ದೇಸಿ ಅಕ್ಕಿ ಆಹಾರಕ್ಕೂ, ಔಷಧಿಗೂ ಸೈ
ಶಿವಮೊಗ್ಗದಲ್ಲಿ ಆಗಸ್ಟ್ 18ರಿಂದ ಮೂರು ದಿನ ದೇಸಿ ಅಕ್ಕಿ ಜಾತ್ರೆ ನಡೆಯಲಿದೆ. ಈ ಸಂಬಂಧ ದೇಸಿ ಅಕ್ಕಿ ಮತ್ತು ಅದರ ತಳಿಯ ಬಗ್ಗೆ ಒಂದು ಪರಿಚಯಾತ್ಮಕ ಬರೆಹ.
ವೈವಿಧ್ಯಮಯ ಆಹಾರ ಸಂಸ್ಕೃತಿಗೆ ಹೆಸರಾದ ದೇಶ ನಮ್ಮದು. ಇದಕ್ಕೆ ಪೂರಕವಾಗಿ ಅಸಂಖ್ಯಾತ ಬಗೆಯ ಬೆಳೆಗಳು, ತಳಿಗಳು ನಮ್ಮಲ್ಲಿವೆ. ನೂರಾರು ವರ್ಷಗಳಿಂದ ರೈತರು ಇವುಗಳನ್ನು ಉಳಿಸಿಕೊಂಡು ಬಂದಿದ್ದಾರೆ. ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ. ದೇಸಿ ಭತ್ತ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದು ಹಾಗೂ ಅದರ ಬಳಕೆಗೆ ಗ್ರಾಹಕರನ್ನು ಪ್ರೇರೇಪಿಸುವುದು ಇಂದಿನ ಅಗತ್ಯವಾಗಿದೆ.
ಫಾಸ್ಟ್ ಫುಡ್ ಮತ್ತು ಸುಲಭ ಆಹಾರ ತಯಾರಿ ಎಂಬ ಪ್ರಚಾರದ ಮೋಡಿಗೆ ಮಾರುಹೋಗುತ್ತಿರುವ ಇಂದಿನ ಪೀಳಿಗೆಯು ಸಾಂಪ್ರದಾಯಿಕ ದೇಸಿ ಅಡುಗೆಯ ಸೊಗಡನ್ನು ಮರೆಯುತ್ತಿದೆ. ಕೆಂಪಕ್ಕಿಯ ಇಡ್ಲಿ, ನೀರು ದೋಸೆ, ಅಕ್ಕಿ ಕಡುಬು, ಕಜ್ಜಾಯ, ತೊಡದೇವು, ಸಜ್ಜೆಯ ಮಾದಲಿ, ನವಣೆ ಕಜ್ಜಾಯ, ಸಾವೆ ಉಪ್ಪಿಟ್ಟು, ಬರಗು ರೊಟ್ಟಿ-ಎಣ್ಣೆಗಾಯಿ, ಸಿಹಿ ಉಂಡೆಗಳು ಬಳಕೆ ಇಲ್ಲದೆ ಅಪರೂಪವಾಗುತ್ತಿವೆ.
ಎಲ್ಲವೂ ವಿದೇಶಿಮಯವಾಗುತ್ತಿರುವ ಇಂದಿನ ದಿನಗಳಲ್ಲಿ ಸಣ್ಣ ಸಮಾಧಾನದ ಸಂಗತಿ ಎಂಬಂತೆ ದೇಸಿ ಪದಾರ್ಥ ಬಳಕೆಯತ್ತ ಜನರ ಗಮನ ಹರಿಯತ್ತಿದೆ. ಆದರೆ ಇದು ಬೃಹತ್ ಆಂದೋಲನದ ರೂಪು ಪಡೆಯಬೇಕು ಎಂದು ಆಶಿಸಿದರು. ಒಂದು ದೇಸಿ ತಳಿ ಬೆಳೆ ನಿರ್ನಾಮವಾದರೆ, ಅದಕ್ಕೆ ಸಂಬಂಧಿಸಿದ ವೈಶಿಷ್ಟ್ಯ, ಸಂಸ್ಕೃತಿ, ಪರಂಪರೆ, ಬಳಕೆ ವಿಧಾನ, ಕೃಷ ಪದ್ಧತಿ ಇತ್ಯಾದಿಗಳು ಮರೆಯಾಗುತ್ತವೆ. ಅಪಾರ ವೈವಿಧ್ಯವಿದ್ದ ನಮ್ಮ ದೇಶದಲ್ಲಿ ಈಗಾಗಲೇ ಲಕ್ಷಾಂತರ ದೇಸಿ ತಳಿ ನಮ್ಮ ನೆಲದಿಂದ ಸಂಪೂರ್ಣ ಮರೆಯಾಗಿವೆ. ಈಗಲಾದರೂ ಉಳಿಸಿಕೊಳ್ಳದೇ ಹೋದರೆ ಮುಂದೊಂದು ದಿನ ನಮ್ಮ ನಿರ್ಲಕ್ಷ್ಯಕ್ಕೆ ಪಶ್ಚಾತ್ತಾಪ ಪಡುವಂತಾಗಲಿದೆ .
ಕನ್ನಡ ನಾಡಿನ ವೈವಿಧ್ಯಮಯ ಪಾರಂಪರಿಕ ಅಡುಗೆಗಳಿಗೆ ವಿವಿಧ ಬಗೆಯ ದೇಸಿ ಅಕ್ಕಿಗಳನ್ನು ತಲತಲಾಂತರದಿಂದಲೂ ಬಳಸಲಾಗುತ್ತಿದೆ. ದೇಸಿ ಸೊಗಡಿನ ಪಾಕ ತಯಾರಿಕೆಗೆ ಅದೇ ಬಗೆಯ ಅಕ್ಕಿಯಾದರೆ ಆ ರುಚಿ ಇನ್ನಷ್ಟು ಹೆಚ್ಚುತ್ತದೆ. ಈಗ ಗ್ರಾಹಕರು ಇಂಥ ದೇಸಿ ಅಕ್ಕಿಗಳತ್ತ ಗಮನ ಹರಿಸುತ್ತಿದ್ದು, ಇದಕ್ಕೆ ಇನ್ನಷ್ಟು ಉತ್ತೇಜನ ಕೊಡುವ ಕೆಲಸ ನಡೆಯಬೇಕಿದೆ.
ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಆದರೆ ಕೆಲವು ತಳಿಗಳಿಗಷ್ಟೇ ಪ್ರಚಾರ ಹಾಗೂ ಬಳಕೆಗೆ ಉತ್ತೇಜನ ನೀಡುವ ಹುನ್ನಾರದಿಂದಾಗಿ ದೇಸಿ ಅಕ್ಕಿಗಳು ಕಣ್ಮರೆಯ ಹಾದಿಯಲ್ಲಿವೆ. ಪಾಲಿಶ್ ಮಾಡಿದ ಅಕ್ಕಿ ಬಳಸಿ ಅನಾರೋಗ್ಯ ಆಹ್ವಾನಿಸಿಕೊಳ್ಳುವ ಬದಲಿಗೆ ದೇಸಿ ಅಕ್ಕಿ ಅನ್ನ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ದೇಸಿ ಅಕ್ಕಿ ತಳಿಗಳ ಭಂಡಾರವೇ ನಮ್ಮ ನಾಡಿನಲ್ಲಿದ್ದು, ಇದರತ್ತ ಗಮನಹರಿಸುವ ಅಗತ್ಯವಿದೆ’
ಪೌಷ್ಟಿಕಾಂಶಗಳ ಆಗರವಾಗಿರುವ ಕೆಂಪಕ್ಕಿ ತಳಿಗಳು, ನಮ್ಮ ನೆಲ- ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತ ಬಂದಿವೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಕೆಂಪಕ್ಕಿ ತಳಿಗಳು ಸಮರ್ಥವಾಗಿ ಉತ್ತರ ಕೊಡಬಲ್ಲವು. ಬೇರೆ ರಾಜ್ಯಗಳಿಂದ ಅಕ್ಕಿಯನ್ನು ತರಿಸಿ, ಜನರಿಗೆ ಹಂಚುವ ಬದಲಿಗೆ ಸ್ಥಳೀಯ ಮಟ್ಟದಲ್ಲಿ ರೈತರಿಗೆ ದೇಸಿ ಅಕ್ಕಿ ಬೆಳೆಸಲು ಸರ್ಕಾರ ಪ್ರೋತ್ಸಾಹ ಕೊಡಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಯಾಗಿ ರೈತರಿಗೆ ಆರ್ಥಿಕವಾಗಿ ಪ್ರಯೋಜನವಾಗಲಿದೆ.
ದೇವರಿಗೆ ನೈವೇದ್ಯವಾಗಿ, ಮಗುವಿನ ಮೊದಲ ತುತ್ತಾಗಿ, ಮಂಗಳ ಕಾರ್ಯದಲ್ಲಿ ಅಕ್ಷತೆಯಾಗಿ, ಕೋಟ್ಯಂತರ ಜನರ ಹೊಟ್ಟೆ ತುಂಬುವ ಅನ್ನ ನಮ್ಮ ಬದುಕಿಗೆ ಆಧಾರ. ಇವತ್ತು ನಾವು ತಿನ್ನುವ ಪಾಲಿಶ್ ಅಕ್ಕಿಯ ಅನ್ನ ನಿಜವಾದ ಅರ್ಥದಲ್ಲಿ ಅನ್ನವೇ ಅಲ್ಲ, ಸಕ್ಕರೆ ಕಾಯಿಲೆ, ಬೊಜ್ಜು, ಮಲಬದ್ಧತೆ ಆಹ್ವಾನಿಸುವ ಬಿಳಿಬಣ್ಣದ ವಿಷ. ದೇಶೀಯ ಅಕ್ಕಿ ತಳಿಗಳು ಆಹಾರಕ್ಕೂ ಸೈ, ಔಷಧಿಗೂ ಸೈ. ಕೆಲವೇ ದಶಕಗಳ ಹಿಂದೆ ಅನ್ನಕ್ಕೊಂದು, ಅವಲಕ್ಕಿಗೊಂದು, ಕಜ್ಜಾಯಕ್ಕೊಂದು, ರೊಟ್ಟಿಗೊಂದು, ಬಾಣಂತಿಯರ ಊಟಕ್ಕೊಂದು ಮಕ್ಕಳ ವಾಂತಿಭೇದಿಗೊಂದು, ವಿವಿಧ ರೋಗಗಳಿಗೆ ತಲಾ ಒಂದೊಂದು... ಹೀಗೆ ಎಲ್ಲದಕ್ಕ್ಕೂ ದೇಸಿ ಅಕ್ಕಿ ಮನೆಮದ್ದಾಗಿತ್ತು. ದೊಡ್ಡಬೈರನೆಲ್ಲು, ನವರ, ಕರಿಭತ್ತ, ದೊಡ್ಡಿಭತ್ತ ಮುಂತಾದ ಕೆಂಪಕ್ಕಿ ತಳಿಗಳು ಅನೇಕ ರೋಗಗಳಿಗೆ ರಾಮಬಾಣವಾಗಿದ್ದವು.
ಈಗ ಪರಿಸ್ಥಿತಿ ಹೇಗಿದೆ ಎಂದರೆ, ಕೈಯಿಂದ ಜಾರುವಷ್ಟು ನುಣುಪಾದ, ಪಾಲಿಶ್ ಮಾಡಿರುವ, ಹೊಳೆಯುವ, ಉದುರುಉದುರಾಗಿ ಅನ್ನವಾಗುವ ಅಕ್ಕಿಯನ್ನೇ ಗುಣಮಟ್ಟದ ಅಕ್ಕಿ ಎಂದು ಭಾವಿಸಿ ಖರೀದಿಗೆ ಜನ ಮುಂದಾಗುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ. ನಮ್ಮ ನಾಡಿನಲ್ಲಿ ಆಯಾಯ ಪ್ರಾದೇಶಿಕತೆ, ಭೌಗೋಳಿಕತೆಗೆ ತಕ್ಕಂತೆ ವಿವಿಧ ತಳಿಯ ಭತ್ತ ಬೆಳೆಯುತ್ತಿದ್ದಾರೆ. ಅದರಷ್ಟು ಉತ್ತಮ ದೇಸೀಯ ಅಕ್ಕಿ ಇನ್ನೊಂದಿಲ್ಲ. ನಾಡಿನ ರೈತರು ಹಲವೆಡೆ ಇನ್ನೂ ಇದನ್ನು ಬೆಳೆಯುತ್ತಿದ್ದಾರೆ, ತಿನ್ನುತ್ತಿದ್ದಾರೆ. ಹಾಗಾಗಿಯೇ ಅವರು ಹೆಚ್ಚು ರೋಗಮುಕ್ತರು. ಇಂತಹ ಅಕ್ಕಿ ತಳಿಗಳು ಅತ್ಯಂತ ಶ್ರೇಷ್ಠ ತಳಿಗಳಾಗಿವೆ. ಪೋಷಕಾಂಶಗಳ ಆಗರವಾಗಿವೆ, ಆರೋಗ್ಯಕ್ಕೆ ಪೂರಕವಾಗಿವೆ.
ಮೂರು ದಿನಗಳ ಈ ದೇಸಿ ಅಕ್ಕಿ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ಅನೇಕ ರೈತರು ದೇಸಿ ತಳಿ ಅಕ್ಕಿಯನ್ನು ಪ್ರದರ್ಶಿಸಲಿದ್ದಾರೆ. ಕನ್ನಡ ನಾಡಿನ ದೇಸಿ ತಳಿಗಳು ಮಾತ್ರವಲ್ಲದೇ ಭಾರತದ ಅಪರೂಪದ ಭತ್ತದ ತಳಿಗಳನ್ನು ರೈತರು ಸಂರಕ್ಷಿಸುತ್ತಿದ್ದು, ಅವುಗಳ ಪ್ರದರ್ಶನ ಕೂಡ ಇರಲಿದೆ. ಬಗೆಬಗೆಯ ದೇಸಿ ಅಡುಗೆಗಳು, ತಿಂಡಿ- ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ಇದೆ. ಮೂರು ದಿನಗಳ ಕಾಲ ಬೆಳಿಗ್ಗೆ 10:30ರಿಂದ ರಾತ್ರಿ 9ರವರೆಗೆ ಅಕ್ಕಿ ಜಾತ್ರೆ ನಡೆಯಲಿದೆ.
- ಸಿ. ಶಾಂತಕುಮಾರ್, ಸಹಜ ಸಮೃದ್ಧ’ ಬಳಗದ ಸಂಚಾಲಕ
ನಮ್ಮ ದೇಸಿ ಅಕ್ಕಿ ಪರಂಪರೆಯನ್ನು ಮರಳಿ ತರುವ ಪ್ರಯತ್ನದ ಅಂಗವಾಗಿ ಶಿವಮೊಗ್ಗದಲ್ಲಿ ಆಗಸ್ಟ್ 18ರಿಂದ 20ರವರೆಗೆ ‘ದೇಸಿ ಅಕ್ಕಿ ಜಾತ್ರೆ’ಯನ್ನು ಆಯೋಜಿಸಲಾಗಿದೆ. ‘ಸಹಜ ಸಮೃದ್ಧ’ ಹಾಗೂ ‘ಭತ್ತ ಉಳಿಸಿ ಆಂದೋಲನ’ದ ಜತೆಗೂಡಿ ‘ಆರ್ಗ್ಯಾನಿಕ್ ಶಿವಮೊಗ್ಗ’ ಈ ಅಕ್ಕಿ ಜಾತ್ರೆಯನ್ನು ಹಮ್ಮಿಕೊಂಡಿದೆ. ದೇಸಿ ಅಕ್ಕಿ ಬಳಸಿ ಆರೋಗ್ಯಭರಿತ ಬದುಕು ನಿಮ್ಮದಾಗಿಸಿಕೊಳ್ಳಿ ಎಂಬ ಸಂದೇಶವನ್ನು ಇದು ಸಾರಲಿದೆ. ದೇಸಿ ಅಕ್ಕಿ ಜಾತ್ರೆ’ಯ ಹಿನ್ನೆಲೆಯಲ್ಲಿ ‘ದೇಸಿ ಅಡುಗೆ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ದೇಸಿ ಅಕ್ಕಿ, ಸಿರಿಧಾನ್ಯ ಮತ್ತು ಕಾಳುಗಳಿಂದ ತಯಾರಿಸುವ ಸಾಂಪ್ರದಾಯಿಕ ಮತ್ತು ಹೊಸ ಅಡುಗೆಗಳನ್ನು ಪ್ರೋತ್ಸಾಹಿಸಲೆಂದು ’ದೇಸಿ ಅಡುಗೆ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
- ಎಂ.ಎಸ್. ಮಂಜುನಾಥ, ಅಕ್ಕಿ ಜಾತ್ರೆ ಸಂಘಟಕ ಹಾಗೂ ‘ ಆರ್ಗ್ಯಾನಿಕ್ ಶಿವಮೊಗ್ಗ’ ಮುಖ್ಯಸ್ಥ
....................................

No comments:
Post a Comment