಂಡಿನಂತೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋೋಗಿಯಾಗಿ, ಸಶಕ್ತಗಳಾಗಿ ತನ್ನ ಸಾಮರ್ಥ್ಯವನ್ನು ತೋರಿದ್ದಾಾಳೆ. ಆದರೆ ರಾಜಕೀಯ ಕ್ಷೇತ್ರಕ್ಕೆೆ ಬರಲು ಅವಳನ್ನು ಇಂದಿನ ಪುರುಷ ಪ್ರಧಾನ ಸಮಾಜ ಬಿಡುತ್ತಿಿಲ್ಲ. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಅಲ್ಪಸಂಖ್ಯಾಾತೆಯಾಗಿಯೇ ಉಳಿದಿದ್ದಾಾಳೆ.
ಮಹಿಳೆ ಪುರುಷನಷ್ಟೇ ಸಮಾನಳು ಎನ್ನುತ್ತಲೇ ಆಕೆಯ ಪ್ರಾಾತಿನಿಧ್ಯವನ್ನು ಕಡಿಮೆ ಮಾಡಲಾಗುತ್ತಿಿದೆ. ಜಿಲ್ಲಾಾ ಮಟ್ಟದ ರಾಜಕೀಯದಲ್ಲಿ ಅವಳು ಮೇಲೇರದಂತೆ ತಡೆಯುವ ಪ್ರಯತ್ನಗಳು ನಡೆಯುತ್ತವೆ. ಇವಳು ಬೆಳೆದರೆ ಮುಂದೆ ತಮಗೆ ಅವಕಾಶ ತಪ್ಪಿಿಹೋಗಬಹುದೆನ್ನುವ ಮುಂದಾಲೋಚನೆಯಿಂದಲೇ ಹಲವು ರಾಜಕಾರಣಿಗಳು ಇದಕ್ಕೆೆ ತಡೆ ಹಾಕುತ್ತಿಿರುವುದು ಗುಟ್ಟಾಾಗಿ ಉಳಿದಿಲ್ಲ.
ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಕಾನೂನಿಗೆ ಮಾತ್ರ ತಿದ್ದುಪಡಿ ತಂದು ಶೇ. 50ರಷ್ಟು ಮೀಸಲಾತಿಯನ್ನು ಮಹಿಳೆಗೆ ಕೊಡಲಾಗಿದೆ. ಇದರಿಂದ ಗ್ರಾಾಪಂ, ತಾಪಂ ಮತ್ತು ಜಿಪಂನಲ್ಲಿ ಮಾತ್ರ ಮಹಿಳೆಯರು ಹೆಚ್ಚು ಸಂಖ್ಯೆೆಯಲ್ಲಿ ಇದ್ದಾಾರೆ. ಆದರೆ ಇಲ್ಲಿಯೂ ಅಧಿಕಾರ ಚಲಾಯಿಸಲು ಸುಲಭದಲ್ಲಿ ಪುರುಷರು ಬಿಡುತ್ತಿಿಲ್ಲ. ಇಲ್ಲ ಸಲ್ಲದ ತೊಂದರೆ ಕೊಡುವ ಚಾಳಿಯೂ ಇದೆ. ಪ್ರತಿ ವಿಷಯದಲ್ಲೂ ತಲೆತೂರಿಸುವುದು, ಕಿರುಕುಳ ಕೊಡುವುದು, ಹಿಯಾಳಿಸುವ ಮನೋಭಾವ ಕೆಲವರಲ್ಲಿದೆ. ಇದನ್ನೆೆಲ್ಲ ಮೆಟ್ಟಿಿ ನಿಲ್ಲುವ  ಮಟ್ಟಿಿಗೆ ಮಹಿಳೆ ಬೆಳೆಯುತ್ತಿಿದ್ದಾಾಳಾದರೂ ಇನ್ನಷ್ಟು ಸದೃಢವಾದಾಗ ಮಾತ್ರ ಪಂಚಾಯತ್ ರಾಜ್‌ನಲ್ಲಿ ಮೀಸಲಾತಿಗೆ ಅರ್ಥ ಬರುತ್ತದೆ.
ಇನ್ನೊೊಂದೆಡೆ, ಅಧಿಕಾರಿಗಳ ಅಸಹಕಾರ ಸಾಕಷ್ಟಿಿದೆ. ಮಹಿಳೆ ಅಧ್ಯಕ್ಷೆ ಅಥವಾ ಉಪಾಧ್ಯಕ್ಷೆ ಎಂದಾದಲ್ಲಿ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಸಿಬ್ಬಂದಿಯವರೆಗೆ ಕೆಲಸದಲ್ಲಿ ಸಹಕರ ಕೊಡದೆ ವಿನಾಕಾರಣ ಮಾನಸಿಕ ಯಾತನೆ ನೀಡುವುದನ್ನು ಮಾಧ್ಯಮಗಳಲ್ಲಿ ಕಾಣಬಹುದು. ಅಧ್ಯಕ್ಷೆಗೆ ಸಮರ್ಪಕ ಮಾಹಿತಿ ನೀಡದೆ ಕತ್ತಲಲ್ಲಿ ಇಡುವುದು, ಅವರು ಹೇಳಿದ ಫೈಲ್‌ಗೆ ಸಹಿ ಹಾಕದಿರುವುದು, ಸಿಬ್ಬಂದಿಗಳ ಮೂಲಕ ತೊಂದರೆ ಕೊಡುವುದು ನಡೆಯುತ್ತಿಿದೆ. ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡಿದರೆ ಎಲ್ಲಿ ತಮ್ಮ ಪ್ರಾಾಬಲ್ಯ ಕಡಿಮೆಯಾಗುತ್ತದೆಯೋ ಎಂಬ ಅನುಮಾನ ಇಂತಹವರನ್ನು ಕಾಡುತ್ತಿಿರುತ್ತದೆ.
ಇನ್ನು ಕೆಲವು ಸಂದರ್ಭಗಳಲ್ಲಿ ಪತಿಯ ಕಾಟ. ಪತ್ನಿಿ ಅಧ್ಯಕ್ಷೆಯಾದರೂ ಪತಿಯನ್ನು ಕೇಳಿಯೇ ಸಹಿ ಹಾಕಬೇಕಾದ, ಸಭೆ ನಡೆಸಬೇಕಾದ ಸಂದರ್ಭ ಎದುರಾಗುತ್ತಿಿದೆ. ಪತಿ ಹಿಂಬಾಗಿಲ ಮೂಲಕ ಪತ್ನಿಿಯ ಮೂಲಕ ಅಧಿಕಾರ ಚಲಾಯಿಸುತ್ತಿಿರುತ್ತಾಾನೆ. ಇದನ್ನು ಬಹುತೇಕ ಎಲ್ಲಾಾ ಜಿಲ್ಲೆೆಗಳಲ್ಲೂ ಕಾಣಬಹುದು. ಗ್ರಾಾಪಂನಿಂದ ಹಿಡಿದು ಎಲ್ಲಾಾ ಹಂತದಲ್ಲಿಯೂ ಇದು ನಡೆಯುತ್ತಲೇ ಇದೆ.
ಶಾಸನಸಭೆ ಚುನಾವಣೆಯಲ್ಲಿ ಮಹಿಳೆಗೆ ಶೇ. 50ರಷ್ಟು ಮೀಸಲಾತಿ ಕೊಡಲು ಪುರುಷ ರಾಜಕಾರಣಿಗಳು ಒಪ್ಪುತ್ತಲೇ ಇಲ್ಲ. ಚುನಾವಣೆ ವೇಳೆ ಮಾತ್ರ ಇದನ್ನು ಘೋಷಿಸುತ್ತಿಿವೆ. ಜಾರಿಯಾಗದೆ ದಶಕದಿಂದ ಈ ಮಸೂದೆ ಕೊಳೆಯುತ್ತ ಬಿದ್ದಿದೆ. ಮಹಿಳೆ ಮುಂದೆ ಬಂದಲ್ಲಿ ಪುರುಷನ ಅಧಿಕಾರಕ್ಕೆೆ ಸಂಚಕಾರ ಬರಬಹುದು ಎನ್ನುವುದೇ ಇದರ ಉದ್ದೇಶ. ಈಗ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಕೆಲವೇ ಕೆಲವು ಮಹಿಳೆಯರಿದ್ದಾಾರೆ. ಅವರೆಲ್ಲರೂ ಮಹತ್ವದ ಹುದ್ದೆೆಯನ್ನು ಹೊಂದಿಲ್ಲ (ಒಂದಿಬ್ಬರು ಇರಬಹುದು). ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ನಿಭಾಯಿಸಲು ಮಾತ್ರ ಮಹಿಳೆ ಅರ್ಹಳು ಎಂಬ ಭಾವನೆ ನಮ್ಮನ್ನಾಾಳುವವರಲ್ಲಿದೆ. 
ವಿಧಾನಸಭೆ, ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡುವಾಗಲೇ ರಾಜಕೀಯ ಆರಂಭವಾಗುತ್ತದೆ. ಟಿಕೆಟ್ ಕೊಟ್ಟರೆ ನಾಳೆ ನಮ್ಮ ಪರಿಸ್ಥಿಿತಿ ಏನಾಗಬಹದು ಎನ್ನುವುದನ್ನು ಹಿರಿಯ ನಾಯಕರು ಯೋಚಿಸಿಯೇ ಹೆಜ್ಜೆೆ ಇಡುತ್ತಾಾರೆ. ಇಂತಹ ಮನಃಸ್ಥಿಿತಿ ರಾಜಕೀಯ ನಾಯಕರಲ್ಲಿ ಬೆಳೆದಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಬಲಿಷ್ಠವಾಗಿ ಬೆಳೆಯಲು ವಿಫಲಳಾಗಿದ್ದಾಾಳೆ.
ಇವೆಲ್ಲದರ ಜೊತೆಗೆ ಮಹಿಳೆಯ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ವಿಚಾರ ಇನ್ನೂ ಹಲವರ ಮನಸ್ಸಿಿನಿಂದ ಹೊರಬಂದಿಲ್ಲ. ಕುಟುಂಬ ನಿರ್ವಹಣೆಯನ್ನು ಅವಳು ನೋಡಿಕೊಂಡರೆ ಸಾಕು ಎನ್ನುತ್ತ ಕಟ್ಟುಪಾಡನ್ನು ಹೇರುವುದು ಇನ್ನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಹೆಚ್ಚಿಿನ ಸಂಖ್ಯೆೆಯಲ್ಲಿ ಮಹಿಳೆಯರು ರಾಜಕೀಯಕ್ಕೆೆ ಬರುತ್ತಿಿದ್ದಾಾರೆ. ಆದರೆ ಅವರಿಗೆ ಅವಕಾಶ ಕೊಡಲಾಗುತ್ತಿಿಲ್ಲ. ಇದರಿಂದ ಅವರು ಮುಂದೆ ಬಾರದಂತಾಗಿದ್ದಾಾರೆ. ಜೊತೆಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದೂ ಸಹ ಒಂದು ಚಾಕಚಕ್ಯತೆ. ಮಹಿಳೆ ಇಲ್ಲಿಯೂ ವಿಫಲಳಾಗಿದ್ದಾಾಳೆ. ಸಾಕಷ್ಟು ಮಹಿಳೆಯರು ಗ್ರಾಾಪಂ ಮಟ್ಟದಿಂದ ರಾಜಕೀಯದಲ್ಲಿ ಹೆಸರು ಮಾಡುತ್ತಿಿರುವರಾದರೂ ಹೆಚ್ಚಿಿನವರು ಪದಾಧಿಕಾರಿಯಾಗಲೂ ಅಂಜುವ ಸ್ಥಿಿತಿ ಇದೆ.
ಉದಾಹರಣೆಗೆ, ಪ್ರತಿ ಪಕ್ಷಗಳಲ್ಲೂ ಮಹಿಳಾ ಮೋರ್ಚಾ ಅಥವಾ ಘಟಕವಿದೆ. ಇದರಲ್ಲಿ ಪದಾಧಿಕಾರಿಗಳನ್ನು ನೇಮಿಸಲು ಮಹಿಳೆಯರನ್ನು ಕರೆತರಬೇಕಾದ ಸ್ಥಿಿತಿ ಇದೆ. ಕೆಲವು ಪದಾಧಿಕಾರಿಗಳು ನಾಮ್ ಕೆ ವಾಸ್ತೆೆ ಆದರೆ, ಬೆರಳೆಣಿಕೆಯಷ್ಟು ಮಾತ್ರ ಕಾರ್ಯನಿರತರಾಗಿರುತ್ತಾಾರೆ. ಸಭೆ ಕರೆದರೆ ಇಲ್ಲಸಲ್ಲದ ನೆಪ ಹೇಳಿ ತಪ್ಪಿಿಸಿಕೊಳ್ಳುವುದು, ಸುಮ್ಮನಿರುವುದು ಕಂಡುಬರುತ್ತಿಿದೆ. ಸಕ್ರಿಿಯವಾಗಿ ಕೆಲಸ ಮಾಡಿದರೆ ಉನ್ನತ ಸ್ಥಾಾನಕ್ಕೇರಲು ಅವಕಾಶ ದೊರೆಯುತ್ತದೆ. ಇದನ್ನೆೆಲ್ಲ ಆಕೆ ಬಳಸಿಕೊಳ್ಳಬೇಕಿದೆ. .
ಒಟ್ಟಿಿನಲ್ಲಿ, ಮಹಿಳೆ ರಾಜಕಿಯದಲ್ಲಿ ಮುಂದೆ ಬರಲು ಹಲವು ಅಡೆತಡೆ ಇದೆಯಾದರೂ ಇತ್ತೀಚೆಗೆ ಇದು ಸಾಕಷ್ಟು ನಿವಾರಣೆ ಆಗಿದೆ. ಇನ್ನಷ್ಟು ಸ್ವಂತಿಕೆಯನ್ನು ಅವಕಾಶದ ಜೊತೆ ಬೆಳೆಸಿಕೊಳ್ಳುವುದರ ಮೂಲಕ  ಹೆಸರು ಮಾಡುವಂತಾಗಬೇಕು. ಇದಕ್ಕೆೆ ಮಹಿಳಾ ಮೀಸಲಾತಿಯ ಅಗತ್ಯವೂ ಬೇಕಿದೆ. ಜೊತೆಗೆ ಪುರುಷರ ಸಹಕಾರ, ಬೆಂಬಲವೂ ಅನಿವಾರ್ಯ.
................................... 


No comments:

Post a Comment