ಅಂತರಂಗದ ಕೀಚಕ ದಮನ
ವ್ಯಾಸರ ಮೂಲಭಾರತದ ಸತ್ವವನ್ನು ಸಾರುತ್ತಲೇ ವರ್ತಮಾನದ ಭಾರತವನ್ನು ತೆರೆದಿಡುವ ನಾಟಕ ‘ಕೀಚಕ’ ಜುಲೈ 6ರಂದು ನಗರದ ಕುವೆಂಪು ರಂಗಮಂದಿರದಲಿ ಮೊಲದ ಪ್ರದರ್ಶನ ಕಂಡಿತು. ಕೀಚಕನೆಂದರೆ, ಸ್ತ್ರೀ ಲಂಪಟ, ಕಾಮುಕ, ವಿಷಯಲೋಲುಪ್ತ ಎನ್ನುವ ಪೂರ್ವಾಗ್ರಹಕ್ಕೆ ಒಳಗಾದ ನಮ್ಮನ್ನು ಒಂದಷ್ಟು ಹೊತ್ತು ಚಿಂತನೆಗೆ ತಳ್ಳುವ ನಾಟಕವಿದು. ಮಾತ್ರವಲ್ಲ, ನಮ್ಮೊಳಗೂ ಕೀಚಕನಿದ್ದಾನೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ, ತಾರ್ಕಿಕವಾಗಿ ತೆರೆದಿಡುವಲ್ಲಿ, ನಮ್ಮೊಳಗಿನ ಕೀಚಕ ನಿರ್ನಾಮವಾಗಬೇಕು ಎಂಬ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಈ ನಾಟಕ ಫಲಪ್ರದವಾಯಿತು.
ಮಹಾಭಾರತ ಕಾವ್ಯ ಅನೇಕ ಪ್ರಯೋಗಗಳಿಗೆ ಎಡೆ ಮಾಡಿಕೊಟ್ಟ ಮಹತ್ ಕೃತಿ. ಎಲ್ಲ ಕಾಲದ ಕೃತಿಕಾರರು ಅಲ್ಲಿನ ಸನ್ನಿವೇಶಗಳನ್ನು, ಪಾತ್ರಗಳನ್ನು ತಮಗೆ ಬೇಕಾದಂತೆ ಹಿಗ್ಗಿಸಿಕೊಂಡಿದ್ದಾರೆ, ವೈಭವೀಕರಿಸಿದ್ದಾರೆ. ಅದರಲ್ಲೂ ಸಾರಾಸಗಟಾಗಿ ತಿರಸ್ಕರಿಸಲ್ಪಟ್ಟ ಪಾತ್ರಗಳ ಪರಕಾಯ ಪ್ರವೇಶ ಮಾಡಿ, ಆ ಪಾತ್ರಗಳ ತಮ್ಮ ಸೃಜನಶೀಲತೆಯನ್ನು ಮೆರೆದಿದ್ದಾರೆ. ರನ್ನನ ದುರ್ಯೋಧನ, ನಾಗಚಂದ್ರನ ರಾವಣ. ಬಿಎಂಶ್ರೀ ಅವರ ಅಶ್ವತ್ಥಾಮ, ಕುವೆಂಪು ಅವರ ಮಂಥರೆ ಇದಕ್ಕೆ ಸಾಕ್ಷಿಯಾಗಿವೆ.
ಜುಲೈ 6ರಂದು ಲೇಖಕ ಜಿ. ಎಸ್. ಯುಧಿಷ್ಠರ ವಿರಚಿತ ‘ಕೀಚಕ’ ಕಥೆಯನ್ನು ‘ ಟೀಂ ಸುಪ್ರಯೋಗ’ ನಗರದಲ್ಲಿ ಪ್ರದರ್ಶಿಸಿದೆ. ತನ್ನ ಮೊದಲ ಪ್ರದರ್ಶನದಲ್ಲೇ ಹಿರಿ-ಕಿರಿಯ ತಲೆಮಾರಿನವರನ್ನು ಸೂರೆಗೊಂಡ ಯಶಸ್ಸು ಈ ಪ್ರಯೋಗದ್ದು ಎಂದರೆ ಅತಿಶಯೋಕ್ತಿಯಲ್ಲ.
ವ್ಯಾಸರ ಮೂಲಭಾರತದ ಸತ್ವವನ್ನು ಸಾರುತ್ತಲೇ ವರ್ತಮಾನದ ಭಾರತವನ್ನು ತೆರೆದಿಡುವ ನಾಟಕವಿದು. ಕೀಚಕನೆಂದರೆ, ಸ್ತ್ರೀ ಲಂಪಟ, ಕಾಮುಕ, ವಿಷಯಲೋಲುಪ್ತ ಎನ್ನುವ ಪೂರ್ವಾಗ್ರಹಕ್ಕೆ ಒಳಗಾದ ನಮ್ಮನ್ನು ಒಂದಷ್ಟು ಹೊತ್ತು ಚಿಂತನೆಗೆ ತಳ್ಳುವ ನಾಟಕವಿದು. ಮಾತ್ರವಲ್ಲ, ನಮ್ಮೊಳಗೂ ಕೀಚಕನಿದ್ದಾನೆ ಎನ್ನುವುದನ್ನು ಅತ್ಯಂತ ಮಾರ್ಮಿಕವಾಗಿ , ತಾರ್ಕಿಕವಾಗಿ ತೆರೆದಿಡುವಲ್ಲಿ, ನಮ್ಮೊಳಗಿನ ಕೀಚಕ ನಿರ್ನಾಮವಾಗಬೇಕು ಎಂಬ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಈ ನಾಟಕ ಫಲಪ್ರದವಾಗಿದೆ.
ಹಿರಿಯ ತಲೆಮಾರಿನವರಿಗೆ ಒಂದಷ್ಟು ಹೊತ್ತು-‘‘ ಏನಪ್ಪಾ, ಪುರಾಣದೊಂದಿಗೆ ಆಧುನಿಕತೆಯ ಕಲಬೆರಕೆಯಿದು’’ ಎಂದು ಕಾಡುವ ಸನ್ನಿವೇಶ ತೆರೆದುಕೊಳ್ಳುತ್ತ ಹೋದಂತೆ ಆಪ್ಯಾಯಮಾನವೆನಿಸುವುದರಲ್ಲಿ ಎರಡು ಮಾತಿಲ್ಲ. ದ್ವಾಪರಾಯುಗದ ಕೀಚಕನಿಗೂ, ನಮ್ಮೊಳಗಿರುವ ಈಗಿನ ಕೀಚಕರಿಗೂ ಅದೆಂತಹ ಸಾಮ್ಯತೆ ಎಂದು ಹುಬ್ಬೇರಿಸುವಷ್ಟರ ಮಟ್ಟಿಗೆ ನಾಟಕ ವರ್ತಮಾನದೊಂದಿಗೆ ತೆರೆದುಕೊಳ್ಳುತ್ತದೆ. ಆಗ ನಮಗೆ ನೆನಪಾಗುವುದು - ಹಳೆಬೇರು ಹೊಸಚಿಗುರು ಕೂಡಿರಲು ಮರ ಸೊಬಗು ಎನ್ನುವ ಕವಿವಾಣಿ.
ಕೀಚಕನ ಆಟಾಟೋಪ, ಸ್ತ್ರೀ ಲಂಪಟತನ, ಅಟ್ಟಹಾಸ, ಮದಾಂಧತೆ, ಸ್ವೇಚ್ಛೆ, ಅಹಂಕಾರ ಇವನ್ನೆಲ್ಲ ಪೂರ್ವಾಗ್ರಹಪೀಡಿತರಾಗಿ ಕಂಡ ನಮಗೆ ಕೂಡ ಈ ನಾಟಕದ ಕೀಚಕನೆಡೆಗೆ ಒಂದು ಸಣ್ಣ ಒಲವು ಮೂಡುವುದು ಇಲ್ಲಿಯ ವಿಶೇಷತೆ. ಕುಮಾರವ್ಯಾಸಭಾರತದಲ್ಲಿ ಉಲ್ಲೇಖಿತವಾದ ಸೈರಂಧ್ರಿಯ ಕುರಿತಾಗಿ ಕೀಚಕನ ಸೆಳೆತ - ‘‘ ತಾಳಲಾರೆನೋ... ಇನ್ನು ಬಾಳಲಾರೆನೋ...’’ ಇದು ಕೀಚಕನ ಉತ್ಕಂಟತೆಯನ್ನು ತೋರಿಸುತ್ತದೆೆ. ಈ ಸಂದರ್ಭದಲ್ಲಿ ಕೂಡ ಕೀಚಕನನ್ನು ಏಕಾಏಕಿ ದೂಷಿಸದ ಕುಮಾರವ್ಯಾಸ ಅದರ ಬದಲಾಗಿ ಚೆಲುವಿನ ಖನಿಯಾದ ದ್ರೌಪದಿಯನ್ನು ಸೃಷ್ಟಿಸಿದ ಬ್ರಹ್ಮನನ್ನು ಜರೆಯಲು ಮುಂದಾಗುತ್ತಾನೆ-‘‘ಪಾಪಿ ಕಮಲಜ ಚಲಿತಲೋಚನೆಗೇಕೆ ಮಾಡಿದನಿನಿತು ಚೆಲ್ವಿಕೆಯ’’ ಎಂಬುದಾಗಿ.
ಬಹುತೇಕ ನಾಟಕಗಳಲ್ಲಿ ಒಬ್ಬ ಸೂತ್ರಧಾರನನೊಂದಿಗೆ ಓರ್ವ ನಟಿ ನಾಟಕವನ್ನು ಮುನ್ನಡೆಸುವುದು ಸಹಜ. ಆದರೆ ಈ ನಾಟಕದಲ್ಲಿ ಸೂತ್ರಧಾರರೇ ಪಾತ್ರಧಾರಿಗಳಾಗಿ ನಾಟಕವನ್ನು ಯಶಸ್ಸಿನತ್ತ ಕೊಂಡೊಯುತ್ತಾರೆ. ಕೇಂದ್ರ ಬಿಂದುವಾಗಿ ಕೀಚಕನ ಪಾತ್ರದಲ್ಲಿ ನುರಿತ ಕಲಾವಿದ ನಯನ್ ಅರೇಹಳ್ಳಿ ನಾಟಕ ಕಳೆಗಟ್ಟುವಲ್ಲಿ ಮುಖ್ಯವೆನಿಸುತ್ತಾರೆ. ಜಟ್ಟಿ ಕೀಚಕನ ಪಾತ್ರಕ್ಕೊಪ್ಪುವ ಆಕರ್ಷಕವಾದ ಮೈಕಟ್ಟು, ಈಗಿನ ಕೀಚಕರನ್ನು ಬಿಂಬಿಸುವಂತೆ ಕಟ್ಟುಮಸ್ತಾದ ಜಿಮ್‌ಬಾಡಿ, ಕೀಚಕನಾಗಿ ಪುರಾಣ ಪ್ರಜ್ಞೆಯ ಅರಿವು, ಕಾಲೇಜು ಹುಡುಗಿಯರನ್ನು ಕಿಚಾಯಿಸುವ, ಪಟಾಯಿಸುವ ಪೋಲಿತನ ಎಲ್ಲವೂ ನಾಟಕಕ್ಕೆ ಮೆರುಗು ನೀಡಿತ್ತು. ಆದರೂ ದ್ರೌಪದಿಯ ಸೆಳೆಮಂಚಕ್ಕೆ ಹೋಗುವಾಗಿನ ಕೀಚಕನಾಗಿ, ಕೈಗೆ ಮಲ್ಲಿಗೆ ಹೂವು ಕಟ್ಟಿಕೊಂಡು ರಸಿಕನಾಗಿ ಕಾಣುವ ಬದಲು ಚಪಲಚೆನ್ನಿಗನಂತೆ, ಅತಿರಂಜಿತನಾಗಿ ವರ್ತಿಸಿದಂತೆಯೂ ಇತ್ತು. ಹಿಮ್ಮೇಳ ಕೂಡ ಯಕ್ಷಗಾನದ ಕೀಚಕನನ್ನು ಕಟ್ಟಿಕೊಡುವಲ್ಲಿ, ಗಮಕಿಗಳ ಕೀಚಕನನ್ನು ತೆರೆದಿಡುವಲ್ಲಿ, ಬುದ್ಧಿಜೀವಿಗಳ ಕೀಚಕನನ್ನು ಅನಾವರಣಗೊಳಿಸುವಲ್ಲಿ ಕೊಂಚ ಎಡವಿತೇನೋ.....?.
ಸೈರಂಧ್ರಿಯಾಗಿ ಎ.ಎಸ್. ಸನ್ಮತಿ ಪಾತ್ರಕ್ಕೆ ಜೀವತುಂಬಿದರಾದರೂ, ಪ್ರೇಕ್ಷಕರ ದೃಷಿಯಿಂದ ಆ ಪಾತ್ರಕ್ಕೆ ನ್ಯಾಯ ದೊರಕಿಲ್ಲ ಎನ್ನಲೇಬೇಕು. ಜೊತೆಗೆ ನೀಳಕೇಶರಾಶಿಯ, ದೃಢಚಿತ್ತದ, ನೇರನಿಷ್ಠುರತೆಯ, ಘನಗಾಂಭೀರ್ಯದ ಗಟ್ಟಿಗಿತ್ತಿಯ ದ್ರೌಪದಿಯನ್ನು ಅಲ್ಲಿ ಕಲ್ಪಿಸಿಕೊಳ್ಳಲಾಗಲೇ ಇಲ್ಲ. ನೃತ್ಯಗುರು ಬೃಹನ್ನಳೆಯ ಪಾತ್ರ ಕಳೆಗಟ್ಟಿದ್ದು ಹೌದಾದರೂ ನಮ್ಮ ಕಲ್ಪನೆಯ ಬೃಹನ್ನಳೆಯೇ ಬೇರೆ, ಇಲ್ಲಿ ಕಾಣಿಸಿಕೊಂಡ ಭರತನಾಟ್ಯ ವಿಷಾರದೆಯೇ ಬೇರೆ. ಬಹುಪರಾಕ್ ಹಿನ್ನೆಲೆಯ ಧ್ವನಿಯಲ್ಲಿ ವೇದಿಕೆಯ ಆಸನಗಳನ್ನು ತೆರವುಗೊಳಿಸಿದ್ದು ವಿನೂತನ ಪ್ರಯೋಗ ಹೌದಾದರೂ, ಆಭಾಸವೇ ಸರಿ. ಸ್ಥಿತಪ್ರಜ್ಞರಾದ ವ್ಯಾಸ ಮಹರ್ಷಿಯಾಗಿ ಡಾ. ಅರುಣ್ ಮಾತಿನ ಮೂಲಕ ಆ ನಾಟಕದ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಒಟ್ಟು ನಾಟಕದ ರಸಗಟ್ಟಿಯೇ ವ್ಯಾಸರ ಬಾಯಿಯಿಂದ ಹೊರಬೀಳುವ ಮೌಲಿಕವಾದ ಮಾತುಗಳು.
ಕೀಚಕ ಎನ್ನುವುದು ಒಬ್ಬ ವ್ಯಕ್ತಿಯಲ್ಲ, ಅದೊಂದು ಮನಃಸ್ಥಿತಿ ನಮ್ಮೊಳಗಿರುವ ದುಃಸ್ಥಿತಿ. ಅದರ ನಿರ್ನಾಮವಾಗದೆ ಜಗತ್ತಿಗೆ ಒಳಿತಿಲ್ಲ ಎನ್ನುವ ಮಾತು ಮತ್ತೆ ಮತ್ತೆ ಮೆಲುಕು ಹಾಕುವಂತಹದ್ದು, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದುದು. ಆದರೂ ಮಾತಿನ ಮೂಲಕ ಸೆಳೆಯುವ ವ್ಯಾಸ ಮಹರ್ಷಿ ವೇಷಭೂಷಣದ ಮೂಲಕ ಕನ್ನಡ ಪಂಡಿತರನ್ನು ನೆನಪಿಗೆ ತಂದಿದ್ದು ಮಾತ್ರ ಸುಳ್ಳಲ್ಲ.
ರಂಗದ ಮೇಲೆ ಕೀಚಕನ ಮೊದಲ ಪ್ರಯೋಗದಲ್ಲೇ ನೀನಾಸಂ ಪ್ರತಿಭೆ ಕೆ.ವಿ.ಅಜೇಯಸಿಂಹ ಯಶಸ್ವಿಯಾಗಿದ್ದಾರೆ. ಅವರ ನಿರ್ದೇಶನ ಕೌಶಲ, ಸ್ವೋಪಜ್ಞತೆ, ಅವರಿಗಿರುವ ಪುರಾಣ ಪ್ರಜ್ಞೆ ನಾಟಕದ ವೇಗಕ್ಕೆ, ಓಘಕ್ಕೆ ಪುಷ್ಠಿಯೊದಗಿಸಿದೆ. ರಂಗವಿನ್ಯಾಸ, ಬೆಳಕು, ಸೇರಿದ್ದ ಜನಸ್ತೋಮ ಕಾರ್ಯಕ್ರಮದ ಯಶಸ್ಸಿಗೆ ಕಾರಣವೆನಿಸಿತು.
ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕದಾಗಿ, ಚೊಕ್ಕದಾಗಿ ಈ ನಾಟಕ ಪುಟವಿಟ್ಟ ಚಿನ್ನದಂತೆ ಮೂಡಿಬಂದದ್ದು ಸುಳ್ಳಲ್ಲ.
, ...................................