ಉಪ್ಪಿ ಪರಿಕಲ್ಪನೆ ಒಳ್ಳೆಯದು, ಆದರೆ.....
ರಾಜಕೀಯ ಸೇರಲು ಅಧಿಕಾರಿಗಳು, ನಿವೃತ್ತರು ಮುಂದಾಗುತ್ತಿದ್ದಾರೆ. ಸಿನಿಮಾನಟರೂ ಸಹ ಈಗ ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣ ಭಾರತದ ರಾಜಕಾರಣದಲ್ಲಿ ಆಂದ್ರ, ತಮಿಳುನಾಡಿನಲ್ಲಿ ಸಿನಿಮಾಕ್ಕೆ ಬಣ್ಣ ಹಚ್ಚಿದವರು ರಾಜ್ಯವನ್ನೂ ಆಳಿದ ಉದಾಹರಣೆ ಕಣ್ಮುಂದಿದೆ. ಆದರೆ ಕರ್ನಾಟಕದಲ್ಲಿ ನಟರು ರಾಜಕೀಯವಾಗಿ ಪ್ರಕಾಶಮಾನರಾದ ಉದಾಹರಣೆ ಇಲ್ಲ. ಆದರೂ ಅನೇಕ ನಟರು ರಾಜಕೀಯ ಚಟಕ್ಕೆ ಬೀಳುತ್ತಿದ್ದಾರೆ. ನಟ ಉಪೇಂದ್ರ. ಪ್ರಜಾಕೀಯ ಎಂಬ ಸಂಘಟನೆ ಮೂಲಕ ರಾಜಕೀಯ ಪಕ್ಷ ಕಟ್ಟಲು ಸಿದ್ಧರಾಗಿದ್ದಾರೆ. ತಮ್ಮ ರಾಜಕೀಯ ನಿಲುವು ಎನು, ರಾಜಕೀಯ ಎಂದರೆ ಹೇಗಿರಬೇಕೆಂಬ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಆದರೆ ಇವುಗಳನ್ನೆಲ್ಲ ಜಾರಿಗೊಳಿಸುವುದು ಅಷ್ಟು ಸುಲಭವೇ ಎಂಬ ಪ್ರಶ್ನೆ ನಮ್ಮ ಮುಂದಿದೆ. ಆ ಬಗ್ಗೆ ಒಂದಷ್ಟು ವಿಚಾರ.
ತಮಿಳುನಾಡಿನ ಹಿರಿಯನಟರಿಬ್ಬರಾದ ಕಮಲ್ಹಾಸನ್ ಮತ್ತು ರಜನಿಕಾಂತ್ ತಾವಿಬ್ಬರೂ ರಾಜಕೀಯಕ್ಕೆ ಪದಾರ್ಪಣೆ ಮಾಡುವ ವಿಚಾರವನ್ನು ಕೆಲವು ತಿಂಗಳಿನಿಂದ ಹೇಳುತ್ತಿದ್ದರೂ ಯಾವಾಗ ಕಾಲಿಡುವೆವು ಎನ್ನುವ ಗುಟ್ಟನ್ನು ಬಿಟ್ಟುಕೊಡದೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಈ ಮಧ್ಯೆ ಕನ್ನಡದ ನಟ ‘ರಿಯಲ್ ಸ್ಟಾರ್’ ಉಪೇಂದ್ರ ತಾನು ‘ಪ್ರಜಾಕೀಯ’ ಎಂಬ ರಾಜಕೀಯ ಸಂಘಟನೆಯನ್ನು ಸ್ಥಾಪಿಸುವುದಾಗಿ ಆಗಸ್ಟ್ 12ರಂದು ಘೋಷಿಸಿದ್ದಾರೆ.
ಉಪೇಂದ್ರ ಬಿಡುಗಡೆಗೊಳಿಸಿರುವ ರಾಜಕೀಯ ಪರಿಕಲ್ಪನೆಗಳು ಉತ್ತಮ ಉದ್ದೇಶವನ್ನು ಹೊಂದಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಪರಿಕಲ್ಪನೆಗಳನ್ನು ಇಟ್ಟುಕೊಂಡೇ ಎಲ್ಲರೂ ರಾಜಕೀಯಕ್ಕೆ ಬರುತ್ತಾರೆ. ಆದರೆ ಯಾವಾಗ ತನ್ನಿಂದ ಈಗಿನ ಹದಗೆಟ್ಟ ರಾಜಕೀಯ ವಾತಾವರಣವನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವುದು ತಿಳಿಯುತ್ತದೆಯೋ ಆಗ ಅದಕ್ಕೇ ಶರಣಾಗುತ್ತಾರೆ. ಇಲ್ಲವೇ ಅದರಲ್ಲೇ ಲೀನವಾಗಿಬಿಡುತ್ತ್ತಾರೆ. ಇದು ನಮ್ಮ ವ್ಯವಸ್ಥೆಯಲ್ಲಿ ಆಗಾಗ ಕಂಡುಬರುವ ದೃಶ್ಯ.
ಉಪೇಂದ್ರ ಹೇಳಿದ ಕೆಲವು ಪ್ರಮುಖ ಅಂಶಗಳನ್ನು ಗಮನಿಸಿ. ತಮ್ಮ ಸಂಘಟನೆ ಸಂಪೂರ್ಣ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿಂತಿರುತ್ತದೆ. ಹಣ ಮತ್ತು ಜಾತಿಯ ಹೊರತಾಗಿಯೂ ರಾಜಕೀಯ ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ಜನರೇ ರಾಜರಾಗಿರುವಾಗ ಬಹಿರಂಗ ಸಮಾವೇಶದ ಮೂಲಕವೇ ಎಲ್ಲರನ್ನೂ ಏಕೆ ಸೇರಿಸಬೇಕು, ಜನರಿಗಾಗಿ ನಾವು ಏನನ್ನಾದರೂ ಮಾಡಬೇಕು. ಅನುಯಾಯಿಗಳು ಬೇಡ, ಕಾರ್ಯಕರ್ತರು ಬೇಕು. ತಮಗೆ ನೀಡುವ ಗುರಿಯನ್ನು ಸಮರ್ಪಕವಾಗಿ ಮಾಡುವವರು ಬೇಕು. ಶಾಲೆಯಿಂದ ಹಿಡಿದು ನೌಕರಿ ಸೇರುವವರೆಗೆ ಪರಿಕ್ಷೆ ಎದುರಿಸುವ ಈ ಕಾಲದಲ್ಲಿ ಜನಪ್ರತಿನಿಧಿಯಾಗುವವರಿಗೆ ಪರೀಕ್ಷೆಯನ್ನೇಕೆ ಮಾಡಬಾರದು ಮುಂತಾದುವು.
ಇವೆಲ್ಲ ಕೇಳಲು ಬಲು ಚೆನ್ನ. ಆದರೆ ಅನುಷ್ಠಾನಕ್ಕೆ ತರುವುದು ಸುಲಭದ ಮಾತಲ್ಲ. ರಾಜಕೀಯ ಎನ್ನುವುದು ಬಣ್ಣದ ಮಾತುಗಳಿಂದ ಜನರನ್ನು ಸೆಳೆಯುವುದಲ್ಲ. ಅಥವಾ ಬಣ್ಣ ಹಚ್ಚಿಕೊಂಡು ತೆರೆಯ ಮೆಲೆ ಹತ್ತಾರು ಜನರನ್ನು ಹೊಡೆದುರುಳಿಸಿ ಸೀಟಿ ಹೊಡೆಯಿಸಿಕೊಳ್ಳುವುದಲ್ಲ, ಸಿನಿಮಾ ಬಿಡುಗಡೆ ದಿನ ದೊಡ್ಡ ಕಟೌಟ್ ಹಾಕಿಸಿ ಹಾಲೆರೆಸಿಕೊಂಡು ಪೂಜೆ ಮಾಡಿಸಿಕೊಳ್ಳುವಂತದ್ದಲ್ಲ. ಹೊಸದಾಗಿ ರಾಜಕೀಯಕ್ಕೆ ಬರುವವರಿಗೆ ಬಹುದೊಡ್ಡ ಕನಸುಗಳಿರುತ್ತವೆ. ನಿಜ, ಆದರೆ ಕಾಣುವ ಕನಸು ನನಸಾಗಲು ಯೋಗ್ಯತೆಯನ್ನು ಹೊಂದಿದೆಯೇ ಎನ್ನುವುದನ್ನೂ ಯೋಚಿಸಬೇಕು.
ಹಣವಿದೆ ಎಂದು ರಾಜಕೀಯ ಮಾಡಲಿಳಿದರೆ ಹಣವಿರುವವರೆಗೆ ಜನರು ಹಿಂದೆ-ಮುಂದೆ ಇರುತ್ತಾರೆ. ಅಥವಾ ರಾಜಕೀಯ ಹಣವಂತರಿಗೆ ಮಾತ್ರ ಎಂದಾಗಿದ್ದರೂ ಅಂಬಾನಿಯಂತ ಬಿಲಿಯಾಧೀಶರು ಎಂದೋ ಪ್ರಧಾನಿಯೋ ಇನ್ನೇನೇನೊ ಆಗಿಬಿಡುತ್ತಿದ್ದರು. ಆದರೆ ಇದು ಹಾಗಲ್ಲ, ತತ್ವ ಸಿದ್ಧಾಂತದ ಆಧಾರದ ಮೇಲೆ ವಿಚಾರಧಾರೆಗಳು ರೂಪಿತವಾಗಿರಬೆಕು. ಜನರನ್ನು ನಂಬಿಉಸವುದು ಸುಲಭದ ಮಾತಲ್ಲ. ಹೊಸ ಪಕ್ಷ ಕಟ್ಟುವವರನ್ನು ಜನ ಅನುಮಾನದಿಂದಲೇ ಕಾಣುತ್ತಾರೆ. ಏಕೆಂದರೆ, ರಾಜಕೀಯ ಎನ್ನುವುದು ದಂಧೆಯಾಗಿದೆ. ಹಣ ಚೆಲ್ಲಿ ಹಣ ಪಡೆಯುವುದು ಎಂಬಂತಾಗಿದೆ.
ರಾಷ್ಟ್ರೀಯ ಪಕ್ಷಗಳೇ ಚುನಾವಣೆಯಲ್ಲಿ ಎಷ್ಟೇ ಹಣ ಜಾತಿ, ರಾಜಕೀಯ ಮಾಡಿದರೂ ಸೋಲುವುದನ್ನು ಕಾಣುತ್ತೇವೆ. ಹೀಗಿರುವಾಗ ಕೇವಲ ಬಣ್ಣದ ಮಾತಿನಿಂದ ಜನರನ್ನು ಮರುಳುಗೊಳಿಸಲು ಸಾಧ್ಯವಿಲ್ಲ ಎನ್ನುವುದು ಉಪೇಂದ್ರ ಅವರಿಗೆ ಗೊತ್ತಿಲ್ಲದೇ ಇಲ್ಲ. ಆದರೂ ಇದರಲ್ಲೇನೋ ವಿಶೇಷತೆ ಇದೆ ಎಂದೆನಿಸದಿರದು. ತಮ್ಮ ಹಲವು ಸಿನಿಮಾಗಳಲ್ಲಿ ರಾಜಕೀಯದ ವ್ಯಂಗ್ಯೋಕ್ತಿಯನ್ನು ಮತ್ತು ಕನಸಿನ ಸಾಮ್ರಾಜ್ಯವನ್ನು ತೋರಿಸುತ್ತಲೇ ಬಂದಿರುವ ಉಪೇಂದ್ರ ಅವರಿಗೆ ಬಹು ದಿನಗಳ ಹಿಂದೆಯೇ ರಾಜಕೀಯ ಸೇರುವ ಆಸಕ್ತಿ ಉದ್ಭವಿಸಿತ್ತು. ಬಿಜೆಪಿ ಸೇರುವರೆಂಬ ಚರ್ಚೆಯೂ ನಡೆದಿತ್ತು. ಆದರೆ ಇದಕ್ಕೆ ಅಷ್ಟೊಂದು ಮನ್ನಣೆ ಸಿಗಲೇ ಇಲ್ಲ. ರಾಜ್ಯಕ್ಕೆ ಒಂದೆಡೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಂದ ದಿನವನ್ನೇ ತಮ್ಮ ಭವಿಷ್ಯತ್ತಿನ ರಾಜಕೀಯ ಸಂಘಟನೆಯ ಬಗ್ಗೆ ಮಾಹಿತಿ ಹೊರಗೆಡವಿ ಹೊಸ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.
ವಿಶೇಷವೆಂದರೆ, ಉಪೇಂದ್ರ ಅವರ ಈ ಘೋಷಣೆಯಿಂದ ಯಾರಲ್ಲೂ ಸಂಚಲನವಾಗಿಲ್ಲ. ಎಲ್ಲ ಪಕ್ಷದ ಮುಖಂಡರು ರಾಜಕೀಯ ಶುದ್ಧೀಕರಣವಾಗಬೇಕೆನ್ನುವ ಉಪೇಂದ್ರ ಅವರ ಮಾತನ್ನು ಸ್ವಾಗತಿಸಿದ್ದಾರೆ. ಅಂದರೆ ರಾಜಕೀಯ ವ್ಯವಸ್ಥೆ ಸರಿ ಇಲ್ಲ ಎನ್ನುವುದನ್ನು ಒಪ್ಪಿಕೊಂಡಂತಾಗಿದೆ. ದುರಂತವೆಂದರೆ, ಇದನ್ನು ಶುದ್ಧೀಕರಿಸಲು ರಾಜಕೀಯ ಪಕ್ಷದವರು ಏಕೆ ಮುಂದಾಗುತ್ತಿಲ್ಲ. ಹೊಸಬರು ರಾಜಕೀಯಕ್ಕೆ ಬಂದರೆ ಅವರು ಬೆಳೆಯುವುದು ಕನಸಿನ ಮಾತು. ರಜದ್ದಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೇ ಪಕ್ಷಗಳು ಸದಾ ಕಾದಾಡುತ್ತವೆ. ಆದರೆ ಯಾರಲ್ಲೂ ಹೊಸತನದ ರಾಜಕೀಯ ಚಿಂತನೆ ಮೂಡಿಸಿಕೊಳ್ಳಬೇಕೆಂಬ ಇಚ್ಛಾಶಕ್ತಿಯೇ ಇಲ್ಲ. ತಮ್ಮದೇ ಆದ ಭ್ರಷ್ಟಾಚಾರ, ಹಗರಣಗಳ ಮಧ್ಯೆಯೂ ಮತ್ತೆ ಮತ್ತೆ ಆಡಳಿತಕ್ಕೆ ಬರುತ್ತ ರಾಜ್ಯವನ್ನಾಳುತ್ತಿವೆ. ಹಾಗಾದರೆ ಜನರಿಗೇಕೆ ಹೊಸತನ ತರಬೇಕೆಂಬ ಆಸೆಯಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಎಲ್ಲರೂ ಹೇಳುತ್ತೇವೆ. ಆದರೆ ಅದು ಮತ ಚಲಾಯಿಸುವವರೆಗೆ ಮಾತ್ರ. ಆನಂತರ ಆಯ್ಕೆಯಾದವರೇ ಪ್ರಭುಗಳಾಗಿ ಬಿಡುತ್ತಿದ್ದಾರೆ. ಇದು ಇಂದಿನ ಪ್ರಜಾಪ್ರಭುತ್ವದ ದುರಂತ. ಇದೇನೆ ಇರಲಿ, ಉಪೇಂದ್ರ ಅವರ ಮುಂದಿನ ಹೆಜ್ಜೆಯ ಮೇಲೆ ಅವರ ಪಕ್ಷದ ಅಥವಾ ಸಂಘಟನೆಯ ಭವಿಷ್ಯ ನಿಂತಿರುತ್ತದೆ. ಬಿಸಿರಕ್ತದ ಯುವಕರು ಮತ್ತು ಉಪ್ಪಿ ಅಭಿಮಾನಿಗಳ ದಂಡು ಇದನ್ನು ಬೆಂಬಲಿಸಬಹುದು. ಆದರೆ ಇಲ್ಲೂ ಒಂದು ಸಮಸ್ಯೆಯಿದೆ ಅದೆಂದರೆ, ಉಪ್ಪಿ ಹೇಳಿದಂತೆ ಪರೀಕ್ಷೆ ಬರೆದು ರಾಜಕೀಯ ಸೇರುವ ಪರಿಸ್ಥಿತಿಯನ್ನು ಯಾರೂ ಒಪ್ಪುವುದಿಲ್ಲ. ಉಪ್ಪಿ ಪರೀಕ್ಷೆ ಬರೆದು ಬನ್ನಿ ಎಂದರೆ ನಾವು ಬೇರೆ ಪಕ್ಷಕ್ಕೆ ಹೋಗುತ್ತೇವೆ. ಅಲ್ಲಿ ಸದಾ ತೆರೆದ ಬಾಗಿಲ ಸ್ವಾಗತವಿದೆ ಎಂದು ಹೇಳಬಹುದಲ್ಲವೆ? ಇಂತಹ ಪರಿಕಲ್ಪನೆ ಕೇಳಲಷ್ಟೇ ಚೆಂದ.
ಕರ್ನಾಟಕದಲ್ಲಿ ಸಿನಿಮಾ ನಟರು ರಾಜಕೀಯಕ್ಕಿಳಿದ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕೆಲವರು ಸಚಿವರೂ, ಶಾಸಕರೂ, ಕೇಂದ್ರ ಸಚಿವರೂ ಆದರು. ಆದರೆ ಮುಂದೇನಾದರು, ಯಾವ ಸುಧಾರಣೆ ತಂದರು. ಉತ್ತಮ ಹೆಸರುಗಳಿಸಿದರೇ ಎಂಬೆಲ್ಲ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಹೊಸ ಸಾಧನೆಗೆ ಕಾಲಿಡುವಾಗ ಸಾಧಿಸುವ ಕನಸನ್ನೇನೋ ಕಾಣುತ್ತೇವೆ. ಆದರೆ ಆನಂತರ ಹಣದ ಮದ ನಮ್ಮನ್ನು ದಾರಿತಪ್ಪಿಸಿ, ನಾವು ಬಂದ ಉದ್ದೇಶವನ್ನೆ ಮರೆಯಿಸಿಬಿಡುತ್ತದೆ. ಕೊನೆಗೆ ನಮ್ಮನ್ನೂ ಆ ಕ್ಷೇತ್ರದಿಂದ ಮತದಾರ ದೂರವಿಡುವಂತೆ ಮಾಡುತ್ತದೆ.
ರಿಯಲ್ ಸ್ಟಾರ್ ಅವರ ಯೋಚನೆಗಳು ಇನ್ನು ರಿಯಲ್ ವರ್ಲ್ಡ್ಗೆ ಕಾಲಿಡಬೇಕಿದೆ. ಉತ್ತಮ ಮತ್ತು ನಿಜಕ್ಕೂ ರಾಜಕೀಯದಲ್ಲಿ ಆಗಲೇಬೇಕಾದ ಯೋಚನಾಲಹರಿಯನ್ನು ಹರಿಯಬಿಟ್ಟಿದ್ದಾರೆ. ಇದನ್ನು ಮತದಾರ ಬೆಂಬಲಿಸುತ್ತಾನೋ, ತಿರಸ್ಕರಿಸುತ್ತಾನೋ ಕಾದು ನೊಡೋಣ.
ಕೊನೆಯದಾಗಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಪಕ್ಷ ಕಟ್ಟಿ ಯಶಸ್ಸು ಕಂಡವರು ದೇವರಾಜ ಅರಸು ಒಬ್ಬರೇ. ಅದೂ ಅವರೂ ಸಹ ಕೊನೆಗೆ ಒಂಟಿಯಾಗಿ ಇರುವಂತಾಯಿತು. ಬಂಗಾರಪ್ಪ, ಯಡಿಯೂರಪ್ಪ ಮೊದಲಾದವರು ತಮ್ಮ ಯತ್ನ ನಡೆಸಿ ಮತ್ತೆ ತವರಿಗೆ ಮರಳಿದ್ದಾರೆ. ಆದರೆ, ಅಂದಿನದಕ್ಕೂ ಇಂದಿನದಕ್ಕ್ಕೂ ಒಂದು ವ್ಯತ್ಯಾಸವಿದೆ. ಅದೆಂದರೆ, ಈವರೆಗೆ ಪಕ್ಷ ಕಟ್ಟಿದವರಲ್ಲಿ ಬಹುತೇಕರು ರಾಜಕೀಯ ಅನುಭವಿಗಳೇ ಆಗಿದ್ದರು. ಉಪ್ಪಿ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಏಕ ವ್ಯಕ್ತಿಯಾಗಿ ಕಾರ್ಯಕರ್ತರೊಂದಿಗೆ ಹೊರಟಿದ್ದಾರೆ. ಸಾಧನೆ ಮಾಡಿದರೆ ಹೊಸ ಇತಿಹಾಸ ಬರೆದಂತಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಇತಿಹಾಸ ಮರುಕಳಿಸಿದಂತಾಗುತ್ತದೆ.
.............................

No comments:
Post a Comment