ಅಂದು ಶರ್ಮಿಳಾ, ಇಂದು ಮಾಣಿಕ್
ಮತದಾರರ ಪ್ರಜ್ಞೆ ಯಾವ ದಿಕ್ಕಿಿನಲ್ಲಿ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಾಗದ ಸ್ಥಿಿತಿ ಇಂದಿದೆ. ಜನರ ಹಿತಕ್ಕೋೋಸ್ಕರ ಹೋರಾಟ ಮಾಡಿದರೂ, ಅವರ ಏಳ್ಗೆೆಗೆ ಬದ್ಧರಾಗಿದ್ದರೂ ಜನ ಬೆಂಬಲಿಸುವುದಿಲ್ಲ. ಹಣ, ಹೆಂಡ ಹಂಚಿ, ಆಮಿಷ ಒಡ್ಡಿಿ ಗೆಲ್ಲುವ ಇಂದಿನ ಚುನಾವಣೆಯಲ್ಲಿ ಇಂತಹವರ ಮಾನವೀಯ ಗುಣಗಳಿಗೆ ಬೆಲೆ ಇಲ್ಲ. ಮತದಾರರು ವ್ಯಕ್ತಿಿಯ ಹಿನ್ನೆೆಲೆ, ಹೋರಾಟ ಮತ್ತು ಸಾಧನೆ ನೋಡಿ ಮತ ಹಾಕುವ ಕಾಲ ಮುಗಿದಿದೆ. ಇದರಿಂದಾಗಿ ಪ್ರಾಾಮಾಣಿಕರು ಏನಾದರೂ ಸಾಧನೆ ಮಾಡಲು ಚುನಾವಣೆಗೆ ಇಳಿದರೆ ಅವರಿಗೆ ಸೋಲು ಖಚಿತ ಎನ್ನುವಂತಾಗಿದೆ. ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತ ಶಿವರಾಮ ಕಾರಂತರನ್ನೇ ಸೋಲಿಸಿದವರು ನಾವಲ್ಲವೆ?
ಮಾಣಿಕ್ ಸರ್ಕಾರ್ 20 ವರ್ಷ ತ್ರಿಿಪುರಾದ ಮುಖ್ಯಮಂತ್ರಿಿಯಾಗಿದ್ದವರು. ಮೊನ್ನೆೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ್ ಸಹಿತ ಅವರ ಸರಕಾರವೇ ಸೋಲುಂಡಿದೆ. ಪಕ್ಷ ರಾಜಕೀಯ, ಸರಕಾರ ಏನೇ ಇರಲಿ, ಮಾಣಿಕ್ ಪ್ರಾಾಮಾಣಿಕತೆ ಬಗ್ಗೆೆ ಈವರೆಗೆ ಯಾರೂ ಪ್ರಶ್ನಿಿಸಿಲ್ಲ. ಏಕೆಂದರೆ ಅವರಂತಹ ನಿಗರ್ವಿ, ಸರಳ, ಸಜ್ಜನ ವ್ಯಕ್ತಿಿತ್ವದವರು ತೀರಾ ವಿರಳ. ಇವರು ತಮಗಾಗಿ ಯಾವ ಆಸ್ತಿಿಯನ್ನೂ ಮಾಡಿಕೊಂಡವರಲ್ಲ. ಸ್ವಂತ ಮನೆ, ಕಾರು, ಇಲ್ಲ. ತಿಂಗಳಿಗೆ ಪಡೆಯುತ್ತಿಿದ್ದ 9200 ರೂ. ವೇತನದಲ್ಲಿ ಜೀವನ ಸಾಗಿಸುತ್ತಿಿದ್ದರು. ಅವರ ಪತ್ನಿಿಯೂ ಸಹ ನೌಕರಿಯಲ್ಲಿದ್ದವರು. ಪತಿಯ ಅಧಿಕಾರವನ್ನು ಎಂದಿಗೂ ದುರುಪಯೋಗ ಮಾಡಿಕೊಂಡವರಲ್ಲ. ಅವರ ಬಳಿ ಇರುವುದು ಕೇವಲ 20 ಗ್ರಾಾಂ ಬಂಗಾರ ಮಾತ್ರ. ಭಾರತದ ಅತಿ ಬಡವ ಮಾಜಿ ಮುಖ್ಯಮಂತ್ರಿಿ ಇವರು ಎಂದು ಧೈರ್ಯವಾಗಿ ಹೇಳಬಹುದು.
ಮಣಿಪುರದಲ್ಲಿ ಕಳೆದ ಮಾರ್ಚ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಮಾನವ ಹಕ್ಕು ಹೋರಾಟಗಾರ್ತಿ ಐರೋಮ್ ಶರ್ಮಿಳಾ ಸ್ಪರ್ಧಿಸಿ ಕೇವಲ 90 ಮತ ಪಡೆದರು. ಇವರು ಹೋರಾಡಿದ್ದು ಅಲ್ಲಿನ ಸಶಸ್ತ್ರ ದಳಗಳ ಕಾಯ್ದೆೆ ರದ್ದತಿ ಸಂಬಂಧ. ಬರೋಬ್ಬರಿ 16 ವರ್ಷ ಹೋರಾಟ, ಧರಣಿ, ಸತ್ಯಾಾಗ್ರಹದ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಜನರ ಹಿತಕ್ಕಾಾಗಿ ತಮ್ಮ ಬದುಕನ್ನೇೀ ಮುಡಿಪಾಗಿಟ್ಟರೂ ಜನರು ಚುನಾವಣೆಯಲ್ಲಿ ಶರ್ಮಿಳಾ ಅವರ ಕೈ ಹಿಡಿಯಲಿಲ್ಲ.
ಈ ಎರಡು ಘಟನೆಗಳನ್ನು ಅವಲೋಕಿಸಿದಾಗ ಮನ ಕಲಕುತ್ತದೆ. ದೇಶದಲ್ಲಿ ಯಾವ ರೀತಿಯ ರಾಜಕೀಯ ನಡೆಯುತ್ತಿಿದೆ ಮತ್ತು ಜನರು ಯಾವ ರೀತಿಯ ವ್ಯಕ್ತಿಿಗಳನ್ನು ಬಯಸುತ್ತಿಿದ್ದಾಾರೆ. ಪ್ರಾಾಮಾಣಿಕರಿಗೆ, ಹೋರಾಟಗಾರರಿಗೆ ಸಿಗುತ್ತಿಿರುವ ಬೆಲೆ ಏನೆನನ್ನುವುದನ್ನು ಅರಿಯಬಹುದು. ನಿಜಕ್ಕೂ ಮತದಾರರು ಯಾವುದನ್ನು ನಿರೀಕ್ಷಿಸುತ್ತಿಿದ್ದಾಾರೆ. ಅವರಿಗೆ ಬೇಕಾದವರು ಯಾವ ವ್ಯಕ್ತಿಿತ್ವದವರು, ಅವರ ಗುರಿ ಏನು ಏನ್ನುವುದೇ ಅರ್ಥವಾಗುತ್ತಿಿಲ್ಲ.
ಈ ಇಬ್ಬರೂ ಯೋಜನಾಬದ್ಧ ರಾಜಕೀಯ ತಂತ್ರಗಾರಿಕೆ ಮಾಡಿದವರಲ್ಲ. ಶರ್ಮಿಳಾ ಮಾನವ ಹಕ್ಕು, ಶೋಷಣೆ, ಭ್ರಷ್ಟಾಾಚಾರದ ವಿರುದ್ದ ಹೋರಾಡಿದರೆ, ಮಾಣಿಕ್ ಜನರ ಏಳಿಗೆಗೆ ಬದ್ಧರಾಗಿ ಪ್ರಾಾಮಾಣಿಕ ಕೆಲಸ ಮಾಡಿದವರು. ಚುನಾವಣೆಯ ಮೇಲೆ ಕಣ್ಣಿಿಟ್ಟು ಯೋಜನೆಯನ್ನು ಅವರು ಘೋಷಿಸಲಿಲ್ಲ. ವಿವಿಧ ಸಮುದಾಯದವರಿಗೆ ಆಮಿಷ ಒಡ್ಡಲಿಲ್ಲ.
ಪ್ರಾಾಮಾಣಿಕತೆ, ಸಜ್ಜನಿಕೆ, ಸರಳತನಕ್ಕೆೆ ಹಾಗಾದರೆ ಗೌರವವಿಲ್ಲವೇ, ಅಧಿಕಾರಾವಾಧಿಯಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದರೂ ಮತ್ತೆೆ ಮತ್ತೆೆ ಅಧಿಕಾರದ ದಾಹ ಅಂಟಿಸಿಕೊಂಡವರಿಗೆ, ತಮಗೆ, ತಮ್ಮ ಕುಟುಂಬದವರಿಗೆ ಕುಳಿತು ತಿನ್ನುವಷ್ಟು ಆಸ್ತಿಿ, ಪಾಸ್ತಿಿ ಮಾಡಿದವರಿಗೆ ಮಾತ್ರ ರಾಜಕೀಯದಲ್ಲಿ ಸ್ಥಾಾನಮಾನವೇ, ಧರ್ಮ, ಜಾತಿ, ವೋಟ್ ಬ್ಯಾಾಂಕ್ ಸೃಷ್ಟಿಿಸಿಕೊಂಡವರಿಗೆ ಕುಟುಂಬ ರಾಜಕೀಯ ಮಾಡುವವರಿಗೆ ಮಾತ್ರ ಅವಕಾಶವೇ... ಇತ್ಯಾಾದಿ ಪ್ರಶ್ನೆೆಗಳು ಉದ್ಭವಿಸುತ್ತವೆ.
ಸತ್ಯ, ನ್ಯಾಾಯಕ್ಕೆೆ ಬೆಲೆ, ಗೌರವ ಇನ್ನು ಮುಂದೆ ಸಿಗುವುದು ಕನಸಿನ ಮಾತು. ಏನಿದ್ದರೂ ಭ್ರಷ್ಟಾಾಚಾರ ಮಾಡಿ ತಿಂದು ಆಳುವವರಿಗೆ ಬೆಂಬಲ. ಮಹಾತ್ಮಾಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿಿ ಅವರಂತಹ ನಿಷ್ಕಳಂಕ, ತ್ಯಾಾಗಮಯಿ, ಸರಳ ವ್ಯಕ್ತಿಿತ್ವದವರು ಇನ್ನು ಮುಂದೆ ರಾಜಕಾರಣದಲ್ಲಿ ಕಾಣಿಸಿಗುವುದು ಅಪರೂಪ. ಆದರೂ ಅಲ್ಲಲ್ಲಿ ಇದ್ದಾಾರೆ. ಆಂತಹವರು ಚುನಾವಣಾ ಕಣಕ್ಕಿಿಳಿದಾಗ ಸಿಗುವ ಮತ ಎಷ್ಟು ಎನ್ನುವುದನ್ನು ಮೇಲಿನ ಉದಾಹರಣೆ ಮೂಲಕ ಗಮನಿಸಬಹುದು.
ಈಗ ಏನಿದ್ದರೂ ಸೀರೆ, ಪಂಚೆ, ಕುಕ್ಕರ್ಗಳನ್ನು ಹಂಚಿ ಗೆಲ್ಲುವವರಿಗೆ ಕಾಲ. ಕೋಟಿ ಕೋಟಿ ಬೆಲೆಬಾಳುವ ಬಂಗಲೆ ಇರಬೇಕು, ಜನರ ಸ್ಥಿಿತಿ-ಗತಿ, ಸಮಸ್ಯೆೆ ಬೇಡವಾದ, ಕೆಲವೇ ಜನರನ್ನು ಓಲೈಸುವ, ನಾಟ್ ರೀಚೆಬಲ್ ಆಗುವವರಿಗೆ ನಾವು ಮತ ಹಾಕುತ್ತೇವೆ. ಅಂತಹವರಿಗೇ ಟಿಕೆಟ್ ಕೊಡಬೇಕೆಂದು ಹೋರಾಟವನ್ನೂ ಮಾಡುತ್ತೇವೆ. ಇದು ಈ ದೇಶದ ರಾಜಕೀಯ ಸ್ಥಿಿತಿ.
ಬಹುಶಃ ಮುಂದಿನ ದಿನಮಾನಗಳಲ್ಲಿ ಬಡ, ಪ್ರಾಾಮಾಣಿಕ, ಸಜ್ಜನರಿಗೆ ರಾಜಕೀಯದಲ್ಲಿ ಕಿಮ್ಮತ್ತಿಿಲ್ಲ. ಅಂತಹವರು ಚುನಾವಣಾ ರಾಜಕೀಯಕ್ಕೆೆ ಅನರ್ಹರು. ಹಣ ಚೆಲ್ಲಿ, ಹಣ ಮೊಗೆಯುವ ವ್ಯಕ್ತಿಿತ್ವ ಅವರಲ್ಲಿಲ್ಲವಲ್ಲ, ಸ್ವಂತ ಸೂರೇ ಇಲ್ಲದ ಮೇಲೆ ಹಣ ಚೆಲ್ಲುವುದೆಲ್ಲಿಂದ ಬಂತು.
ಇಂದಿನ ಮತದಾರರಿಗೆ ಬೇಕಾದ ವಿಷಯಗಳು ಯಾವುವು, ಬೇಕಾದ ವ್ಯಕ್ತಿಿಗಳಾರು, ತತ್ವ, ಸಿದ್ಧಾಾಂತ ಬೇಕೇ, ಜನಸೇವೆ ಮಾಡುವವವರು ಬೇಕೇ ಎನ್ನುವುದು ಅರ್ಥವಾಗುತ್ತಿಿಲ್ಲ. ಚುನಾವಣೆ ಎನ್ನುವುದು ರಾಜಕೀಯ ಹಣಾಹಣಿಯಾಗಿ ಮಾರ್ಪಡುತ್ತಿಿರುವುದರಿಂದ ಬಡ, ಪ್ರಾಾಮಾಣಿಕರು, ಸಜ್ಜನರು ಇವರ ಹೋರಾಟದಲ್ಲಿ ಕಾಣುತ್ತಿಿಲ್ಲ.
ಇದನ್ನೆೆಲ್ಲ ನೋಡಿದಾಗ, ಭಾರತೀಯ ಮತದಾರನ ಮನಃಸ್ಥಿಿತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎನಿಸುತ್ತದೆ. ಆದರೆ ಅರಿವಾಗುವ ಸತ್ಯ ಏನೆಂದರೆ, ಸೋತಿದ್ದು ಪ್ರಾಾಮಾಣಿಕರು, ಸಜ್ಜನರು, ಸತ್ಯವಂತರಲ್ಲ, ಬದಲಾಗಿ ಪ್ರಜಾಸತ್ತೆೆ ಎನ್ನುವುದು. ದಾಸರ ‘ಸತ್ಯವಂತರಿಗಿದು ಕಾಲವಲ್ಲ’ ಎಂಬ ಪದ್ಯ ಇಂದಿಗೂ ಪ್ರಸ್ತು ತ ಎನಿಸುತ್ತಿಿದೆ.
.....................................

No comments:
Post a Comment