ಎಂಇಎಸ್ ಪುಂಡಾಟಕ್ಕೆ ಬಲಿಯಾಗುತ್ತಿದೆ ಬೆಳಗಾವಿ ಪಾಲಿಕೆ
ಬೆಳಗಾವಿ ಕನ್ನಡಿಗರಿಗೆ ತಪ್ಪದ ಗೋಳು
ಎಂಇಎಸ್ ತಾನೇ ದೌರ್ಜನ್ಯ ನಡೆಸಿ ಕನ್ನಡಿಗರ ಮೇಲೆ ಗೂಬೆ ಕೂರಿಸಲೆತ್ನಿಸುತ್ತಿದೆ.ಬೆಳಗಾವಿಯಲ್ಲಿ ಮರಾಠಿಗರನ್ನು ಹಿಂಸಿಸಲಾಗುತ್ತಿದೆ, ಪೊಲೀಸರು ವಿನಾಕಾರಣ ಬಂಧಿಸುತ್ತಿದ್ದಾರೆ ಎಂದು ದೂರಿ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ. ನ. 13ರಂದು ಬೆಳಗಾವಿಗೆ ಪ್ರಧಾನಿ ಬರಲಿರುವುದರಿಂದ ಅವರ ಗಮನ ಸೆಳೆಯಲು ಈ ಮನವಿ ಸಲ್ಲಿಸಿದೆ ಎಂದೇ ಹೇಳಲಾಗುತ್ತಿದೆ. ಈ ಮಧ್ಯೆ ಎಂಎಇಎಸ್ ಮುಖಂಡರಿಗೆ ಬೆಳಗಾವಿ ಪೊಲೀಸ್ ಆಯುಕ್ತರು ನೋಟಿಸ್ ಜಾರಿ ಮಾಡಿ, ಕರಾಳ ದಿನಾಚರಣೆಗೆ ಪರವಾನಿಗೆ ನೀಡಿದ್ದನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ನೋಟೀಸ್ ನೀಡಿ 3 ದಿನದಲ್ಲಿ ಉತ್ತರಿಸಲು ಸೂಚಿಸಿದ್ದಾರೆ. ಇನ್ನೊಂದೆಡೆ, ಬೆಳಗಾವಿ ಪಾಲಿಕೆಯನ್ನು ವಿಸರ್ಜಿಸಬಾರದು ಏಕೆ ಎಂಬ ಬಗ್ಗೆ ವಿಚಾರಣೆ ನಡೆಸಿ ವಾರದೊಳಗೆ ವರದಿ ನೀಡಲು ಪ್ರಾದೇಶಿಕ ಆಯುಕ್ತರಿಗೆ ಸರಕಾರ ಕೇಳಿದೆ.
ಕನ್ನಡ ರಾಜ್ಯೋತ್ಸವ ನವೆಂಬರ್‌ನಲ್ಲಿ ಆರಂಭವಾದೊಡನೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಯ ದುರ್ವರ್ತನೆಗೂ ಚಾಲನೆ ಸಿಗುತ್ತದೆ. ಇದು ಪ್ರತಿ ವರ್ಷದ ಅವರ ಕೆಲಸ. ಕರ್ನಾಟಕದಲ್ಲೇ ಇರುವ ಬೆಳಗಾವಿಯಲ್ಲಿ ವಾಸಿಸುತ್ತ, ಇಲ್ಲಿಯ ನೆಲ, ಜಲವನ್ನೇ ಬಳಸುತ್ತ, ಅದಕ್ಕೇ ದ್ರೋಹ ಮಾಡುತ್ತಿದೆ ಎಂಇಎಸ್ ಎಂಬ ಸಂಘಟನೆ. ಈ ಸಂಘಟನೆಯ ಆಟಾಟೋಪ ಇಂದು- ನಿನ್ನೆಯದಲ್ಲ, ಹಲವು ದಶಕಗಳಿಂದ ನಡೆದೇ ಬಂದಿದೆ. ಆದರೆ ಇದನ್ನು ಇಂದಿಗೂ ನಿಲ್ಲಿಸಲು ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣವೂ ಇದೆ.
ಬೆಳಗಾವಿಯ ಜನಸಂಖ್ಯೆಯಲ್ಲಿ ಶೇ. 35ರಷ್ಟು ಮಾತ್ರ ಮರಾಠಿಗರಿದ್ದಾರೆ. ಉಳಿದ ಶೇ. 65ರಷ್ಟು ಕನ್ನಡಿಗರೇ ಇದ್ದರೂ ಮರಾಠಿಗರ ಪ್ರಾಬಲ್ಯವೇ ಪ್ರಚಲಿತಲ್ಲಿದೆ. ಏಕೆಂದರೆ, ಅವರು ಹಲ್ಲೆ, ದೊಂಬಿ, ಗಲಾಟೆ ಎಲ್ಲದರಲ್ಲೂ ನಿಸ್ಸೀಮರು. ಕನ್ನಡಿಗರು ಶಾಂತ ಸ್ವಭಾವದವರಾಗಿದ್ದು. ಎಲ್ಲವನ್ನೂ ಮೂಕಪ್ರೇಕ್ಷಕರಾಗಿ ನೋಡುವಂತಹ ಸ್ಥಿತಿ ಅಲ್ಲಿದೆ. ಮೊನ್ನೆ ನವೆಂಬರ್ 1 ರಂದು ಕರಾಳ ದಿನವನ್ನು ಆಚರಿಸುವುದರ ಮೂಲಕ, ಕನ್ನಡಕ್ಕೆ ಅವಮಾನ ಎಸಗಿರುವ ಎಂಎಇಎಸ್, ಕೆಲವು ವರ್ಷಗಳಿಂದ ತನ್ನ ಶಾಸಕರನ್ನು ನಗರದಿಂದ ಆರಿಸಿ ಕಳುಹಿಸುತ್ತಿದೆ. ಒಬ್ಬರು, ಇಬ್ಬರು ಶಾಸಕರು ಪ್ರತಿಬಾರಿ ಇದ್ದೇ ಇರುತ್ತಾರೆ. ಪಾಲಿಕೆಯಲ್ಲೂ ಅವರದ್ದೇ ಆಟ ನಡೆಯುತ್ತಿದೆ. ಇಂತಹ ಪುಂಡಾಟ ಆಡಿದ್ದರಿಂದಲೇ 2005 ಮತ್ತು 2011ರಲ್ಲಿ ಪಾಲಿಕೆ ಸೂಪರ್‌ಸೀಡ್ ಆಗಿತ್ತು. ಈ ವರ್ಷದ ನ. 1ರಂದು ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿರಾವ್ ಪಾಟೀಲ್, ಮೇಯರ್ ಸರಿತಾ ಪಾಟಿಲ್ ಮತ್ತು ಉಪಮೇಯರ್ ಸಂಜಯ್ ಶಿಂಧೆ (ಎಲ್ಲರೂ ಎಂಇಎಸ್) ನಗರದಲ್ಲಿ ಹಾಕಲಾಗಿದ್ದ ಅನೇಕ ಕನ್ನಡದ ಬಾವುಟ, ಬಂಟಿಂಗ್ಸ್‌ಗಳನ್ನು ಕಿತ್ತುಹಾಕಿದ್ದರು. ಕೆಲವೆಡೆ ಹರಿದುಹಾಕಿದ್ದರು, ಕರ್ನಾಟಕ ವಿರೋಧಿ ಘೋಷಣೆಯನ್ನು ಕೂಗಿ, ಸಾರ್ವಜನಿಕವಾಗಿ ಬಂದೂಕನ್ನು ಸಹ ಪ್ರದರ್ಶಿಸಿ ಭಯಾನಕ ವಾತಾವರಣವನ್ನು ಸೃಷ್ಟಿಸಿದ್ದರು. ಅದೆಲ್ಲದರ ಫಲವಾಗಿ ಈಗ ತೊಂದರೆಗೆ ಸಿಲುಕಿಕೊಂಡಿದ್ದಾರೆ.
ಈಗ ಮತ್ತೆ ಪಾಲಿಕೆ ಸೂಪರ್‌ಸೀಡ್ ಆಗುವ ಎಲ್ಲ ಲಕ್ಷಣ ಗೋಚರವಾಗುತ್ತಿದೆ. ಜಿಲ್ಲಾಧಿಕಾರಿ ನೀಡಿದ ವರದಿಯನ್ವಯ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಬೆಳಗಾವಿ ಪ್ರಾದೇಶಿಕ ಅದಿಕಾರಿಗೆ ಸರಕಾರ ಸೂಚಿಸಿದ್ದು, ವಾರದಲ್ಲಿ ಪಾಲಿಕೆ ಆಡಳಿತ ಅಂತ್ಯವಾಗುವ ಸಾಧ್ಯತೆ ಕಂಡುಬರುತ್ತಿದೆ. ಎಷ್ಟೇ ಬಾರಿ ಸೂಪರ್‌ಸೀಡ್ ಮಾಡಿದರೂ ಮರಾಠಿಗರ ಆಟವೇ ಮತ್ತೆ ಅಲ್ಲಿ ಶುರುವಾಗುತ್ತದೆ. ಪಾಲಿಕೆಯ ಚುನಾವಣೆಯಲ್ಲಿ ಶೇ. 65ರಷ್ಟು ಕನ್ನಡಿಗರಿದ್ದರೂ ಹಣ ಬಲ, ತಾಕತ್ತು ಪ್ರದರ್ಶನದಿಂದ ಗೆದ್ದು ಬಂದು ಎಂಇಎಸ್ ಬಹುಮತ ಪಡೆಯುವ ಮೂಲಕ ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈಹಾಕುತ್ತಿದೆ.
ಪ್ರತಿ ಬಾರಿಯೂ ಕನ್ನಡಿಗರಿಗೇ ಸವಾಲೊಡ್ಡುವ ಕೆಲಸವನ್ನೇ ಮಾಡುತ್ತ ಬಂದಿರುವ ಎಂಎಇಎಸ್‌ನ್ನು ಯಾರೂ ಏನು ಮಾಡುವಂತಿಲ್ಲ. ಏಕೆಂದರೆ, ಅದೊಂದು ಮರಾಠಿ ಭಾಷಿಕರ ಸಂಘಟನೆ. ಅವರಿಗೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆನ್ನುವುದೊಂದೇ ಹಠ. ಬೆಳಗಾವಿಯಲ್ಲಿ ಮರಾಠಿ ನೆಲೆಸಬೇಕು. ಕನ್ನಡಕ್ಕೆ ಅವಕಾಶ ಕೊಡಬಾರದು ಎನ್ನುತ್ತ ಗಡಿಭಾಗದ ಕನ್ನಡಿಗರ ಮೇಲೆ ಸತತ ದೌರ್ಜನ್ಯ ಎಸಗುತ್ತಲೇ ಬಂದಿದ್ದಾರೆ.
ಬೆಳಗಾವಿ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ಚೆನ್ನಮ್ಮ ಅವರ ತಪೋಭೂಮಿ ಎಂದು ಕರೆಯಿಸಿಕೊಳ್ಳುತ್ತದೆ. ಇಂತಹ ವೀರರ ನಾಡಲ್ಲಿ ಎಂಇಎಸ್ ಅಟ್ಟಹಾಸ ದಿನೇದಿನೇ ಮಿತಿಮೀರುತ್ತಿದೆ. ಯಾವುದೇ ಸರಕಾರಕ್ಕೂ ಇವರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಶೇ. 35ರಷ್ಟು ಜನಸಂಖ್ಯೆ ಇರುವ ಮರಾಠನ್ನು ವಿರೋಧಿಸಿದಂತಾಗುತ್ತದೆ. ಇಲ್ಲಿ ಅವರ ವಿರುದ್ದ ಕ್ರಮ ಜರುಗಿಸಿದರೆ ಮುಂಬೈನಲ್ಲಿ ಕನ್ನಡಿಗರ ಮೆಲೆ ಹಲ್ಲೆ ಆರಂಭವಾಗುತ್ತದೆ. ಅಲ್ಲಿ ಶಿವಸೇನೆಯಂತಹ ಕಟ್ಟಾ ಮರಾಠಾವಾದಿ ಪಕ್ಷಗಳು ಯಾವುದಕ್ಕೂ ಹೇಸದೆ
ತಮ್ಮ ಕಾರ್ಯಾಚರಣೆ ನಡೆಸುತ್ತವೆ. ಈ ಎಲ್ಲ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಸಾಧ್ಯವಾದಷ್ಟು ಕ್ರಮ ಜರುಗಿಸುತ್ತ ಪಾಠ ಕಲಿಸುತ್ತಿವೆ.
2005ರಲ್ಲಿ ಪಾಲಿಕೆಯ ಮೇಯರ್ ಆಗಿದ್ದ ವಿಜಯ್ ಮೋರೆ ಅವರ ಮುಖಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯವರು ಮಸಿ ಬಳಿದು ಪ್ರತಿಭಟಿಸಿದ್ದರು. ಇದಾದ ಬಳಿಕ ಪಾಲಿಕೆಯು ಬೆಳಗಾವಿ ನಗರ ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿರ್ಣಯ ಅಂಗೀಕರಿಸಿತ್ತು. ಇದರಿಂದ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಪಾಲಿಕೆಯನ್ನು ಸೂಪರ್‌ಸೀಡ್ ಮಾಡಿದ್ದರು. 2011ರಲ್ಲೂ ಸಹ ನಾಡದ್ರೋಹಿ ಚಟುವಟಿಕೆ ನಡೆಸಿದ್ದಕ್ಕೆ ಮುಖ್ಯಮಂತ್ರಿ ಸದಾನಂದ ಗೌಡ ಇದೇ ಕೆಲಸ ಮಾಡಿದ್ದರು. 2016ರಲ್ಲಿ ಮತ್ತೆ ಸೂಪರ್‌ಸೀಡ್‌ಗೆ ಎಲ ್ಲತಯಾರಿ ನಡೆದಿದೆ.
ಎಷ್ಟೇ ಕ್ರಮ ಕೈಗೊಂಡರೂ ಎಂಇಎಸ್ ಪಾಠ ಕಲಿಯುತ್ತಿಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆನ್ನುವುದೊಂದೇ ಅವರ ಹಠ. ಎಲ್ಲಿಯವರೆಗೆ ಬೆಳಗಾವಿ ಕನ್ನಡಿಗರು ಒಟ್ಟಾಗಿ ಕನ್ನಡ ಭಾಷಿಕರನ್ನು ಆಯ್ಕೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಇಂತಹ ಕೆಲಸ ನಡೆಯುತ್ತಲೇ ಇರುತ್ತದ. ಕನ್ನಡದ ಬಗ್ಗೆ ಮಾತನಾಡುವವರು ಅದರ ಉಳಿವಿಗೂ ಮುಂದಾಗಬೇಕು. ಚುನಾವಣೆ ಬಂದಾಗ ಎಂಎಇಎಸ್‌ಗೆ ಮತ ಹಾಕಿ ಮತ್ತೆ ಅವರನ್ನೇ ಆಯ್ಕೆ ಮಾಡುವುದನ್ನು ಬಿಡಬೇಕು. ಕನ್ನಡ ಸಂಘಟನೆಗಳು ಸಾಕಷ್ಟಿದ್ದರೂ ಅವೆಲ್ಲ ಒಂದೇ ಸೂರಿನಡಿಯಲ್ಲಿ ಕೆಲಸ ಮಾಡದಿರುವುದು ಇದಕ್ಕೆ ಕಾರಣವಿರಬಹುದು.
,,,,,,,,,,,,,,,,,,,,,,,,,,,,,