ಈ ವ್ಯಾಟ್ಸಾಪ್ನಿಂದ ಫಟಾಫಟ್ ಪರಿಹಾರವಾಗುತ್ತವೆ ಸಮಸ್ಯೆಗಳು
ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿದ ’ವ್ಯಾಟ್ಸಾಪ್ ಗ್ರೂಪ್’
: ಇತ್ತೀಚೆಗೆ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯೆಯೊಬ್ಬರು ರಜೆ ಮೇಲೆ ತೆರಳುತ್ತಿರುವುದರಿಂದ ರೋಗಿಗಳಿಗೆ ಅನಾನುಕೂಲವಾಗುವ ಸಾಧ್ಯತೆಯಿದೆ ಎಂದು ಸದಸ್ಯರೊಬ್ಬರು ವ್ಯಾಟ್ಸಾಪ್ ಗ್ರೂಪ್ ಒಂದರಲ್ಲಿ ಮಾಹಿತಿ ಹಾಕಿದ್ದರು. ಇದರ ಮಾಹಿತಿ ಅರಿತ ಆರೋಗ್ಯ ಇಲಾಖೆಯ ಅಧಿಕಾರಿಗಳು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಅಗತ್ಯ ವೈದ್ಯರ ನಿಯೋಜನೆ ಮಾಡಿದ್ದರು.
ಶಿವಮೊಗ್ಗ ನಗರದ ಕಸ್ತೂರ ಬಾ ಕಾಲೇಜು ರಸ್ತೆಯಲ್ಲಿ ಮಳೆಯಿಂದ ಮರವೊಂದು ಉರುಳಿಬಿದ್ದಿತ್ತು. ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸದಸ್ಯರೊಬ್ಬರು ಗ್ರೂಪ್ನಲ್ಲಿ ಮರದ ಫೋಟೋ ತೆಗೆದು ಮಾಹಿತಿ ಹಾಕಿದ್ದರು. ತತಕ್ಷಣವೇ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿಯ ಮೂಲಕ ಮರ ತೆರವುಗೊಳಿಸಿದ್ದರು.
ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಯೋಚಿಸುತ್ತಿದ್ದೀರಾ?. ಸಾಮಾಜಿಕ ಜಾಲತಾಣದಲ್ಲೇ ಅತ್ಯಂತ ಪ್ರಖ್ಯಾತವಾದ ವ್ಯಾಟ್ಸಾಪ್ನಿಂದ. ವ್ಯಾಟ್ಸಾಪ್ ಮೂಲಕ ಎಂತಹ ಮಹತ್ತರ ಕೆಲಸ ಮಾಡಬಹುದು ಎನ್ನುವುದಕ್ಕೆ ಈ ಮೇಲಿನ ಘಟನೆಗಳೇ ಸಾಕ್ಷಿ ಮತ್ತು ತತಕ್ಷಣಕ್ಕೆ ಅಧಿಕಾರಿಗಳು ಸ್ಪಂದಿಸುವಂತೆ ಮಾಡುವ ವಿಶೇಷ ಶಕ್ತಿ ಇದರಲ್ಲಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಸಾಮಾಜಿಕ ಸಂಪರ್ಕ ಜಾಲತಾಣಗಳಾದ ವ್ಯಾಟ್ಸಾಪ್, ಫೇಸ್ಬುಕ್ನಂತಹ ಮಾಧ್ಯಮಗಳು ತಮ್ಮದೇ ಆದ ಮಹತ್ವ ಹೊಂದಿವೆ. ಈ ಮಾಧ್ಯಮಗಳು ಜನಪರವಾಗಿ, ಜನರ ಸಮಸ್ಯೆಗಳಿಗೆ ವೇದಿಕೆಯಾಗಿ ಕೆಲಸ ಮಾಡಬಹುದು ಎನ್ನುವುದಕ್ಕೆ ’ವ್ಯಾಟ್ಸಾಪ್ ಗೂಪ್’ವೊಂದು ಸಾಕ್ಷಿಯಾಗಿದೆ.
ಪತ್ರಿಕೆ-ಟಿ.ವಿ.ಗಳಲ್ಲಿ ವರದಿ ಬಿತ್ತರವಾದರೂ, ಜನಪ್ರತಿನಿಧಿಗಳು - ಅಧಿಕಾರಿಗಳ ಗಮನ ಸೆಳೆದರೂ ಅದೆಷ್ಟೋ ಬಾರಿ ನಾಗರಿಕ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ ಎಂಬ ದೂರು ಸರ್ವೇಸಾಮಾನ್ಯ. ಆದರೆ ಶಿವಮೊಗ್ಗ ನಗರದಲ್ಲಿನ ಮಾತ್ರ ಶರವೇಗದಲ್ಲಿ ನಾಗರಿಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ವೇದಿಕೆಯಾಗಿ ಈ ವ್ಯಾಟ್ಸಾಪ್ ಗ್ರೂಪ್ ಪರಿವರ್ತಿತವಾಗಿದೆ.
ಅದೇ ’ಶಿವಮೊಗ್ಗ ನ್ಯೂಸ್ ಹಬ್’ ಎನ್ನುವ ವ್ಯಾಟ್ಸಾಪ್ ಗ್ರೂಪ್.
ಸಾಮಾಜಿಕ ಸಂಪರ್ಕ ಜಾಲತಾಣಗಳನ್ನು ಯಾವ ರೀತಿಯಲ್ಲಿ ಜನರ ಸಮಸ್ಯೆಗಳ ಪರಿಹಾರ ಕಲ್ಪಿಸುವ ತಾಣಗಳನ್ನಾಗಿ ಪರಿವರ್ತಿಸಬಹುದು ಎಂಬುವುದಕ್ಕೆ ’ಶಿವಮೊಗ್ಗ ನ್ಯೂಸ್ ಹಬ್’ ಎಂಬ ಕ್ರಿಯಾಶೀಲ ವ್ಯಾಟ್ಸಾಪ್ ಗ್ರೂಪ್ ಸಾಕ್ಷಿಯಾಗುವುದರ ಜೊತೆಗೆ ಮಾದರಿಯಾಗಿದೆ. ಖಾಸಗಿ ಸುದ್ದಿವಾಹಿನಿಯೊಂದರ ವರದಿಗಾರರೊಬ್ಬರು ’ಶಿವಮೊಗ್ಗ ನ್ಯೂಸ್ ಹಬ್’ ಎಂಬ ಗ್ರೂಪ್ ಸೃಷ್ಟಿಸಿದ್ದಾರೆ. ಈ ಗ್ರೂಪ್ನಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ಪತ್ರಕರ್ತರು, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರು, ನಾಗರಿಕ ಸಮಾಜದ ಹಿರಿಯರು ಸದಸ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಸರಿಸುಮಾರು 200 ಜನರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದಾರೆ.
ಈ ಗ್ರೂಪ್ನಲ್ಲಿ ನಾಗರಿಕ ಸಮಸ್ಯೆಗಳು, ತುರ್ತು ವಿಷಯಗಳಿಗೆ ಸಂಬಂಧಿಸಿದ ಪೋಟೋ ಹಾಗೂ ಅದಕ್ಕೆ ಸಂಬಂಧಿಸಿದ ವಿಷಯವನ್ನು ಮಾತ್ರ ಪೋಸ್ಟ್ ಮಾಡುವಂತೆ ಜೊತೆಗೆ ಸಲಹೆ-ಸೂಚನೆ ನೀಡುವಂತೆ ಸದಸ್ಯರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಅದರಂತೆ ಸದಸ್ಯರು ಕೂಡ ತಮ್ಮ ಸುತ್ತಮುತ್ತಲು ಕಂಡುಬರುವ ವಿವಿಧ ಸಮಸ್ಯೆಗಳನ್ನು ಈ ಗ್ರೂಪ್ನಲ್ಲಿ ಪೋಸ್ಟ್ ಮಾಡುತ್ತಾರೆ. ಅಗತ್ಯ ಸಲಹೆ-ಸೂಚನೆ ನೀಡುತ್ತಾರೆ.
ಈ ಗ್ರೂಪ್ನಲ್ಲಿ ಸಮಸ್ಯೆಗಳ ಮಾಹಿತಿ, ಫೋಟೋ ಪ್ರಕಟವಾಗುತ್ತಿದ್ದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿಯಿತ್ತು, ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿದ್ದಾರೆ. ಗ್ರೂಪ್ನಲ್ಲಿ ಮಾಹಿತಿ ಕೂಡ ಹಾಕುತ್ತಿದ್ದಾರೆ. ಈ ವ್ಯಾಟ್ಸಾಪ್ ಗ್ರೂಪ್ ಇಡಿ ಜಿಲ್ಲೆಯಾದ್ಯಂತ ಸಮಸ್ಯೆಗಳಿಗೆ ಆದ್ಯತೆ ಕೊಡುತ್ತಿದೆ. ಅದಕ್ಕೆ ಉದಾಹರಣೆ ಬೇಕೆಂದರೆ- ಸಾಗರ ತಾಲೂಕಿನ ಆನಂದಪುರಂ ಗ್ರಾಮದಲ್ಲಿ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣವಾಗುತ್ತಿರುವ ಬಗ್ಗೆ ಸದಸ್ಯರೊಬ್ಬರು ಗ್ರೂಪ್ನಲ್ಲಿ ಸಚಿತ್ರ ಮಾಹಿತಿ ಹಾಕಿದ್ದರು. ಸಂಬಂಧಿಸಿದವರ ಗಮನ ಸೆಳೆದ ಹೊರತಾಗಿಯೂ ಯಾರೊಬ್ಬರೂ ಗಮನಹರಿಸದಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಗ್ರೂಪ್ನಲ್ಲಿ ಮಾಹಿತಿ ಪ್ರಕಟವಾದ ಮಾರನೆಯ ದಿನವೇ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿಯಿತ್ತು ಕುಡಿಯುವ ನೀರಿನ ಪೈಪ್ಲೈನ್ ದುರಸ್ತಿಪಡಿಸಿತ್ತು.
ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿ ರಸ್ತೆ ಅವ್ಯವಸ್ಥೆಯ ಬಗ್ಗೆ ಗ್ರೂಪ್ನಲ್ಲಿ ಮಾಹಿತಿ ಪ್ರಕಟವಾದ ನಾಲ್ಕೇ ಗಂಟೆಗಳಲ್ಲಿ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ರಸ್ತೆ ಅವ್ಯವಸ್ಥೆ ಸರಿಪಡಿಸಿ, ಅದರ ಫೋಟೋವನ್ನು ಗ್ರೂಪ್ನಲ್ಲಿ ಹಾಕಿದ್ದರು.
ನಿಜಕ್ಕೂ ಈ ಗ್ರೂಪ್ ಮೂಲಕ ಆಗುತ್ತಿರುವ ಜನಪರ ಕೆಲಸಗಳು ಶ್ಲಾಘನೀಯ ಸಂಗತಿಯಾಗಿದೆ. ಇತರೆ ಗ್ರೂಪ್ಗಳಿಗೆ ಮಾದರಿಯಾಗಿದ