ಆಟೋ ಚಾಲಕರಿಗೆ ಮೂಗುದಾರ ಹಾಕುವವರಿಲ್ಲವೇ?
ಕೆಲವು ದಿನಗಳಿಂದ ಪ್ರಯಾಣಿಕರು ಆಟೋ ಚಾಲಕರಿಂದಾದ ವಂಚನೆ ಬಗ್ಗೆೆ ಹೆಚ್ಚು ಮಾತನಡುತ್ತಿಿದ್ದಾಾರೆ. ಮೀಟರ್ ಇಲ್ಲದೆ ಆಟೋ ಚಾಲನೆ, ಮನಬಂದಂತೆ ದರ ಕೇಳುವುದು, ಆಟೋದಲ್ಲಿ ಕರೆದೊಯ್ದು ಇಳಿದಾಕ್ಷಣ ಹೆಚ್ಚುವರಿ ಹಣ ಕೇಳಿ ಕೆಟ್ಟದಾಗಿ ಮಾತನಾಡುವುದು ಹೆಚ್ಚುತ್ತಿಿದೆ. ಮೀಟರ್ ಇದ್ದರೂ ಹಾಕದೆ ಜನರನ್ನು ಗೋಳುಹೊಯ್ದುಕೊಳ್ಳುವವರಿಗೆ ಸಾರ್ವಜನಿಕರೇ ಬುದ್ಧಿಿ ಕಲಿಸಬೇಕಾದ ಪರಿಸ್ಥಿಿತಿ ತಲೆದೋರಿದೆ. ಪೊಲೀಸರ ಕ್ರಮಕ್ಕೂ ಜಗ್ಗದ ಇಂತಹ ಚಾಲಕರಿಗೆ ಮೂಗುದಾರ ಹಾಕುವವರಾರು?
ಶಿವಮೊಗ್ಗ ನಗರದಲ್ಲಿ ಆಟೋ ಚಾಲಕರನ್ನು ನಿಯಂತ್ರಿಿಸುವವರೇ ಇಲ್ಲದ ಸ್ಥಿಿತಿ ನಿರ್ಮಾಣವಾಗಿದೆ. ಅವರು ಹೇಳಿದ್ದೇ ದರ, ಬೇಕಿದ್ದರೆ ಆಟೋದಲ್ಲಿ ಬನ್ನಿಿ,. ಇಲ್ಲವಾದರೆ ಬಿಡಿ, ಮಿಟರ್ ಇದೆ ಎಂದಾಕ್ಷಣ ಅದನ್ನು ಹಾಕಬೇಕೆಂದೇನಿಲ್ಲ. ಪೊಲೀಸರೇ ನಮ್ಮನ್ನು ಕೇಳುವುದಿಲ್ಲ. ನೀವೇಕೆ ಪ್ರಶ್ನಿಿಸುತ್ತೀರಿ... ಇತ್ಯಾಾದಿ ಮಾತುಗಳು.
ಆಟೋ ಮೀಟರ್ನ್ನು ಎಲ್ಲಾಾ ಆಟೋದವರು ಅಳವಡಿಸಿಕೊಂಡು ಪ್ರದರ್ಶಿಸುತ್ತಿಿದ್ದಾಾರೆಯೇ ವಿನಾ ಶೇ. 90ರಷ್ಟು ಚಾಲಕರು ಅದನ್ನು ಉಪಯೋಗಿಸುತ್ತಿಿಲ್ಲ. ಕನಿಷ್ಠ ದರ 30 ರೂ. ಇದ್ದರೂ ಅವರು ಪಡೆಯುವುದು 40 ರೂ. ವನ್ನು. ಪ್ರಯಾಣಿಕರು ಆಟೋ ಹತ್ತಿಿ ಇಳಿದ ನಂತರ ದರ ಕೇಳುತ್ತಿಿರುವುದರಿಂದ ಈ ಸ್ಥಿಿತಿ ನಿರ್ಮಾಣವಾಗಲು ಕಾರಣವಾಗಿದೆ. ಮೊದಲೇ ಕೇಳಿದರೆ ಮೀಟರ್ ಹಾಕುವುದಿಲ್ಲ. ಇಂತಿಷ್ಟು ದರವಾಗುತ್ತದೆ ಎಂದು ಕಡ್ಡಿಿಮುರಿದಂತೆ ಹೇಳುತ್ತಾಾರೆ. ಚೌಕಾಸಿ ಮಾಡಿದರೆ ಬರುವುದಿಲ್ಲ ಹೋಗಿ ಎಂಬ ಮಾತು.
ಮೀಟರ್ ಕನಿಷ್ಟ ದರ ಕಡಿಮೆಯಾಗಿದೆ. ನಾವು ಹೋಗಿ ಬಂದರೆ ಅದು ನಷ್ಟವಾಗುತ್ತದೆ. ಮೀಟರ್ ಹಾಳಾದರೆ ಶೀಘ್ರ ದುರಸ್ತಿಿ ಮಾಡುವವರಿಲ್ಲ. ನಮ್ಮ ಸಂಪಾದನೆ ಇದರಿಂದ ನಷ್ಟವಾಗುತ್ತದೆ. ಗ್ಯಾಾಸ್ ಬೆಲೆ ಏರಿದೆ. ಇಷ್ಟಾಾದರೂ ಸಾರಿಗೆ ಇಲಾಖೆಯವರು ದರ ಪರಿಷ್ಕರಿಸಿಲ್ಲ. ನಮ್ಮ ಸಮಸ್ಯೆೆಗೆ ಉತ್ತರ ಹೇಳುವವರಾರು ಎಂದು ಪ್ರಶ್ನೆೆಗಳ ಸುರಿಮಳೆಯನ್ನೇ ನಮ್ಮ ಮುಂದಿಟ್ಟು ಬಾಯಿ ಮುಚ್ಚಿಿಸುತ್ತಿಿದ್ದಾಾರೆ.
ಪೊಲೀಸ್ ಇಲಾಖೆ ಮೀಟರ್ ಹಾಕದ ಆಟೋಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳುತ್ತಲೇ ಬಂದಿದೆ. ಕಂಡಲ್ಲೆೆಲ್ಲ ದಂಡ ಹಾಕುತ್ತಲೂ ಇದೆ. ಆದರೆ ಕಣ್ತಪ್ಪಿಿಸಿ, ಪ್ರಯಾಣಿಕರನ್ನು ಮೋಸಗೊಳಿಸುವವರೇ ಅಧಿಕ ಸಂಖ್ಯೆೆಯಲ್ಲಿದ್ದಾಾರೆ. ಅದರಲ್ಲೂ ಯುವ ಮತ್ತು ಮಧ್ಯವಯಸ್ಕ ಚಾಲಕರು ಇದರಲ್ಲಿ ಹೆಚ್ಚು ಕಾರ್ಯನಿರತರಾಗಿದ್ದಾಾರೆ. ಇಂತಹವರನ್ನು ಪತ್ತೆೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಪ್ರಯಾಣಿಕರನ್ನು ಸಾಗಿಸುವ ಸೇವೆ ಮಾಡಿ ಹೊಟ್ಟೆೆಹೊರೆದುಕೊಳ್ಳಬೇಕಾದ ವೃತ್ತಿಿ ಇದಾದರೂ ಪ್ರಯಾಣಿಕರನ್ನು ದೋಚುವುದು, ಶೋಷಿಸುವುದು ಕಸುಬಾಗಿದೆ.
ಮೀಟರ್ ಹಾಕದಿದ್ದರೆ ಆಟೋ ಹತ್ತುವುದಿಲ್ಲ ಎಂದು ಸಾರ್ವಜನಿಕರು ಕಟ್ಟುನಿಟ್ಟಾಾಗಿ ಪಟ್ಟು ಹಿಡಿಯಬೇಕಿದೆ. ಇಂತಹ ಸ್ಥಿಿತಿ ಹತ್ತಾಾರು ಕಡೆ ನಡೆದಲ್ಲಿ ಸ್ವಲ್ಪ ಬುದ್ದಿಯನ್ನು ಇಂತಹ ಚಾಲಕರಿಗೆ ಕಲಿಸಬಹುದಾಗಿದೆ. ಪೊಲೀಸರೂ ಸಹ ಮೀಟರ್ ಹಾಕಿದ್ದಾಾನೆಯೋ ಇಲ್ಲವೋ ಎನ್ನುವುದನ್ನು ವೃತ್ತಗಳಲ್ಲಿ ನಿಂತು ತಪಾಸಿಸುವ ಕೆಲಸ ಹೆಚ್ಚಿಿಸಬೇಕಿದೆ. ಈಗ ಚಾಲಕರಿಗೆ ಪೊಲೀಸರ ಭೀತಿಯೇ ಇಲ್ಲ. ಪೊಲೀಸರು ಹೆಲ್ಮೆೆಟ್ ಇಲ್ಲದವರನ್ನು, ಬೈಕ್ನವರನ್ನು ಹಿಡಿದು ವಿಚಾರಿಸುವುದು, ದಂಡ ಹಾಕುವುದು ಹೆಚ್ಚಾಾಗಿದೆಯೇ ವಿನಾ ಆಟೋ ಚಾಲಕರನ್ನು ಹಿಡಿದು ಕೇಳುವುದೇ ಇಲ್ಲ.
ಪ್ರಯಾಣಿಕರನ್ನು ದೋಚುವ ಪ್ರವೃತ್ತಿಿಗೆ ಎಸ್ಪಿಿಯವರು ಕಡಿವಾಣ ಹಾಕುವುದಾಗಿ ಪದೇ ಪದೆ ಹೇಳುತ್ತಲೇ ಇದ್ದಾಾರೆ. ಅದಕ್ಕೆೆ ಅವರ ಸಿಬ್ಬಂದಿಗಳು ಮೊದಲು ಸಹಕರಿಸುವದು ಅಗತ್ಯ. ಜೊತೆಗೆ ಪ್ರಯಾಣಿಕರೂ ಸಹ ದೂರು ಸಲ್ಲಿಸುವ ಪ್ರವೃತಿಯನ್ನು ಅಳವಡಿಸಿಕೊಳ್ಳಬೇಕು. ಎಷ್ಟು ದರ ಹೇಳಿದರೂ ಕೊಟ್ಟು ಪ್ರಯಾಣಿಸಿ, ಇಳಿದ ನಂತರ ಗಲಾಟೆ ಮಾಡುವ ಬದಲು ಆಟೋ ಏರುವ ಮುನ್ನವೇ ಬಗೆಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಟೋ ನಂಬರ್ ಬರೆದುಕೊಂಡು ದೂರು ಕೊಡುವಂತಾಗಬೇಕು.
ದಿನೇ ದಿನೇ ಆಟೋದವರು ಉಪಟಳ ಜಾಸ್ತಿಿಯಾಗುತ್ತಲೇ ಇದೆ. ಸಾರ್ವಜನಿಕರ ದೂರು ಬರುವುದೇ ಆಟೋಗಳ ವಿರುದ್ದ. ಅದರಲ್ಲೂ ವೃದ್ಧರನ್ನು, ಮಹಿಳೆಯರನ್ನು ವಂಚಿಸುವ ಪ್ರಮಾಣ ಅತ್ಯಧಿಕ. ಆಟೋ ಸಂಖ್ಯೆೆ ಹೆಚ್ಚಿಿದಂತೆ ಪೊಲೀಸರಿಗೆ ತಲೆನೋವು ಸಹ ಹೆಚ್ಚಿಿದೆ. ಗ್ರಾಾಹಕರ ಸುಲಿಗೆ ಮಿತಿಮೀರುತ್ತಿಿದೆ. ಸಾರಿಗೆ ಇಲಾಖೆಯವರು ಇದರ ಬಗ್ಗೆೆ ತಲೆಕೆಡಿಸಿಕೊಂಡಿಲ್ಲ. ಪೊಲೀಸರು ಇನ್ನಷು ಉಗ್ರ ಕ್ರಮ ಜರುಗಿಸುವುದು ಅನಿವಾರ್ಯ ಎನ್ನುವ ಸ್ಥಿಿತಿ ನಿರ್ಮಾಣವಾಗಿದೆ.
published on march 1-2018
..................................................

No comments:
Post a Comment