ಆಸ್ತಿ ಸರ್ವೇ ನಡೆಸದೆ ಪ್ರಾಪರ್ಟಿ ಕಾರ್ಡ್ ಜಾರಿ
ಪ್ರಾಪರ್ಟಿ ಕಾರ್ಡ್ ನೀಡುವ ಮುನ್ನ ಸಮಗ್ರವಾಗಿ ಆಸ್ತಿಯ ಸರ್ವೇ ನಡೆಯಬೇಕು. ಆದರೆ ಇದನ್ನು ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಇದರಿಂದ ಸಮಸ್ಯೆ ಹುಟ್ಟಿಕೊಂಡಿದೆ. ಸರ್ವೇ ಆದ ನಂತರ ನೊಟಿಫಿಕೇಶನ್ ಆಗಬೇಕು, ಆನಂತರ ಆಕ್ಷೇಪಣೆ ಕೇಳಬೇಕು. ಇದಾದ ಬಳಿಕ ಅಂತಿಮ ನೊಟಿಫಿಕೇಶನ್ ನಡೆಯಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಮಾಡದೆ ಆರಂಭಿಸಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದ್ದು ನಿಜ. ಇನ್ನು ಮುಂದೆ ಸರ್ವೇ ನಡೆಸಿಯೇ ಪ್ರಾಪರ್ಟಿ ಕಾರ್ಡ್ ನೀಡಲಾಗುವುದು. ಈಗ ಜನ ಅಲೆಯುವಂತಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು
- -ಕಾಗೋಡು ತಿಮ್ಮಪ್ಪ.
ಇಡೀ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಕಂದಾಯ ಇಲಾಖೆಯ ಸರ್ವೇ ವಿಭಾಗವು ಉಪಗ್ರಹ ಆಧಾರಿತ ಆಸ್ತಿ ಮಾಲಿಕತ್ವ ದಾಖಲೆ (ಯುಪಿಓಆರ್) ಯೋಜನೆ ಅನುಷ್ಠಾನಗೊಳಿಸಲಾಗಿದೆ. ಕಳೆದ ಸರಿಸುಮಾರು ಒಂದು ವರ್ಷದಿಂದ ಸ್ಥಿರಾಸ್ತಿ ನೊಂದಣಿಗೆ ಈ ಯೋಜನೆಯಡಿ ನೀಡುವ ಪ್ರಾಪರ್ಟಿ ಕಾರ್ಡ್ (ಪಿ.ಆರ್.) ಹೊಂದಿರುವುದು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉಪಗ್ರಹದ ಮೂಲಕ ಖಾಸಗಿ ಹಾಗೂ ಸರ್ಕಾರಿ ಆಸ್ತಿ ಗುರುತಿಸುವುದು, ಸ್ಥಿರಾಸ್ತಿ ನೊಂದಣಿಯ ವೇಳೆ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವುದು, ಆಸ್ತಿ ಮಾಲಿಕತ್ವವನ್ನು ವೈಜ್ಞಾನಿಕವಾಗಿ ಗುರುತಿಸುವುದು, ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಮೊದಲಾದ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಯುಪಿಓಆರ್ ಯೋಜನೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿತ್ತು.
ಪ್ರಾಯೋಗಿಕವಾಗಿ ಶಿವಮೊಗ್ಗ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಐದಾರು ನಗರಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈ ನಗರಗಳಲ್ಲಿ ಉಪಗ್ರಹ ಆಧಾರಿತ ಸರ್ವೇ ಕಾರ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ನಾನಾ ಕಾರಣಗಳಿಂದ ಕೆಲವು ನಗರಗಳಲ್ಲಿ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಯಲಿಲ್ಲ. ಅಂತಿಮವಾಗಿ ಶಿವಮೊಗ್ಗ ಹಾಗೂ ಮೈಸೂರು ನಗರಗಳಲ್ಲಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು.
ಅದರಂತೆ ಎರಡು ನಗರಗಳಲ್ಲಿಯೂ ಯುಪಿಓಆರ್ ಕಚೇರಿ ಕೂಡ ತೆರೆಯಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಮಾತ್ರ ಯೋಜನೆ ಕಾರ್ಯಗತಗೊಳಿಸಿ, ಸ್ಥಿರಾಸ್ತಿ ನೊಂದಣಿಗೆ ಯುಪಿಓಆರ್ ಕಚೇರಿಯಿಂದ ಪ್ರಾಪರ್ಟಿ ಕಾರ್ಡ್ ಪಡೆಯಬೇಕೆಂಬ ನಿಬಂಧನೆ ಹೇರಲಾಯಿತು. ಈಗ ಶಿವಮೊಗ್ಗ ನಗರದಲ್ಲಿ ಪ್ರಾಪರ್ಟಿ ಕಾರ್ಡ್ ಹೊಂದಿದ ಸ್ಥಿರಾಸ್ತಿಗಳನ್ನು ಮಾತ್ರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಣಿ ಮಾಡಲಾಗುತ್ತಿದೆ.
ಒಟ್ಟಾರೆ ಶಿವಮೊಗ್ಗದಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಸ್ಥಿರಾಸ್ತಿಗಳನ್ನು ಗುರುತಿಸಲಾಗಿದೆ. ಆದರೆ ಇಲ್ಲಿಯವರೆಗೂ ಇವುಗಳ ಮಾಲಿಕರಿಗೆ ಪ್ರಾಪರ್ಟಿ ಕಾರ್ಡ್ ನೀಡಿಲ್ಲ. ಮತ್ತೊಂದೆಡೆ ಕೆಲವು ಮಾಲಿಕರು ಕೂಡ ತಮ್ಮ ಸ್ಥಿರಾಸ್ತಿಗಳಿಗೆ ಪಿ.ಆರ್.ಕಾರ್ಡ್ ಮಾಡಿಸುವ ಗೋಜಿಗೆ ಹೋಗಿಲ್ಲ. ನೊಂದಣಿ, ಕ್ರಯಪತ್ರ ಮಾಡಿಸುವ ಅಗತ್ಯವಿರುವವರು ಮಾತ್ರ ಸ್ಥಿರಾಸ್ತಿಗಳಿಗೆ ಕಾರ್ಡ್ ಮಾಡಿಸುತ್ತಿದ್ದಾರೆ. ಯುಪಿಓಆರ್ ಕಚೇರಿಯಲ್ಲಿ ಪ್ರಾಪರ್ಟಿ ಕಾರ್ಡ್ ನೀಡುವ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರು ದಿನನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. ಹಾಗೆಯೇ ಪ್ರಾಪರ್ಟಿ ಕಾರ್ಡ್ನಲ್ಲಿ ಹತ್ತು ಹಲವು ಲೋಪದೋಷಗಳಿರುತ್ತವೆ. ಇದು ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ.
ಹಲವು ದಿನಗಳಿಂದ ಯುಪಿಓಆರ್ ಕಚೇರಿಯ ಅಂತರ್ಜಾಲದಲ್ಲಿ ಸರ್ವರ್ ಡೌನ್, ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರಿಂದ ಕೆಲವು ದಿನಗಳ ಕಾಲ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಯುಪಿಓಆರ್ ವೆಬ್ ತಾಣ ತೆರೆದುಕೊಳ್ಳುತ್ತಿರಲಿಲ್ಲ. ಸ್ಥಿರಾಸ್ತಿ ನೊಂದಣಿ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿತ್ತು. ಇದು ಸ್ಥಿರಾಸ್ತಿ ನೊಂದಣಿ ಮಾಡಿಸಲೇಬೇಕಾದ ತುರ್ತು ಅಗತ್ಯವಿರುವವರು ತೀವ್ರ ಸಂಕಷ್ಟ ಪಡುವಂತಾಗಿತ್ತು.
ಸಬ್ ರಿಜಿಸ್ಟಾರ್ ಕಚೇರಿಯ ಸಮಸ್ಯೆ ಪರಿಹಾರವಾದರೂ ಯಪಿಓಆರ್ ಕಚೇರಿಯಲ್ಲಿನ ಸಮಸ್ಯೆ ಪರಿಹಾರವಾಗುತ್ತಿಲ್ಲ. ಕಾಲಮಿತಿಯಲ್ಲಿ ಪ್ರಾಪರ್ಟಿ ಕಾರ್ಡ್ ಸಿಗುತ್ತಿಲ್ಲ. ಸರ್ವರ್ ಡೌನ್, ತಂತ್ರಾಂಶ ಅಪ್ಡೇಟ್ ಮಾಡಲಾಗುತ್ತಿದೆ ಎಂಬಿತ್ಯಾದಿ ಸಿದ್ಧ ಉತ್ತರಗಳನ್ನು ಕಚೇರಿ ಸಿಬ್ಬಂದಿಗಳು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
---------------------------------------

No comments:
Post a Comment