ಬಿಪಿಎಲ್ ಕಾರ್ಡಿಗೆ ಡಿಮಾಂಡಪ್ಪೋ ಡಿಮಾಂಡು
ಬಿಪಿಎಲ್ಗೆ 32 ಸಾವಿರ ಅರ್ಜಿಗಳು ಸಲ್ಲಿಕೆ *
ಎಪಿಎಲ್ ಕಾರ್ಡಿಗೆ ಕೇವಲ 2553 ಅರ್ಜಿ *
ಇತ್ತೀಚೆಗೆ ರಾಜ್ಯ ಸರ್ಕಾರ ಹೊಸದೊಂದು ಆದೇಶ ಹೊರಡಿಸಿ, ಬಿಪಿಎಲ್ ಕಾರ್ಡ್ ಪಡೆಯಲು 1.20 ಲಕ್ಷ ರೂ. ಆದಾಯ ಮಿತಿ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ಹಾಗೂ ತಮ್ಮ ಇಲಾಖೆಯ ದತ್ತಾಂಶಗಳ ಜೋಡಣೆ ಕಾರ್ಯನವನ್ನು ಭರದಿಂದ ನಡೆಸುತ್ತಿದ್ದಾರೆ. ಇದರಿಂದ ಈಗಾಗಲೇ ಕಾರ್ಡ್ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
-- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಟಿ.ಕೆ.ಲಕ್ಷ್ಮೀನಾರಾಯಣ ರೆಡ್ಡಿ.
ಶಿವಮೊಗ್ಗ, : ಜಿಲ್ಲೆಯಲ್ಲಿ ಜನರ ಆದಾಯ ಕಡಿಮೆಯಾಗುತ್ತಿದೆಯೇ, ಅಥವಾ ಜನರು ಬಡವರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಈಗ ಆಹಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಕಾಡತೊಡಗಿದೆ. ಕಾರಣವೇನೆಂದರೆ ಬಿಪಿಎಲ್ ಕಾರ್ಡು ಬೇಕೆಂದು 32 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಅಧಿಕಾರಿಗಳ ತಲೆತಿನ್ನತೊಡಗಿದೆ. ಬಿಪಿಎಲ್ ಕಾರ್ಡು ಪಡೆಯಲಿಷ್ಟು ಡಿಮಾಂಡ್ ಏಕೆ ಎಂಬ ಪ್ರಶ್ನೆಯೂ ಎದುರಾಗಿದೆ.
ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಈ ಕಾರ್ಡು ಅನುಕೂಲವಾಗುತ್ತದೆ. ಜೊತೆಗ ಅನ್ನಭಾಗ್ಯದ ಲಾಭ, ಪಡಿತರದಲ್ಲಿ ಏರಿಕೆ ಎಲ್ಲವೂ ಲಭ್ಯವಾಗಲಿದೆ. ಇದರಿಂದಾಗಿ ಅರ್ಜಿ ಸಲ್ಲಿಸುವವರು ಹೆಚ್ಚತೊಡಗಿದ್ದಾರೆ. ಆದರೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡುವ ಜವಾಬ್ದಾರಿ ಎದುರಾಗಿದೆ. ಕಂಡಕಂಡವರೆಲ್ಲ ಬಿಪಿಎಲ್ ಕಾರ್ಡು ಪಡೆದರೆ ನೈಜ ಬಡವರು ಇದರಿಂದ ವಂಚನೆಗೊಳಗಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸತೊಡಗಿದ್ದಾರೆ.
ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಹಾಗೂ ಬಡತನ ರೇಖೆಗಿಂತ ಮೇಲ್ಪಟ್ಟ (ಎಪಿಎಲ್) ಪಡಿತರ ಚೀಟಿ ವಿತರಣೆಗೆ ನಿಗದಿಪಡಿಸಲಾಗಿದ್ದ ಮಾನದಂಡಗಳನ್ನು ರಾಜ್ಯ ಸರ್ಕಾರ ಸರಳೀಕರಣಗೊಳಿಸಿದೆ. ಈ ಪ್ರಕಾರ ಬಿ.ಪಿ.ಎಲ್. ಪಡಿತರ ಚೀಟಿ ಪಡೆಯಲು 1.20 ಲಕ್ಷ ರೂ. ಆದಾಯ ಮಿತಿ ನಿಗದಿಗೊಳಿಸಲಾಗಿದೆ. ಜೊತೆಗೆ ಫೆಬ್ರವರಿ ತಿಂಗಳಿನಿಂದ ಹೊಸದಾಗಿ ಪಡಿತರ ಚೀಟಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕೂಡ ಕಲ್ಪಿಸಿದೆ.
ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ ದಿನದಿಂದ ಎ. 10 ರವರೆಗೆ ಬಿಪಿಎಲ್ ಕಾರ್ಡ್ ಕೋರಿ ಆನ್ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 32,141 ಆಗಿದೆ! ಆದರೆ ಎಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 2553 ಆಗಿದೆ ಎಂದು ಸ್ಥಳೀಯ ಆಹಾರ ಇಲಾಖೆ ತಿಳಿಸಿದೆ. ಬಿಪಿಎಲ್ ಕಾರ್ಡ್ಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಜಿಲ್ಲೆಯಲ್ಲಿ ಸ್ವೀಕತವಾಗಿರುವ 32,141 ಅರ್ಜಿಗಳಲ್ಲಿ ಶಿವಮೊಗ್ಗ ತಾಲೂಕಿನಲ್ಲಿ ಅತ್ಯದಿಕ 8544 ಅರ್ಜಿಗಳು ಸಲ್ಲಿಕೆಯಾಗಿವೆ. ಉಳಿದಂತೆ ಭದ್ರಾವತಿಯಲ್ಲಿ 6075, ಹೊಸನಗರದಲ್ಲಿ 2703, ಸಾಗರದಲ್ಲಿ 3635, ಶಿಕಾರಿಪುರದಲ್ಲಿ 5028, ಸೊರಬದಲ್ಲಿ 4606 ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ 1550 ಅರ್ಜಿಗಳು ಸಲ್ಲಿಕೆಯಾಗಿವೆ.
ಇದರಲ್ಲಿ 86 ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದ್ದಾರೆ. 73 ಅರ್ಜಿಗಳಿಗೆ ಕಾರ್ಡ್ ನೀಡಲು ಅನುಮೋದನೆ ಕೂಡ ದೊರಕಿದ್ದು, 4 ಅರ್ಜಿಗಳು ತಿರಸ್ಕೃತವಾಗಿವೆ. 691 ಜನ ಸಲ್ಲಿಸಿದ್ದ ಅರ್ಜಿ ವಾಪಾಸ್ ಪಡೆದುಕೊಂಡಿದ್ದಾರೆ. 31,373 ಅರ್ಜಿಗಳ ವಿಲೇವಾರಿ ಬಾಕಿಯಿದೆ. ಬಿಪಿಎಲ್ಗೆ ಹೋಲಿಕೆ ಮಾಡಿದರೆ ಎಪಿಎಲ್ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆಯಿದ್ದು, 2553 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಶಿವಮೊಗ್ಗ ತಾಲೂಕಿನಲ್ಲಿಯೇ ಅತ್ಯಧಿಕ 1212 ಅರ್ಜಿಗಳು ಸಲ್ಲಿಕೆಯಾಗಿವೆ.
ಉಳಿದಂತೆ ಭದ್ರಾವತಿಯಲ್ಲಿ 444, ಹೊಸನಗರದಲ್ಲಿ 206, ಸಾಗರದಲ್ಲಿ 293, ಶಿಕಾರಿಪುರದಲ್ಲಿ 194, ಸೊರಬದಲ್ಲಿ 73 ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ 131 ಅರ್ಜಿಗಳು ಸಲ್ಲಿಕೆಯಾಗಿವೆ. 31 ಅರ್ಜಿಗಳು ತಿರಸ್ಕೃತಗೊಂಡಿದ್ದು, 156 ಅರ್ಜಿದಾರರು ವಾಪಾಸ್ ಪಡೆದುಕೊಂಡಿದ್ದಾರೆ. 2268 ಅರ್ಜಿಗಳು ವಿಲೇವಾರಿ ಬಾಕಿಯಿದೆ. ಆಹಾರ ಇಲಾಖೆ ಸಚಿವ ಯು.ಟಿ.ಖಾದರ್ ಹಾಗೂ ಆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಬಿಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಅನರ್ಹರಿಗೆ ಕಾರ್ಡ್ ಲಭ್ಯವಾಗದಂತೆ ಮಾಡುವ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಹಿಂದೆ ನಿಗದಿ ಮಾಡಿದ್ದ ಮಾನದಂಡಗಳಲ್ಲಿ ಬದಲಾವಣೆ ತಂದಿದ್ದಾರೆ.

No comments:
Post a Comment